ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನಮೋ ಭಾರತ್ ರೈಲಿನಲ್ಲಿ, ಸಾಹಿಬಾಬಾದ್ ಆರ್‌ಆರ್‌ಟಿಎಸ್ ನಿಲ್ದಾಣದಿಂದ ನ್ಯೂ ಅಶೋಕ್ ನಗರ ಆರ್‌ಆರ್‌ಟಿಎಸ್ ನಿಲ್ದಾಣದ ವರೆಗೆ ಮಾಡಿದ ಪ್ರಯಾಣದ ಸಮಯದಲ್ಲಿ, ವಿದ್ಯಾರ್ಥಿಗಳು ಮತ್ತು ರೈಲು ಲೋಕೋ ಪೈಲಟ್‌ಗಳೊಂದಿಗೆ ಪ್ರಧಾನಮಂತ್ರಿಯವರು ನಡೆಸಿದ ಸಂವಾದ

Posted On: 05 JAN 2025 8:42PM by PIB Bengaluru

ಪ್ರಧಾನಮಂತ್ರಿ: ಹಾಗಾದರೆ, ನೀವು ಕೂಡ ಕಲಾವಿದರಾ?

ವಿದ್ಯಾರ್ಥಿ: ಸರ್, ಇದು ನಿಮ್ಮ ಕವಿತೆ.

ಪ್ರಧಾನಮಂತ್ರಿ: ಅಹ್, ಹಾಗಾದರೆ ನೀವು ನನ್ನ ಕವಿತೆಯನ್ನು ಹೇಳಿ?

ವಿದ್ಯಾರ್ಥಿ:

"ನಮ್ಮ ಮನದಲ್ಲಿ ಒಂದು ಗುರಿಯನ್ನಿಟ್ಟು, ಗಮ್ಯದ ಕಡೆಗೆ ಗಮನವ ಇಟ್ಟು 

ನಾವು ಮುರಿಯುತ್ತಿದ್ದೇವೆ ಸರಪಳಿಗಳನ್ನು, ನಾವು ಬದಲಿಸುತ್ತಿದ್ದೇವೆ ಹಣೆಬರಹಗಳನ್ನು

ಇದು ಹೊಸ ಯುಗ, ಇದು ಹೊಸ ಭಾರತ, ನಾವೇ ಬರೆಯುತ್ತೇವೆ ನಮ್ಮ ಹಣೆಬರಹ

ನಾವು ಇಡೀ ಚಿತ್ರಣವನ್ನೇ ಬದಲಿಸುತ್ತಿದ್ದೇವೆ, ನಾವೇ ಬರೆಯುತ್ತೇವೆ ನಮ್ಮ ಹಣೆಬರಹ

ನಾವು ಹೊರಟಿದ್ದೇವೆ ಶಪಥವ ಮಾಡಿ, ನಮ್ಮ ದೇಹ-ಮನಸ್ಸನ್ನು ಸಮರ್ಪಿಸಿ 

ಹಟವಿದೆ, ಒಂದು ಸೂರ್ಯನನ್ನು ಉದಯಿಸುವ ಛಲಯವಿದೆ, ಗಗನಕ್ಕಿಂತ ಮೇಲಕ್ಕೇರುವ  ಹಂಬಲವಿದೆ 

ಒಂದು ನವ ಭಾರತವನ್ನು ನಿರ್ಮಿಸಬೇಕು, ಬಾಣಂಗುಳದ ಎತ್ತರಕ್ಕೆ ತಲುಪಬೇಕು , ಒಂದು ನವ ಭಾರತವನ್ನು ನಿರ್ಮಿಸಬೇಕು."*

ಪ್ರಧಾನಮಂತ್ರಿ: ವಾವ್.

ಪ್ರಧಾನಮಂತ್ರಿ: ನಿಮ್ಮ ಹೆಸರೇನು?

ವಿದ್ಯಾರ್ಥಿ: (ಸ್ಪಷ್ಟವಾಗಿಲ್ಲ)

ಪ್ರಧಾನಮಂತ್ರಿ: ಅದ್ಭುತ! ಹಾಗಾದರೆ, ನಿಮಗೆ ಮನೆ ಸಿಕ್ಕಿದೆಯೇ? ಹೊಸ ಮನೆಯ ಕಾಮಗಾರಿ ಪ್ರಗತಿಯಲ್ಲಿದೆಯಾ - ಅದ್ಭುತವಾಗಿದೆ!

ವಿದ್ಯಾರ್ಥಿ: (ಸ್ಪಷ್ಟವಾಗಿಲ್ಲ)

ಪ್ರಧಾನಮಂತ್ರಿ: ವಾವ್, ಅದ್ಭುತ.

ಪ್ರಧಾನಮಂತ್ರಿ: ಯುಪಿಐ...

ವಿದ್ಯಾರ್ಥಿ: ಹೌದು, ಸರ್. ಇಂದು ನಿಮ್ಮಿಂದ ಪ್ರತಿ ಮನೆಯಲ್ಲೂ ಯುಪಿಐ ಇದೆ.

ಪ್ರಧಾನಮಂತ್ರಿ: ನೀವು ಇದನ್ನು ಸ್ವತಃ ತಯಾರಿಸುತ್ತೀರಾ?

ವಿದ್ಯಾರ್ಥಿ: ಹೌದು.

ಪ್ರಧಾನಮಂತ್ರಿ: ನಿಮ್ಮ ಹೆಸರೇನು?

ವಿದ್ಯಾರ್ಥಿ: ಆರ್ನಾ ಚೌಹಾಣ್.

ಪ್ರಧಾನಮಂತ್ರಿ: ಸರಿ .

ವಿದ್ಯಾರ್ಥಿ: ನಾನು ನಿಮಗಾಗಿ ಒಂದು ಕವಿತೆ ಹೇಳಲು ಬಯಸುತ್ತೇನೆ.

ಪ್ರಧಾನಮಂತ್ರಿ: ನೀವು ಕವಿತೆ ಹೇಳುವುದನ್ನು ನಾನು ಇಷ್ಟಪಡುತ್ತೇನೆ. ದಯವಿಟ್ಟು ಮುಂದುವರೆಸಿ.

ವಿದ್ಯಾರ್ಥಿ:  "ನರೇಂದ್ರ ಮೋದಿ ಎಂಬ ಒಂದು ಹೆಸರು, ಮಿತ್ರ ಎಂಬುದಕ್ಕೆ ಹೊಸ ನಾಂದಿ ಹಾಡಿದೆ 

ನೀವು ದೇಶವನ್ನು ಎತ್ತರಕ್ಕೆ ಕೊಂಡೊಯ್ಯಲು ಶ್ರಮಿಸುತ್ತಿದ್ದೀರಿ, ನಾವೂ ನಿಮ್ಮ ಜೊತೆಗಿದ್ದೇವೆ ದೇಶವನ್ನು ಅಭಿವೃದ್ಧಿಯೆಡೆಗೆ ಬೆಳೆಸಲು."

ಪ್ರಧಾನಮಂತ್ರಿ: ಅದ್ಭುತವಾಗಿದೆ.

ಪ್ರಧಾನಮಂತ್ರಿ: ನೀವೆಲ್ಲರೂ ನಿಮ್ಮ ತರಬೇತಿಯನ್ನು ಪೂರ್ಣಗೊಳಿಸಿದ್ದೀರಾ?

ಮೆಟ್ರೋ ಲೋಕೋ ಪೈಲಟ್: ಹೌದು, ಸರ್.

ಪ್ರಧಾನಮಂತ್ರಿ: ನೀವು ಚೆನ್ನಾಗಿ ನಿರ್ವಹಿಸುತ್ತಿದ್ದೀರಾ?

ಮೆಟ್ರೋ ಲೋಕೋ ಪೈಲಟ್: ಹೌದು, ಸರ್.

ಪ್ರಧಾನಮಂತ್ರಿ: ಈ ಕೆಲಸದಿಂದ ನಿಮಗೆ ತೃಪ್ತಿ ಇದೆಯೇ?

ಮೆಟ್ರೋ ಲೋಕೋ ಪೈಲಟ್: ಹೌದು, ಸರ್. ಸರ್, ನಾವು ಭಾರತದ ಮೊದಲ (ಸ್ಪಷ್ಟವಾಗಿಲ್ಲ)... ನಮಗೆ ಅತ್ಯಂತ ಹೆಮ್ಮೆ ಇದೆ. ನಮಗೆ ತುಂಬಾ ಚೆನ್ನಾಗಿ ಅನಿಸುತ್ತದೆ, ಸರ್.

ಪ್ರಧಾನಮಂತ್ರಿ: ನೀವೆಲ್ಲರೂ ಬಹಳ ಗಮನ ಹರಿಸಬೇಕಾಗುತ್ತದೆ; ಬಹುಶಃ ಹರಟೆಗೆ ಸಮಯವಿರುವುದಿಲ್ಲ ಅಲ್ಲವೇ?

ಮೆಟ್ರೋ ಲೋಕೋ ಪೈಲಟ್: ಇಲ್ಲ, ಸರ್, ನಮಗೆ ಅಂತಹ ಯಾವುದಕ್ಕೂ ಸಮಯವಿಲ್ಲ... (ಸ್ಪಷ್ಟವಾಗಿಲ್ಲ) ಅಂತಹದ್ದೇನೂ ಆಗುವುದಿಲ್ಲ.

ಪ್ರಧಾನಮಂತ್ರಿ: ಏನೂ ಆಗುವುದಿಲ್ಲವೇ?

ಮೆಟ್ರೋ ಲೋಕೋ ಪೈಲಟ್: ಹೌದು, ಸರ್.

ಪ್ರಧಾನಮಂತ್ರಿ: ಸರಿ, ನಿಮ್ಮೆಲ್ಲರಿಗೂ ಶುಭಹಾರೈಕೆಗಳು.

ಮೆಟ್ರೋ ಲೋಕೋ ಪೈಲಟ್: ಧನ್ಯವಾದಗಳು, ಸರ್.

ಮೆಟ್ರೋ ಲೋಕೋ ಪೈಲಟ್: ನಿಮ್ಮನ್ನು ಭೇಟಿಯಾದದ್ದು ನಮಗೆಲ್ಲ ತುಂಬಾ ಸಂತೋಷವಾಗಿದೆ, ಸರ್.

ಸೂಚನೆ: ಇದು ನಮೋ ಭಾರತ್ ರೈಲಿನಲ್ಲಿ ಪ್ರಧಾನಮಂತ್ರಿಯವರು ವಿದ್ಯಾರ್ಥಿಗಳು ಮತ್ತು ರೈಲು ಲೋಕೋ ಪೈಲಟ್‌ಗಳೊಂದಿಗೆ ನಡೆಸಿದ ಸಂವಾದದ ಭಾವಾನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

 

*****
 


(Release ID: 2090581) Visitor Counter : 7