ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

2024-25ರ ಪರಿಷ್ಕೃತ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ದೇಶೀಯ) ನೀತಿಯನ್ನು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಪ್ರಕಟಿಸಿದರು


ಪ್ರತಿ ಕ್ವಿಂಟಲ್ ಅಕ್ಕಿಯ ಮೀಸಲು ನಿಶ್ಚಿತ ಬೆಲೆ ₹2,250 ಮತ್ತು ಎಥೆನಾಲ್ ಡಿಸ್ಟಿಲರಿಗಳಿಗೆ ಮಾರಾಟ ಮಾಡುವ ಅಕ್ಕಿಯ ಮೀಸಲು ನಿಶ್ಚಿತ ಬೆಲೆ ಪ್ರತಿ ಕ್ವಿಂಟಲ್‌ಗೆ ₹2,250 ಎಂದು ನಿಗದಿಪಡಿಸಲಾಗಿದೆ

Posted On: 17 JAN 2025 9:18PM by PIB Bengaluru

2024-25ನೇ ಸಾಲಿನ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ದೇಶೀಯ) [ಎಂ.ಎಂ.ಎಸ್.ಎಸ್.(ಡಿ)] ನೀತಿಯಲ್ಲಿ ಗಮನಾರ್ಹ ಪರಿಷ್ಕರಣೆಯನ್ನು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಘೋಷಿಸಿದರು. ಈ ನೂತನ ನೀತಿಯು ದೇಶದಾದ್ಯಂತ ಆಹಾರ ಭದ್ರತೆಯನ್ನು ಹೆಚ್ಚಿಸಲು ಮತ್ತು ವಿವಿಧ ಮಧ್ಯಸ್ಥಗಾರರಿಗೆ ಅಕ್ಕಿಯ ಸಮರ್ಥ ವಿತರಣೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.

 ಪರಿಷ್ಕೃತ ನೀತಿಯ ಅಡಿಯಲ್ಲಿ ಈ ಕೆಳಗಿನ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ:

              
 1. ಅಕ್ಕಿಗೆ ಮೀಸಲು ನಿಶ್ಚಿತ ಬೆಲೆ ನಿಗದಿ: ಇ-ಹರಾಜಿನಲ್ಲಿ ಭಾಗವಹಿಸುವ ಅಗತ್ಯವಿಲ್ಲದೆ, ರಾಜ್ಯ ಸರ್ಕಾರಗಳು, ರಾಜ್ಯ ಸರ್ಕಾರದ ನಿಗಮಗಳು ಮತ್ತು ಸಮುದಾಯ ಸಂಸ್ಥೆಗಳು ಅಡುಗೆಮನೆಗಳಿಗೆ ಮಾರಾಟ ಮಾಡಲು ಉಪಯೋಗಿಸುವ ಹಾಗೂ ಬಳಸುವ ಅಕ್ಕಿಯ ಮೀಸಲು ನಿಶ್ಚಿತ ಬೆಲೆಯನ್ನು ಪ್ರತಿ ಕ್ವಿಂಟಾಲ್‌ ಗೆ (ದೇಶದಾದ್ಯಂತ) ₹2,250 ಎಂದು ನಿಗದಿಪಡಿಸಲಾಗಿದೆ.  

 2. ಎಥೆನಾಲ್ ಉತ್ಪಾದನೆಗೆ ಬೆಂಬಲ: ಎಥೆನಾಲ್ ಉತ್ಪಾದನೆಗೆ ಎಥೆನಾಲ್ ಡಿಸ್ಟಿಲರಿಗಳಿಗೆ ಮಾರಾಟ ಮಾಡುವ ಅಕ್ಕಿಯ ಮೀಸಲು ನಿಶ್ಚಿತ ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ (ದೇಶದಾದ್ಯಂತ) ₹ 2,250 ಎಂದು ನಿಗದಿಪಡಿಸಲಾಗಿದೆ.

ಈ ನಿರ್ಧಾರಗಳು ರಾಜ್ಯ ಯೋಜನೆಗಳ ಅಡಿಯಲ್ಲಿ ರಾಜ್ಯಗಳು ತಮ್ಮ ಜವಾಬ್ದಾರಿಗಳನ್ನು ಪೂರೈಸುವಲ್ಲಿ, ದೇಶದಾದ್ಯಂತ ಆಹಾರ ಭದ್ರತೆಯನ್ನು ಉತ್ತೇಜಿಸುವಲ್ಲಿ ಮತ್ತು ರಾಷ್ಟ್ರೀಯ ಇಂಧನ ಕಾರ್ಯತಂತ್ರದ ಭಾಗವಾಗಿ ಎಥೆನಾಲ್ ಉತ್ಪಾದನೆಯನ್ನು ಉತ್ತೇಜಿಸುವಲ್ಲಿ ರಾಜ್ಯಗಳನ್ನು ಬೆಂಬಲಿಸುವ ಭಾರತ ಸರ್ಕಾರದ ಬದ್ಧತೆಯನ್ನು ಸಾಕಾರಗೊಳಿಸುತ್ತದೆ ಹಾಗೂ ಪ್ರತಿಬಿಂಬಿಸುತ್ತದೆ.

ದೇಶದಾದ್ಯಂತ ನಾಗರಿಕರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಮತ್ತು ದೇಶದ ವಿಶಾಲ ಅಭಿವೃದ್ಧಿ ಗುರಿಗಳಿಗೆ ಕೊಡುಗೆ ನೀಡಲು ಈ ಪರಿಷ್ಕೃತ ನೀತಿಯ ಸಂಪೂರ್ಣ ಪ್ರಯೋಜನವನ್ನು ಪಡೆಯಲು ರಾಜ್ಯಗಳು ಮತ್ತು ಮಧ್ಯಸ್ಥಗಾರರನ್ನು ಈ ಮೂಲಕ ಕೋರಲಾಗಿದೆ ಮತ್ತು ಒತ್ತಾಯಿಸಲಾಗಿದೆ.

 

*****


(Release ID: 2093947) Visitor Counter : 23


Read this release in: English