ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಮಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಟ್‌ವರ್ಕ್ ಗುಣಮಟ್ಟದ ಮೌಲ್ಯಮಾಪನ ನಡೆಸಿದೆ
Posted On:
20 AUG 2025 12:44PM by PIB Bengaluru
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಕರ್ನಾಟಕದ ಮಂಗಳೂರು ಸುತ್ತಮುತ್ತ ಪರವಾನಗಿ ಪಡೆದ ಸೇವಾ ಪ್ರದೇಶ (ಎಲ್ ಎಸ್ ಎ) ದಲ್ಲಿ ಜುಲೈ 2025ರ ಅವಧಿಯಲ್ಲಿ ನಡೆಸಿದ ವ್ಯಾಪಕವಾದ ನಗರ/ಹೆದ್ದಾರಿ ಮಾರ್ಗಗಳನ್ನು ಒಳಗೊಂಡ ತನ್ನ ಸ್ವತಂತ್ರ ಡ್ರೈವ್ ಟೆಸ್ಟ್ (ಐಡಿಟಿ) ಫಲಿತಾಂಶಗಳನ್ನು ಬಿಡುಗಡೆ ಮಾಡಿತು. ಬೆಂಗಳೂರಿನ TRAI ಪ್ರಾದೇಶಿಕ ಕಚೇರಿಯ ಮೇಲ್ವಿಚಾರಣೆಯಲ್ಲಿ ನಡೆಸಲಾದ ಡ್ರೈವ್ ಪರೀಕ್ಷೆಗಳನ್ನು ನಗರ ವಲಯಗಳು, ಸಾಂಸ್ಥಿಕ ಹಾಟ್‌ಸ್ಪಾಟ್‌ಗಳು, ಸಾರ್ವಜನಿಕ ಸಾರಿಗೆ ಕೇಂದ್ರಗಳು ಮತ್ತು ಹೈ-ಸ್ಪೀಡ್ ಕಾರಿಡಾರ್ ಗಳಂತಹ ವೈವಿಧ್ಯಮಯ ಬಳಕೆಯ ಪರಿಸರಗಳಲ್ಲಿ ನೈಜ-ಪ್ರಪಂಚದ ಮೊಬೈಲ್ ನೆಟ್‌ವರ್ಕ್ ಕಾರ್ಯಕ್ಷಮತೆಯನ್ನು ಸೆರೆಹಿಡಿಯಲು ವಿನ್ಯಾಸಗೊಳಿಸಲಾಗಿದೆ.
ಜುಲೈ 07, 2025 ರಿಂದ ಜುಲೈ 11, 2025 ರ ನಡುವೆ, TRAI ತಂಡಗಳು 313.2 ಕಿ.ಮೀ ನಗರ ಪರೀಕ್ಷೆ, 3.4 ಕಿ.ಮೀ ಕರಾವಳಿ ಪರೀಕ್ಷೆ, 10.0 ಕಿ.ಮೀ ಪಾದಚಾರಿ ಪರೀಕ್ಷೆ ಮತ್ತು 11 ಹಾಟ್‌ಸ್ಪಾಟ್ ಸ್ಥಳಗಳಲ್ಲಿ ವಿವರವಾದ ಪರೀಕ್ಷೆಗಳನ್ನು ನಡೆಸಿದವು. ಮೌಲ್ಯಮಾಪನ ಮಾಡಲಾದ ತಂತ್ರಜ್ಞಾನಗಳಲ್ಲಿ 2G, 3G, 4G ಮತ್ತು 5G ಸೇರಿವೆ, ಇದು ವಿಭಿನ್ನ ಹ್ಯಾಂಡ್‌ಸೆಟ್ ಗಳನ್ನು ಹೊಂದಿರುವ ಬಳಕೆದಾರರ ಸೇವಾ ಅನುಭವವನ್ನು ಪ್ರತಿಬಿಂಬಿಸುತ್ತದೆ. ಐಡಿಟಿಯ ಫಲಿತಾಂಶಗಳನ್ನು ಮುಂದಿನ ಅಗತ್ಯ ಕ್ರಮಕ್ಕಾಗಿ ಸಂಬಂಧಪಟ್ಟ ಎಲ್ಲಾ ದೂರಸಂಪರ್ಕ ಸೇವಾ ಪೂರೈಕೆದಾರರಿಗೆ (ಟಿ ಎಸ್ ಪಿ) ತಿಳಿಸಲಾಗಿದೆ.
ಮೌಲ್ಯಮಾಪನ ಮಾಡಲಾದ ಪ್ರಮುಖ ನಿಯತಾಂಕಗಳು:
ಎ) ಧ್ವನಿ ಸೇವೆಗಳು: ಕಾಲ್ ಸೆಟಪ್ ಯಶಸ್ಸಿನ ದರ (ಸಿ ಎಸ್ ಎಸ್ ಆರ್), ಡ್ರಾಪ್ ಕಾಲ್ ದರ (ಡಿಸಿಆರ್), ಕಾಲ್ ಸೆಟಪ್ ಸಮಯ, ಕಾಲ್ ಮೌನ ದರ, ಮಾತಿನ ಗುಣಮಟ್ಟ (ಎಂಒಎಸ್), ವ್ಯಾಪ್ತಿ.
ಬಿ) ಡೇಟಾ ಸೇವೆಗಳು: ಡೌನ್‌ಲೋಡ್/ಅಪ್‌ಲೋಡ್ ಥ್ರೋಪುಟ್, ಲೇಟೆನ್ಸಿ, ಜಿಟರ್, ಪ್ಯಾಕೆಟ್ ಡ್ರಾಪ್ ದರ ಮತ್ತು ವೀಡಿಯೊ ಸ್ಟ್ರೀಮಿಂಗ್ ವಿಳಂಬ.
ಕಾಲ್ ಸೆಟಪ್ ಯಶಸ್ಸಿನ ದರ - ಸ್ವಯಂ-ಆಯ್ಕೆ ಮೋಡ್ ನಲ್ಲಿ (5G/4G/3G/2G) ಏರ್‌ಟೆಲ್, ಬಿ ಎಸ್ ಎನ್ ಎಲ್, ಆರ್ ಜೆ ಐ ಎಲ್ ಮತ್ತು ವಿಐಎಲ್ ಕ್ರಮವಾಗಿ 99.83%, 91.48%, 99.66% ಮತ್ತು 97.78% ಕಾಲ್ ಸೆಟಪ್ ಯಶಸ್ಸಿನ ದರವನ್ನು ಹೊಂದಿವೆ.
ಡ್ರಾಪ್ ಕಾಲ್ ದರ - ಏರ್‌ಟೆಲ್, ಬಿ ಎಸ್ ಎನ್ ಎಲ್, ಆರ್ ಜೆ ಐ ಎಲ್ ಮತ್ತು ವಿಐಎಲ್ ಸ್ವಯಂ-ಆಯ್ಕೆ ಮೋಡ್ ನಲ್ಲಿ (5G/4G/3G/2G) ಕ್ರಮವಾಗಿ 0.00%, 3.41%, 0.52% ಮತ್ತು 1.22% ಡ್ರಾಪ್ ಕಾಲ್ ದರವನ್ನು ಹೊಂದಿವೆ.
ಪ್ರಮುಖ QoS ನಿಯತಾಂಕಗಳಲ್ಲಿ ಕಾರ್ಯಕ್ಷಮತೆಯ ಸಾರಾಂಶ

ಸಿ ಎಸ್ ಎಸ್ ಆರ್: ಕಾಲ್ ಸೆಟಪ್ ಯಶಸ್ಸಿನ ದರ ಅಂದರೆ (% ನಲ್ಲಿ), ಸಿ ಎಸ್ ಟಿ: ಕಾಲ್ ಸೆಟಪ್ ಸಮಯ (ಸೆಕೆಂಡುಗಳಲ್ಲಿ), ಡಿ ಸಿ ಆರ್: ಡ್ರಾಪ್ ಕಾಲ್ ದರ (% ನಲ್ಲಿ & ಎಂ ಒ ಎಸ್: ಸಾಮಾನ್ಯ ಧ್ವನಿ ಗುಣಮಟ್ಟವನ್ನು ಸೂಚಿಸುವ ಸರಾಸರಿ ಅಭಿಪ್ರಾಯ ಸ್ಕೋರ್.
ಸಾರಾಂಶ-ಡೇಟಾ ಸೇವೆಗಳು
ಡೇಟಾ ಡೌನ್‌ಲೋಡ್ ಕಾರ್ಯಕ್ಷಮತೆ (ಒಟ್ಟಾರೆ): ಸರಾಸರಿ ಡೌನ್‌ಲೋಡ್ ವೇಗ ಏರ್‌ಟೆಲ್ (5G/4G/2G) 147.52 Mbps, ಬಿ ಎಸ್ ಎನ್ ಎಲ್ (4G/3G/2G) 2.14 Mbps, ಆರ್ ಜೆ ಐ ಎಲ್ (5G/4G) 223.80 Mbps ಮತ್ತು ವಿಐಎಲ್ (4G/2G) 18.79 Mbps.
ಡೇಟಾ ಅಪ್‌ಲೋಡ್ ಕಾರ್ಯಕ್ಷಮತೆ (ಒಟ್ಟಾರೆ): ಸರಾಸರಿ ಅಪ್‌ಲೋಡ್ ವೇಗ ಏರ್‌ಟೆಲ್ (5G/4G/2G) 39.38 Mbps, ಬಿ ಎಸ್ ಎನ್ ಎಲ್ (4G/3G/2G) 3.24 Mbps, ಆರ್ ಜೆ ಐ ಎಲ್ (5G/4G) 21.25 Mbps ಮತ್ತು ವಿಐಎಲ್ (4G/2G) 10.39 Mbps.
ಡೇಟಾ ಕಾರ್ಯಕ್ಷಮತೆ - ಹಾಟ್‌ಸ್ಪಾಟ್ ಗಳು (Mbps ನಲ್ಲಿ):
ಏರ್‌ಟೆಲ್- 4G D/L: 30.95 4G U/L: 19.75
5G D/L: 167.55 5G U/L: 37.93
ಬಿ ಎಸ್ ಎನ್ ಎಲ್- 4G D/L: 1.97 4G U/L: 4.50
ಆರ್ ಜೆ ಐ ಎಲ್- 4G D/L: 22.41 4G U/L: 6.45
5G D/L: 224.18 5G U/L: 19.51
ವಿಐಎಲ್- 4G D/L: 12.81 4G U/L: 11.35
ಗಮನಿಸಿ- “D/L” ಡೌನ್‌ಲೋಡ್ ವೇಗ, “U/L” ಅಪ್‌ಲೋಡ್ ವೇಗ
ಸಾರಾಂಶ-ಧ್ವನಿ ಸೇವೆಗಳು
ಕಾಲ್ ಸೆಟಪ್ ಯಶಸ್ಸಿನ ದರ: ಏರ್‌ಟೆಲ್, ಬಿ ಎಸ್ ಎನ್ ಎಲ್, ಆರ್ ಜೆ ಐ ಎಲ್ ಮತ್ತು ವಿಐಎಲ್ ಗಳು ಸ್ವಯಂ-ಆಯ್ಕೆ ಮೋಡ್ ನಲ್ಲಿ (5G/4G/3G/2G) ಕ್ರಮವಾಗಿ 99.83%, 91.48%, 99.66% ಮತ್ತು 97.78% ಕಾಲ್ ಸೆಟಪ್ ಯಶಸ್ಸಿನ ದರವನ್ನು ಹೊಂದಿವೆ.
ಕಾಲ್ ಸೆಟಪ್ ಸಮಯ: ಏರ್‌ಟೆಲ್, ಬಿ ಎಸ್ ಎನ್ ಎಲ್, ಆರ್ ಜೆ ಐ ಎಲ್ ಮತ್ತು ವಿಐಎಲ್ ಸ್ವಯಂ-ಆಯ್ಕೆ ಮೋಡ್ ನಲ್ಲಿ (5G/4G/3G/2G) ಕ್ರಮವಾಗಿ 1.18, 1.49, 1.28 ಮತ್ತು 1.56 ಸೆಕೆಂಡುಗಳ ಕಾಲ್ ಸೆಟಪ್ ಸಮಯವನ್ನು ಹೊಂದಿವೆ.
ಡ್ರಾಪ್ ಕಾಲ್ ದರ: ಏರ್‌ಟೆಲ್, ಬಿ ಎಸ್ ಎನ್ ಎಲ್, ಆರ್ ಜೆ ಐ ಎಲ್ ಮತ್ತು ವಿಐಎಲ್ ಸ್ವಯಂ-ಆಯ್ಕೆ ಮೋಡ್ ನಲ್ಲಿ (5G/4G/3G/2G) ಕ್ರಮವಾಗಿ 0.00%, 3.41%, 0.52% ಮತ್ತು 1.22% ಡ್ರಾಪ್ ಕಾಲ್ ದರವನ್ನು ಹೊಂದಿವೆ.
ಕಾಲ್ ಸೈಲೆನ್ಸ್ /ಮ್ಯೂಟ್ ದರ: ಪ್ಯಾಕೆಟ್ ಸ್ವಿಚ್ಡ್ ನೆಟ್‌ವರ್ಕ್ ನಲ್ಲಿ (4G/5G) ಏರ್‌ಟೆಲ್, ಬಿ ಎಸ್ ಎನ್ ಎಲ್, ಜಿಯೋ ಮತ್ತು ವಿಐಎಲ್ ಕ್ರಮವಾಗಿ 3.42%, 3.18%, 2.57% ಮತ್ತು 3.85% ಮೌನ ಕಾಲ್ ದರವನ್ನು ಹೊಂದಿವೆ.
ಸರಾಸರಿ ಅಭಿಪ್ರಾಯ ಸ್ಕೋರ್ (ಎಂ ಒ ಎಸ್): ಏರ್‌ಟೆಲ್, ಬಿ ಎಸ್ ಎನ್ ಎಲ್, ಆರ್ ಜೆ ಐ ಎಲ್ ಮತ್ತು ವಿಐಎಲ್ ಕ್ರಮವಾಗಿ 3.93, 3.26, 3.77 ಮತ್ತು 3.84 ರ ಸರಾಸರಿ ಎಂ ಒ ಎಸ್ ಅನ್ನು ಹೊಂದಿವೆ.
ಮಂಗಳೂರು ನಗರದಲ್ಲಿ, ಕುಳಾಯಿ, ಸುರತ್ಕಲ್, ಕಾಟಿಪಳ್ಳ, ಜೋಕಟ್ಟೆ, ಕಾವೂರು, ಬಜ್ಪೆ, ಕೈಕಂಬ, ವಾಮಂಜೂರು, ತುಂಬೆ, ಕಂಕನಾಡಿ, ಉಳ್ಳಾಲ, ಕೋಟೆಕಾರ್, ಮುಡಿಪು, ಮತ್ತು ದೇರಳಕಟ್ಟೆ ಮುಂತಾದ ಜನನಿಬಿಡ ಪ್ರದೇಶಗಳನ್ನು ಮೌಲ್ಯಮಾಪನವು ಒಳಗೊಂಡಿದೆ.
ಸ್ಥಿರ ಬಳಕೆದಾರ ಅನುಭವವನ್ನು ಪ್ರತಿಬಿಂಬಿಸಲು TRAI ಬೆಂಗ್ರೆ ಕಡಲತೀರ, ಜಿಲ್ಲಾ ಮತ್ತು ಸೆಷನ್ ಕೋರ್ಟ್, ಇಂಡಿಯಾನಾ ಆಸ್ಪತ್ರೆ ಮತ್ತು ಹೃದಯ ಸಂಸ್ಥೆ (IHHI), ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ, ಮಂಗಳೂರು ಬಸ್ ನಿಲ್ದಾಣ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು ವಿಶ್ವವಿದ್ಯಾಲಯ, ಪಣಂಬೂರು ಕಡಲತೀರ, ಎಸ್ ಸಿ ಎಸ್ ಆಸ್ಪತ್ರೆ, ಸೇಂಟ್ ಅಲೋಶಿಯಸ್ ವಿಶ್ವವಿದ್ಯಾಲಯ ಮತ್ತು ಮಂಗಳೂರು ನಗರದ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ನೈಜ ಜಗತ್ತಿನ ಪರಿಸ್ಥಿತಿಗಳನ್ನು ಮೌಲ್ಯಮಾಪನ ಮಾಡಿತು.
ಮಂಗಳೂರು ನಗರದಲ್ಲಿ ಜುಲೈ 08 ಮತ್ತು 10, 2025 ರಂದು ನಡೆಸಲಾದ ನಡಿಗೆ ಪರೀಕ್ಷೆಗಳು ಸೆಂಟ್ರಲ್ ಮಾರ್ಕೆಟ್, ಕದ್ರಿ ಪಾರ್ಕ್, ಮಂಗಳೂರು ರೈಲು ನಿಲ್ದಾಣ, ಪ್ರಜಾಸೌಧ, ಪಡೀಲ್ ಮತ್ತು ತಣ್ಣೀರುಬಾವಿ ಕಡಲತೀರಗಳನ್ನು ಕೇಂದ್ರೀಕರಿಸಿ, ಜನದಟ್ಟಣೆಯ ಪಾದಚಾರಿ ಪರಿಸರದಲ್ಲಿ ಮೊಬೈಲ್ ನೆಟ್‌ವರ್ಕ್ ಕ್ಷಮತೆಯನ್ನು ಸೆರೆಹಿಡಿಯಲಾಯಿತು.
ಮಾರ್ಗದಲ್ಲಿನ ಸೇವೆಯ ಗುಣಮಟ್ಟವನ್ನು ಅರ್ಥಮಾಡಿಕೊಳ್ಳಲು ಸುಲ್ತಾನ್ ಬತ್ತೇರಿಯಿಂದ ತಣ್ಣೀರುಭಾವಿಯವರೆಗೆ ಮತ್ತು ಬಿಎಂಎಸ್ ಫೆರ್ರಿ ಸೇವೆಗಳಿಂದ ಬಂಗಾರೆ ಫೆರ್ರಿ ಪಾಯಿಂಟ್ ವರೆಗೆ ಕರಾವಳಿ ಪರೀಕ್ಷೆಗಳನ್ನು ನಡೆಸಲಾಯಿತು.
ಈ ಪರೀಕ್ಷೆಗಳನ್ನು TRAI ಸೂಚಿಸಿದ ಉಪಕರಣಗಳು ಮತ್ತು ಪ್ರಮಾಣೀಕೃತ ಪ್ರೋಟೋಕಾಲ್‌ಗಳನ್ನು ಬಳಸಿಕೊಂಡು ನೈಜ ಸಮಯದಲ್ಲಿ ನಡೆಸಲಾಯಿತು. ವಿವರವಾದ ವರದಿಯು TRAI ವೆಬ್‌ಸೈಟ್ http://www.trai.gov.in ನಲ್ಲಿ ಲಭ್ಯವಿದೆ. ಯಾವುದೇ ಸ್ಪಷ್ಟೀಕರಣ/ಮಾಹಿತಿಗಾಗಿ, ಶ್ರೀ ಬ್ರಜೇಂದ್ರ ಕುಮಾರ್, ಸಲಹೆಗಾರರು (ಪ್ರಾದೇಶಿಕ ಕಚೇರಿ, ಬೆಂಗಳೂರು) TRAI ಅವರನ್ನು ಇಮೇಲ್: adv.bengaluru@trai.gov.in ಅಥವಾ ಫೋನ್ ಸಂಖ್ಯೆ +91-80-22865004 ನಲ್ಲಿ ಸಂಪರ್ಕಿಸಬಹುದು.
*****
(Release ID: 2159064)
Visitor Counter : 5