ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ವಾರಾಣಸಿಯಲ್ಲಿ 'ಯುವ ಆಧ್ಯಾತ್ಮಿಕ ಶೃಂಗಸಭೆ'ಯನ್ನು ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವೀಯ ಉದ್ಘಾಟಿಸಿದರು


ಮಾದಕ ವ್ಯಸನದ ವಿರುದ್ಧದ ನಮ್ಮ ಸಾಮೂಹಿಕ ಹೋರಾಟದಲ್ಲಿ, ಸ್ವಯಂ ಅರಿವು, ಉದ್ದೇಶ ಹೊಂದಿದ ಜೀವನ ಮತ್ತು ಸಮುದಾಯದ ಭಾಗವಹಿಸುವಿಕೆ ನಮ್ಮ ಮಾರ್ಗದರ್ಶಿ ತತ್ವಗಳಾಗಿರಬೇಕು - ಪ್ರಧಾನಮಂತ್ರಿ ನರೇಂದ್ರ ಮೋದಿ

ಭಾರತದ ಯುವಜನರು ಅಮೃತ ಕಾಲದ ದೀಪಧಾರಿಗಳು. 2047 ರ ವೇಳೆಗೆ ನಾವು ವಿಕಸಿತ ಭಾರತವನ್ನು ನಿರ್ಮಿಸಬೇಕಾದರೆ, ನಾವು ಮೊದಲು ಮಾದಕ ವಸ್ತು ಮುಕ್ತ ಭಾರತವನ್ನು ಖಚಿತಪಡಿಸಿಕೊಳ್ಳಬೇಕು - ಡಾ. ಮಾಂಡವೀಯ

120ಕ್ಕೂ ಹೆಚ್ಚು ಆಧ್ಯಾತ್ಮಿಕ ಸಂಸ್ಥೆಗಳ 600ಕ್ಕೂ ಹೆಚ್ಚು ಯುವ ನಾಯಕರು ಯುವ ನೇತೃತ್ವದ ರಾಷ್ಟ್ರೀಯ ಮಾದಕವಸ್ತು ವಿರೋಧಿ ಆಂದೋಲನವನ್ನು ಪ್ರಾರಂಭಿಸಲು ಸೇರಿದ್ದಾರೆ

Posted On: 19 JUL 2025 6:56PM by PIB Bengaluru

ಉತ್ತರ ಪ್ರದೇಶದ ವಾರಾಣಸಿಯ ರುದ್ರಾಕ್ಷ ಅಂತರರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರದಲ್ಲಿ ಇಂದು 'ವಿಕಸಿತ ಭಾರತಕ್ಕಾಗಿ ಮಾದಕದ್ರವ್ಯ ಮುಕ್ತ ಯುವಜನತೆ' ಎಂಬ ವಿಷಯದ 'ಯುವ ಆಧ್ಯಾತ್ಮಿಕ ಶೃಂಗಸಭೆ'ಯನ್ನು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಉದ್ಘಾಟಿಸಿದರು. ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಆಯೋಜಿಸಿರುವ ಈ ಶೃಂಗಸಭೆಯು, 2047 ರ ವೇಳೆಗೆ ವಿಕಸಿತ ಭಾರತದ ಪ್ರಮುಖ ಗುರಿಯಡಿಯಲ್ಲಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕಲ್ಪಿಸಿಕೊಂಡಿರುವ ಮಾದಕವಸ್ತು ಮುಕ್ತ ಭಾರತಕ್ಕಾಗಿ ಮೌಲ್ಯಾಧಾರಿತ ಯುವ ಚಳುವಳಿಯನ್ನು ನಿರ್ಮಿಸುವ ಭಾರತ ಸರ್ಕಾರದ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿ, ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ವಿಶೇಷ ಸಂದೇಶವನ್ನು ಭಾಗವಹಿಸುವವರೊಂದಿಗೆ ಹಂಚಿಕೊಳ್ಳಲಾಯಿತು, ಇದು ಯುವ ನೇತೃತ್ವದ ಈ ಆಂದೋಲನಕ್ಕೆ ಸ್ಫೂರ್ತಿ ಮತ್ತು ಮಾರ್ಗದರ್ಶನವನ್ನು ನೀಡಿತು. ತಮ್ಮ ಸಂದೇಶದಲ್ಲಿ, ಪ್ರಧಾನ ಮಂತ್ರಿಯವರು, "2025 ರ ಯುವ ಆಧ್ಯಾತ್ಮಿಕ ಶೃಂಗಸಭೆಯು ಯುವ ಭಾರತೀಯರ ಸಬಲೀಕರಣ, ಅರಿವು ಮತ್ತು ಶಿಸ್ತಿನ ಪೀಳಿಗೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿರುವ ಶ್ಲಾಘನೀಯ ಉಪಕ್ರಮವಾಗಿದೆ. ಮಾದಕ ವ್ಯಸನವು ವೈಯಕ್ತಿಕ ಸಾಮರ್ಥ್ಯವನ್ನು ಹಳಿತಪ್ಪಿಸುವುದಲ್ಲದೆ, ಕುಟುಂಬಗಳು ಮತ್ತು ಸಮಾಜದ ಅಡಿಪಾಯವನ್ನು ದುರ್ಬಲಗೊಳಿಸುತ್ತದೆ. ಮಾದಕ ವ್ಯಸನದ ವಿರುದ್ಧದ ಈ ಸಾಮೂಹಿಕ ಹೋರಾಟದಲ್ಲಿ, ಸ್ವಯಂ ಅರಿವು, ಉದ್ದೇಶ ಹೊಂದಿದ ಜೀವನ ಮತ್ತು ಸಮುದಾಯದ ಭಾಗವಹಿಸುವಿಕೆ ನಮ್ಮ ಮಾರ್ಗದರ್ಶಿ ತತ್ವಗಳಾಗಿರಬೇಕು." ಎಂದು ತಿಳಿಸಿದರು.

ದೇಶಾದ್ಯಂತ 120 ಕ್ಕೂ ಹೆಚ್ಚು ಆಧ್ಯಾತ್ಮಿಕ ಸಂಸ್ಥೆಗಳ 600 ಕ್ಕೂ ಹೆಚ್ಚು ಯುವ ಪ್ರತಿನಿಧಿಗಳನ್ನು ಒಟ್ಟುಗೂಡಿಸುವ ಈ ಶೃಂಗಸಭೆಯು, ಮಾದಕ ವ್ಯಸನದ ವಿರುದ್ಧ ಎದ್ದು ನಿಲ್ಲುವಂತೆ ಭಾರತದ ಯುವ ಶಕ್ತಿಗೆ ಕರೆ ನೀಡುತ್ತದೆ. ಡಾ. ಮಾಂಡವಿಯಾ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ, ಅಮೃತ ಕಾಲದ ನಿಜವಾದ ಸಾಮರ್ಥ್ಯವು ಅಮೃತ ಪೀಳಿಗೆಯ ಕೈಯಲ್ಲಿದೆ ಎಂದು ಒತ್ತಿ ಹೇಳಿದರು ಮತ್ತು 2047 ರ ವೇಳೆಗೆ ವಿಕಸಸಿತ ಭಾರತದ ಗುರಿಯನ್ನು ಹೊಂದಿರುವ ರಾಷ್ಟ್ರವು ಮೊದಲು ತನ್ನ ಯುವಜನರು ಮಾದಕ ದ್ರವ್ಯ ಸೇವನೆಯ ಹಿಡಿತದಿಂದ ಮುಕ್ತರಾಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. "ಭಾರತದ ಯುವಜನರ ಅಮೃತ ಕಾಲದ ದೀಪಧಾರಿಗಳು. 2047 ರ ವೇಳೆಗೆ ನಾವು ವಿಕಸಿತ ಭಾರತವನ್ನು ನಿರ್ಮಿಸಬೇಕಾದರೆ, ನಾವು ಮೊದಲು ಮಾದಕ ದ್ರವ್ಯ ಮುಕ್ತ ಭಾರತವನ್ನು ಖಚಿತಪಡಿಸಿಕೊಳ್ಳಬೇಕು" ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ. ವೀರೇಂದ್ರ ಕುಮಾರ್, ಈ ಶೃಂಗಸಭೆಯು ಒಂದು ಸಾಮೂಹಿಕ ಸಂಕಲ್ಪ ಎಂದು ಒತ್ತಿ ಹೇಳಿದರು. ನಶೆ ಮುಕ್ತ ಭಾರತ ಅಭಿಯಾನವನ್ನು ನಿಜವಾದ ಜನಾಂದೋಲನವನ್ನಾಗಿ ಪರಿವರ್ತಿಸಲು ಪ್ರತಿಯೊಬ್ಬ ನಾಗರಿಕನ ಸಕ್ರಿಯ ಭಾಗವಹಿಸುವಿಕೆಗೆ ಇದು ಕರೆ ನೀಡುತ್ತದೆ‌ ಎಂದು ಅವರು ಹೇಳಿದರು. "ನಶೆ ಬೇಡ, ನವನಿರ್ಮಾಣ ಬೇಕು ಎಂದ ಅವರು, ಈ ಕನಸನ್ನು ನನಸಾಗಿಸಲು, ನಾವು ಈ ಸಂಕಲ್ಪವನ್ನು ಶೃಂಗಸಭೆಯಿಂದಾಚೆಗೆ ಪ್ರತಿ ಮನೆ, ಪ್ರತಿ ಕುಟುಂಬ ಮತ್ತು ಪ್ರತಿ ಸಮುದಾಯಕ್ಕೆ ಕೊಂಡೊಯ್ಯಬೇಕು. ಆಗ ಮಾತ್ರ ನಾವು ಅಭಿವೃದ್ಧಿ ಹೊಂದಿದ ರಾಷ್ಟ್ರದತ್ತ ನಮ್ಮ ಹಾದಿಯನ್ನು ವೇಗಗೊಳಿಸಬಹುದು" ಎಂದು ಹೇಳಿದರು.

ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು ತಮ್ಮ ಭಾಷಣದಲ್ಲಿ, ಭಾರತವು ಪ್ರಸ್ತುತ ಆಳವಾದ ಬದಲಾವಣೆಯ ಯುಗದಲ್ಲಿದೆ ಮತ್ತು ಅಂತಹ ಸಂದರ್ಭಗಳಲ್ಲಿ ಯುವಜನರು ಯಾವಾಗಲೂ ಪ್ರಮುಖ ಪಾತ್ರ ವಹಿಸುತ್ತಾರೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ ಎಂದು ಹೇಳಿದರು. ಅವಿಭಕ್ತ ಕುಟುಂಬ ವ್ಯವಸ್ಥೆಗಳ ಕುಸಿತದಿಂದಾಗಿ ಇಂದು ಅನೇಕ ಯುವಕರು ಎದುರಿಸುತ್ತಿರುವ ಭಾವನಾತ್ಮಕ ಪ್ರತ್ಯೇಕತೆಯ ಬಗ್ಗೆ ಶ್ರೀ ಶೇಖಾವತ್ ಕಳವಳ ವ್ಯಕ್ತಪಡಿಸಿದರು. "ಹಿಂದೆ, ಕುಟುಂಬದ ಹಿರಿಯರು ಯುವಕರಿಗೆ ಮಾರ್ಗದರ್ಶನ ಮಾಡುತ್ತಿದ್ದರು, ಹಾನಿಕಾರಕ ಪ್ರಭಾವಗಳನ್ನು ತಪ್ಪಿಸಲು ಅವರಿಗೆ ಸಹಾಯ ಮಾಡುತ್ತಿದ್ದರು. ಇಂದು, ಆ ಬೆಂಬಲ ವ್ಯವಸ್ಥೆಯು ದುರ್ಬಲಗೊಳ್ಳುತ್ತಿದೆ ಮತ್ತು ಈ ಸಾಂಸ್ಕೃತಿಕ ಅಡಿಪಾಯಗಳನ್ನು ಪುನಃಸ್ಥಾಪಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ" ಎಂದು ಅವರು ಹೇಳಿದರು.

ಭಾರತದಲ್ಲಿ ಮಾದಕ ದ್ರವ್ಯ ಪಿಡುಗಿನ ಕುರಿತು ಮಾತನಾಡಿದ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವೆ ಶ್ರೀಮತಿ ರಕ್ಷಾ ನಿಖಿಲ್ ಖಡ್ಸೆ, ಶಾಲಾ ಮಕ್ಕಳು ಮಾದಕ ದ್ರವ್ಯಗಳಿಗೆ ಒಡ್ಡಿಕೊಳ್ಳುವುದು ಮತ್ತು ಯುವಕರನ್ನು ಗುರಿಯಾಗಿಸಿಕೊಂಡು ಡಿಜಿಟಲ್ ವೇದಿಕೆಗಳ ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಪ್ರಧಾನಿ ನೇತೃತ್ವದ ಸರ್ಕಾರದ ಶೂನ್ಯ ಸಹಿಷ್ಣುತೆ ನೀತಿಯನ್ನು ಎತ್ತಿ ತೋರಿಸಿದ ಅವರು, ಚಿಂತನ ಶಿಬಿರದಿಂದ ಪಡೆದ ಒಳನೋಟಗಳನ್ನು ಕಾರ್ಯಗತಗೊಳಿಸಬಹುದಾದ ಫಲಿತಾಂಶಗಳಾಗಿ ಪರಿವರ್ತಿಸುವ ಅಗತ್ಯವನ್ನು ಒತ್ತಿ ಹೇಳಿದರು.

ದೃಷ್ಟಿಕೋನದಿಂದ ಕಾರ್ಯರೂಪಕ್ಕೆ ಪರಿವರ್ತನೆಗೊಳ್ಳುತ್ತಿರುವ ಈ ಶೃಂಗಸಭೆಯನ್ನು ನಾಲ್ಕು ಕೇಂದ್ರೀಕೃತ ಸಮಗ್ರ ಗೋಷ್ಠಿಗಳನ್ನು ಒಳಗೊಂಡ ಆಳಾವಾದ ಚಿಂತನ ಶಿಬಿರವಾಗಿ ವಿನ್ಯಾಸಗೊಳಿಸಲಾಗಿದೆ. ಈ ಗೋಷ್ಠಿಗಳು ವ್ಯಸನದ ಸ್ವರೂಪ ಮತ್ತು ಪ್ರಕಾರಗಳು, ಮಾದಕ ವ್ಯಸನವನ್ನು ಉತ್ತೇಜಿಸುವ ಸಂಕೀರ್ಣ ಜಾಲಗಳು ಮತ್ತು ಪರಿಣಾಮಕಾರಿ ತಳಮಟ್ಟದ ಅಭಿಯಾನಗಳಿಗೆ ತಂತ್ರಗಳನ್ನು ಅನ್ವೇಷಿಸುತ್ತವೆ. ಪ್ರತಿ ಅಧಿವೇಶನವು ನೀತಿ ನಿರೂಪಕರು, ವಲಯ ತಜ್ಞರು, ಆಧ್ಯಾತ್ಮಿಕ ಮಾರ್ಗದರ್ಶಕರು ಮತ್ತು ಯುವ ನಾಯಕರನ್ನು ಒಟ್ಟುಗೂಡಿಸಿ ಜನ-ಕೇಂದ್ರಿತ ಮತ್ತು ಆಧ್ಯಾತ್ಮಿಕ ಪ್ರೇರಿತ ಮಾರ್ಗಸೂಚಿಯನ್ನು ರಚಿಸಿತು.ರೂಪಿಸುತ್ತವೆ.

ಪ್ರತಿ ಗೋಷ್ಠಿಯ ಚರ್ಚೆಗಳು ಕಾಶಿ ಘೋಷಣೆಯಲ್ಲಿ ಮುಕ್ತಾಯಗೊಳ್ಳುವ ಕಾರ್ಯಸಾಧ್ಯ ಒಳನೋಟಗಳನ್ನು ರೂಪಿಸುವ ಗುರಿಯನ್ನು ಹೊಂದಿವೆ. ಇದು ಭಾಗವಹಿಸುವ ಪಾಲುದಾರರ ಸಾಮೂಹಿಕ ಬದ್ಧತೆ ಮತ್ತು ಕಾರ್ಯತಂತ್ರದ ನೀಲನಕ್ಷೆಯನ್ನು ಒಳಗೊಂಡಿರುವ ದಾರ್ಶನಿಕ ದಾಖಲೆಯಾಗಿರುತ್ತದೆ.

ಸಾರ್ವಜನಿಕ ಭಾಗವಹಿಸುವಿಕೆಯನ್ನು ಮತ್ತಷ್ಟು ಬಲಪಡಿಸಲು, ಮೀಸಲಾದ ಸಾರ್ವಜನಿಕ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಇದು ಪ್ರಭಾವಶಾಲಿ ಬೀದಿ ನಾಟಕಗಳು ಮತ್ತು "ಕೆಲಿಡೋಸ್ಕೋಪ್ ಆಫ್ ಬನಾರಸ್" ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಒಳಗೊಂಡಿತ್ತು, ಇದು ನಗರದ ಆಧ್ಯಾತ್ಮಿಕ ಪರಂಪರೆಯನ್ನು ಆಚರಿಸಿತು ಮತ್ತು ಮಾದಕ ದ್ರವ್ಯ ಸೇವನೆಯ ನೈತಿಕ ಮತ್ತು ಸಾಮಾಜಿಕ ಅಪಾಯದತ್ತ ಗಮನ ಸೆಳೆಯಿತು. ಶಿಕ್ಷಣತಜ್ಞರು, ವೈದ್ಯಕೀಯ ವೃತ್ತಿಪರರು, ವ್ಯಾಪಾರಿಗಳು ಮತ್ತು ಸಾಮಾಜಿಕ ಮುಖಂಡರು ಸೇರಿದಂತೆ ವಾರಣಾಸಿಯ ಪ್ರಮುಖ ನಾಗರಿಕರು ಯುವಕರೊಂದಿಗೆ ಕೈಜೋಡಿಸಿ, ಈ ರಾಷ್ಟ್ರೀಯ ಧ್ಯೇಯದಲ್ಲಿ ಸಾಮೂಹಿಕ ಜವಾಬ್ದಾರಿಯ ಮೂಲ ಸಂದೇಶವನ್ನು ವಿಸ್ತರಿಸಿದರು.

ಈ ಕಾರ್ಯಕ್ರಮದಲ್ಲಿ ಅನೇಕ ಪ್ರಮುಖ ಗಣ್ಯರು ಭಾಗವಹಿಸಿದ್ದರು, ಇದು ಮಾದಕ ದ್ರವ್ಯ ವಿರೋಧಿ ಅಭಿಯಾನದ ಬಗ್ಗೆ ಸರ್ಕಾರದ ಸಮಗ್ರ ವಿಧಾನ ಮತ್ತು ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಮುಖ್ಯ ಭಾಷಣವನ್ನು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ. ವೀರೇಂದ್ರ ಕುಮಾರ್ ಮಾಡಿದರು. ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಶ್ರೀ ನಿತ್ಯಾನಂದ ರೈ, ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್, ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಸಚಿವೆ ಶ್ರೀಮತಿ ರಕ್ಷಾ ನಿಖಿಲ್ ಖಡ್ಸೆ, ಯುವ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಸಚಿವ ಶ್ರೀ ಗಿರೀಶ್ ಚಂದ್ರ ಯಾದವ್ ಉಪಸ್ಥಿತರಿದ್ದರು. ಎನ್‌ ಸಿ ಬಿ ಯ ಹಿರಿಯ ಅಧಿಕಾರಿಗಳು, ಭಾರತ ಔಷಧ ನಿಯಂತ್ರಕ ಜನರಲ್, ಉತ್ತರ ಪ್ರದೇಶ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಮತ್ತು ಆಧ್ಯಾತ್ಮಿಕ ಮತ್ತು ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಗಳ ಪ್ರತಿನಿಧಿಗಳು ವಿವಿಧ ವಿಚಾರಗೋಷ್ಠಿಗಳು ಮತ್ತು ಚರ್ಚಾಗೋಷ್ಠಿಗಳಲ್ಲಿ ಪ್ರಮುಖ ಪಾತ್ರ ವಹಿಸಿದರು.

ಯುವ ಶಕ್ತಿ, ಆಧ್ಯಾತ್ಮಿಕ ಸಂಕಲ್ಪ ಮತ್ತು ಸಾಂಸ್ಥಿಕ ಪಾಲುದಾರಿಕೆಗಳ ಸಂಗಮವು ಜುಲೈ 20 ರಂದು ಕಾಶಿ ಘೋಷಣೆಯ ಔಪಚಾರಿಕ ಅಂಗೀಕಾರದೊಂದಿಗೆ ಕೊನೆಗೊಳ್ಳುತ್ತದೆ. ಈ ಸಮಗ್ರ ನೀತಿ ದಾಖಲೆಯು ಸ್ಥಳೀಯ ಸರ್ಕಾರಗಳು ಮತ್ತು ಶಿಕ್ಷಣ ಸಂಸ್ಥೆಗಳಿಂದ ಹಿಡಿದು ಆಧ್ಯಾತ್ಮಿಕ ಸಂಸ್ಥೆಗಳು ಮತ್ತು ನಾಗರಿಕ ಸಮಾಜದವರೆಗೆ ಪ್ರತಿಯೊಬ್ಬ ಪಾಲುದಾರರಿಗೆ ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಗುರಿಗಳು, ಸಮಯಸೂಚಿಗಳು ಮತ್ತು ಪಾತ್ರಗಳೊಂದಿಗೆ ಮಾದಕವಸ್ತು ಮುಕ್ತ ಯುವ ಕ್ರಮಕ್ಕಾಗಿ ಐದು ವರ್ಷಗಳ ಮಾರ್ಗಸೂಚಿಯನ್ನು ರೂಪಿಸುತ್ತದೆ. ವಿಕಸಿತ ಭಾರತ್ ಯುವ ನಾಯಕರ ಸಂವಾದ 2026 ರ ಸಂದರ್ಭದಲ್ಲಿ ಘೋಷಣೆಯನ್ನು ಪರಿಶೀಲಿಸಲಾಗುವುದು, ಅದರ ಅನುಷ್ಠಾನವು ನಿರಂತರ, ಜವಾಬ್ದಾರಿಯುತ ಮತ್ತು ಭವಿಷ್ಯದ ದೃಷ್ಟಿಕೋನವನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲಾಗುವುದು.

ಈ ಯುವ ನೇತೃತ್ವದ ಆಂದೋಲನವು ನಾಗರಿಕರ ಭಾಗವಹಿಸುವಿಕೆ ಮತ್ತು ಯುವ ನಾಯಕತ್ವದ ಮೂಲಕ ಪರಿವರ್ತನೆಯ ಸಾಮಾಜಿಕ ಬದಲಾವಣೆಯನ್ನು ತರುವ ಸಚಿವಾಲಯದ ವಿಶಾಲ ಚೌಕಟ್ಟಿನಲ್ಲಿ ನೆಲೆಗೊಂಡಿದೆ. ಭಾರತದ ಕಾಲಾತೀತ ನಾಗರಿಕತೆಯ ಮೌಲ್ಯಗಳಲ್ಲಿ ಬೇರೂರಿರುವ ಮತ್ತು ಆಳವಾದ ಉದ್ದೇಶ ಮತ್ತು ರಾಷ್ಟ್ರೀಯತೆಯಿಂದ ಪ್ರೇರಿತವಾದ ಅಮೃತ ಕಾಲದಲ್ಲಿ ಪ್ರಗತಿಯ ಎಂಜಿನ್‌ ಗಳಾಗಲು ಯುವಜನರಿಗೆ ಪ್ರಧಾನಿ ಮೋದಿಯವರು ನೀಡಿದ ಕರೆಯನ್ನು ಇದು ಪುನರುಚ್ಚರಿಸುತ್ತದೆ.

 

*****


(Release ID: 2146171)