ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav
iffi banner

ಕೃತಕ ಬುದ್ಧಿಮತ್ತೆ ಮತ್ತು ಚಲನಚಿತ್ರ ನಿರ್ಮಾಣ: ಹೊಸ ಯುಗದ ಆರಂಭ ಕುರಿತು 55 ನೇ ಐಎಫ್ಎಫ್ಐ ಪ್ಯಾನಲ್ ಚರ್ಚೆ


"ಅನಿಶ್ಚಿತತೆ, ಪ್ರೀತಿ ಮತ್ತು ಭಯದಿಂದ ಪ್ರೇರಿತವಾದ ಮಾನವ ಕಲ್ಪನೆಗೆ ಎಐ ಇನ್ನಷ್ಟೇ ಹೊಂದಿಕೆಯಾಗಬೇಕಿದೆ": ಶೇಖರ್ ಕಪೂರ್

"ಎಐ ಬುದ್ಧಿವಂತ ಸಹಾಯಕನಂತೆ ಕಾರ್ಯನಿರ್ವಹಿಸುವ ಮೂಲಕ ಕಲ್ಪನೆ ಮತ್ತು ಸ್ವಯಂ ಅಭಿವ್ಯಕ್ತಿಯನ್ನು ಹೆಚ್ಚಿಸುತ್ತದೆ": ಪ್ರಜ್ಞಾ ಮಿಶ್ರಾ

ಭವಿಷ್ಯದಲ್ಲಿ ಚಲನಚಿತ್ರ ನಿರ್ಮಾಣದಲ್ಲಿ ಎಐ ದೊಡ್ಡ ಪಾತ್ರ ವಹಿಸಲಿದೆ: ಆನಂದ್ ಗಾಂಧಿ

55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) ಅಂಗವಾಗಿ ಪಣಜಿಯ ಕಲಾ ಅಕಾಡೆಮಿಯಲ್ಲಿ ಇಂದು "ಕೃತಕ ಬುದ್ಧಿಮತ್ತೆ ಚಲನಚಿತ್ರ ನಿರ್ಮಾಣವನ್ನು ಶಾಶ್ವತವಾಗಿ ಬದಲಾಯಿಸುತ್ತದೆಯೇ?" ಎಂಬ ಶೀರ್ಷಿಕೆಯಲ್ಲಿ ಪ್ಯಾನಲ್ ಚರ್ಚೆ ನಡೆಯಿತು. ಈ ಸಮಿತಿಯಲ್ಲಿ ಭಾರತೀಯ ಚಲನಚಿತ್ರ ನಿರ್ಮಾಪಕ ಮತ್ತು ಉದ್ಯಮಿ ಆನಂದ್ ಗಾಂಧಿ, ಓಪನ್ಎಐನ ಸಾರ್ವಜನಿಕ ನೀತಿ ಮತ್ತು ಸಹಭಾಗಿತ್ವದ ಮುಖ್ಯಸ್ಥೆ ಪ್ರಜ್ಞಾ ಮಿಶ್ರಾ ಇದ್ದರು. ಪ್ರಖ್ಯಾತ ಚಲನಚಿತ್ರ ತಯಾರಕ ಶೇಖರ್ ಗುಪ್ತಾ ನಿರ್ವಹಿಸಿದರು.

ಶೇಖರ್ ಕಪೂರ್ ಅವರ ಪ್ರಾಸ್ತಾವಿಕ ಮಾತುಗಳೊಂದಿಗೆ ಅಧಿವೇಶನ ಪ್ರಾರಂಭವಾಯಿತು, ಅಲ್ಲಿ ಅವರು ಕೃತಕ ಬುದ್ಧಿಮತ್ತೆಯ (ಎಐ) ತಿಳುವಳಿಕೆ ಇನ್ನೂ ವಿಕಸನಗೊಳ್ಳುತ್ತಿದೆ ಎಂದು ಒಪ್ಪಿಕೊಂಡರು. "ಎಐ ಎಂದರೇನು ಎಂದು ಯಾರಿಗೂ ತಿಳಿದಿಲ್ಲ, ನಾವು ಇನ್ನೂ ಯಂತ್ರ ಕಲಿಕೆ, ಆಳವಾದ ಕಲಿಕೆಯಂತಹ ವಿವಿಧ ಎಐ ಪದಗಳನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿದ್ದೇವೆ " ಎಂದರು. ಎಐ ಉದ್ಯೋಗಗಳನ್ನು ಕಸಿದುಕೊಳ್ಳುವ ಬಗ್ಗೆ ನಡೆಯುತ್ತಿರುವ ಚರ್ಚೆಯನ್ನು ಪ್ರಸ್ತಾಪಿಸಿದ ಅವರು ತಮ್ಮ ಮನೆಕೆಲಸದಾಕೆಯ ಬಗ್ಗೆ ಕುತೂಹಲಕಾರಿ ವೈಯಕ್ತಿಕ ಅನುಭವವನ್ನು ಹಂಚಿಕೊಂಡರು, 'ಮಿಸ್ಟರ್ ಇಂಡಿಯಾ' ಚಿತ್ರದ ಮುಂದುವರಿದ ಭಾಗಕ್ಕಾಗಿ ಸ್ಕ್ರಿಪ್ಟ್ ಅನ್ನು ತಮಗೆ ರಚಿಸಲು ಹೇಗೆ ಸಾಧ್ಯವಾಯಿತು ಎಂಬುದನ್ನು ಅವರು ವಿವರಿಸಿದರು. ಟ್ರಾಕ್ಟರುಗಳ ಆಗಮನದ ಪರಿಸ್ಥಿತಿಗೆ ಇದನ್ನು ತುಲನೆ ಮಾಡಿದ ಅವರು, ಇದು ಆರಂಭದಲ್ಲಿ ರೈತರ ಕೆಲಸ ಕಸಿದುಕೊಳ್ಳುವ ಯಂತ್ರ ಎಂದು ಭಾವಿಸಲಾಗಿತ್ತು, ಆದರೆ ವಾಸ್ತವದಲ್ಲಿ, ತಂತ್ರಜ್ಞಾನವನ್ನು ಮಾನವ ಸಾಮರ್ಥ್ಯವನ್ನು ಹೆಚ್ಚಿಸುವ ಸಾಧನವಾಗಿ ನೋಡಬೇಕು, ಪಾವತಿಗಳಿಗಾಗಿ ಯುಪಿಐ ವ್ಯಾಪಕವಾಗಿ ಬಳಕೆಯಾಗುತ್ತಿರುವ ಡಿಜಿಟಲ್ ಕ್ರಾಂತಿಯಂತೆಯೇ ಇದನ್ನೂ ಪರಿಗಣಿಸಬೇಕಾಗುತ್ತದೆ ಎಂದರು.

ಎಸ್ ಒ ಆರ್ ಎ (ಸೊರಾ) ಪ್ರಾತ್ಯಕ್ಷಿಕೆ: ಎಐ-ಚಾಲಿತ ಪಠ್ಯ-ಟು-ವಿಡಿಯೋ ಮಾದರಿ:

ಪ್ರಜ್ಞಾ ಮಿಶ್ರಾ ಅವರು ಎಐ ಚಾಲಿತ ಟೆಕ್ಸ್ಟ್-ಟು-ವಿಡಿಯೋ ಮಾದರಿಯಾದ ಎಸ್ ಒ ಆರ್ ಎ (ಸೊರಾ)   ಪ್ರಾತ್ಯಕ್ಷಿಕೆಯನ್ನು ಒದಗಿಸಿದರು, ಇದು ಬಳಕೆದಾರರಿಗೆ ಪಠ್ಯ ಪ್ರಾಂಪ್ಟ್ಗಳಿಂದ ವೀಡಿಯೊಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ. ಸರಳ ಸೂಚನೆಗಳೊಂದಿಗೆ, ಎಸ್ಒಆರ್ ಎ ದಿಂದ  ವಾಸ್ತವಿಕವಾದ ವೀಡಿಯೊಗಳನ್ನು ರಚಿಸಬಹುದು, ಮಾನವ ಅಭಿವ್ಯಕ್ತಿಗಳು ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಗಳ ಸಂಕೀರ್ಣ ವಿವರಗಳನ್ನು ಪುನರಾವರ್ತಿಸಬಹುದು ಎಂದು ಅವರು ವಿವರಿಸಿದರು.

ತಪ್ಪು ಮಾಹಿತಿ, ದ್ವೇಷ ಭಾಷಣ ಮತ್ತು ಜನಾಂಗೀಯ ತಾರತಮ್ಯದಂತಹ ಸಮಸ್ಯೆಗಳನ್ನು ತಡೆಗಟ್ಟಲು ಸಾರ್ವಜನಿಕ ವ್ಯಕ್ತಿಗಳ ಮುಖಗಳನ್ನು ಮಾದರಿಯಲ್ಲಿ ನಿರ್ಬಂಧಿಸಲಾಗಿದೆ ಎಂದು ಅವರು ತಂತ್ರಜ್ಞಾನ ಸಲಕರಣೆಯ ಸುತ್ತಲಿನ ನೈತಿಕ ಪರಿಗಣನೆಗಳನ್ನು ಉಲ್ಲೇಖಿಸಿದರು. ಎಐ ಸೃಜನಶೀಲ ಸಾಮರ್ಥ್ಯವನ್ನು ಅನ್ಲಾಕ್ ಮಾಡಬಹುದು ಮತ್ತು ಮಾನವೀಯತೆಗೆ ಶಕ್ತಿಯುತ ಸಾಧನವಾಗಬಹುದು, ಜಾಗತಿಕವಾಗಿ ಸೃಷ್ಟಿಕರ್ತರು ಮತ್ತು ಬಳಕೆದಾರರಿಗೆ ಇದರಿಂದ ಪ್ರಯೋಜನವಾಗುತ್ತದೆ ಎಂದು ಅವರು ಒತ್ತಿ ಹೇಳಿದರು.

ಎಐಯನ್ನು ಪ್ರಜಾಸತ್ತಾತ್ಮಕಗೊಳಿಸುವಿಕೆ: ಸೃಷ್ಟಿಕರ್ತರ ಸಬಲೀಕರಣ ಮತ್ತು ಜಾಗತಿಕ ಮಾನ್ಯತೆ:

ಚಲನಚಿತ್ರ ನಿರ್ಮಾಣದಲ್ಲಿ ಎಐನ ಬೆಳೆಯುತ್ತಿರುವ ಪಾತ್ರದ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಆನಂದ್ ಗಾಂಧಿ, ಎಐ ಶೀಘ್ರದಲ್ಲೇ ಚಲನಚಿತ್ರ ನಿರ್ಮಾಣ ಪ್ರಕ್ರಿಯೆಯ ಬೇರ್ಪಡಿಸಲಾಗದ ಭಾಗವಾಗಲಿದೆ ಎಂದು ಹೇಳಿದರು. ಎಐ ಕೇವಲ ಸಹಾಯ ಮಾಡುವುದು ಮಾತ್ರವಲ್ಲ ಚಲನಚಿತ್ರಗಳನ್ನು ನಿರ್ಮಿಸುವಲ್ಲಿ ಸಹ-ಲೇಖಕರಂತೆಯೂ ಸಕ್ರಿಯವಾಗಿ ಭಾಗವಹಿಸುತ್ತದೆ ಎಂದು ಅವರು ಪ್ರತಿಪಾದಿಸಿದರು.

ಪ್ರಾಚೀನ ಧರ್ಮಗ್ರಂಥಗಳನ್ನು ಮರುಸೃಷ್ಟಿಸುವ ಎಐನ ಸಾಮರ್ಥ್ಯದ ಬಗ್ಗೆ ಮಾತನಾಡಿದ ಪ್ರಜ್ಞಾ ಮಿಶ್ರಾ ಇದು ಈಗಾಗಲೇ ನಡೆಯುತ್ತಿದೆ ಎಂದು ದೃಢಪಡಿಸಿದರು ಮತ್ತು ಅಂತಹ ಸಲಕರಣೆಗಳಿಗೆ ಪ್ರವೇಶವನ್ನು ಅಥವಾ ಎಲ್ಲರಿಗೂ ಅದು ಲಭ್ಯವಾಗುವಂತೆ ಪ್ರಜಾಪ್ರಭುತ್ವಗೊಳಿಸುವ (ಎಲ್ಲರಿಗೂ ಲಭಿಸುವಂತೆ ಮಾಡುವ) ಮಹತ್ವವನ್ನು ಒತ್ತಿ ಹೇಳಿದರು. ಎಐಯಿಂದ ಸೃಷ್ಟಿಕರ್ತರಿಗೆ ಆಲೋಚನೆಗಳನ್ನು ಮಂಡಿಸಲು ಮತ್ತು ಧನಸಹಾಯವನ್ನು ಪಡೆಯಲು ಸಹಾಯವಾಗುತ್ತದೆ, ನಿರ್ದೇಶಕರು ತಮ್ಮ ಕೆಲಸವನ್ನು ಜಾಗತಿಕ ವೇದಿಕೆಯಲ್ಲಿ ಇರಿಸಲು ಅದು ಅನುವು ಮಾಡಿಕೊಡುತ್ತದೆ ಎಂದೂ ಅವರು ನುಡಿದರು.

ಚರ್ಚೆಯು ನಂತರ ಮಾನವ ಸೃಜನಶೀಲತೆಯನ್ನು ನಿಗ್ರಹಿಸುವ ಎಐ ಸಾಮರ್ಥ್ಯದ ಬಗ್ಗೆ ಕಳವಳಗಳಿಗೆ ತಿರುಗಿತು. ಇದಕ್ಕೆ ಪ್ರತಿಕ್ರಿಯಿಸಿದ ಶೇಖರ್ ಕಪೂರ್, "ಎಐ ಮಾನವ ಕಲ್ಪನೆಯನ್ನು ಹಿಡಿಯಲು ಬಹಳ ದೂರ ಸಾಗಿ ಬರಬೇಕಿದೆ, ಏಕೆಂದರೆ ಮಾನವ ಕಲ್ಪನೆಯು ಅನಿಶ್ಚಿತತೆ, ಪ್ರೀತಿ, ಭಯದಿಂದ ಹುಟ್ಟುತ್ತದೆ, ಆದರೆ ಎಐಗೆ ಎಲ್ಲವೂ ನಿರ್ದಿಷ್ಟವಾಗಿರುತ್ತದೆ, ಅಲ್ಲಿ ಇಂತಹ ಸ್ಥಿತ್ಯಂತರಗಳು ಇರುವುದಿಲ್ಲ" ಎಂದು ಹೇಳಿದರು.

ಕಪೂರ್, ಯೋಚಿಸುವುದನ್ನು ನಿಲ್ಲಿಸುವಂತಹ ಮತ್ತು ಎಲ್ಲವನ್ನೂ ಎಐಗೆ ಹೊರಗುತ್ತಿಗೆ ನೀಡುವಂತಹ  ಜಡತ್ವ ನಮ್ಮಲ್ಲಿದ್ದರೆ, ಆಗ ಅದು ಅಂತರ್ಗತ ಮತ್ತು ಅದು ಮಾನವ ಸಮಸ್ಯೆಯಾಗಿರುತ್ತದೆ ಎಂದು ಕಪೂರ್ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಜ್ಞಾ ಮಿಶ್ರಾ, ಎಐ ಅನ್ನು ಬದಲಿಸುವ ಬದಲು ಸೃಜನಶೀಲ ಅಭಿವ್ಯಕ್ತಿಯನ್ನು ಬೆಂಬಲಿಸುವ ಸಾಧನವಾಗಿ ರೂಪಿಸುವ ಅವಶ್ಯಕತೆ ಇದೆ ಎಂದರು. "ನಾನು ಕಲ್ಪನೆ ಮಾಡಬಹುದು ಮತ್ತು ಎಐ ಬಳಸಿ ಅದನ್ನು ಇನ್ನಷ್ಟು  ಉತ್ತಮವಾಗಿ ವ್ಯಕ್ತಪಡಿಸಬಹುದು" ಎಂದು ಅವರು ಹೇಳಿದರು, ಮಾನವ ಆಲೋಚನೆಗಳಿಗೆ ಜೀವ ತುಂಬಲು ಎಐ ಬುದ್ಧಿವಂತ ಸಹಾಯಕನಂತೆ ಕಾರ್ಯನಿರ್ವಹಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಒಂದೇ ಪ್ರಾಂಪ್ಟ್ನೊಂದಿಗೆ, ಎಸ್ ಒ ಆರ್ ಎ (ಸೊರಾ) ಪ್ರತಿ ಬಾರಿಯೂ ವಿಶಿಷ್ಟ ಫಲಿತಾಂಶಗಳನ್ನು ಉತ್ಪಾದಿಸುತ್ತದೆ, ಪ್ರತಿಯೊಬ್ಬರೂ ವಿಭಿನ್ನವಾಗಿ ವ್ಯಾಖ್ಯಾನಿಸುವ  ಮಾನವರಂತೆ ಅದು ವರ್ತಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಅಧಿವೇಶನವು ಸಕಾರಾತ್ಮಕ ಟಿಪ್ಪಣಿಯೊಂದಿಗೆ ಕೊನೆಗೊಂಡಿತು, ಎಐ ಚಲನಚಿತ್ರ ನಿರ್ಮಾಣವನ್ನು ಗಮನಾರ್ಹವಾಗಿ ವೃದ್ಧಿಸಬಹುದಾದರೂ, ಅದು ಎಂದಿಗೂ ಮಾನವ ಮನಸ್ಸಿನ ಸೃಜನಶೀಲ ಸಾಮರ್ಥ್ಯವನ್ನು ಕಸಿದುಕೊಳ್ಳುವುದಿಲ್ಲ  ಎಂದು ಪ್ಯಾನೆಲ್ ಒಪ್ಪಿಕೊಂಡಿತು.

 

*****

iffi reel

(Release ID: 2077479) Visitor Counter : 29