ವಾರ್ತಾ ಮತ್ತು ಪ್ರಸಾರ ಸಚಿವಾಲಯ
55ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಸಿನಿ ಫ್ಯಾಶನ್ ಓವರ್ ದಿ ಡಿಕೇಡ್ಸ್: ಪವರ್ಡ್ ಬೈ ಪಿಲ್ಲರ್ಸ್ ಆಫ್ ಹ್ಯುಮಾನಿಟಿ’
IFFIESTA ಫ್ಯಾಶನ್ ಶೋ ಭಾರತೀಯ ಚಿತ್ರರಂಗದ ಆರು ಯುಗಗಳಿಂದ ಪ್ರೇರಿತವಾಗಿದೆ
55ನೇ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI) ನೇಪಥ್ಯದಲ್ಲಿ ಫ್ಯಾಶನ್ ಶೋ ಸಿನಿ ಫ್ಯಾಶನ್ ಓವರ್ ದ ಡಿಕೇಡ್ಸ್: ಪವರ್ಡ್ ಬೈ ಪಿಲ್ಲರ್ಸ್ ಆಫ್ ಹ್ಯುಮಾನಿಟಿ (IFFIESTA) ನಡೆಯಿತು.
ಕಮಲಾ ಅಂಕಿಬಾಯಿ ಘಮಂದಿರಂ ಗೋವಾನಿ ಟ್ರಸ್ಟ್‌ನ ಸೂಕ್ತ ಪ್ರಯತ್ನಗಳೊಂದಿಗೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (ಎನ್‌ಐಎಫ್‌ಟಿ) ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಸಂಯೋಜಿಸುವ ಈ ವಿಶಿಷ್ಟ ಕಾರ್ಯಕ್ರಮವು ಫ್ಯಾಶನ್ ಮೂಲಕ ಭಾರತೀಯ ಚಿತ್ರರಂಗದ ವಿಕಾಸವನ್ನು ಪ್ರಸ್ತುತಪಡಿಸುತಿದೆ..
ಪ್ರದರ್ಶನವು 36 ವಿಶೇಷ ವಿನ್ಯಾಸಗಳನ್ನು ಒಳಗೊಂಡಿತ್ತು, ಇದು ಭಾರತೀಯ ಚಿತ್ರರಂಗದ ಆರು ಸಾಂಪ್ರದಾಯಿಕ ಯುಗಗಳಿಂದ ಪ್ರೇರಿತವಾಗಿದೆ, ಪ್ರತಿ ಅವಧಿಯ ಶೈಲಿ ಮತ್ತು ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಮೊದಲ ಬಾರಿಗೆ, ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿಗಳು NIFT ವಿದ್ಯಾರ್ಥಿಗಳ ಜೊತೆಯಲ್ಲಿ ವೈವಿಧ್ಯತೆಯನ್ನು ಆಚರಿಸುವ ಮೂಲಕ ಮತ್ತು ಫ್ಯಾಷನ್ ಮೂಲಕ ವ್ಯಕ್ತಿಗಳನ್ನು ಸಬಲೀಕರಣಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಹೊಸ ಆಯಾಮವನ್ನು ನೀಡಲಾಗಿದೆ.
ಐಎಫ್‌ಎಫ್‌ಐ 2024 ರಲ್ಲಿ ಫ್ಯಾಷನ್ ಶೋ ಚಿತ್ರಣಗಳನ್ನು ನೋಡಲು ಸ್ಕ್ರಾಲ್ ಮಾಡಿ.
















*****
(ಪ್ರಕಟಣೆ ಐ.ಡಿ.: 2077423)
ವಿಸಿಟರ್ ಕೌಂಟರ್ : 32