ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಉತ್ತಮ ಆಡಳಿತ: ಕೊನೆ ಮೈಲಿವರೆಗೆ ಸಬಲೀಕರಣ ಮತ್ತು ಬದಲಾವಣೆ
Posted On:
12 DEC 2024 4:13PM by PIB Bengaluru
ಡಿಸೆಂಬರ್ 11, 2024 ರಂದು ರೇಖಾ ಅವರ ನೆನಪುಗಳನ್ನು ಕೆತ್ತಲಾಗಿದೆ. ಆಕೆ ತನ್ನ ಪ್ರಯತ್ನಗಳಿಗೆ ಮನ್ನಣೆ ಪಡೆಯಲು ಕಾಯುತ್ತಿದ್ದಾಗ ಸ್ಪಷ್ಟವಾದ ಉತ್ಸಾಹದಿಂದ ಎಚ್ಚರಗೊಂಡಳು. ಮಧ್ಯಪ್ರದೇಶದ ಗುನಾದಲ್ಲಿ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ[ಐಸಿಡಿಎಸ್] ವಿಭಾಗದಲ್ಲಿ ಆರೋಗ್ಯ ಸುಧಾರಣೆಗೆ ಬದ್ಧತೆಯಿಂದ ಕಾರ್ಯನಿರ್ವಹಿಸಿದ ಕಾರಣ ಆಕೆ “ಮಿಸ್ ಹಿಮೋಗ್ಲೋಬಿನ್” ಪುರಸ್ಕಾರಕ್ಕೆ ಪಾತ್ರರಾಗಿದ್ದರು. ರೇಖಾ ಸಮತೋಲಿತ ಪೌಷ್ಟಿಕತೆಯತ್ತ ತನ್ನ ಲಕ್ಷ್ಯವನ್ನು ಕೇಂದ್ರೀಕರಿಸಿಕೊಂಡಿದ್ದರು. ಇದಕ್ಕಾಗಿ ಆಕೆ ಕಬ್ಬಿಣ, ಫೋಲಿಕ್ ಆಸೀಡ್ ಗುಳಿಗೆಗಳನ್ನು ಸ್ವೀಕರಿಸುತ್ತಿದ್ದರು ಮತ್ತು ಆರಂಭಿಕ ಅಸ್ವಸ್ಥತೆಯನ್ನು ನಿವಾರಿಸಲು ಒತ್ತು ನೀಡಿದ್ದರು. ಆಕೆಯ ಕಠಿಣ ಪರಿಶ್ರಮ ಫಲ ನೀಡಿತು ಮತ್ತು ಆರೋಗ್ಯಕರ ಪೌಷ್ಟಿಕಾಂಶದ ಅಭ್ಯಾಸಗಳನ್ನು ಉತ್ತೇಜಿಸುವ ಉದ್ದೇಶದಿಂದ ಆಕೆಯನ್ನು ಶ್ಲಾಘಿಸಲಾಯಿತು. ಇದು ಪೋಷಣ್ ಅಭಿಯಾನದ ಭಾಗವಾಗಿದೆ, ವಿಶೇಷವಾಗಿ ಹದಿಹರೆಯದ ಬಾಲಕಿಯರಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ಪ್ರೋತ್ಸಾಹಿಸುವ ಮೂಲಕ ರಕ್ತಹೀನತೆ ಮುಕ್ತ ಭಾರತ ನಿರ್ಮಾಣ ಮಾಡುವ ಗುರಿಯನ್ನು ಹೊಂದಲಾಗಿದೆ.
ಭಾರತದ ಮಹತ್ವಾಕಾಂಕ್ಷೆಯ ಜಿಲ್ಲೆಗಳಿಂದ ಬದಲಾವಣೆಯ ಕಥೆಗಳು
ದೇಶದ 112 ಮಹತ್ವಾಕಾಂಕ್ಷಿ ಜಿಲ್ಲೆಗಳನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರ 2018 ರಲ್ಲಿ ಮಹತ್ವಾಕಾಂಕ್ಷೆ ಜಿಲ್ಲೆಗಳ ಕಾರ್ಯಕ್ರಮ [ಎಡಿಪಿ] ಜಾರಿಗೊಳಿಸಿದ್ದು, ಇದರಲ್ಲಿ ಗುಣ ಜಿಲ್ಲೆಯಲ್ಲಿ ಸುಸ್ಥಿರ ಅಭಿವೃದ್ದಿ ಕೇಂದ್ರವನ್ನು ಸಹ ಆರಂಭಿಸಲಾಗಿದೆ. ಸರ್ಕಾರಿ ಯೋಜನೆಗಳ ಏಕಮುಖ ದೃಷ್ಟಿಕೋನ, ಅಧಿಕಾರಿಗಳ ನಡುವಿನ ಸಹಯೋಗ ಮತ್ತು ಮಾಸಿಕ ಜಿಲ್ಲಾ ಶ್ರೇಯಾಂಕಗಳನ್ನು ಸ್ಪರ್ಧೆಯ ಮೇಲೆ ನೀಡುವುದನ್ನು ಇದು ಕೇಂದ್ರೀಕರಿಸಲ್ಪಟ್ಟಿದೆ. ಎಡಿಪಿ ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಮತ್ತು ಆರ್ಥಿಕ ಸೇರ್ಪಡೆಯಂತಹ ಪ್ರಮುಖ ಕ್ಷೇತ್ರಗಳನ್ನು ಇದು ಒಳಗೊಂಡಿದೆ. ಉತ್ತಮ ಆಡಳಿತದ ತತ್ವಗಳಲ್ಲಿ ಇದು ಬೇರೂರಿದೆ, ಇದು ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನಾಗರಿಕರ ಭಾಗವಹಿಸುವಿಕೆಯನ್ನು ಒತ್ತಿಹೇಳುತ್ತದೆ.
ಗುಣದಂತಹ ಜಿಲ್ಲೆಯಲ್ಲಿ ಎಡಿಪಿ ಕಾರ್ಯಕ್ರಮ ಸ್ಥಳೀಯ, ನಾವೀನ್ಯತೆಯ ಪರಿಹಾರಗಳ ಮೂಲಕ ಸಮುದಾಯ ಯೋಗ ಕ್ಷೇಮಕ್ಕೆ ಆದ್ಯತೆ ನೀಡಿದ್ದು, ಇದರಡಿ ಮಹಿಳೆಯರು ಮತ್ತು ಮಕ್ಕಳು ರಕ್ತಹೀನತೆ ವಿರುದ್ಧ ಹೋರಾಟ ಮಾಡಲು ಮತ್ತು ಸಮುದಾಯದಲ್ಲಿ ಉತ್ತಮ ಆರೋಗ್ಯ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ಸಮುದಾಯದ ಯೋಗಕ್ಷೇಮ ಕಾರ್ಯನಿರ್ವಹಣೆಗಾಗಿ ರೇಖಾ ಅವರಿಗೆ ಮಾನ್ಯತೆ ನೀಡಲಾಗಿತ್ತು.
ಇದೇ ರೀತಿಯಲ್ಲಿ ಮತ್ತೊಂದು ಮಹತ್ವಾಕಾಂಕ್ಷೆ ಅಭಿವೃದ್ದಿ ಯೋಜನೆ – ಎಡಿಪಿ ಅಡಿ ಪೌರಿ ಗರ್ವಾಲ್ ಜಿಲ್ಲೆಯಲ್ಲೂ ಪರಿವರ್ತನೆ ತರಲಾಗುತ್ತಿದೆ. ಈ ವಲಯದ ಹದಿಹರೆಯದ ಬಾಲಕಿ ಕವಿತಾ ಕಬ್ಬಿಣ ಮತ್ತು ಫೋಲಿಕ್ ಆಸಿಡ್ ಮಾತ್ರೆಗಳ ಕಡಿಮೆ ಅನುಸರಣೆಯಿಂದಾಗಿ ರಕ್ತಹೀನತೆಯಿಂದ ಬಳಲುತ್ತಿದ್ದರು. ಇದೇ ರೀತಿಯ ಸವಾಲುಗಳನ್ನು ಹಲವಾರು ಮಹಿಳೆಯರು ಎದುರಿಸುತ್ತಿದ್ದರು. ಅಸಂಗತ ಸಂದೇಶ ರವಾನೆ, ಅಡ್ಡ ಪರಿಣಾಮಗಳ ಭೀತಿ ಮತ್ತು ಸರಿಯಾದ ಸಲಹೆಯ ಕೊರತೆಯು ಆರೋಗ್ಯಕರ ಅಭ್ಯಾಸಗಳನ್ನು ರೂಪಿಸಲು ಕಷ್ಟಕರವಾಗಿತ್ತು. ಈ ಸವಾಲಿನಿಂದ ಹೊರ ಬರಲು ಮುಂಚೂಣಿ ಕೆಲಸಗಾರರಿಗೆ (ಎಫ್.ಎಲ್.ಡಬ್ಲ್ಯುಗಳು) ಸಮಾಲೋಚನೆ ಕಾರ್ಡ್‌ಗಳನ್ನು ಪರಿಚಯಿಸಲಾಯಿತು, ಐಎಫ್ಎ ಮಾತ್ರೆಗಳ ಪ್ರಯೋಜನಗಳ ಬಗ್ಗೆ ಮಾರ್ಗದರ್ಶನ ನೀಡುವುದು, ಅಡ್ಡ ಪರಿಣಾಮಗಳನ್ನು ನಿರ್ವಹಿಸುವುದು ಮತ್ತು ಆರೋಗ್ಯಕರ ಅಭ್ಯಾಸಗಳನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ. ಈ ಉಪಕ್ರಮವು ಜಿಲ್ಲೆಯಾದ್ಯಂತ ಐಎಫ್ಎ ಪೂರಕತೆಯ ಅನುಸರಣೆಯಲ್ಲಿ ಗಮನಾರ್ಹ ವೃದ್ಧಿಗೆ ಕಾರಣವಾಯಿತು.
ಇದೇ ಸಮಯದಲ್ಲಿ ಪೌರಿ ಗರ್ವಾಲ್ ನಲ್ಲಿ ಯಥೇಚ್ಛ ಕಬ್ಬಿಣದ ಅಂಶವಿರುವ ‘ಜೋಂಗ್ರಾ ಲಾಡು’ ಸ್ಥಳೀಯವಾಗಿ ಈ ಸಮಸ್ಯೆಗೆ ಪರಿಹಾರವಾಗಿ ಕಾಣಿಸಿಕೊಂಡಿತು. ಉರಿದ ಸಿರಿಧಾನ್ಯಗಳಿಂದ ಇದನ್ನು ತಯಾರಿಸಲಾಗುತ್ತದೆ, ಇದು ಪೌಷ್ಟಿಕ ಮತ್ತು ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲವಾಗಿದೆ. ಈ ಸಾಂಪ್ರದಾಯಿಕ ಲಾಡುಗಳನ್ನು ಮನೆಗೆ ಕೊಂಡೊಯ್ಯುವ (ಟಿಎಚ್ಆರ್) ರುಚಿಕರ, ಅನುಕೂಲಕರವಾದ ಪರ್ಯಾಯವನ್ನು ಪಡಿತರ ವ್ಯವಸ್ಥೆ ಮೂಲಕ ಇದನ್ನು ಒದಗಿಸಲಾಗಿದೆ. ಇದು ಅನೇಕ ಮಹಿಳೆಯರಿಗೆ ಇಷ್ಟವಾಗಲಿಲ್ಲ. ಈ ಉಪಕ್ರಮದಿಂದ ರಕ್ತಹೀನತೆಯನ್ನು ನಿಭಾಯಿಸುವುದು ಮಾತ್ರವಲ್ಲದೇ ಸ್ವ-ಸಹಾಯ ಗುಂಪುಗಳನ್ನು ರಚಿಸುವ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸಿತು. ಇಲ್ಲಿ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಲಾಡುಗಳನ್ನು ಉತ್ಪಾದಿಸುವ, ಹೊಸ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸುವ ಮತ್ತು ಸ್ಥಳೀಯ ಉದ್ಯಮಶೀಲತೆಯನ್ನು ಉತ್ತೇಜಿಸಲು ಸಹ ಆದ್ಯತೆ ನೀಡಿದಂತಾಗಿದೆ.
ಈ ಕಥೆಗಳು ಸಮುದಾಯ ಆಧಾರಿತ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಕಾರಾತ್ಮಕ ಪರಿಣಾಮ ಬೀರುತ್ತವೆ. ಇವು ಮಹತ್ವಾಕಾಂಕ್ಷಿ ಜಿಲ್ಲೆಗಳ ಅಭಿವೃದ್ದಿ ಕಾರ್ಯಕ್ರಮಗಳ ಗುರಿಗಳಡಿ ಸೇರ್ಪಡೆಯಾಗಿದ್ದು, ಇದರಲ್ಲಿ ನಾವೀನ್ಯತೆಯ ಪರಿಹಾರ, ವ್ಯಕ್ತಿಗಳ ಸಬಲೀಕರಣ ಮತ್ತು ಎಲ್ಲರನ್ನೊಳಗೊಂಡ ಅಭಿವೃದ್ಧಿಗೆ ಆದ್ಯತೆ ನೀಡಿದಂತಾಗಿದೆ.
ಉತ್ತಮ ಆಡಳಿತ ಸಪ್ತಾಹ 2024 (ಡಿಸೆಂಬರ್ 19-24) ಸಮಯದಲ್ಲಿ ಪರಿಣಾಮಕಾರಿ ಆಡಳಿತಕ್ಕೆ ತನ್ನ ಬದ್ಧತೆಯನ್ನು ಕೇಂದ್ರ ಸರ್ಕಾರ ಒತ್ತಿಹೇಳುತ್ತಿದೆ. ಡಿಸೆಂಬರ್ 11-18 ಸಿದ್ಧತೆಯ ಹಂತವಾಗಿದ್ದು, 2024 ರ ಡಿಸೆಂಬರ್ 11 ರಂದು ಇದಕ್ಕಾಗಿಯೇ ಮೀಸಲಾದ ಪೋರ್ಟಲ್ https://darpgapps.nic.in/GGW24 ಅನಾವರಣಗೊಳಿಸಲಾಗಿದೆ. ಈ ಪೋರ್ಟಲ್ ಗೆ ಜಿಲ್ಲಾಧಿಕಾರಿಗಳು ಪ್ರಗತಿ ವರದಿಗಳನ್ನು ಅಪ್ ಲೋಡ್ ಮಾಡಬೇಕಾಗುತ್ತದೆ. ಉತ್ತಮ ಆಡಳಿತದ ಅಭ್ಯಾಸಗಳು ಮತ್ತು ಅಭಿಯಾನದ ಸಿದ್ಧತೆ ಸಂದರ್ಭದ ದೃಶ್ಯಗಳನ್ನು ಅನುಷ್ಠಾನದ ಹಂತಗಳು, ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಬೆಳೆಸಲು ಇವುಗಳನ್ನು ಹಂಚಿಕೊಳ್ಳಬೇಕಾಗುತ್ತದೆ.
ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮ ಉತ್ತಮ ಆಡಳಿತದ ಕ್ರಿಯೆಗೆ ಉತ್ತಮ ಉದಾಹರಣೆಯಾಗಿದೆ. ಇದು ಭಾಗವಹಿಸುವಿಕೆ ಮತ್ತು ಒಳಗೊಳ್ಳುವಿಕೆ ಸೇರಿದಂತೆ ವಿಶ್ವಸಂಸ್ಥೆ ವಿವರಿಸಿರುವ ಉತ್ತಮ ಆಡಳಿತದ 8 ತತ್ವಗಳನ್ನು ಒಳಗೊಂಡಿದೆ. ಎಲ್ಲಾ ಸಮುದಾಯಗಳು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿವೆ ಮತ್ತು ಫಲಿತಾಂಶಗಳಿಂದ ಪ್ರಯೋಜನ ಪಡೆಯುತ್ತವೆ ಎಂಬುದನ್ನು ಇದು ಖಚಿತಪಡಿಸುತ್ತದೆ. ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸ್ಪಂದಿಸುವಿಕೆಯ ಮೇಲಿನ ಗಮನವು ಜಿಲ್ಲಾ ಮಟ್ಟದ ಉಪಕ್ರಮಗಳನ್ನು ಸ್ಪಷ್ಟ ಸಂವಹನ ಮತ್ತು ಸಂಪನ್ಮೂಲಗಳ ಸಮರ್ಥ ಬಳಕೆಯೊಂದಿಗೆ ಕಾರ್ಯಗತಗೊಳಿಸುವುದನ್ನು ಖಾತರಿಪಡಿಸುತ್ತದೆ. ಇದಲ್ಲದೇ, ಪರಿಣಾಮಕಾರಿತ್ವಕ್ಕೆ ಒತ್ತು ನೀಡುವುದರಿಂದ ಯಾರೂ ಹಿಂದೆ ಉಳಿಯುವುದಿಲ್ಲ, ವಿಶೇಷವಾಗಿ ಅಂಚಿನಲ್ಲಿರುವವರು ಮತ್ತು ದುರ್ಬಲರಿಗೆ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮದ ಉತ್ತಮ ಆಡಳಿತವು ಸಮಗ್ರ ಬೆಳವಣಿಗೆ ಮತ್ತು ರಾಷ್ಟ್ರವ್ಯಾಪಿ ಅಭಿವೃದ್ಧಿಗೆ ಹೇಗೆ ಕಾರಣವಾಗಬಹುದು ಎಂಬುದನ್ನು ತೋರಿಸುತ್ತದೆ, ವ್ಯಕ್ತಿಗಳು ಮತ್ತು ಸಮುದಾಯಗಳು ಅಭಿವೃದ್ಧಿ ಹೊಂದಲು ಇದು ಸದಾವಕಾಶವನ್ನು ಕಲ್ಪಿಸುತ್ತದೆ.
ಉಲ್ಲೇಖಗಳು
*****
(Release ID: 2084742)
Visitor Counter : 6