ಕೃಷಿ ಸಚಿವಾಲಯ
azadi ka amrit mahotsav

ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ತಮ್ಮ ಸಂಸದೀಯ ಕ್ಷೇತ್ರ ವಿದಿಶಾ-ರೈಸನ್‌ನಲ್ಲಿ ತಿರಂಗಾ ಯಾತ್ರೆ - ಸ್ವದೇಶಿ ಮೆರವಣಿಗೆ ನಡೆಸಿದರು, ಸ್ವಸಹಾಯ ಗುಂಪಿನ ಸಹೋದರಿಯರೊಂದಿಗೆ ರಕ್ಷಾ ಬಂಧನವನ್ನು ಆಚರಿಸಿದರು


ನಮ್ಮ ತ್ರಿವರ್ಣ ಧ್ವಜ ನಮ್ಮ ಹೆಮ್ಮೆ, ನಮ್ಮ ಗೌರವ, ನಮ್ಮ ಗುರುತು: ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌

ನಮ್ಮ ಸಹೋದರಿಯರು ಈಗ ಲಕ್ಷಾಧಿಪತಿ ದೀದಿಗಳೊಂದಿಗೆ ಮಿಲಿಯನೇರ್‌ ದೀದಿಗಳಾಗಲಿದ್ದಾರೆ: ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌

ಸ್ವದೇಶಿ ಅಳವಡಿಸಿಕೊಳ್ಳಲು ಜನತೆಗೆ ಕೇಂದ್ರ ಕೃಷಿ ಸಚಿವರ ಕರೆ

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ನಮ್ಮದು ಮತ್ತು ಯಾವಾಗಲೂ ನಮ್ಮದಾಗಿರುತ್ತದೆ: ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌

Posted On: 13 AUG 2025 7:58PM by PIB Bengaluru

ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಇಂದು ಮಧ್ಯಪ್ರದೇಶದ ತಮ್ಮ ಸಂಸದೀಯ ಕ್ಷೇತ್ರ ವಿದಿಶಾ-ರೈಸನ್‌ನಲ್ಲಿ ತಿರಂಗಾ ಯಾತ್ರೆ ಮತ್ತು ಸ್ವದೇಶಿ ಮೆರವಣಿಗೆಯನ್ನು ಆಯೋಜಿಸಿದ್ದರು. ಮೆರವಣಿಗೆಗೂ ಮುನ್ನ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಮಹಿಳಾ ಸ್ವಸಹಾಯ ಗುಂಪುಗಳ (ಎಸ್‌ಎಚ್‌ಜಿ) ಸದಸ್ಯರೊಂದಿಗೆ ವಿದಿಶಾದಲ್ಲಿರಕ್ಷಾ ಬಂಧನವನ್ನು ಆಚರಿಸಿದರು. ಸ್ವಾತಂತ್ರ್ಯ ದಿನದಂದು ತಮ್ಮ ಮನೆಗಳಲ್ಲಿರಾಷ್ಟ್ರ ಧ್ವಜವನ್ನು ಹಾರಿಸುವಂತೆ ಶ್ರೀ ಶಿವರಾಜ್‌ ಸಿಂಗ್‌ಚೌಹಾಣ್‌ ಜನರಿಗೆ ಮನವಿ ಮಾಡಿದರು ಮತ್ತು ಸ್ವದೇಶಿ (ದೇಶೀಯ ಉತ್ಪನ್ನಗಳನ್ನು) ಅಳವಡಿಸಿಕೊಳ್ಳುವ ಪ್ರತಿಜ್ಞೆಯನ್ನು ಅವರೊಂದಿಗೆ ತೆಗೆದುಕೊಂಡರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶದ 3 ಕೋಟಿ ಮಹಿಳೆಯರು ಲಕ್ಷಾಧಿಪತಿ ದೀದಿಗಳಾಗಲು (ವಾರ್ಷಿಕ  1 ಲಕ್ಷ ರೂ.ಗಳಿಸುವವರು) ಸಜ್ಜಾಗಿರುವುದು ಸಂತಸ ತಂದಿದೆ ಎಂದು ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದರು. ಸುಮಾರು 2 ಕೋಟಿ ಜನರು ಈಗಾಗಲೇ ಇದನ್ನು ಸಾಧಿಸುವ ಅಂಚಿನಲ್ಲಿದ್ದಾರೆ ಮತ್ತು ಅವರು ಸಮಯಕ್ಕೆ ಮುಂಚಿತವಾಗಿ ಗುರಿಯನ್ನು ತಲುಪುತ್ತಾರೆ ಎಂದು ಅವರು ಹೇಳಿದರು.

ಎಸ್‌ಎಚ್‌ಜಿಗಳು, ಸ್ಥಳೀಯ ಮಾರುಕಟ್ಟೆಗಳು ಅಥವಾ ರಾಷ್ಟ್ರೀಯ ಉತ್ಪಾದಕರಿಂದ ‘ಮೇಡ್‌ ಇನ್‌ ಇಂಡಿಯಾ’ ವಸ್ತುಗಳನ್ನು ಮಾತ್ರ ಖರೀದಿಸುವ ಪ್ರತಿಜ್ಞೆ ಮಾಡುವಂತೆ ಶ್ರೀ ಚೌಹಾಣ್‌ ಅವರು ಮೆರವಣಿಗೆಯ ಸಮಯದಲ್ಲಿ ಜನರನ್ನು ಒತ್ತಾಯಿಸಿದರು. ‘‘ನನ್ನ ದೈನಂದಿನ ಜೀವನಕ್ಕಾಗಿ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಮಾತ್ರ ಖರೀದಿಸುವುದಾಗಿ ನಾನು ಪ್ರತಿಜ್ಞೆ ಮಾಡುತ್ತೇನೆ, ಮತ್ತು ನನ್ನ ಕುಟುಂಬ, ನೆರೆಹೊರೆ ಮತ್ತು ಹಳ್ಳಿಯ ಪ್ರತಿಯೊಬ್ಬರೂ ಅದೇ ರೀತಿ ಮಾಡಬೇಕೆಂದು ನಾನು ಒತ್ತಾಯಿಸುತ್ತೇನೆ,’’ ಎಂದು ಅವರು ಮನವಿ ಮಾಡಿದರು.

ಇದಲ್ಲದೆ, ಪಾಕಿಸ್ತಾನದ ಬಗ್ಗೆ ಭಾರತದ ವಿದೇಶಾಂಗ ನೀತಿಯ ಬಗ್ಗೆ ಮಾತನಾಡಿದ ಅವರು, ‘‘ಸಿಂಧೂ ಜಲ ಒಪ್ಪಂದವು ಇನ್ನು ಮುಂದೆ ಸಮಸ್ಯೆಯಲ್ಲ- ಸಮಸ್ಯೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ. ಅದು ನಮ್ಮದು, ಅದು ನಮ್ಮದಾಗಿಯೇ ಉಳಿಯುತ್ತದೆ,’’ ಎಂದು ಹೇಳಿದರು.

 

*****
 


(Release ID: 2156238)