ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ರಾಜಸ್ಥಾನದ ಜೋಧಪುರದಲ್ಲಿ ಬಿ ಎಸ್‌ ಎಫ್‌ ನ 60ನೇ ಸಂಸ್ಥಾಪನಾ ದಿನದ ಪರೇಡ್‌ ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ದೇಶದ ಭದ್ರತಾ ಸನ್ನಿವೇಶದಲ್ಲಿ ಮಹತ್ವದ ಬದಲಾವಣೆಯಾಗಿದೆ ಮತ್ತು ಬಿ ಎಸ್ ಎಫ್ ನ ವೀರಯೋಧರ ಕೊಡುಗೆ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುತ್ತದೆ

ಧೈರ್ಯ, ಶೌರ್ಯ ಮತ್ತು ತ್ಯಾಗದಿಂದ, ಬಿ ಎಸ್ ಎಫ್ ದೇಶದ 'ರಕ್ಷಣೆಯ ಮೊದಲ ಸಾಲನ್ನು' ಬಲಪಡಿಸಿದೆ

ದೇಶದ ಭದ್ರತೆಗಾಗಿ ಬಿ ಎಸ್ ಎಫ್ ಯೋಧರು ಪ್ರಾಣ ತ್ಯಾಗ ಮಾಡಿದ್ದಾರೆ, ಅದಕ್ಕಾಗಿ ದೇಶದ ಜನತೆ ಸದಾ ಋಣಿಯಾಗಿರುತ್ತದೆ

ಮೋದಿ ಸರ್ಕಾರವು ರಾಷ್ಟ್ರದ ಗಡಿಗಳ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಗಡಿಗಳಲ್ಲಿ ಡ್ರೋನ್ ನಿಗ್ರಹ ಘಟಕಗಳನ್ನು ಶೀಘ್ರದಲ್ಲೇ ಸ್ಥಾಪಿಸಲಿದೆ

1.4 ಶತಕೋಟಿ ಜನರ ಹೃದಯದಲ್ಲಿರುವ 'ಅಜೇಯ ಭಾರತ' ಎಂಬ ನಂಬಿಕೆಯ ಶ್ರೇಯವು ಗಡಿಯಲ್ಲಿ ನಿಂತಿರುವ ಸೈನಿಕರಿಗೆ ಸಂಪೂರ್ಣವಾಗಿ ಸಲ್ಲುತ್ತದೆ

ಮೋದಿ ಸರ್ಕಾರವು ಬಲವಾದ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದೆ, ಕಲ್ಯಾಣ ಯೋಜನೆಗಳನ್ನು ಸಂಪೂರ್ಣವಾಗಿ ಜಾರಿಗೊಳಿಸುತ್ತಿದೆ ಮತ್ತು ಗಡಿ ಗ್ರಾಮಗಳಲ್ಲಿ ಉತ್ತಮ ಸಂಪರ್ಕವನ್ನು ಖಾತ್ರಿಪಡಿಸುತ್ತಿದೆ

₹4,800 ಕೋಟಿಗಳ ಗಣನೀಯ ಬಜೆಟ್ ನೊಂದಿಗೆ ಪ್ರಾರಂಭಿಸಲಾದ ವೈಬ್ರೆಂಟ್ ವಿಲೇಜ್ ಕಾರ್ಯಕ್ರಮವು ಮೋದಿ ಸರ್ಕಾರದ ಪ್ರಮುಖ ಸಾಧನೆಯಾಗಿದೆ.

ಸೂಕ್ಷ್ಮ ಪ್ರದೇಶಗಳ ಮೇಲ್ವಿಚಾರಣೆಗಾಗಿ ಮೋದಿ ಸರ್ಕಾರವು ಸಮಗ್ರ ಗಡಿ ನಿರ್ವಹಣಾ ವ್ಯವಸ್ಥೆಯನ್ನು ರಚಿಸಿದೆ, ಇದನ್ನು ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಗಡಿಗಳಲ್ಲಿ ಅಳವಡಿಸಲಾಗುವುದು.

2024 ರಲ್ಲಿ, ಬಿ ಎಸ್ ಎಫ್ ಹಲವಾರು ಕಾರ್ಯಾಚರಣೆಗಳ ಮೂಲಕ ನಕಲಿ ಕರೆನ್ಸಿ, ಮಾದಕ ದ್ರವ್ಯಗಳು, ಒಳನುಸುಳುವಿಕೆ ಮತ್ತು ಎಡಪಂಥೀಯ ಉಗ್ರವಾದವನ್ನು ನಿಭಾಯಿಸುವಲ್ಲಿ ತನ್ನ ದಾಖಲೆಯನ್ನು ಉಳಿಸಿಕೊಂಡಿದೆ

ಕಠಿಣ ಪರಿಸ್ಥಿತಿಯಲ್ಲಿ ತಮ್ಮ ಸುವರ್ಣ ವರ್ಷಗಳನ್ನು ಕಳೆದ ಸೈನಿಕರ ತ್ಯಾಗ, ಸಮರ್ಪಣೆ ಮತ್ತು ದೇಶಪ್ರೇಮವನ್ನು ಇಡೀ ರಾಷ್ಟ್ರವು ಶ್ಲಾಘಿಸಿದೆ

41,21,443 ಸೈನಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ಆಯುಷ್ಮಾನ್ ಸಿಎಪಿಎಫ್ ಕಾರ್ಡ್ಗಳನ್ನು ನೀಡುವುದು ಸೇರಿದಂತೆ ಭದ್ರತಾ ಪಡೆಗಳ ಕಲ್ಯಾಣಕ್ಕಾಗಿ ಮೋದಿ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ

Posted On: 08 DEC 2024 5:12PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ರಾಜಸ್ಥಾನದ ಜೋಧಪುರದಲ್ಲಿ ಗಡಿ ಭದ್ರತಾ ಪಡೆಯ (ಬಿ ಎಸ್‌ ಎಫ್‌) 60 ನೇ ಸಂಸ್ಥಾಪನಾ ದಿನದ ಪರೇಡ್‌ ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್, ಬಿ ಎಸ್ ಎಫ್ ಮಹಾನಿರ್ದೇಶಕ ಶ್ರೀ ದಲ್ಜಿತ್ ಸಿಂಗ್ ಚೌಧರಿ ಮತ್ತು ಹಲವಾರು ಗಣ್ಯರು ಉಪಸ್ಥಿತರಿದ್ದರು.

ABF00632.JPG

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದ ಭದ್ರತಾ ಸನ್ನಿವೇಶದಲ್ಲಿ ಮಹತ್ವದ ಬದಲಾವಣೆಯಾಗಿದೆ ಮತ್ತು ಬಿ ಎಸ್‌ ಎಫ್ ಸಿಬ್ಬಂದಿಯ ಕೊಡುಗೆಯನ್ನು ಸುವರ್ಣಾಕ್ಷರಗಳಲ್ಲಿ ಬರೆಯಲಾಗುವುದು ಎಂದು ಗೃಹ ಸಚಿವರು ತಮ್ಮ ಭಾಷಣದಲ್ಲಿ ಹೇಳಿದರು. ಆರು ದಶಕಗಳಿಂದ, ಬಿ ಎಸ್‌ ಎಫ್ ಧೈರ್ಯ, ಶೌರ್ಯ ಮತ್ತು ತ್ಯಾಗದ ಮೂಲಕ ರಾಷ್ಟ್ರದ ಮೊದಲ ರಕ್ಷಣಾ ಸಾಲನ್ನು ಬಲಪಡಿಸಿದೆ ಎಂದು ಅವರು ಹೇಳಿದರು. ಗಡಿಯಲ್ಲಿ ಬಿ ಎಸ್‌ ಎಫ್ ಎಲ್ಲಾ ಸವಾಲುಗಳನ್ನು ಎದುರಿಸಿದೆ ಮತ್ತು ದೇಶದ ಮೊದಲ ಸಾಲಿನ ಭದ್ರತೆಯನ್ನು ಸಶಕ್ತಗೊಳಿಸಿದೆ ಎಂದು ಅವರು ಹೇಳಿದರು. ಡಿಸೆಂಬರ್ 1, 1965 ರಿಂದ, ರಾಷ್ಟ್ರದ ಪೂರ್ವ ಮತ್ತು ಪಶ್ಚಿಮ ಗಡಿಗಳನ್ನು ಭದ್ರಪಡಿಸುವಲ್ಲಿ ಬಿ ಎಸ್‌ ಎಫ್ ಅತ್ಯುತ್ತಮ ದಾಖಲೆಯನ್ನು ನಿರ್ವಹಿಸುತ್ತಿದೆ ಎಂದು ಶ್ರೀ ಶಾ ಹೇಳಿದರು. 1992 ಬಿ ಎಸ್‌ ಎಫ್ ಸಿಬ್ಬಂದಿ ರಾಷ್ಟ್ರದ ಭದ್ರತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ, ಇದಕ್ಕಾಗಿ ದೇಶದ ಜನರು ಸದಾ ಋಣಿಯಾಗಿರುತ್ತಾರೆ  ಎಂದು ಅವರು ಹೇಳಿದರು.

ಆರು ದಶಕಗಳಿಂದ ಬಿ ಎಸ್‌ ಎಫ್ ರಾಷ್ಟ್ರದ ಭದ್ರ ಭದ್ರತೆಯನ್ನು ಖಾತ್ರಿಪಡಿಸಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪ್ರಾರಂಭದ ಸಮಯದಲ್ಲಿದ್ದ 25 ಬೆಟಾಲಿಯನ್‌ ಗಳಿಂದ 193 ಬೆಟಾಲಿಯನ್‌ ಗಳಿಗೆ ಬೆಳೆದಿರುವ ಬಿ ಎಸ್‌ ಎಫ್ ಇಲ್ಲದೆ ದೇಶದ ಹೆಚ್ಚುತ್ತಿರುವ ಭದ್ರತಾ ಅಗತ್ಯಗಳನ್ನು ಪೂರೈಸುವುದು ಅಸಾಧ್ಯ ಎಂದು ಅವರು ಹೇಳಿದರು. 2.7 ಲಕ್ಷ ಸಿಬ್ಬಂದಿಯನ್ನು ಹೊಂದಿರುವ ಬಿ ಎಸ್‌ ಎಫ್ ವಿಶ್ವದ ಅತಿದೊಡ್ಡ ಗಡಿ ಕಾವಲು ಪಡೆ ಎಂದು ಶ್ರೀ ಶಾ ಹೇಳಿದರು. 2024 ರಲ್ಲಿಯೂ ಸಹ, ಬಿ ಎಸ್‌ ಎಫ್ ವಿವಿಧ ಕಾರ್ಯಾಚರಣೆಗಳ ಮೂಲಕ ನಕಲಿ ಕರೆನ್ಸಿ, ಮಾದಕ ದ್ರವ್ಯಗಳು, ಒಳನುಸುಳುವಿಕೆ ಮತ್ತು ಎಡಪಂಥೀಯ ಉಗ್ರವಾದವನ್ನು ನಿಭಾಯಿಸುವಲ್ಲಿ ತನ್ನ ದಾಖಲೆಯನ್ನು ಉಳಿಸಿಕೊಂಡಿದೆ ಎಂದು ಅವರು ಹೇಳಿದರು. ರಾಷ್ಟ್ರದ ರಕ್ಷಣೆಯ ಮೊದಲ ಸಾಲಾಗಿ ನಿಂತ 1992 ಬಿ ಎಸ್‌ ಎಫ್ ಸಿಬ್ಬಂದಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಮತ್ತು ಅವರಲ್ಲಿ 1330 ಮಂದಿಗೆ ಇಲ್ಲಿಯವರೆಗೆ ಪದಕಗಳನ್ನು ನೀಡಲಾಗಿದೆ. ಇವುಗಳಲ್ಲಿ 1 ಮಹಾವೀರ ಚಕ್ರ, 6 ಕೀರ್ತಿ ಚಕ್ರಗಳು, 13 ವೀರ ಚಕ್ರಗಳು, 13 ಶೌರ್ಯ ಚಕ್ರಗಳು, 56 ಸೇನಾ ಪದಕಗಳು ಮತ್ತು 1,241 ಪೊಲೀಸ್ ಪದಕಗಳು ಸೇರಿವೆ ಎಂದು ಅವರು ಒತ್ತಿ ಹೇಳಿದರು.

ABF00642.JPG

ಹಲವು ವರ್ಷಗಳ ಕಲಾ ನಮ್ಮ ಗಡಿ ಭದ್ರತಾ ನೀತಿಯಲ್ಲಿ ಸ್ಪಷ್ಟತೆ ಇರಲಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ, ಗಡಿ ನಿರ್ವಹಣೆಗೆ ಸಮಗ್ರ ವಿಧಾನ ಮತ್ತು "ಒಂದು ಗಡಿ, ಒಂದು ಪಡೆ" ನೀತಿಯನ್ನು ಪರಿಚಯಿಸಲಾಯಿತು, ಇದನ್ನು ಶ್ರೀ ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಇನ್ನಷ್ಟು ಸುಧಾರಿಸಲಾಯಿತು ಎಂದು ಅವರು ಹೇಳಿದರು. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಗಡಿ ಪ್ರದೇಶಗಳಲ್ಲಿ ಸದೃಢವಾದ ಮೂಲಸೌಕರ್ಯ ಅಭಿವೃದ್ಧಿ, ಗ್ರಾಮಗಳಲ್ಲಿ ಶೇ.100ರಷ್ಟು ಕಲ್ಯಾಣ ಯೋಜನೆಗಳ ಅನುಷ್ಠಾನ ಹಾಗೂ ದೇಶದ ಮೊದಲ ಗ್ರಾಮಗಳಲ್ಲಿ ರೈಲು, ರಸ್ತೆ, ಜಲಮಾರ್ಗ, ತಂತ್ರಜ್ಞಾನದ ಮೂಲಕ ಅತ್ಯುತ್ತಮ ಸಂಪರ್ಕ ಕಲ್ಪಿಸಲು ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಗಡಿಗಳ ಉದ್ದಕ್ಕೂ. ಭೂ ಬಂದರುಗಳ ಮೂಲಕ ಕಾನೂನುಬದ್ಧ ವ್ಯಾಪಾರ ಮತ್ತು ಜನರು ಜನರ ನಡುವಿನ ಸಂಪರ್ಕವನ್ನು ಹೆಚ್ಚಿಸಲಾಗಿದೆ ಎಂದು ಶ್ರೀ ಶಾ ಹೇಳಿದರು.

9B7A3034.JPG

ಬಾಂಗ್ಲಾದೇಶದ ಗಡಿಯ 591 ಕಿಲೋಮೀಟರ್ ಉದ್ದಕ್ಕೂ ಬೇಲಿ ಹಾಕುವಿಕೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಗಡಿಯ 1,159 ಕಿಲೋಮೀಟರ್‌ ಗಳ ಉದ್ದಕ್ಕೂ ಫ್ಲಡ್‌ ಲೈಟ್‌ ಗಳನ್ನು ಅಳವಡಿಸಲಾಗಿದೆ ಮತ್ತು 573 ಗಡಿ ಹೊರಠಾಣೆಗಳು, 579 ವೀಕ್ಷಣಾ ಠಾಣೆಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ಹೆಚ್ಚುವರಿಯಾಗಿ, 685 ಸ್ಥಳಗಳಿಗೆ ವಿದ್ಯುತ್ ಸಂಪರ್ಕಗಳನ್ನು, 575 ಸ್ಥಳಗಳಿಗೆ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ ಮತ್ತು 570 ಸೌರಶಕ್ತಿ ಘಟಕಗಳನ್ನು ಸ್ಥಾಪಿಸಲಾಗಿದೆ. ಮೋದಿ ಸರ್ಕಾರವು ಸುಮಾರು 1,812 ಕಿಲೋಮೀಟರ್ ಕಠಿಣ ಭೂಪ್ರದೇಶದಲ್ಲಿ ಗಡಿ ರಸ್ತೆಗಳ ನಿರ್ಮಾಣವನ್ನು ಕೈಗೊಂಡಿದೆ, ಈ ಪ್ರದೇಶಗಳಲ್ಲಿನ ಹಳ್ಳಿಗಳಿಗೆ ಸಂಪರ್ಕವನ್ನು ಹೆಚ್ಚಿಸಿದೆ ಎಂದು ಅವರು ಒತ್ತಿ ಹೇಳಿದರು.

9B7A3182.JPG

4,800 ಕೋಟಿ ರೂ.ಗಳ ಗಣನೀಯ ಬಜೆಟ್‌ನೊಂದಿಗೆ ಪ್ರಾಯೋಗಿಕ ಆಧಾರದ ಮೇಲೆ ಪ್ರಾರಂಭಿಸಲಾದ ವೈಬ್ರೆಂಟ್ ವಿಲೇಜಸ್ ಕಾರ್ಯಕ್ರಮವು ಮೋದಿ ಸರ್ಕಾರದ ಶ್ರೇಷ್ಠ ಸಾಧನೆಯಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಕಾರ್ಯಕ್ರಮದ ಅಡಿಯಲ್ಲಿ, ದೇಶದ ಉತ್ತರದ ಗಡಿಯಲ್ಲಿರುವ ಹಲವಾರು ಹಳ್ಳಿಗಳನ್ನು ವಿಶೇಷವಾಗಿ ವಲಸೆ ಸಮಸ್ಯೆಯನ್ನು ಎದುರಿಸುತ್ತಿರುವ ಹಳ್ಳಿಗಳನ್ನು ವೈಬ್ರೆಂಟ್ ವಿಲೇಜ್‌ ಗಳಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಗ್ರಾಮಗಳ ನಿವಾಸಿಗಳಿಗೆ ಸಮಗ್ರ ಸಂಪರ್ಕ, ಆರೋಗ್ಯ ಸೌಲಭ್ಯಗಳು, ಘನತೆ, ಉದ್ಯೋಗ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಲು ವಿವಿಧ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು. ಈ ಕಾರ್ಯಕ್ರಮವನ್ನು ಸುಮಾರು 3,000 ಹಳ್ಳಿಗಳಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ ಮತ್ತು ಅಂತಿಮವಾಗಿ ದೇಶದ ಗಡಿಯಲ್ಲಿರುವ ಪ್ರತಿಯೊಂದು ಹಳ್ಳಿಗೂ ವಿಸ್ತರಿಸಲಾಗುವುದು ಎಂದು ಶ್ರೀ ಶಾ ಹೇಳಿದರು.

ಬಿ ಎಸ್‌ ಎಫ್ ದೇಶದ ಮೊದಲ ರಾಷ್ಟ್ರೀಯ ಕರಾವಳಿ ಪೊಲೀಸ್ ಅಕಾಡೆಮಿಯನ್ನು ಓಖಾದಲ್ಲಿ ಸ್ಥಾಪಿಸಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು, ಇದು ಕಡಲ ಗಡಿಗಳನ್ನು ಭದ್ರಪಡಿಸಲು ನಿಯೋಜಿಸಲಾದ ರಾಜ್ಯ ಪೊಲೀಸ್ ಮತ್ತು ಗಡಿ ಕಾವಲು ಪಡೆಗಳಿಗೆ ತರಬೇತಿ ನೀಡುತ್ತದೆ. ಹೆಚ್ಚುವರಿಯಾಗಿ, ಮೋದಿ ಸರ್ಕಾರವು ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಸೂಕ್ಷ್ಮ ಪ್ರದೇಶಗಳ ಮೇಲ್ವಿಚಾರಣೆಗಾಗಿ ಸಮಗ್ರ ಗಡಿ ನಿರ್ವಹಣಾ ವ್ಯವಸ್ಥೆಯನ್ನು (ಸಿಐಬಿಎಂಎಸ್) ಪರಿಚಯಿಸಿದೆ. ಸಿಐಬಿಎಂಎಸ್ ಅನ್ನು ಧುಬ್ರಿಯಲ್ಲಿ ಪ್ರಾಯೋಗಿಕ ಯೋಜನೆಯಾಗಿ ಜಾರಿಗೊಳಿಸಲಾಗಿದೆ ಮತ್ತು ಆರಂಭಿಕ ಫಲಿತಾಂಶಗಳು ಬಹಳ ಉತ್ತೇಜನಕಾರಿಯಾಗಿದೆ ಎಂದು ಅವರು ಹೇಳಿದರು. ಕೆಲವು ಸುಧಾರಣೆಗಳ ನಂತರ, ಈ ವ್ಯವಸ್ಥೆಯನ್ನು ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಸಂಪೂರ್ಣ ಗಡಿಯಾದ್ಯಂತ ಅನ್ವಯಿಸಲಾಗುವುದು ಎಂದು ಶ್ರೀ ಶಾ ಹೇಳಿದರು. ಗಡಿ ಬೇಲಿಯನ್ನು ಬಲಪಡಿಸಲು, ಗಡಿಯ ಭಾರತದ ಭಾಗದಲ್ಲಿ ರಸ್ತೆಗಳನ್ನು ನಿರ್ಮಿಸಲು ಮತ್ತು ಹಲವಾರು ಇತರ ಮೂಲಸೌಕರ್ಯ ಯೋಜನೆಗಳನ್ನು ಕೈಗೊಳ್ಳಲು ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು.

IMG_4835.JPG

ಮುಂಬರುವ ದಿನಗಳಲ್ಲಿ ಡ್ರೋನ್‌ ಗಳ ಸಮಸ್ಯೆ ಹೆಚ್ಚು ಮಹತ್ವ ಪಡೆಯಲಿದೆ ಎಂದು ಅಮಿತ್ ಶಾ ಹೇಳಿದರು. ಈ ಸವಾಲನ್ನು ಗುರುತಿಸಿ, ರಾಷ್ಟ್ರದ ಗಡಿಗಳನ್ನು ಕಾಪಾಡುವ ಎಲ್ಲಾ ಗಡಿ ಭದ್ರತಾ ಪಡೆಗಳು, ರಕ್ಷಣಾ ಸಚಿವಾಲಯ, ಡಿ ಆರ್‌ ಡಿ ಒ ಮತ್ತು ಭಾರತ ಸರ್ಕಾರದ ವಿವಿಧ ಸಂಶೋಧನಾ ಇಲಾಖೆಗಳನ್ನು ಒಳಗೊಂಡ 'ಇಡೀ ಸರ್ಕಾರದ ವಿಧಾನʼದ ಮೂಲಕ ಲೇಸರ್-ಸಜ್ಜಿತ ಆಂಟಿ-ಡ್ರೋನ್ ಗನ್ ಮೌಂಟ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದರು. ಪಂಜಾಬ್‌ ನೊಂದಿಗಿನ ಅಂತರರಾಷ್ಟ್ರೀಯ ಗಡಿಯಲ್ಲಿ ಶೇ.55 ರಷ್ಟು ಡ್ರೋನ್ ಒಳನುಗ್ಗುವಿಕೆಯನ್ನು ತಡೆಹಿಡಿಯಲಾಗಿದೆ ಮತ್ತು ತಟಸ್ಥಗೊಳಿಸಲಾಗಿದೆ ಎಂದು ಅವರು ಹೇಳಿದರು, ಇದು ಹಿಂದಿನ ಶೇ.3 ಕ್ಕಿಂತ ಗಮನಾರ್ಹ ಸುಧಾರಣೆಯಾಗಿದೆ. ಡ್ರೋನ್‌ ಗಳಿಂದ ಉಂಟಾಗುವ ಬೆದರಿಕೆಗಳಿಂದ ದೇಶವನ್ನು ರಕ್ಷಿಸಲು ಕೆಲವೇ ವರ್ಷಗಳಲ್ಲಿ ಸಮಗ್ರ ಡ್ರೋನ್ ನಿಗ್ರಹ ಘಟಕವನ್ನು ಸ್ಥಾಪಿಸಲಾಗುವುದು ಎಂದು ಶ್ರೀ ಶಾ ವಿಶ್ವಾಸ ವ್ಯಕ್ತಪಡಿಸಿದರು.

ABF04392.JPG

ನಮ್ಮ ಸೈನಿಕರು ತಮ್ಮ ಜೀವನದ ಸುವರ್ಣ ವರ್ಷಗಳನ್ನು ತಮ್ಮ ಕುಟುಂಬ ಮತ್ತು ಮಕ್ಕಳಿಂದ ದೂರವಾಗಿ ಅತ್ಯಂತ ಸವಾಲಿನ ಪರಿಸ್ಥಿತಿಗಳನ್ನು ಸಹಿಸಿಕೊಂಡು ಕಳೆಯುತ್ತಾರೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಅವರ ತ್ಯಾಗ, ಸಮರ್ಪಣೆ ಮತ್ತು ದೇಶಭಕ್ತಿಯನ್ನು ಇಡೀ ರಾಷ್ಟ್ರವು ಶ್ಲಾಘಿಸುತ್ತದೆ ಮತ್ತು ಗೌರವಿಸುತ್ತದೆ ಎಂದು ಅವರು ಹೇಳಿದರು. ಎಲ್ಲಾ ಹವಾಮಾನ ಮತ್ತು ಸನ್ನಿವೇಶಗಳಲ್ಲಿ ನಮ್ಮ ಪಡೆಗಳ ಸೈನಿಕರು ತಮ್ಮ ಕರ್ತವ್ಯವನ್ನು ಶ್ರೇಷ್ಠತೆಯಿಂದ ನಿರ್ವಹಿಸಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ನೈಸರ್ಗಿಕ ವಿಕೋಪಗಳು, ಭಯೋತ್ಪಾದಕ ದಾಳಿಗಳು ಮತ್ತು ಎಡಪಂಥೀಯ ಉಗ್ರವಾದವನ್ನು ಎದುರಿಸುವಾಗ ದೇಶದ ಭದ್ರತೆಯನ್ನು ಖಾತ್ರಿಪಡಿಸುವ ಮೂಲಕ ಈ ಸೈನಿಕರು ರಾಷ್ಟ್ರ ರಕ್ಷಣೆಯ ಮೊದಲ ಸಾಲಿನಂತೆ ಕಾರ್ಯನಿರ್ವಹಿಸುತ್ತಾರೆ ಎಂದು ಅವರು ಒತ್ತಿ ಹೇಳಿದರು. ಈ ಸೈನಿಕರ ಪ್ರತಿ ಹೆಜ್ಜೆ, ಹೋರಾಟ ಮತ್ತು ವಿಜಯವು ಭಾರತವನ್ನು ಅಜೇಯ ಮತ್ತು ಸೋಲಿಸಲು ಸಾಧ್ಯವಿಲ್ಲ ಎಂಬ ನಂಬಿಕೆಯನ್ನು ರಾಷ್ಟ್ರದ ಜನರಲ್ಲಿ ತುಂಬುತ್ತದೆ ಎಂದು ಅವರು ಹೇಳಿಸಿದರು. 1.4 ಶತಕೋಟಿ ಭಾರತೀಯರ ಹೃದಯದಲ್ಲಿ ಈ ಅಜೇಯ ಭಾವನೆಯ ಸಂಪೂರ್ಣ ಶ್ರೇಯವು ನಮ್ಮ ಗಡಿಯನ್ನು ಕಾಪಾಡುವ ಸೈನಿಕರಿಗೆ ಸಲ್ಲುತ್ತದೆ. ಈ ಸೈನಿಕರ ಸಮರ್ಪಣೆ ಮತ್ತು ಶೌರ್ಯವಿಲ್ಲದೆ ಪ್ರಧಾನಿ ಮೋದಿಯವರು 2047 ರ ವೇಳೆಗೆ ಸಂಪೂರ್ಣ ಅಭಿವೃದ್ಧಿ ಹೊಂದಿದ ಭಾರತವನ್ನು ಸಾಧಿಸುವುದು ಅಸಾಧ್ಯ, ಅವರ ಧೈರ್ಯ, ತ್ಯಾಗ ಮತ್ತು ಬದ್ಧತೆಯಿಂದ ಮಾತ್ರ ಈ ಗುರಿಯನ್ನು ಸಾಧಿಸಲು ಸಾಧ್ಯ ಎಂದು ಗೃಹ ಸಚಿವರು ಹೇಳಿದರು.

ಮೋದಿ ಸರ್ಕಾರವು ದೇಶದ ಭದ್ರತಾ ಪಡೆಗಳ ಕಲ್ಯಾಣಕ್ಕಾಗಿ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಆಯುಷ್ಮಾನ್ ಸಿಎಪಿಎಫ್ ಯೋಜನೆಯ ಮೂಲಕ 41,21,443 ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರಿಗೆ ಆಯುಷ್ಮಾನ್ ಸಿಎಪಿಎಫ್ ಕಾರ್ಡ್‌ಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು. ಸೈನಿಕರು ಮತ್ತು ಅವರ ಕುಟುಂಬಗಳಿಗೆ ಆರೋಗ್ಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ದೇಶಾದ್ಯಂತದ ಸಾವಿರಾರು ಆಸ್ಪತ್ರೆಗಳನ್ನು ಈ ಕಾರ್ಡ್‌ ನೊಂದಿಗೆ ಲಿಂಕ್ ಮಾಡಲಾಗಿದೆ, ಇದು ಪ್ರಧಾನಿ ಮೋದಿಯವರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ಈವರೆಗೆ 14.83 ಲಕ್ಷ ಪ್ರಕರಣಗಳನ್ನು ಒಳಗೊಂಡ ₹1,600 ಕೋಟಿ ಮೌಲ್ಯದ ಕ್ಲೈಮುಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಅವರು ತಿಳಿಸಿದರು. ಹೆಚ್ಚುವರಿಯಾಗಿ, 29,890 ಆಸ್ಪತ್ರೆಗಳಲ್ಲಿ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ನಗದು ರಹಿತ ಆರೋಗ್ಯ ಸೇವೆಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.

IMG_5017.JPG

ವಸತಿ ಸಂತೃಪ್ತಿ ಅನುಪಾತವನ್ನು ಹೆಚ್ಚಿಸಲು ಕಳೆದ 5 ವರ್ಷಗಳಲ್ಲಿ 13,000 ಮನೆಗಳಿಗೆ ಅನುಮೋದನೆ ನೀಡಲಾಗಿದೆ ಮತ್ತು 11,000 ಅನುಮೋದಿತ ಮನೆಗಳ ನಿರ್ಮಾಣವನ್ನು ಇದೇ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಹೆಚ್ಚುವರಿಯಾಗಿ, 111 ಬ್ಯಾರಕ್‌ ಗಳನ್ನು ನಿರ್ಮಿಸಲಾಗಿದೆ ಮತ್ತು ಸಿಎಪಿಎಫ್ ಇ-ಹೌಸಿಂಗ್ ವೆಬ್ ಪೋರ್ಟಲ್ ಮೂಲಕ ಖಾಲಿ ಮನೆಗಳನ್ನು ಹಂಚಲಾಗಿದೆ ಎಂದು ಅವರು ಹೇಳಿದರು. ಎಲ್ಲಾ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಪಿಎಫ್) ಗಿಡಗಳನ್ನು ನೆಡುವಲ್ಲಿ ಅತ್ಯುತ್ತಮವಾದ ಕೆಲಸವನ್ನು ಮಾಡಿವೆ ಎಂದು ಶ್ರೀ ಶಾ ಹೇಳಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿವಿಧ ಕಲ್ಯಾಣ ಯೋಜನೆಗಳನ್ನು ಹಳ್ಳಿಗಳಿಗೆ ತಲುಪಿಸಲು ಎಲ್ಲಾ ಪಡೆಗಳು ಮಹತ್ವದ ಪ್ರಯತ್ನಗಳನ್ನು ಮಾಡಿವೆ ಎಂದು ಅವರು ಹೇಳಿದರು.

 

*****

 

 


(Release ID: 2082205) Visitor Counter : 35