ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner
0 4

'ಐ ಎಫ್ ಎಫ್ ಐ ಯುವ ಮತ್ತು ಮಹತ್ವಾಕಾಂಕ್ಷಿ ಚಲನಚಿತ್ರ ನಿರ್ಮಾಪಕರಿಗೆ ತಮ್ಮ ಸೃಜನಶೀಲ ಚಿಂತನೆ ಮತ್ತು ಮೌಲ್ಯಗಳನ್ನು ಜಗತ್ತಿಗೆ ಪ್ರದರ್ಶಿಸಲು ಉತ್ತಮ ಪ್ರೋತ್ಸಾಹವನ್ನು ನೀಡುತ್ತದೆ: ಸಂತೋಷ್ ಶಿವನ್


ಪ್ರಶಸ್ತಿಗಳು ಚಲನಚಿತ್ರ ನಿರ್ಮಾಪಕರಿಗೆ ಶಕ್ತಿಯನ್ನು ನೀಡುತ್ತವೆ: ಸಂತೋಷ್ ಶಿವನ್

ಯುವ ಚಲನಚಿತ್ರ ನಿರ್ಮಾಪಕರು ಸತ್ಯವನ್ನು ಪ್ರಶ್ನಿಸುವ ಮೂಲಕ ಪ್ರಾರಂಭಿಸಬೇಕು, ಹಿಂದಿನದನ್ನು ಪ್ರಶ್ನಿಸಬೇಕು: ಶೇಖರ್ ದಾಸ್, ತೀರ್ಪುಗಾರರ ಸದಸ್ಯ

ಭಾರತೀಯ ಫೀಚರ್ ಫಿಲ್ಮ್ ನ ಅತ್ಯುತ್ತಮ ಚೊಚ್ಚಲ ನಿರ್ದೇಶಕರು 55ನೇ ಐ ಎಫ್ ಎಫ್ ಐ ನಲ್ಲಿ ಮಾಧ್ಯಮದೊಂದಿಗೆ ಸಂವಾದ ನಡೆಸಿದರು

ಭಾರತದಲ್ಲಿ ಹೊಸ ಮತ್ತು ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI)ದ 55ನೇ ಆವೃತ್ತಿಯು ಹೊಸ ಪ್ರಶಸ್ತಿ ವಿಭಾಗವನ್ನು ಸ್ಥಾಪಿಸಿದೆ: 'ಭಾರತೀಯ ಫೀಚರ್ ಚಲನಚಿತ್ರದ ಅತ್ಯುತ್ತಮ ಮೊದಲ ನಿರ್ದೇಶಕ'. ಈ ವಿಭಾಗವು ಭಾರತದಾದ್ಯಂತ ಹೊಸ ದೃಷ್ಟಿಕೋನಗಳು, ವೈವಿಧ್ಯಮಯ ಕಥನಗಳು ಮತ್ತು ನಾವೀನ್ಯಪೂರ್ಣ ಚಲನಚಿತ್ರ ಶೈಲಿಗಳನ್ನು ಪ್ರದರ್ಶಿಸುವ ಐದು ಗಮನಾರ್ಹ ಮೊದಲ ಚಲನಚಿತ್ರಗಳನ್ನು ಪ್ರದರ್ಶಿಸಲಿದೆ.

ಇಂದು, ಈ ವಿಭಾಗದಲ್ಲಿನ ಐದು ಎಂಟ್ರಿಗಳಿಂದ ಅತ್ಯುತ್ತಮ ಚಲನಚಿತ್ರವನ್ನು ಆಯ್ಕೆ ಮಾಡುವ ಜ್ಯೂರಿ, ಗೋವಾದ ಪಣಜಿಯಲ್ಲಿರುವ ಐ ಎಫ್ ಎಫ್ ಐ ಮೀಡಿಯಾ ಕೇಂದ್ರದಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿತು. ಈ ಸಂವಾದದ ಸಮಯದಲ್ಲಿ, ಜ್ಯೂರಿ ಸದಸ್ಯರು ಚಲನಚಿತ್ರ ಕ್ಷೇತ್ರದಲ್ಲಿರುವ ಅಪಾರ ಸೃಜನಶೀಲ ಪ್ರತಿಭೆ ಮತ್ತು ಆಕಾಂಕ್ಷಿ ಯುವಕರೊಂದಿಗೆ ಭಾರತೀಯ ಸಿನಿಮಾ ಸುರಕ್ಷಿತವಾಗಿದೆ ಮತ್ತು ಚಲನಚಿತ್ರ ನಿರ್ಮಾಣದ ಎಲ್ಲಾ ಅಂಶಗಳಲ್ಲಿ ವೇಗವಾಗಿ ಸುಧಾರಿಸುತ್ತಿದೆ ಎಂಬ ತಮ್ಮ ನಿರೀಕ್ಷೆ ಮತ್ತು ನಂಬಿಕೆಯನ್ನು ವ್ಯಕ್ತಪಡಿಸಿದರು. ಅವರು ಪ್ರಶಸ್ತಿಯ ಮಾನದಂಡಗಳು ಮತ್ತು ಆಯ್ಕೆ ಪ್ರಕ್ರಿಯೆಯ ಬಗ್ಗೆಯೂ ಮಾಹಿತಿ ನೀಡಿದರು.

ಹನ್ನೆರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಖ್ಯಾತ ಛಾಯಾಗ್ರಾಹಕ ಹಾಗೂ ಜ್ಯೂರಿ ಅಧ್ಯಕ್ಷ ಶ್ರೀ ಸಂತೋಷ್ ಶಿವನ್ ಅವರು ತಮ್ಮ ಪ್ರಾರಂಭಿಕ ಭಾಷಣದಲ್ಲಿ, ವಿಶೇಷವಾಗಿ ಚಲನಚಿತ್ರ ಸಂಸ್ಥೆಗಳ ವಿದ್ಯಾರ್ಥಿಗಳು ನಿರ್ಮಿಸಿದ ವಿದ್ಯಾರ್ಥಿ ಚಲನಚಿತ್ರಗಳನ್ನು ಸೇರಿಸಲು ವಿಭಾಗವನ್ನು ವಿಸ್ತರಿಸಲು ತೀರ್ಪುಗಾರರು ಶಿಫಾರಸು ಮಾಡಿದ್ದಾರೆ ಎಂದು ಹೇಳಿದರು. ಭಾರತೀಯ ಸಿನಿಮಾ ಕ್ಷೇತ್ರದ ಭವಿಷ್ಯವನ್ನು ರೂಪಿಸುವಲ್ಲಿ ಇಂತಹ ಉಪಕ್ರಮಗಳು ಅತ್ಯಂತ ಮಹತ್ವದ್ದಾಗಿವೆ ಎಂದು ಅವರು ಒತ್ತಿ ಹೇಳಿದರು, ಮತ್ತು ಈ ಕ್ಷೇತ್ರದ "ಭವಿಷ್ಯ"ವನ್ನು ಉತ್ತೇಜಿಸುವಲ್ಲಿ ಇಂತಹ ಉಪಕ್ರಮಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು. ಪ್ರಶಸ್ತಿಗಳು ಮತ್ತು ಮಾನ್ಯತೆಗಳು ಮಹತ್ವಾಕಾಂಕ್ಷೆಯ ಚಲನಚಿತ್ರ ನಿರ್ಮಾಪಕರಿಗೆ ಶಕ್ತಿ ನೀಡುತ್ತವೆ ಮತ್ತು ಹೊಸ ಕಲ್ಪನೆಗಳೊಂದಿಗೆ ಮುಂದೆ ಬರಲು ಹಾಗೂ ತಮ್ಮ ಕಲೆಯನ್ನು ಸುಧಾರಿಸಿಕೊಳ್ಳಲು ಪ್ರೋತ್ಸಾಹಿಸುತ್ತವೆ ಎಂದು ಅವರು ಹೇಳಿದರು.

ತೀರ್ಪುಗಾರರ ಸಮಿತಿಯ ಸದಸ್ಯ ಶ್ರೀ ಶೇಖರ್ ದಾಸ್ ಅವರು, ಡಿಜಿಟಲ್ ಯುಗವು ಮೊದಲ ಬಾರಿಗೆ ಚಲನಚಿತ್ರ ನಿರ್ಮಿಸುವವರಿಗೆ ತಮ್ಮ ಪ್ರಯತ್ನಗಳನ್ನು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರ ಮುಂದೆ ಇರಿಸಲು ಸ್ವಲ್ಪ ಸುಲಭವಾಗಿಸಿದೆ ಎಂದು ಉಲ್ಲೇಖಿಸಿದರು. ಡಿಜಿಟಲ್ ಯುಗದಲ್ಲಿ ಅನೇಕ ಅವಕಾಶಗಳು ಲಭ್ಯವಿದ್ದರೂ, IFFI ಯ ಈ ಉಪಕ್ರಮವು ನೈತಿಕತೆಯನ್ನು ಹೆಚ್ಚಿಸುತ್ತದೆ ಮತ್ತು ಉದಯೋನ್ಮುಖ ಚಲನಚಿತ್ರ ನಿರ್ಮಾಪಕರಿಗೆ ಸಾಕಷ್ಟು ಸ್ಫೂರ್ತಿ ನೀಡುತ್ತದೆ ಎಂದು ಹೇಳಿದರು. ಬುಡಕಟ್ಟು ಸಮುದಾಯದ ಮೇಲೆ ಆಧಾರಿತವಾಗಿದ್ದ ತಮ್ಮ ಮೊದಲ ಚಲನಚಿತ್ರದಲ್ಲಿ, ಮಹಾನ್ ನಿರ್ದೇಶಕ ಸತ್ಯಜಿತ್ ರೇ ಅವರ ಕೊನೆಯ ಚಿತ್ರವಾದ 'ಅಗಂತುಕ್' ನಲ್ಲಿ ಬುಡಕಟ್ಟು ಸಮುದಾಯದ ಮೇಲೆ ಆಧಾರಿತವಾಗಿದ್ದ ತಮ್ಮ ಮೊದಲ ಚಲನಚಿತ್ರದಲ್ಲಿ, ಮಹಾನ್ ನಿರ್ದೇಶಕ ಸತ್ಯಜಿತ್ ರೇ ಅವರ ಕೊನೆಯ ಚಿತ್ರವಾದ 'ಅಗಂತುಕ್' ನಲ್ಲಿ  ಚಿತ್ರಿಸಲಾದ ಕೆಲವು ಅಂಶಗಳ ಬಗ್ಗೆ ಕೆಲವು ಪ್ರಶ್ನೆಗಳನ್ನು ಎತ್ತಲು ತಾವು ಧೈರ್ಯ ಮಾಡಿದ್ದನ್ನು ಶ್ರೀ ದಾಸ್ ನೆನಪಿಸಿಕೊಂಡರು. ಇದರಲ್ಲಿ ನಾಯಕ ಬುಡಕಟ್ಟು ಜೀವನದ ಸರಳತೆಗೆ ಮರಳಲು ಆಶಿಸುತ್ತಾನೆ. ಭವಿಷ್ಯದ ಹಾದಿಯನ್ನು ಸುಗಮಗೊಳಿಸಲು ಮಹನೀಯರ ಕೃತಿಗಳ ಬಗ್ಗೆ ಇಂತಹ ಪ್ರಶ್ನೆಗಳನ್ನು ಕೇಳುವ ಧೈರ್ಯ ಮುಖ್ಯ ಎಂದು ಅವರು ಒತ್ತಿ ಹೇಳಿದರು.  

ಜ್ಯೂರಿ ಸದಸ್ಯ ಸುನಿಲ್ ಪುರಾಣಿಕ್ ಅವರು ಮೊದಲ ಬಾರಿಗೆ ಚಲನಚಿತ್ರ ನಿರ್ಮಾಪಕರ ಪ್ರತಿಭೆ ಮತ್ತು ಕ್ಯಾಮೆರಾದೊಂದಿಗಿನ ಅವರ ಮೊದಲ ಪ್ರಯೋಗಕ್ಕೆ ಅವರು ಆಯ್ಕೆ ಮಾಡಿದ ವಿಷಯಗಳ ಬಗ್ಗೆ ಮನಃಪೂರ್ವಕವಾಗಿ  ಶ್ಲಾಘಿಸಿದರು. ಈ ಕ್ಷೇತ್ರದಲ್ಲಿ ಚೊಚ್ಚಲ ನಿರ್ದೇಶಕರಿಗೆ ಪ್ರಶಸ್ತಿಯನ್ನು ಪ್ರಾರಂಭಿಸುವ ಮೂಲಕ ಇಂತಹ ದಕ್ಷ ವ್ಯವಸ್ಥೆಯನ್ನು ಸ್ಥಾಪಿಸಿದ NFDC ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಅವರು ಅಭಿನಂದನೆಗಳನ್ನು ಸಲ್ಲಿಸಿದರು.

ಶ್ರೀ ಎಂ.ವಿ. ರಘು, ಸಿನಿಮಾ ಎಂದರೆ ಮ್ಯಾಜಿಕ್ ಎನ್ನುತ್ತಾರೆ. ಬೆಳಕು, ಕ್ಯಾಮೆರಾ ಮತ್ತು ಆಕ್ಷನ್ ಮೂಲಕ ಚಲನಚಿತ್ರ ನಿರ್ಮಾಣದ ಕಲೆಯನ್ನು ಅರ್ಥಮಾಡಿಕೊಳ್ಳುವುದರ ಮಹತ್ವವನ್ನು ಅವರು ಒತ್ತಿ ಹೇಳಿದರು. ಅದ್ಭುತ ಹೊಸ ಮನಸ್ಸುಗಳನ್ನು ಸೃಷ್ಟಿಸಲು ಗುಣಮಟ್ಟದ ಚಲನಚಿತ್ರ ಶಿಕ್ಷಣದ ಅಗತ್ಯದ ಬಗ್ಗೆಯೂ ಅವರು ವಿವರಿಸಿದರು.

ಮೊದಲ ಬಾರಿಗೆ ಜ್ಯೂರಿ ಸದಸ್ಯರಾದ ವಿನೀತ್ ಕನೋಜಿಯಾ ಅವರು ತಮ್ಮ ಅನುಭವದ ಬಗ್ಗೆ ಮಾತನಾಡುತ್ತಾ, ಚಲನಚಿತ್ರ ನಿರ್ಮಾಪಕನ ಪಾತ್ರದಿಂದ ನೇರವಾಗಿ ತೀರ್ಪುಗಾರರ ಸಮಿತಿಗೆ ಸೇರುವುದು ಎಷ್ಟು ಕಷ್ಟಕರವಾಗಿತ್ತೆಂದು ವಿವರಿಸಿದರು.  

ಎಲ್ಲಾ ಜ್ಯೂರಿ ಸದಸ್ಯರು ಬಹಳ ಹಿಂದೆ ತಾವು ಮೊದಲ ಬಾರಿಗೆ ನಿರ್ದೇಶಕರಾಗಿದ್ದ ಅನುಭವವನ್ನು ಹಂಚಿಕೊಂಡರು ಮತ್ತು ಇಂದಿನ ಯುವಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಗಳ ರೂಪದಲ್ಲಿ ಸಾಕಷ್ಟು ಅವಕಾಶಗಳಿವೆ ಎಂದು ಹೇಳಿದರು. "ವೇದಿಕೆ ಲಭ್ಯವಿಲ್ಲದಿದ್ದರೆ, ಅವರೇ ವೇದಿಕೆಯನ್ನು ರಚಿಸಬಹುದು" ಎಂದು ಸಂತೋಷ್ ಶಿವನ್ ಹೇಳಿದರು. ಚಲನಚಿತ್ರ ನಿರ್ಮಾಣಕ್ಕೆ ಔಪಚಾರಿಕ ತರಬೇತಿಯ ಅಗತ್ಯವಿರುವ ದಿನಗಳು ಹೋಗಿವೆ. ಇತ್ತೀಚಿನ ದಿನಗಳಲ್ಲಿ ಯುವಕರಿಗೆ ಚಿಕ್ಕ ವಯಸ್ಸಿನಲ್ಲೇ ಕ್ಯಾಮರಾಗಳ ಪರಿಚಯವಾಗುತ್ತಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಜಿತ್ ಚಂದ್ರನ್ ಸಂಯೋಜಕರ ಪಾತ್ರ ನಿರ್ವಹಿಸಿದರು. 

ಚೊಚ್ಚಲ ನಿರ್ದೇಶಕ ಜ್ಯೂರಿ ಈ ಕೆಳಗಿನ ಸದಸ್ಯರನ್ನು ಒಳಗೊಂಡಿದೆ:

1. ಶ್ರೀ ಸಂತೋಷ್ ಶಿವನ್ (ಅಧ್ಯಕ್ಷರು), ಸಿನಿಮಾಟೋಗ್ರಾಫರ್ ಮತ್ತು ನಿರ್ದೇಶಕ

2. ಶ್ರೀ. ಸುನೀಲ್ ಪುರಾಣಿಕ್, ನಟ, ನಿರ್ದೇಶಕ ಮತ್ತು ನಿರ್ಮಾಪಕ

3. ಶ್ರೀ. ಶೇಖರ್ ದಾಸ್, ಚಲನಚಿತ್ರ ನಿರ್ದೇಶಕ ಮತ್ತು ಸ್ಟ್ರಿಪ್ಟ್ ರೈಟರ್

4. ಶ್ರೀ. ಎಂ.ವಿ.ರಘು, ಸಿನಿಮಾಟೋಗ್ರಾಫರ್ ಮತ್ತು ನಿರ್ದೇಶಕ

5. ಶ್ರೀ. ವಿನಿತ್ ಕನೋಜಿಯ, ಚಲನಚಿತ್ರ ನಿರ್ಮಾಪಕ, ಬರಹಗಾರ ಮತ್ತು ವಿಡಿಯೋ ಎಡಿಟರ್

ಈ ಪ್ರಶಸ್ತಿಯು ಮೊದಲ ಬಾರಿಯ ನಿರ್ದೇಶಕರ ಸೃಜನಶೀಲತೆ ಮತ್ತು ಸಾಮರ್ಥ್ಯವನ್ನು ಗೌರವಿಸುವ ಗುರಿಯನ್ನು ಹೊಂದಿದೆ, ಭಾರತೀಯ ಸಿನಿಮಾದ ವಿಕಾಸದಲ್ಲಿ ಅವರ ಕೊಡುಗೆಯನ್ನು ಗುರುತಿಸುತ್ತದೆ.  ಈ ಉದಯೋನ್ಮುಖ ನಿರ್ದೇಶಕರನ್ನು ಬೆಳಕಿಗೆ ತರುವ ಮೂಲಕ, IFFI ಮುಂದಿನ ಪೀಳಿಗೆಯ ಕಥೆಗಾರರನ್ನು, ಪ್ರೋತ್ಸಾಹಿಸುವಲ್ಲಿ ಐ ಎಫ್ ಎಫ್ ಐ ಹೊಂದಿರುವ ಬದ್ಧತೆಯನ್ನು ಇದು ತೋರಿಸುತ್ತದೆ. ಪ್ರಶಸ್ತಿ ವಿಜೇತ ಚಿತ್ರದ ನಿರ್ದೇಶಕರಿಗೆ ಅವರ ಸೃಜನಶೀಲ ವಿಧಾನ, ಕಲಾತ್ಮಕ ಕಥೆ ಮತ್ತು ಒಟ್ಟಾರೆ ಪ್ರಭಾವಕ್ಕಾಗಿ ಪ್ರಮಾಣಪತ್ರ ಮತ್ತು ಐದು ಲಕ್ಷ ರೂಪಾಯಿ ನಗದು ಬಹುಮಾನವನ್ನು ನೀಡಲಾಗುತ್ತದೆ.

ಸಂವಾದವನ್ನು ಇಲ್ಲಿ ವೀಕ್ಷಿಸಿ:

ತೀರ್ಪುಗಾರರ ಕುರಿತು ಇನ್ನಷ್ಟು ತಿಳಿಯಿರಿ:   https://iffigoa.org/debut-director-jury
ಚೊಚ್ಚಲ ನಿರ್ದೇಶಕ ಚಲನಚಿತ್ರಗಳ ಬಗ್ಗೆ ತಿಳಿಯಿರಿ: https://iffigoa.org/debut-director-films/2024/debut-director-films
ಚೊಚ್ಚಲ ನಿರ್ದೇಶಕರ ಪ್ರಿವ್ಯೂ ಸಮಿತಿ ಬಗ್ಗೆ ತಿಳಿಯಿರಿ:  https://iffigoa.org/debut-directors-prewiw-committee-2024

 

*****

iffi reel

(Release ID: 2075964) Visitor Counter : 6