ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪಿಎಂ-ಕುಸುಮ್ ಮತ್ತು ಪಿಎಂ ಸೂರ್ಯ ಘರ್ ಯೋಜನೆಗಳನ್ನು ಪರಾಮರ್ಶಿಸಿದರು, ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತು ನೀಡಿದರು, ಉತ್ತರ ಪ್ರದೇಶವು 22 ಗಿಗಾವ್ಯಾಟ್ ಸೌರ ಶಕ್ತಿ ಸಾಮರ್ಥ್ಯದ ಗುರಿಯನ್ನು ಸಾಧಿಸುವ ಬದ್ಧತೆಯನ್ನು ಪುನರುಚ್ಚರಿಸಿತು


ಮೋಹನ್ ಲಾಲ್ ಗಂಜ್ ಮಂಡಿಯಲ್ಲಿ ಗೋಧಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿದ ಕೇಂದ್ರ ಸಚಿವರು, ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಮೌಲ್ಯಮಾಪನ ಮಾಡಲು  ರೈತರೊಂದಿಗೆ ಮಾತುಕತೆ ನಡೆಸಿದರು

"ರೈತರನ್ನು ಇಂಧನ ಸ್ವಾವಲಂಬಿಗಳನ್ನಾಗಿ ಮಾಡುವುದು ಮತ್ತು ಕಡಿಮೆ ವೆಚ್ಚದ ಕೃಷಿಯನ್ನು ಉತ್ತೇಜಿಸುವುದು ಪ್ರಧಾನ ಮಂತ್ರಿಯವರ ಚಿಂತನೆಯಾಗಿದೆ" : ಶ್ರೀ ಪ್ರಲ್ಹಾದ್ ಜೋಶಿ

प्रविष्टि तिथि: 10 APR 2025 7:22PM by PIB Bengaluru

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಹಾಗು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಲಕ್ನೋದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಗೋಧಿ ಸಂಗ್ರಹಣೆ, ಪಿಎಂ-ಕುಸುಮ್ ಮತ್ತು ಪಿಎಂ ಸೂರ್ಯ ಘರ್ ಯೋಜನೆಗಳ ಪ್ರಗತಿಯನ್ನು ಮೌಲ್ಯಮಾಪನ ಮಾಡಲು ಪ್ರಗತಿಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಉತ್ತರ ಪ್ರದೇಶದ ಇಂಧನ ಸಚಿವ ಶ್ರೀ ಎ.ಕೆ. ಶರ್ಮಾ ಮತ್ತು ಭಾರತ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ನಿಧಿ ಖರೆ ಭಾಗವಹಿಸಿದ್ದರು.

"ರೈತರು ಮತ್ತು ಕಡಿಮೆ ಮತ್ತು ಮಧ್ಯಮ ಆದಾಯದ ಗುಂಪುಗಳ ನಾಗರಿಕರಿಗೆ ಪ್ರಯೋಜನವಾಗುವ ಮಹತ್ವಾಕಾಂಕ್ಷೆಯ ಯೋಜನೆಗಳ ಪರಿಣಾಮಕಾರಿ ತಳಮಟ್ಟದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಸಮಯ ತೆಗೆದುಕೊಂಡಿದ್ದಕ್ಕಾಗಿ ನಾನು ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ" ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೃತಜ್ಞತೆ ಸಲ್ಲಿಸಿದ್ದಾರೆ.

ಸಭೆಯಲ್ಲಿ, ಉತ್ತರ ಪ್ರದೇಶವು ರಾಜ್ಯದ 22 ಗಿಗಾವ್ಯಾಟ್ ಸೌರ ಶಕ್ತಿ ಸಾಮರ್ಥ್ಯದ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸುವ ಬದ್ಧತೆಯನ್ನು ಪುನರುಚ್ಚರಿಸಿತು. ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಪಿಎಂ-ಕುಸುಮ್ ಮತ್ತು ಪಿಎಂ ಸೂರ್ಯ ಘರ್ ನಂತಹ ಪ್ರಮುಖ ಕೇಂದ್ರ ಪ್ರಾಯೋಜಿತ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ರಾಜ್ಯದ ಪ್ರಮುಖ ಪಾತ್ರವನ್ನು ಅಂಗೀಕರಿಸಿದರು. "ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉಪಕ್ರಮಗಳ ಮೂಲಕ ರೈತರಿಗೆ ಗರಿಷ್ಠ ಪ್ರಯೋಜನವನ್ನು ಕಲ್ಪಿಸಿದ್ದಾರೆ. ಪಿಎಂ-ಕುಸುಮ್ ಅಡಿಯಲ್ಲಿ, ರೈತರು ಇನ್ನು ಮುಂದೆ ಸಾಂಪ್ರದಾಯಿಕ ವಿದ್ಯುತ್ ಅವಲಂಬಿಸಬೇಕಾಗಿಲ್ಲ.  ಬದಲಿಗೆ ಕೃಷಿಗಾಗಿ ಶುದ್ಧ ಮತ್ತು ಕೈಗೆಟುಕುವ ಸೌರ ಶಕ್ತಿಯನ್ನು ಬಳಸುತ್ತಾರೆ. ಈ ಯೋಜನೆಯಡಿ ಕೇಂದ್ರ ಸರ್ಕಾರವು 90% ವರೆಗೆ ಸಬ್ಸಿಡಿಯನ್ನು ಒದಗಿಸುತ್ತದೆ, ಇದು ರೈತರಿಗೆ ಗಮನಾರ್ಹವಾಗಿ ಕಡಿಮೆ ವೆಚ್ಚದಲ್ಲಿ ಸೌರ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು.

ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಪಿಎಂ-ಕುಸುಮ್ ಸಿ -1 ಯೋಜನೆಯಡಿ ಸ್ಥಾಪಿಸಲಾದ ಸೌರ ಪಂಪ್ ಯೋಜನೆಯನ್ನು ಪರಿಶೀಲಿಸಲು ಲಕ್ನೋದ ಬಕ್ಷಿ ಕಾ ತಲಾಬ್ ತಹಸಿಲ್ ದುಗ್ಗೌರ್ ಗ್ರಾಮಕ್ಕೆ ಭೇಟಿ ನೀಡಿದರು. ಸ್ಥಳೀಯ ನಿವಾಸಿ ಮೊಹಮ್ಮದ್ ಅಹ್ಸಾನ್ ಅಲಿ ಖಾನ್ ಅವರು ತಮ್ಮ ಖಾಸಗಿ 7.5 ಎಚ್ಪಿ ನೀರಾವರಿ ಪಂಪಿಗಾಗಿ 11.2 ಕಿಲೋವ್ಯಾಟ್ ಆನ್-ಗ್ರಿಡ್ ಸೌರ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದ್ದಾರೆ. ಯೋಜನೆಯ ಒಟ್ಟು ವೆಚ್ಚ 6,23,909 ರೂ., ಇದರಲ್ಲಿ 1,87,173 ರೂ.ಗಳನ್ನು ಕೇಂದ್ರ ಸಬ್ಸಿಡಿಯಾಗಿ, 3,74,345 ರೂ.ಗಳನ್ನು ರಾಜ್ಯ ಸಬ್ಸಿಡಿಯಾಗಿ ಒದಗಿಸಲಾಗಿದೆ ಮತ್ತು ಕೇವಲ 62,391 ರೂ.ಗಳನ್ನು ಫಲಾನುಭವಿ ಇದರಲ್ಲಿ ವಿನಿಯೋಗಿಸಿದ್ದಾರೆ.

ಸ್ಥಾಪನೆಯಾದಾಗಿನಿಂದ, ಸೌರ ಸ್ಥಾವರವು ಒಟ್ಟು 8,945 ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸಿದೆ, ಅದರಲ್ಲಿ 7,100 ಕಿಲೋವ್ಯಾಟ್ ಗ್ರಿಡ್ಗೆ ರಫ್ತು ಮಾಡಲಾಗಿದೆ ಮತ್ತು 1,845 ಕಿಲೋವ್ಯಾಟ್ ನೀರಾವರಿಗೆ ಬಳಸಲಾಗಿದೆ. ಇದು ಅಹ್ಸಾನ್ ಗೆ ಇಂಧನ ಸ್ವಾತಂತ್ರ್ಯವನ್ನು ನೀಡುವುದಲ್ಲದೆ, ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್ ಗೆ ಮಾರಾಟ ಮಾಡುವ ಮೂಲಕ ಹೆಚ್ಚುವರಿ ಆದಾಯವನ್ನು ಗಳಿಸಲು ಅನುವು ಮಾಡಿಕೊಟ್ಟಿದೆ. ಈ ಯೋಜನೆಯು ಸೌರಶಕ್ತಿಯ ಮೂಲಕ ಸುಸ್ಥಿರ ಮತ್ತು ಆದಾಯವನ್ನು ಉತ್ಪಾದಿಸುವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಇತರ ರೈತರಿಗೆ ಸ್ಪೂರ್ತಿದಾಯಕ ಮಾದರಿಯಾಗಿ ನಿಂತಿದೆ.
 

ಉತ್ತರ ಪ್ರದೇಶದ ಇಂಧನ ಸಚಿವರಾದ ಶ್ರೀ ಎ.ಕೆ. ಶರ್ಮಾ ಅವರು ಪಿಎಂ-ಕುಸುಮ್ ಯೋಜನೆಯಡಿ (ಘಟಕ ಸಿ - ಫೀಡರ್ ಮಟ್ಟದ ಸೌರೀಕರಣ) 3.7 ಲಕ್ಷ ಪಂಪ್ ಹಂಚಿಕೆಯನ್ನು ಒದಗಿಸಿದ್ದಕ್ಕಾಗಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರಿಗೆ ಧನ್ಯವಾದ ಅರ್ಪಿಸಿದರು.

ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಲಕ್ನೋದ ಮೋಹನ್ ಲಾಲ್ ಗಂಜ್ ಮಂಡಿಯಲ್ಲಿರುವ ಗೋಧಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿದರು, ಅಲ್ಲಿ ಅವರು ಇ-ಪಿಒಪಿ (ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಪ್ರೊಕ್ಯೂರ್ ಮೆಂಟ್) ಯಂತ್ರದ ಮೂಲಕ ನಡೆಯುತ್ತಿರುವ ಗೋಧಿ ಸಂಗ್ರಹಣೆ, ಶುಚಿಗೊಳಿಸುವಿಕೆ ಮತ್ತು ತೂಕದ ಪ್ರಕ್ರಿಯೆಯನ್ನು ವೀಕ್ಷಿಸಿದರು. ರೈತರೊಂದಿಗಿನ ಸಂವಾದದ ಸಮಯದಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂತ್ರಜ್ಞಾನವನ್ನು ಬಳಸುವುದರಿಂದ ಅವರ ಉತ್ಪನ್ನಗಳನ್ನು ಮಾರಾಟ ಮಾಡುವ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ, ಪರಿಣಾಮಕಾರಿ ಮತ್ತು ಅನುಕೂಲಕರವಾಗಿಸಿದೆ ಎಂಬುದನ್ನು ಅವರು ಅರಿತರು. ಇ-ಪಿಒಪಿ ಅಳವಡಿಕೆಯೊಂದಿಗೆ, ತೂಕವು ನಿಖರವಾಗಿರುತ್ತದೆ ಮತ್ತು ಪಾವತಿಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲಾಗುತ್ತಿದೆ, ಇದು ಸರ್ಕಾರದ ಖರೀದಿ ವ್ಯವಸ್ಥೆಯಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂಬ ಅಂಶವನ್ನು  ರೈತರು ಹಂಚಿಕೊಂಡರು.

 

*****


(रिलीज़ आईडी: 2120795) आगंतुक पटल : 43
इस विज्ञप्ति को इन भाषाओं में पढ़ें: English , Urdu , हिन्दी