ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
"ಪ್ರಧಾನ ಮಂತ್ರಿ-ಸೂರ್ಯ ಘರ್ ಯೋಜನೆ" ಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಜನರಿಗೆ ಕರೆ ನೀಡಿದರು : "ಮುಫ್ತ್ ಬಿಜಿಲಿ ಯೋಜನೆ"ಯಲ್ಲಿ ಇನ್ನಷ್ಟು ಪ್ರಯೋಜನಗಳು
ಕೇಂದ್ರ ಸಚಿವರಾದ ಶ್ರೀ ಜೋಶಿ ಅವರು ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಜಾರ್ಖಂಡ್ ಮತ್ತು ಅಷ್ಟಲಕ್ಷ್ಮಿ ಖ್ಯಾತಿಯ ಈಶಾನ್ಯ ಭಾರತದ ಎಂಟು ರಾಜ್ಯಗಳೊಂದಿಗೆ ಪ್ರಧಾನ ಮಂತ್ರಿ ಸೂರ್ಯ ಘರ್ ಕುರಿತು ಪರಿಶೀಲನಾ ಸಭೆ ನಡೆಸಿದರು
ಪಿ.ಎಂ.ಎಸ್.ಜಿ.ಎಂ.ಬಿ.ವೈ. ಯ ಅನುಷ್ಠಾನ ಸಂಖ್ಯೆಯನ್ನು ಇನ್ನೂ ಹೆಚ್ಚಿಸಲು ಕೇಂದ್ರ ಸಚಿವರು ಅಧಿಕಾರಿಗಳಿಗೆ ಸಲಹೆ ನೀಡಿದರು
ಪ್ರಕಟಣಾ ದಿನಾಂಕ:
20 DEC 2024 7:00PM by PIB Bengaluru
ಕೇಂದ್ರ ನೂತನ ಮತ್ತು ನವೀಕರಿಸಬಹುದಾದ ಇಂಧನ ಮತ್ತು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು "ಪ್ರಧಾನಮಂತ್ರಿ ಸೂರ್ಯ ಘರ್: ಮುಫ್ತ್ ಬಿಜಿಲಿ ಯೋಜನೆ"ಯ ಪ್ರಯೋಜನವನ್ನು ಪಡೆಯಲು ಜನರನ್ನು ಒತ್ತಾಯಿಸಿದರು. ಉಚಿತ 300 ಯೂನಿಟ್ ವಿದ್ಯುತ್ ನ ಪ್ರಯೋಜನವನ್ನು ಪಡೆಯಲು ರೂಪಾಯಿ 75,021 ಕೋಟಿ ಹಂಚಿಕೆ ಮಾಡಲಾಗಿದೆ. ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಜಾರ್ಖಂಡ್ ಮತ್ತು ಎಂಟು ಈಶಾನ್ಯ ರಾಜ್ಯಗಳಲ್ಲಿ ನವೀಕರಿಸಬಹುದಾದ ಇಂಧನ ಪ್ರಚಾರದಲ್ಲಿ ತೊಡಗಿರುವ ವಿವಿಧ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಕೇಂದ್ರ ಸಚಿವರು ಮಾತನಾಡಿದರು. ತಮ್ಮ ತಮ್ಮ ರಾಜ್ಯಗಳಲ್ಲಿ "ಪ್ರಧಾನ ಮಂತ್ರಿ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ" ಅನುಷ್ಠಾನ ಸಂಖ್ಯೆಯನ್ನು ಹೆಚ್ಚಿಸಲು ಅವರು ರಾಜ್ಯಗಳ ಅಧಿಕಾರಿಗಳಿಗೆ ಸಲಹೆ ನೀಡಿದರು.

ರಾಜ್ಯದಲ್ಲಿ ಯೋಜನೆಯ ಪ್ರಗತಿಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳವು ಹೆಚ್ಚು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಕೇಂದ್ರ ಸಚಿವರಾದ ಶ್ರೀ ಜೋಶಿ ಅವರು ಹೇಳಿದರು. ರೂಪಾಯಿ 78,000 ವರೆಗೆ ಕೇಂದ್ರ ಸರ್ಕಾರದ ಧನಸಹಾಯ ಬೆಂಬಲದೊಂದಿಗೆ 300 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ಒದಗಿಸುವ ಮೂಲಕ 1 ಕೋಟಿ ಮನೆಗಳನ್ನು ಬೆಳಗಿಸುವ ಯೋಜನೆಗೆ ಹೆಚ್ಚಿನ ಬೆಂಬಲ ನೀಡುವಂತೆ ಪಶ್ಚಿಮ ಬಂಗಾಳದ ಸಂಬಂಧಿಸಿದ ಮಂತ್ರಿಗಳನ್ನು ವಿನಂತಿಸಿದ್ದೇನೆ ಎಂದು ಕೇಂದ್ರ ಸಚಿವರಾದ ಶ್ರೀ ಜೋಶಿ ಅವರು ಹೇಳಿದರು.

ಇಡೀ ದೇಶದಲ್ಲಿ ಯೋಜನೆಯ ನೋಂದಣಿ 1.5 ಕೋಟಿಗೆ ತಲುಪಿದೆ ಮತ್ತು ಪ್ರಯೋಜನ ಪಡೆದ ಕುಟುಂಬಗಳ ಸಂಖ್ಯೆ ಇದುವರೆಗೆ 7.06 ಲಕ್ಷ ತಲುಪಿದೆ. ರಾಜ್ಯದ ಜನತೆಯ ಹಿತದೃಷ್ಟಿಯಿಂದ ಈ ಯೋಜನೆಯನ್ನು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡದೆ ಉತ್ತಮ ಮನೋಭಾವನೆಯಿಂದ ಜಾರಿಗೊಳಿಸಬೇಕು. ಈ ಯೋಜನೆಯನ್ನು ರಾಜ್ಯದ ನಾಗರಿಕರಿಗೆ ಹೆಚ್ಚು ಲಾಭದಾಯಕವಾಗಿಸಲು ಕೇಂದ್ರದ ಸಹಾಯಧನದ ಜೊತೆಗೆ ತಮ್ಮ ಸಹಾಯಧನದ ಪ್ರಸ್ತಾಪದೊಂದಿಗೆ ರಾಜ್ಯ ಸರ್ಕಾರಗಳು ಕೂಡ ಇನ್ನೂ ಉತ್ತಮ ರೀತಿಯಲ್ಲಿ ಸಹಕರಿಸಲು ಮುಂದೆ ಬರಬೇಕೆಂದು ಕೇಂದ್ರ ಸಚಿವ ಶ್ರೀ ಜೋಶಿ ಅವರು ರಾಜ್ಯ ಸರ್ಕಾರಗಳ ಅಧಿಕಾರಿಗಳಿಗೆ ಹೇಳಿದರು
ಪಶ್ಚಿಮ ಬಂಗಾಳದ ಸೋಲಾರ್ ಪ್ಯಾನಲ್ ಅಳವಡಿಕೆ ಮಾರಾಟಗಾರರು ಮತ್ತು ಸೇವಾ ಪೂರೈಕೆದಾರರೊಂದಿಗೆ ಕೇಂದ್ರದ ನೂತನ ಮತ್ತು ನವೀಕರಿಸಬಹುದಾದ ಇಂಧನ ಮತ್ತು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ವಿಶೇಷ ಸಭೆ ನಡೆಸಿದರು. ಭಾಗವಹಿಸಿದವರು ತಮ್ಮ ತಮ್ಮ ಸವಾಲುಗಳನ್ನು ತಿಳಿಸಿದರು , ಕೇಂದ್ರ ಸಚಿವರು ಅವುಗಳನ್ನು ಪರಿಶೀಲಿಸಿದರು ಮತ್ತು ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯಡಿ ಮೇಲ್ಛಾವಣಿಯ ಸೌರ ಸ್ಥಾಪನೆಗಳನ್ನು ಸುಧಾರಿಸಲು ಸಂಭಾವ್ಯ ಪರಿಹಾರಗಳನ್ನು ಈ ಸಂದರ್ಭದಲ್ಲಿ ಚರ್ಚಿಸಿದರು.
ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಸುದೀಪ್ ಜೈನ್, ಮತ್ತು ರಾಜ್ಯಗಳ ಹಿರಿಯ ಅಧಿಕಾರಿಗಳು, ಆರ್.ಇ.ಸಿ, ಡಿಸ್ ಕಾಮ್ ಮತ್ತು ರಾಜ್ಯಗಳ ನವೀಕರಿಸಬಹುದಾದ ಶಕ್ತಿ ಕ್ಷೇತ್ರದ ವಿವಿಧ ಸಂಸ್ಥೆಗಳು ಇಂದು ನಡೆದ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದರು.
*****
(ಪ್ರಕಟಣೆ ಐ.ಡಿ.: 2086665)
ವಿಸಿಟರ್ ಕೌಂಟರ್ : 52