ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಯಶಸ್ವಿಯಾಗಿ ಅನುಷ್ಠಾನಗೊಂಡ ಹೊಸ 3 ಕ್ರಿಮಿನಲ್ ಕಾನೂನುಗಳನ್ನು ಚಂಡೀಗಢದಲ್ಲಿಂದು ದೇಶಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


3 ಹೊಸ ಕ್ರಿಮಿನಲ್ ಕಾನೂನುಗಳನ್ನು ಸಂಪೂರ್ಣವಾಗಿ ಜಾರಿಗೆ ತಂದ ದೇಶದ ಮೊದಲ ಕೇಂದ್ರಾಡಳಿತ ಪ್ರದೇಶವಾಗಿ ಚಂಡೀಗಢ; ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ಇಂದು ಸುವರ್ಣ ದಿನ

ನಮ್ಮ ಅಪರಾಧ ನ್ಯಾಯ ವ್ಯವಸ್ಥೆಯ ಎಲ್ಲಾ 5 ಆಧಾರಸ್ತಂಭಗಳಾದ ಪೊಲೀಸ್, ಜೈಲು, ನ್ಯಾಯಾಂಗ, ಪ್ರಾಸಿಕ್ಯೂಷನ್ ಮತ್ತು ಫೋರೆನ್ಸಿಕ್ಸ್ ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ, ಸಂಪೂರ್ಣವಾಗಿ ಆಧುನೀಕರಿಸಲಾಗಿದೆ.

ಹೊಸ ಕಾನೂನುಗಳ ಸಂಪೂರ್ಣ ಅನುಷ್ಠಾನದ ನಂತರ, ತ್ವರಿತ ನ್ಯಾಯ ನೀಡಲಾಗುವುದು, ಅಪರಾಧದ ಪ್ರಮಾಣವು ಹೆಚ್ಚಾಗುತ್ತದೆ ಮತ್ತು ಅಪರಾಧದ ಅನುಪಾತವು ಕಡಿಮೆಯಾಗುತ್ತದೆ

ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿನ ಬದಲಾವಣೆಯು ವಿಶ್ವದ ಅತಿದೊಡ್ಡ ಸುಧಾರಣೆಯಾಗಲಿದೆ

ಭಾರತೀಯ ಸಂಸತ್ತಿನಲ್ಲಿ ಮತ್ತು ಭಾರತೀಯ ನಾಗರಿಕರಿಗೆ ನ್ಯಾಯ ಮತ್ತು ಭದ್ರತೆ ಒದಗಿಸಲು 3 ಹೊಸ ಕಾನೂನುಗಳನ್ನು ಭಾರತೀಯರು ರೂಪಿಸಿದ್ದಾರೆ

ಈ ಕಾನೂನುಗಳು ಭಾರತೀಯ ಆತ್ಮ ಹೊಂದಿವೆ; ಭಾರತದ ನಾಗರಿಕರಿಗೆ ನ್ಯಾಯ ಒದಗಿಸುವುದು ಅವರ ಉದ್ದೇಶವಾಗಿದೆ

ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆ, ಭಾರತದ 140 ಕೋಟಿ ಜನರನ್ನು ರಕ್ಷಿಸುತ್ತದೆ, ಅವರ ಗೌರವ ಮತ್ತು ಅವರ ಸಾಂವಿಧಾನಿಕ ಹಕ್ಕುಗಳು ಈಗ ಸಂಪೂರ್ಣವಾಗಿ ಭಾರತೀಯವಾಗಿವೆ

ಈ ವ್ಯವಸ್ಥೆಯಲ್ಲಿ ಶಿಕ್ಷೆಗೆ ಅವಕಾಶವಿಲ್ಲ, ಆದರೆ ಇದು ತ್ವರಿತ ನ್ಯಾಯ ಒದಗಿಸುತ್ತದೆ

3 ವರ್ಷಗಳಲ್ಲಿ ಈ ಕಾನೂನುಗಳ ಸಂಪೂರ್ಣ ಅನುಷ್ಠಾನದ ನಂತರ, ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ವಿಶ್ವದಲ್ಲೇ ಅತ್ಯಂತ ಮುಂದುವರಿದಿದೆ

Posted On: 03 DEC 2024 6:06PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಂಡೀಗಢದಲ್ಲಿಂದು ಯಶಸ್ವೀ ಅನುಷ್ಠಾನವಾದ 3 ಹೊಸ ಕ್ರಿಮಿನಲ್ ಕಾನೂನುಗಳ ರಾಷ್ಟ್ರಕ್ಕೆ ಸಮರ್ಪಿಸಿದರು. ಕಾರ್ಯಕ್ರಮದ ವಸ್ತು ವಿಷಯ(ಥೀಮ್) "ಸುರಕ್ಷಿತ ಸಮಾಜ, ಅಭಿವೃದ್ಧಿ ಹೊಂದಿದ ಭಾರತ - ಶಿಕ್ಷೆಯಿಂದ ನ್ಯಾಯದ ಕಡೆಗೆ" ಎಂಬುದಾಗಿದೆ. ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಮತ್ತು ಚಂಡೀಗಢದ ಆಡಳಿತಾಧಿಕಾರಿ ಶ್ರೀ ಗುಲಾಬ್ ಚಂದ್ ಕಟಾರಿಯಾ ಸೇರಿದಂತೆ ಹಲವಾರು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಮಾತನಾಡಿ, ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮವನ್ನು ಸಂಪೂರ್ಣವಾಗಿ ಜಾರಿಗೊಳಿಸಿದ ದೇಶದ ಮೊದಲ ಕೇಂದ್ರಾಡಳಿತ ಪ್ರದೇಶವಾಗಿ ಚಂಡೀಗಢ ಹೊರಹೊಮ್ಮಿದೆ, ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ಇಂದು ಸುವರ್ಣ ದಿನವಾಗಿದೆ ಎಂದು ಹೇಳಿದರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ನಮ್ಮ ಅಪರಾಧ ನ್ಯಾಯ ವ್ಯವಸ್ಥೆಯ ಎಲ್ಲಾ 5 ಆಧಾರ ಸ್ತಂಭಗಳಾದ ಪೊಲೀಸ್, ಜೈಲು, ನ್ಯಾಯಾಂಗ, ಪ್ರಾಸಿಕ್ಯೂಷನ್ ಮತ್ತು ಫೋರೆನ್ಸಿಕ್ಸ್ ಅನ್ನು ಸಂಪೂರ್ಣವಾಗಿ ಆಧುನೀಕರಿಸಲಾಗಿದೆ. ಈ ಮೂರು ಕಾನೂನುಗಳು 2024 ಜುಲೈ 1ರಂದು ಜಾರಿಗೆ ಬಂದವು. ಈ ಕಾನೂನುಗಳ ಅಡಿ, ಅನೇಕ ಹೊಸ ನಿಬಂಧನೆಗಳು, ವ್ಯವಸ್ಥೆಗಳು ಮತ್ತು ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ ಎಂದು ಅಮಿತ್ ಶಾ ಹೇಳಿದರು.

160 ವರ್ಷಗಳ ಹಿಂದೆ ಬ್ರಿಟಿಷರು ಮಾಡಿದ ಹಳೆಯ ಕಾನೂನುಗಳು ನಾಗರಿಕರ ಹಿತದ ಮೇಲೆ ಗಮನ ಕೇಂದ್ರೀಕರಿಸುವ ಬದಲು ಬ್ರಿಟಿಷ್ ಆಡಳಿತವನ್ನು ರಕ್ಷಿಸುವ ಗುರಿ ಹೊಂದಿದ್ದವು. ಪ್ರಧಾನಿ ಮೋದಿ ಅವರು ತಂದಿರುವ 3 ಹೊಸ ಕಾನೂನುಗಳನ್ನು ಭಾರತೀಯರು, ಭಾರತೀಯ ಸಂಸತ್ತಿನಲ್ಲಿ ಮತ್ತು ಭಾರತೀಯ ನಾಗರಿಕರಿಗೆ ನ್ಯಾಯ ಮತ್ತು ಭದ್ರತೆಯನ್ನು ಒದಗಿಸುತ್ತವೆ. ನಮ್ಮ ಆಡಳಿತದಿಂದ ಗುಲಾಮಗಿರಿಯ ಎಲ್ಲಾ ಚಿಹ್ನೆಗಳನ್ನು ತೊಡೆದುಹಾಕಬೇಕು ಮತ್ತು ನವ ಭಾರತದ ಕಲ್ಪನೆಯನ್ನು ಸ್ಥಾಪಿಸಬೇಕು ಎಂದು ಪ್ರಧಾನಿ ಮೋದಿ ಅವರು ಕೆಂಪುಕೋಟೆಯಿಂದ ಇಡೀ ರಾಷ್ಟ್ರವನ್ನು ಒತ್ತಾಯಿಸಿದ್ದರು ಎಂದು ಶ್ರೀ ಶಾ ಹೇಳಿದರು.

ಭಾರತದ 140 ಕೋಟಿ ಜನರನ್ನು, ಅವರ ಗೌರವ ಮತ್ತು ಅವರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವ ನಮ್ಮ ಅಪರಾಧ ನ್ಯಾಯ ವ್ಯವಸ್ಥೆಯು ಈಗ ಸಂಪೂರ್ಣವಾಗಿ ಭಾರತೀಯವಾಗಿದೆ. ಈ ವ್ಯವಸ್ಥೆಯಲ್ಲಿ ಶಿಕ್ಷೆಗೆ ಅವಕಾಶವಿಲ್ಲ, ಶೀಘ್ರ ನ್ಯಾಯ ಒದಗಿಸಲಾಗುತ್ತದೆ. ಅಂತೆಯೇ, 3 ವರ್ಷಗಳೊಳಗೆ ಸುಪ್ರೀಂ ಕೋರ್ಟ್‌ವರೆಗಿನ ಯಾವುದೇ ಎಫ್‌ಐಆರ್‌ನಲ್ಲೂ ನ್ಯಾಯ ಒದಗಿಸಲಾಗುವುದು, ನ್ಯಾಯ ಪಡೆಯುವಲ್ಲಿ ಆಗುತ್ತಿದ್ದ ದೀರ್ಘ ವಿಳಂಬಕ್ಕೆ ಪರಿಹಾರ ಒದಗಿಸಲಾಗಿದೆ. ಸ್ವಾತಂತ್ರ್ಯದ 77 ವರ್ಷಗಳ ನಂತರ ಪ್ರಧಾನಿ ಮೋದಿ ದೇಶದ ಜನರಿಗೆ ಈ ಹಕ್ಕುಗಳನ್ನು ನೀಡಿದ್ದಾರೆ. ನಾಗರಿಕರು, ಅವರ ಆಸ್ತಿ, ಗೌರವ ಮತ್ತು ಅವರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು ಹೊಸ ಕಾನೂನುಗಳು ಕಾರ್ಯ ನಿರ್ವಹಿಸುತ್ತವೆ. ಈ ಕಾನೂನುಗಳ ಪ್ರಮುಖ ಲಕ್ಷಣವೆಂದರೆ, ಅದರ ಆತ್ಮ ಭಾರತೀಯವಾಗಿದೆ, ಭಾರತದ ನಾಗರಿಕರಿಗೆ ನ್ಯಾಯ ಒದಗಿಸುವುದು ಅದರ ಉದ್ದೇಶವಾಗಿದೆ ಎಂದು ಅಮಿತ್ ಶಾ ಹೇಳಿದರು.

ಈ ಕಾನೂನುಗಳು ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅನುಷ್ಠಾನದ ವಿವಿಧ ಹಂತಗಳಲ್ಲಿವೆ. 3 ವರ್ಷಗಳಲ್ಲಿ ಸಂಪೂರ್ಣವಾಗಿ ಜಾರಿಗೆ ಬಂದರೆ, ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ವಿಶ್ವದ ಅತ್ಯಂತ ಮುಂದುವರಿದ ನ್ಯಾಯ ವ್ಯವಸ್ಥೆಯಾಗಲಿದೆ. ಭವಿಷ್ಯದಲ್ಲಿ ಯಾವುದೇ ಇತ್ತೀಚಿನ ತಂತ್ರಜ್ಞಾನ ಬಂದರೂ ಅವುಗಳ ವ್ಯಾಖ್ಯಾನವನ್ನು ಬದಲಾಯಿಸುವ ಅಗತ್ಯವಿಲ್ಲ ಎಂಬ ರೀತಿಯಲ್ಲಿ ತಂತ್ರಜ್ಞಾನವನ್ನು ಈ ಕಾನೂನುಗಳಲ್ಲಿ ಅಳವಡಿಸಲಾಗಿದೆ ಮತ್ತು ವ್ಯಾಖ್ಯಾನಿಸಲಾಗಿದೆ. ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಪ್ರಧಾನಿ ಮೋದಿ ಅವರ ಈ ಬದಲಾವಣೆಯು 140 ಕೋಟಿ ಜನರಿಗಾಗಿ ನಡೆಯುತ್ತಿದೆ, ಇದು ವಿಶ್ವದ ಅತಿದೊಡ್ಡ ಸುಧಾರಣೆಯಾಗಲಿದೆ ಎಂದು ಅಮಿತ್ ಶಾ ಹೇಳಿದರು.

ಈ ಹೊಸ ಕಾನೂನುಗಳನ್ನು ರೂಪಿಸುವಾಗ, ಗೃಹ ಸಚಿವಾಲಯವು 2019 ಆಗಸ್ಟ್ ನಿಂದ ಪ್ರಧಾನ ಮಂತ್ರಿ ಮೋದಿ ಅವರ ಮಾರ್ಗದರ್ಶನದಲ್ಲಿ ನಿರಂತರವಾಗಿ 160ಕ್ಕೂ ಹೆಚ್ಚು ಸಭೆಗಳನ್ನು ನಡೆಸಿ. ಇದಲ್ಲದೆ ರಾಜ್ಯಪಾಲರು, ಮುಖ್ಯಮಂತ್ರಿಗಳು, ಲೆಫ್ಟಿನೆಂಟ್ ಗವರ್ನರ್‌ಗಳು, ಆಡಳಿತಾಧಿಕಾರಿಗಳು, ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಮತ್ತು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು, ಬಾರ್ ಕೌನ್ಸಿಲ್, ಬಾರ್ ಅಸೋಸಿಯೇಷನ್, ಕಾನೂನು ವಿಶ್ವವಿದ್ಯಾಲಯಗಳು, ಸಂಸದರು ಮತ್ತು ಎಲ್ಲಾ ಐಪಿಎಸ್ ಅಧಿಕಾರಿಗಳೊಂದಿಗೆ ವಿವರವಾದ ಚರ್ಚೆಗಳನ್ನು ನಡೆಸಲಾಯಿತು. ಈ 4 ವರ್ಷಗಳಲ್ಲಿ ಪ್ರಪಂಚದ ಇತ್ತೀಚಿನ ತಂತ್ರಜ್ಞಾನ ಮತ್ತು ನಿಬಂಧನೆಗಳನ್ನು ಹಲವು ಹಂತಗಳಲ್ಲಿ ಅಧ್ಯಯನ ಮಾಡಲಾಗಿದೆ. ಈ ಕಾನೂನುಗಳನ್ನು ರೂಪಿಸುವಾಗ, ಸುಮಾರು 43 ದೇಶಗಳ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಅಧ್ಯಯನ ಮಾಡಲಾಗಿದೆ ಎಂದು ಅಮಿತ್ ಶಾ ಹೇಳಿದರು.

3 ಹೊಸ ಕಾನೂನುಗಳ ಅನುಷ್ಠಾನದ ಅಧಿಸೂಚನೆಯಿಂದ ಇಲ್ಲಿಯವರೆಗೆ ಸುಮಾರು 11,34,698 ಅಧಿಕಾರಿಗಳಿಗೆ ತರಬೇತಿ ಪೂರ್ಣಗೊಂಡಿದೆ. ತಂತ್ರಜ್ಞಾನದ ಜೊತೆಗೆ ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್) ಬಳಕೆಯನ್ನು ಈ ಕಾನೂನುಗಳ ಅಡಿ, ಕಡ್ಡಾಯಗೊಳಿಸಲಾಗಿದೆ. ಇದರೊಂದಿಗೆ, ಈ ಕಾನೂನುಗಳಲ್ಲಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಪ್ರತ್ಯೇಕ ಅಧ್ಯಾಯವನ್ನು ಸೇರಿಸಲಾಗಿದೆ. ಮೊದಲ ಬಾರಿಗೆ, ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳನ್ನು ವ್ಯಾಖ್ಯಾನಿಸಲಾಗಿದೆ. ಎಫ್‌ಐಆರ್ ದಾಖಲಿಸುವ ಪ್ರತಿಯೊಬ್ಬ ನಾಗರಿಕನು 90 ದಿನಗಳಲ್ಲಿ ಪೊಲೀಸರಿಂದ ಪ್ರಗತಿಯ ವರದಿ ಪಡೆಯುವುದನ್ನು ಹೊಸ ಕಾನೂನುಗಳ ಅಡಿ ಕಡ್ಡಾಯಗೊಳಿಸಲಾಗಿದೆ. ಈಗ ಇ-ಎಫ್‌ಐಆರ್ ಮತ್ತು ಶೂನ್ಯ ಎಫ್‌ಐಆರ್ ದಾಖಲಿಸಲು ಠಾಣೆಗೆ ಹೋಗುವ ಅಗತ್ಯವಿಲ್ಲ ಎಂದು ಅಮಿತ್ ಶಾ ಹೇಳಿದರು.

ಚಂಡೀಗಢದಲ್ಲಿ ಪೊಲೀಸ್, ನ್ಯಾಯಾಂಗ, ಫೋರೆನ್ಸಿಕ್, ಪ್ರಾಸಿಕ್ಯೂಷನ್ ಮತ್ತು ಜೈಲಿನ ನಡುವೆ ಅಂತರ್-ಕಾರ್ಯಾಚರಣೆಯ ಅಪರಾಧ ನ್ಯಾಯ ವ್ಯವಸ್ಥೆ(ಇಂಟರ್-ಆಪರೇಬಲ್ ಕ್ರಿಮಿನಲ್ ಜಸ್ಟಿಸ್ ಸಿಸ್ಟಮ್-ಐಸಿಜೆಎಸ್) ಮೂಲಕ ಇ-ವಾರ್ತಾ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ಪರಾರಿಯಾಗುವ ಅಪರಾಧಿಗಳನ್ನು ಈಗ ಗೈರುಹಾಜರಾತಿಯಲ್ಲಿ ವಿಚಾರಣೆ(ಟ್ರಯಲ್ ಇನ್ ಅಬ್ಸೆಂಟಿಯಾ) ಮೂಲಕ ಶಿಕ್ಷಿಸಬಹುದು. ಈ ಕಾನೂನುಗಳು ಭಾಷಿನಿ ಆ್ಯಪ್ ಮೂಲಕ 8ನೇ ಶೆಡ್ಯೂಲ್‌ನ ಎಲ್ಲಾ ಭಾಷೆಗಳಲ್ಲಿ ಲಭ್ಯವಿವೆ. ಭ್ರಷ್ಟಾಚಾರ ತಡೆಯಲು ಪ್ರಾಸಿಕ್ಯೂಷನ್‌ ನಿರ್ದೇಶಕರ ಹುದ್ದೆ ಸೃಷ್ಟಿಸಲಾಗಿದೆ. ದಶಕಗಳಿಂದ ಚಾಲ್ತಿಯಲ್ಲಿದ್ದ ರಾಜದ್ರೋಹದ ವ್ಯವಸ್ಥೆ ಈಗ ದೇಶದ್ರೋಹದ ರೂಪದಲ್ಲಿ ಬಂದಿದೆ ಎಂದರು.

ಈ ಹೊಸ ಕಾನೂನುಗಳನ್ನು ಜಾರಿಗೊಳಿಸಿದ 4 ತಿಂಗಳೊಳಗೆ 11 ಲಕ್ಷಕ್ಕೂ ಹೆಚ್ಚು ಎಫ್‌ಐಆರ್‌ಗಳು ದಾಖಲಾಗಿವೆ, ಇವುಗಳ ಪೈಕಿ ಈಗಾಗಲೇ 9,500 ಪ್ರಕರಣಗಳಿಗೆ ತೀರ್ಪು ನೀಡಲಾಗಿದೆ. ಅವರ ಶಿಕ್ಷೆಯ ಪ್ರಮಾಣವು 85%ಗಿಂತ ಹೆಚ್ಚಿದೆ. ಇದು ನಮ್ಮ ಪ್ರಸ್ತುತ ಇರುವ 58%ಗಿಂತ ಹೆಚ್ಚು. ಈ ಹೊಸ ಕಾನೂನುಗಳ ಸಂಪೂರ್ಣ ಅನುಷ್ಠಾನದ ನಂತರ, ತ್ವರಿತ ನ್ಯಾಯ ತಲುಪಿಸಲಾಗುತ್ತದೆ, ಶಿಕ್ಷೆಯ ಪ್ರಮಾಣವು ಹೆಚ್ಚಾಗುತ್ತದೆ ಮತ್ತು ಅಪರಾಧದ ಪ್ರಮಾಣವು ಕಡಿಮೆಯಾಗುತ್ತದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಅಮಿತ್ ಶಾ ಹೇಳಿದರು.

 

*****

 


(Release ID: 2080590) Visitor Counter : 23


Read this release in: English , Urdu , Hindi , Punjabi