ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ನವದೆಹಲಿಯ ಭಾರತೀಯ ವಿದ್ಯಾ ಭವನದಲ್ಲಿ ನಂದಲಾಲ್ ನುವಾಲ್ ಸೆಂಟರ್ ಆಫ್ ಇಂಡಾಲಜಿ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಿದ ಸಮಾರಂಭದಲ್ಲಿ ಉಪರಾಷ್ಟ್ರಪತಿಯವರ ಭಾಷಣದ ಬರಹ ರೂಪ (ಆಯ್ದ ಭಾಗಗಳು)

Posted On: 20 JAN 2025 1:12PM by PIB Bengaluru

ಅತ್ಯಂತ ಗೌರವಾನ್ವಿತ ಶ್ರೀ ಬನ್ವರಿಲಾಲ್ ಪುರೋಹಿತ್ ಅವರ ಹೆಸರೊಂದೇ ಸಾಕು ಎಂದು ನನಗೆ ಅನ್ನಿಸುತ್ತದೆ! 80ರ ಹರೆಯದ ಮಧ್ಯ ಭಾಗದಲ್ಲಿಯೂ ಯುವಕನಂತೆ ಹುಲಿ ಘರ್ಜಿಸುತ್ತಿದೆ.

ಸಾಕಷ್ಟು ಎಚ್ಚರಿಕೆಗಳು ಇರಬಹುದೆನಿಸಿದ್ದು, ನಾನು ಅವರ ಭಾವನೆಯನ್ನು ಆಶೀರ್ವಾದವೆಂದು ಪರಿಗಣಿಸುತ್ತೇನೆ. ಅದು ನನಗೆ ಇನ್ನಷ್ಟು ಪ್ರೇರಣೆ ನೀಡುವ ಜತೆಗೆ ರಾಷ್ಟ್ರ ಮತ್ತು ಅದರ ಸಂಸ್ಕೃತಿಯನ್ನು ಸದಾ ಮನಸ್ಸಿನಲ್ಲಿಟ್ಟುಕೊಂಡು ನನ್ನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸ್ಫೂರ್ತಿ ನೀಡುತ್ತದೆ.

ಹಲವು ಸಂಸ್ಥೆಗಳೊಂದಿಗಿನ ಅವರ ಒಡನಾಟವು ಅವರ ಸಮರ್ಪಣೆ, ಬದ್ಧತೆ ಮತ್ತು ನಿಸ್ವಾರ್ಥ ಸೇವೆಯ ಧ್ಯೋತಕವಾಗಿದೆ. ಅಂತಹ ಸಂಸ್ಥೆಗಳಲ್ಲಿ ಒಂದಾದ ಭಾರತೀಯ ವಿದ್ಯಾಭವನದಲ್ಲಿ ಇಂದು ಪಾಲ್ಗೊಳ್ಳುತ್ತಿರುವುದು ನನ್ನ ಅದೃಷ್ಟವೆನಿಸಿದೆ. ನಾಗಪುರದಲ್ಲಿರುವ ಈ ಸಂಸ್ಥೆಯಲ್ಲಿ, ಈ ಯಶಸ್ಸಿನ ಕಥೆಯಿಂದ ನಾನು ಭಾವುಕನಾಗಿದ್ದೆ. ಬಹಳ ಕಡಿಮೆ ಸಮಯದಲ್ಲಿ ಇಲ್ಲೊಂದು ಭವ್ಯ ಭವನ ನಿರ್ಮಾಣವಾಗಲಿದೆ ಎಂಬ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ! ಇಲ್ಲಿ ತಲೆಯೆತ್ತಲಿರುವ ಭವನವು ಭಾರತೀಯ ವಿದ್ಯಾ ಭವನದ ಸಂಸ್ಕೃತಿ, ನೀತಿಗೆ ಪೂರಕವಾಗಿರಲಿದೆ ಎಂಬುದು ಗಮನಾರ್ಹ.

ನಿಮ್ಮ ನಗುವಿನ ಹಿಂದೆ ಒಬ್ಬ ಉಕ್ಕಿನ ಮನುಷ್ಯ ಇದ್ದಾನೆ. ಸೋಮನಾಥ ದೇವಾಲಯದ ಬಗ್ಗೆ ನೀವು ಇಂದು ಏನು ಹೇಳಿದ್ದೀರೋ, ಐತಿಹಾಸಿಕ ವಿವರಗಳನ್ನು ಹಂಚಿಕೊಂಡಿದ್ದೀರೋ,  ಪ್ರತಿಯೊಬ್ಬ ಭಾರತೀಯನೂ ಈ ದಿನವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಮಾತು, ವಿವರಗಳು ಪ್ರತಿಯೊಬ್ಬ ಭಾರತೀಯನ ಹೃದಯವನ್ನು ತಟ್ಟಿದೆ. ನಮ್ಮ ಸಂಸ್ಕೃತಿಯಲ್ಲಿ ಯಾವುದೇ ಸ್ಥಾನವಿಲ್ಲದಂತಹ ಸೂಚನೆಗಳನ್ನು ರಾಷ್ಟ್ರಪತಿಗಳಿಗೆ ನೀಡಲಾಗುತ್ತಿದ್ದ ಕಾಲಘಟ್ಟವೊಂದಿತ್ತು. ʼಜಾತ್ಯಾತೀತತೆʼ (ಸೆಕ್ಯುಲರ್‌) ಪದವನ್ನು ವ್ಯಾಖ್ಯಾನಿಸಬೇಕಾದರೆ ಭಾರತಶಾಸ್ತ್ರದಲ್ಲಿ ಮುಳುಗೇಳಬೇಕಾಗುತ್ತದೆ. ಇದಕ್ಕೆ ವಿದೇಶಿ ಶಿಕ್ಷಣ ಕೆಲಸಕ್ಕೆ ಬರುವುದಿಲ್ಲ. ಈ ಅಂಗಳದಲ್ಲಿ ಅಂತಹ ಉದಾತ್ತ ಕಾರ್ಯ ನಡೆಯುತ್ತಿದೆ. ಇದು ನಿಮಗೆ ಮತ್ತು ನಮಗೆಲ್ಲರಿಗೂ ಬಹಳ ಒಳ್ಳೆಯದೆನಿಸಿದೆ. ಏಕೆಂದರೆ ಇದು ದೆಹಲಿಯಲ್ಲಿ ನಡೆಯುತ್ತಿದ್ದು, ದೆಹಲಿಗೆ ಇದು ಅತ್ಯಂತ ಅಗತ್ಯವೆನಿಸಿದೆ. ಇದು ಹೆಚ್ಚು ಕಾಲ ದೆಹಲಿಯಲ್ಲಿ ವಾಸಿಸುವ ಮತ್ತು ಸರಕಾರ ಹಾಗೂ ಆಡಳಿತದ ಮೇಲೆ ಭಾರೀ ಪ್ರಭಾವ ಹೊಂದಿರುವ ಜನರಿಗೆ ಉಪಯುಕ್ತವೆನಿಸಿದೆ.

ಆತ್ಮೀಯ ಅತಿಥಿಗಳೇ, ಭಾರತೀಯ ವಿದ್ಯಾಭವನಕ್ಕೆ ಸಂಬಂಧಿಸಿದ ಒಂದು ಸಂಸ್ಥೆಗೆ ಅಡಿಪಾಯ ಹಾಕುವ ಗೌರವ, ಅವಕಾಶ ನನಗೆ ಒದಗಿ ಬರುತ್ತದೆ ಎಂಬುದಾಗಿ ನಾನು ಎಂದೂ ನನ್ನ ಜೀವನದಲ್ಲಿ ನಿರೀಕ್ಷಿಸಿರಲಿಲ್ಲ. ಅದು ಸಹ ಭಾರತಶಾಸ್ತ್ರಕ್ಕೆ ಸಂಬಂಧಪಟ್ಟ ಕಟ್ಟಡಕ್ಕೆ ಅಡಿಪಾಯ ಹಾಕಿರುವುದು ಸಂತಸ ತಂದಿದೆ. ನಂದಲಾಲ್ ನವಾಲ್ ಸೆಂಟರ್ ಫಾರ್ ಇಂಡೋಲಜಿ ಕೇಂದ್ರವು ನಮ್ಮನ್ನು ಬಹಳ ದೂರ ಕರೆದೊಯ್ಯಲಿದೆ.

ಇದು ಸೂಕ್ತ ಸಂದರ್ಭವಾಗಿದ್ದು, ಪುರೋಹಿತ್‌ ಅವರು ಈಗಾಗಲೇ ಇದಕ್ಕಾಗಿ ಕಾಯುತ್ತಿದ್ದಾರೆ. ಭಾರತೀಯ ವಿದ್ಯಾಭವನ ಮತ್ತು ಅದಕ್ಕೆ ದೂರದೃಷ್ಟಿ ಚಿಂತನೆಯನ್ನು ರೂಪಿಸಿದ ಸಂಸ್ಥಾಪಕ ಡಾ.ಕೆ.ಎಂ. ಮುನ್ಷಿ ಅವರಿಗೆ ನನ್ನ ಗೌರವಗಳನ್ನು ಸಲ್ಲಿಸುತ್ತೇನೆ. ಭಾರತೀಯ ಸಂಸ್ಕೃತಿ ಮತ್ತು ಜ್ಞಾನ ವ್ಯವಸ್ಥೆಗಳನ್ನು ಸಂರಕ್ಷಿಸುವಲ್ಲಿ, ಉತ್ತೇಜಿಸುವ ಉದ್ದೇಶದೊಂದಿಗೆ ಭವನ ಕಾರ್ಯ ನಿರ್ವಹಿಸುತ್ತಿದೆ. 

ಅದು ಬಹಳ ಸುಲಭವಾಗಿರಲಿಲ್ಲ. ಏಕೆಂದರೆ ಆಗ ಜನರು ಪಾಶ್ಚಿಮಾತ್ಯ ವಿಚಾರಗಳಿಂದ ಬಹಳ ಆಕರ್ಷಿತರಾಗಿದ್ದರು. ವಿದೇಶಿ ಶಿಕ್ಷಣವನ್ನು ಬುದ್ಧಿವಂತಿಕೆ ಮತ್ತು ಜ್ಞಾನಕ್ಕೆ ಸಮಾನಾರ್ಥಕ ಎಂಬುದಾಗಿ ಪರಿಗಣಿಸಿದ್ದ ಕಾಲವಾಗಿತ್ತು. ನಮ್ಮ ಸುತ್ತಲು ಆಗ ಆ ರೀತಿ ತಪ್ಪಾಗಿ ಭಾವಿಸಿದ್ದ ಜನರೇ ಹೆಚ್ಚಾಗಿದ್ದರು. ಅಂತಹ ಸಂದರ್ಭದಲ್ಲಿ ಮುನ್ಷಿ ಅವರು ಒಂದು ಚಿಂತನಾ ಪ್ರಕ್ರಿಯೆಗೆ ರೂಪ ನೀಡಿ ಸಾಕಾರಗೊಳಿಸಿದ್ದು, ಈಗ ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿ ಬೆಳೆದು ನಿಂತಿದೆ.

1938ರಲ್ಲಿ, ಅಂದಿನ ಸಮಕಾಲೀನ ಸನ್ನಿವೇಶವನ್ನು ಅರ್ಥ ಮಾಡಿಕೊಂಡು ಪ್ರತಿಕೂಲ ವಾತಾವರಣ, ಪ್ರದೇಶವಿದ್ದ ಕಾರಣ ಈ ಉಪಕ್ರಮವನ್ನು ತೆಗೆದುಕೊಳ್ಳಲಾಯಿತು. ನಿಜಕ್ಕೂ, ಆ ಮಹಾನ್ ವ್ಯಕ್ತಿ ಮತ್ತು ಅವರ ಸಹೋದ್ಯೋಗಿಗಳು ಕಲ್ಪಿಸಿಕೊಂಡಂತೆ, ಈ ಸಂಸ್ಥೆಯು ಶಿಕ್ಷಣ, ಸಂಸ್ಕೃತಿ ಮತ್ತು ಕಲೆಗಳ ಕ್ಷೇತ್ರದಲ್ಲಿ ಒಂದು ಪ್ರವರ್ತಕ ಸಂಸ್ಥೆ ಮತ್ತು ದಾರಿದೀಪವಾಗಿ ರೂಪುಗೊಂಡಿದೆ. ಡಾ. ಮುನ್ಷಿ ಅವರು ಒಬ್ಬ ರಾಜಕಾರಣಿ, ಬರಹಗಾರ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿ, ಭಾರತದ ಅಪ್ರತಿಮ ಪರಂಪರೆ ಮತ್ತು ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು ತಮ್ಮನ್ನು ತಾವು ಸಮರ್ಪಿಸಿಕೊಂಡವರು. ಸೋಮನಾಥ ಅದಕ್ಕೆ ಒಂದು ಉದಾಹರಣೆಯಾಗಿದೆ.

ಅವರು ಭಾರತೀಯ ಸಂಪ್ರದಾಯಗಳನ್ನು ಆಧುನಿಕತೆಯೊಂದಿಗೆ ವಿಲೀನಗೊಳಿಸಿ ಪರಂಪರೆಯನ್ನು ರಕ್ಷಿಸಿದರು. ಆದರೆ ಆಡಳಿತದಲ್ಲಿ ಇತರರು ಪಾಶ್ಚಿಮಾತ್ಯ ಸಿದ್ಧಾಂತಗಳನ್ನು ಬೆಂಬಲಿಸಿದರು. ಸೋಮನಾಥ ದೇವಾಲಯದಲ್ಲಿ ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರ ಉಪಸ್ಥಿತಿಯಿಂದ ಅವರ ಚಿಂತನಾ ಪ್ರಕ್ರಿಯೆಯು ನೆಲೆಗೊಂಡಾಗ, ಭಾರತದ ಪ್ರಧಾನಿಯಾಗಿದ್ದವರಿಗೆ ಡಾ. ಮುನ್ಷಿ ಬದ್ಧತೆಯ ತೀವ್ರತೆ ಸಿಕ್ಕಿರಬೇಕು ಎಂದು ನಾನು ಖಚಿತವಾಗಿ ಹೇಳಬಲ್ಲೆ.

ಶಾಸ್ತ್ರೀಯ ಭಾಷೆಗಳಿಗೆ ಉತ್ತೇಜನ, ಪ್ರಾಚೀನ ಗ್ರಂಥಗಳ ಪ್ರಕಟಣೆ  ಮತ್ತು ಭಾರತದ ಪರಂಪರೆಯಲ್ಲಿ ಏಕತೆಯ ಭಾವವನ್ನು ಬೆಳೆಸುವಲ್ಲಿ ಭಾರತೀಯ ವಿದ್ಯಾಭವನವು ಕೈಗೊಂಡ ಪ್ರಯತ್ನಗಳು ಭಾರತಶಾಸ್ತ್ರದ ಚೈತನ್ಯವನ್ನು ಪೋಷಿಸುವಲ್ಲಿ ಮತ್ತು ಅದನ್ನು ಜೀವಂತವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಸ್ನೇಹಿತರೇ, ಗೌರವಾನ್ವಿತ ಸಭಿಕರೇ, ನಮ್ಮ ಪರಂಪರೆ ಅಭಿವೃದ್ಧಿ ಹೊಂದುತ್ತದೆ ಮತ್ತು ಅರಳುತ್ತದೆ ಎಂದು ಖಚಿತಪಡಿಸಿಕೊಳ್ಳುವ ಕಾಲ ಬಂದಿದೆ. ಇದಕ್ಕಿಂತ ಹೆಚ್ಚು ಸಕಾಲ ಎಂಬುದು ಇನ್ನೊಂದಿಲ್ಲ.

ಗೌರವಾನ್ವಿತ ಸಭಿಕರೇ, ಈ ದಿನವು ನಂದಲಾಲ್ ನುವಾಲ್ ಸೆಂಟರ್ ಫಾರ್ ಇಂಡೋಲಜಿ ಕೇಂದ್ರಕ್ಕೆ ಅಡಿಗಲ್ಲು ಹಾಕುವುದು ಎಂಬುದಕ್ಕಿಂತಲೂ ಹೆಚ್ಚು ಮುಖ್ಯವಾಗಿದೆ. ಒಂದರ್ಥದಲ್ಲಿ, ಇದು ಸಹಸ್ರಾರು ವರ್ಷಗಳಿಂದ ಭಾರತವನ್ನು ವ್ಯಾಖ್ಯಾನಿಸಿರುವ ಆಳವಾದ ಬೌದ್ಧಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮರುಶೋಧಿಸಲು, ಪುನರುಚ್ಚರಿಸಲು, ಪುನರುಜ್ಜೀವನಗೊಳಿಸಲು ಒಂದು ಪರಿವರ್ತನಾಶೀಲ ಪ್ರಯಾಣದ ಬೀಜಮಂತ್ರವಾಗಿದೆ. 5,000 ವರ್ಷಕ್ಕಿಂತಲೂ ಹೆಚ್ಚು ಕಾಲ, ಜಗತ್ತು ಈಗ ಗುರುತಿಸುತ್ತಿರುವ ಒಂದು ಕಾರ್ಯವಿಧಾನದ ಮೇಲೆ ನಾವು ಕೆಲಸ ಮಾಡುತ್ತಿದ್ದೇವೆ.  ಅದರ ಬಗ್ಗೆ ನಮಗೆ ತಿಳಿದಿರಬೇಕು. ಲಕ್ಷಾಂತರ ಜನರು ಅಂತಹ ಉಪಕ್ರಮಗಳನ್ನು ಸಮಾಧಾನಕರವಾಗಿ ಪೂಜಿಸುತ್ತಾರೆ, ಧಿಕ್ಕರಿಸುತ್ತಾರೆ, ಹೆಮ್ಮೆ ಪಡುತ್ತಾರೆ.  ಆದರೆ ಅದನ್ನು ತೀವ್ರವಾಗಿ ವಿರೋಧಿಸುವ ಮತ್ತು ಅವಹೇಳನ ಮಾಡಲು ಪ್ರಯತ್ನಿಸುವ ಒಂದು ಸಣ್ಣ ವರ್ಗವೂ ಇದೆ.

ನಮ್ಮ ಸಂಸ್ಕೃತಿ, ಅದರ ಪರಂಪರೆಯ ಬಗ್ಗೆ ನಮ್ಮ ಉತ್ಸಾಹವು ಭಾರತದಲ್ಲಷ್ಟೇ ಕಂಡುಬರುವ ಈ ವಿಶಿಷ್ಟ ಸಂಪತ್ತನ್ನು ನಿರಂತರವಾಗಿ ಪೋಷಿಸುವ ಧ್ಯೇಯ ಮತ್ತು ಉತ್ಸಾಹದಿಂದ ನಮ್ಮನ್ನು ಸದಾ ಪ್ರೇರೇಪಿಸಬೇಕು. ಸ್ನೇಹಿತರೇ, ಈ ಕೇಂದ್ರವು ಕನಿಷ್ಠ ವಿರೋಧದ ಹೊರತಾಗಿಯೂ ಭಾರತದ ಸಹಸ್ರಮಾನದ ಪರಂಪರೆಯನ್ನು ಮರುಶೋಧಿಸಲು ರೂಪಾಂತರವನ್ನು ಸೂಚಿಸುತ್ತದೆ. ಒಂದು ನಾಗರಿಕತೆಯು ಸ್ಥಳೀಯ ಭೂಮಿಗಳ ಮೂಲಕ ತನ್ನ ಹಳೆಯ ಬೇರುಗಳನ್ನು ಮರುಶೋಧಿಸಿದಾಗ, ಅದು ಬದುಕುಳಿಯುವುದು ಮಾತ್ರವಲ್ಲದೆ, ಪ್ರಪಂಚದ ಭವಿಷ್ಯವನ್ನು ಬೆಳಗಿಸುತ್ತದೆ.

ನಾವು ಒಂದು ರಾಷ್ಟ್ರವಾಗಿ ವಿಶ್ವ ಶಾಂತಿ ಮತ್ತು ಸಾಮರಸ್ಯಕ್ಕೆ ಕೊಡುಗೆ ನೀಡುವ ಮನೋಭಾವದಲ್ಲಿದ್ದೇವೆ. ಈ ರಾಷ್ಟ್ರವು ಎಲ್ಲರ ಯೋಗಕ್ಷೇಮಕ್ಕಾಗಿ ಅನನ್ಯವಾಗಿ ನಿಂತಿದೆ. ʼವಸುಧೈವ ಕುಟುಂಬಕಂʼ
ನಲ್ಲಿ ಆವರಿಸಲ್ಪಟ್ಟಿದೆ. ಈ ಶಂಕುಸ್ಥಾಪನೆ ಸಮಾರಂಭವು ಪಠ್ಯಗಳು ಮತ್ತು ಸಂಪ್ರದಾಯಗಳಲ್ಲಿ ಜ್ಞಾನವನ್ನು ಸಂರಕ್ಷಿಸುವ ನಮ್ಮ ಸಂಕಲ್ಪ ಮತ್ತು ನಮ್ಮ ಪರಮೋಚ್ಛ ಸಂಕಲ್ಪವನ್ನು ತೋರಿಸುತ್ತದೆ.

ಭಾರತಶಾಸ್ತ್ರವು ಸಮಕಾಲೀನ ಪ್ರಸ್ತುತತೆ ಹಾಗೂ ಆಳವಾದ ಅರ್ಥಗಳನ್ನು ಹೊಂದಿರುವ ಕಾಲಾತೀತ ಜ್ಞಾನದ ಆಗರವೆನಿಸಿದೆ. ಅದರ ಬಗ್ಗೆ ಯೋಚಿಸಲು ನನಗೆ ಗಂಟೆಗಳ ಸಮಯ ಬೇಕಾಗುತ್ತದೆ. ಇಂದು ನಾವು ಎದುರಿಸುತ್ತಿರುವ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಮತ್ತು ನಾವು ಭಾರತಶಾಸ್ತ್ರವನ್ನು ಮನಸ್ಸಿನಲ್ಲಿಟ್ಟುಕೊಂಡ ನಂತರ ಪರಿಹಾರವನ್ನು ವೇಗವಾಗಿ ಕಂಡುಕೊಳ್ಳಬಹುದಾಗಿದೆ.

ಇದು ಅಸ್ತಿತ್ವ, ಪರಿಸರ, ಅಪಾಯ ಒಂದೇ. ನೀತಿಶಾಸ್ತ್ರದಲ್ಲಿ ಮಾನದಂಡಗಳ ಕುಸಿತ, ಆಡಳಿತ ಎಂದರೆ ಅದು ಜನ-ಕೇಂದ್ರಿತವಾಗಿರಬೇಕು, ಆರೋಗ್ಯ ಎಂದರೆ  ಅದು ಸಾರ್ವತ್ರಿಕವಾಗಿರಬೇಕು ಮತ್ತು ಪರಿಸರ ಸಂರಕ್ಷಣೆ ಮುಖ್ಯವಾಗಿದ್ದು, ನಮಗೆ ಮತ್ತೊಂದು ಗ್ರಹವಿಲ್ಲವೆಂಬುದು ನಮಗೆಲ್ಲಾ ತಿಳಿದಿದೆ ಎಂಬ ಮೂಲಭೂತ ಪ್ರಶ್ನೆಗಳನ್ನು ಪರಿಹರಿಸುತ್ತದೆ.

ಗೌರವಾನ್ವಿತ ಸಭಿಕರೇ, ಭಾರತವು ಈಗ ಉದಾಂತಪುರಿ, ತಕ್ಷಶಿಲಾ, ವಿಕ್ರಮಶಿಲಾ, ಸೋಮಪುರ, ನಳಂದ, ವಲಭಿ ಮತ್ತು ಇನ್ನೂ ಅನೇಕರಿಂದ ಸೆಳೆಯಲ್ಪಟ್ಟ ತನ್ನ ವೈಭವವನ್ನು ಮರಳಿ ಪಡೆಯುವ ಹಾದಿಯಲ್ಲಿದ್ದು, ಆರೋಗ್ಯಕರವೆನಿಸಿದೆ. ನಮ್ಮ ಆಲೋಚನೆಗಳನ್ನು ಪುನರ್ವಿಮರ್ಶಿಸಲು, ನಮ್ಮನ್ನು ನಾವು ಪುನರ್ ಸಮರ್ಪಿಸಿಕೊಳ್ಳಲು ಸಕಾಲ ಬಂದಿದೆ. ನಮ್ಮ ದೇಶದ ವಿವಿಧ ಭಾಗಗಳಲ್ಲಿ ಇಂತಹ ಸಂಸ್ಥೆಗಳನ್ನು ಹೊಂದುವ ಮೂಲಕ ಈಗ ಆ ಪ್ರಭಾ ವಲಯವನ್ನು ಬೆಳಗಿಸೋಣ. ಈ ಕೇಂದ್ರವು ಆ ದಿಕ್ಕಿನಲ್ಲಿ ಒಂದು ಭರವಸೆಯ ಹೆಜ್ಜೆಯಾಗಿದೆ.

ಭಾರತದ ಗಣಿತದ ಕೊಡುಗೆಗಳಾದ ಶೂನ್ಯ, ಬೀಜಗಣಿತ, ರೇಖಾಗಣಿತ ಮತ್ತು ತ್ರಿಕೋನಮಿತಿಯ ಬಗ್ಗೆ ಹೆಮ್ಮೆ ಪಡಬೇಕು ಎಂದು ನಾನು ನಮ್ಮ ಯುವಕರಲ್ಲಿ ವಿನಂತಿಸುತ್ತೇನೆ. ನಮ್ಮ ಸಂಪತ್ತು, ಚಿನ್ನದ ಗಣಿ, ಚರಕ ಸಂಹಿತ,  ಸುಶ್ರುತ ಸಂಹಿತ, ಪ್ರೇರಿತ ಸಮಗ್ರ ಆರೋಗ್ಯ ರಕ್ಷಣೆ ಮತ್ತು ಸುಸ್ಥಿರ ಜೀವನವನ್ನು ನಾವು ಪ್ರತಿಬಿಂಬಿಸಿದಾಗ, ನಮ್ಮ ಆರೋಗ್ಯ ಕಾಳಜಿಗಳ ವಿಷಯಕ್ಕೆ ಬಂದಾಗ ನಮ್ಮ ಅಥರ್ವವೇದವು ವಿಶ್ವಕೋಶವೆನಿಸಿದೆ. ವೇದಾಂತ, ಬೌದ್ಧಧರ್ಮ, ಜೈನ ಧರ್ಮ ಭಾರತದ ಅಂತರ್ಗತ ತಾತ್ವಿಕ ಸಂಪ್ರದಾಯಗಳನ್ನು ಪ್ರದರ್ಶಿಸುತ್ತದೆ. ಎಂತಹ ವಿಡಂಭನೆ!

ಸಂಕುಚಿತ ಮನೋಭಾವದವರು ಒಳಗೊಳ್ಳುವಿಕೆಯ ಬಗ್ಗೆ ನಮಗೇ ಅರಿವು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ವೇದಾಂತ, ಬೌದ್ಧಧರ್ಮ, ಜೈನಧರ್ಮ ಮತ್ತು ಇತರ ತಾತ್ವಿಕ ಚಿಂತನಾ ಶಾಲೆಗಳು ಸದಾ ಸಂವಾದ ಮತ್ತು ಸಹಬಾಳ್ವೆಯನ್ನು ಪ್ರೋತ್ಸಾಹಿಸಿವೆ. ಇಂದಿನ ಧ್ರುವೀಕೃತ ಜಗತ್ತಿನಲ್ಲಿ ಅಪಾರ ಮೌಲ್ಯವನ್ನು ಹೊಂದಿರುವ ತತ್ವಗಳೆನಿಸಿವೆ. ಇಂಡೋಲಜಿಯು ನಮ್ಮೆಲ್ಲರನ್ನೂ ವಸಾಹತುಶಾಹಿಯಿಂದ ಮುಕ್ತಗೊಳಿಸಲಿದ್ದು, ನಾನು ವ್ಯವಸ್ಥೆಯ ಭಾಗವಾಗಿರುತ್ತೇನೆ.

ನಾವು ದಂಡ ವಿಧಾನದಿಂದ ನ್ಯಾಯ ವಿಧಾನಕ್ಕೆ ಪ್ರಯಾಣಿಸಿದಾಗ ವಸಾಹತುಶಾಹಿ ಪರಂಪರೆ, ವಸಾಹತುಶಾಹಿ ಮನಸ್ಥಿತಿಯಿಂದ ನಮ್ಮನ್ನು ನಾವು ಮುಕ್ತಗೊಳಿಸಿಕೊಂಡೆವು. ಅದು ಚಿಕ್ಕದಾಗಿದ್ದರೂ ಸಾರಿಸದ ಸಂದೇಶವು ದೊಡ್ಡದಾಗಿತ್ತು.

ಈ ದೇಶದ ಬಜೆಟ್ ಈಗ ಬೆಳಿಗ್ಗೆ 11 ಗಂಟೆಗೆ ಇಡೀ ದೇಶಕ್ಕೆ ಘೋಷಣೆಯಾಗುತ್ತದೆ. ಅದು ಇತರರಿಗೆ ಹೊಂದಿಕೆಯಾಗಿರುವ ಸಮಯವಾಗಿರುವುದಿಲ್ಲ. ನಮ್ಮ ಇತಿಹಾಸದ ಮೊದಲ ಕರಡು ವಸಾಹತುಶಾಹಿಗಳ ವಿಕೃತ ದೃಷ್ಟಿಕೋನದ ಮೂಲಕ ಬಂತು. ಸಾವಿರಾರು ಜನರು ಸ್ವಾತಂತ್ರ್ಯ ಚಳವಳಿಗೆ ಕೊಡುಗೆ ನೀಡಿದ್ದು, ಅವರು ಸರ್ವೋಚ್ಚ ತ್ಯಾಗ ಮಾಡಿದರೂ ಇತಿಹಾಸವನ್ನು ದಾಖಲಿಸುವ ಪ್ರಕ್ರಿಯೆಯು ಸಂಕುಚಿತ ಹಾಗೂ ಪೂರ್ವಾಗ್ರಹದಿಂದ ಕೂಡಿತ್ತು. ಕೆಲವರನ್ನಷ್ಟೇ ಉತ್ತೇಜಿಸಲು ಸೀಮಿತವಾಗಿತ್ತು. ಸ್ವಾತಂತ್ರ್ಯದ ನಂತರವೂ ಇದು ಬೇರೂರಲು ಅವಕಾಶ ನೀಡಲಾಯಿತು.

ಗೌರವಾನ್ವಿತ ಸಭಿಕರೇ,  ನಿಮಗೆ ತಿಳಿದಿರುವಂತೆ ಜಗತ್ತಿನ ಯಾವುದೇ ದೇಶವು ಇತರರು ಬರೆದ ಇತಿಹಾಸ ಮತ್ತು ಸಂಪ್ರದಾಯವನ್ನು ಅಧ್ಯಯನ ಮಾಡಿ ವ್ಯಾಖ್ಯಾನಿಸುವ ಮೂಲಕ ಬೆಳೆದಿಲ್ಲ. ನಮ್ಮ ಇತಿಹಾಸದ ಮೊದಲ ಕರಡನ್ನು ವಸಾಹತುಶಾಹಿಗಳು ಬರೆದಿದ್ದಾರೆ ಎಂದು ಒಪ್ಪಿಕೊಳ್ಳಲು ನನಗೆ ತುಂಬಾ ನೋವಾಗುತ್ತದೆ. ಅವರು ಭಾರತದ ಪಠ್ಯಗಳು ಮತ್ತು ಸಂಪ್ರದಾಯಗಳನ್ನು ನೋಡುವ ಬಗ್ಗೆ ಬಹಳ ಸಂಕುಚಿತ ದೃಷ್ಟಿಕೋನ ಹೊಂದಿದ್ದರು. ತಮ್ಮ ಪ್ರಾಣವನ್ನೇ ಅರ್ಪಿಸಿದ ನಮ್ಮ ಜನಪ್ರಿಯ ವ್ಯಕ್ತಿಗಳನ್ನು ಐತಿಹಾಸಿಕ ಉಲ್ಲೇಖದಿಂದ ದೂರವಿಡುವುದು ಅವರ ಒಂದು ಧ್ಯೇಯವಾಗಿತ್ತು.

ವಸಾಹತುಶಾಹಿ ಆಳ್ವಿಕೆಯು ನಮ್ಮ ಶಿಕ್ಷಣ ವ್ಯವಸ್ಥೆಯ ಮೇಲೆ ಬಾಹ್ಯ ಚೌಕಟ್ಟನ್ನು ಹೇರಿದ್ದು ಮಾತ್ರವಲ್ಲದೆ, ಅವರು ಸ್ಥಳೀಯ ಸಂಪ್ರದಾಯಗಳನ್ನು ಅವೈಜ್ಞಾನಿಕ ಮತ್ತು ಅಪ್ರಸ್ತುತ ಎಂದು ತಿರಸ್ಕಾರದಿಂದ ತಳ್ಳಿಹಾಕಿದರು. ಅದು ಅವರ ಮಾನಸಿಕ ಅಂತರ, ಸಂಕುಚಿತ ಚಿಂತನೆ. ನಮ್ಮ ಪ್ರಕ್ರಿಯೆಯಲ್ಲಿ ಜ್ಞಾನ, ವಿಜ್ಞಾನ ಮತ್ತು ವೈಚಾರಿಕತೆಯ ಆಳವನ್ನು ಅವರು ಪ್ರಶಂಸಿಸಲೇ ಇಲ್ಲ. ಇದು ಭಾರತೀಯರನ್ನು ಅವರ ಬೌದ್ಧಿಕ ಬೇರುಗಳಿಂದ ದೂರವಿರಿಸಿದ್ದು ಮಾತ್ರವಲ್ಲದೆ, ಸಾವಿರಾರು ವರ್ಷಗಳಿಂದ ಪ್ರವರ್ಧಮಾನಕ್ಕೆ ಬಂದಿರುವ ಜ್ಞಾನ ವ್ಯವಸ್ಥೆಯ ಸಹ ವಿಕಾಸಕ್ಕೂ ಸಹ ಅಡ್ಡಿಪಡಿಸಿತು.

ಸಾವಿರಾರು ವರ್ಷಗಳ ಕಠಿಣ ಪರಿಶ್ರಮ, ಜ್ಞಾನ ಮತ್ತು ಬುದ್ಧಿವಂತಿಕೆಯ ಚಿನ್ನದಂತಹ ಗಣಿಗಳು ಕಡೆಗಣಿಸಲ್ಪಟ್ಟವು. ಸ್ವಾತಂತ್ರ್ಯಾ ನಂತರ ನಾವು ಇತಿಹಾಸದ ಆ ಹಂತದಲ್ಲಿದ್ದೇವೆ. ನಾನು ಹಾಗೆ ಹೇಳಿದರೆ, ಜಗತ್ತಿನ ಯಾವುದೇ ನಾಗರಿಕತೆಯು ನಮ್ಮ ಮೇಲಾದಷ್ಟು ಒತ್ತಡ, ವಿರೂಪ, ಪುರಾಣಗಳು ಮತ್ತು ಸಂಪೂರ್ಣ ಸುಳ್ಳುಗಳು ಹಾಗೂ ಅಸತ್ಯಕ್ಕೆಒಳಗಾಗಿಲ್ಲ. ಇದು ಊಹಿಸಲಾಗದ ಪ್ರಮಾಣದಲ್ಲಿ ಒಂದು ದುರಂತ ಮತ್ತು ವಿಡಂಬನೆಯಾಗಿದೆ. ಭಾರತದ ಸಾಮೂಹಿಕ ಪ್ರಜ್ಞೆಯ 5000 ವರ್ಷಗಳ ವಿಕಾಸವನ್ನು ಇಲ್ಲವಾಗಿಸುವ ಪ್ರಯತ್ನ ನಡೆದಿತ್ತು. ಅಂತಹ ಕೇಂದ್ರಗಳು ಈಗ ನರ ಕೇಂದ್ರಗಳಾಗಿ, ಸಕಾರಾತ್ಮಕ ಬದಲಾವಣೆಯ ಕೇಂದ್ರಬಿಂದುಗಳಾಗಿರುತ್ತವೆ.

ಸ್ವಾತಂತ್ರ್ಯಾನಂತರ, ರಾಷ್ಟ್ರೀಯ ಇತಿಹಾಸದ ಒಂದು ಸಣ್ಣ ಅವಧಿಯ ನಂತರ, ಭಾರತದ ಭೂತಕಾಲವನ್ನು ಓದಲು ಮತ್ತು ಅರ್ಥಮಾಡಿಕೊಳ್ಳಲು ಯುರೋಪಿಯನ್ ಸಾಮಾಜಿಕ ಸಿದ್ಧಾಂತಿಗಳನ್ನು ಬಳಸಿದ ಇಂಡೋಲಜಿಸ್ಟ್‌ಗಳು ಮತ್ತು ಇತಿಹಾಸಕಾರರ ಗುಂಪೊಂದು ನಮಗೆ ಮತ್ತೆ ಸಿಕ್ಕಿತು. ವಿದ್ಯಾರ್ಥಿಯಾಗಿ, ನಾನು ಇತಿಹಾಸವನ್ನು ಪರಿಶೀಲಿಸಲು ಬಯಸಿದಾಗ, ಒಬ್ಬ ಲೇಖಕರು ಬಂದರು. ಸಂಜೆ ಹೊತ್ತು ತಡವಾಗಿ ನೀಡಲಾಗುತ್ತಿರುವ ಆಹಾರವು ಒಳ್ಳೆಯದಲ್ಲ, ಬೌದ್ಧಿಕ ಹೀರಿಕೊಳ್ಳುವಿಕೆಗೂ ಅದು ಒಳ್ಳೆಯದಲ್ಲ ಎಂದು ನನಗೆ ತಿಳಿದಿದೆ. ಆದರೆ ಅಂತಹ ಲೇಖಕರನ್ನು, ನಾನು ಹೆಸರಿಸಲು ಬಯಸುವುದಿಲ್ಲ. ಆದರೆ ಅವರು ಅಂದು ಆಡಿದ ಮಾತುಗಳನ್ನು ಸಂಭ್ರಮಿಸಿ, ಪ್ರಶಂಸಿದಸಿ ಶ್ಲಾಘಿಸಲಾಯಿತು. ಅವರಲ್ಲಿ ಕೆಲವರಿಗೆ ಅವರ ಶೈಕ್ಷಣಿಕ ಪರಿಣತಿ, ಅರ್ಹತೆ ಮೀರಿ ಇತರೆ ಕಾರಣಕ್ಕೆ ಬಡ್ತಿ ನೀಡಲಾಯಿತು. ಅವರು ನಮ್ಮ ಶಾಸ್ತ್ರೀಯ ಭಾಷೆಗಳು, ಸಂಸ್ಕೃತ, ಪ್ರಾಕೃತ ಮತ್ತು ಇತರ ಒಂಬತ್ತು ಭಾಷೆಗಳಿಂದ ದೂರವಿದ್ದರು, ಇವುಗಳನ್ನು ನಾವು ಇಲ್ಲಿಯವರೆಗೆ 11 ಎಂದು ಘೋಷಿಸಿದ್ದೇವೆ.

ಅವರ ದುಷ್ಟ ಪ್ರಯತ್ನ, ಹಾನಿಕಾರಕ ನಿರೂಪಣೆಯ ಪರಿಣಾಮವಾಗಿ  ಪಶ್ಚಿಮದ ನೆರವಿನೊಂದಿಗೆ ರೆಕ್ಕೆಗಳನ್ನು ನೀಡಲಾಯಿತು. ಸೇನಾ ಸಂಸ್ಥೆಯೂ ಅವರು ನಮಗಾಗಿ ಕೆಲಸ ಮಾಡದ ಆದರೆ ನನ್ನನ್ನು ನಾಮಕಾವಸ್ಥೆಗೆ ಪ್ರತಿನಿಧಿಸುವುದಾಗಿ ಹೇಳಿಕೊಂಡ ಯೋಧರನ್ನು ರೂಪಿಸಿದವು. ಅವರು ವಸಾಹತುಶಾಹಿಯ ಶ್ರೇಷ್ಠತೆ, ವಸಾಹತುಶಾಹಿ ಚೌಕಟ್ಟುಗಳನ್ನು ಮಾತ್ರ ಪುನರುಚ್ಚರಿಸುತ್ತಾರೆ. ನಮ್ಮ ಜ್ಞಾನದ ಪ್ರಾಚೀನತೆ, ಗಣನೀಯ ಆಳ, ವಿಸ್ತಾರವನ್ನು ಅರಿತುಕೊಳ್ಳುವುದಿಲ್ಲ. ಹಾಗಾಗಿ ಗಂಗಾ ನದಿಯಲ್ಲಿ ಹಾವುಗಳಿವೆ ಎಂದು ಜನರು ಹೇಳಿದಾಗ, ನಾನು ನಂಬುತ್ತೇನೆ.

ಒಂದು ನಾಗರಿಕತೆಗೆ ತನ್ನನ್ನು ತಾನು ಅರ್ಥಮಾಡಿಕೊಳ್ಳಲು ಸ್ಥಳೀಯ ಪ್ರಜ್ಞೆ ಬೇಕು. ಮಗುವಿಗೆ ತಾಯಿಯ ಹಾಲು ಎಷ್ಟು ಬೇಕೋ ಅಷ್ಟು ಪಡೆಯುವಂತೆ  ಇತಿಹಾಸವನ್ನು ಹೊರಗುತ್ತಿಗೆ ನೀಡುವ ಪಾಪದಿಂದ ನಾವು ನಮ್ಮನ್ನು ಮುಕ್ತಗೊಳಿಸಿಕೊಳ್ಳಬೇಕು. ಈ ಕೇಂದ್ರವು ಅಂತಹ ಒಂದು ಹೆಜ್ಜೆಯಾಗಿದೆ. ನಾವು ಇತರರ ನಿರೂಪಣೆಯಲ್ಲಿ ಅಡಿಟಿಪ್ಪಣಿಗಳಾಗಿರುವುದನ್ನು ನಿಲ್ಲಿಸಿ ನಮ್ಮ ಪುನರುಜ್ಜೀವನದ ಲೇಖಕರಾದಾಗ ನಿಜವಾದ ವಸಾಹತುಶಾಹಿ ನಿರ್ಮೂಲನೆ ಕಾರ್ಯ ಶುರುವಾಗುತ್ತದೆ.

ಭಗವದ್ಗೀತೆ ಮತ್ತು ಅರ್ಥಶಾಸ್ತ್ರದಂತಹ ಶಾಸ್ತ್ರೀಯ ಪಠ್ಯಗಳನ್ನು ಮುಖ್ಯವಾಹಿನಿಯ ಶಿಕ್ಷಣಕ್ಕೆ ಸಂಯೋಜಿಸುವುದರೊಂದಿಗೆ ನಮ್ಮ ಪರಂಪರೆಯ ಪುನರುತ್ಥಾನ ಪ್ರಾರಂಭವಾಗುತ್ತದೆ. ಏಕೆ ಆಗಬಾರದು? ಈ ಗ್ರಂಥಗಳ, ಅವುಗಳ ಪಠ್ಯಗಳ ಮೌಲ್ಯವನ್ನು ಅಂದಾಜಿಸಬೇಕು. ಕೇವಲ ಓದುವುದು, ಅರ್ಥಮಾಡಿಕೊಳ್ಳುವ ಮೂಲಕ ನೀವು ಪಡೆಯುವ ಜ್ಞಾನದ ಉದಯವು ನಿಮ್ಮನ್ನು ವಿಭಿನ್ನವಾದ ಭವ್ಯವಾದ ಅಚ್ಚಿನಲ್ಲಿ ರೂಪುಗೊಳ್ಳುತ್ತದೆ.

ನಮ್ಮ ಸಂಸ್ಕೃತಿಯ ಪುನರುಜ್ಜೀವನಕ್ಕೆ ನಮ್ಮ ಶಾಸ್ತ್ರೀಯ ಭಾಷೆಗಳ ಮೇಲೆ ಆದ್ಯ ಗಮನದ ಅಗತ್ಯವಿದೆ ಮತ್ತು ಅದೃಷ್ಟವಶಾತ್ ಆ ಸಂಖ್ಯೆ ಈಗ 11 ಆಗಿದೆ. ಶಾಸ್ತ್ರೀಯ ಭಾಷೆಗಳ ಸರ್ಕಾರದ ಮಾನ್ಯತೆ ಮುಂದಿನ ದಾರಿಯ ನಿಲುವಾಗಿ ಒಂದು ಪ್ರಮುಖ ಹೆಜ್ಜೆಯನ್ನು ಸೂಚಿಸುತ್ತದೆ.

ಭಾರತದ ಪ್ರಾಚೀನ ಭಾಷೆಗಳು ಮತ್ತು ಅದರ ಸಾಹಿತ್ಯದ ಮೇಲಿನ ವಿಶೇಷ ಆದ್ಯತೆ ನೀಡುವುದರ ಜತೆಗೆ ನಮ್ಮಲ್ಲಿ ಸುಪ್ತವಾಗಿ ಇರುವುದನ್ನು ಪುನರುಜ್ಜೀವನಗೊಳಿಸುತ್ತದೆ ಮತ್ತು ನಮ್ಮ ಹಿಂದಿನ ದ್ವಾರಗಳನ್ನು ತೆರೆಯುತ್ತದೆ. ಈ ಕೇಂದ್ರವು ಹೊಂದಿರುವ ಮೂಲಸೌಕರ್ಯ, ಅದು ಹೊಂದಿರುವ ಸಮರ್ಪಿತ ಮಾನವ ಸಂಪನ್ಮೂಲದೊಂದಿಗೆ, ಮಹತ್ವದ ಬದಲಾವಣೆ ಮೂಲಕ ಚಿಂತನೆ- ಚರ್ಚೆಯ ದಿಕ್ಕನ್ನು ಬದಲಿಸಲಿದೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಆ ದೃಷ್ಟಿಕೋನದಿಂದ ಇದು ಒಂದು ಮಹತ್ವದ ಸಂದರ್ಭವಾಗಿದೆ. ಮೂರು ದಶಕಗಳಿಗೂ ಹೆಚ್ಚು ಕಾಲದ ನಂತರ ನಾವು ರಾಷ್ಟ್ರಕ್ಕಾಗಿ ಎದುರು ನೋಡುತ್ತಿರುವ ಕಟ್ಟಡವನ್ನು ಸೃಷ್ಟಿಸುವ ಹೊಸ ಮೈಲಿಗಲ್ಲು ಸೃಷ್ಟಿಯಾಗುವ ಜತೆಗೆ 2022ರ ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಸಾವಿರಾರು ಮಂದಿಯನ್ನು ರೂಪಿಸಬಹುದಾಗಿದೆ. ಅಲ್ಲಿ ನೀವು ಭಾರತೀಯ ಜ್ಞಾನ ವ್ಯವಸ್ಥೆಯ ಏಕೀಕೃತ ಸ್ವರೂಪ ಕಾಣಬಹುದಾಗಿದೆ.

ಗೌರವಾನ್ವಿತ ಸಭಿಕರೇ, ಈ ಕ್ಷಣವನ್ನು ಪೋಷಿಸಲು ಸರ್ಕಾರಿ ಚೌಕಟ್ಟುಗಳನ್ನು ಮೀರಿದ ಜವಾಬ್ದಾರಿಯ ಅಗತ್ಯವಿದೆ. ಅದಕ್ಕಾಗಿ ನಾವು ಸರ್ಕಾರವನ್ನೇ ಎದುರು ನೋಡಬಾರದು. ಪ್ರತಿಯೊಬ್ಬ ವ್ಯಕ್ತಿಯು ಕೊಡುಗೆ ನೀಡುವ ಸಾಮರ್ಥ್ಯವುಳ್ಳವರಾಗಿದ್ದು, ನಿಮ್ಮ ಪರಂಪರೆಯನ್ನು ಹೆಮ್ಮೆ ಮತ್ತು ಕುತೂಹಲದಿಂದ ಸ್ವೀಕರಿಸುವಂತೆ ನಾನು ದೇಶದ ಯುವಕರನ್ನು ಒತ್ತಾಯಿಸುತ್ತೇನೆ. ಪ್ರಪಂಚದ ಅನೇಕ ದೇಶಗಳು ನಮ್ಮಲ್ಲಿರುವ ಸಾಂಸ್ಕೃತಿಕ ಪರಂಪರೆಯನ್ನು ಪಡೆಯಲು ಸಾಧ್ಯವಿಲ್ಲದ ಕಾರಣಕ್ಕೆ ಯುವಜನತೆ ಹೆಮ್ಮೆ ಪಡಬೇಕು.

ಶಾಸ್ತ್ರೀಯ ಭಾಷೆಗಳನ್ನು ಕಲಿಯಿರಿ, ಪ್ರಾಚೀನ ಗ್ರಂಥಗಳನ್ನು ಅನ್ವೇಷಿಸಿ ಮತ್ತು ಈ ಜ್ಞಾನವನ್ನು ಜಾಗತಿಕ ಮಟ್ಟದ ಆಸಕ್ತರಿಗೆ ಲಭ್ಯವಾಗುವಂತೆ ಮಾಡಲು ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿ. ನಮ್ಮ ಯುವಕರು ಈ ಸವಾಲನ್ನು ಸ್ವೀಕರಿಸಿ, ಸಮರ್ಪಕವಾಗಿ ನಿಭಾಯಿಸಲು ಸಾಕಷ್ಟು ಸಮರ್ಥರಿದ್ದಾರೆ. ಅವರು ಒಮ್ಮೆ ಈ ಕಾರ್ಯ ಪ್ರಾರಂಭಿಸಿದರೆ, ಅವರು ಭಾವನಾತ್ಮಕವಾಗಿ ಮತ್ತು ಬೇರೆ ರೀತಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ.

ನಾವೆಲ್ಲಾ ಡಿಜಿಟಲ್ ಗ್ರಂಥಾಲಯವನ್ನು ಸೃಷ್ಟಿಸಿ ಪಠ್ಯಗಳನ್ನು ಅನುವಾದಿಸೋಣ, ಸಾಂಪ್ರದಾಯಿಕ ಬುದ್ಧಿವಂತಿಕೆಯು ಆಧುನಿಕ ವಿಚಾರಗಳೊಂದಿಗೆ ಸಂವಹನ ನಡೆಸಬಹುದಾದ ವೇದಿಕೆಗಳನ್ನು ಅಭಿವೃದ್ಧಿಪಡಿಸೋಣ. ವಾಸ್ತವವಾಗಿ, ಪ್ರತಿಯೊಂದು ಆಧುನಿಕ ಕಲ್ಪನೆಯನ್ನು ನಮ್ಮ ಧರ್ಮಗ್ರಂಥಗಳಲ್ಲಿ ಅಸ್ತಿತ್ವದಲ್ಲಿದ್ದ ಕಲ್ಪನೆಯಾಗಿ ಓದಬಹುದು. ನೆನಪಿರಲಿ, ನಾನು ಯುವಜನತೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ. ನೀವು ಈ ಪರಂಪರೆಯ ಕೇವಲ ಉತ್ತರಾಧಿಕಾರಿಗಳಲ್ಲ, ಕೇವಲ ದಾರಿದೀಪವಾಗುವುದಲ್ಲ, ಅದನ್ನು ಮತ್ತಷ್ಟು ಪೋಷಿಸಲು ಮತ್ತು ಅರಳಿಸಲು ನೀವು ಕೆಲಸ ಮಾಡಬೇಕು.

ಸಂಶೋಧಕರು ಮತ್ತು ಶಿಕ್ಷಣ ತಜ್ಞರು ತಮ್ಮ ಅಧ್ಯಯನಗಳಿಗೆ ಬಹುಶಿಸ್ತೀಯ ವಿಧಾನವನ್ನು ಅಳವಡಿಸಿಕೊಳ್ಳುವಂತೆ ನಾನು ನಿಮ್ಮನ್ನು ಉತ್ತೇಜಿಸುತ್ತೇನೆ. ಭಾರತೀಯ ಜ್ಞಾನದ ಶ್ರೀಮಂತಿಕೆ ಅದರ ಪರಸ್ಪರ ಸಂಬಂಧದಲ್ಲಿದೆ. ನಾವು ಪ್ರತ್ಯೇಕವಾಗಿ ಒಂದು ದೇಶವಲ್ಲ, ನಾವು ಇಡೀ ಜಗತ್ತನ್ನು ಒಂದಾಗಿ ತೆಗೆದುಕೊಳ್ಳುತ್ತೇವೆ. ಜಿ20 ಶೃಂಗಸಭೆಯು ಅದನ್ನು ಸಾಬೀತುಪಡಿಸಿತು. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ. ಭಾರತೀಯ ಜ್ಞಾನದ ಶ್ರೀಮಂತಿಕೆ ಅಂತರಸಂಪರ್ಕ, ಎಲ್ಲರ ಕಲ್ಯಾಣದಲ್ಲಿದೆ. ಉದಾಹರಣೆಗೆ ಯೋಗ, ಪ್ರಧಾನ ಮಂತ್ರಿಗಳು ವಿಶ್ವಸಂಸ್ಥೆಗೆ ಅಲ್ಪಾವಧಿಯಲ್ಲಿ ಮನವಿ ಮಾಡಿ ಕರೆ ನೀಡಿದರೂ ಅತಿ ಹೆಚ್ಚು ದೇಶಗಳು ಇದನ್ನು ಅಳವಡಿಸಿಕೊಳ್ಳಲು ಒಗ್ಗೂಡಿದವು. ಈಗ ಅದು ಪ್ರಪಂಚದಾದ್ಯಂತ ಜನರಿಗೆ ನೆರವಾಗುತ್ತಿದೆ.

ನಮ್ಮ ಭೂ ಶಾಸ್ತ್ರವು ಇಂದಿಗೂ ಪ್ರಸ್ತುತವಾಗಿರುವ ಆಡಳಿತ, ಅರ್ಥಶಾಸ್ತ್ರ ಮತ್ತು ರಾಜತಾಂತ್ರಿಕತೆಯ ಬಗ್ಗೆ ಒಳನೋಟಗಳನ್ನು ನೀಡುತ್ತದೆ. ಜನರು ಆಡಳಿತದ ಬಗ್ಗೆ ಅರಿತುಕೊಂಡರೆ, ಜನರು ಜಾಗರೂಕರಾಗಿದ್ದರೆ, ನನ್ನ ಮಾತನ್ನು ನಂಬಿ,  ಪರಿಸರ ವ್ಯವಸ್ಥೆಯು ಎಷ್ಟು ವಿಕಸನಗೊಳ್ಳುತ್ತದೆ ಎಂದರೆ ಅಧಿಕಾರದಲ್ಲಿರುವವರು ಸ್ವಯಂಪ್ರೇರಿತರಾಗಿ ಪ್ರಭಾವಿತರಾಗುತ್ತಾರೆ. ಪ್ರಜಾಪ್ರಭುತ್ವಕ್ಕೆ ಅದರ ನೈಜ ಜೀವನವನ್ನು ನೀಡುವುದು ಜನರ ಅರಿವು, ಆದರೆ ಜನರು ಜಾಗೃತರಾಗದಿದ್ದರೆ ಮತ್ತು ಆಡಳಿತಕ್ಕೆ ಸಜ್ಜಾಗದಿದ್ದರೆ, ಆಡಳಿತವು ವಿಭಿನ್ನ ರೀತಿಯದ್ದಾಗಿರುತ್ತದೆ. ಆದರೆ ಆಡಳಿತವು ಏನನ್ನು ಪ್ರತಿನಿಧಿಸುತ್ತದೆ ಎಂಬುದರ ಕುರಿತು ನಮ್ಮ ಪ್ರಾಚೀನ ಕಾರ್ಯವಿಧಾನಕ್ಕೆ ನೀವು ಸಂಪೂರ್ಣವಾಗಿ ಒಡ್ಡಿಕೊಂಡಾಗಷ್ಟೇ ನೀವು ಬಯಸುವ ಮತ್ತು ಅರ್ಹರಾಗಿರುವ ರೀತಿಯ ಆಡಳಿತವನ್ನು ನೀವು ಹೊಂದಿರುತ್ತೀರಿ.

ಗಣ್ಯ ಪ್ರೇಕ್ಷಕರೇ, ಪ್ರಜಾಸತ್ತಾತ್ಮಕ ರಾಜಕೀಯವು ಸಂವಾದದ ಮೇಲೆ ಅಭಿವೃದ್ಧಿ ಹೊಂದುತ್ತದೆ, ಅಭಿವ್ಯಕ್ತಿ ಮತ್ತು ಸಂವಾದವು ಪ್ರಜಾಪ್ರಭುತ್ವಕ್ಕೆ ಮೂಲಭೂತವಾಗಿದೆ. ನಿಮಗೆ ಅಭಿವ್ಯಕ್ತಿಯ ಹಕ್ಕಿಲ್ಲದಿದ್ದರೆ, ನೀವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೀರೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಆದರೆ ನೀವು ಸಂವಾದವನ್ನು ನಂಬದ ಹೊರತು ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಅಪೂರ್ಣವಾಗಿರುತ್ತದೆ. ಏಕೆಂದರೆ ನೀವು ಸಂವಾದ ನಡೆಸುವಾಗ, ಇನ್ನೊಂದು ದೃಷ್ಟಿಕೋನವಿರಬಹುದಾದುದು ಗೊತ್ತಾಗುತ್ತದೆ. ಅದು ನಿಮ್ಮ ಅಭಿರುಚಿಗೆ ಸರಿಹೊಂದದ ದೃಷ್ಟಿಕೋನವಾಗಿರಬಹುದು. ಸಂವಾದವು ನಿಮ್ಮನ್ನು ಶ್ರೀಮಂತಗೊಳಿಸುತ್ತದೆ. ಸಂವಾದವು ವಿನಮ್ರವಾಗಿರಲು ಅವಕಾಶ ನೀಡುತ್ತದೆ. ಹಾಗೆಯೇ ಸ್ವಯಂ-ನಿರ್ಧಾರ ತೆಗೆದುಕೊಳ್ಳಲು,  ನಾನೇ ಸರಿ ಎಂಬ ಪರಿಕಲ್ಪನೆಯನ್ನು ನಂಬದಂತೆಯೂ ಎಚ್ಚರಿಸುತ್ತದೆ. ಒಬ್ಬ ವ್ಯಕ್ತಿಯು "ನಾನು ಸರಿ" ಎಂದು ಭಾವಿಸಬಹುದಾದ ಪರಿಕಲ್ಪನೆಯೇ, ಅವನು ಮಾನವ ಸಮಾಜದ ಉತ್ಕೃಷ್ಟತೆ ಮತ್ತು ಸಾರದಿಂದ ದೂರವಿರುತ್ತಾನೆ ಎಂಬುದನ್ನು ತೋರಿಸುತ್ತದೆ. ಏಕೆಂದರೆ ನಾನು ಮಾತ್ರ ಸರಿ ಎಂದು ನಿರ್ಣಯಿಸುವ ಹಕ್ಕು ಯಾರಿಗೂ ಇಲ್ಲ, ಅವರ ತೀರ್ಪನ್ನು ಜನಸಾಮಾನ್ಯರ ವಿವೇಚನೆಗೆ ಬಿಡಬೇಕು. ಹಾಗಾಗಿ, ಪ್ರಜಾಪ್ರಭುತ್ವದ ಅಮೃತವು ವಿಭಿನ್ನ ದೃಷ್ಟಿಕೋನಗಳ ಪರಿಗಣನೆಯಾಗಿದೆ ಎಂದು ನಾನು ಒತ್ತಿ ಹೇಳುತ್ತೇನೆ.

ನಾಗರಿಕತೆಯ ದೃಷ್ಟಿಯಿಂದ, ನಾವು ಆ ಪ್ರಕ್ರಿಯೆಗೆ ಮಾತ್ರ ಎಲ್ಲರನ್ನೂ ಒಳಗೊಳ್ಳುತ್ತೇವೆ. ಸಂವಾದದ ಅನುಪಸ್ಥಿತಿ, ಸಂವಾದದ ಮೂಲಕ ನಾನು ಭಯವಿಲ್ಲದ ಸಂವಾದ, ಸ್ವಾತಂತ್ರ್ಯವಿರುವ ಸಂವಾದ, ಅಪಹಾಸ್ಯಕ್ಕೆ ಎಡೆಮಾಡಿಕೊಡದ ಸಂವಾದ, ಒಂದು ಕ್ಷಣದಲ್ಲಿ ಪರಿಗಣನೆಯನ್ನು ಪಡೆಯುವ ಮತ್ತು ತಿರಸ್ಕಾರವನ್ನು ಪಡೆಯುವ ಸಂವಾದ, ಆ ಸಂವಾದ ಇಲ್ಲದಿದ್ದರೆ ಅದು ಕನಿಷ್ಠ ಪ್ರಜಾಪ್ರಭುತ್ವ ಸಂಸ್ಥೆಗಳಿಗೆ ಮರಣಶಾಸನವಾಗುತ್ತದೆ.

ನಮ್ಮ ಸಿದ್ಧಾಂತವನ್ನು ಇಣುಕಿ ನೋಡಿದರೆ, ಸಮಸ್ಯೆಗಳ ಪರಿಹಾರದ ವಿಷಯಕ್ಕೆ ಬಂದಾಗ ಸಂವಾದ ಯಾವಾಗಲೂ ಪ್ರಿಯವಾಗಿರುತ್ತದೆ ಎಂದು ಅರಿವಾಗುತ್ತದೆ. ನಾನು ಹೇಳುವುದೇನೆಂದರೆ, ಇತಿಹಾಸವು ಅದನ್ನು ಸರಿ ಎಂದು ಸಾಬೀತುಪಡಿಸುತ್ತದೆ. ಸಾಕಷ್ಡು ಗಲಭೆಗಳು ನಡೆದಿವೆ, ಯುದ್ಧಗಳು ನಡೆದಿವೆ, ಅಂತಿಮವಾಗಿ ಪರಿಹಾರವು ಸಂಭಾಷಣೆಯ ಮೂಲಕವೇ ಆಗಿತ್ತು. ಸಂವಾದದ ಅನುಪಸ್ಥಿತಿಯು ಕಾಲಜ್ಞಾನ (ಅಪೊಕ್ಯಾಲಿಪ್ಟಿಕ್‌) ಆಗಿರಬಹುದು, ತುಂಬಾ ಅಪಾಯಕಾರಿಯಾಗಬಹುದು, ಸಂವಾದವಿಲ್ಲದಿದ್ದರೆ ಸಮಾಜವನ್ನು ನೇಣಿಗೇರಿಸಬಹುದು?

ಈ ಪರಿಕಲ್ಪನೆಯು ನಮ್ಮ ಧರ್ಮಗ್ರಂಥಗಳು, ವೇದಗಳು, ಪುರಾಣಗಳು ಮತ್ತು ನಮ್ಮ ಮಹಾಕಾವ್ಯಗಳಿಂದ ಹೊರಹೊಮ್ಮುತ್ತದೆ. ರಾಮಾಯಣ ಮಹಾಭಾರತ ಮತ್ತು ಗೀತೆ, ಎಲ್ಲವೂ ಸಂವಾದದ ಪ್ರಾಬಲ್ಯವನ್ನು ಸೂಚಿಸುತ್ತವೆ. ದೇಶದಲ್ಲಿ ಒಬ್ಬ ವ್ಯಕ್ತಿಗೆ ರಾಷ್ಟ್ರೀಯತೆಯ ಬಗ್ಗೆ ಅನರ್ಹ ನಂಬಿಕೆ ಮತ್ತು ರಾಷ್ಟ್ರಕ್ಕಾಗಿ ಒಟ್ಟಾಗಿ ಕೆಲಸ ಮಾಡುವ ಮನೋಭಾವ ಇರಬೇಕು.

ಗೌರವಾನ್ವಿತ ಪ್ರೇಕ್ಷಕರೇ, ಕೆಲವು ಶಕ್ತಿಗಳು ರಾಷ್ಟ್ರಕ್ಕೆ ಪ್ರತಿಕೂಲ ಮತ್ತು ಅವ್ಯವಸ್ಥೆ ಕಾರಣವಾಗುತ್ತವೆ. ಅವರು ನಮ್ಮ ರಾಷ್ಟ್ರವನ್ನು ಅಸ್ಥಿರಗೊಳಿಸಲು, ಅದರ ಬೆಳವಣಿಗೆಯನ್ನು ಹಾಳುಗೆಡವಲು, ಅದರ ಸಂಸ್ಥೆಗಳಿಗೆ ಕಳಂಕ ತರಲು, ಆ ಸಂಸ್ಥೆಗಳ ಶ್ರೇಷ್ಠ ವ್ಯಕ್ತಿಗಳ ಪ್ರತಿಷ್ಠೆಯನ್ನು ಹಾಳುಗೆಡಲು ಸಂಪೂಣ ಸಜ್ಜಾಗಿರುತ್ತಾರೆ. ಅಂತಹ ಶಕ್ತಿಗಳನ್ನು ತಟಸ್ಥಗೊಳಿಸಬೇಕು, ನಿರಾಕರಿಸಬೇಕು ಮತ್ತು ನಾಶಮಾಡಬೇಕು. ಸಿದ್ಧಾಂತದ ಪರಿಕಲ್ಪನೆಯು ವ್ಯಾಪಕವಾಗಿ ಹರಡಿದಾಗಷ್ಟೇ ಇದನ್ನು ಸಾಧ್ಯವಾಗಿಸಬಹುದು.

ನಮ್ಮ ಸ್ವಾತಂತ್ರ್ಯದ ಕೊನೆಯ ಕಾಲು ಶತಮಾನದತ್ತ ಹೆಜ್ಜೆ ಹಾಕುತ್ತಿರುವ ಹೊತ್ತಿನಲ್ಲಿ ನಾವಿದ್ದೇವೆ, ಆದ್ದರಿಂದ, ಭಾರತಶಾಸ್ತ್ರದ ಉತ್ಕೃಷ್ಟ ತತ್ವವು 2047ರ ವೇಳೆಗೆ ನಮ್ಮನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕೆ ಕೊಂಡೊಯ್ಯುವುದನ್ನು ಖಚಿತಪಡಿಸಿಕೊಳ್ಳಲು ನಾವು ಶಕ್ತಿ, ಉತ್ಸಾಹ, ಹುಮ್ಮಸ್ಸುಮತ್ತು ಧ್ಯೇಯದಿಂದ ನಮ್ಮನ್ನು ನಾವು ಅರ್ಪಿಸಿಕೊಳ್ಳಬೇಕಾಗುತ್ತದೆ. ಸ್ನೇಹಿತರೇ, ಈ ಸಂವಾದ, ಚರ್ಚೆ ಮತ್ತು ಅಭಿವ್ಯಕ್ತಿಯ ತತ್ವಗಳಿಗೆ ಚಂದಾದಾರರಾಗುವುದರಿಂದ ಸದ್ಯ ಕಳವಳಕ್ಕೆ ಕಾರಣವಾಗಿರುವ ದೇಶದ ರಾಜಕೀಯದ ತೀವ್ರತೆಯನ್ನು ತಗ್ಗಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಎಲ್ಲಾ ಹಂತಗಳಲ್ಲಿ ಸಂವಾದ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಸಂಬಂಧಪಟ್ಟ ಎಲ್ಲರೂ ಕೊಡುಗೆ ನೀಡಬೇಕಾಗಿದೆ. ಆರೋಗ್ಯಕರ ಸಂವಾದ ಮತ್ತು ಸಂವಾದವು ಯಾವಾಗಲೂ ರಾಷ್ಟ್ರದ ಕಲ್ಯಾಣಕ್ಕಾಗಿ ಹೋಗುತ್ತದೆ.

ಈ ಕೇಂದ್ರವು ನಾವು ಭಾವಿಸುವುದಕ್ಕಿಂತ ಬಹಳ ಬೇಗ ಅಸ್ತಿತ್ವಕ್ಕೆ ಬರುತ್ತದೆ ಮತ್ತು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ. "ಸ ವಿದ್ಯಾ ಯಾ ವಿಮುಕ್ತಯೇ" - ಜ್ಞಾನ ಮಾತ್ರ ವಿಮೋಚನೆ ನೀಡುತ್ತದೆ. 

ಕೆಲವು ಜನರ ಈ ವಿಚಾರಗಳು ಅರ್ಥವಾಗುವುದಿಲ್ಲ. ದಾರಿ ತಪ್ಪಿದವರಿಗೆ ಅರ್ಥಮಾಡಿಕೊಂಡು ಸರಿದಾರಿಗೆ ಹೊರಳುವ ಸಮಯ ಬಂದಿದೆ. ಜ್ಞಾನ ಹಾಗೂ ಭಾರತಶಾಸ್ತ್ರ ಜ್ಞಾನವಷ್ಟೇ ಸಂರಕ್ಷಣೆ ನೀಡಲಿದೆ. "ಇದು ನಮಗೆ ತುಂಬಾ ಆಹ್ಲಾದಕರ ಅನುಭವ ನೀಡಲಿದ್ದು, ದೇಶಕ್ಕೂ ಬಹಳ ಒಳ್ಳೆಯದಾಗಲಿದೆ. ನಮ್ಮ ಸಾಮೂಹಿಕ ಸಂಕಲ್ಪವು ಸಾಂಸ್ಕೃತಿಕ ಪುನರುಜ್ಜೀವನದ ಈ ಮಹತ್ತರ ಕಾರ್ಯವನ್ನು ಪೂರೈಸುತ್ತದೆ.

ಧನ್ಯವಾದಗಳು.

 

*****


(Release ID: 2094664) Visitor Counter : 8


Read this release in: English , Urdu , Hindi