ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
azadi ka amrit mahotsav

ಗೃಹಬಳಕೆ ವೆಚ್ಚ ಸಮೀಕ್ಷೆ: 2022-23 ಮತ್ತು 2023-24


ಭಾರತದಲ್ಲಿ ಪೌಷ್ಟಿಕಾಂಶ ಸೇವನೆ

Posted On: 02 JUL 2025 4:54PM by PIB Bengaluru

ಪರಿಚಯ

ಆಗಸ್ಟ್ 2022 - ಜುಲೈ 2023 ಮತ್ತು ಆಗಸ್ಟ್ 2023 - ಜುಲೈ 2024ರ ಅವಧಿಯಲ್ಲಿ ನಡೆಸಿದ ಸತತ ಗೃಹಬಳಕೆಯ ಬಳಕೆ ವೆಚ್ಚ ಸಮೀಕ್ಷೆಗಳು (HCES) ನಿರ್ದಿಷ್ಟ ಉಲ್ಲೇಖ ಅವಧಿಗಳಲ್ಲಿ ಕುಟುಂಬ ಸದಸ್ಯರ ಆಹಾರ ಪದಾರ್ಥಗಳ ಸೇವನೆಯ ಮಾಹಿತಿಯನ್ನು ಸಂಗ್ರಹಿಸಿವೆ. ಆಹಾರ ಸೇವನೆಯ ದತ್ತಾಂಶ ಮತ್ತು ವಿವಿಧ ಆಹಾರ ಪದಾರ್ಥಗಳ ಪೌಷ್ಟಿಕಾಂಶದ ಮೌಲ್ಯಗಳನ್ನು ಆಧರಿಸಿ, ರಾಜ್ಯ, ವಲಯ, ಮಾಸಿಕ ತಲಾವಾರು ಬಳಕೆಯ ವೆಚ್ಚದ ಫ್ರಾಕ್ಟೈಲ್ ವರ್ಗ (ಎಂಪಿಸಿಇ) ಮುಂತಾದ ವಿವಿಧ ಹಂತಗಳಲ್ಲಿ ತಲಾವಾರು ಮತ್ತು ಗ್ರಾಹಕವಾರು ಕ್ಯಾಲೊರಿ, ಪ್ರೋಟೀನ್ ಮತ್ತು ಕೊಬ್ಬಿನ ದೈನಂದಿನ ಸೇವನೆಯ ಅಂದಾಜುಗಳನ್ನು ಸಿದ್ಧಪಡಿಸಲಾಗಿದೆ. ಇವುಗಳನ್ನು ಒಟ್ಟುಗೂಡಿಸಿ 'ಭಾರತದಲ್ಲಿ ಪೌಷ್ಟಿಕಾಂಶ ಸೇವನೆ' ಎಂಬ ಶೀರ್ಷಿಕೆಯ ವರದಿಯಲ್ಲಿ ಪ್ರಕಟಿಸಲಾಗಿದೆ.‌

ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್‌ ಎಸ್‌ ಒ) ಭಾರತದ ಜನರ ಪೌಷ್ಟಿಕಾಂಶ ಸೇವನೆಯ ಕುರಿತು ವಿವರವಾದ ಮಾಹಿತಿಯನ್ನು ನೀಡುವ ವರದಿಗಳನ್ನು ಪ್ರಕಟಿಸುವ ಸಂಪ್ರದಾಯವನ್ನು ಹೊಂದಿದೆ, ಇದರಲ್ಲಿ ತಲಾವಾರು ಶಕ್ತಿ (ಕ್ಯಾಲೋರಿ), ಪ್ರೋಟೀನ್ ಮತ್ತು ಕೊಬ್ಬಿನ ಸೇವನೆ ಮತ್ತು ಕುಟುಂಬಗಳು ಮತ್ತು ವ್ಯಕ್ತಿಗಳಲ್ಲಿ ಅದರ ವಿತರಣೆಯ ಅಂದಾಜುಗಳಿವೆ. ಇಲ್ಲಿಯವರೆಗೆ, ಎನ್‌ ಎಸ್‌ ಎಸ್ 50 ನೇ ಸುತ್ತಿನ (1993-94), 55 ನೇ ಸುತ್ತಿನ (1999-2000), 61 ನೇ ಸುತ್ತಿನ (2004-05), 66 ನೇ ಸುತ್ತಿನ (2009-10) ಮತ್ತು 68 ನೇ ಸುತ್ತಿನ (2011-12) ಗ್ರಾಹಕ ವೆಚ್ಚ ಸಮೀಕ್ಷೆಗಳ ಆಧಾರದ ಮೇಲೆ ಐದು ವರದಿಗಳನ್ನು ಪ್ರಕಟಿಸಲಾಗಿದೆ. ಈ ಸಂಪ್ರದಾಯವನ್ನು ಮುಂದುವರೆಸುತ್ತಾ ಮತ್ತು ನೀತಿ ನಿರೂಪಕರು, ಸಂಶೋಧಕರು, ವಿಶ್ಲೇಷಕರು ಇತ್ಯಾದಿಗಳಿಗೆ ಜನಸಂಖ್ಯೆಯ ವಿವಿಧ ವರ್ಗಗಳ ಪೌಷ್ಟಿಕಾಂಶ ಸೇವನೆಯ ಕುರಿತು ನಿರ್ಣಾಯಕ ಮಾಹಿತಿಯ ಅಗತ್ಯವನ್ನು ಪೂರೈಸಲು ಈ ವರದಿಯನ್ನು ಪ್ರಕಟಿಸಲಾಗುತ್ತಿದೆ.

ಪ್ರಮುಖ ಸಂಶೋಧನೆಗಳು:

  • 2022-23 ಮತ್ತು 2023-24ರಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸರಾಸರಿ ತಲಾವಾರು ಕ್ಯಾಲೋರಿ ಸೇವನೆ ಮತ್ತು ಗ್ರಾಹಕವಾರು ಯೂನಿಟ್ ಕ್ಯಾಲೋರಿ ಸೇವನೆಯಲ್ಲಿ ಒಂದೇ ರೀತಿಯ ಮಾದರಿಯನ್ನು ಗಮನಿಸಲಾಗಿದೆ.
  • 2022-23 ಮತ್ತು 2023-24ರಲ್ಲಿ ಗ್ರಾಮೀಣ ಭಾರತದಲ್ಲಿ ಸರಾಸರಿ ತಲಾವಾರು ಕ್ಯಾಲೋರಿ ಸೇವನೆಯು ಕ್ರಮವಾಗಿ 2233 Kcal ಮತ್ತು 2212 Kcal ಆಗಿದ್ದರೆ, ನಗರ ಭಾರತದಲ್ಲಿ ಎರಡು ವರ್ಷಗಳ ಅಂಕಿಅಂಶಗಳು ಕ್ರಮವಾಗಿ 2250 Kcal ಮತ್ತು 2240 Kcal ಆಗಿದ್ದವು.
  • 2022-23 ರಿಂದ 2023-24 ರಲ್ಲಿ ಗ್ರಾಮೀಣ ಭಾರತದಲ್ಲಿ ಕೆಳಗಿನ ಐದು ಫ್ರ್ಯಾಕ್ಟೈಲ್ ವರ್ಗಗಳಿಗೆ ಮತ್ತು ನಗರ ಪ್ರದೇಶಗಳಲ್ಲಿ ತಳಮಟ್ಟದ ಆರು ಫ್ರ್ಯಾಕ್ಟೈಲ್ ವರ್ಗಗಳಿಗೆ ದೈನಂದಿನ ಸರಾಸರಿ ತಲಾವಾರು ಮತ್ತು ಗ್ರಾಹಕವಾರು ಯೂನಿಟ್ ಕ್ಯಾಲೋರಿ ಸೇವನೆಯಲ್ಲಿ ಹೆಚ್ಚಳ ಕಂಡುಬಂದಿದೆ.
  • 2022-23 ಮತ್ತು 2023-24 ರಲ್ಲಿ ಪ್ರಮುಖ ರಾಜ್ಯಗಳಲ್ಲಿ ಸರಾಸರಿ ತಲಾವಾರು ಕ್ಯಾಲೋರಿ ಸೇವನೆ ಮತ್ತು ಗ್ರಾಹಕವಾರು ಯೂನಿಟ್ ಕ್ಯಾಲೋರಿ ಸೇವನೆಯಲ್ಲಿ ವ್ಯಾಪಕ ವ್ಯತ್ಯಾಸ ಕಂಡುಬಂದಿದೆ.
  • ಮಾಸಿಕ ತಲಾ ಬಳಕೆ ವೆಚ್ಚ (ಎಂಪಿಸಿಇ) ಹೆಚ್ಚಳದೊಂದಿಗೆ, ಗ್ರಾಮೀಣ ಮತ್ತು ನಗರ ಭಾರತದಲ್ಲಿ ಸರಾಸರಿ ಕ್ಯಾಲೋರಿ ಸೇವನೆಯೂ ಹೆಚ್ಚಾಗುತ್ತದೆ.
  1. ಸರಾಸರಿ ಪೋಷಕಾಂಶ ಸೇವನೆ

2022-23 ಮತ್ತು 2023-24ರ ಎರಡೂ ಅವಧಿಗಳಲ್ಲಿ ಅಖಿಲ ಭಾರತ ಮಟ್ಟದಲ್ಲಿ ಸರಾಸರಿ ತಲಾವಾರು ದೈನಂದಿನ ಕ್ಯಾಲೋರಿ ಸೇವನೆ ಮತ್ತು ಗ್ರಾಹಕವಾರು ಯೂನಿಟ್ ದೈನಂದಿನ ಕ್ಯಾಲೋರಿ ಸೇವನೆಯನ್ನು ಕೋಷ್ಟಕ 1 ರಲ್ಲಿ ಕೆಳಗೆ ನೀಡಲಾಗಿದೆ:

ಸೇವನೆ

ದೈನಂದಿನ ತಲಾವಾರು

ದೈನಂದಿನ ಗ್ರಾಹಕವಾರು ಯೂನಿಟ್*

 

2022-23

2023-24

2022-23

2023-24

 

ಗ್ರಾಮೀಣ

 

ನಗರ

ಗ್ರಾಮೀಣ

 

ನಗರ

ಗ್ರಾಮೀಣ

 

ನಗರ

ಗ್ರಾಮೀಣ

 

ನಗರ

ಕ್ಯಾಲೋರಿ (Kcal)

2233

2250

2212

2240

2407

2488

2383

2472

ಪ್ರೋಟೀನ್ (ಗ್ರಾಂ)

61.9

63.2

61.8

63.4

66.7

69.9

66.6

69.9

ಕೊಬ್ಬು (ಗ್ರಾಂ)

59.7

70.5

60.4

69.8

64.4

78.0

65.1

77.0

                     

*ಗ್ರಾಹಕ ಯೂನಿಟ್‌ ವಿವಿಧ ವಲಯಗಳು, ಲಿಂಗ ಮತ್ತು ವಯೋಮಾನದ ವ್ಯಕ್ತಿಗಳ ಗುಂಪಿನ ಕ್ಯಾಲೋರಿ ಅಗತ್ಯವನ್ನು ಅಳೆಯಲು ಬಳಸುವ ಒಂದು ಘಟಕವಾಗಿದೆ.

ಎರಡೂ ಅವಧಿಗಳಲ್ಲಿ ಗ್ರಾಮೀಣ ಮತ್ತು ನಗರ ಭಾರತದಲ್ಲಿ ದೈನಂದಿನ ತಲಾ ಮತ್ತು ಗ್ರಾಹಕ ಯೂನಿಟ್‌ ಕ್ಯಾಲೋರಿಗಳು, ಪ್ರೋಟೀನ್ ಮತ್ತು ಕೊಬ್ಬಿನ ಸೇವನೆಯಲ್ಲಿ ಹೆಚ್ಚು ಕಡಿಮೆ ಒಂದೇ ರೀತಿಯ ಮಾದರಿಯನ್ನು ಗಮನಿಸಲಾಗಿದೆ.

  1. ಆರೋಗ್ಯದ ಮಟ್ಟದೊಂದಿಗೆ ಕ್ಯಾಲೋರಿ ಸೇವನೆಯಲ್ಲಿನ ಬದಲಾವಣೆ

ಅಖಿಲ ಭಾರತ ಮಟ್ಟದಲ್ಲಿ ಎಂಪಿಸಿಇಯಿಂದ ಜನಸಂಖ್ಯಾ ವಿತರಣೆಯ ವಿವಿಧ ಫ್ರ್ಯಾಕ್ಟೈಲ್ ವರ್ಗಗಳಲ್ಲಿ (ಗ್ರಾಮೀಣ ಮತ್ತು ನಗರ ವಲಯಗಳಿಗೆ ಪ್ರತ್ಯೇಕವಾಗಿ ರಚಿಸಲಾಗಿದೆ) ಸರಾಸರಿ ಕ್ಯಾಲೋರಿ ಸೇವನೆಯನ್ನು ಕೋಷ್ಟಕ 2 ರಲ್ಲಿ ತೋರಿಸಲಾಗಿದೆ. ಪ್ರತಿಯೊಂದು ವಲಯದಲ್ಲಿ, ಎಂಪಿಸಿಇ ಹೆಚ್ಚಳದೊಂದಿಗೆ ಸರಾಸರಿ ಕ್ಯಾಲೋರಿ ಸೇವನೆಯು (ತಲಾವಾರು ಅಥವಾ ಗ್ರಾಹಕವಾರು ಯೂನಿಟ್) ಸುಧಾರಿಸುತ್ತಿದೆ ಎಂದು ಕಂಡುಬರುತ್ತದೆ.

ತಲಾ ಕ್ಯಾಲೋರಿ ಸೇವನೆ ಮತ್ತು ಗ್ರಾಹಕ ಯೂನಿಟ್ ಕ್ಯಾಲೋರಿ ಸೇವನೆಯಲ್ಲಿ ತಳಮಟ್ಟದ ಫ್ರ್ಯಾಕ್ಟೈಲ್ ವರ್ಗ (ತಲಾ ವೆಚ್ಚದ ಮಟ್ಟದಿಂದ ಶ್ರೇಣೀಕರಿಸಲ್ಪಟ್ಟ ಜನಸಂಖ್ಯೆಯ ತಳಮಟ್ಟದ ಶೇ.5) ಮತ್ತು ಅಗ್ರ ಫ್ರ್ಯಾಕ್ಟೈಲ್ ವರ್ಗ (ತಲಾ ವೆಚ್ಚದ ಮಟ್ಟದಿಂದ ಶ್ರೇಣೀಕರಿಸಲ್ಪಟ್ಟ ಜನಸಂಖ್ಯೆಯ ಮೇಲ್ಟ್ಟಟದ ಶೇ.5) ನಡುವಿನ ವ್ಯತ್ಯಾಸವು 2023-24 ರಲ್ಲಿ ಗ್ರಾಮೀಣ ಮತ್ತು ನಗರ ಭಾರತದಲ್ಲಿ ಗಮನಾರ್ಹವಾಗಿ ಕಡಿಮೆಯಾಗಿದೆ.

ಕೋಷ್ಟಕ 2: 2022-23 ಮತ್ತು 2023-24 ರಲ್ಲಿ ಎಂಪಿಸಿಇಯ ಫ್ರ್ಯಾಕ್ಟೈಲ್ ವರ್ಗಗಳ ಮೂಲಕ ತಲಾ ಮತ್ತು ಗ್ರಾಹಕ ಯೂನಿಟ್‌ ಸರಾಸರಿ ಕ್ಯಾಲೋರಿ ಸೇವನೆ: ಅಖಿಲ ಭಾರತ

ಎಂಪಿಸಿಇ ಫ್ರ್ಯಾಕ್ಟೈಲ್ ವರ್ಗಗಳು

ದೈನಂದಿನ ತಲಾವಾರು ಕ್ಯಾಲೋರಿ (Kcal) ಸೇವನೆ

ದೈನಂದಿನ ಗ್ರಾಹಕವಾರು ಯೂನಿಟ್* ಕ್ಯಾಲೋರಿ (Kcal) ಸೇವನೆ

 

2022-23

2023-24

2022-23

2023-24

 

ಗ್ರಾಮೀಣ

 

ನಗರ

ಗ್ರಾಮೀಣ

 

ನಗರ

ಗ್ರಾಮೀಣ

 

ನಗರ

ಗ್ರಾಮೀಣ

 

ನಗರ

(1)

(2)

(3)

(4)

(5)

(6)

(7)

(8)

(9)

0-5%

1607

1623

1688

1696

1796

1853

1893

1924

5-10%

1782

1772

1834

1837

1967

1999

2030

2075

10-20%

1896

1885

1924

1946

2083

2116

2113

2176

20-30%

2012

1981

2023

2033

2196

2214

2206

2262

30-40%

2093

2054

2096

2091

2270

2279

2275

2319

40-50%

2169

2148

2163

2159

2344

2379

2336

2389

50-60%

2243

2226

2227

2221

2415

2456

2394

2448

60-70%

2332

2316

2289

2306

2497

2549

2442

2536

70-80%

2425

2420

2370

2402

2580

2649

2518

2634

80-90%

2551

2620

2483

2560

2700

2853

2625

2789

90-95%

2716

2827

2619

2744

2851

3073

2755

2958

95-100%

3116

3478

2941

3092

3248

3723

3069

3292

ಅಖಿಲ ಭಾರತ

2233

2250

2212

2240

2407

2488

2383

2472

                     

*ಗ್ರಾಹಕ ಯೂನಿಟ್ ವಿವಿಧ ವಲಯಗಳು, ಲಿಂಗ ಮತ್ತು ವಯೋಮಾನದ ವ್ಯಕ್ತಿಗಳ ಗುಂಪಿನ ಕ್ಯಾಲೋರಿ ಅಗತ್ಯವನ್ನು ಅಳೆಯಲು ಬಳಸುವ ಒಂದು ಘಟಕವಾಗಿದೆ.

III. ಸರಾಸರಿ ಪೌಷ್ಟಿಕ ಸೇವನೆಯಲ್ಲಿ ಪ್ರವೃತ್ತಿ

2009-10 ರಿಂದ 2023-24 ರವರೆಗೆ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಪ್ರತ್ಯೇಕವಾಗಿ ಅಖಿಲ ಭಾರತ ಮಟ್ಟದಲ್ಲಿ ಸರಾಸರಿ ತಲಾ ದೈನಂದಿನ ಕ್ಯಾಲೋರಿ ಮತ್ತು ಪ್ರೋಟೀನ್ ಸೇವನೆಯ ಅಂದಾಜನ್ನು ಚಿತ್ರ 1 ಮತ್ತು 2 ರಲ್ಲಿ ತೋರಿಸಲಾಗಿದೆ. 2009-10 ರಿಂದ 2023-24 ರ ಅವಧಿಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅಖಿಲ ಭಾರತ ಮಟ್ಟದಲ್ಲಿ ತಲಾ ದೈನಂದಿನ ಕ್ಯಾಲೋರಿ ಸೇವನೆಯಲ್ಲಿ ಸ್ವಲ್ಪ ಹೆಚ್ಚಳ ಕಂಡುಬಂದಿದೆ. 2009-10 ರಿಂದ ಗ್ರಾಮೀಣ ಮತ್ತು ನಗರ ಭಾರತದಲ್ಲಿ ತಲಾ ದೈನಂದಿನ ಪ್ರೋಟೀನ್ ಸೇವನೆಯಲ್ಲಿ ಇದೇ ರೀತಿಯ ಹೆಚ್ಚುತ್ತಿರುವ ಪ್ರವೃತ್ತಿ ಕಂಡುಬಂದಿದೆ.

IV. ಆಹಾರ ವರ್ಗದಿಂದ ಪ್ರೋಟೀನ್ ಸೇವನೆಯ ಶೇಕಡಾವಾರು ವಿವರ: ಅಖಿಲ ಭಾರತ

ಅಖಿಲ ಭಾರತ ಮಟ್ಟದಲ್ಲಿ 5 ಆಹಾರ ಗುಂಪುಗಳಲ್ಲಿ ಪ್ರೋಟೀನ್ ಸೇವನೆಯ ಶೇಕಡಾವಾರು ವಿವರವನ್ನು ಗ್ರಾಮೀಣ ಮತ್ತು ನಗರ ವಲಯಗಳಿಗೆ ಕ್ರಮವಾಗಿ 2022-23 ರ ಅವಧಿಗೆ ಚಿತ್ರ 4R ಮತ್ತು 4U ಮತ್ತು 2023-24 ರ ಚಿತ್ರ 5R ಮತ್ತು 5U ನಲ್ಲಿ ಪ್ರಸ್ತುತಪಡಿಸಲಾಗಿದೆ. 5 ಆಹಾರ ಗುಂಪುಗಳಲ್ಲಿ ಧಾನ್ಯಗಳು ಪ್ರೋಟೀನ್‌ ನ ಪ್ರಮುಖ ಮೂಲವಾಗಿ ಮುಂದುವರೆದಿದ್ದು, ಎರಡೂ ಅವಧಿಗಳಲ್ಲಿ ಗ್ರಾಮೀಣ ಭಾರತದಲ್ಲಿ ಸುಮಾರು ಶೇ.46-47 ಮತ್ತು ನಗರ ಭಾರತದಲ್ಲಿ ಸುಮಾರು ಶೇ.39 ಪಾಲನ್ನು ಹೊಂದಿವೆ.

 

 

V. ಆಹಾರದ ಪ್ರಕಾರ ಪ್ರೋಟೀನ್ ಸೇವನೆಯ ಪ್ರವೃತ್ತಿಗಳು: ಅಖಿಲ ಭಾರತ

2009-10 ರಿಂದ 2023-24 ರ ಅವಧಿಯಲ್ಲಿ ಒಟ್ಟಾರೆಯಾಗಿ ಭಾರತದಲ್ಲಿ ಆಹಾರ ಗುಂಪುಗಳಿಂದ ಪ್ರೋಟೀನ್ ಸೇವನೆಯ ಶೇಕಡಾವಾರು ವಿವರಗಳ ಅಂಕಿಅಂಶಗಳನ್ನು 6R & 6U ಚಿತ್ರಗಳು ತೋರಿಸುತ್ತವೆ.

2009-10ರ ಮಟ್ಟಕ್ಕೆ ಹೋಲಿಸಿದರೆ, ಗ್ರಾಮೀಣ ಭಾರತದಲ್ಲಿ ಪ್ರೋಟೀನ್ ಸೇವನೆಯಲ್ಲಿ ಧಾನ್ಯಗಳ ಕೊಡುಗೆ ಸುಮಾರು ಶೇ.14 ರಷ್ಟು ಮತ್ತು ನಗರ ಭಾರತದಲ್ಲಿ ಸುಮಾರು ಶೇ.12 ರಷ್ಟು ಕಡಿಮೆಯಾಗಿದೆ. ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮೊಟ್ಟೆ, ಮೀನು ಮತ್ತು ಮಾಂಸ, ಇತರ ಆಹಾರದ ಪ್ರಮಾಣದಲ್ಲಿ ಗಮನಾರ್ಹ ಏರಿಕೆ ಮತ್ತು ಹಾಲು ಮತ್ತು ಹಾಲಿನ ಉತ್ಪನ್ನಗಳ ಪ್ರಮಾಣದಲ್ಲಿ ಅಲ್ಪ ಹೆಚ್ಚಳದಿಂದ ಧಾನ್ಯಗಳ ಪಾಲಿನ ಕುಸಿತವು ಸಮತೋಲನಗೊಂಡಿದೆ.

VI. ಹೊಂದಾಣಿಕೆಯ ಪೌಷ್ಟಿಕಾಂಶ ಸೇವನೆ

ಒಂದು ಕುಟುಂಬದ ಆಹಾರ ಪದಾರ್ಥಗಳ ಸೇವನೆಯು ಮನೆಯ ಸದಸ್ಯರು ನಿಜವಾಗಿಯೂ ಸೇವಿಸುವ ಆಹಾರದ ಪ್ರಮಾಣವನ್ನು ಮಾತ್ರವಲ್ಲದೆ, ಉಲ್ಲೇಖಿತ ಅವಧಿಯಲ್ಲಿ ಮನೆಯಲ್ಲಿಯೇ ತಯಾರಿಸಿ ಮನೆಯೇತರ ಸದಸ್ಯರಿಗೆ ಬಡಿಸುವ ಆಹಾರದ ಸೇವನೆಯನ್ನೂ ಒಳಗೊಂಡಿದೆ. ಇದಲ್ಲದೆ, ಸದಸ್ಯರ ಬಳಕೆಗಾಗಿ ಮತ್ತು ಅತಿಥಿಗಳಿಗಾಗಿ ಮಾರುಕಟ್ಟೆಯಿಂದ ಖರೀದಿಸಿದ ಬೇಯಿಸಿದ ಊಟವನ್ನು ಖರೀದಿದಾರರ ಮನೆಗೆ ದಾಖಲಿಸಲಾಗುತ್ತದೆ. ಹೀಗಾಗಿ, ಮನೆಯ ಸದಸ್ಯರ 'ನಿಜವಾದ' ಸೇವನೆಗೆ ಹತ್ತಿರವಿರುವ ಪೌಷ್ಟಿಕಾಂಶ ಸೇವನೆಯ ಮಟ್ಟವನ್ನು ಕಂಡುಹಿಡಿಯಲು, ಸೂಕ್ತವಾದ ವಿಧಾನವನ್ನು ಬಳಸಿಕೊಂಡು ಹೊಂದಾಣಿಕೆಗಳನ್ನು ಮಾಡಲಾಗುತ್ತದೆ. ತಲಾವಾರು ದೈನಂದಿನ ಹೊಂದಾಣಿಕೆಯ ಪೌಷ್ಟಿಕಾಂಶ ಸೇವನೆಯ ಅಂದಾಜುಗಳು ಮತ್ತು ಹೊಂದಾಣಿಕೆಯಾಗದ ಪೌಷ್ಟಿಕಾಂಶ ಸೇವನೆಯನ್ನು ಕೋಷ್ಟಕ 3 ರಲ್ಲಿ ತೋರಿಸಲಾಗಿದೆ:

ಕೋಷ್ಟಕ 3: 2022-23 ಮತ್ತು 2023-24 ರಲ್ಲಿ ಕ್ಯಾಲೋರಿ, ಪ್ರೋಟೀನ್ ಮತ್ತು ಕೊಬ್ಬಿನ ಸರಾಸರಿ ದೈನಂದಿನ ತಲಾ ಹೊಂದಾಣಿಕೆಯ ಮತ್ತು ಹೊಂದಾಣಿಕೆಯಾಗದ ಸೇವನೆ: ಅಖಿಲ ಭಾರತ

ಸೇವನೆ

ದೈನಂದಿನ ತಲಾವಾರು

 

 

ಹೊಂದಾಣಿಕೆಯಾಗದ

ಹೊಂದಾಣಿಕೆ ಮಾಡಲಾದ

 

2022-23

2023-24

2022-23

2023-24

 

ಗ್ರಾಮೀಣ

 

ನಗರ

ಗ್ರಾಮೀಣ

 

ನಗರ

ಗ್ರಾಮೀಣ

 

ನಗರ

ಗ್ರಾಮೀಣ

 

ನಗರ

ಕ್ಯಾಲೋರಿ (Kcal)

2233

2250

2212

2240

2210

2216

2191

2225

ಪ್ರೋಟೀನ್ (ಗ್ರಾಂ)

61.9

63.2

61.8

63.4

61.3

62.4

61.2

62.9

ಕೊಬ್ಬು (ಗ್ರಾಂ)

59.7

70.5

60.4

69.8

59.1

69.6

59.7

69.3

                       

ಸರಾಸರಿಯಾಗಿ, ಅಖಿಲ ಭಾರತ ಮಟ್ಟದಲ್ಲಿ ಹೊಂದಾಣಿಕೆ ಮಾಡಲಾದ ಪೋಷಕಾಂಶಗಳ ಅಂಕಿಅಂಶಗಳು ಎಚ್‌ ಸಿ ಇ ಎಸ್‌: 2022-23 ಮತ್ತು ಎಚ್‌ ಸಿ ಇ ಎಸ್‌: 2023-24 ಎರಡೂ ವಲಯಗಳಲ್ಲಿ ಹೊಂದಾಣಿಕೆ ಮಾಡದ ಪೋಷಕಾಂಶಗಳ ಅಂಕಿಅಂಶಗಳಿಗಿಂತ ಸ್ವಲ್ಪ ಕಡಿಮೆಯಾಗಿದೆ. ಎರಡೂ ವಲಯಗಳಲ್ಲಿ ಪ್ರೋಟೀನ್ ಮತ್ತು ಕೊಬ್ಬಿನ ತಲಾ ಸೇವನೆಗೆ ಸಂಬಂಧಿಸಿದಂತೆ ಇದೇ ರೀತಿಯ ಮಾದರಿಯನ್ನು ಗಮನಿಸಲಾಗಿದೆ.

 

*****


(Release ID: 2141668)