ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಇ-ಎನ್.ಡಬ್ಲ್ಯೂ.ಆರ್. ಆಧಾರಿತ ಅಡವು(ಗಿರವಿ) ಮೂಲಕ ಹಣಕಾಸು (ಸಿಜಿಎಸ್-ಎನ್.ಪಿ.ಎಫ್) ಗಾಗಿ ನೂತನ ಕ್ರೆಡಿಟ್ ಗ್ಯಾರಂಟಿ ಯೋಜನೆಗೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ ಅವರು ಚಾಲನೆ ನೀಡಿದರು


ರೈತರ ಮಾರಾಟದಲ್ಲಾಗುವ ಸಂಕಷ್ಟವನ್ನು ಕಡಿಮೆ ಮಾಡಲು ಕ್ರೆಡಿಟ್ ಗ್ಯಾರಂಟಿ ಯೋಜನೆಯಿದಾಗಿದೆ: ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ

ಆಹಾರ ಭದ್ರತೆಗೆ ಪ್ರಮುಖ ಯೋಜನೆ; ಬ್ಯಾಂಕ್‌ಗಳು ರೈತರ ಬಗ್ಗೆ ಉದಾರ ಧೋರಣೆ ಅನುಸರಿಸಬೇಕು: ಶ್ರೀ ಜೋಶಿ 

Posted On: 16 DEC 2024 8:15PM by PIB Bengaluru

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇ-ಎನ್‌.ಡಬ್ಲ್ಯೂ.ಆರ್. ಆಧಾರಿತ ಅಡವು(ಗಿರವಿ) ಹಣಕಾಸು (ಸಿಜಿಎಸ್-ಎನ್‌ಪಿಎಫ್) ಗಾಗಿ ನೂತನ ಕ್ರೆಡಿಟ್ ಗ್ಯಾರಂಟಿ ಯೋಜನೆಯನ್ನು ಇಂದು ನವದೆಹಲಿಯಲ್ಲಿ ಪ್ರಾರಂಭಿಸಿದರು. ವೇರ್‌ ಹೌಸಿಂಗ್ ಡೆವಲಪ್‌ಮೆಂಟ್ ಮತ್ತು ರೆಗ್ಯುಲೇಟರಿ ಅಥಾರಿಟಿ (ಡಬ್ಲ್ಯು.ಡಿ.ಆರ್‌.ಎ.) ಮಾನ್ಯತೆ ಪಡೆದ ಗೋದಾಮುಗಳಲ್ಲಿ ಸರಕುಗಳನ್ನು ಠೇವಣಿ ಮಾಡಿದ ನಂತರ ಸಿಗುವ ಎಲೆಕ್ಟ್ರಾನಿಕ್ ನೆಗೋಶಬಲ್ ವೇರ್‌ಹೌಸ್ ರಸೀದಿಗಳ (ಇ-ಎನ್‌.ಡಬ್ಲ್ಯೂ.ಆರ್.) ಆಧಾರದಲ್ಲಿ ರೈತರು ಪಡೆಯುವ ಕೊಯ್ಲಿನ ನಂತರದ ಹಣಕಾಸು ಸಮಸ್ಯೆ ದೂರಮಾಡುವ ನಿಟ್ಟಿನಲ್ಲಿ ರೂಪಿಸುವ ಮುಂಗಡ ಆರ್ಥಿಕ ಸಹಾಯದ ವ್ಯವಸ್ಥೆಗಾಗಿ ರೂ 1,000 ಕೋಟಿಯ ಹೆಚ್ಚುವರಿ ನಿಧಿಯನ್ನು(ಕಾರ್ಪಸ್) ಈ ಯೋಜನೆಯು ಹೊಂದಿರುತ್ತದೆ.

“ ರೈತರು ಮಾರಾಟ ಮಾಡುವಾಗ ಸಂಭವಿಸುವ ಆರ್ಥಿಕ ಸಂಕಷ್ಟವನ್ನು ಕಡಿಮೆ ಮಾಡಲು ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ” ಎಂದು ಕೇಂದ್ರ ಸಚಿವರು ಹೇಳಿದರು. “ಎಲ್ಲಾ ಗೋದಾಮುಗಳನ್ನು ನೋಂದಾಯಿಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ, ಉಗ್ರಾಣ ಅಭಿವೃದ್ಧಿ ಮತ್ತು ನಿಯಂತ್ರಣ ಪ್ರಾಧಿಕಾರ (ಡಬ್ಲ್ಯುಡಿಆರ್‌ಎ) ವ್ಯಾಪ್ತಿಗೆ ವೇರ್‌ ಹೌಸ್ ಡೆವಲಪರ್‌ ಗಳನ್ನು ತರಲು ಪ್ರಯತ್ನ ಆಗಬೇಕು ಮತ್ತು ಕೃಷಿ ಭೂಮಿಗೆ ಹತ್ತಿರ ಗೋದಾಮುಗಳನ್ನು ನಿರ್ಮಿಸಲು ಪ್ರಯತ್ನವಾಗಬೇಕು. ಇ-ನೋಂದಣಿ ಯೋಜನೆಯನ್ನು ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸಲಿದೆ” ಎಂದು ಕೇಂದ್ರ ಸಚಿವರು ಹೇಳಿದರು. “ಎಲೆಕ್ಟ್ರಾನಿಕ್ ನೆಗೋಶಬಲ್ ಗೋದಾಮಿನ ರಸೀದಿಗಳ (ಇ-ಎನ್‌.ಡಬ್ಲ್ಯೂ.ಆರ್‌.) ಆಧಾರದಲ್ಲಿ ರೈತರು/ವ್ಯಾಪಾರಿಗಳು ಪಡೆದ ಸಾಲಗಳಿಗೆ ಗ್ಯಾರಂಟಿ ವ್ಯಾಪ್ತಿ ಬರುವಂತೆ ಮಾಡಿರುವ ಕಾರಣ ಯೋಜನೆಯು ಮಹತ್ವದ ಉಪಕ್ರಮವಾಗಿದೆರು. ಸಿಜಿಎಸ್-ಎನ್.ಪಿ.ಎಫ್. ಯೋಜನೆಯನ್ನು ಬ್ಯಾಂಕ್‌ ಗಳಲ್ಲಿ ವಿಶ್ವಾಸವನ್ನು ತುಂಬಲು ಪರಿಚಯಿಸಲಾಗಿದೆ, ಡಬ್ಲ್ಯೂ.ಡಿ.ಆರ್.ಎ. ನಲ್ಲಿ ನೋಂದಾಯಿಸಲಾದ ಗೋದಾಮುಗಳಲ್ಲಿ ತಮ್ಮ ಕೃಷಿ / ತೋಟಗಾರಿಕಾ ಉತ್ಪನ್ನಗಳನ್ನು ಸಂಗ್ರಹಿಸುವ ರೈತರು / ವ್ಯಾಪಾರಿಗಳಿಗೆ ಎಲೆಕ್ಟ್ರಾನಿಕ್ ನೆಗೋಷಿಯೇಬಲ್ ವೇರ್‌ಹೌಸ್ ರಸೀದಿಗಳ (ಇ-ಎನ್‌.ಡಬ್ಲ್ಯೂ.ಆರ್.) ಆಧಾರದಲ್ಲಿ ಅಡವು/ ಗಿರವಿ ರೀತಿಯ ಹಣಕಾಸು ವಿಸ್ತರಣೆಯನ್ನುಈ ಯೋಜನೆ ಉತ್ತೇಜಿಸುತ್ತದೆ”. ಎಂದು ಕೇಂದ್ರ ಸಚಿವರು ಹೇಳಿದರು.

ತಮ್ಮ ಸ್ವ ಅನುಭವಗಳನ್ನು ನೆನಪಿಸಿಕೊಳ್ಳುತ್ತಾ ಕೇಂದ್ರ ಸಚಿವರು, “ಸಾಲದ ಮೊತ್ತ ಮತ್ತು ಇ-ಎನ್‌ಡಬ್ಲ್ಯೂಆರ್ ರಸೀದಿಗಳಂತಹ ಇತರ ಹಣಕಾಸು ನೀಡಿಕೆಯನ್ನು ಇತ್ಯರ್ಥಪಡಿಸುವಲ್ಲಿ ಬ್ಯಾಂಕ್‌ಗಳು ರೈತರ ಬಗ್ಗೆ ಉದಾರವಾದ ಸರಳ –ಸುಲಭ ವಿಧಾನವನ್ನು ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು.

ಕೇಂದ್ರ ಸಚಿವ ಶ್ರೀ ಜೋಶಿಯವರು ತಮ್ಮ ಭಾಷಣದಲ್ಲಿ “ರೈತರ ಕಲ್ಯಾಣಕ್ಕಾಗಿ ಪ್ರಧಾನ ಮಂತ್ರಿಯವರ ಬದ್ಧತೆ”ಯನ್ನು ಪ್ರಸ್ತಾಪಿಸಿದರು. “ನಡೆಯುತ್ತಿರುವ ಸಂಘರ್ಷ-ಘರ್ಷಣೆಗಳಿಂದಾಗಿ ರಸಗೊಬ್ಬರ ಬೆಲೆಗಳು ಜಾಗತಿಕವಾಗಿ ಹೆಚ್ಚಿವೆ. ಆದರೆ ಭಾರತ ಸರ್ಕಾರವು ರೈತರಿಗೆ ವಿಶ್ವದಲ್ಲೇ ಅತ್ಯಂತ ಕಡಿಮೆ ದರದಲ್ಲಿ ಯೂರಿಯಾವನ್ನು ನೀಡುತ್ತಿದೆ” ಎಂದು ಅವರು ಹೇಳಿದರು,.

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವ ಶ್ರೀಮತಿ. ರೈತರ ಕಲ್ಯಾಣಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸ್ಪಷ್ಟ ಕರೆಯನ್ನು ಪ್ರತಿಬಿಂಬಿಸುವ ಯೋಜನೆಯು ರೈತರ ಕಲ್ಯಾಣವನ್ನು ರಕ್ಷಿಸುತ್ತದೆ ಎಂದು ನಿಮುಬೆನ್ ಜಯಂತಿಭಾಯಿ ಬಂಬಾನಿಯಾ ಹೇಳಿದರು.

ಯೋಜನೆಯು ಕ್ರೆಡಿಟ್ ರಿಸ್ಕ್ ಮತ್ತು ವೇರ್‌ಹೌಸ್‌ಮ್ಯಾನ್ ರಿಸ್ಕ್ ಎರಡರಿಂದಲೂ ಉಂಟಾಗುವ ಸಮಸ್ಯೆಗಳ ಡೀಫಾಲ್ಟ್ ಅನ್ನು ಪರಿಹರಿಸುತ್ತದೆ ಮತ್ತು ಮೂಲಕ ಬ್ಯಾಂಕ್‌ ಗಳ ನಂಬಿಕೆಯನ್ನು ಸುಧಾರಿಸುತ್ತದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವ ಶ್ರೀ ಬಿ.ಎಲ್. ವರ್ಮಾ ಹೇಳಿದರು.

ಭಾರತ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿ ಶ್ರೀ ಸಂಜೀವ್ ಚೋಪ್ರಾ ಅವರು ಕೃಷಿಯಲ್ಲಿ “ಅವಧಿ ಸಾಲ ಮತ್ತು ಸುಗ್ಗಿಯ ನಂತರದ ಪ್ರತಿಜ್ಞೆ ಹಣಕಾಸು ಸಾಲವನ್ನು ಹೆಚ್ಚಿಸುವ ಅಗತ್ಯವಿದೆ. 1,000 ಕೋಟಿ ರೂಪಾಯಿಗಳ ಹೆಚ್ಚುವರಿ ನಿಧಿಯೊಂದಿಗೆ ಯೋಜನೆಯನ್ನು ಪ್ರಾರಂಭಿಸುವುದರಿಂದ ಮುಂದಿನ 10 ವರ್ಷಗಳಲ್ಲಿ ಸುಗ್ಗಿಯ ನಂತರದ ಸಾಲವನ್ನು 5.5 ಲಕ್ಷ ಕೋಟಿಗೆ ಹೆಚ್ಚಿಸಲಾಗುವುದು. ಇ-ಕಿಸಾನ್ ಉಪಜ್ ನಿಧಿ ಪ್ಲಾಟ್‌ಫಾರ್ಮ್‌ನ ಇತ್ತೀಚಿನ ಪ್ರಾರಂಭವು ಬ್ಯಾಂಕರ್‌ ಗಳನ್ನು ಪದೇ ಪದೇ ಸಂಪರ್ಕಿಸದೆ ರೈತರಿಗೆ ಸಾಲವನ್ನು ಸುಗಮಗೊಳಿಸುತ್ತದೆ. ನ್ಯಾಷನಲ್ ಇ-ರೆಪೊಸಿಟರಿ ಲಿಮಿಟೆಡ್ ಮತ್ತು ಕಂಟ್ರಿವೈಡ್ ಕಮಾಡಿಟಿ ರೆಪೊಸಿಟರಿ ಲಿಮಿಟೆಡ್ ಸಂಸ್ಥೆಗಳು ಈ ಸಿಜಿಎಸ್-ಎನ್.ಪಿ.ಎಫ್ ಯೋಜನೆಯ ಬಗ್ಗೆ ಜಾಗೃತಿ ಮೂಡಿಸುವುದು, ರೆಪೊಸಿಟರಿ ಶುಲ್ಕಗಳನ್ನು ಸಮಂಜಸವಾಗಿ ಮಾಡುವುದು ಮತ್ತು ಹೆಚ್ಚಿನ ಗೋದಾಮುಗಳನ್ನು ನೋಂದಾಯಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಆದ್ಯತೆ ನೀಡಬೇಕಾಗಿದೆ. ಮುಂದಿನ 1-2 ವರ್ಷಗಳಲ್ಲಿ ಗೋದಾಮು ನೋಂದಣಿಯನ್ನು 40,000 ಕ್ಕೆ ಹೆಚ್ಚಿಸುವ ಅಗತ್ಯವಿದೆ” ಎಂದು ಶ್ರೀ ಛೋಪ್ರಾ ಅವರು ಹೇಳಿದರು.

ಕ್ರೆಡಿಟ್ ಗ್ಯಾರಂಟಿ ಯೋಜನೆಗಳು ಉದ್ದೇಶಿತ ಫಲಾನುಭವಿಗಳಿಗೆ ಹಣಕಾಸಿನ ಲಭ್ಯತೆ ಮತ್ತು ಲಭ್ಯತೆಯನ್ನು ಹೆಚ್ಚಿಸಲು ನಿರೀಕ್ಷಿಸಲಾಗಿದೆ, ಏಕೆಂದರೆ ರೈತರು ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಇ-ಎನ್‌ಡಬ್ಲ್ಯೂಆರ್ ಆಧಾರಿತ ಅಡವು/ಗಿರವಿ ಹಣಕಾಸುಗಾಗಿ ಕ್ರೆಡಿಟ್ ಗ್ಯಾರಂಟಿ ಯೋಜನೆಯು ವಿವಿಧ ಮಧ್ಯಸ್ಥಗಾರರಿಂದ ವಿಶೇಷವಾಗಿ ಬ್ಯಾಂಕಿಂಗ್ ವಲಯದಿಂದ ಬೇಡಿಕೆಯಲ್ಲಿದೆ. ಕ್ರೆಡಿಟ್ ಗ್ಯಾರಂಟಿ ಯೋಜನೆಯು ಇ-ಎನ್‌ಡಬ್ಲ್ಯೂಆರ್‌ಗಳ ಆಧಾರದಲ್ಲಿ  ಸುಗ್ಗಿ ಬೆಳೆಯ ನಂತರದ ಸಾಲವನ್ನು ಹೆಚ್ಚಿಸಲು ಮತ್ತು ಮೂಲಕ ರೈತರ ಆದಾಯವನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.

ಯೋಜನೆಯು ಮುಖ್ಯವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು, ಮಹಿಳೆಯರು, ಎಸ್‌ಸಿ, ಎಸ್‌ಟಿ ಮತ್ತು ದಿವ್ಯಾಂಗ (ಪಿಡಬ್ಲ್ಯೂಡಿ) ರೈತರ ಮೇಲೆ ಕನಿಷ್ಠ ಗ್ಯಾರಂಟಿ ಶುಲ್ಕದೊಂದಿಗೆ ಕೇಂದ್ರೀಕರಿಸಿ ವ್ಯವಹರಿಸುತ್ತದೆ. ಇದಲ್ಲದೆ, ಸಣ್ಣ ವ್ಯಾಪಾರಿಗಳು ,ವ್ಯವಹಾರಿಕೋದ್ಯಮಿಗಳು, ಎಂ.ಎಸ್.ಎಂ.ಇ.ಗಳು, ಎಫ್.ಪಿ.ಒ.ಗಳು ಸಹ ಯೋಜನೆಯ ಅಡಿಯಲ್ಲಿ ಪ್ರಯೋಜನ ಪಡೆಯುಲಿದ್ದಾರೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ರೂ. 75 ಲಕ್ಷಗಳ (80 ರಿಂದ 85% ) ವ್ಯಾಪ್ತಿಯ ಸಾಲವನ್ನು ಮತ್ತು ಎಂ.ಎಸ್.ಎಂ.ಇ.ಗಳು, ಎಫ್.ಪಿ.ಒ.ಗಳು/ವ್ಯಾಪಾರಿಗಳಿಗೆ ರೂ. 200 ಲಕ್ಷಗಳ (75%) ವ್ಯಾಪ್ತಿಯ ಸಾಲವನ್ನು ಈ ಯೋಜನೆಯಡಿಯಲ್ಲಿ  ನೀಡಲಾಗುತ್ತದೆ.

ಇ-ಎನ್‌.ಡಬ್ಲ್ಯೂ.ಆರ್. ಆಧಾರಿತ ಅಡವು/ಗಿರವಿ ಹಣಕಾಸು ವ್ಯವಸ್ಥೆಗಾಗಿ ಇರುವ ಕ್ರೆಡಿಟ್ ಗ್ಯಾರಂಟಿ ಯೋಜನೆಯ ಪ್ರಮುಖ ಲಕ್ಷಣಗಳು ಕೆಳಗಿನಂತಿವೆ:

 

ಒಟ್ಟು ಹೆಚ್ಚುವರಿ ನಿಧಿ

ರೂ. 1000 ಕೋಟಿಗಳು

ವ್ಯಾಪ್ತಿ

ಕೃಷಿ ಉದ್ದೇಶಕ್ಕಾಗಿ ರೂ. 75 ಲಕ್ಷಗಳು ಮತ್ತು ಕೃಷಿಯೇತರ ಉದ್ದೇಶಕ್ಕಾಗಿ ರೂ.200 ಲಕ್ಷ ವರೆಗಿನ ಸಾಲಗಳು

ಅರ್ಹ ಸಂಸ್ಥೆಗಳು

ಎಲ್ಲಾ ಶೆಡ್ಯೂಲ್ಡ್ ಬ್ಯಾಂಕ್‌ಗಳು ಮತ್ತು ಎಲ್ಲಾ ಸಹಕಾರಿ ಬ್ಯಾಂಕ್‌ಗಳು

ಅರ್ಹ ಸಾಲಗಾರರು/  ಪಡೆಯುವವರು

ಸಣ್ಣ/ಅತಿ ಸಣ್ಣ ರೈತರು/ ಮಹಿಳೆಯರು/ ಎಸ್‌ಸಿ/ ಎಸ್‌ಟಿ ಮತ್ತು ದಿವ್ಯಾಂಗ (ಪಿಡಬ್ಲ್ಯೂಡಿ) ರೈತರು, ಇತರೆ ರೈತರು, ಸಣ್ಣ ವ್ಯಾಪಾರಿಗಳು ,ವ್ಯವಹಾರಿಕೋದ್ಯಮಿಗಳು, ಎಂ.ಎಸ್.ಎಂ.ಇ.ಗಳು, ಎಫ್.ಪಿ.ಒ. ಮತ್ತು ರೈತ ಸಹಕಾರ ಸಂಘಗಳು.

ಅಪಾಯ/ಹಾನಿ/ನಷ್ಟದ ವ್ಯಾಪ್ತಿ

ಕ್ರೆಡಿಟ್ ಮತ್ತು ಗೋದಾಮಿನ ಅಪಾಯ

ಗ್ಯಾರಂಟಿಯ ಶುಲ್ಕ

ರೈತರಿಗೆ ವಾರ್ಷಿಕ 0.4% , ಮತ್ತು ರೈತರಲ್ಲದವರಿಗೆ/ ಇತರರಿಗೆ ವಾರ್ಷಿಕ 1%

ಗ್ಯಾರಂಟಿಯ ವ್ಯಾಪ್ತಿ

ರೂ. 3 ಲಕ್ಷದವರೆಗಿನ ಸಾಲ (85% ) ಮತ್ತು ಸಣ್ಣ ಮತ್ತು ಅತಿ ಸಣ್ಣ ರೈತರು/ಮಹಿಳೆಯರು/ಎಸ್‌ಸಿ/ ಎಸ್‌ಟಿ ಮತ್ತು ದಿವ್ಯಾಂಗ (ಪಿಡಬ್ಲ್ಯೂಡಿ) ರೈತರಿಗಾಗಿ ರೂ 3 ಲಕ್ಷದಿಂದ  75 ಲಕ್ಷಗಳ ನಡುವಿನ ( 80%) ಸಾಲ  ಮತ್ತು ಇತರ ಸಾಲಗಾರರಿಗೆ 75%. ಸಾಲ

 

 

ಕ್ಲೈಮ್‌ ಅಂತಿಮ ಇತ್ಯರ್ಥ

 

ಕ್ರ.ಸಂ.

ಪಡೆಯಲು ಅರ್ಹತೆ

ಬೇಡಿಕೆಯ ಮೊದಲ ಕಂತು

 

(%  ಮೂಲ ಕನಿಷ್ಟ ಮೊತ್ತ

ಬೇಡಿಕೆಯ ಎರಡನೇ  ಕಂತು

 

(%  ಮೂಲ ಕನಿಷ್ಟ ಮೊತ್ತ )

ಎ.

ರೂ. 75 ಲಕ್ಷಗಳ ವರೆಗೆ

75%

25%

ಬಿ.

ರೂ. 75 ಲಕ್ಷಗಳಿಂದ ಮತ್ತು ರೂ.2 ಕೋಟಿ ವರೆಗೆ

60%

40%

 

 

 

*****


(Release ID: 2085057) Visitor Counter : 21


Read this release in: English , Urdu , Hindi