ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner
0 7

ಶೌರ್ಯದ ಸ್ಪೂರ್ತಿದಾಯಕ ಕಥೆ: 55ನೇ ಐಎಫ್‌ಎಫ್ಐ ನಲ್ಲಿ 'ಅಮೆರಿಕನ್ ವಾರಿಯರ್' ಪ್ರಭೆ


"ಇದು ಚಿತ್ರಕ್ಕಿಂತ ಮಿಗಿಲಾದುದು - ಇದು ಸಂಕಷ್ಟಗಳನ್ನು ದಾಟಿ ಬಂದು ಸ್ಥಿರವಾಗಿ ನಿಂತ  ನನ್ನ ಕಥೆ" - ನಟ ವಿಶಿ ಅಯ್ಯರ್

ಪ್ರೀತಿಯ ಶಕ್ತಿ ಮತ್ತು ಜೀವನದಲ್ಲಿ ಎರಡನೇ ಅವಕಾಶವನ್ನು 'ಅಮೆರಿಕನ್ ವಾರಿಯರ್' ಕಟ್ಟಿಕೊಟ್ಟಿದೆ - ನಟಿ ಟೇಲರ್ ಟ್ರೆಡ್ವೆಲ್

‘ಅಮೆರಿಕನ್ ವಾರಿಯರ್’ ವಲಸಿಗರ ಅನುಭವವನ್ನು, ಭಾರತೀಯ-ಅಮೆರಿಕನ್ನರ ಹೋರಾಟಗಳು ಮತ್ತು ಆಶೋತ್ತರಗಳನ್ನು ಸೆರೆಹಿಡಿದಿದೆ : ನಿರ್ಮಾಪಕ ರಿಶಾನಾ

ಗೋವಾದಲ್ಲಿ ನಡೆಯುತ್ತಿರುವ 55 ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಜಾಗತಿಕ ಸಿನಿಮೀಯ ಸಮುದಾಯವನ್ನು ಅತ್ಯುತ್ಸಾಹದಿಂದ ಸ್ವಾಗತಿಸಿದೆ. ಬಹು ನಿರೀಕ್ಷಿತ ಗುಸ್ಟಾವೊ ಮಾರ್ಟಿನ್ ನಿರ್ದೇಶನದ ಚಲನಚಿತ್ರ ಅಮೆರಿಕನ್ ವಾರಿಯರ್ ಗಮನಸೆಳೆಯಿತು. ಯುನೈಟೆಡ್ ಸ್ಟೇಟ್ಸ್ನ ಈ ಸ್ಪೂರ್ತಿದಾಯಕ ಚಲನಚಿತ್ರವು ಭಾರತೀಯ-ಅಮೆರಿಕನ್ ವಲಸೆಗಾರರ ಪರಿವರ್ತಕ ಪಯಣವನ್ನು ಬಿಂಬಿಸುತ್ತದೆ. 

ದರೋಡೆ ಪ್ರಯತ್ನವನ್ನು ಹತ್ತಿಕ್ಕಿದಾಗ ಪಾಪವಿಮೋಚನೆಯನ್ನು ಕಂಡುಕೊಳ್ಳುವ ಮಾಜಿ ಅಪರಾಧಿ ಹಾಗೂ ಮಿಶ್ರ ಸಮರ ಕಲೆಗಳ ಹವ್ಯಾಸಿ ಜೇ ಅವರು ಆಸಕ್ತಿದಾಯ ಕಥೆಯನ್ನು ಅಮೆರಿಕನ್ ವಾರಿಯರ್ ಚಿತ್ರ ಕಟ್ಟಿಕೊಡುತ್ತದೆ. ಅವನ ಸಾಹಸಮಯ ಕಾರ್ಯಗಳು ಸಾರ್ವಜನಿಕರ ದೃಷ್ಟಿಯಲ್ಲಿ ಅವನನ್ನು ಸ್ಥಳೀಯ ನಾಯಕನನ್ನಾಗಿ ಪರಿವರ್ತಿಸುತ್ತಾ ಅವನ ಮುಂದೆ ಹೊಸ ಸವಾಲುಗಳನ್ನು ಒಡ್ಡುತ್ತದೆ. ಚಲನಚಿತ್ರವು ಸಾಮಾನ್ಯ ನಂಬಿಕೆಗಳ ಮೇಲೆ ಸವಾಲು ಹಾಕುತ್ತದೆಯಲ್ಲದೇ, ಪ್ರೇಕ್ಷಕರು ಮತ್ತು ಸಮುದಾಯಗಳೊಂದಿಗೆ ಆಳವಾಗಿ ಅನುರಣಿಸುತ್ತಾ ಭರವಸೆಯ ಸಂದೇಶವನ್ನು ನೀಡುತ್ತದೆ. ನಾಯಕ ನಟ ವಿಶಿ ಅಯ್ಯರ್ ಅವರು ಪಾತ್ರದಲ್ಲಿ ತಲ್ಲೀನರಾಗಿ ನೀಡಿದ ನೈಜ ಅಭಿನಯವು ಅವರ ವರ್ಚಸ್ಸು ಮತ್ತು ಬದ್ಧತೆಯನ್ನು ಎತ್ತಿ ತೋರಿಸುತ್ತದೆ.

ಪತ್ರಿಕಾಗೋಷ್ಠಿಯಲ್ಲಿ ನಾಯಕ ನಟ ವಿಶಿ ಅಯ್ಯರ್, ನಟಿ ಟೇಲರ್ ಟ್ರೆಡ್ವೆಲ್ ಮತ್ತು ನಿರ್ಮಾಪಕರಾದ ಕ್ರಿಸ್ಟಿ ಕೂರ್ಸ್ ಬೀಸ್ಲಿ, ರಶಾನಾ ಸೇರಿದಂತೆ ಚಿತ್ರದ ಪ್ರತಿನಿಧಿಗಳನ್ನು ಪರಿಚಯಿಸಲಾಯಿತು. ಚಲನಚಿತ್ರವನ್ನು ಪ್ರದರ್ಶಿಸಲು ನೀಡಿದ ಅವಕಾಶಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸಿದ ಪ್ರತಿನಿಧಿಗಳು ನಿರೂಪಣೆಯ ಮೂಲ ಮತ್ತು ಅದರ ಪ್ರಭಾವದ ಬಗ್ಗೆ ತಮ್ಮ ಒಳನೋಟಗಳನ್ನು ಹಂಚಿಕೊಂಡರು. ಕಥೆಯ ಮೂಲಕ್ಕೆ, ಭಾವನಾತ್ಮಕ ಸಾರಕ್ಕೆ ಸೆಳೆಯುವ ಮೈನವಿರೇಳಿಸುವ ಆಕರ್ಷಕ ಟ್ರೇಲರ್ ಅನ್ನು ಪ್ರಸ್ತುತಪಡಿಸಲಾಯಿತು. 

ವಿಶಿ ಅಯ್ಯರ್ ಅವರು ತಮ್ಮ ಸಿನಿ ಪಯಣದ ಬಗ್ಗೆ ಮಾತನಾಡುತ್ತಾ, ಆಳವಾಗಿ ಬೇರೂರಿರುವ ತಮ್ಮ ಸ್ವಂತ ಜೀವನದ ಅನುಭವಗಳನ್ನು ತೆರೆದಿಡುತ್ತಾ ಚಿತ್ರದ ಕುರಿತಾದ ತಮ್ಮ ವೈಯಕ್ತಿಕ ಸ್ಫೂರ್ತಿಯನ್ನು ಬಹಿರಂಗಪಡಿಸಿದರು. ಹಣಕಾಸಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಬಹುಲಕ್ಷ ಡಾಲರ್ ವ್ಯವಹಾರದಲ್ಲಿ ನಷ್ಟ ಅನುಭವಿಸಿ ಬಹಿಷ್ಕಾರ ಎದುರಿಸುವ ಅಯ್ಯರ್, ಆಧ್ಯಾತ್ಮಿಕತೆ ಮತ್ತು ಸ್ವಯಂ-ಶೋಧನೆಯಲ್ಲಿ ಸಾಂತ್ವನ ಕಂಡುಕೊಂಡರು. ಭಗವದ್ಗೀತೆಯ ಬೋಧನೆಗಳಿಂದ, ವಿಶೇಷವಾಗಿ ಅರ್ಜುನನ ಕಥೆಯಿಂದ ಪ್ರೇರಿತರಾದ ಅವರು ಸ್ಥಿತಿಸ್ಥಾಪಕತ್ವ ಮತ್ತು ವಿಮೋಚನೆಯ ನಿರೂಪಣೆಯ ಪರಿಕಲ್ಪನೆಯನ್ನು ಹೊಂದಿದ್ದಾಗಿ ಹೇಳಿದರು. 

ಚಿತ್ರದಲ್ಲಿ ಏಕೈಕ ಪೋಷಕಿಯಾದ ತಾಯಿ ಮೆಲಿಸ್ಸಾ ಪಾತ್ರವನ್ನು ನಿರ್ವಹಿಸಿರುವ ಟೇಲರ್ ಟ್ರೆಡ್ವೆಲ್ ತನ್ನ ಪಾತ್ರವನ್ನು ಗಾಢವಾಗಿ ಅರ್ಥಪೂರ್ಣವಾದದ್ದು ಎಂದು ಬಣ್ಣಿಸಿದ್ದಾರೆ. "ಅಮೆರಿಕನ್ ವಾರಿಯರ್” ಚಿತ್ರವು ಪ್ರೀತಿಯ ಶಕ್ತಿ ಮತ್ತು ಎರಡನೇ ಅವಕಾಶಗಳ ಬಗ್ಗೆ ತೋರಿಸುತ್ತದೆ" ಎಂದು ಅವರು ಹೇಳಿದರು. ಆಕ್ಷನ್ ಮತ್ತು ಭಾವನೆಗಳ ನಡುವಿನ ಚಲನಚಿತ್ರದ ಸಮತೋಲನವನ್ನು ಎತ್ತಿ ತೋರಿಸಿದ ಅವರು, ಈ ಚಲನಚಿತ್ರವು ಕೇವಲ ಭೌತಿಕ ಯುದ್ಧಗಳ ಬಗ್ಗೆ ಮಾತ್ರವಲ್ಲದೆ ಮಾನವನ ಸ್ಥಿತಿಸ್ಥಾಪಕತ್ವವನ್ನು ವ್ಯಾಖ್ಯಾನಿಸುವ ಆಂತರಿಕ ಹೋರಾಟಗಳ ಬಗ್ಗೆಯೂ ಹೌದು” ಎಂದಿದ್ದಾರೆ. 

ವಾಸ್ತವತೆಗೆ ಅದರ ಬದ್ಧತೆಯಿಂದ ಚಿತ್ರದ ನೈಜತೆ ಮತ್ತಷ್ಟು ಹೆಚ್ಚಿದೆ. ಚಿತ್ರದಲ್ಲಿನ ಸಾಹಸಮಯ ದೃಶ್ಯಗಳಿಗೆ ನೈಜತೆ ತರಲು ಅಯ್ಯರ್ ಅವರು ವೃತ್ತಿಪರ ಯು ಎಫ್ ಸಿ ಫೈಟರ್ನ ಅಡಿಯಲ್ಲಿ ಕಠಿಣ ತರಬೇತಿಯನ್ನು ಪಡೆದರು. ವಿಶಿ ಅಯ್ಯರ್ ಅವರು ಚಿತ್ರದ ದೃಢ ಹಾಗೂ ಅವಿರತ ಪರಿಶ್ರಮದ ಸಂದೇಶವನ್ನು ಒತ್ತಿಹೇಳುತ್ತಾ, ಭಾವನಾತ್ಮಕ ಮತ್ತು ದೈಹಿಕ ಎರಡೂ ಬಗೆಯ ಸವಾಲುಗಳನ್ನು ಅಚಲ ಬದ್ಧತೆಯಿಂದ ಎದುರಿಸಿದರು.  

ಭಾರತೀಯ-ಅಮೆರಿಕನ್ನರ ಹೋರಾಟಗಳು ಮತ್ತು ಆಶೋತ್ತರಗಳ ಮೇಲೆ ಬೆಳಕು ಚೆಲ್ಲುತ್ತಾ ವಲಸೆಯ ಅನುಭವದ ಮೇಲೆ ಚಿತ್ರದ ಗಮನ ಹರಿಸಿದೆ ಎಂದು ನಿರ್ಮಾಪಕ ರಶಾನಾ ಅವರು ಒತ್ತಿ ಹೇಳಿದರು. ಸ್ಥಿತಿಸ್ಥಾಪಕತ್ವ ಮತ್ತು ಭರವಸೆಯ ಸಾರ್ವತ್ರಿಕ ವಿಷಯಗಳನ್ನು ಎತ್ತಿ ಹಿಡಿಯುತ್ತಾ, ಅಮೆರಿಕದ ಮತ್ತು ಭಾರತೀಯ ಪ್ರೇಕ್ಷಕರಿಗೆ ಚಲನಚಿತ್ರದ ಸಂದೇಶವನ್ನು ತಿಳಿಸಿದರು.  ಮತ್ತೊಬ್ಬ ನಿರ್ಮಾಪಕರಾದ ಕ್ರಿಸ್ಟಿ ಕೂರ್ಸ್ ಬೀಸ್ಲಿ ಅವರು ಹೆಚ್ಚು ಅಧಿಕೃತ ನಿರೂಪಣೆಯನ್ನು ಪ್ರಸ್ತುತಪಡಿಸಲು ಗ್ಲಾಮರ್ನ ಆಚೆಗಿನ ಅಮೆರಿದ ಜೀವನದ ಕಟುವಾದ ಭಾಗವನ್ನು ಪ್ರದರ್ಶಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು.

ಸ್ತ್ರೀ ಪಾತ್ರಗಳನ್ನು ಮುನ್ನೆಲೆಗೆ ತರುವ ಮೂಲಕ ಸಾಂಪ್ರದಾಯಿಕ ನಿರೂಪಣೆಗಳಿಂದ ಹೊರ ಬಂದ ಬಗ್ಗೆ ನಿರ್ಮಾಣ ತಂಡಕ್ಕೆ ಹೆಮ್ಮೆಯಿದೆ. ಹೋರಾಟದ ವೈದ್ಯರನ್ನು ಮಹಿಳೆಯಾಗಿ ಚಿತ್ರಿಸುತ್ತಾ ಲಿಂಗ ಸಮತೋಲಿತ ಪ್ರಾತಿನಿಧ್ಯವನ್ನು ಖಾತರಿಪಡಿಸಲು, ಚಲನಚಿತ್ರವು ಉದ್ಯಮದ ಮಾನದಂಡಗಳಿಗೆ ಸವಾಲೊಡ್ಡಿದೆ ಮತ್ತು ಮಹಿಳಾ ಪಾತ್ರಗಳಿಗೆ ಹೊಸ ಅವಕಾಶಗಳನ್ನು ಕಲ್ಪಿಸಲು ವೀಕ್ಷಕರನ್ನು ಪ್ರೇರೇಪಿಸಿದೆ. 

ವಿವಿಧ ಅಂತಾರಾಷ್ಟ್ರೀಯ ಉತ್ಸವಗಳಲ್ಲಿ ಚಲನಚಿತ್ರಕ್ಕೆ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗಿದ್ದು, ಪ್ರೇಕ್ಷಕರು ಅದರ ಮೂಲ ಉದ್ದೇಶದೊಂದಿಗೆ ಆಳವಾಗಿ ಸಂಪರ್ಕಿತರಾಗಿದ್ದಾರೆ. ಕಥೆಯಲ್ಲಿನ ಘಟನೆಗಳನ್ನು ತಮ್ಮ ಸ್ವಂತ ಜೀವನಕ್ಕೆ ಹೋಲಿಸಿಕೊಂಡು ವೀಕ್ಷಕರು ಭಾವುಕರಾದ ಬಗೆಗಿನ ಭಾವನಾತ್ಮಕ ಕ್ಷಣಗಳ ಬಗ್ಗೆ ತಂಡ ನೆನಪು ಮಾಡಿಕೊಂಡಿದೆ. 

ಅನುಭವಿ ಸಾಹಸ ಸಂಯೋಜಕರು ಮತ್ತು ಮಿಶ್ರ ಸಮಯ ಕಲೆ (ಎಂಎಂಎ) ವೃತ್ತಿಪರರ ಕೊಡುಗೆಗಳನ್ನು ಒಳಗೊಂಡಂತೆ ತಂಡದ ನಡುವಿನ ಸೃಜನಶೀಲ ಸಹಯೋಗವು ಚಿತ್ರದ ಯಶಸ್ಸಿನ ಮಹತ್ವದ ಅಂಶವಾಗಿದೆ. ಅಮೆರಿಕನ್ ವಾರಿಯರ್ ಚಿತ್ರವು ರೂಪಾಂತರ, ಶೌರ್ಯ ಮತ್ತು ಸಾಂಸ್ಕೃತಿಕ ಸೇತುವೆ-ನಿರ್ಮಾಣದ ಪ್ರಬಲ ನಿರೂಪಣೆಯಾಗಿ ಹೊರಹೊಮ್ಮುತ್ತದೆ. ಅದರ ಮೂಲ ಧ್ಯೇಯವು ಅಡೆತಡೆಗಳನ್ನು ಮೀರುತ್ತಾ, ಪ್ರೇಕ್ಷಕರಿಗೆ ಭರವಸೆ ಮತ್ತು ಸ್ಥಿತಿಸ್ಥಾಪಕತ್ವದ ಸಾರ್ವತ್ರಿಕ ಸಂದೇಶದೊಂದಿಗೆ ಆಳವಾಗಿ ಸಂಪರ್ಕಿಸಲು ಅವಕಾಶವನ್ನು ನೀಡುತ್ತದೆ.

 

*****

iffi reel

(Release ID: 2077381) Visitor Counter : 4