WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಒಟಿಟಿಯ ಮುಂದಿನ ಜಿಗಿತ: ಎಐ, ಇಂಟರ್ಆಕ್ಟಿವಿಟಿ ಮತ್ತು ವೈಯಕ್ತೀಕರಣವು ಸ್ಟ್ರೀಮಿಂಗಿನ ಭವಿಷ್ಯವನ್ನು ರೂಪಿಸುತ್ತದೆ


ಭಾರತದ ಡಿಜಿಟಲ್ ಮನರಂಜನಾ ಸ್ಥಳಾವಕಾಶದಾದ್ಯಂತ ವಿಷಯಸಾಮಗ್ರಿಯ ಪ್ರಯಾಣವನ್ನು ತಂತ್ರಜ್ಞಾನವು ಹೇಗೆ ಮರುವ್ಯಾಖ್ಯಾನಿಸುತ್ತಿದೆ ಎಂಬುದನ್ನು ಚರ್ಚಿಸಿದ ವೇವ್ಸ್ 2025ರ ಪ್ಯಾನಲ್

 Posted On: 03 MAY 2025 10:30PM |   Location: PIB Bengaluru

ವೇವ್ಸ್ 2025 ರಲ್ಲಿ "ಒಟಿಟಿ ಕ್ರಾಂತಿ: ಎಐ, ವೈಯಕ್ತೀಕರಣ ಮತ್ತು ಸಂವಾದಾತ್ಮಕ ವಿಷಯ ಸಾಮಗ್ರಿಗಳು ಸ್ಟ್ರೀಮಿಂಗ್ ಭೂದೃಶ್ಯವನ್ನು ಹೇಗೆ ಬದಲಾಯಿಸುತ್ತಿವೆ" ಎಂಬ ಪ್ಯಾನಲ್ ಚರ್ಚೆಯು ಸ್ಟ್ರೀಮಿಂಗ್ ಉದ್ಯಮದ ಕೆಲವು ಅತ್ಯಂತ ಪ್ರಭಾವಶಾಲಿ ಮನಸ್ಸುಗಳನ್ನು ಒಟ್ಟುಗೂಡಿಸಿತು. ಲಯನ್ಸ್ಗೇಟ್ ಪ್ಲೇ ಏಷ್ಯಾದ ಅಧ್ಯಕ್ಷ ರೋಹಿತ್ ಜೈನ್ ಅವರ ನಿರೂಪಣೆಯಲ್ಲಿ ನಡೆದ ಚರ್ಚೆಯಲ್ಲಿ, ಕೃತಕ ಬುದ್ಧಿಮತ್ತೆ ಮತ್ತು ಪರಸ್ಪರ ಸಂವಾದಾತ್ಮಕತೆಯು ಹೇಗೆ  ಕಥೆಗಳನ್ನು ಹೇಳುವುದನ್ನು , ಅವುಗಳನ್ನು ತಲುಪಿಸುವುದನ್ನು ಮತ್ತು ಅನುಭವಿಸುವುದನ್ನು  ಮರುರೂಪಿಸುವುದರಿಂದ ಭಾರತದ ಆಳವಾದ ಕಥೆ ಹೇಳುವ ಪರಂಪರೆಯು ಹೇಗೆ ಶಕ್ತಿಯುತ ರೂಪಾಂತರಕ್ಕೆ ಒಳಗಾಗುತ್ತಿದೆ ಎಂಬುದನ್ನು ಅನ್ವೇಷಿಸಿತು.

ಅಧಿವೇಶನವನ್ನು ಉದ್ಘಾಟಿಸಿದ ರೋಹಿತ್ ಜೈನ್ ಅವರು ಭಾರತದ ಕಥೆ ಹೇಳುವ ಪರಂಪರೆಗೆ ಗೌರವ ಸಲ್ಲಿಸಿದರು ಮತ್ತು ನಡೆಯುತ್ತಿರುವ ಆಕರ್ಷಕ ಬದಲಾವಣೆಯ ಬಗ್ಗೆ ಹಾಗು ತಂತ್ರಜ್ಞಾನವು ನಾವು ನೋಡುವುದನ್ನು ಮಾತ್ರವಲ್ಲದೆ ಕಥೆಗಳ ಮೂಲಕ ನಾವು ಹೇಗೆ ಸಂಪರ್ಕಿಸಲ್ಪಡುತ್ತೇವೆ  ಎಂಬುದರ ಬಗ್ಗೆ ಮಾತನಾಡಿದರು.

ಏಷ್ಯಾ-ಪೆಸಿಫಿಕ್ ಮತ್ತು ಎಂ.ಇ.ಎನ್.ಎ. ಉಪಾಧ್ಯಕ್ಷ ಗೌರವ್ ಗಾಂಧಿ ಅವರು ವೈಯಕ್ತೀಕರಣವು ಪದರಗಳ ರೀತಿಯ ಪ್ರಕ್ರಿಯೆ ಎಂದು ಹೇಳಿದರು. "ವೀಕ್ಷಕರು ಏನು ಬಯಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವ ಮೂಲಕ ನಾವು ಪ್ರಾರಂಭಿಸುತ್ತೇವೆ - ಅವರ ಮನಸ್ಥಿತಿಗಳು, ಅವರ ಅಭಿರುಚಿಯ ಮಾದರಿಗಳನ್ನು ಪರಿಗಣಿಸುತ್ತೇವೆ. ಮತ್ತು ನಮ್ಮಂತಹ ಬಹುಭಾಷಾ ದೇಶದಲ್ಲಿ, ಭಾಷಾ ಅನ್ವೇಷಣೆಯನ್ನು ಸಕ್ರಿಯಗೊಳಿಸುವುದೂ ಇದರಲ್ಲಿ ಸೇರಿದೆ”  ಎಂದರು.  

ಮೋನಿಕಾ ಶೆರ್ಗಿಲ್ ಇಂದಿನ ವಿಷಯಸಾಮಗ್ರಿ ಭೂದೃಶ್ಯವನ್ನು ಮಾನವ ಇತಿಹಾಸದಲ್ಲಿಯೇ ಮೊದಲನೆಯದು ಎಂದು ಬಣ್ಣಿಸಿದರು. ಇದು ಸೃಜನಶೀಲತೆ ಮತ್ತು ಯಂತ್ರ ಕಲಿಕೆಯ ಸಂಯೋಜನೆ ಎಂದೂ ಹೇಳಿದರು. "ನೀವು ಕ್ರೈಮ್ ಥ್ರಿಲ್ಲರ್ಗಳಿಗಾಗಿ ಬರಬಹುದು, ಆದರೆ ಟ್ರೆಂಡಿಂಗ್ ಏನು ಎಂಬುದನ್ನು ಸಹ ನೀವು ನೋಡುತ್ತಿರುತ್ತೀರಿ. ಹಂಚಿಕೊಂಡ ಸಾಂಸ್ಕೃತಿಕ ನಾಡಿಮಿಡಿತವನ್ನು ನಿರ್ಮಿಸುವಾಗ ವೀಕ್ಷಕರಿಗೆ ಸೇವೆ ಸಲ್ಲಿಸುವುದು ನಮ್ಮ ಗುರಿಯಾಗಿದೆ" ಎಂದು ಅವರು ಹೇಳಿದರು.

ಭರತ್ ರಾಮ್ ಗೆ, ವೀಕ್ಷಕರ ನಡವಳಿಕೆಯು ಒಂದು ಹಾದಿಯನ್ನು ತೋರಿಸುತ್ತದೆ. "ಷರ್ಲಾಕ್ ಹೋಮ್ಸ್ ನ  ಶಂಕಿತರಂತೆ ಹೆಚ್ಚಿನ ಜನರು ಪ್ಲಾಟ್ಫಾರ್ಮ್ಗೆ ಭೇಟಿ ನೀಡಿದಾಗ ಸುಳಿವುಗಳನ್ನು ಬಿಡುತ್ತಾರೆ. ಪ್ರಾದೇಶಿಕ, ಪ್ರಮುಖ, ಜನಪ್ರಿಯ, ಅವರನ್ನು ತೊಡಗಿಸಿಕೊಳ್ಳುವಂತೆ ಮಾಡುವ ಎಲ್ಲವನ್ನೂ ಶಿಫಾರಸು ಮಾಡಲು ನಾವು ಸುಳಿವುಗಳನ್ನು ಅನುಸರಿಸುತ್ತೇವೆ" ಎಂದು ಅವರು ಹೇಳಿದರು.

ಚರ್ಚೆಯು ನಂತರ ಕಥೆ ಹೇಳುವತ್ತ ತಿರುಗಿತು. ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾದ ಎಂಡಿ ಮತ್ತು ಸಿಇಒ ಗೌರವ್ ಬ್ಯಾನರ್ಜಿ ಅವರು ಉತ್ತಮ ಕಥೆಯ ನಿರಂತರ ಶಕ್ತಿಯನ್ನು ಉಲ್ಲೇಖಿಸಿದರು. "ಆ ಕ್ಷಣದೊಂದಿಗೆ ಏನಾದರೂ ಅನುರಣಿಸಿದಾಗ, ಪ್ರೇಕ್ಷಕರು ಅದನ್ನು ಕಂಡುಕೊಳ್ಳುತ್ತಾರೆ. ಬ್ಲಾಕ್ಬಸ್ಟರ್ಗಳಲ್ಲಿನ ನಂಬಿಕೆಯು ಏನೆಂದರೆ ಸಾಂಸ್ಕೃತಿಕ ಕ್ಷಣವನ್ನು ಮುಖಾಮುಖಿಯಾಗಿ ಎದುರಿಸುವ ಕಥೆಗಳು ಮತ್ತು ಕಥೆಗಾರರನ್ನು ಗುರುತಿಸುವುದು" ಎಂದು ಅವರು ಹೇಳಿದರು, ದೊಡ್ಡ ಉದ್ಯಮದ ಕುಸಿತವನ್ನು ಧಿಕ್ಕರಿಸಿ  ದೇಶೀಯ ಸಿನಿಮಾಗಳು ಸಾಧಿಸಿದ  ಯಶಸ್ಸನ್ನು ಅವರು ಉಲ್ಲೇಖಿಸಿದರು.

ನೇರ ರೀತಿಯಲ್ಲಿ ಮಾಹಿತಿ ಮಂಡಿಸುವ ಮಾದರಿಗಳಿಂದ ಸೃಜನಶೀಲ-ನೇತೃತ್ವದ ಪರಿಸರ ವ್ಯವಸ್ಥೆಗಳತ್ತ ನಾಟಕೀಯ ರೀತಿಯ ಭಾರೀ ವಿಕಸನವನ್ನು ಪ್ರತಿಬಿಂಬಿಸಿದ  ನೀರಜ್ ರಾಯ್, ಡಿಜಿಟಲ್ ಪ್ಲಾಟ್ಫಾರ್ಮ್ಗಳು ತಂದ ಒಟ್ಟುಗೂಡಿಸುವಿಕೆಯನ್ನು ಎತ್ತಿ ತೋರಿಸಿದರು. "ಸಂಗೀತ ವೀಡಿಯೊಗಳಿಂದ ಹಿಡಿದು ಬೃಹತ್ ಸೃಜನಶೀಲ  ಬ್ರಹ್ಮಾಂಡಗಳವರೆಗೆ, ಯೂಟ್ಯೂಬ್ನಂತಹ ಪ್ಲಾಟ್ಫಾರ್ಮ್ಗಳು ಎಲ್ಲವನ್ನೂ ಪರಿವರ್ತಿಸಿದವು. ಈಗ, ಉತ್ಪಾದನಾ ತಂತ್ರಜ್ಞಾನಗಳೊಂದಿಗೆ, ನಾವು ಇನ್ನೂ ದೊಡ್ಡದಾದ ಬದಲಾವಣೆಯ ಅಂಚಿನಲ್ಲಿ ನಿಂತಿದ್ದೇವೆ" ಎಂದು ಅವರು ಹೇಳಿದರು.

ಬಳಿಕ  ಸಂಭಾಷಣೆಯು ಪರಸ್ಪರ ಮಾತುಕತೆಯತ್ತ ತಿರುಗಿತು. ಪ್ರೈಮ್ ವಿಡಿಯೋ ಸಂವಾದಾತ್ಮಕ ವೈಶಿಷ್ಟ್ಯಗಳನ್ನು ಬಳಸುತ್ತದೆ, ಅದು ಕಥೆಯನ್ನು ಅಸ್ತವ್ಯಸ್ತಗೊಳಿಸುವ ಬದಲು ಪರಿಣಾಮಕಾರತ್ವವನ್ನು ಹೆಚ್ಚಿಸುತ್ತದೆ ಎಂದು ಗೌರವ್ ಗಾಂಧಿ ವಿವರಿಸಿದರು. " ನೀವು ಅಭಿಮಾನಿಗಳ ಜೊತೆಗಿನ ಪ್ರಯಾಣದಲ್ಲಿ ನೀವು ಸಾಕಾಗುವಷ್ಟನ್ನು ನೀಡಿರಿ, ಎಂದಿಗೂ ಹೆಚ್ಚುಅಥವಾ ಯಥೇಚ್ಛ  ನೀಡಬೇಡಿ" ಎಂದು ಅವರು ನುಡಿದರು.

ಮೋನಿಕಾ ಶೆರ್ಗಿಲ್ ನೆಟ್ಫ್ಲಿಕ್ಸ್ ಹೇಗೆ ಇಂಟರ್ಆಕ್ಟಿವಿಟಿಯನ್ನು ಅಳವಡಿಸಿಕೊಂಡಿದೆ, ವಿಶೇಷವಾಗಿ ಗೇಮಿಂಗ್ ಗೆ ಪ್ರವೇಶಿಸುವ ಮೂಲಕ ಎಂಬುದನ್ನುವಿವರಿಸಿದರು. "ಇಮ್ಮರ್ಶನ್ (ಅದರಲ್ಲಿಯೇ ಮುಳುಗಿ ಬಿಡುವುದು) ) ಎಂಬುದು ಹೊಸ ತೊಡಗಿಸಿಕೊಳ್ಳುವಿಕೆಯಾಗಿದೆ. ಮತ್ತು ವೈಯಕ್ತೀಕರಣವು ಪ್ರತಿ ಉತ್ತಮ ಕಥೆಯನ್ನು ಮತ್ತಷ್ಟು ಮುಂದೆ ಸಾಗಿಸಲು  ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರು.

ರೋಹಿತ್ ಜೈನ್ ಅವರು ಮಹಾನ್ ಕಥೆಗಳನ್ನು ಹೇಗೆ ಕಂಡುಹಿಡಿಯಲಾಗುತ್ತದೆ ಎಂಬ ಪ್ರಶ್ನೆಯನ್ನು ಎತ್ತಿದರು. ಕಥೆಗಾರರು ಹೆಚ್ಚಾಗಿ ತಮ್ಮ ಧ್ವನಿಯನ್ನು ಸಾವಯವವಾಗಿ ಕಂಡುಕೊಳ್ಳುತ್ತಾರೆ ಎಂದು ಗೌರವ್ ಬ್ಯಾನರ್ಜಿ ಪ್ರತಿಕ್ರಿಯಿಸಿದರು. "ಜಗತ್ತು ಬದಲಾಗುತ್ತಿದೆ. ಭುವನ್ ಬಾಮ್ ಅವರನ್ನು ತೆಗೆದುಕೊಳ್ಳಿ, ಅವರು ತಮ್ಮ ಕ್ಷಣವನ್ನು, ಅವರ ಧ್ವನಿಯನ್ನು ಕಂಡುಕೊಂಡರು. ನಾವು ಕ್ಷಣಗಳನ್ನು ಗುರುತಿಸಬೇಕು ಮತ್ತು ಅವುಗಳೊಂದಿಗೆ ಆಡಬೇಕು "ಎಂದು ಅವರು ಹೇಳಿದರು.

ಮೋನಿಕಾ ಶೆರ್ಗಿಲ್ ಭಾರತದ ಸೃಜನಶೀಲ ಭೂದೃಶ್ಯದ ಬಳಕೆಯಾಗದ ಸಾಮರ್ಥ್ಯದತ್ತ ಬೆರಳು ತೋರಿಸುವ ಮೂಲಕ ಮಾತುಗಳನ್ನು ಮುಕ್ತಾಯಗೊಳಿಸಿದರು. "ನಾವು ಭಾರತವನ್ನು ಸಾಕಷ್ಟು ಅನ್ವೇಷಿಸಿಲ್ಲ. ಇಲ್ಲಿನ ಮಾನವ ಬಂಡವಾಳ/ಸಂಪನ್ಮೂಲ  ಅಸಾಧಾರಣವಾಗಿದೆ. ಉದ್ದೇಶ-ಚಾಲಿತ ಎಐ, ಶ್ರೀಮಂತ ಕಥೆ ಹೇಳುವಿಕೆಯೊಂದಿಗೆ ಜೋಡಿಯಾಗಿ, ಶಾಶ್ವತವಾಗಿ ಉಳಿಯುವ ಮೌಲ್ಯವನ್ನು ಸೃಷ್ಟಿಸಬಲ್ಲದು" ಎಂದು ಅವರು ಹೇಳಿದರು.

ತಂಡವು ತಂತ್ರಜ್ಞಾನದ ಬಗ್ಗೆ, ಆದರಲ್ಲೂ ಮುಖ್ಯವಾಗಿ ಕಲ್ಪನೆ, ಅದರಲ್ಲೇ ತೊಡಗಿಸಿಕೊಳ್ಳುವಿಕೆ/ಮುಳುಗುವಿಕೆ ಮತ್ತು ಭಾರತದ ಮಿತಿಯಿಲ್ಲದ ಸೃಜನಶೀಲ ಮನೋಭಾವದ ಬಗ್ಗೆ ಆಶಾವಾದದ ಟಿಪ್ಪಣಿಯೊಂದಿಗೆ ಸಂವಾದವನ್ನು ಮುಕ್ತಾಯಗೊಳಿಸಿತು.

ನೈಜ ಸಮಯದ ಅಧಿಕೃತ ಮಾಹಿತಿಗಳಿಗಾಗಿ, ದಯವಿಟ್ಟು ನಮ್ಮನ್ನು ಅನುಸರಿಸಿ:

On X :

https://x.com/WAVESummitIndia

https://x.com/MIB_India

https://x.com/PIB_India

https://x.com/PIBmumbai

On Instagram:

https://www.instagram.com/wavesummitindia

https://www.instagram.com/mib_india

https://www.instagram.com/pibindia

 

*****

 


Release ID: (Release ID: 2126948)   |   Visitor Counter: 13

Read this release in: English , Urdu , Hindi , Marathi