ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಎನ್‌ಐಎಸ್‌ಇಯ ಹೊಸ ಪಿವಿ ಲ್ಯಾಬ್ ಸೌರ ಪರೀಕ್ಷಾ ಸಾಮರ್ಥ್ಯಗಳಲ್ಲಿ ಜಾಗತಿಕ ಮಾನದಂಡಗಳನ್ನು ಸ್ಥಾಪಿಸಲಿದೆ: ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ
2030ರ ವೇಳೆಗೆ ಭಾರತವು 292 ಗಿಗಾವ್ಯಾಟ್ ಸೌರ ಸೇರಿದಂತೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಗುರಿಯನ್ನು ತಲುಪುವ ಹಾದಿಯಲ್ಲಿದೆ: ಕೇಂದ್ರ ಸಚಿವರಾದ ಜೋಶಿ
ಗ್ವಾಲ್ ಪಹರಿಯ ಎನ್‌ಐಎಸ್‌ಇಯಲ್ಲಿ ಸೌರ ಪಿವಿ ಪರೀಕ್ಷಾ ಸೌಲಭ್ಯವನ್ನು ಉದ್ಘಾಟಿಸಿದ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ
Posted On:
22 APR 2025 5:13PM by PIB Bengaluru
ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯಗಳಲ್ಲಿ ಪ್ರಮುಖ ಪ್ರಗತಿಯನ್ನು ಗುರುತಿಸಿ, ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಹರಿಯಾಣದ ಬಂದ್ವಾರಿಯ ಗ್ವಾಲ್ ಪಹರಿಯಲ್ಲಿರುವ ರಾಷ್ಟ್ರೀಯ ಸೌರ ಶಕ್ತಿ ಸಂಸ್ಥೆಯಲ್ಲಿ (ಎನ್‌ಐಎಸ್‌ಇ) ಪಿವಿ ಮಾಡ್ಯೂಲ್ ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಹೊಸ ಪ್ರಯೋಗಾಲಯವು ಸೌರ ಸಂಶೋಧನೆ ಮತ್ತು ಅಭಿವೃದ್ಧಿ, ಪರೀಕ್ಷೆ, ತರಬೇತಿ ಮತ್ತು ನೀತಿ ಬೆಂಬಲದಲ್ಲಿ ಜಾಗತಿಕ ಮಾನದಂಡಗಳನ್ನು ನಿಗದಿಪಡಿಸುತ್ತದೆ ಮತ್ತು ಸ್ವಾವಲಂಬನೆ, ನಾವೀನ್ಯತೆ ಮತ್ತು ಜಾಗತಿಕ ಶ್ರೇಷ್ಠತೆಯತ್ತ ದಿಟ್ಟ ಹೆಜ್ಜೆಯನ್ನು ಗುರುತಿಸುತ್ತದೆ ಎಂದು ಹೇಳಿದರು.
ಎನ್‌ಐಎಸ್‌ಇ ಈಗ ಸಮಗ್ರ ಪರೀಕ್ಷೆ, ಮಾಪನಾಂಕ ನಿರ್ಣಯ ಮತ್ತು ಪ್ರಮಾಣೀಕರಣ ಸೇವೆಗಳನ್ನು ನೀಡಲು ಸಜ್ಜಾಗಿದೆ, ವಿಶೇಷವಾಗಿ ದ್ಯುತಿವಿದ್ಯುಜ್ಜನಕ ಮಾಡ್ಯೂಲ್‌ಗಳು ಮತ್ತು ತಂತ್ರಜ್ಞಾನಗಳಿಗೆ ಪ್ರಸ್ತುತ ಯಾವುದೇ ಸ್ಥಾಪಿತ ಮಾನದಂಡಗಳು ಅಸ್ತಿತ್ವದಲ್ಲಿಲ್ಲಎಂದು ಶ್ರೀ ಪ್ರಲ್ಹಾದ್ ಜೋಶಿ ಅವರು ಹೇಳಿದರು. ಈ ಪ್ರಯೋಗಾಲಯವು ಭಾರತಕ್ಕೆ ಪ್ರವರ್ತಕ ಸೌಲಭ್ಯವಾಗಿದೆ ಎಂದು ಬಣ್ಣಿಸಿದ ಅವರು, ಭಾರತೀಯ ಕಂಪನಿಗಳು ದೊಡ್ಡ ಮಾಡ್ಯೂಲ್‌ಗಳ ಉತ್ಪಾದನೆಯನ್ನು ಹೆಚ್ಚಿಸುತ್ತಿದ್ದಂತೆ, ಉತ್ಪನ್ನಗಳು ಅತ್ಯುನ್ನತ ಗುಣಮಟ್ಟದ ಮಾನದಂಡಗಳನ್ನು ಪೂರೈಸುತ್ತವೆ ಎಂದು ಈ ಲ್ಯಾಬ್ ಖಚಿತಪಡಿಸುತ್ತದೆ ಎಂದು ಹೇಳಿದರು. ಪ್ರಯೋಗಾಲಯವು ಬಿಐಎಸ್ ಮಾನದಂಡಗಳೊಂದಿಗೆ ಹೊಂದಿಕೆಯಾಗುತ್ತದೆ ಮತ್ತು ಉತ್ಪಾದನಾ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಗೆ ಪ್ರಮುಖ ಉತ್ತೇಜನವನ್ನು ನೀಡುತ್ತದೆ ಮತ್ತು ಜಾಗತಿಕ ಉತ್ಪಾದನಾ ಕೇಂದ್ರವಾಗಬೇಕೆಂಬ ಭಾರತದ ಆಕಾಂಕ್ಷೆಯನ್ನು ಬೆಂಬಲಿಸುತ್ತದೆ ಎಂದು ಶ್ರೀ ಪ್ರಹ್ಲಾದ್ ಜೋಶಿ ವಿವರಿಸಿದರು.
ಸರ್ಕಾರಿ ಅಧಿಕಾರಿಗಳು, ಉದ್ಯಮ ವೃತ್ತಿಪರರು ಮತ್ತು ಅಂತಾರಾಷ್ಟ್ರೀಯ ಪ್ರತಿನಿಧಿಗಳಿಗೆ ತರಬೇತಿ ಮೈದಾನವಾಗಿ ಎನ್‌ಐಎಸ್‌ಇಯ ಮಹತ್ವವನ್ನು ಸಚಿವರು ಹೇಳಿದರು. 55,000ಕ್ಕೂ ಹೆಚ್ಚು ಸೂರ್ಯಮಿತ್ರ ತಂತ್ರಜ್ಞರಿಗೆ ತರಬೇತಿ ನೀಡುವಲ್ಲಿ ಮತ್ತು ಲೇಹ್‌ನಲ್ಲಿ 300ಕ್ಕೂ ಹೆಚ್ಚು ಸೌರ ಏರ್ ಡ್ರೈಯರ್-ಕಮ್ -ಸ್ಪೇಸ್ ತಾಪನ ವ್ಯವಸ್ಥೆಗಳನ್ನು ಸ್ಥಾಪಿಸುವಲ್ಲಿ ಎನ್‌ಐಎಸ್‌ಇಯ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. ಇಂತಹ ಉಪಕ್ರಮಗಳು ತಾಂತ್ರಿಕ ಸಾಮರ್ಥ್ಯವನ್ನು ಬಲಪಡಿಸುತ್ತವೆ ಮತ್ತು ಸರ್ಕಾರ, ಉದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವೆ ಸಹಯೋಗವನ್ನು ಬೆಳೆಸುತ್ತವೆ ಎಂದು ಅವರು ಹೇಳಿದರು. ಹೊಸ ಸೌಲಭ್ಯದೊಂದಿಗೆ, ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಎನ್‌ಐಎಸ್‌ಇ ತನ್ನ ದಕ್ಷತೆ, ಗುಣಮಟ್ಟ ಮತ್ತು ಸಂಶೋಧನೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ಶ್ರೀ ಪ್ರಹ್ಲಾದ್ ಜೋಶಿ ಅವರು ಹೇಳಿದ್ದಾರೆ.
ಆರ್‌ಇ ವಲಯದಲ್ಲಿಅದ್ಭುತ ಬೆಳವಣಿಗೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಅತಿ ವೇಗವಾದ ಬೆಳವಣಿಗೆಯ ಬಗ್ಗೆ ತಿಳಿಸಿದ ಸಚಿವರು, ಭಾರತದ ಸ್ಥಾಪಿತ ಸೌರ ಸಾಮರ್ಥ್ಯವು 2014ರಲ್ಲಿ 2.82 ಗಿಗಾ ವ್ಯಾಟ್‌ನಿಂದ ಈಗ 106 ಗಿಗಾವ್ಯಾಟ್‌ಗೆ ಏರಿದೆ, ಇದು ಶೇ.3700ಕ್ಕೂ ಹೆಚ್ಚು ಬೆಳವಣಿಗೆಯನ್ನು ಸೂಚಿಸುತ್ತದೆ ಎಂದು ಹೇಳಿದರು. ಉತ್ಪಾದನೆಗೆ ಸಂಬಂಧಿಸಿದಂತೆ, ಸೌರ ಮಾಡ್ಯೂಲ್ ಉತ್ಪಾದನೆಯು 2014 ರಲ್ಲಿ 2 ಗಿಗಾವ್ಯಾಟ್ ನಿಂದ ಇಂದು 80 ಗಿಗಾವ್ಯಾಟ್‌ಗೆ ಏರಿದೆ, 2030ರ ವೇಳೆಗೆ 150 ಗಿಗಾವ್ಯಾಟ್ ತಲುಪುವ ಗುರಿಯನ್ನು ಹೊಂದಿದೆ. ಸೌರ ಪ್ರಗತಿಯ ಜೊತೆಗೆ, ಪವನ ಶಕ್ತಿ ಸಾಮರ್ಥ್ಯದಲ್ಲಿ50 ಗಿಗಾವ್ಯಾಟ್ ಸಾಧನೆಯಾಗಲಿದೆ ಎಂದು ಸಚಿವರು ಹೇಳಿದರು.
ಸರ್ಕಾರದ ಮಹತ್ವಾಕಾಂಕ್ಷೆಯ ಗುರಿಗಳನ್ನು ಪ್ರತಿಪಾದಿಸಿದ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕಲ್ಪನೆಯಂತೆ 292 ಗಿಗಾವ್ಯಾಟ್ ಸೌರ ಶಕ್ತಿ ಸೇರಿದಂತೆ 2030ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಗುರಿಯನ್ನು ಸಾಧಿಸುವ ಹಾದಿಯಲ್ಲಿ ಭಾರತ ದೃಢವಾಗಿ ಸಾಗುತ್ತಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕಳೆದ 11 ವರ್ಷಗಳಲ್ಲಿ ಭಾರತದ ನವೀಕರಿಸಬಹುದಾದ ಇಂಧನ ಕ್ಷೇತ್ರ ಕಂಡ ಪರಿವರ್ತನೆಯನ್ನು ಎನ್‌ಐಎಸ್‌ಇ ಪ್ರತಿಬಿಂಬಿಸಬೇಕು ಎಂದು ಸಚಿವರು ಹೇಳಿದರು. ಜಾಗತಿಕ ಸಂಶೋಧನಾ ಪರಿಣಾಮ ಮತ್ತು ಪೇಟೆಂಟ್ ಉತ್ಪಾದನೆಯಲ್ಲಿ ಪ್ರಯತ್ನಗಳನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಸ್ಕೇಲೆಬಲ್ ನಾವೀನ್ಯತೆಗಳು
ಆಳವಾದ ಸಂಶೋಧನೆ, ನಾವೀನ್ಯತೆ ಮತ್ತು ಜಾಗತಿಕ ಸಹಯೋಗದ ಅಗತ್ಯವನ್ನು ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಬಿಂಬಿಸಿದರು. ಪಾಲುದಾರಿಕೆಯನ್ನು ನಿರ್ಮಿಸಲು, ಪ್ರತಿಭೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಗಡಿಗಳನ್ನು ದಾಟಲು ಸಚಿವರು ಸಲಹೆ ನೀಡಿದರು, ಇದರಿಂದ ಅದರ ಕೆಲಸವು ವಿಶ್ವಾದ್ಯಂತ ಪ್ರಯೋಗಾಲಯಗಳು, ಉತ್ಪಾದನಾ ಘಟಕಗಳು ಮತ್ತು ಸೌರ ಫಾರ್ಮ್‌ಗಳಲ್ಲಿ ಪ್ರತಿಧ್ವನಿಸುತ್ತದೆ.
ಎನ್‌ಐಎಸ್‌ಇ ಈಗಾಗಲೇ ಪೆರೋವ್ಸ್ಕಿಟ್ ಸೌರ ಕೋಶಗಳು ಮತ್ತು ಬೈಫೇಷಿಯಲ್ ಪ್ಯಾನೆಲ್‌ಗಳಂತಹ ಸುಧಾರಿತ ತಂತ್ರಜ್ಞಾನಗಳ ಮೇಲೆ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು. ಸೌರ ವಿದ್ಯುತ್ ಮುನ್ಸೂಚನೆಗಾಗಿ ಎಐ, ಬಿಲ್ಡಿಂಗ್-ಇಂಟಿಗ್ರೇಟೆಡ್ ಫೋೕಟೋವೋಲ್ಟಾಯಿಕ್ಸ್ (ಬಿಐಪಿವಿ) ಮತ್ತು ಸೌರ ಚಾಲಿತ ಇವಿ ಚಾರ್ಜಿಂಗ್ ಕೇಂದ್ರಗಳಂತಹ ಆವಿಷ್ಕಾರಗಳನ್ನು ಸಾಮೂಹಿಕವಾಗಿ ಅಳವಡಿಸಿಕೊಳ್ಳಲು ಎನ್‌ಐಎಸ್‌ಇ ಉಪಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು. ಸೌರಶಕ್ತಿಯ ಮೂಲಕ ಸುಸ್ಥಿರ ಇವಿ ಚಾರ್ಜಿಂಗ್ ಅನ್ನು ಸಕ್ರಿಯಗೊಳಿಸುವುದು ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನದ ಒಂದು ಭಾಗವಾಗಿದೆ ಮತ್ತು ಇದನ್ನು ಎನ್‌ಐಎಸ್‌ಇ ಪ್ರಮಾಣದಲ್ಲಿಅನ್ವೇಷಿಸಬೇಕು ಎಂದು ಅವರು ಹೇಳಿದರು.
ಜಾಗತಿಕ ಸೌರ ಸಹಕಾರ ಬಲವರ್ಧನೆ
ಎಂಎನ್ ಆರ್‌ಇ ಕಾರ್ಯದರ್ಶಿ ಶ್ರೀ ಸಂತೋಷ್ ಕುಮಾರ್ ಸಾರಂಗಿ, ಐಎಸ್‌ಎ ಮಹಾನಿರ್ದೇಶಕ ಶ್ರೀ ಆಶಿಶ್ ಖನ್ನಾ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಅಂತಾರಾಷ್ಟ್ರೀಯ ಸೌರ ಒಕ್ಕೂಟದ (ಐಎಸ್‌ಎ) ಪ್ರಗತಿಯನ್ನು ಪರಿಶೀಲಿಸುವ ಸಭೆಯ ಅಧ್ಯಕ್ತೆಯನ್ನು ಸಚಿವರು ವಹಿಸಿದ್ದರು. ಸೌರಶಕ್ತಿ ಅಳವಡಿಕೆಯಲ್ಲಿ ಸಹಯೋಗದ ಜಾಗತಿಕ ಪ್ರಯತ್ನಗಳ ಅಗತ್ಯದ ಬಗ್ಗೆ ಸಚಿವರು ಹೇಳಿದರು.
ಹಸಿರು ಬದ್ಧತೆಗಳೊಂದಿಗೆ ಭೂ ದಿನವನ್ನು ಆಚರಿಸುವುದು
ಎನ್.ಐ.ಎಸ್.ಇ.ಯಲ್ಲಿ ‘ಏಕ್ ಪೆಡ್ ಮಾ ಕೆ ನಾಮ್’ ಸಸಿ ನೆಡುವ ಅಭಿಯಾನದ ಭಾಗವಾಗಿ ಶ್ರೀ ಪ್ರಲ್ಹಾದ್ ಜೋಶಿ ಅವರು ಸಸಿ ನೆಟ್ಟರು. ಇದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಉಪಕ್ರಮ ಎಂದು ಬಣ್ಣಿಸಿದರು. ಪ್ರತಿಯೊಂದು ಸಸಿಯೂ ನಮ್ಮ ತಾಯಂದಿರಿಗೆ ಗೌರವಾರ್ಪಣೆಯಾಗಿದೆ ಮತ್ತು ಹಸಿರು ನಾಳೆಯ ಭರವಸೆಯಾಗಿದೆ ಎಂದು ಅವರು ಹೇಳಿದ್ದಾರೆ. ವಿಶ್ವ ಭೂ ದಿನದಂದು, ಸ್ವಚ್ಛ, ಹಸಿರು ಮತ್ತು ಹೆಚ್ಚು ಸುಸ್ಥಿರ ಗ್ರಹವನ್ನು ನಿರ್ಮಿಸುವ ಬದ್ಧತೆಯನ್ನು ನವೀಕರಿಸುವಂತೆ ಅವರು ಎಲ್ಲರಿಗೂ ಕರೆ ನೀಡಿದರು.
*****
(Release ID: 2123651)
Visitor Counter : 8