ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
2024 ರ ವಿಶೇಷಚೇತನ ವ್ಯಕ್ತಿಗಳ ಅಂತಾರಾಷ್ಟ್ರೀಯ ದಿನದ ಸಂದರ್ಭದಲ್ಲಿ, ವಿಶೇಷಚೇತನ ವ್ಯಕ್ತಿಗಳ ಸಬಲೀಕರಣಕ್ಕಾಗಿ ಅನುಕರಣೀಯ ಸೇವೆ ಸಲ್ಲಿಸಿದ 33 ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಭಾರತದ ರಾಷ್ಟ್ರಪತಿಯವರು ನವದೆಹಲಿಯಲ್ಲಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನಿಸಿ ಗೌರವಿಸಿದರು
Posted On:
03 DEC 2024 4:31PM by PIB Bengaluru
2024ರ ವಿಶೇಷಚೇತನ ವ್ಯಕ್ತಿಗಳ ಅಂತಾರಾಷ್ಟ್ರೀಯ ದಿನದ ಸಂದರ್ಭದಲ್ಲಿ, ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು ನವದೆಹಲಿಯಲ್ಲಿ ವಿಶೇಷಚೇತನ ವ್ಯಕ್ತಿಗಳ ಸಬಲೀಕರಣಕ್ಕಾಗಿ ಅನುಕರಣೀಯ ಸೇವೆ ಸಲ್ಲಿಸುತ್ತಿರುವ 33 ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಡಾ. ವೀರೇಂದ್ರ ಕುಮಾರ್ ಮತ್ತು ವಿಶೇಷಚೇತನ ವ್ಯಕ್ತಿಗಳ ಸಬಲೀಕರಣ ಇಲಾಖೆಯ (ಡಿ.ಇ.ಪಿ.ಡಬ್ಲ್ಯೂ.ಡಿ.) ಕಾರ್ಯದರ್ಶಿ ಶ್ರೀ ರಾಜೇಶ್ ಅಗರ್ವಾಲ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ವಿಶೇಷಚೇತನರ ಧೈರ್ಯ ಮತ್ತು ದೃಢತೆಯನ್ನು ತಮ್ಮ ಭಾಷಣದಲ್ಲಿ ಶ್ಲಾಘಿಸಿದ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು, "ಇಂತಹವರು ಸಮಾಜಕ್ಕೆ ಸ್ಫೂರ್ತಿಯ ಮೂಲವಾಗಿದ್ದಾರೆ. ರಾಷ್ಟ್ರೀಯ ಪ್ರಶಸ್ತಿಗಳು ಕೇವಲ ಪ್ರಶಸ್ತಿ ಪುರಸ್ಕೃತರ ಸಾಧನೆಗಳನ್ನು ಗೌರವಿಸಿ ಕೊಂಡಾಡುವುದಲ್ಲದೆ ಸಮಾಜಕ್ಕೆ ಪ್ರೇರಣೆಯಾಗಿ ಕೂಡ ಕಾರ್ಯನಿರ್ವಹಿಸುತ್ತವೆ. ಇದರ ಜೊತೆಗೆ, ವಿಶೇಷಚೇತನರಲ್ಲಿ ಉದ್ಯಮಶೀಲತೆ, ಕೌಶಲ್ಯ ಅಭಿವೃದ್ಧಿ ಮತ್ತು ನಾಯಕತ್ವವನ್ನು ಪ್ರೋತ್ಸಾಹಿಸುವ ಅಗತ್ಯವಿದೆ" ಎಂದು ಹೇಳಿದರು.
2024ರ ವಿಶೇಷಚೇತನರ ಒಲಿಂಪಿಕ್ಸ್ (ಪ್ಯಾರಾಲಿಂಪಿಕ್ಸ್) ನಲ್ಲಿ ಭಾರತದ ಯಶಸ್ಸನ್ನು ಪ್ರಶಂಸಿಸಿದ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು "2012ರಲ್ಲಿ ಭಾರತವು ಕೇವಲ ಒಂದು ಪದಕವನ್ನು ಪಡೆದುಕೊಂಡಿದ್ದರೆ, ಈ ವರ್ಷ ನಡೆದ ಪ್ಯಾರಿಸ್ ವಿಶೇಷಚೇತನರ ಒಲಿಂಪಿಕ್ಸ್ (ಪ್ಯಾರಾಲಿಂಪಿಕ್ಸ್) ನಲ್ಲಿ ಭಾರತೀಯ ಕ್ರೀಡಾಪಟುಗಳು ಮಹತ್ವಪೂರ್ಣ 29 ಪದಕಗಳನ್ನು ಗೆದ್ದಿದ್ದಾರೆ. ನಾವು ವಿಶೇಷಚೇತನರಿಗೆ ಸಮಾನ ಅವಕಾಶಗಳು ಮತ್ತು ಅಂತರ್ಗತ ವಾತಾವರಣವನ್ನು ಸೃಷ್ಟಿಸುವ ಪ್ರಾಮುಖ್ಯತೆಯಿದೆ, ಆ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನ, ಹೆಚ್ಚಿದ ಅರಿವು ಮತ್ತು ಉತ್ತಮ ಬೆಂಬಲವು ಈ ಯಶಸ್ಸಿಗೆ ಕಾರಣವಾಗಿದೆ" ಎಂದು ಹೇಳಿದರು.
ಅಕ್ಸೆಸ್ಸಿಬಲ್ ಇಂಡಿಯಾ ಅಭಿಯಾನ ಮತ್ತು ವಿಶೇಷಚೇತನರಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ವಿವಿಧ ಸಚಿವಾಲಯಗಳು ಮಾಡಿರುವ ಪ್ರಯತ್ನಗಳನ್ನು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಈ ಸಂದರ್ಭದಲ್ಲಿ ಶ್ಲಾಘಿಸಿದರು.
"ರಾಷ್ಟ್ರಪತಿ ಭವನದ ಜಾಲತಾಣವನ್ನು ವಿಶೇಷಚೇತನರಿಗೆ ಅನುಕೂಲಕರ ವ್ಯವಸ್ಥೆಯನ್ನು ಅಂತರ್ಗತವಾಗಿರುವ ದೇಶದ ಮೊದಲ ಜಾಲತಾಣವಾಗಿ ಅಭಿವೃದ್ಧಿಪಡಿಸಲಾಗಿದೆ. ಜಿ.ಐ.ಜಿ.ಡಬ್ಲ್ಯೂ3 ಮಾನದಂಡಗಳಿಗೆ ಬದ್ಧವಾಗಿದೆ ಮತ್ತು ದೃಷ್ಟಿಹೀನ ವಿಶೇಷಚೇತನ ವ್ಯಕ್ತಿಗಳಿಗೆ ಕೂಡ ಸುಲಭವಾಗಿ ಬಳಸಬಹುದಾಗಿದೆ" ಎಂದು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದ ಜಾಲತಾಣವನ್ನು ಉಲ್ಲೇಖಿಸುತ್ತಾ ಹೇಳಿದರು. ಈ ಸಂದರ್ಭದಲ್ಲಿ, ವಿಶೇಷಚೇತನರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಬಲೀಕರಣಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಹೊಂದಿರುವ ಅಚಲ ಬದ್ಧತೆಯನ್ನು ಕೇಂದ್ರ ಸಚಿವ ಡಾ. ವೀರೇಂದ್ರ ಕುಮಾರ್ ಅವರು ವಿವರಿಸಿದರು.
ಭಾರತೀಯ ಸಂಕೇತ ಭಾಷೆಯ ಪ್ರಚಾರ, ಸಹಾಯಕ ಸಾಧನಗಳ ವಿತರಣೆ ಮತ್ತು ವಿಶೇಷಚೇತನ ವ್ಯಕ್ತಿಗಳ ಜೀವನವನ್ನು ಗಣನೀಯವಾಗಿ ಸುಧಾರಿಸಿದ ಕ್ರಮಗಳಂತಹ ಇತರ ಹಲವಾರು ವಿಷಯಗಳಲ್ಲಿ ಆಗಿರುವ ಪರಿಣಾಮಕಾರಿ ಬದಲಾವಣೆಗಳು ಹಾಗೂ ಅನುಷ್ಟಾನಗೊಂಡಿರುವ ಉಪಕ್ರಮಗಳನ್ನು ಉಲ್ಲೇಖಿಸಿ ಮಾತನಾಡುತ್ತಾ, ಕೇಂದ್ರ ಸಚಿವ ಡಾ. ವೀರೇಂದ್ರ ಕುಮಾರ್ ಅವರು "ಪ್ರಶಸ್ತಿ ಪುರಸ್ಕೃತರೆಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತ ಎಂಬ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನದ ಸಂಕಲ್ಪ ಹಾಗೂ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ವಿಶೇಷಚೇತನರು ಪ್ರಮುಖ ಪಾತ್ರ ವಹಿಸುತ್ತಾರೆ" ಎಂದು ಹೇಳಿದರು.
ತಮ್ಮ ಆರಂಭಿಕ ಭಾಷಣದಲ್ಲಿ, ಕೇಂದ್ರ ವಿಶೇಷಚೇತನ ವ್ಯಕ್ತಿಗಳ ಸಬಲೀಕರಣ ಇಲಾಖೆಯ (ಡಿ.ಇ.ಪಿ.ಡಬ್ಲ್ಯೂ.ಡಿ.) ಕಾರ್ಯದರ್ಶಿ ಶ್ರೀ ರಾಜೇಶ್ ಅಗರ್ವಾಲ್ ಅವರು, ವಿಶೇಷಚೇತನ ವ್ಯಕ್ತಿಗಳನ್ನು ಸಬಲೀಕರಣಗೊಳಿಸುವ ಇಲಾಖೆಯ ಬದ್ಧತೆಯನ್ನು ಪುನರುಚ್ಚರಿಸಿದರು. ವಿಶೇಷಚೇತನರಿಗೆ ಸಮಗ್ರ ಬೆಂಬಲ ನೀಡಲು ಸಧ್ಯದಲ್ಲೇ ದೇಶಾದ್ಯಂತ "ಪ್ರಧಾನಮಂತ್ರಿ ದಿವ್ಯಶಾಖೆ" ಕೇಂದ್ರಗಳನ್ನು ಸ್ಥಾಪಿಸುವ ಕುರಿತು ಕೂಡ ಮಾಹಿತಿ ನೀಡಿದರು.
ವಿಶೇಷಚೇತನ ಸೇವೆಗಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದು ಪುರಸ್ಕೃತರಾದ 33 ವ್ಯಕ್ತಿಗಳು ಮತ್ತು ಸಂಸ್ಥೆಗಳು ಹಾಗೂ, ಪ್ರಶಸ್ತಿ ಪುರಸ್ಕೃತರ ಸಾಲಿನಲ್ಲಿದ್ದ 13 ವರ್ಷದ ಪ್ರಥಮೇಶ್ ಮತ್ತು ಜಾನ್ಹವಿಯಂತಹ ಯುವ ಸಾಧಕರು ಮತ್ತು ಇವರ ಜೊತೆಗೆ 75 ವರ್ಷದ ಸರೋಜ್ ಆರ್ಯ ಅವರಂತಹ ಹಿರಿಯ ನಾಗರಿಕರು ಸೇರಿದಂತೆ ವಿವಿಧ ವರ್ಗದ ಎಲ್ಲ ಸಾಧಕರ ಪ್ರತಿಭೆ ಮತ್ತು ಸಮರ್ಪಣೆಗಳನ್ನು ಕೇಂದ್ರ ವಿಶೇಷಚೇತನ ವ್ಯಕ್ತಿಗಳ ಸಬಲೀಕರಣ ಇಲಾಖೆಯ (ಡಿ.ಇ.ಪಿ.ಡಬ್ಲ್ಯೂ.ಡಿ.) ಕಾರ್ಯದರ್ಶಿ ಶ್ರೀ ರಾಜೇಶ್ ಅಗರ್ವಾಲ್ ಅವರು ಪರಿಚಯಿಸಿದರು.
ಈ ಸಮಾರಂಭದ ವಿಡಿಯೊ ವೀಕ್ಷಿಸಲು ಈ ಕೊಂಡಿಯನ್ನು ಬಳಸಿ: https://www.youtube.com/live/Bfgh9xyInU8
ವಿಶೇಷಚೇತನ ವ್ಯಕ್ತಿಗಳ ಸಂಕಲ್ಪ, ಸಮರ್ಪಣೆ ಮತ್ತು ಸಬಲೀಕರಣವನ್ನು ವಿಶೇಷವಾಗಿ ಆಚರಿಸುತ್ತದೆ ಹಾಗೂ ಅವರ ಧೈರ್ಯ ಮತ್ತು ಸಾಧನೆಗಳನ್ನು ಈ ಸಮಾರಂಭವು ಗೌರವಿಸುತ್ತದೆ, ಹಾಗೂ ಈ ನಿಟ್ಟಿನಲ್ಲಿ ಸಮಾರಂಭವನ್ನು ಆಯೋಜಿಸಲಾಗಿದೆ.
ಈ ವಿಶೇಷ ಕಾರ್ಯಕ್ರಮದಲ್ಲಿ ವಿಕಲಚೇತನ ವಿದ್ಯಾರ್ಥಿಗಳು, ಪ್ರಶಸ್ತಿ ಪುರಸ್ಕೃತರ ಕುಟುಂಬದ ಸದಸ್ಯರು, ಹಿರಿಯ ರಾಜತಾಂತ್ರಿಕರು, ಉದ್ಯಮ ಪಾಲುದಾರರು, ಇತರೆ ಗಣ್ಯರು ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Link to Citations of the National Awardees
*****
(Release ID: 2080414)
Visitor Counter : 20