ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಜನವರಿ 9 ರಿಂದ 19, 2025 ರವರೆಗೆ ಗುಜರಾತ್ ನ ವಡೋದರದ ಅಕೋಟಾ ಸ್ಟೇಡಿಯಂನಲ್ಲಿ 23ನೇ ದಿವ್ಯ ಕಲಾ ಜಾತ್ರೆ - 'ಸ್ಥಳೀಯತೆಗಾಗಿ ಧ್ವನಿ (ಲೋಕಲ್ ಫಾರ್ ವೋಕಲ್)’ ಆಂದೋಲನದ ಸಾಕಾರ – 2024 ರನ್ನು ಆಯೋಜಿಸಲಾಗಿದೆ
ಸುಮಾರು 20 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ 100 ದಿವ್ಯಾಂಗ್ ಕುಶಲಕರ್ಮಿಗಳು, ಕಲಾವಿದರು ಮತ್ತು ಉದ್ಯಮಿಗಳು ವೈವಿಧ್ಯಮಯ ಉತ್ಪನ್ನಗಳು ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸಲಿದ್ದಾರೆ
Posted On:
08 JAN 2025 8:13PM by PIB Bengaluru
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಡಿಯಲ್ಲಿ ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆಯು 23 ನೇ ದಿವ್ಯ ಕಲಾ ಜಾತ್ರೆಯನ್ನು ರಾಷ್ಟ್ರೀಯ ದಿವ್ಯಾಂಗಜನ ಹಣಕಾಸು ಮತ್ತು ಅಭಿವೃದ್ಧಿ ಕಾರ್ಪೊರೇಷನ್ ಮೂಲಕ 9ನೇ - 19ನೇ ಜನವರಿ 2024 ರಿಂದ, ಗುಜರಾತ್ ನ ವಡೋದರದ ಅಕೋಟಾ ಸ್ಟೇಡಿಯಂನಲ್ಲಿ ಆಯೋಜಿಸಲು ಸಿದ್ಧವಾಗಿದೆ. ಈ ಕಾರ್ಯಕ್ರಮವನ್ನು ಗುಜರಾತ್ ಸರ್ಕಾರದ ಗಣ್ಯರ ಉಪಸ್ಥಿತಿಯಲ್ಲಿ ನಾಳೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಶ್ರೀ ಬಿ.ಎಲ್. ವರ್ಮಾ ಅವರು ಉದ್ಘಾಟಿಸಲಿದ್ದಾರೆ.
11-ದಿನಗಳ ಕಾರ್ಯಕ್ರಮದಲ್ಲಿ ದೇಶಾದ್ಯಂತದ ದಿವ್ಯಾಂಗ ಉದ್ಯಮಿಗಳು/ ಕುಶಲಕರ್ಮಿಗಳ ವೈವಿಧ್ಯಮಯ ಉತ್ಪನ್ನಗಳು ಮತ್ತು ಕರಕುಶಲತೆಯನ್ನು ಪ್ರದರ್ಶಿಸಲಿವೆ. ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳು ಸೇರಿದಂತೆ ದೇಶದ ವಿವಿಧ ಭಾಗಗಳ ವೈವಿಧ್ಯಮಯ ಉತ್ಪನ್ನಗಳು, ಕರಕುಶಲ ವಸ್ತುಗಳು, ಕೈಮಗ್ಗಗಳು, ಕಸೂತಿ ಕೆಲಸಗಳು ಮತ್ತು ಪಾಕಪದ್ಧತಿಗಳನ್ನು ಒಟ್ಟಿಗೆ ಒಂದೆಡೆಯಲ್ಲಿ ನೋಡಲು ಸಿಗುವುದರಿಂದ ಈ ಕಾರ್ಯಕ್ರಮ ಪ್ರವಾಸಿಗರಿಗೆ ರೋಮಾಂಚನಕಾರಿ ಅನನ್ಯ ಅನುಭವವನ್ನು ನೀಡಲಿದೆ.
ಜಾತ್ರೆಯು ಪಿಡಬ್ಲ್ಯೂಡಿ/ದಿವ್ಯಾಂಗಜನರ ಆರ್ಥಿಕ ಸಬಲೀಕರಣದ ಕಡೆಗೆ ಒಂದು ಅನನ್ಯ ಉಪಕ್ರಮವಾಗಿದೆ. ಇದು ದಿವ್ಯಾಂಗಜನರ ಉತ್ಪನ್ನಗಳು ಮತ್ತು ಕೌಶಲ್ಯಗಳನ್ನು ಮಾರ್ಕೆಟಿಂಗ್ ಮಾಡಲು ಮತ್ತು ಪ್ರದರ್ಶಿಸಲು ದೊಡ್ಡ ವೇದಿಕೆಯನ್ನು ಒದಗಿಸುತ್ತದೆ. ಸುಮಾರು 20 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಸುಮಾರು 100 ದಿವ್ಯಾಂಗ್ ಕುಶಲಕರ್ಮಿಗಳು/ಕಲಾವಿದರು ಮತ್ತು ಉದ್ಯಮಿಗಳು ತಮ್ಮ ಉತ್ಪನ್ನಗಳು ಮತ್ತು ಕೌಶಲ್ಯಗಳನ್ನು ಪ್ರದರ್ಶಿಸಲಿದ್ದಾರೆ. ಗೃಹಾಲಂಕಾರ ಮತ್ತು ಜೀವನಶೈಲಿ, ಉಡುಪು, ಸ್ಟೇಷನರಿ ಮತ್ತು ಪರಿಸರ ಸ್ನೇಹಿ ಉತ್ಪನ್ನಗಳು, ಪ್ಯಾಕ್ ಮಾಡಿದ ಆಹಾರ ಮತ್ತು ಸಾವಯವ ಉತ್ಪನ್ನಗಳು, ಆಟಿಕೆಗಳು ಮತ್ತು ಉಡುಗೊರೆಗಳು, ವೈಯಕ್ತಿಕ ಪರಿಕರಗಳ ಆಭರಣಗಳು, ಕ್ಲಚ್ ಬ್ಯಾಗ್‌ಗಳು ಸೇರಿದಂತೆ ಉತ್ಪನ್ನಗಳು ಪ್ರದರ್ಶನಕ್ಕೆ ಇರುತ್ತವೆ. ಸ್ಥಳೀಯರಿಗೆ ತಮ್ಮ ಉತ್ಪನ್ನಗಳ ಮೂಲಕ ಹಾಗೂ ಸಾರ್ವಜನಿಕರಿಗೆ ಖರೀದಿಸಿ ಪ್ರೋತ್ಸಾಹಿಸಿ ಧ್ವನಿಗೂಡಿಸಲು ಇದು ಎಲ್ಲರಿಗೂ ಅವಕಾಶವಾಗಲಿದೆ ಮತ್ತು ದಿವ್ಯಾಂಗ್ ಕುಶಲಕರ್ಮಿಗಳು ತಮ್ಮ ಹೆಚ್ಚುವರಿ ನಿರ್ಣಯದೊಂದಿಗೆ ತಯಾರಿಸಿದ ಉತ್ಪನ್ನಗಳನ್ನು ಸಾರ್ವಜನಿಕರು ನೋಡಬಹುದು /ಖರೀದಿಸಬಹುದು.
ಜಾತ್ರೆಯು ಬೆಳಿಗ್ಗೆ 11.00 ಗಂಟೆಯಿಂದ ರಾತ್ರಿ 09.00 ರವರೆಗೆ ತೆರೆದಿರುತ್ತದೆ, ಮತ್ತು ದಿವ್ಯಾಂಗ್ ಕಲಾವಿದರು ಮತ್ತು ಪ್ರಸಿದ್ಧ ವೃತ್ತಿಪರರ ಕಲಾ ಕೌಶಲ್ಯಗಳ ಪ್ರದರ್ಶನಗಳನ್ನು ಒಳಗೊಂಡಂತೆ ಸಾಂಸ್ಕೃತಿಕ ಚಟುವಟಿಕೆಗಳ ಸರಣಿಯನ್ನು ವೀಕ್ಷಿಸಬಹುದು. ಕಾರ್ಯಕ್ರಮದಲ್ಲಿ ಸಂದರ್ಶಕರು ದೇಶದ ವಿವಿಧ ಪ್ರದೇಶಗಳಿಂದ ಆಕರ್ಷಿತ ತಮ್ಮ ನೆಚ್ಚಿನ ಆಹಾರವನ್ನು ಸಹ ಸೇವಿಸಿ ಆನಂದಿಸಬಹುದು. ಈ ಉತ್ಸವದಲ್ಲಿ 2025ರ ಜನವರಿ 19 ರಂದು ದೇಶದ ವಿವಿಧ ಭಾಗಗಳ ದಿವ್ಯಾಂಗ ಕಲಾವಿದರಿಂದ ‘ದಿವ್ಯ ಕಲಾ ಶಕ್ತಿ’ ಎಂಬ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೂಡ ಪ್ರಸ್ತುತಪಡಿಸಲಾಗುತ್ತದೆ.
2022 ರಿಂದ ಪ್ರಾರಂಭವಾದ ಈ ದಿವ್ಯ ಕಲಾ ಉತ್ಸವದ (ಜಾತ್ರೆ) ಸರಣಿಯಲ್ಲಿ ವಡೋದರದಲ್ಲಿ (ಗುಜರಾತ್) ನಡೆಯುವ ಈ ಜಾತ್ರೆಯು (ಉತ್ಸವ) 23 ನೇಯದಾಗಿದೆ, ಹಾಗೂ ದಿವ್ಯ ಕಲಾ ಉತ್ಸವದ (ಜಾತ್ರೆ) ಈ ಹಿಂದಿನ ಆವೃತ್ತಿಗಳು ಈ ಕೆಳಗಿನಂತಿವೆ:
(i) ದೆಹಲಿ, 2ನೇ - 6ನೇ ಡಿಸೆಂಬರ್ 2022, (ii) ಮುಂಬೈ, 16ನೇ - 25ನೇ ಫೆಬ್ರವರಿ 2023, (iii) ಭೋಪಾಲ್, 12ನೇ - 21ನೇ ಮಾರ್ಚ್ 2023, (iv) ಗುವಾಹಟಿ, 11ನೇ - 17ನೇ ಮೇ 2023, (v) ಇಂದೋರ್, 17 23ನೇ ಜೂನ್ 2023, (vi) ಜೈಪುರ, 29ನೇ ಜೂನ್ - 5ನೇ ಜುಲೈ 2023, (vii) ವಾರಣಾಸಿ, 15ನೇ - 24ನೇ ಸೆಪ್ಟೆಂಬರ್, 2023, (viii) ಸಿಕಂದರಾಬಾದ್, ಹೈದರಾಬಾದ್ 6ನೇ - 15ನೇ ಅಕ್ಟೋಬರ್ 2023, (ix) ಬೆಂಗಳೂರು, 27ನೇ ಅಕ್ಟೋಬರ್ - 5ನೇ ನವೆಂಬರ್, 2023, (x) ಚೆನ್ನೈ, 17ನೇ ನವೆಂಬರ್, 26ನೇ ನವೆಂಬರ್ - 2023, (xi) ಪಾಟ್ನಾ, 8 ನೇ - 17ನೇ ಡಿಸೆಂಬರ್ 2023, (xii) ಸೂರತ್, 29ನೇ ಡಿಸೆಂಬರ್‌ನಿಂದ 7ನೇ ಜನವರಿ 2024, (xiii) ನಾಗ್ಪುರ, 11ನೇ - 21ನೇ ಜನವರಿ 2024. (xiv) ಅಗರ್ತಲಾ, 6ನೇ - 11ನೇ ಫೆಬ್ರವರಿ 2024. (xv) ಅಹಮದಾಬಾದ್, 16ನೇ - 25 ಫೆಬ್ರವರಿ 2024, (xvi ಭುವನೇಶ್ವರ 5 ನೇ - 11ನೇ ಜುಲೈ 2024, (xvii) ರಾಯ್‌ಪುರ್, 16ನೇ - 22ನೇ ಆಗಸ್ಟ್ 2024, (xviii) ರಾಂಚಿ, 28ನೇ ಆಗಸ್ಟ್ - 7ನೇ ಸೆಪ್ಟೆಂಬರ್ 2024, (xix) ವಿಶಾಖಪಟ್ಟಣಂ, 19ನೇ - 29ನೇ ಸೆಪ್ಟೆಂಬರ್, 2024, (xx) ಪುಣೆ, 28ನೇ ಸೆಪ್ಟೆಂಬರ್ -06ನೇ ಅಕ್ಟೋಬರ್ 2024, (xxi) ಜಬಲ್ ಪುರ್ , 17ನೇ - 27ನೇ ಅಕ್ಟೋಬರ್, 2024, (xxii) ದೆಹಲಿ, 12ನೇ - 22ನೇ ಡಿಸೆಂಬರ್, 2024.
*****
(Release ID: 2091322)
Visitor Counter : 18