ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಓಂಕಾರೇಶ್ವರ ತೇಲುವ ಸೋಲಾರ್ ಪಾರ್ಕ್ ಭಾರತದ ಶುದ್ಧ ಇಂಧನ ಗುರಿಗಳ ಪ್ರಮಾಣ ಮತ್ತು ಮಹತ್ವಾಕಾಂಕ್ಷೆಯ ಪ್ರತೀಕವಾಗಿದೆ: ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ


ಮಧ್ಯಪ್ರದೇಶದ ಓಂಕಾರೇಶ್ವರದಲ್ಲಿರುವ ಭಾರತದ ಅತಿದೊಡ್ಡ ತೇಲುವ ಸೌರ ಯೋಜನೆಗೆ ಕೇಂದ್ರ ಸಚಿವರಾದ ಜೋಶಿ ಭೇಟಿ ನೀಡಿದರು

Posted On: 04 JAN 2025 6:04PM by PIB Bengaluru

ಕೇಂದ್ರದ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿರುವ ಓಂಕಾರೇಶ್ವರ ಫ್ಲೋಟಿಂಗ್ ಸೋಲಾರ್ ಪಾರ್ಕ್‌ ಗೆ ಭೇಟಿ ನೀಡಿದರು. ಇದು ಭಾರತದಲ್ಲಿ ಅತಿ ದೊಡ್ಡ ತೇಲುವ ಸೌರ ಪಾರ್ಕ್ ಎಂದು ಗುರುತಿಸಲ್ಪಟ್ಟಿದೆ, ಸಂಪೂರ್ಣ ಅಭಿವೃದ್ಧಿಪಡಿಸಿದ, 600 ಎಂಡಬ್ಲ್ಯೂ ಸಾಮರ್ಥ್ಯ ಹೊಂದಿರುವ ಈ ಯೋಜನೆಯು ಭಾರತದ ನವೀಕರಿಸಬಹುದಾದ ಇಂಧನ ಪ್ರಯಾಣದಲ್ಲಿ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ.

ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ; "ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಓಂಕಾರೇಶ್ವರ ತೇಲುವ ಸೌರ ಯೋಜನೆಗೆ ಭೇಟಿ ನೀಡಿದೆ.  ಇದು 600 ಮೆಗಾವ್ಯಾಟ್‌ ನ ಅತ್ಯುತ್ತಮ ಸಾಮರ್ಥ್ಯದೊಂದಿಗೆ ಏಷ್ಯಾದ ಅತಿದೊಡ್ಡ ತೇಲುವ ಸೌರ ಯೋಜನೆಗಳಲ್ಲಿ ಒಂದಾಗಿದೆ. ಭಾರತದ ನವೀಕರಿಸಬಹುದಾದ ಇಂಧನ ಕ್ಷೇತ್ರದ ಭವಿಷ್ಯವನ್ನು ಮುನ್ನಡೆಸುವಲ್ಲಿ ಅಚಲ ಬೆಂಬಲಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಶ್ರೀ ಮೋಹನ್ ಯಾದವ್ ಅವರಿಗೆ ದೊಡ್ಡ ಧನ್ಯವಾದಗಳು.  ಈ ಯೋಜನೆಯು ನಮ್ಮ ರಾಷ್ಟ್ರದ ಶುದ್ಧ ಇಂಧನ ಗುರಿಗಳ ಪ್ರಮಾಣ ಮತ್ತು ಮಹತ್ವಾಕಾಂಕ್ಷೆಯನ್ನು ತೋರಿಸಿ ಕೊಡುತ್ತದೆ.  ”

ತಮ್ಮ ಭೇಟಿಯ ಸಂದರ್ಭದಲ್ಲಿ, ಕೇಂದ್ರ ಸಚಿವರಾದ ಶ್ರೀ ಜೋಶಿ ಅವರು " ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಸಂದರ್ಭದಲ್ಲಿ ಭೂ ನಿರ್ಬಂಧಗಳನ್ನು ಪರಿಹರಿಸುವಲ್ಲಿ ತೇಲುವ ಸೌರ ತಂತ್ರಜ್ಞಾನದಂತಹ ನವೀನ ಪರಿಹಾರಗಳ ಪ್ರಾಮುಖ್ಯತೆಯನ್ನು" ಒತ್ತಿ ಹೇಳಿದರು. ಅವರು ಈ ವಿನೂತನ ವಿಧಾನದ ದಕ್ಷತೆಯನ್ನು ಕೂಡ ವಿವರಿಸಿದರು. "ನೀರಿನ ತಂಪಾಗಿಸುವ ಗುಣಲಕ್ಷಣದ ಪರಿಣಾಮವು ಸೌರ ಫಲಕದ ಕಾರ್ಯಕ್ಷಮತೆಯನ್ನು ಇನ್ನೂ ಹೆಚ್ಚಿಸುತ್ತದೆ, ಇದರಿಂದಾಗಿ ಶಕ್ತಿಯ ಉತ್ಪಾದನೆಯನ್ನು ಹೆಚ್ಚಿಸಲಾಗುತ್ತದೆ" ಎಂದು ಹೇಳಿದರು 

ಪ್ರಸ್ತುತ, ಓಂಕಾರೇಶ್ವರ ಫ್ಲೋಟಿಂಗ್ ಸೋಲಾರ್ ಪಾರ್ಕ್ ಒಟ್ಟು 278 ಮೆ.ವ್ಯಾ. ಉತ್ಪಾದಕ ಸಾಮರ್ಥ್ಯ ಹೊಂದಿದೆ. ಈ ತೇಲುವ ಸೌರಶಕ್ತಿ ಇಂಧನ ಉದ್ಯಾನವನದ ಒಟ್ಟು ಅಂದಾಜು ಅಭಿವೃದ್ಧಿ ವೆಚ್ಚ ₹ 330 ಕೋಟಿಯಾಗಿದ್ದು, ₹ 49.85 ಕೋಟಿ ಕೇಂದ್ರ ಹಣಕಾಸು ನೆರವಿನ ಬೆಂಬಲಿತವಾಗಿ ಕಾರ್ಯನಿರ್ವಹಿಸುತ್ತದೆ.

ದೇಶದ ಇಂಧನ ಭದ್ರತೆಯನ್ನು ಪೂರೈಸಲು ಕೊಡುಗೆ ನೀಡುತ್ತಿರುವ ಪ್ರಮುಖ ರಾಜ್ಯಗಳಲ್ಲಿ ಮಧ್ಯಪ್ರದೇಶ ಒಂದಾಗಿದೆ. ರಾಜ್ಯವು ತನ್ನ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಿದೆ,  2012ರಲ್ಲಿ 500 ಮೆ.ವ್ಯಾ. ಗಿಂತ ಕಡಿಮೆಯಿಂದ ಅದರ ಪ್ರಸ್ತುತ ಸಾಮರ್ಥ್ಯಕ್ಕೆ ಹೋಲಿಸಿದರೆ, ಕಳೆದ 12 ವರ್ಷಗಳಲ್ಲಿ 14 ಪಟ್ಟು ಬೆಳವಣಿಗೆಯನ್ನು ಸಾಧಿಸಿದೆ ಎಂದು ಅವರು ವಿವರಿಸಿದರು. 

ತಮ್ಮ ಎಕ್ಸ್ ಸಂದೇಶದಲ್ಲಿ, ಕೇಂದ್ರ ಸಚಿವ ಶ್ರೀ ಜೋಶಿ ಅವರು ಈ ರೀತಿ ತಿಳಿಸಿದ್ದಾರೆ; "ಸೌರ ಯೋಜನೆಗಳೊಂದಿಗೆ 278 ಮೆಗಾವ್ಯಾಟ್ ಸೋಲಾರ್ ಪಾರ್ಕ್‌ ನ ಕಾರ್ಯಾರಂಭದ ಯಶಸ್ವಿಗಾಗಿ ಎಲ್ಲಾ ಪಾಲುದಾರರು, ಮಧ್ಯಪ್ರದೇಶ ಸರ್ಕಾರ ಮತ್ತು ಸೋಲಾರ್ ಪವರ್ ಪಾರ್ಕ್ ಡೆವಲಪರ್‌ಗಳಾದ - ರೇವಾ ಅಲ್ಟ್ರಾ ಮೆಗಾ ಸೋಲಾರ್ ಲಿಮಿಟೆಡ್, ಎನ್.ಹೆಚ್.ಡಿ.ಸಿ. ಲಿಮಿಟೆಡ್, ಎಂ.ಎಂ.ಪಿ. ಎನರ್ಜಿ ಗ್ರೀನ್ ಪ್ರೈವೇಟ್ ಲಿಮಿಟೆಡ್, ಮತ್ತು ಎಸ್ .ಜೆ.ವಿ.ಎನ್.  ಲಿಮಿಟೆಡ್ - ಹೀಗೆ ಎಲ್ಲರಿಗೂ ಅಭಿನಂದನೆಗಳು. ಈ ಯೋಜನೆಯು ಪೂರ್ಣ ಸಾಮರ್ಥ್ಯದತ್ತ ಸಾಗುತ್ತಿದ್ದಂತೆ, ಸಂಪೂರ್ಣ 600 ಮೆಗಾವ್ಯಾಟ್ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ. ಇದು ಮುಂದಿನ 25 ವರ್ಷಗಳಲ್ಲಿ 4600 ಮಿಲಿಯನ್ ಯುನಿಟ್‌ ಗಿಂತಲೂ ಹೆಚ್ಚು ಶುದ್ಧ ಶಕ್ತಿಯನ್ನು ಉತ್ಪಾದಿಸಲಿದೆ.  ಭವಿಷ್ಯಕ್ಕಾಗಿ ಸುಸ್ಥಿರ ಮತ್ತು ನವೀಕರಿಸಬಹುದಾದ ಶಕ್ತಿಯತ್ತ ನಮ್ಮ ಪ್ರಯಾಣದಲ್ಲಿ ಇದು ಗಮನಾರ್ಹ ಸಾಧನೆಯಾಗಿದೆ."

 

 

*****

 


(Release ID: 2090224) Visitor Counter : 28


Read this release in: English , Urdu , Marathi , Hindi