ಉಕ್ಕು ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಮೋದಿ ಅವರ ದೂರದೃಷ್ಟಿಯ ಆಡಳಿತದಲ್ಲಿ ʻಎಂ ಎಸ್‌ ಟಿ ಸಿʼಯ ಡಿಜಿಟಲ್ ದಾಪುಗಾಲಿಗೆ ಶಕ್ತಿ ನೀಡುತ್ತದೆ, ನವದೆಹಲಿಯಲ್ಲಿ ಅತ್ಯಾಧುನಿಕ ಕಚೇರಿಯೊಂದಿಗೆ ಹೊಸ ಯುಗಕ್ಕೆ ʻಎಂ ಎಸ್‌ ಟಿ ಸಿʼ ಕಾಲಿಟ್ಟಿದೆ


"ತಂತ್ರಜ್ಞಾನ ಚಾಲಿತ ಸಾರ್ವಜನಿಕ ಸೇವೆಗೆ ಮಾದರಿ": ಹೆಚ್. ಡಿ. ಕುಮಾರಸ್ವಾಮಿ

ಪ್ರಧಾನಮಂತ್ರಿ ಮೋದಿ ಅವರ ನಾಯಕತ್ವದಲ್ಲಿ ʻಎಂ ಎಸ್‌ ಟಿ ಸಿʼಯು ಇ-ಪಾರದರ್ಶಕತೆಯ ಎಂಜಿನ್ ಆಗಿ ಮಾರ್ಪಟ್ಟಿದೆ

ʻಎಂ ಎಸ್‌ ಟಿ ಸಿʼಯ ದೆಹಲಿಗೆ ತಲುಪಿರುವುದು ಮೋದಿ ಸರ್ಕಾರದ ಸುಧಾರಣಾ ಕಾರ್ಯಸೂಚಿಗೆ ಕಾರ್ಯತಂತ್ರದ ಉತ್ತೇಜನವನ್ನು ಸೂಚಿಸುತ್ತದೆ

Posted On: 09 JUL 2025 4:30PM by PIB Bengaluru

WhatsApp Image 2025-07-09 at 13.54.02.jpeg

ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು ನವದೆಹಲಿಯ ನರೋಜಿನಗರದಲ್ಲಿರುವ ʻವಿಶ್ವ ವ್ಯಾಪಾರ ಕೇಂದ್ರʼದಲ್ಲಿ ʻಎಂ ಎಸ್‌ ಟಿ ಸಿʼಲಿಮಿಟೆಡ್ ನ ಹೊಸ ಕಾರ್ಪೊರೇಟ್ ಕಚೇರಿಯನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮವು ʻಎಂ ಎಸ್‌ ಟಿ ಸಿʼಯ ಡಿಜಿಟಲ್ ಸೇವಾ ಕೊಡುಗೆಗಳಲ್ಲಿ ಪ್ರಮುಖ ಹೆಜ್ಜೆಯಾದ ʻಉಪಕರಣ್ ಇ-ಪೋರ್ಟಲ್ʼನ ಅಧಿಕೃತ ಉದ್ಘಾಟನೆಯನ್ನು ಸೂಚಿಸುತ್ತದೆ.

ʻಎಂ ಎಸ್‌ ಟಿ ಸಿʼಯ ಡಿಜಿಟಲ್ ವಿಕಾಸ: ಸ್ಕ್ರ್ಯಾಪ್ ವಹಿವಾಟಿನಿಂದ ರಾಷ್ಟ್ರೀಯ ಕಾರ್ಯಸಾಧ್ಯತೆವರೆಗೆ-

1964ರಲ್ಲಿ ಸ್ಕ್ರ್ಯಾಪ್ ವಹಿವಾಟು ಏಜೆನ್ಸಿಯಾಗಿ ಸ್ಥಾಪನೆಯಾದ ʻಎಂ ಎಸ್‌ ಟಿ ಸಿʼ, ಮಿನಿ ರತ್ನ ಸಿಪಿಎಸ್ಇ ಮತ್ತು ದೇಶದ ಅತ್ಯಂತ ವಿಶ್ವಾಸಾರ್ಹ ಡಿಜಿಟಲ್ ಹರಾಜು ವೇದಿಕೆಗಳಲ್ಲಿ ಒಂದಾಗಿದೆ. ʻಐಎಸ್ಒʼ-ಪ್ರಮಾಣೀಕೃತ ಮೂಲಸೌಕರ್ಯ ಮತ್ತು 4 ಲಕ್ಷಕ್ಕೂ ಹೆಚ್ಚು ಹರಾಜುಗಳು ಪೂರ್ಣಗೊಂಡ ನಂತರ, ʻ ʻಎಂ ಎಸ್‌ ಟಿ ಸಿʼ ಸಾರ್ವಜನಿಕ ಆಸ್ತಿ ನಗದೀಕರಣ, ಸ್ಪೆಕ್ಟ್ರಮ್ ಮಾರಾಟ ಮತ್ತು ಕಲ್ಲಿದ್ದಲು ನಿಕ್ಷೇಪ ಹರಾಜಿನಲ್ಲಿ ಪ್ರಮುಖ ಸಂಸ್ಥೆಯಾಗಿ ಹೊರಹೊಮ್ಮಿದೆ.

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವವು ಸಾರ್ವಜನಿಕ ಸೇವಾ ವಿತರಣೆಯಲ್ಲಿ ತಂತ್ರಜ್ಞಾನ, ಪಾರದರ್ಶಕತೆ ಮತ್ತು ದಕ್ಷತೆಗೆ ಒತ್ತು ನೀಡುತ್ತದೆ. ಈ ನಿಟ್ಟಿನಲ್ಲಿ ʻಎಂ ಎಸ್‌ ಟಿ ಸಿʼಯ ರೂಪಾಂತರವು ಸಹ ಪ್ರಧಾನಮಂತ್ರಿ ಅವರ ವಿಶಾಲ ದೃಷ್ಟಿಕೋನಕ್ಕೆ ಅನುಗುಣವಾಗಿದೆ. ಪ್ರಧಾನಿಯವರ ಡಿಜಿಟಲ್ ಕಾರ್ಯಸಾಧ್ಯತೆಗೆ ಅನುವು ಅನುವು ಮಾಡಿಕೊಡುವ ʻಎಂ ಎಸ್‌ ಟಿ ಸಿʼಯ ಪಾತ್ರವು ವಿವಿಧ ಕ್ಷೇತ್ರಗಳಾದ್ಯಂತ ಉತ್ತರದಾಯಿತ್ವ ಮತ್ತು ಒಳಗೊಳ್ಳುವಿಕೆಯನ್ನು ನೀಡುವ ಈ ಆಡಳಿತ ಮಾದರಿಯನ್ನು ಪ್ರತಿಬಿಂಬಿಸುತ್ತದೆ.

WhatsApp Image 2025-07-09 at 13.54.01.jpeg

ಡಿಜಿಟಲ್ ಲೀಪ್: ಸರ್ಕಾರಿ ದಾಸ್ತಾನು ನಿರ್ವಹಣೆಯನ್ನು ಆಧುನೀಕರಿಸಲು ಉಪಕರಣ್ ಇ-ಪೋರ್ಟಲ್ ಪ್ರಾರಂಭ- 

ಹೊಸದಾಗಿ ಪ್ರಾರಂಭಿಸಲಾದ ʻಉಪಕರಣ್ ಇ-ಪೋರ್ಟಲ್ʼ ವೇದಿಕೆಯು ಡಿಜಿಟಲ್ ಮಾರುಕಟ್ಟೆಯಾಗಿದ್ದು, ಇದು ಉದ್ಯಮ ಮತ್ತು ನಾವೀನ್ಯತೆಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ʻಎಂಎಸ್ಎಂಇʼಗಳನ್ನು ಬೆಂಬಲಿಸುತ್ತದೆ ಮತ್ತು ಪ್ರಮುಖ ಕ್ಷೇತ್ರಗಳಲ್ಲಿ ಪಾರದರ್ಶಕ, ಪರಿಣಾಮಕಾರಿ ವ್ಯಾಪಾರವನ್ನು ಉತ್ತೇಜಿಸುತ್ತದೆ. ಡಿಜಿಟಲ್ ಮೂಲಸೌಕರ್ಯದ ಪ್ರಮುಖ ಭಾಗವಾಗಿ, ʻಉಪಕರಣ್ʼ ಪರಿಸರ ವ್ಯವಸ್ಥೆಯಾದ್ಯಂತ ವಿಶ್ವಾಸ, ಸ್ಪರ್ಧಾತ್ಮಕತೆ ಮತ್ತು ರಾಷ್ಟ್ರಾದ್ಯಂತ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ. 

ಉಪಕರಣಗಳು, ಯಂತ್ರೋಪಕರಣಗಳ ದಾಸ್ತಾನು ನಿರ್ವಹಣೆ ಮತ್ತು ಯಂತ್ರೋಪಕರಣಗಳ ಖರೀದಿಗೆ ಸಮಗ್ರ ವೇದಿಕೆಯಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು ವಿವಿಧ ಸರ್ಕಾರಿ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು ಮತ್ತು ಸಂಸ್ಥೆಗಳಿಗೆ ನಿಷ್ಕ್ರಿಯ ಅಥವಾ ಹೆಚ್ಚುವರಿ ಸ್ವತ್ತುಗಳನ್ನು ತಡೆರಹಿತ ಮತ್ತು ಪಾರದರ್ಶಕ ರೀತಿಯಲ್ಲಿ ಪಟ್ಟಿ ಮಾಡಲು, ವರ್ಗಾಯಿಸಲು ಅಥವಾ ವಿಲೇವಾರಿ ಮಾಡಲು ಅನುವು ಮಾಡಿಕೊಡುತ್ತದೆ. ಈ ಉಪಕ್ರಮವು ಸಾರ್ವಜನಿಕ ಸಂಸ್ಥೆಗಳಲ್ಲಿ ಸಂಪನ್ಮೂಲ ಬಳಕೆಯನ್ನು ಉತ್ತಮಗೊಳಿಸುವುದಲ್ಲದೆ, ಸರ್ಕಾರಿ ಕಾರ್ಯಾಚರಣೆಗಳಲ್ಲಿ ವೆಚ್ಚ-ದಕ್ಷತೆ ಮತ್ತು ಸುಸ್ಥಿರತೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ.

ನೀತಿಯೊಂದಿಗೆ ಏಕೀಕರಣಕ್ಕಾಗಿ ದೆಹಲಿಗೆ ಕಾರ್ಯತಂತ್ರದ ಸ್ಥಳಾಂತರ-

ದೆಹಲಿಯ ನೀತಿ ಕೇಂದ್ರದಲ್ಲಿ ಹೊಸ ಕಚೇರಿ ಸ್ಥಾಪನೆಯಿಂದ ಅಂತರ ಸಚಿವಾಲಯದ ಸಮನ್ವಯ ಮತ್ತು ರಾಷ್ಟ್ರೀಯ ಮಧ್ಯಸ್ಥಗಾರರಿಗೆ ನಿಕಟ ಪ್ರವೇಶಕ್ಕೆ ʻಎಂ ಎಸ್‌ ಟಿ ಸಿʼಗೆ ಅವಕಾಶವಾಗಲಿದೆ. ಈ ಕಾರ್ಯತಂತ್ರದ ಸಾಮೀಪ್ಯವು ದೇಶಾದ್ಯಂತ ಸಂಪನ್ಮೂಲ ನಿರ್ವಹಣೆ ಮತ್ತು ಸಂಗ್ರಹಣೆಯ ವೇದಿಕೆಗಳಲ್ಲಿ ಇದರ ಭಾಗವಹಿಸುವಿಕೆಯನ್ನು ಬಲಪಡಿಸುವ ನಿರೀಕ್ಷೆಯಿದೆ.

ʻವಿಕಸಿತ ಭಾರತ 2047ʼರ ಭಾರತದ ದೃಷ್ಟಿಕೋನವನ್ನು ಮುನ್ನಡೆಸುವುದು-

WhatsApp Image 2025-07-09 at 13.54.00.jpeg

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕುಮಾರಸ್ವಾಮಿ ಅವರು, ತಂತ್ರಜ್ಞಾನ ಚಾಲಿತ ಸಾರ್ವಜನಿಕ ಸೇವೆಗೆ ಮಾದರಿಯಾಗಿ ಕಾರ್ಯನಿರ್ವಹಿಸುವ ʻಎಂ ಎಸ್‌ ಟಿ ಸಿʼಯ ಸಾಮರ್ಥ್ಯವನ್ನು ಎತ್ತಿ ತೋರಿದರು. "ಎಂಎಸ್ಟಿಸಿ ಕೇವಲ ಸಾಂಸ್ಥಿಕ ಆಸ್ತಿಗಿಂತ ಹೆಚ್ಚಿನದ್ದು. ಇದು ತಂತ್ರಜ್ಞಾನ ಮತ್ತು ಆಡಳಿತವು ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಹೇಗೆ ಒಗ್ಗೂಡಬಹುದು ಎಂಬುದರ ಸಂಕೇತವಾಗಿದೆ. ಭಾರತದ ಅಭಿವೃದ್ಧಿಯ ಪಯಣದಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದರಿಂದ ʻಎಂ ಎಸ್‌ ಟಿ ಸಿʼಯನ್ನು ಬೆಂಬಲಿಸಲು ಉಕ್ಕು ಸಚಿವಾಲಯ ಬದ್ಧವಾಗಿದೆ" ಎಂದು ಅವರು ಹೇಳಿದರು.

ಭಾರತವು ಜಾಗತಿಕ ಆರ್ಥಿಕ ಶಕ್ತಿಕೇಂದ್ರವಾಗುವ ಗುರಿಯತ್ತ ಸಾಗುತ್ತಿರುವ ಸಮಯದಲ್ಲಿ, ಪಾರದರ್ಶಕ, ದಕ್ಷ ಮತ್ತು ಸುರಕ್ಷಿತ ಆರ್ಥಿಕ ವಿನಿಮಯವನ್ನು ಸುಗಮಗೊಳಿಸುವಲ್ಲಿ ʻಎಂ ಎಸ್‌ ಟಿ ಸಿʼಯ ಪಾತ್ರವು ಪ್ರಮುಖವಾಗಿರುತ್ತದೆ.

 

*****
 


(Release ID: 2143558)
Read this release in: English , Urdu , Hindi