ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯ
15ನೇ ಹಣಕಾಸು ಆಯೋಗದ ಅವಧಿಯಲ್ಲಿ (2021-22 ರಿಂದ 2025-26) ಜಾರಿಯಲ್ಲಿರುವ ಕೇಂದ್ರ ವಲಯ ಯೋಜನೆ "ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆ" (ಪಿ.ಎಂ.ಕೆ.ಎಸ್.ವೈ) ಗಾಗಿ ಹೆಚ್ಚುವರಿ 1920 ಕೋಟಿ ರೂ. ಸೇರಿ ಒಟ್ಟು ರೂ.6520 ಕೋಟಿ ವೆಚ್ಚಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ
Posted On:
31 JUL 2025 3:05PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 15 ನೇ ಹಣಕಾಸು ಆಯೋಗದ ಅವಧಿಯಲ್ಲಿ (ಎಫ್.ಸಿ.ಸಿ) (2021-22 ರಿಂದ 2025-26) ಜಾರಿಯಲ್ಲಿರುವ ಕೇಂದ್ರ ವಲಯ ಯೋಜನೆ ‘ಪ್ರಧಾನಮಂತ್ರಿ ಕಿಸಾನ್ ಸಂಪದ ಯೋಜನೆ’ (ಪಿ.ಎಂ.ಕೆ.ಎಸ್.ವೈ) ಗಾಗಿ 1920 ಕೋಟಿ ರೂ. ಹೆಚ್ಚುವರಿ ವೆಚ್ಚ ಸೇರಿ ಒಟ್ಟು 6520 ಕೋಟಿ ರೂ. ವ್ಯಯ ಮಾಡಲು ಅನುಮೋದನೆ ನೀಡಿದೆ.
ಈ ಅನುಮೋದನೆಯಲ್ಲಿ (i) ಸಮಗ್ರ ಶಿಥಲ ಗೃಹ (ಇಂಟಿಗ್ರೇಟೆಡ್ ಕೋಲ್ಡ್ ಚೈನ್) ಮತ್ತು ಮೌಲ್ಯವರ್ಧನೆ ಮೂಲಸೌಕರ್ಯ (ಐ.ಸಿ.ಸಿ.ವಿ.ಎ.ಐ) ಅಡಿಯಲ್ಲಿ 50 ಬಹು ಉತ್ಪನ್ನ ಆಹಾರ ಉತ್ತೇಜನ ಘಟಕಗಳನ್ನು ಸ್ಥಾಪಿಸಲು ಬೆಂಬಲವಾಗಿ 1000 ಕೋಟಿ ರೂ. ಮತ್ತು ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆಯ (ಪಿ.ಎಂ.ಕೆ.ಎಸ್.ವೈ) ಅಡಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಭರವಸೆ ಮೂಲಸೌಕರ್ಯ (ಎಫ್.ಎಸ್.ಕ್ಯೂ.ಎ.ಐ) ಘಟಕ ಯೋಜನೆಯಡಿಯಲ್ಲಿ ಎನ್.ಎ.ಬಿ.ಎಲ್ ಮಾನ್ಯತೆಯೊಂದಿಗೆ 100 ಆಹಾರ ಪರೀಕ್ಷಾ ಪ್ರಯೋಗಾಲಯಗಳ (ಎಫ್.ಟಿ.ಎಲ್) ಸ್ಥಾಪನೆಗೆ ನೆರವು ನೀಡಲು 1000 ಕೋಟಿ ರೂ. ಮತ್ತು (ii) 15 ನೇ ಹಣಕಾಸು ಯೋಜನೆಯ ಅವಧಿಯಲ್ಲಿ ಪಿ.ಎಂ.ಕೆ.ಎಸ್.ವೈ ಅಡಿ ವಿವಿಧ ಘಟಕ ಯೋಜನೆಗಳಿಗೆ ಅನುದಾನ ಮಂಜೂರು ಮಾಡಲು 920 ಕೋಟಿ ರೂ.ಬಿಡುಗಡೆ ಒಳಗೊಂಡಿದೆ.
ಐ.ಸಿ.ಸಿ.ವಿ.ಎ.ಐ ಮತ್ತು ಎಫ್.ಎಸ್.ಕ್ಯೂ.ಎ.ಐ ಎರಡೂ ಪಿ.ಎಂ.ಕೆ.ಎಸ್.ವೈ ಬೇಡಿಕೆ ಆಧಾರಿತ ಘಟಕ ಯೋಜನೆಗಳಾಗಿವೆ. ದೇಶಾದ್ಯಂತ ಅರ್ಹ ಸಂಸ್ಥೆಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲು ಆಸಕ್ತಿ ವ್ಯಕ್ತಪಡಿಸುವಿಕೆಯನ್ನು (ಇ.ಒ.ಐ) ಗಳನ್ನು ಕರೆಯಲಾಗುತ್ತದೆ. ಇ.ಒ.ಐ ಗಳಡಿ ಸ್ವೀಕರಿಸಿದ ಪ್ರಸ್ತಾವನೆಗಳನ್ನು ಅಸ್ತಿತ್ವದಲ್ಲಿರುವ ಯೋಜನೆಯ ಮಾರ್ಗಸೂಚಿಗಳ ಪ್ರಕಾರ ಅರ್ಹತಾ ಮಾನದಂಡಗಳಿಗೆ ಅನುಸಾರ ಸೂಕ್ತ ಪರಿಶೀಲನೆಯ ನಂತರ ಅನುಮೋದಿಸಲಾಗುವುದು.
ಉದ್ದೇಶಿತ 50 ಬಹು-ಉತ್ಪನ್ನ ಆಹಾರ ವಿಕಿರಣ ಘಟಕಗಳ ಜಾರಿಯು ಈ ಘಟಕಗಳಡಿಯಲ್ಲಿ ಉತ್ತೇಜನ ನೀಡಲಾದ ಆಹಾರ ಉತ್ಪನ್ನಗಳ ಪ್ರಕಾರವನ್ನು ಆಧರಿಸಿ, ವರ್ಷಕ್ಕೆ 20 ರಿಂದ 30 ಲಕ್ಷ ಮೆಟ್ರಿಕ್ ಟನ್‌ಗಳ (ಎಲ್.ಎಂ.ಟಿ) ಒಟ್ಟು ಸಂರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಖಾಸಗಿ ವಲಯದಡಿಯಲ್ಲಿ ಉದ್ದೇಶಿತ 100 ಎನ್.ಎ.ಬಿ.ಎಲ್-ಮಾನ್ಯತೆ ಪಡೆದ ಆಹಾರ ಪರೀಕ್ಷಾ ಪ್ರಯೋಗಾಲಯಗಳ ಸ್ಥಾಪನೆಯು ಆಹಾರ ಮಾದರಿಗಳನ್ನು ಪರೀಕ್ಷಿಸಲು ಸುಧಾರಿತ ಮೂಲಸೌಕರ್ಯಗಳ ಅಭಿವೃದ್ಧಿಗೆ ಕಾರಣವಾಗಲಿದೆ, ಇದರಿಂದಾಗಿ ಆಹಾರ ಸುರಕ್ಷತಾ ಮಾನದಂಡಗಳ ಪಾಲನೆ ಮತ್ತು ಸುರಕ್ಷಿತ ಆಹಾರಗಳ ಪೂರೈಕೆಯನ್ನು ಖಾತ್ರಿಪಡಿಸುತ್ತದೆ.
*****
(Release ID: 2150790)