ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2024

Posted On: 11 DEC 2024 6:33PM by PIB Bengaluru

"ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಮೂಲಕ, ದೇಶದ ಯುವ ಶಕ್ತಿಯು ಅಭಿವೃದ್ಧಿ ಹೊಂದಿದ ಭಾರತಕ್ಕೆ ಪರಿಹಾರಗಳ ಅಮೃತವನ್ನು ಹೊರತೆಗೆಯುತ್ತಿದೆ".

 - ಶ್ರೀ ನರೇಂದ್ರ ಮೋದಿ, ಪ್ರಧಾನಮಂತ್ರಿ

ಪರಿಚಯ

7ನೇ ಆವೃತ್ತಿಯ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (SIH) ಅನ್ನು ದೇಶಾದ್ಯಂತ 51 ನೋಡಲ್ ಕೇಂದ್ರಗಳಲ್ಲಿ ಏಕಕಾಲದಲ್ಲಿ ನಡೆಸಲಾಗುತ್ತಿದೆ. ಸಾಫ್ಟ್‌ವೇರ್ ಆವೃತ್ತಿಯು 36 ಗಂಟೆಗಳ ಕಾಲ ನಿರಂತರವಾಗಿ ನಡೆಯಲಿದೆ ಮತ್ತು ಹಾರ್ಡ್‌ವೇರ್ ಆವೃತ್ತಿಯು 11 ಡಿಸೆಂಬರ್ 2024 ರಿಂದ 15 ಡಿಸೆಂಬರ್ 2024 ರವರೆಗೆ ಮುಂದುವರಿಯಲಿದೆ. ಇದು  ಪ್ರತಿಭಾವಂತ  ಯುವ ಮನಸ್ಸುಗಳನ್ನು ನವೀನ ಪರಿಹಾರಗಳನ್ನು ಪ್ರದರ್ಶಿಸಲು ಒಟ್ಟುಗೂಡಿಸುತ್ತದೆ.

ಶಿಕ್ಷಣ ಸಚಿವಾಲಯದ ಇನ್ನೋವೇಶನ್ ಸೆಲ್ ನೇತೃತ್ವದ ಈ ಉಪಕ್ರಮವು ವಿಶ್ವದ ಅತಿದೊಡ್ಡ ಮುಕ್ತ ನಾವೀನ್ಯತೆ ಮಾದರಿಯಾಗಿ ಸ್ಥಾಪಿತವಾಗಿದೆ. ವಿದ್ಯಾರ್ಥಿಗಳಿಗೆ ಸುತ್ತಿಲನ ನೈಜ ಸವಾಲುಗಳನ್ನು ಎದುರಿಸಲು ಒಂದು ಅನನ್ಯ ವೇದಿಕೆಯನ್ನು ಇದು ಒದಗಿಸುತ್ತದೆ. ಸೃಜನಶೀಲತೆ, ಸಮಸ್ಯೆ-ಪರಿಹರಿಸುವ ಕೌಶಲ್ಯ ಮತ್ತು ನಾವೀನ್ಯತೆಯನ್ನು ಉತ್ತೇಜಿಸುತ್ತದೆ. ಈ ವರ್ಷದ ಹ್ಯಾಕಥಾನ್‌ನಲ್ಲಿ 250 ಕ್ಕೂ ಹೆಚ್ಚು ಸಮಸ್ಯೆಗಳನ್ನು ಮಂಡಿಸಲಾಗಿದೆ. ಇವುಗಳಲ್ಲಿ ಕೆಲವು ಆಸಕ್ತಿದಾಯಕ ಸಮಸ್ಯೆಗಳೆಂದರೆ: ಇಸ್ರೋ  ಮಂಡಿಸಿದ 'ಚಂದ್ರನ ಮೇಲಿನ ಕತ್ತಲಿನ ಪ್ರದೇಶಗಳ ಚಿತ್ರಗಳನ್ನು ಸ್ಪಷ್ಟಪಡಿಸುವುದು', ಜಲ ಶಕ್ತಿ ಸಚಿವಾಲಯ ಮಂಡಿಸಿದ 'ಕೃತಕ ಬುದ್ಧಿಮತ್ತೆ, ಉಪಗ್ರಹ ಡೇಟಾ, ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು ಡೈನಾಮಿಕ್ ಮಾದರಿಗಳನ್ನು ಬಳಸಿಕೊಂಡು ರಿಯಲ್‌ - ಟೈಮ್‌ ನಲ್ಲಿ ಗಂಗಾ ನದಿಯ ನೀರಿನ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು' ಮತ್ತು ಆಯುಷ್ ಸಚಿವಾಲಯ ಮಂಡಿಸಿದ 'ಕೃತಕ ಬುದ್ಧಿಮತ್ತೆಯೊಂದಿಗೆ  ಸಂಯೋಜಿತವಾದ ಸ್ಮಾರ್ಟ್ ಯೋಗ ಮ್ಯಾಟ್‌ ಅಭಿವೃದ್ಧಿಪಡಿಸುವುದು' ಒಳಗೊಂಡಿವೆ.

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2024ರಲ್ಲಿ ಸಚಿವಾಲಯಗಳು ಮತ್ತು ಇಲಾಖೆಗಳು

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2024ರ ಯಶಸ್ಸಿಗೆ 40 ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು, 6 ರಾಜ್ಯ ಸರ್ಕಾರಗಳು ಮತ್ತು 6 ಸಾರ್ವಜನಿಕ ವಲಯದ ಉದ್ದಿಮೆಗಳ ಸಕ್ರಿಯ ಭಾಗವಹಿಸುವಿಕೆ  ಪ್ರಮುಖ  ಪಾತ್ರ ವಹಿಸಿದೆ. ಇದು  ಹ್ಯಾಕಥಾನ್‌ ನ ಸಮಗ್ರ ಮತ್ತು ಎಲ್ಲರನ್ನೂ ಒಳಗೊಳ್ಳುವ  ಸ್ವರೂಪವನ್ನು  ಪ್ರತಿಬಿಂಬಿಸುತ್ತದೆ.

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2024ರ ವಿಷಯಗಳು

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2024 ರಲ್ಲಿ ರಾಷ್ಟ್ರೀಯ ಆದ್ಯತೆಗಳು ಮತ್ತು ಜಾಗತಿಕ ಸವಾಲುಗಳಿಗೆ  ಅನುಗುಣವಾಗಿ  17  ವಿಷಯಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಲಾಗಿದೆ.  ಪ್ರತಿಯೊಂದು ವಿಷಯವೂ  ಭಾಗವಹಿಸುವವರು ಸಾಂಪ್ರದಾಯಿಕ ಪರಿಹಾರಗಳನ್ನು ಮೀರಿ ಯೋಚಿಸಲು ಮತ್ತು  ಪರಿಣಾಮಕಾರಿ ನಾವೀನ್ಯತೆಗಳನ್ನು ಸೃಷ್ಟಿಸಲು  ಪ್ರೇರೇಪಿಸುವಂತೆ  ವಿನ್ಯಾಸಗೊಳಿಸಲಾಗಿದೆ. ಈ ವಿಷಯಗಳು ಭಾಗವಹಿಸುವವರಿಗೆ  ಸಮಾಜ ಮತ್ತು ಆರ್ಥಿಕತೆಯ ಮೇಲೆ ನೇರವಾಗಿ ಪರಿಣಾಮ ಬೀರುವ ಕ್ಷೇತ್ರಗಳಲ್ಲಿ  ನಾವೀನ್ಯತೆ  ತರಲು  ಅನುವು ಮಾಡಿಕೊಡುತ್ತವೆ.

ಸಮಸ್ಯೆ ಹೇಳಿಕೆಗಳು ಮತ್ತು ಪ್ರಕ್ರಿಯೆ

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2024  ಒಟ್ಟು 254 ಸಮಸ್ಯೆ ಹೇಳಿಕೆಗಳನ್ನು ಸ್ವೀಕರಿಸಿದೆ, ಇವುಗಳಲ್ಲಿ 186 ಸಾಫ್ಟ್‌ ವೇರ್ ಸಂಬಂಧಿತ ಮತ್ತು 68 ಹಾರ್ಡ್‌ವೇರ್ ಸಂಬಂಧಿತ ಸವಾಲುಗಳಾಗಿವೆ.  ಈ ಸಮಸ್ಯೆ ಹೇಳಿಕೆಗಳನ್ನು  ವಿವಿಧ ಸಚಿವಾಲಯಗಳು ಮತ್ತು ಉದ್ಯಮ ಪಾಲುದಾರರು  ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು  ಅಭಿವೃದ್ಧಿಪಡಿಸಿದ್ದಾರೆ.

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ ಗಳ ಪ್ರಕ್ರಿಯೆ ಹರಿವು

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2024ರ ಅಂಕಿಅಂಶಗಳು

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್: ಒಂದೊಂದು ಹ್ಯಾಕ್ ಮೂಲಕ ಭಾರತದ ಭವಿಷ್ಯವನ್ನು ರೂಪಿಸುವುದು

2017ರಲ್ಲಿ ಆರಂಭಗೊಂಡಾಗಿನಿಂದ, ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 13.91 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿ, ಅವರ ಕಲ್ಪನೆಗಳು ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ಒಂದು ವೇದಿಕೆಯನ್ನು ಕಲ್ಪಿಸಿದೆ. ಹ್ಯಾಕಥಾನ್‌ ಗಳಲ್ಲಿ ಸುಮಾರು 2 ಲಕ್ಷ ತಂಡಗಳು ಭಾಗವಹಿಸಿವೆ ಮತ್ತು ವರ್ಷಗಳಲ್ಲಿ ಕಲ್ಪನೆ ಸಲ್ಲಿಕೆಗಳಲ್ಲಿ 7 ಪಟ್ಟು ಹೆಚ್ಚಳ ಕಂಡುಬಂದಿದೆ. ಇದು ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಆಸಕ್ತಿ ಮತ್ತು ಉತ್ಸಾಹವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ವಿದ್ಯಾರ್ಥಿಗಳಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದೆ ಮತ್ತು ವೃತ್ತಿಜೀವನದಲ್ಲಿ ಮುನ್ನಡೆಯಲು ಅಮೂಲ್ಯವಾದ ಅವಕಾಶಗಳನ್ನು ಒದಗಿಸುತ್ತಿದೆ. 2024 ರ ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ (GII) 139 ದೇಶಗಳಲ್ಲಿ ಭಾರತ 39 ನೇ ಸ್ಥಾನದಲ್ಲಿದೆ. ಹೆಚ್ಚುತ್ತಿರುವ ಭಾಗವಹಿಸುವಿಕೆಯೊಂದಿಗೆ, ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ನೇರ ಮತ್ತು ಪರೋಕ್ಷ ಎರಡೂ ರೀತಿಯಲ್ಲಿ ವ್ಯಾಪಕ ಪರಿಣಾಮ ಬೀರಿದೆ. ಇದು ಸಮಸ್ಯೆ-ಪರಿಹರಿಸುವಿಕೆಯನ್ನು ನೇರವಾಗಿ ಉತ್ತೇಜಿಸುವುದಲ್ಲದೆ, ದೇಶಾದ್ಯಂತ ಹ್ಯಾಕಥಾನ್ ಸಂಸ್ಕೃತಿಯನ್ನು ಬೆಳೆಸಿದೆ.  ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮದೇ ಆದ ಹ್ಯಾಕಥಾನ್‌ ಗಳನ್ನು ಆಯೋಜಿಸಲು ಪ್ರೋತ್ಸಾಹಿಸುತ್ತದೆ.

ಅಂತಾರಾಷ್ಟ್ರೀಯ ಟೈ-ಅಪ್‌ ಗಳು ಮತ್ತು ಹ್ಯಾಕಥಾನ್‌ ಗಳು

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ನ ಅಂತಾರಾಷ್ಟ್ರೀಯ ಸಹಯೋಗಗಳು ಜಾಗತಿಕ ನಾವೀನ್ಯತೆ ಪಾಲುದಾರಿಕೆಗಳಿಗೆ ಭಾರತದ ಬದ್ಧತೆಯನ್ನು ಎತ್ತಿ ತೋರಿಸುತ್ತವೆ:

  • ಸಿಂಗಾಪುರ್-ಭಾರತ ಹ್ಯಾಕಥಾನ್ (2018, 2019, 2023): ಈ ರೀತಿಯ ಮೊದಲ ಅಂತರರಾಷ್ಟ್ರೀಯ ಹ್ಯಾಕಥಾನ್ ಅನ್ನು  ಸಿಂಗಾಪುರ್‌ ನ NTU (2018), IIT ಮದ್ರಾಸ್ (2019) ಮತ್ತು IIT ಗಾಂಧಿನಗರ (2023) ನಲ್ಲಿ ಆಯೋಜಿಸಲಾಗಿತ್ತು.  ಎರಡು ದೇಶಗಳ ನಡುವೆ  ಕಲ್ಪನೆಗಳು ಮತ್ತು ಸಂಸ್ಕೃತಿಯ ವಿನಿಮಯದ ಮೂಲಕ ಸಹಯೋಗದಿಂದ ಸಾಮಾಜಿಕ ಸಮಸ್ಯೆಗಳಿಗೆ ನವೀನ ಮತ್ತು ವಿಶಿಷ್ಟ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದು  ಸಿಂಗಾಪುರ್-ಭಾರತ ಹ್ಯಾಕಥಾನ್‌ ನ ಉದ್ದೇಶವಾಗಿತ್ತು.
  • ಆಸಿಯಾನ್-ಭಾರತ ಹ್ಯಾಕಥಾನ್ 2020: ನೀಲಿ ಆರ್ಥಿಕತೆ (Blue Economy)ಯ ವಿಷಯಗಳ ಮೇಲೆ ಕೇಂದ್ರೀಕರಿಸಿದ ಈ ಹ್ಯಾಕಥಾನ್ ಭಾರತ ಮತ್ತು ಎಲ್ಲಾ 10 ಆಸಿಯಾನ್ ರಾಷ್ಟ್ರಗಳ ಭಾಗವಹಿಸುವವರನ್ನು ಒಟ್ಟುಗೂಡಿಸಿತು. ವಿದ್ಯಾರ್ಥಿಗಳು ಭಾರತದಲ್ಲಿ ಕೋಸ್ಟ್ ಗಾರ್ಡ್, INCOIS ನಿಂದ ಹಾಗೂ ಇತರ ಭಾಗವಹಿಸುವ ರಾಷ್ಟ್ರಗಳಿಂದ ಮಾರ್ಗದರ್ಶನ ಪಡೆದರು. ಸಹಯೋಗದ ಪ್ರಯತ್ನಕ್ಕಾಗಿ ತನ್ನದೇ ಆದ ಆನ್‌ ಲೈನ್ ವೇದಿಕೆಯನ್ನು ಹೊಂದಿರುವ ಸಂಪೂರ್ಣ ಆನ್‌ ಲೈನ್ ಹ್ಯಾಕಥಾನ್ ಇದಾಗಿತ್ತು. ಉತ್ತಮ ಪರಿಹಾರ ವಿನ್ಯಾಸಕ್ಕಾಗಿ ಭಾರತೀಯ ಸಮುದ್ರ ಪಾಲುದಾರರಿಂದ ಬೃಹತ್ ತರಬೇತಿ ಅವಧಿಗಳನ್ನು ಈ ಹ್ಯಾಕಥಾನ್ ಕಂಡಿತು.

ಈ ಸಹಯೋಗಗಳು ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸುತ್ತವೆ ಮತ್ತು ಪರಸ್ಪರ ಕಲಿಕೆಯನ್ನು ಉತ್ತೇಜಿಸುತ್ತವೆ.

Yukti  ಇನಿಶಿಯೇಟಿವ್

ಶಿಕ್ಷಣ ಸಚಿವಾಲಯದ ಒಂದು ಮಹತ್ವಾಕಾಂಕ್ಷೆಯ ಉಪಕ್ರಮವಾದ YUKTI (National Innovation Repository) ಶೈಕ್ಷಣಿಕ ಸಂಸ್ಥೆಗಳಿಂದ ಹೊರಹೊಮ್ಮುವ ನಾವೀನ್ಯತೆಗಳು ಮತ್ತು ಸ್ಟಾರ್ಟ್‌ಅಪ್‌ ಗಳ ಒಂದು ಭಂಡಾರವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಈ ಉಪಕ್ರಮವು  ಯುವ ಉದ್ಯಮಿಗಳಿಗೆ ಮಾರ್ಗದರ್ಶನ, ಹಣಕಾಸು ಮತ್ತು ಹೂಡಿಕೆದಾರರು ಹಾಗೂ ಇನ್‌ಕ್ಯುಬೇಶನ್ ಕೇಂದ್ರಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ. SIH ಹಳೆಯ ವಿದ್ಯಾರ್ಥಿಗಳನ್ನು ಬೆಂಬಲಿಸುವಲ್ಲಿ ಯುಕ್ತಿ ಉಪಕ್ರಮವು  ನಿರ್ಣಾಯಕ ಪಾತ್ರ ವಹಿಸಿದೆ. ಇಲ್ಲಿಯವರೆಗೆ, 9654 SIH ಹಳೆಯ ವಿದ್ಯಾರ್ಥಿಗಳೊಂದಿಗೆ 100 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ ಗಳು SIH ಪರಿಸರ ವ್ಯವಸ್ಥೆಯಿಂದ ಹೊರಹೊಮ್ಮಿ, ಆರೋಗ್ಯ, ಶಿಕ್ಷಣ ಮತ್ತು ಸುಸ್ಥಿರತೆಯಂತಹ ಕ್ಷೇತ್ರಗಳಲ್ಲಿನ  ಪ್ರಮುಖ ಸವಾಲುಗಳನ್ನು ಎದುರಿಸುತ್ತಿವೆ. ಹಳೆಯ ವಿದ್ಯಾರ್ಥಿಗಳು  ಮಾರ್ಗದರ್ಶಕರು ಮತ್ತು ಮೌಲ್ಯಮಾಪಕರಾಗಿಯೂ  ಸೇವೆ ಸಲ್ಲಿಸುವ  ಮೂಲಕ  ನಾವೀನ್ಯತೆ ಮತ್ತು ಮಾರ್ಗದರ್ಶನದ  ಚಕ್ರವನ್ನು  ಹೆಚ್ಚಿಸುತ್ತಿದ್ದಾರೆ.

ಡಿಸೈನ್ ವೀಕ್ ಸೆಲೆಬ್ರೇಷನ್

ಜೂನ್ 2023ರಲ್ಲಿ ಪ್ರಾರಂಭವಾದ ಡಿಸೈನ್ ವೀಕ್ ಸೆಲೆಬ್ರೇಶನ್,  ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ ಗಳಲ್ಲಿ (SIH) ಅಭಿವೃದ್ಧಿಪಡಿಸಲಾದ ಮೂಲಮಾದರಿಗಳ ವಿನ್ಯಾಸ ಸೌಂದರ್ಯವನ್ನು ಸುಧಾರಿಸುವತ್ತ ಗಮನಹರಿಸುತ್ತದೆ. ವಧ್ವಾನಿ ಫೌಂಡೇಶನ್‌ ಸಹಯೋಗದೊಂದಿಗೆ  ನಾವೀನ್ಯತೆ ವಿನ್ಯಾಸ ಮತ್ತು ಉದ್ಯಮಶೀಲತೆ (IDE) ಬೂಟ್‌ ಕ್ಯಾಂಪ್‌ ಗಳನ್ನು  ವಿನ್ಯಾಸಗೊಳಿಸಿ  ಆಯೋಜಿಸಲಾಗಿದೆ. ಮೊದಲ ಆವೃತ್ತಿಯಲ್ಲಿ, ಮೂರು ಹಂತಗಳಲ್ಲಿ 25 ಕ್ಕೂ ಹೆಚ್ಚು ಬೂಟ್‌ ಕ್ಯಾಂಪ್‌ ಗಳನ್ನು ನಡೆಸಲಾಯಿತು. ಇವುಗಳಲ್ಲಿ ಉತ್ಪನ್ನ ವಿನ್ಯಾಸ, ದಕ್ಷತಾಶಾಸ್ತ್ರ ಮತ್ತು ವ್ಯಾಪಾರ ಮಾದರಿಗಳ  ಮಹತ್ವವನ್ನು  ಎತ್ತಿ ತೋರಿಸಲಾಯಿತು. ಎರಡನೇ ಆವೃತ್ತಿಯಲ್ಲಿ 20 ಹೆಚ್ಚುವರಿ ಅವಧಿಗಳನ್ನು ಯೋಜಿಸಲಾಗಿದ್ದು, ಈ ವರ್ಷ ಈಗಾಗಲೇ 9  ಅವಧಿಗಳು  ಪೂರ್ಣಗೊಂಡಿವೆ. ಈ ಉಪಕ್ರಮವು SIH ಯೋಜನೆಗಳ ಗುಣಮಟ್ಟ ಮತ್ತು ಮಾರುಕಟ್ಟೆ ಸಿದ್ಧತೆಯನ್ನು  ಗಣನೀಯವಾಗಿ  ವೃದ್ಧಿಸಿದೆ.

ಸರ್ಕಾರಿ ಸಚಿವಾಲಯಗಳು ಅನುಷ್ಠಾನಗೊಳಿಸಿದ ಪರಿಹಾರಗಳು

ಆಯುಷ್ ಸಚಿವಾಲಯ: 2022 ರವರೆಗೆ ಒಟ್ಟು 8 ಪರಿಹಾರಗಳನ್ನು  ಅಂಗೀಕರಿಸಿದೆ, ಇದರಲ್ಲಿ 4 AICTE ನಿಂದ ಮತ್ತು 4 ನೇರವಾಗಿ ಸಚಿವಾಲಯದಿಂದ  ನೇರವಾಗಿ ಧನಸಹಾಯ ನೀಡಲಾಗಿದೆ. 2023 ನೇ ಸಾಲಿಗೆ  ಅಂಗೀಕರಿಸಬೇಕಾದ ಯೋಜನೆಗಳ  ಪರಿಶೀಲನೆ  ಇನ್ನೂ  ಪ್ರಗತಿಯಲ್ಲಿದೆ ಮತ್ತು 2024 ರ ಯೋಜನೆಗಳನ್ನು SIH 2024 ರ  ಗ್ರ್ಯಾಂಡ್ ಫಿನಾಲೆ ನಂತರ  ಪರಿಶೀಲಿಸಲಾಗುತ್ತದೆ.

ISRO: ಸೌರ ಫಲಕದ  ಟಿಲ್ಟ್ ಆಂಗಲ್ ಹೊಂದಾಣಿಕೆ, ವೀಡಿಯೊ ಜಿಯೋಟ್ಯಾಗಿಂಗ್ ಅಪ್ಲಿಕೇಶನ್, INSAT-3D IR ಇಮೇಜರಿ ಬಳಸಿಕೊಂಡು ಚಂಡಮಾರುತದ ತೀವ್ರತೆಯ ಅಂದಾಜಿನ  ಆಧಾರದ ಮೇಲೆ  ಡೀಪ್ ಲರ್ನಿಂಗ್ ಮತ್ತು  ದೊಡ್ಡ  ಭೌಗೋಳಿಕ  ಡೇಟಾಸೆಟ್‌ ಗಳಿಗಾಗಿ  ಬ್ಲಾಕ್‌ ಚೈನ್ ಆಧಾರಿತ  ಶೇಖರಣಾ  ಪರಿಹಾರದ  ಅಭಿವೃದ್ಧಿಯ  ಕುರಿತು  ಆಂತರಿಕ ಅಭಿವೃದ್ಧಿಗಾಗಿ 4 ಪರಿಹಾರಗಳನ್ನು  ಸ್ವೀಕರಿಸಿದೆ.

DST: ವಿದ್ಯುತ್ ಬಳಕೆ ಇಲ್ಲದೆ ಸೌರ ಟ್ರ್ಯಾಕಿಂಗ್ ಸಾಧನದೊಂದಿಗೆ ಸೌರ ಫಲಕ, 3D ಮುದ್ರಿತ ಸ್ಮಾರ್ಟ್ ಮೊಣಕಾಲು ಬೆಂಬಲ, ಹೈಡ್ರೋಗ್ರಾವಿಟ್ರಿಸಿಟಿ ಮತ್ತು COPD ರೋಗಿಗಳಿಗೆ B- ಮಾದರಿಯ ಆಮ್ಲಜನಕ ಸಿಲಿಂಡರ್‌ಗಾಗಿ  ಲಗತ್ತಿನೊಂದಿಗೆ  ವೀಲ್‌ ಚೇರ್‌ ಗಾಗಿ  NIDHI ಪ್ರಯಾಸ್ ಯೋಜನೆಯ  ಮೂಲಕ  ಇನ್‌ಕ್ಯುಬೇಶನ್‌ಗಾಗಿ 4 ಪರಿಹಾರಗಳನ್ನು  ಅಂಗೀಕರಿಸಿದೆ.

DRDO: ಆಗಾಗ್ಗೆ ಬಳಸುವ ಕಾರ್ಯಾಚರಣೆಗಳಿಗಾಗಿ ಲ್ಯಾಪ್‌ ಟಾಪ್‌ ಗಳು/ಪಿಸಿಗಳನ್ನು  ಕಾರ್ಯನಿರ್ವಹಿಸಲು  ಸನ್ನೆ  ಸಕ್ರಿಯಗೊಳಿಸಿದ  ಆಜ್ಞೆಗಳ  ಬಗ್ಗೆ  ಆಂತರಿಕ ಅಭಿವೃದ್ಧಿಗಾಗಿ ಒಂದು ಯೋಜನೆಯನ್ನು  ಅಂಗೀಕರಿಸಿದೆ.

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2022 ಅಡಿಯಲ್ಲಿ ಅನುಷ್ಠಾನಗೊಳಿಸಲಾದ ಯೋಜನೆಗಳ ಅಂಕಿಅಂಶಗಳು

2022ರಲ್ಲಿ, ನೀರು, ಸಮಾಜ ಕಲ್ಯಾಣ, ಶಿಕ್ಷಣ, ಆಯುಷ್, ವಿಜ್ಞಾನ ಮತ್ತು ರಕ್ಷಣೆಯಂತಹ ಡೊಮೇನ್‌ ಗಳಲ್ಲಿ 24 ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲಾಗಿದೆ.

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2023 ಅಡಿಯಲ್ಲಿ ಅನುಷ್ಠಾನಗೊಳಿಸಲಾದ ಯೋಜನೆಗಳ ಅಂಕಿಅಂಶಗಳು

2023ರಲ್ಲಿ, ಮಾಹಿತಿ ಮತ್ತು ಪ್ರಸಾರ, ವಿದ್ಯುತ್, ಆಯುಷ್, ನೀರು, ಪ್ರಾಣಿ ಸಾಕಣೆ, ವಿಪತ್ತು ನಿರ್ವಹಣೆ, ವಿಜ್ಞಾನ, ತಂತ್ರಜ್ಞಾನ, ರೈಲ್ವೆ ಮತ್ತು ಆಡಳಿತದಂತಹ ಡೊಮೇನ್‌ಗಳಲ್ಲಿ 30 ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲಾಗಿದೆ. ಈ ಯೋಜನೆಗಳು ಹೆಚ್ಚಿನ ಕಾರ್ಯಾಚರಣೆಯ ದಕ್ಷತೆಯನ್ನು ಮಾತ್ರವಲ್ಲದೆ ನಿರ್ಣಾಯಕ ಸಾಮಾಜಿಕ ಸವಾಲುಗಳನ್ನು ಸಹ ಪರಿಹರಿಸಿದೆ.

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ನಿಂದ ಸ್ಟಾರ್ಟ್‌ಅಪ್‌ ಗಳು

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ನಿಂದ ಹುಟ್ಟಿದ ಸ್ಟಾರ್ಟ್‌ಅಪ್‌ಗಳು ಆರೋಗ್ಯ, ಸುಸ್ಥಿರತೆ ಮತ್ತು ಶಿಕ್ಷಣ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸವಾಲುಗಳನ್ನು ನಿಭಾಯಿಸಿವೆ. ಈ ಸ್ಟಾರ್ಟ್‌ಅಪ್‌ ಗಳು ಸರ್ಕಾರದ ಉಪಕ್ರಮಗಳು ಮತ್ತು ಉದ್ಯಮ ಪಾಲುದಾರಿಕೆಗಳಿಂದ ಬೆಂಬಲಿತವಾಗಿದೆ, ಅವುಗಳ ಬೆಳವಣಿಗೆ ಮತ್ತು ಯಶಸ್ಸನ್ನು ಖಾತ್ರಿಪಡಿಸುತ್ತದೆ. ಈ ಸ್ಟಾರ್ಟ್‌ಅಪ್‌ ಗಳೆಂದರೆ: ರಾಫೆಸಿಯಾ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್., ಟ್ಯೂನ್ ಎಐ, ವಿಜಿ, ಪ್ರೈವಸೆವರ್ಸ್ ಸೈಬರ್‌ಸ್ಪೇಸ್ ಪ್ರೈವೇಟ್ ಲಿಮಿಟೆಡ್ ರೈಡ್‌ ಮ್ಯಾಪ್: ಇಗ್ನೈಟ್ ಸ್ಕೈಲ್ಯಾಬ್ಸ್,  ಬ್ಲಾಕ್ಲಿ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಎಸಿಡಿಸಿ, ಸೈಬರ್ ಚಕ್ರ ಟೆಕ್ನಾಲಜಿ, ಇಗ್ನಿಟ್ ಟೆಕ್ನಿಕಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಜನತಾ24

ಸಾರಾಂಶ

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್, ನಾವೀನ್ಯತೆ, ಸಹಯೋಗ ಮತ್ತು ಅವಕಾಶಗಳ  ಪ್ರಜ್ವಲ  ದೀಪಸ್ತಂಭವಾಗಿ  ನಿಂತಿದೆ. ನೈಜ  ಜಗತ್ತಿನ ಸವಾಲುಗಳನ್ನು  ಎದುರಿಸುವ  ಮೂಲಕ  ಮತ್ತು  ಸಮಸ್ಯೆ-ಪರಿಹರಿಸುವ  ಸಂಸ್ಕೃತಿಯನ್ನು  ಬೆಳೆಸುವ  ಮೂಲಕ, SIH ಭಾರತದ  ಯುವ ಪೀಳಿಗೆಗೆ  ರಾಷ್ಟ್ರದ  ಪ್ರಗತಿಗೆ  ಅರ್ಥಪೂರ್ಣವಾಗಿ  ಕೊಡುಗೆ  ನೀಡಲು  ಶಕ್ತಿ  ನೀಡುತ್ತದೆ. ಪ್ರತಿ  ವರ್ಷದ  ಕಾರ್ಯಕ್ರಮ  ಮುಕ್ತಾಯಗೊಂಡ ನಂತರವೂ,  ಅದರ  ಧನಾತ್ಮಕ  ಪರಿಣಾಮವು  ಉದ್ಯಮಗಳು  ಮತ್ತು  ಸರ್ಕಾರಿ  ಸಚಿವಾಲಯಗಳು/ಇಲಾಖೆಗಳಲ್ಲಿ  ದೀರ್ಘಕಾಲ ಪ್ರತಿಧ್ವನಿಸುತ್ತದೆ.

References
https://pib.gov.in/PressReleasePage.aspx?PRID=2081437
https://pib.gov.in/PressReleasePage.aspx?PRID=2083154
https://www.sih.gov.in/

Kindly find the pdf file 

 

*****


(Release ID: 2083595) Visitor Counter : 24


Read this release in: English , Hindi