ರೈಲ್ವೇ ಸಚಿವಾಲಯ
azadi ka amrit mahotsav

ಹೈ-ಟೆಕ್ ರೈಲ್-ಕಮ್-ರೋಡ್ ಇನ್ಸ್ಪೆಕ್ಷನ್ ವೆಹಿಕಲ್ ಮತ್ತು ಅತ್ಯಾಧುನಿಕ ರೈಲ್ವೇ ಟ್ರ್ಯಾಕ್ ಆರೋಗ್ಯ ನಿರ್ವಹಣಾ ವ್ಯವಸ್ಥೆಯು ಭಾರತದಲ್ಲಿ ರೈಲು ಪ್ರಯಾಣವನ್ನು ಸುರಕ್ಷಿತಗೊಳಿಸುತ್ತದೆ: ರೈಲ್ವೇ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್


ನವದೆಹಲಿ ರೈಲು ನಿಲ್ದಾಣದಲ್ಲಿ ತಂತ್ರಜ್ಞಾನವನ್ನು ಪರಿಶೀಲಿಸಿದ ಸಚಿವರು; ಪ್ರಸ್ತುತ ಹಸ್ತಚಾಲಿತವಾಗಿ ಮಾಡುತ್ತಿರುವ ಟ್ರ್ಯಾಕ್ ಮೆನ್‌ ಗಳಂತಹ ಅನೇಕ ರೈಲ್ವೆ ಉದ್ಯೋಗಿಗಳಿಗೆ ತಂತ್ರಜ್ಞಾನದ ಬಳಕೆಯು ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು

ಈ ತಂತ್ರಜ್ಞಾನವನ್ನು ಎಲ್ಲಾ ರೈಲ್ವೆ ವಲಯಗಳಿಗೆ ನೀಡಲಾಗುತ್ತಿದೆ; 5 ವರ್ಷಗಳಲ್ಲಿ ದೇಶದಾದ್ಯಂತ ಇದನ್ನು ಜಾರಿಗೆ ತರುವ ಗುರಿಯನ್ನು ರೈಲ್ವೆ ಹೊಂದಿದೆ

ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈಲು ಹಳಿಗಳ ಆರೋಗ್ಯವನ್ನು ಪರಿಶೀಲಿಸುವ ಪ್ರಸ್ತುತ ಅಭ್ಯಾಸವನ್ನು ಎರಡು ತಿಂಗಳಿಗೊಮ್ಮೆ ಕಡಿಮೆ ಮಾಡಲಾಗುವುದು: ಶ್ರೀ ಅಶ್ವಿನಿ ವೈಷ್ಣವ್

Posted On: 05 DEC 2024 7:03PM by PIB Bengaluru

ಕೇಂದ್ರ ರೈಲ್ವೇ ಸಚಿವರಾದ ಶ್ರೀ ಅಶ್ವನಿ ವೈಷ್ಣವ್ ಅವರು ಹೊಸ ದೆಹಲಿ ರೈಲು ನಿಲ್ದಾಣದಲ್ಲಿ ಅತ್ಯಾಧುನಿಕ ವ್ಯವಸ್ಥೆಗಳು, ರೋಡ್ ಕಮ್ ರೈಲ್ ಇನ್ಸ್ಪೆಕ್ಷನ್ ವೆಹಿಕಲ್ (RCRIV) ಮತ್ತು ಇಂಟಿಗ್ರೇಟೆಡ್ ಟ್ರ್ಯಾಕ್ ಮಾನಿಟರಿಂಗ್ ಸಿಸ್ಟಮ್ (ITMS) ಅನ್ನು ಪರಿಶೀಲಿಸಿದರು. ಪ್ರತಿ ವಲಯದಲ್ಲಿ ರೈಲು ಟ್ರ್ಯಾಕ್ ರೆಕಾರ್ಡರ್ ವಾಹನಗಳನ್ನು ನಿಯೋಜಿಸಲಾಗುವುದು ಎಂದು ಅವರು ಹೇಳಿದರು. ರೈಲ್ವೆ ಹಳಿಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು, ಟ್ರ್ಯಾಕ್‌ ಮೆನ್‌ ಗಳ ಕೆಲಸದ ಹೊರೆಯನ್ನು ಸರಾಗಗೊಳಿಸುವ ಮತ್ತು ಉತ್ತಮ ಕಾರ್ಯಾಚರಣೆಯ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು ತಂತ್ರಜ್ಞಾನದ ನಿರ್ಣಾಯಕ ಪಾತ್ರವನ್ನು ಅವರು ಒತ್ತಿ ಹೇಳಿದರು.

ಈ ಅತ್ಯಾಧುನಿಕ ವ್ಯವಸ್ಥೆಗಳು ಪೂರ್ವಭಾವಿ ಹಳಿ ನಿರ್ವಹಣೆಯನ್ನು ಸಕ್ರಿಯಗೊಳಿಸಲು ಮತ್ತು ಒಟ್ಟಾರೆ ರೈಲ್ವೆ ಕಾರ್ಯಾಚರಣೆಗಳನ್ನು ಹೆಚ್ಚಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಸಚಿವಾಲಯದ ಡೆಡಿಕೇಶನ್‌ ಅನ್ನು ಎತ್ತಿ ತೋರಿಸುತ್ತವೆ.

ರೋಡ್ ಮತ್ತು ರೈಲು ತಪಾಸಣೆ ವಾಹನ: ರಸ್ತೆ ಮತ್ತು ರೈಲಿನಲ್ಲಿ ಟ್ರ್ಯಾಕ್ ಸುರಕ್ಷತೆ

ರೋಡ್ ಮತ್ತು ರೈಲ್ ಇನ್‌ಸ್ಪೆಕ್ಷನ್ ವೆಹಿಕಲ್ (RCRIV) ರೈಲು ಹಳಿಗಳನ್ನು ನಿಖರ ಮತ್ತು ದಕ್ಷತೆಯೊಂದಿಗೆ ಪರಿಶೀಲಿಸಲು ವಿನ್ಯಾಸಗೊಳಿಸಲಾದ ಬಹುಮುಖ ಯಂತ್ರವಾಗಿದ್ದು, ರಸ್ತೆ ಮತ್ತು ರೈಲು ಎರಡರಲ್ಲೂ ಸರಾಗವಾಗಿ ಕಾರ್ಯನಿರ್ವಹಿಸುತ್ತದೆ. ಟಾಟಾ ಯೋಧಾ ಮಾದರಿಯಲ್ಲಿ ನಿರ್ಮಿಸಲಾಗಿರುವ ಇದು ಸುಧಾರಿತ ಕ್ಯಾಮೆರಾಗಳು ಮತ್ತು ಗಟ್ಟಿಮುಟ್ಟಾದ ಚಕ್ರಗಳನ್ನು ಹೊಂದಿದ್ದು, 15 ದಿನಗಳವರೆಗೆ ಟ್ರ್ಯಾಕ್ ಪರಿಸ್ಥಿತಿಗಳ ನಿರಂತರ ರೆಕಾರ್ಡಿಂಗ್ ಗೆ ಅನುವು ಮಾಡಿಕೊಡುತ್ತದೆ. ಇದು ವರ್ಧಿತ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಖಾತ್ರಿಪಡಿಸುತ್ತದೆ.

ಇಂಟಿಗ್ರೇಟೆಡ್ ಟ್ರ್ಯಾಕ್ ಮಾನಿಟರಿಂಗ್ ಸಿಸ್ಟಮ್ (ITMS)

ಟ್ರ್ಯಾಕ್ ರೆಕಾರ್ಡಿಂಗ್ ಕಾರ್‌ ((TRC) ಗಳ್ಲಿ ಸ್ಥಾಪಿಸಲಾದ ITMS, 20 ರಿಂದ 200 ಕಿಮೀ ವೇಗದಲ್ಲಿ ಟ್ರ್ಯಾಕ್ ಪ್ಯಾರಾಮೀಟರ್‌ ಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಳೆಯಲು ಸುಧಾರಿತ ತಂತ್ರಜ್ಞಾನವನ್ನು ಬಳಸುತ್ತದೆ. ಇದು ನಿಖರವಾದ ಡೇಟಾ ಸಂಗ್ರಹಣೆಗಾಗಿ ಲೇಸರ್ ಸಂವೇದಕಗಳು, ಹೈ-ಸ್ಪೀಡ್ ಕ್ಯಾಮೆರಾಗಳು ಮತ್ತು LiDAR ನೊಂದಿಗೆ ಸಂಪರ್ಕರಹಿತ ಮಾನಿಟರಿಂಗ್ ಅನ್ನು ಒಳಗೊಂಡಿದೆ, ಜೊತೆಗೆ ನಿರ್ಣಾಯಕ ಪ್ರದೇಶಗಳಿಗೆ ತಕ್ಷಣದ ಗಮನಕ್ಕಾಗಿ SMS ಮತ್ತು ಇಮೇಲ್ ಮೂಲಕ ರಿಯಲ್‌ - ಟೈಮ್‌ ಎಚ್ಚರಿಕೆಗಳನ್ನು ನೀಡುತ್ತದೆ.

ಟ್ರ್ಯಾಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (TMS) ನೊಂದಿಗೆ ಸಂಯೋಜಿಸಲ್ಪಟ್ಟ ಇದು ರಿಯಲ್‌-ಟೈಮ್‌ ವರದಿಗೆ ಅನುವು ಮಾಡಿಕೊಡುತ್ತದೆ. ವೀಡಿಯೊ ತಪಾಸಣೆ ಮತ್ತು ಯಂತ್ರ ಕಲಿಕೆ ರಚನಾತ್ಮಕ ದೋಷಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ರೈಲು ಪ್ರೊಫೈಲ್ ಮತ್ತು ವೇರ್ ಮಾಪನ, ಟ್ರ್ಯಾಕ್ ಜ್ಯಾಮಿತಿ ಮೌಲ್ಯಮಾಪನ ಮತ್ತು ಸವಾರಿ ಗುಣಮಟ್ಟದ ವಿಶ್ಲೇಷಣೆ ಸೇರಿದಂತೆ ಸಮಗ್ರ ಮೇಲ್ವಿಚಾರಣೆಯನ್ನು ನೀಡುವ TMS ಹೆಚ್ಚಿನ ಸುರಕ್ಷತೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಖಾತ್ರಿಪಡಿಸುತ್ತದೆ. ಇದರ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಪೂರೈಕೆದಾರ ಸಂಸ್ಥೆಯು ಏಳು ವರ್ಷಗಳ ಒಪ್ಪಂದದ ಅಡಿಯಲ್ಲಿ ನಿರ್ವಹಿಸುತ್ತದೆ, ಇದು ಸ್ಥಿರವಾದ ವಿಶ್ವಾಸಾರ್ಹತೆಯನ್ನು ಖಾತ್ರಿಪಡಿಸುತ್ತದೆ.

ಶ್ರೀ ವೈಷ್ಣವ್ ಅವರು ITMS ನ ಕಾರ್ಯಾಚರಣೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು, ಇದು SMS ಮತ್ತು ಇಮೇಲ್ ಮೂಲಕ ಟ್ರ್ಯಾಕ್‌ ಮೆನ್‌ಗಳಿಗೆ ರಿಯಲ್‌ - ಟೈಮ್‌ ಎಚ್ಚರಿಕೆಗಳನ್ನು ಒದಗಿಸುತ್ತದೆ, ತುರ್ತು ಗಮನ ಅಗತ್ಯವಿರುವ ಪ್ರದೇಶಗಳಿಗೆ ತ್ವರಿತ ಪ್ರತಿಕ್ರಿಯೆಗಳನ್ನು ಸಕ್ರಿಯಗೊಳಿಸುತ್ತದೆ. ಈ ವಿಧಾನವು ಟ್ರ್ಯಾಕ್‌ ಮೆನ್‌ ಗಳ ಕೆಲಸದ ಹೊರೆಯನ್ನು ಕಡಿಮೆ ಮಾಡುವಾಗ ಟ್ರ್ಯಾಕ್ ಸುರಕ್ಷತೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ, ಅವರ ಕಾರ್ಯಗಳನ್ನು ಹೆಚ್ಚು ಪರಿಣಾಮಕಾರಿ ಮತ್ತು ನಿರ್ವಹಿಸುವಂತೆ ಮಾಡುತ್ತದೆ ಎಂದು ಹೇಳಿದರು.

ಸಚಿವರು ಟ್ರಾಕ್ ನಿರ್ವಹಣೆಯ ಚಕ್ರಾಕಾರ ವಿಧಾನದ ಮಹತ್ವವನ್ನೂ ಒತ್ತಿ ಹೇಳಿದರು - ಟ್ರಾಕ್ ಅಳತೆ, ನಿರ್ವಹಣಾ ಕಾಮಗಾರಿಗಳನ್ನು ನಡೆಸುವುದು ಮತ್ತು ಮರಳಿ ಅಳತೆ ಮಾಡುವುದನ್ನು ಸಾಮಾನ್ಯವಾಗಿ ಎರಡು ತಿಂಗಳಿಗೊಮ್ಮೆ ಮಾಡಬೇಕು. ಹಳಿಗಳ ಸುರಕ್ಷತೆಯನ್ನು ಗಮನಾರ್ಹವಾಗಿ ಹೆಚ್ಚಿಸುವಲ್ಲಿ ಮತ್ತು ರೈಲ್ವೆ ಮೂಲಸೌಕರ್ಯದ ದೀರ್ಘಕಾಲೀನ ಆರೋಗ್ಯವನ್ನು ಖಾತ್ರಿಪಡಿಸುವಲ್ಲಿ ಈ ಚಕ್ರವು ಪ್ರಮುಖವಾಗಿದೆ.

 

*****


(Release ID: 2082050) Visitor Counter : 21


Read this release in: Hindi , English , Urdu