ಕೃಷಿ ಸಚಿವಾಲಯ
azadi ka amrit mahotsav

"ರಾಜಕೀಯವು ವಿಭಜಿಸುತ್ತದೆ, ಧರ್ಮವು ಒಂದಾಗುತ್ತದೆ, ದೀನದಲಿತರ ಸೇವೆ ಮಾಡುವುದು ನಿಜವಾದ ಪೂಜಾ ವಿಧಾನವಾಗಿದೆ ''- ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌


"ನಮ್ಮ ದೇಶದಲ್ಲಿ ತಯಾರಿಸಿದ ಉತ್ಪನ್ನಗಳನ್ನು (ಸ್ವದೇಶಿ) ಮಾತ್ರ ನಾವು ನಮ್ಮ ದೈನಂದಿನ ಜೀವನದಲ್ಲಿ ಬಳಸಬೇಕು''- ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌

ಮೈಸೂರಿನ ಸುತ್ತೂರು ಮಠದಲ್ಲಿ ನಡೆದ ಜಗದ್ಗುರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 110ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವರು ಭಾಗವಹಿಸಿದ್ದರು

"ರೈತರು ನಮ್ಮ ಜೀವನ, ಆಹಾರ ಪೂರೈಕೆದಾರರು, ಜೀವ ನೀಡುವವರು, ಮತ್ತು ನಾನು ನಮ್ಮ ರೈತ ಸಹೋದರ ಸಹೋದರಿಯರಿಗೆ ಬದ್ಧನಾಗಿದ್ದೇನೆ'' - ಶ್ರೀ ಶಿವರಾಜ್‌ ಸಿಂಗ್‌

''ಕೃಷಿಯನ್ನು ಲಾಭದಾಯಕವಾಗಿಸಲು ಹಗಲು ರಾತ್ರಿ ಪ್ರಯತ್ನಗಳು ನಡೆಯುತ್ತಿವೆ''- ಕೇಂದ್ರ ಸಚಿವರು

Posted On: 29 AUG 2025 6:59PM by PIB Bengaluru

ಮೈಸೂರಿನ ಶ್ರೀ ಸುತ್ತೂರು ಮಠದಲ್ಲಿ ಜಗದ್ಗುರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 110ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷ ಗಳ ಪ್ರತಿನಿಧಿಗಳು, ಸಂತರು ಮತ್ತು ಭಕ್ತರು ಉಪಸ್ಥಿತರಿದ್ದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌, ದೀನದಲಿತರಿಗೆ ಸೇವೆ ಸಲ್ಲಿಸುವುದು ನಿಜವಾದ ಪೂಜಾ ವಿಧಾನವಾಗಿದೆ ಎಂದು ಹೇಳಿದರು. "ರಾಜಕೀಯ ವಿಭಜನೆಯಾಗುತ್ತದೆ, ಆದರೆ ಧರ್ಮವು ಒಂದಾಗುತ್ತದೆ ಮತ್ತು ಇಂದು ಧರ್ಮವು ಮಾನವೀಯತೆಯ ಸೇವೆಗಾಗಿ ನಮ್ಮೆಲ್ಲರನ್ನೂ ಒಂದುಗೂಡಿಸಿದೆ,''  ಎಂದು ಅವರು ಹೇಳಿದರು. ಮಠವು ಹಲವಾರು ವರ್ಷಗಳಿಂದ ಸಮಾಜ ಕಲ್ಯಾಣ ಮತ್ತು ಮಾನವೀಯತೆಯ ಸೇವೆಯಲ್ಲಿಸಾಟಿಯಿಲ್ಲದ ಪಾತ್ರವನ್ನು ವಹಿಸುತ್ತಿದೆ ಎಂದು ಕೇಂದ್ರ ಸಚಿವರು ಉಲ್ಲೇಖಿಸಿದರು. ಶಿಕ್ಷಣದಿಂದ ಹಿಡಿದು ಆರೋಗ್ಯ ರಕ್ಷಣೆಯವರೆಗೆ ವಿವಿಧ ಕ್ಷೇತ್ರಗಳಲ್ಲಿ ಮಠದ ಚಟುವಟಿಕೆಗಳು ಬದಲಾವಣೆಯ ದಿಕ್ಕನ್ನು ನಿಗದಿಪಡಿಸಿವೆ. ಕೆಲಸ ಮಾಡುತ್ತಿರುವ ಸಮರ್ಪಣೆ ಮತ್ತು ಸೇವಾ ಮನೋಭಾವವು ಇಲ್ಲಿನ ಪರಿಸರವನ್ನು ಅನನ್ಯಗೊಳಿಸುತ್ತದೆ. ರಾಜಕೀಯವು ವಿಭಜಿಸುತ್ತದೆ, ಧರ್ಮವು ಒಂದಾಗುತ್ತದೆ ಮತ್ತು ದೀನದಲಿತರಿಗೆ ಸೇವೆ ಸಲ್ಲಿಸುವುದು ನಿಜವಾದ ಪೂಜಾ ವಿಧಾನವಾಗಿದೆ ಎಂದು ಅವರು ಹೇಳಿದರು. ಇದಲ್ಲದೆ, ನಮ್ಮ ಧರ್ಮವನ್ನು ಸರಿಯಾದ ಹಾದಿಯಲ್ಲಿ ಕೊಂಡೊಯ್ಯುವುದರ ಜೊತೆಗೆ, ಮಠವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದೆ ಮತ್ತು ಸಾಧ್ಯವಾದಷ್ಟು ಜನರಿಗೆ ಸೇವೆ ಸಲ್ಲಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮಗೆ ಕೃಷಿ ಸಚಿವರಾಗುವ ಗೌರವವನ್ನು ನೀಡಿದರು ಮತ್ತು ಸಚಿವರಾಗಿ, ಕೃಷಿಯು ಭಾರತೀಯ ಆರ್ಥಿಕತೆಯ ಬೆನ್ನೆಲುಬು ಮತ್ತು ರೈತರು ಅದರ ಆತ್ಮ ಎಂದು ಅವರು ನಂಬುತ್ತಾರೆ ಎಂದು ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದರು. ''ರೈತರು ನಮ್ಮ ಜೀವನ, ಅನ್ನದಾತರು, ಜೀವ ನೀಡುವವರು ಮತ್ತು ರೈತರ ಸೇವೆ ಮಾಡುವುದು ನನಗೆ ನಿಜವಾದ ಭಕ್ತಿಯಾಗಿದೆ'' ಎಂದು ಅವರು ಹೇಳಿದರು. ನಮ್ಮ ರೈತ ಸಹೋದರ ಸಹೋದರಿಯರ ಕಲ್ಯಾಣಕ್ಕಾಗಿ ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಒಂದಲ್ಲ, ಹಲವು ಯೋಜನೆಗಳನ್ನು ಪ್ರಾರಂಭಿಸಲಾಗಿದೆ ಎಂದರು. ''ಕೃಷಿಯಲ್ಲಿ ಉತ್ಪಾದನೆ ಹೆಚ್ಚಾಗುತ್ತದೆ ಮತ್ತು ವೆಚ್ಚ ಕಡಿಮೆಯಾಗುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ನಮ್ಮ ಗಮನವಾಗಿದೆ. ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗಬೇಕು, ಬೆಳೆಗಳು ನಷ್ಟವಾದರೆ ಸರಿಯಾದ ಪರಿಹಾರವನ್ನು ನೀಡಬೇಕು ಮತ್ತು ಕೃಷಿ ವೈವಿಧ್ಯೕಕರಣವೂ ಬಹಳ ಅವಶ್ಯಕವಾಗಿದೆ. ಸಮಗ್ರ ಕೃಷಿಯಿಂದ ಅನೇಕ ಪ್ರಯೋಜನಗಳಿವೆ, ಅದನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ,'' ಎಂದು ಅವರು ತಿಳಿಸಿದರು.

ವಿದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಕೃಷಿ ಭೂಮಿ ಹಿಡುವಳಿಗಳ ಗಾತ್ರ ಚಿಕ್ಕದಾಗಿದೆ ಎಂದು ಸಚಿವರು ಹೇಳಿದರು. ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಅಮೇರಿಕಾ, ಆಸ್ಪ್ರೇಲಿಯಾ ಮತ್ತು ಬ್ರೆಜಿಲ್‌ ನಂತಹ ದೇಶಗಳಲ್ಲಿನ ರೈತರು ದೊಡ್ಡ ಭೂ ಹಿಡುವಳಿಗಳನ್ನು ಹೊಂದಿದ್ದರೆ, ನಮ್ಮ ದೇಶದ ರೈತರು ಕೇವಲ ಒಂದು ಅಥವಾ ಎರಡು ಹೆಕ್ಟೇರ್‌, ಒಂದು ಅಥವಾ ಎರಡು ಎಕರೆ ಅಥವಾ ಎರಡೂವರೆ ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಆದ್ದರಿಂದ, ಕೃಷಿಯನ್ನು ಲಾಭದಾಯಕವಾಗಿಸಲು ನಾವು ನವೀಕರಿಸಿದ ಪ್ರಯತ್ನಗಳೊಂದಿಗೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

ಕೇಂದ್ರ ಕೃಷಿ ಸಚಿವರು ಸುಂಕದ ಬಗ್ಗೆ ಬಲವಾದ ನಿಲುವನ್ನು ತೆಗೆದುಕೊಂಡರು. ಇಂದು ಪ್ರತಿಯೊಬ್ಬರೂ ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಮರೆತು ರಾಷ್ಟ್ರದ ವಿಶಾಲ ಹಿತಾಸಕ್ತಿಗಾಗಿ ಒಗ್ಗೂಡಬೇಕು ಎಂದು ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದರು. ಕೆಲವು ದೇಶಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿವೆ, ಇದು ವಿಶ್ವದ ಉಳಿದ ಭಾಗಗಳಿಗೆ ಬಿಕ್ಕಟ್ಟಾಗಿ ಪರಿಣಮಿಸುತ್ತಿದೆ ಎಂದು ಅವರು ಹೇಳಿದರು. ಜಗತ್ತನ್ನು ಉಳಿಸಲು ನಾವು ಒಂದಾಗಬೇಕು. ಬಂಡವಾಳಶಾಹಿಯ ಕೈಯಲ್ಲಿ ನರಳುತ್ತಿರುವ ಜಾಗತಿಕ ಮಾನವೀಯತೆಯನ್ನು ಶಾಶ್ವತ ಶಾಂತಿಯ ಮಾರ್ಗಕ್ಕೆ ಭಾರತ ಮಾತ್ರ ಕರೆದೊಯ್ಯುತ್ತದೆ ಎಂದು ಅವರು ಹೇಳಿದರು. ಸುಂಕಗಳನ್ನು ವಿಧಿಸುತ್ತಿರುವುದರಿಂದ ಭಾರತವು ಹಲವಾರು ಸವಾಲುಗಳನ್ನು ಎದುರಿಸುತ್ತಿದೆ ಎಂದು ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದರು. ಆದರೆ ಭಾರತದ ಬಲವಾದ ನಿಲುವು ವಿಶ್ವದ ಮುಂದೆ ಬಹಳ ಸ್ಪಷ್ಟವಾಗಿದೆ. ಅಂತಹ ವಾತಾವರಣದಲ್ಲಿ, ದೇಶದಲ್ಲಿ ದೇಶಭಕ್ತಿಯ ಭಾವನೆಯನ್ನು ಪುನರುಜ್ಜೀವನಗೊಳಿಸಬೇಕು. ಪ್ರಧಾನಮಂತ್ರಿ ಅವರ ಕರೆಯ ಮೇರೆಗೆ, ಪ್ರತಿಯೊಬ್ಬ ನಾಗರಿಕನು ತಮ್ಮ ದೈನಂದಿನ ಜೀವನದಲ್ಲಿ ನಮ್ಮ ದೇಶದಲ್ಲಿತಯಾರಿಸಿದ ಉತ್ಪನ್ನಗಳನ್ನು (ಸ್ವದೇಶಿ) ಮಾತ್ರ ಬಳಸಬೇಕು ಎಂದು ಪ್ರತಿಜ್ಞೆ ಮಾಡಬೇಕು ಎಂದು ಅವರು ಹೇಳಿದರು. ಇದು ಬಹಳ ಅವಶ್ಯಕ, ಏಕೆಂದರೆ ದೇಶೀಯ ಉತ್ಪನ್ನಗಳನ್ನು ಅಳವಡಿಸಿಕೊಳ್ಳುವುದು ನಮ್ಮ ದೇಶದ ಆರ್ಥಿಕತೆಯನ್ನು ಬಲಪಡಿಸುತ್ತದೆ. ಸ್ವದೇಶಿಯನ್ನು ಅಳವಡಿಸಿಕೊಳ್ಳುವ ದಿಕ್ಕಿನಲ್ಲಿ ನಾಗರಿಕರು ಹೊಸ ಇತಿಹಾಸವನ್ನು ನಿರ್ಮಿಸುತ್ತಾರೆ ಎಂಬ ವಿಶ್ವಾಸವನ್ನು ಕೇಂದ್ರ ಸಚಿವರು ವ್ಯಕ್ತಪಡಿಸಿದರು.

 

*****
 


(Release ID: 2162081) Visitor Counter : 10
Read this release in: English , Odia , Hindi