ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಗುಜರಾತ್‌ನ ಕೆವಾಡಿಯಾದಲ್ಲಿ ನಡೆದ ವಲಯ ಸಭೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯನ್ನು ಮುನ್ನಡೆಸುವಲ್ಲಿ ಕೇಂದ್ರ-ರಾಜ್ಯ ಒಮ್ಮತವನ್ನು ಪುನರುಚ್ಚರಿಸಿದವು


ಗುಜರಾತ್‌, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಗೋವಾ ರಾಜ್ಯಗಳು ಭಾಗವಹಿಸುತ್ತವೆ

ಪೋಷಣ್‌ 2.0 ಅಡಿಯಲ್ಲಿ ಮಹತ್ವದ ನವೀಕರಣವಾಗಿ, ಆಗಸ್ವ್‌ 1ರಿಂದ ಫಲಾನುಭವಿಗಳ ನೋಂದಣಿಯನ್ನು ಬಯೋಮೆಟ್ರಿಕ್‌ ದೃಢೀಕರಣವನ್ನು ಬಳಸಿಕೊಂಡು ಮಾಡಲಾಗುವುದು ಎಂದು ಘೋಷಿಸಲಾಯಿತು, ಇದು ಉತ್ತಮ ಗುರಿ ಮತ್ತು ಸೇವಾ ವಿತರಣೆಯನ್ನು ಖಚಿತಪಡಿಸುತ್ತದೆ

ದೇಶಾದ್ಯಂತ ರಾಜ್ಯ, ಜಿಲ್ಲೆ ಮತ್ತು ಕ್ಷೇತ್ರ ಕಾರ್ಯಕರ್ತರಿಗೆ ಜ್ಞಾನ ಮತ್ತು ಸಾಮರ್ಥ್ಯ‌ ವರ್ಧನೆ ಚೌಕಟ್ಟನ್ನು ಬಲಪಡಿಸಲು ಮಿಷನ್‌ ಸಾಕ್ಷ ಮ್‌ ಅಂಗನವಾಡಿ ಮತ್ತು ಪೋಷಣ್‌ 2,0 ನಲ್ಲಿ ಮೀಸಲಾದ ಕಲಿಕಾ ಮಾಡ್ಯೂಲ್‌(ಮಾದರಿ) ಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಐಜಿಒಟಿ ಕರ್ಮಯೋಗಿ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡಲಾಗುವುದು

ಸಚಿವಾಲಯದ ಮಿಷನ್‌ಗಳ ಕಿರುಚಿತ್ರಗಳು ಮತ್ತು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (ಪಿಎಂಆರ್‌ಬಿಪಿ) ಕುರಿತ ವಿಡಿಯೊವನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು, ಇದು ನಾಮನಿರ್ದೇಶನಗಳ ಕೊನೆಯ ದಿನಾಂಕವನ್ನು 2025ರ ಜುಲೈ 31 ಎಂದು ಬಿಂಬಿಸಿತು

Posted On: 12 JUL 2025 6:52PM by PIB Bengaluru

ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಕೇಂದ್ರ-ರಾಜ್ಯ ಸಹಯೋಗವನ್ನು ಹೆಚ್ಚಿಸುವ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕ್ಷೇತ್ರದಲ್ಲಿ ಪ್ರಮುಖ ಪ್ರಮುಖ ಯೋಜನೆಗಳ ತ್ವರಿತ ಅನುಷ್ಠಾನದ ನಿರಂತರ ಪ್ರಯತ್ನಗಳ ಭಾಗವಾಗಿ ಇಂದು (ಜುಲೈ 12, 2025) ಗುಜರಾತ್‌ನ ಕೆವಾಡಿಯಾದಲ್ಲಿ ವಲಯ ಸಭೆಯನ್ನು ಯಶಸ್ವಿಯಾಗಿ ಆಯೋಜಿಸಿತು.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಅನ್ನಪೂರ್ಣ ದೇವಿ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವೆ ಶ್ರೀಮತಿ ಸಾವಿತ್ರಿ ಠಾಕೂರ್‌, ಗುಜರಾತ್‌ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಭಾನುಬೆನ್‌ ಬಬರಿಯಾ, ಮಧ್ಯಪ್ರದೇಶ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ನಿರ್ಮಲಾ ಭೂರಿಯಾ ಮತ್ತು ರಾಜಸ್ಥಾನ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ಸಚಿವೆ ಡಾ. ಮಂಜು ಬಾಗ್ಮಾರ್‌ ಉಪಸ್ಥಿತರಿದ್ದರು.


ವಲಯ ಸಭೆಯಲ್ಲಿಗುಜರಾತ್‌, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಗೋವಾ ರಾಜ್ಯಗಳ ಹಿರಿಯ ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಮಿಷನ್‌ ಶಕ್ತಿ, ಮಿಷನ್‌ ವಾತ್ಸಲ್ಯ ಮತ್ತು ಮಿಷನ್‌ ಸಾಕ್ಷ ಮ್‌ ಅಂಗನವಾಡಿ ಮತ್ತು ಪೋಷಣ್‌ 2.0 ಅಡಿಯಲ್ಲಿನ ಪ್ರಯತ್ನಗಳ ಸಂಯೋಜನೆಯ ಸುತ್ತ ಚರ್ಚೆಗಳು ಕೇಂದ್ರೀಕೃತವಾಗಿದ್ದವು, ರಾಜ್ಯಗಳು ಉತ್ತಮ ಅಭ್ಯಾಸಗಳು, ನವೀನ ವಿಧಾನಗಳು ಮತ್ತು ಪರಸ್ಪರ ಕಲಿಕೆ ಮತ್ತು ಪುನರಾವರ್ತನೆಗಾಗಿ ಯಶಸ್ವಿ ಮಧ್ಯಸ್ಥಿಕೆಗಳನ್ನು ಪ್ರದರ್ಶಿಸಿದವು.

ದಿಕ್ಸೂಚಿ ಭಾಷಣ ಮಾಡಿದ ಕೇಂದ್ರ ಸಚಿವೆ ಶ್ರೀಮತಿ ಅನ್ನಪೂರ್ಣ ದೇವಿ ಅವರು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರಿಗೆ ಗೌರವ ನಮನ ಸಲ್ಲಿಸಿದರು ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸುಪೋಶಿತ್‌ ಭಾರತ್‌ ದೃಷ್ಟಿಕೋನ ಮತ್ತು ಸಶಕ್ತ ಮಹಿಳೆಯರು ಮತ್ತು ಪೋಷಿಸಿದ ಮಕ್ಕಳ ನೇತೃತ್ವದ ಅಂತರ್ಗತ ರಾಷ್ಟ್ರೀಯ ಅಭಿವೃದ್ಧಿಯ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿಏಕೀಕೃತ ಪ್ರಯತ್ನಗಳ ಮಹತ್ವವನ್ನು ಒತ್ತಿ ಹೇಳಿದರು. ಸಾಕ್ಷ ಮ್‌ ಅಂಗನವಾಡಿಯ ಅಡಿಯಲ್ಲಿ ಫೇಸ್‌ ರೆಕಗ್ನಿಷನ್‌ ಸಿಸ್ಟಮ್‌ (ಎಫ್‌ಆರ್‌ಎಸ್‌) ನಂತಹ ತಾಂತ್ರಿಕ ಸಾಧನಗಳನ್ನು ಅಳವಡಿಸಿಕೊಳ್ಳುವುದು ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಸುಧಾರಿತ ಆಡಳಿತವನ್ನು ಖಚಿತಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಒತ್ತಿ ಹೇಳಿದರು.

ಪೋಷಣ್‌ 2.0 ಅಡಿಯಲ್ಲಿಮಹತ್ವದ ನವೀಕರಣವಾಗಿ, ಆಗಸ್ಟ್‌ 1ರಿಂದ ಬಯೋಮೆಟ್ರಿಕ್‌ ದೃಢೀಕರಣವನ್ನು ಬಳಸಿಕೊಂಡು ಫಲಾನುಭವಿಗಳ ನೋಂದಣಿಯನ್ನು ಮಾಡಲಾಗುವುದು ಎಂದು ಘೋಷಿಸಲಾಯಿತು, ಇದು ಉತ್ತಮ ಗುರಿ ಮತ್ತು ಸೇವಾ ವಿತರಣೆಯನ್ನು ಖಚಿತಪಡಿಸುತ್ತದೆ. ಇದಲ್ಲದೆ, ದೇಶಾದ್ಯಂತ ರಾಜ್ಯ, ಜಿಲ್ಲೆ ಮತ್ತು ಕ್ಷೇತ್ರ ಕಾರ್ಯಕರ್ತರಿಗೆ ಜ್ಞಾನ ಮತ್ತು ಸಾಮರ್ಥ್ಯ‌ ವರ್ಧನೆ ಚೌಕಟ್ಟನ್ನು ಬಲಪಡಿಸಲು ಮಿಷನ್‌ ಸಾಕ್ಷಮ್‌ ಅಂಗನವಾಡಿ ಮತ್ತು ಪೋಷಣ್‌ 2,0 ನಲ್ಲಿಮೀಸಲಾದ ಕಲಿಕಾ ಮಾಡ್ಯೂಲ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಐಜಿಒಟಿ ಕರ್ಮಯೋಗಿ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡಲಾಗುವುದು.

ಕುಂದುಕೊರತೆ ನಿವಾರಣಾ ಕಾರ್ಯವಿಧಾನಗಳನ್ನು ಬಲಪಡಿಸಲು, ಅಂಗನವಾಡಿಗಳಲ್ಲಿ ಸೇವೆಗಳನ್ನು ಸಮಯೋಚಿತವಾಗಿ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಹೆಚ್ಚು ಪರಿಣಾಮಕಾರಿ ಫಲಾನುಭವಿ ಗುರಿಯನ್ನು ಹೊಂದಲು ಗೌರವಾನ್ವಿತ ಸಚಿವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒತ್ತಾಯಿಸಿದರು. ಹದಿಹರೆಯದ ಹುಡುಗಿಯರು ಮತ್ತು ಯುವ ತಾಯಂದಿರಲ್ಲಿ ಡಿಜಿಟಲ್‌ ಸಾಕ್ಷರತೆಯನ್ನು ಹೆಚ್ಚಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಜತೆಗೆ ಪೋಷಣ್‌ ಸಹಾಯವಾಣಿಯಂತಹ ವೇದಿಕೆಗಳನ್ನು ಕುಂದುಕೊರತೆ ಕೇಂದ್ರಗಳಿಂದ ನಾಗರಿಕರ ಪಾಲ್ಗೊಳ್ಳುವಿಕೆ ಮತ್ತು ಸೇವಾ ಗುಣಮಟ್ಟ ಸುಧಾರಣೆಯ ವೇದಿಕೆಗಳಾಗಿ ಮರುಸ್ಥಾಪಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

 

ಮಿಷನ್‌ ಶಕ್ತಿ ಅಡಿಯಲ್ಲಿಒನ್‌ ಸ್ಟಾಪ್‌ ಕೇಂದ್ರಗಳು ಮತ್ತು ಮಹಿಳಾ ಸಹಾಯವಾಣಿ -181 ರ ವಿಸ್ತರಣೆಯನ್ನು ಶ್ಲಾಘಿಸಿದ ಸಚಿವರು, ಪಾರದರ್ಶಕತೆಯನ್ನು ಉತ್ತೇಜಿಸುವಲ್ಲಿ ಪಿಎಂಎಂವಿವೈ ಅಡಿಯಲ್ಲಿಆಧಾರ್‌-ಸಕ್ರಿಯಗೊಳಿಸಿದ ನೇರ ಲಾಭ ವರ್ಗಾವಣೆಯ ಪಾತ್ರವನ್ನು ಬಿಂಬಿಸಿದರು.

ಹೊಸದಾಗಿ ಪ್ರಾರಂಭಿಸಲಾದ ಮಿಷನ್‌ ವಾತ್ಸಲ್ಯ ಪೋರ್ಟಲ್‌ಅನ್ನು ನೈಜ-ಸಮಯದ ಡೇಟಾ ಎಂಟ್ರಿ ಮತ್ತು ಕಾರ್ಯಕ್ಷ ಮತೆಯ ಮೇಲ್ವಿಚಾರಣೆಗಾಗಿ ವಾಡಿಕೆಯ ಕಾರ್ಯಾಚರಣೆಗಳಲ್ಲಿ ಸಂಯೋಜಿಸುವಂತೆ ಸಚಿವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒತ್ತಾಯಿಸಿದರು. ವಿಶೇಷವೆಂದರೆ, ಮಿಷನ್‌ ವಾತ್ಸಲ್ಯ ಅಡಿಯಲ್ಲಿ, ಮಿಷನ್‌ ವಾತ್ಸಲ್ಯ ಪೋರ್ಟಲ್‌ನಲ್ಲಿಇತ್ತೀಚೆಗೆ ಪ್ರಾರಂಭಿಸಲಾದ ತಾಂತ್ರಿಕ ತರಬೇತಿ ಕಾರ್ಯಕ್ರಮದ ಮೂಲಕ 303 ಮಾಸ್ಟರ್‌ ತರಬೇತುದಾರರಿಗೆ ತರಬೇತಿ ನೀಡಲಾಗಿದೆ, ಇದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ (ಎಸ್‌ಪಿಎನ್‌ಐಡಬ್ಲ್ಯೂಸಿಡಿ) ಸಹಯೋಗದೊಂದಿಗೆ ಈ ತರಬೇತಿಯನ್ನು ನಡೆಸಲಾಯಿತು.

ಲಿಂಗತ್ವ ಬಜೆಟ್‌ ವಿಷಯದ ಬಗ್ಗೆ ಮಾತನಾಡಿದ ಗೌರವಾನ್ವಿತ ಸಚಿವರು, 2025-26ರ ಕೇಂದ್ರ ಬಜೆಟ್‌ನಲ್ಲಿ49 ಸಚಿವಾಲಯಗಳು ಮತ್ತು 5 ಕೇಂದ್ರಾಡಳಿತ ಪ್ರದೇಶಗಳಿಂದ 273 ಯೋಜನೆಗಳಲ್ಲಿ4.49 ಲಕ್ಷ  ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ, ಇದು ಲಿಂಗ-ಅಂತರ್ಗತ ಆಡಳಿತಕ್ಕೆ ಸರ್ಕಾರದ ಬದ್ಧತೆಯನ್ನು ಮುನ್ನಡೆಸುತ್ತದೆ ಎಂದು ಹೇಳಿದರು. ಮಹಾರಾಷ್ಟ್ರ, ಕರ್ನಾಟಕ, ಅಸ್ಸಾಂ ಮತ್ತು ಕೇರಳದಲ್ಲಿಅನುಕರಣೀಯ ಡಿಜಿಟಲ್‌ ಮತ್ತು ಮೇಲ್ವಿಚಾರಣಾ ಉಪಕ್ರಮಗಳನ್ನು ಅವರು ಗುರುತಿಸಿದರು, ಸಮಾನಮನಸ್ಕ ಕಲಿಕೆ ಮತ್ತು ಹೊಂದಾಣಿಕೆಯನ್ನು ಪ್ರೋತ್ಸಾಹಿಸಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವೆ ಶ್ರೀಮತಿ ಸಾವಿತ್ರಿ ಠಾಕೂರ್‌, ಸರ್ಕಾರದ ಯೋಜನೆಗಳ ಯಶಸ್ಸು ಪರಿಣಾಮಕಾರಿ ತಳಮಟ್ಟದ ಅನುಷ್ಠಾನ ಮತ್ತು ಸಕ್ರಿಯ ಸಮುದಾಯ ಪಾಲ್ಗೊಳ್ಳುವಿಕೆಯ ಮೇಲೆ ಅವಲಂಬಿತವಾಗಿದೆ ಎಂದು ಒತ್ತಿ ಹೇಳಿದರು.

ಆತಿಥೇಯ ರಾಜ್ಯದಿಂದ, ಶ್ರೀಮತಿ ಭಾನುಬೆನ್‌ ಬಾಬರಿಯಾ ಅವರು ಮಹಿಳಾ ಮತ್ತು ಮಕ್ಕಳ ಕೇಂದ್ರಿತ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ಕೇಂದ್ರ ಮತ್ತು ಇತರ ರಾಜ್ಯಗಳೊಂದಿಗೆ ಅರ್ಥಪೂರ್ಣ ಸಹಯೋಗಕ್ಕೆ ರಾಜ್ಯದ ಬದ್ಧತೆಯನ್ನು ಪುನರುಚ್ಚರಿಸಿದರು.

ಸಚಿವಾಲಯದ ಮಿಷನ್‌ಗಳ ಕುರಿತಾದ ಕಿರುಚಿತ್ರಗಳು ಮತ್ತು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (ಪಿಎಂಆರ್‌ಬಿಪಿ) ಕುರಿತ ವಿಡಿಯೊವನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು, ಇದು ನಾಮನಿರ್ದೇಶನಗಳ ಕೊನೆಯ ದಿನಾಂಕವನ್ನು 2025 ರ ಜುಲೈ 31ರಂದು ಎಂದು ಬಿಂಬಿಸಿತು. ಇದು ಸಚಿವಾಲಯದ ಸಮಗ್ರ ಮತ್ತು ಮುಂದಾಲೋಚನೆಯ ವಿಧಾನವನ್ನು ಪ್ರದರ್ಶಿಸುತ್ತದೆ.

ಮಧ್ಯಪ್ರದೇಶದ ಅನುಭವಗಳನ್ನು ಹಂಚಿಕೊಂಡ ಶ್ರೀಮತಿ ನಿರ್ಮಲಾ ಭುರಿಯಾ ಅವರು, ಕೊನೆಯ ಮೈಲಿ ಸೇವಾ ವಿತರಣೆಗಾಗಿ ಸಮಗ್ರ ತಂತ್ರಜ್ಞಾನದ ಬಳಕೆಯನ್ನು ಬಿಂಬಿಸಿದರು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್‌ ವ್ಯಾಪ್ತಿಯನ್ನು ವಿಸ್ತರಿಸುವ ರಾಜ್ಯದ ಬದ್ಧತೆಯನ್ನು ಪುನರುಚ್ಚರಿಸಿದರು. ರಾಜಸ್ಥಾನದ ಡಾ.ಮಂಜು ಬಾಗ್ಮಾರ್‌ ಅವರು ಹದಿಹರೆಯದ ಬಾಲಕಿಯರು ಮತ್ತು ತಾಯಂದಿರಿಗೆ ಡಿಜಿಟಲ್‌ ಪೌಷ್ಠಿಕಾಂಶ ಶಿಕ್ಷ ಣದ ಪ್ರಯತ್ನಗಳನ್ನು ಹಂಚಿಕೊಂಡರು ಮತ್ತು ಚರ್ಚೆಯ ಸಮಯದಲ್ಲಿಚರ್ಚಿಸಿದ ಹೊಸ ಮಾದರಿಗಳನ್ನು ಅಳವಡಿಸಿಕೊಳ್ಳಲು ಸಿದ್ಧರಿರುವುದಾಗಿ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಅನಿಲ್‌ ಮಲಿಕ್‌ ಅವರು ನೈಜ-ಸಮಯದ ಡ್ಯಾಶ್‌ ಬೋರ್ಡ್‌ಗಳು ಮತ್ತು ನಾಗರಿಕರ ಪ್ರತಿಕ್ರಿಯೆ ವ್ಯವಸ್ಥೆಗಳ ಮೂಲಕ ಕಾರ್ಯಕ್ಷಮತೆಯ ಮೇಲ್ವಿಚಾರಣೆಯನ್ನು ಹೆಚ್ಚಿಸಲು ರಾಜ್ಯಗಳನ್ನು ಪ್ರೋತ್ಸಾಹಿಸಿದರು. ಫಲಿತಾಂಶ ಆಧಾರಿತ ಯೋಜನೆಯಲ್ಲಿದೃಢವಾದ ಆಡಳಿತಾತ್ಮಕ ದತ್ತಾಂಶ ಮತ್ತು ಲಿಂಗ ಬಜೆಟ್‌ ಪಾತ್ರವನ್ನು ಅವರು ಒತ್ತಿ ಹೇಳಿದರು.

ಸುಸ್ಥಿರ ಮತ್ತು ಅಂತರ್ಗತ ಅಭಿವೃದ್ಧಿಗೆ ಸಚಿವಾಲಯದ ಬದ್ಧತೆಗೆ ಅನುಗುಣವಾಗಿ, ಏಕ್‌ ಪೆಡ್‌ ಮಾ ಕೆ ನಾಮ್ ಉಪಕ್ರಮದ ಅಡಿಯಲ್ಲಿನೆಡುತೋಪು ಅಭಿಯಾನವನ್ನು ಕೈಗೊಳ್ಳಲಾಯಿತು. ಪ್ರತಿನಿಧಿಗಳು ಮಕ್ಕಳ ಪೌಷ್ಠಿಕಾಂಶ ಉದ್ಯಾನ ಮತ್ತು ಏಕತಾ ಪ್ರತಿಮೆಗೆ ಭೇಟಿ ನೀಡಿದರು ಮತ್ತು ನರ್ಮದಾ ಆರತಿ ಮತ್ತು ಬೆಳಕು ಮತ್ತು ಧ್ವನಿ ಪ್ರದರ್ಶನದಲ್ಲಿ ಭಾಗವಹಿಸಿದರು, ಕಾರ್ಯಕ್ರಮ ಅನುಷ್ಠಾನಕ್ಕೆ ಸಚಿವಾಲಯದ ಸಮಗ್ರ ಮತ್ತು ಸಾಂಸ್ಕೃತಿಕವಾಗಿ ಬೇರೂರಿರುವ ವಿಧಾನವನ್ನು ಪುನರುಚ್ಚರಿಸಿದರು.

ಅಂತರ್ಗತ ಬೆಳವಣಿಗೆ, ಡಿಜಿಟಲ್‌ ನಾವೀನ್ಯತೆ ಮತ್ತು ಮಹಿಳಾ ಸಬಲೀಕರಣ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಅಂತರ-ವಲಯ ಸಮನ್ವಯಕ್ಕೆ ಆದ್ಯತೆ ನೀಡುವ ವಿಕಸಿತ ಭಾರತ 2047ರ ಹಂಚಿಕೆಯ ರಾಷ್ಟ್ರೀಯ ದೃಷ್ಟಿಕೋನದ ಕಡೆಗೆ ಪ್ರಗತಿಯನ್ನು ವೇಗಗೊಳಿಸಲು ಭಾಗವಹಿಸುವವರಲ್ಲಿನವೀಕರಿಸಿದ ಸಂಕಲ್ಪದೊಂದಿಗೆ ವಲಯ ಸಭೆ ಮುಕ್ತಾಯಗೊಂಡಿತು.

 

*****
 


(Release ID: 2144322)