WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

ವಿಷಯ ಸಾಮಗ್ರಿ ಕೃತಿಚೌರ್ಯ( ಪೈರಸಿ) ಇನ್ನು ಮುಂದೆ ಸ್ಥಳೀಯ ಸಮಸ್ಯೆಯಾಗುಳಿಯದು ಬದಲು ಜಾಗತಿಕ ಆರ್ಥಿಕ ಬೆದರಿಕೆಯಾಗಲಿದೆ - ವೇವ್ಸ್ 2025ರಲ್ಲಿ ಕೃತಿಚೌರ್ಯ  ನಿಗ್ರಹಿಸುವ ಕ್ರಮಗಳ ಬಗ್ಗೆ ಜಾಗತಿಕ ತಜ್ಞರ ಚರ್ಚೆ


ಕೇಂದ್ರೀಕೃತ ಕೃತಿಚೌರ್ಯ ವಿರೋಧಿ ಕಾರ್ಯಪಡೆ ಮತ್ತು ಸುಧಾರಿತ ತಂತ್ರಜ್ಞಾನಕ್ಕೆ ಭಾಗೀದಾರರ ಕರೆ

 Posted On: 03 MAY 2025 10:40PM |   Location: PIB Bengaluru

ಮುಂಬೈಯಲ್ಲಿ ನಡೆಯುತ್ತಿರುವ ವೇವ್ಸ್ 2025 ಸಮಾವೇಶದಲ್ಲಿ, "ವಿಷಯಸಾಮಗ್ರಿ ಸಂರಕ್ಷಣಾ ಕಾರ್ಯತಂತ್ರಗಳು ಮತ್ತು ಸಿನರ್ಜಿಗಳ ಬಗ್ಗೆ ಅಂತರರಾಷ್ಟ್ರೀಯ ಹಕ್ಕುಗಳ ಪ್ರತಿಪಾದಕರ  ದೃಷ್ಟಿಕೋನಗಳು" ಎಂಬ ವಿಮರ್ಶಾತ್ಮಕ ಅಧಿವೇಶನವು ಹೆಚ್ಚುತ್ತಿರುವ ಡಿಜಿಟಲ್ ಪೈರಸಿಯ ಬೆದರಿಕೆಯನ್ನು ಪರಿಹರಿಸಲು ಮತ್ತು ವಿಷಯಸಾಮಗ್ರಿಗಳ ರಕ್ಷಣೆಗೆ ಸಹಯೋಗದ ವಿಧಾನಗಳನ್ನು ಅನ್ವೇಷಿಸಲು ಜಾಗತಿಕ ಮಧ್ಯಸ್ಥಗಾರರನ್ನು ಒಟ್ಟುಗೂಡಿಸಿತು.

ತೆಲುಗು ಚಲನಚಿತ್ರೋದ್ಯಮದ ಖ್ಯಾತ ಚಲನಚಿತ್ರ ನಿರ್ಮಾಪಕ ಮತ್ತು ಪೈರಸಿ ವಿರೋಧಿ ಪ್ರತಿಪಾದಕರಾದ  ಶ್ರೀ ರಾಜ್ ಕುಮಾರ್ ಅಕೆಲ್ಲಾ ಅವರು ಪ್ರಾದೇಶಿಕ ಸಿನೆಮಾದ ವಿಸ್ತರಿಸುತ್ತಿರುವ ಜನಪ್ರಿಯತೆಯಿಂದಾಗಿ ಪೈರಸಿಗೆ ಗುರಿಯಾಗುವ ಸಾಧ್ಯತೆಯನ್ನು ಒತ್ತಿಹೇಳುವ ಮೂಲಕ ಚರ್ಚೆಯನ್ನು ಪ್ರಾರಂಭಿಸಿದರು. ಪೈರಸಿ ತಡೆಗೆ ಮೀಸಲಾದ ಪೈರಸಿ ವಿರೋಧಿ ಸೆಲ್ ಮತ್ತು ಡಿಜಿಟಲ್ ಪೈರಸಿ ತಂಡವನ್ನು ಸ್ಥಾಪಿಸುವುದು ಸೇರಿದಂತೆ ತೆಲುಗು ಚಲನಚಿತ್ರೋದ್ಯಮದ ಸಕ್ರಿಯ ಪ್ರಯತ್ನಗಳನ್ನು ಅವರು ಎತ್ತಿ ತೋರಿಸಿದರು.

ಅಂತರರಾಷ್ಟ್ರೀಯ ಹಕ್ಕುಗಳ ತಜ್ಞರಾದ ಶ್ರೀಮತಿ ಡಾನ್ ಬ್ಯಾರಿಟೌ ಮತ್ತು ಶ್ರೀಮತಿ ಜಿಹಿ ಲೀ, ಪೈರಸಿ ಅಥವಾ ಕೃತಿಚೌರ್ಯ  ಅತ್ಯಾಧುನಿಕ, ಗಡಿಯಾಚೆಗಿನ ಸೈಬರ್ ಅಪರಾಧವಾಗಿ ವಿಕಸನಗೊಂಡಿದೆ ಎಂದು ಒತ್ತಿಹೇಳಿದರು. ಟೊರೆಂಟ್ ಸೈಟ್ಗಳು, ನೇರ ಡೌನ್ಲೋಡ್ಗಳು ಮತ್ತು ಟೆಲಿಗ್ರಾಮ್ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಿಂದಾಗಿ  ಭೌತಿಕ ಪೈರಸಿಯು  ಡಿಜಿಟಲ್ ರೂಪಗಳಿಗೆ/ಮಾದರಿಗಳಿಗೆ  ಅಪಾಯಕಾರಿ ರೀತಿಯಲ್ಲಿ ಬದಲಾಗಿರುವುದನ್ನು ಅವರು ಗಮನಿಸಿದರು. ಇಂದಿನ ಪರಿಸರ ವ್ಯವಸ್ಥೆಯಲ್ಲಿ, ಕೃತಿಚೌರ್ಯವು ಇನ್ನು ಮುಂದೆ ಬರೇ ಸ್ಥಳೀಯ ಸಮಸ್ಯೆಯಾಗುಳಿಯದು ಬದಲು ಅದು  ಜಾಗತಿಕ ಆರ್ಥಿಕ ಬೆದರಿಕೆಯಾಗಲಿದೆ  ಎಂದು ಶ್ರೀಮತಿ ಲೀ ಹೇಳಿದರು.

ಉದಯೋನ್ಮುಖ ಡಿಜಿಟಲ್ ಪ್ರವೃತ್ತಿಗಳನ್ನು ಎತ್ತಿ ತೋರಿಸುತ್ತಾ, ಕೊರಿಯಾದ ವಿಷಯಸಾಮಗ್ರಿಯನ್ನು (ಕೆ-ಡ್ರಾಮಾಗಳು ಮತ್ತು ಕೆ-ಪಾಪ್) ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದ್ದರೂ, ಅವರ ಹಣಗಳಿಕೆ ಮಾದರಿಗಳು ಕಾನೂನುಬದ್ಧ ವೀಕ್ಷಕರ ತೊಡಗಿಸಿಕೊಳ್ಳುವಿಕೆ ಮತ್ತು ಬ್ರಾಂಡ್ ಸಹಯೋಗಗಳಿಂದ ನಡೆಸಲ್ಪಡುತ್ತವೆ ಎಂಬುದರತ್ತ ಗೋಷ್ಠಿಯ ಭಾಷಣಕಾರರು ಬೆಟ್ಟು ಮಾಡಿದರು. ಇದಕ್ಕೆ ವ್ಯತಿರಿಕ್ತವಾಗಿ, ಭಾರತೀಯ ಸಿನೆಮಾ ಜಪಾನ್ ನಂತಹ ದೇಶಗಳಲ್ಲಿ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಅನುಭವಿಸುತ್ತಿದೆ, ಇದು ಅಂತರರಾಷ್ಟ್ರೀಯ ಕೃತಿ ಚೌರ್ಯಕ್ಕೆ ಸಂಬಂಧಿಸಿ ್ಅವಕಾಶಗಳು ಮತ್ತು ಅಪಾಯಗಳನ್ನು ತೆರೆಯುತ್ತದೆ ಎಂದರು.

ಹಣಕಾಸು ವಂಚನೆ ಮತ್ತು ಸೈಬರ್ ಅಪರಾಧ ಸೇರಿದಂತೆ ವ್ಯಾಪಕ ಅಪರಾಧ ಚಟುವಟಿಕೆಗಳಿಗೆ ಕೃತಿಚೌರ್ಯ/ಪೈರಸಿ ಹೇಗೆ ಧನಸಹಾಯ ನೀಡುತ್ತದೆ ಎಂಬುದನ್ನು ಅಧಿವೇಶನವು ಪರಿಶೀಲಿಸಿತು. ಚರ್ಚೆಯು ಸಮಗ್ರ, ಜಾಗತಿಕ ಕಾರ್ಯತಂತ್ರದ ಮೂಲಕ ಪೈರಸಿ/ಕೃತಿಚೌರ್ಯ ಸಮಸ್ಯೆಯನ್ನು ನಿಭಾಯಿಸುವತ್ತ  ಗಮನ ಹರಿಸಿತು. ಗಡಿಯಾಚೆಗಿನ ಪ್ರಯತ್ನಗಳನ್ನು ಸಮನ್ವಯಗೊಳಿಸಲು ಅಂತರರಾಷ್ಟ್ರೀಯ ಪ್ರಾತಿನಿಧ್ಯದೊಂದಿಗೆ ಕೇಂದ್ರೀಕೃತ ಪೈರಸಿ/ಕೃತಿಚೌರ್ಯ ನಿಗ್ರಹ ಕಾರ್ಯಪಡೆಯನ್ನು ರಚಿಸುವುದು ಪ್ರಮುಖ ಶಿಫಾರಸುಗಳಲ್ಲಿ ಸೇರಿದೆ. ಕೃತಿಚೌರ್ಯ/ಪೈರಸಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಪತ್ತೆಹಚ್ಚಲು ಮತ್ತು ತಡೆಗಟ್ಟಲು ಸುಧಾರಿತ ಡಿಜಿಟಲ್ ಮೇಲ್ವಿಚಾರಣೆ ಮತ್ತು ಜಾರಿ ತಂತ್ರಜ್ಞಾನಗಳಲ್ಲಿ ಹೆಚ್ಚಿನ ಹೂಡಿಕೆಗೆ ಕರೆ ನೀಡಲಾಯಿತು. ಕೃತಿಚೌರ್ಯ/ಪೈರಸಿಯು ಕೇವಲ ಆರ್ಥಿಕ ನಷ್ಟ ಮಾತ್ರವಲ್ಲ, ಜೊತೆಗೆ ನಾವೀನ್ಯತೆ, ಹೂಡಿಕೆ ಮತ್ತು ಜಾಗತಿಕ ಸಾಂಸ್ಕೃತಿಕ ವಿನಿಮಯಕ್ಕೆ ದೀರ್ಘಕಾಲೀನ ಬೆದರಿಕೆಯಾಗಿದೆ ಎಂದು ಭಾಷಣಕಾರರು ಸರ್ವಾನುಮತದಿಂದ ಒಪ್ಪಿಕೊಂಡರು.

ನೈಜ ಸಮಯದ ಅಧಿಕೃತ ಮಾಹಿತಿಗಾಗಿ, ದಯವಿಟ್ಟು ನಮ್ಮನ್ನು ಅನುಸರಿಸಿ:

On X :

https://x.com/WAVESummitIndia

https://x.com/MIB_India

https://x.com/PIB_India

https://x.com/PIBmumbai

On Instagram:

https://www.instagram.com/wavesummitindia

https://www.instagram.com/mib_india

https://www.instagram.com/pibindia

 

*****

 


Release ID: (Release ID: 2126957)   |   Visitor Counter: 5

Read this release in: Marathi , English , Urdu , Hindi