ರಕ್ಷಣಾ ಸಚಿವಾಲಯ
ಬೆಂಗಳೂರಿನ ಏರೋ ಇಂಡಿಯಾದಲ್ಲಿ ಭಾರತೀಯ ವಾಯುಪಡೆ ವಿಚಾರ ಸಂಕಿರಣವನ್ನು ಉದ್ದೇಶಿಸಿ ರಕ್ಷಣಾ ಸಹಾಯಕ ಸಚಿವರ ಭಾಷಣ
Posted On:
11 FEB 2025 6:38PM by PIB Bengaluru
ಭವಿಷ್ಯದ ತಂತ್ರಜ್ಞಾನಗಳ ಅನ್ವೇಷಣೆಯಲ್ಲಿ ಮತ್ತು ದೇಶೀಯ ರಕ್ಷಣಾ ಉದ್ಯಮದ ಸಾಮರ್ಥ್ಯವನ್ನು ಬಳಸಿಕೊಳ್ಳಲು, ಭಾರತೀಯ ವಾಯುಪಡೆ (ಐಎಎಫ್) 2025ರ ಫೆಬ್ರವರಿ 11 ರಂದು ಕರ್ನಾಟಕದ ಬೆಂಗಳೂರಿನಲ್ಲಿ ಆಯೋಜಿಸಲಾದ ಏರೋ ಇಂಡಿಯಾ 2025 ರಲ್ಲಿ 'ನವಚಾರ್ ಉತ್ಕೃಷ್ಟ ಭವಿಷ್ಯಂ (ಉತ್ತಮ ಭವಿಷ್ಯದ ಹಾದಿಗಾಗಿ ಅನ್ವೇಷಣೆ) ಎಂಬ ವಿಷಯದ ಮೇಲೆ ವಿಚಾರ ಸಂಕಿರಣವನ್ನು ನಡೆಸಿತು. ಈ ವಿಚಾರ ಸಂಕಿರಣ ರಕ್ಷಣಾ ಪಡೆಗಳು, ಉದ್ಯಮ ಮತ್ತು ಆರ್ &ಡಿ ಏಜೆನ್ಸಿಗಳ ನಡುವಿನ ಸಹಯೋಗವನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ, ಅದು ನಾವೀನ್ಯತೆಗಾಗಿ ದೃಢವಾದ ಪರಿಸರ ವ್ಯವಸ್ಥೆಯನ್ನು ಬೆಳೆಸುತ್ತದೆ. ರಕ್ಷಣಾ ಖಾತೆ ಸಹಾಯಕ ಸಚಿವ ಶ್ರೀ ಸಂಜಯ್ ಸೇಠ್ ಅವರು ವಾಯುಪಡೆಯ ಮುಖ್ಯಸ್ಥರು ಹಾಜರಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ದೇಶೀಯ ರಕ್ಷಣಾ ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ಸಕ್ರಿಯವಾಗಿ ಬೆಂಬಲಿಸುವಲ್ಲಿ ಭಾರತೀಯ ವಾಯುಪಡೆಯ ಪಾತ್ರವನ್ನು ಎತ್ತಿ ತೋರಿಸಿದ ರಕ್ಷಣಾ ಖಾತೆ ಸಹಾಯಕ ಸಚಿವರು "ಆತ್ಮನಿರ್ಭರ ಕೇವಲ ನೀತಿಯಲ್ಲ, ಅದು ಭಾರತದ ಭವಿಷ್ಯದ ಪರಿವರ್ತಕ ಚಿಂತನೆ/ದೃಷ್ಟಿಕೋನವಾಗಿದೆ. ರಕ್ಷಣಾ ಕ್ಷೇತ್ರವು ಆ ದೂರದೃಷ್ಟಿಯ ಮೈಲಿಗಲ್ಲಾಗಿ/ಆಧಾರಸ್ಥಂಭವಾಗಿ ನಿಂತಿದೆ, ಅಲ್ಲಿ ದೇಶೀಯ ನಾವೀನ್ಯತೆಯನ್ನು ಬೆಳೆಸುವುದು/ಉತ್ತೇಜಿಸುವುದು ಮತ್ತು ವಿದೇಶಿ ತಂತ್ರಜ್ಞಾನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಅತ್ಯಗತ್ಯ "ಎಂದು ಹೇಳಿದರು.
ದೇಶೀಯ ರಕ್ಷಣಾ ಸಾಮರ್ಥ್ಯದ ಅಭಿವೃದ್ಧಿಯು ಸಶಸ್ತ್ರ ಪಡೆಗಳ ಕಾರ್ಯಾಚರಣೆ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ನಿರಂತರ ನಿರ್ವಹಣಾ ಬೆಂಬಲ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಖಚಿತಪಡಿಸುತ್ತದೆ ಎಂದೂ ಶ್ರೀ ಸಂಜಯ್ ಸೇಠ್ ಹೇಳಿದರು. ಭವಿಶ್ಯಕ್ಕೆ ಸಿದ್ಧವಾದ ಸೇವೆಗಳು ಸದಾ ವಕ್ರರೇಖೆಗಿಂತ ಮುಂದಿರುತ್ತವೆ ಎಂಬುದನ್ನು ಇದು ಖಚಿತಪಡಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ, ಐಎಎಫ್ ಐಡೆಕ್ಸ್ ಯೋಜನೆಯಡಿ 78 ಯೋಜನೆಗಳನ್ನು, ಮೇಕ್ ಅಡಿಯಲ್ಲಿ 48 ಯೋಜನೆಗಳನ್ನು ಮತ್ತು ಟಿಡಿಎಫ್ ಉಪಕ್ರಮದಲ್ಲಿ 37 ಯೋಜನೆಗಳನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ, ಅವು ಅಭಿವೃದ್ಧಿಯ ವಿವಿಧ ಹಂತಗಳಲ್ಲಿವೆ ಎಂಬ ಅಂಶದ ಬಗ್ಗೆ ಅವರು ಬೆಳಕು ಚೆಲ್ಲಿದರು.
ನಿರಂತರವಾಗಿ ವಿಕಸನಗೊಳ್ಳುತ್ತಿರುವ ಭದ್ರತಾ ಸವಾಲುಗಳನ್ನು ಎದುರಿಸಲು ಸಶಸ್ತ್ರ ಪಡೆಗಳಿಗೆ ಅಗತ್ಯವಾದ ಸಾಧನಗಳನ್ನು ಸಜ್ಜುಗೊಳಿಸಲು ಸಹಾಯ ಮಾಡಲು ಎಲ್ಲಾ ಪಾಲುದಾರರು ಕೈಜೋಡಿಸಬೇಕು ಎಂದು ರಕ್ಷಣಾ ಸಹಾಯಕ ಸಚಿವರು ಕರೆ ನೀಡಿದರು. ಎಂಎಸ್ಎಂಇಗಳು ಮತ್ತು ನವೋದ್ಯಮಗಳು (ಸ್ಟಾರ್ಟ್ಅಪ್ಗಳು) ಭಾರತದಲ್ಲಿ ನಾವೀನ್ಯತೆಯ ಬೆನ್ನೆಲುಬಾಗಿದ್ದು, ಅಭೂತಪೂರ್ವ ವೇಗದಲ್ಲಿ ಬದಲಾವಣೆಯನ್ನು ಮುನ್ನಡೆಸುವ ಚುರುಕುತನ ಮತ್ತು ಸೃಜನಶೀಲತೆಯನ್ನು ಹೊಂದಿವೆ ಎಂದು ಅವರು ಒತ್ತಿ ಹೇಳಿದರು. ಸುರಕ್ಷಿತ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸಲು ಎಂಎಸ್ಎಂಇಗಳ ಕೊಡುಗೆಗಳು ಅತ್ಯಗತ್ಯವಾಗಿರುವುದರಿಂದ ತಮ್ಮ ಸಾಮರ್ಥ್ಯಗಳನ್ನು ಬಳಸಿಕೊಳ್ಳುವಂತೆ ಮತ್ತು ರಕ್ಷಣಾ ಉತ್ಪಾದನೆಯಲ್ಲಿ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಪ್ರೋತ್ಸಾಹಿಸಿದರು.
ರಕ್ಷಣಾ ಕ್ಷೇತ್ರದಲ್ಲಿನ ಪ್ರಮುಖ ಸವಾಲುಗಳನ್ನು ಗುರುತಿಸುವ ಮತ್ತು ಏರೋಸ್ಪೇಸ್ ಕ್ಷೇತ್ರದಲ್ಲಿ (ಡೊಮೇನ್ ನಲ್ಲಿ) ನಾವೀನ್ಯತೆ ಮತ್ತು ಬೆಳವಣಿಗೆಯ ಅವಕಾಶಗಳನ್ನು ಎತ್ತಿ ತೋರಿಸುವ ವಾಯುಪಡೆ ಬರೆದ 'ಭಾರತೀಯ ಉದ್ಯಮಕ್ಕೆ ಸವಾಲುಗಳು ಮತ್ತು ಅವಕಾಶಗಳ ಐಎಎಫ್ ಸಂಗ್ರಹ' ಎಂಬ ಸಂಗ್ರಹವನ್ನು ರಕ್ಷಣಾ ಸಹಾಯಕ ಸಚಿವರು ಬಿಡುಗಡೆ ಮಾಡಿದರು. ಐಎಎಫ್ ಮತ್ತು ಎಚ್ಎಎಲ್ ನಡುವೆ ಪೂರೈಕೆ ಆದೇಶಗಳು, ಪ್ರಮಾಣೀಕರಣ ಮತ್ತು ಪಾವತಿಗಳನ್ನು ನೀಡಲು ಐಎಎಫ್ ರಚಿಸಿದ ವಾಯು ವಿಟ್ ಡಿಜಿಟಲ್ ಪೋರ್ಟಲ್ಗೆ ಅವರು ಚಾಲನೆ ನೀಡಿದರು, ಇದು ಡಿಜಿಟಲೀಕರಣವನ್ನು ಹೆಚ್ಚಿಸುವುದಲ್ಲದೆ ದಕ್ಷತೆ ಮತ್ತು ಪಾರದರ್ಶಕತೆಯನ್ನು ಸುಧಾರಿಸುತ್ತದೆ. ಇದಲ್ಲದೆ, ಅವರು ಮೆಹರ್ ಬಾಬಾ -2 ಸ್ಪರ್ಧೆಯ ವಿಜೇತರನ್ನು ಘೋಷಿಸಿದರು ಮತ್ತು ಮೆಹರ್ ಬಾಬಾ -3 ಚಾಲೆಂಜ್ ಅನ್ನು ಸಹ ಕಾರ್ಯಾರಂಭ ಮಾಡಿದರು.
ಕಾರ್ಯಕ್ರಮದ ಭಾಗವಾಗಿ, ವಿಜ್ಞಾನಿಗಳು, ಕೈಗಾರಿಕೋದ್ಯಮಿಗಳು, ಪ್ರಮಾಣೀಕರಣ ಸಂಸ್ಥೆಗಳು ಮತ್ತು ಅಂತಿಮ ಬಳಕೆದಾರರು ಸೇರಿದಂತೆ ಏರೋಸ್ಪೇಸ್ ಕ್ಷೇತ್ರವನ್ನು (ಡೊಮೇನ್ ನ) ಪ್ರಸಿದ್ಧ ತಜ್ಞರೊಂದಿಗೆ 'ಮಾನವರಹಿತ ತಂಡ- ಪರಿಕಲ್ಪನೆಯಿಂದ ಗುರಿಗೆ' ಕುರಿತು ಪ್ಯಾನಲ್ ಚರ್ಚೆಯನ್ನು ನಡೆಸಲಾಯಿತು. ನಮ್ಮ ರಾಷ್ಟ್ರದ ವಿಕಸನಗೊಳ್ಳುತ್ತಿರುವ ರಕ್ಷಣಾ ಮತ್ತು ಭದ್ರತಾ ಅಗತ್ಯಗಳನ್ನು ಪೂರೈಸಲು ಭವಿಷ್ಯದ ತಂತ್ರಜ್ಞಾನಗಳಿಗೆ ದೇಶೀಯ ಪರಿಹಾರಗಳನ್ನು ಚಾಲನೆ ಮಾಡುವಲ್ಲಿ ಭಾರತೀಯ ಉದ್ಯಮದ ಪ್ರಮುಖ ಪಾತ್ರವನ್ನು ಪ್ಯಾನಲ್ ಚರ್ಚೆ ಒತ್ತಿಹೇಳಿತು.
*****
(Release ID: 2102186)
Visitor Counter : 42