ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಶುದ್ಧ ಇಂಧನ ಪರಿವರ್ತನೆಗಾಗಿ ಹೊಸ ತಂತ್ರಜ್ಞಾನಗಳ ಕುರಿತ ಮೂರನೇ ಉನ್ನತ ಮಟ್ಟದ ಸಮ್ಮೇಳನವನ್ನು ಅಂತಾರಾಷ್ಟ್ರೀಯ ಸೋಲಾರ್‌ ಒಕ್ಕೂಟ ಆಯೋಜಿಸಿತು

Posted On: 05 NOV 2024 10:14PM by PIB Bengaluru

ಅಂತಾರಾಷ್ಟ್ರೀಯ ಸೋಲಾರ್‌ ಒಕ್ಕೂಟ(International Solar Alliance)ವು, ಭಾರತ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ, ಏಷ್ಯನ್ ಡೆವಲಪ್‌ ಮೆಂಟ್‌ ಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಸೋಲಾರ್ ಎನರ್ಜಿ ಸೊಸೈಟಿಯ ಜಾಗತಿಕ ಸಹಯೋಗದೊಂದಿಗೆ, ಶುದ್ಧ ಇಂಧನ ಪರಿವರ್ತನೆಗಾಗಿ ಹೊಸ ತಂತ್ರಜ್ಞಾನಗಳ ಕುರಿತ ಉನ್ನತ ಮಟ್ಟದ ಸಮ್ಮೇಳನದ ಮೂರನೇ ಆವೃತ್ತಿಯನ್ನು ಆಯೋಜಿಸಿತು. ವಿಶ್ವಾದ್ಯಂತ ಪಾಲುದಾರರನ್ನು ಒಗ್ಗೂಡಿಸುವ ಈ ಮಹತ್ವದ ಕಾರ್ಯಕ್ರಮವು ಇಂದು ನವದೆಹಲಿಯಲ್ಲಿ ನಡೆದ ISA ಸಭೆಯ ಏಳನೇ ಅಧಿವೇಶನದ ಸಂದರ್ಭದಲ್ಲಿ ನಡೆಯಿತು.

ಸಂವಾದವನ್ನು ಕಾರ್ಯರೂಪಕ್ಕೆ ತರುವುದು ಈ ಸಮ್ಮೇಳನದ ಪ್ರಮುಖ ಗುರಿಯಾಗಿದೆ. ಹೊಸ ಯುಗದ ಸೌರ ತಂತ್ರಜ್ಞಾನಗಳು, ಉದಯೋನ್ಮುಖ ಶೇಖರಣಾ ತಂತ್ರಜ್ಞಾನಗಳು ಮತ್ತು ಸಮಾನ ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಅಭಿವೃದ್ಧಿಯನ್ನು ವೇಗಗೊಳಿಸುವಲ್ಲಿ ಸೌರಶಕ್ತಿಯ ಪಾತ್ರದ ಮೇಲೆ ಕೇಂದ್ರೀಕರಿಸಿದ ಆಳವಾದ ಅಧಿವೇಶನಗಳು ಚರ್ಚೆಯ ಕೇಂದ್ರಬಿಂದುವಾಗಿದ್ದವು.

ISAನ ನಿರ್ದೇಶಕರಾದ ಅಜಯ್ ಮಾಥುರ್ ಅವರು ತಮ್ಮ ಆರಂಭಿಕ ಭಾಷಣದಲ್ಲಿ, "ಇಂದಿನ ಸಮ್ಮೇಳನ ಮತ್ತು ಚರ್ಚೆಗಳು ಅತ್ಯಂತ ಸಮಯೋಚಿತವಾಗಿವೆ. ಒಂದು ವಾರದಲ್ಲಿ, ವಿಶ್ವ ನಾಯಕರು ಅಜೆರ್ಬೈಜಾನ್ ನಲ್ಲಿ COP29 ಅಡಿಯಲ್ಲಿ  ಎರಡು ಮಾರ್ಗದರ್ಶಿ ಗುರಿಗಳೊಂದಿಗೆ ಸಭೆ ನಡೆಸಲಿದ್ದಾರೆ: ಸಾಂಪ್ರದಾಯಿಕ ಇಂಧನಗಳಿಂದ ದೂರ ಸರಿಯಲು ಒಪ್ಪಿಕೊಳ್ಳುವುದು, ನವೀಕರಿಸಬಹುದಾದ ಶಕ್ತಿಯನ್ನು ಮೂರು ಪಟ್ಟು ಹೆಚ್ಚಿಸಲು ಮತ್ತು 2030 ರ ವೇಳೆಗೆ ಇಂಧನ ದಕ್ಷತೆಯನ್ನು ಎರಡು ಪಟ್ಟು ಹೆಚ್ಚಿಸುವುದು. ಈ ಎರಡೂ ಗುರಿಗಳನ್ನು ಸಮರ್ಥ ಮತ್ತು ಶುದ್ಧ ತಂತ್ರಜ್ಞಾನದ ಆಧಾರದಲ್ಲಿ ರೂಪಿಸಬಹುದಾದ್ದರಿಂದ ಇಂದಿನ ಚರ್ಚೆಗಳ ಮಹತ್ವವನ್ನು ತಿಳಿಸುತ್ತವೆ" ಎಂದು ಹೇಳಿದರು. 

ಭಾರತದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರು ಮತ್ತು ISA ಅಸೆಂಬ್ಲಿಯ ಅಧ್ಯಕ್ಷರಾದ ಶ್ರೀ ಪ್ರಹ್ಲಾದ್ ಜೋಶಿ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ, "ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಧ್ಯಕ್ಷರಾಗಿ, ಇಂಧನ ಪರಿವರ್ತನೆಯತ್ತ ಜಾಗತಿಕ ಪ್ರಯತ್ನಗಳನ್ನು ಒಟ್ಟುಗೂಡಿಸಿ, ಇಂದು ಜಗತ್ತು ಹಿಂದೆಂದಿಗಿಂತಲೂ ಒಗ್ಗಟ್ಟಿನಿಂದ ನಿಂತಿದೆ ಎಂದು ಒಪ್ಪಿಕೊಳ್ಳಲು ಬಯಸುತ್ತೇನೆ. ನಾವು ಶುದ್ಧ ಇಂಧನ ಪರಿವರ್ತನೆಯತ್ತ ಸಾಗುತ್ತಿರುವಾಗ ಸೌರ ತಂತ್ರಜ್ಞಾನದ ಪ್ರಗತಿಯ ಮಹತ್ವವನ್ನು ಅತಿಯಾಗಿ ಹೇಳಲಾಗುವುದಿಲ್ಲ. ಹವಾಮಾನ ಬದಲಾವಣೆಯಿಂದ ಉಂಟಾಗುವ ಸವಾಲುಗಳೊಂದಿಗೆ, ಈ ಸುಸ್ಥಿರ ಪರಿಹಾರವನ್ನು ಆವಿಷ್ಕರಿಸಲು ಮತ್ತು ಕಾರ್ಯಗತಗೊಳಿಸಲು ನಮ್ಮ ಸಾಮೂಹಿಕ ಪ್ರಯತ್ನಗಳು ಹಿಂದೆಂದಿಗಿಂತಲೂ ಹೆಚ್ಚು ಮಹತ್ವದ್ದಾಗಿದೆ" ಎಂದು ಹೇಳಿದರು. ಅಲ್ಲದೆ, "ಅಂತಾರಾಷ್ಟ್ರೀಯ ಸೌರ ಒಕ್ಕೂಟದಲ್ಲಿ, ಬದಲಾವಣೆಯನ್ನು ಚಾಲನೆ ಮಾಡಲು ಮತ್ತು ಹೆಚ್ಚು ಸುಸ್ಥಿರ ಭವಿಷ್ಯವನ್ನು ಸೃಷ್ಟಿಸಲು ನಾವು ಒಟ್ಟಾಗಿ ಸೂರ್ಯನ ಶಕ್ತಿಯನ್ನು ಬಳಸಿಕೊಳ್ಳಬಹುದು ಎಂದು ನಾವು ನಂಬುತ್ತೇವೆ. ಈ ರೀತಿಯ ವೇದಿಕೆಯಲ್ಲಿ, ಪ್ರಮುಖ ತಾಂತ್ರಿಕ ಪ್ರಗತಿಗಳ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ನನಗೆ ಸಂತೋಷವಾಗಿದೆ. ಈ ಸಮ್ಮೇಳನವು ನೀತಿ ನಿರೂಪಕರು, ತಜ್ಞರು, ಉದ್ಯಮದ ನಾಯಕರನ್ನು ಒಟ್ಟುಗೂಡಿಸಿ, ನಮ್ಮ ಜಾಗತಿಕ ಜಾಗೃತಿಯನ್ನು ಎತ್ತಿ ತೋರಿಸಿದೆ. ನೈಜ-ಪ್ರಪಂಚದಲ್ಲಿ ಬದಲಾವಣೆ ತಂದು ಸಹಕಾರ, ನವೀನತೆ ಮತ್ತು ಜ್ಞಾನ ಹಂಚಿಕೆಯ ಮೂಲಕ ಹವಾಮಾನ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸುವುದು ನಮ್ಮ ಗುರಿಯಾಗಿದೆ " ಎಂದು ಹೇಳಿದರು.

ಭಾರತ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಪ್ರಶಾಂತ್ ಕುಮಾರ್ ಸಿಂಗ್, "ಭಾರತ ಸರ್ಕಾರ (ಜಿಒಐ) ISA ದೃಷ್ಟಿಕೋನವನ್ನು ಕಾರ್ಯರೂಪಕ್ಕೆ ತರಲು ಬದ್ಧವಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮ ಇಂಧನ ಅಗತ್ಯಗಳನ್ನು ಪೂರೈಸಲು ತಮ್ಮ ಸೌರ ವಿದ್ಯುತ್ ಗ್ರಿಡ್ ಗಳನ್ನು ವಿಸ್ತರಿಸುವುದಕ್ಕೆ ಸಹಾಯ ಮಾಡಲು ಭಾರತ ಸರ್ಕಾರ ಆರ್ಥಿಕ ಮತ್ತು ತಾಂತ್ರಿಕ ವಿಧಾನಗಳ ಮೂಲಕ ಸಕ್ರಿಯವಾಗಿ ಬೆಂಬಲಿಸುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಸೌರಶಕ್ತಿಯು ಭಾರತೀಯ ಇಂಧನ ಸನ್ನಿವೇಶದ ಮೇಲೆ ಸ್ಪಷ್ಟವಾದ ಪರಿಣಾಮವನ್ನು ಬೀರಿದೆ. ದೊಡ್ಡ ಪ್ರಮಾಣದ ಸೌರ ವಿದ್ಯುತ್ ಸ್ಥಾವರಗಳ ಜೊತೆಗೆ, ಸೌರ ಶಕ್ತಿ ಆಧಾರಿತ ವಿಕೇಂದ್ರೀಕೃತ ಮತ್ತು ವಿತರಿಸಿದ ಅಪ್ಲಿಕೇಶನ್‌ಗಳು ಪರಿಸರ ಸ್ನೇಹಿ ರೀತಿಯಲ್ಲಿ ತಮ್ಮ ಇಂಧನ ಅಗತ್ಯಗಳನ್ನು ಪೂರೈಸುವ ಮೂಲಕ ಭಾರತೀಯ ಹಳ್ಳಿಗಳಲ್ಲಿ ಲಕ್ಷಾಂತರ ಜನರಿಗೆ ಪ್ರಯೋಜನವನ್ನು ನೀಡಿವೆ. ಭಾರತ ಸರ್ಕಾರದ ನೀತಿಗಳ ಹೆಚ್ಚಿದ ಬೆಂಬಲ ಮತ್ತು ಸುಧಾರಿತ ಆರ್ಥಿಕತೆಯೊಂದಿಗೆ, ಸೌರ ಶಕ್ತಿ ವಲಯವು ಹೂಡಿಕೆದಾರರ ದೃಷ್ಟಿಕೋನದಿಂದ ಆಕರ್ಷಕವಾಗಿದೆ ” ಎಂದು ಹೇಳಿದರು.

ಏಷ್ಯನ್ ಡೆವಲಪ್‌ ಮೆಂಟ್ ಬ್ಯಾಂಕ್‌ ನ ಇಂಡಿಯಾ ರೆಸಿಡೆಂಟ್ ಮಿಷನ್‌ ನ ದೇಶ ನಿರ್ದೇಶಕರಾದ ಎಂಎಸ್ ಮಿಯೊ ಓಕಾ,  ʼʼನಮ್ಮ ಬೆಳವಣಿಗೆಯು ಹಸಿರು (ಪರಿಸರ ಸ್ನೇಹಿ) ಆಗಿರಬೇಕು ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು ಮತ್ತು ಈ ಹಸಿರು ಬೆಳವಣಿಗೆ ಸಾಧಿಸಲು ತಂತ್ರಜ್ಞಾನ ಮತ್ತು ಹಣಕಾಸು ಪ್ರಾಪ್ತಿ ಸುಲಭವಾಗಿಸುವುದು ಏಷ್ಯನ್ ಡೆವಲಪ್‌ ಮೆಂಟ್ ಬ್ಯಾಂಕ್‌ ನ  ಜವಾಬ್ದಾರಿಯಾಗಿದೆ. ಒಳ್ಳೆಯ ಸುದ್ದಿ ಎಂದರೆ ಶುದ್ಧ ಶಕ್ತಿಯ ವೆಚ್ಚವೇ ಗಣನೀಯವಾಗಿ ಕಡಿಮೆಯಾಗಿದೆ ಮತ್ತು ನವೀಕರಿಸಬಹುದಾದ ಶಕ್ತಿಯ ಪಾಲು ಹೆಚ್ಚುತ್ತಿದೆ. ಸೌರ ಪಿವಿಯ ವೆಚ್ಚವು ಕಳೆದ ದಶಕದಲ್ಲಿ 80% ಕ್ಕಿಂತಲೂ ಹೆಚ್ಚು ಕಡಿಮೆಯಾಗಿದ್ದು, ಪ್ರತಿ ಕಿಲೋವಾಟ್ ಗಂಟೆಗೆ ಸುಮಾರು $0.05 ಕ್ಕೆ ತಲುಪಿದೆ " ಎಂದು ಹೇಳಿದರು. 

ಅಂತಾರಾಷ್ಟ್ರೀಯ ಸೋಲಾರ್ ಎನರ್ಜಿ ಸೊಸೈಟಿಯ ಅಧ್ಯಕ್ಷರಾದ ಶ್ರೀಮತಿ ವಿಕ್ಟೋರಿಯಾ ಮಾರ್ಟಿನ್, "ನಾನು ಭಾವಿಸುವಂತೆ ಇಂದು ನಿಮ್ಮ ಚರ್ಚೆಗೆ ಇದು ಪ್ರಮುಖ ವಿಷಯವಾಗಿದೆ. ತಂತ್ರಜ್ಞಾನದ ಸಮಗ್ರ ಯೋಜನೆಯ ಬಗ್ಗೆ ಯೋಚಿಸಿ, ಉದಾಹರಣೆಗೆ ವಿದ್ಯುತ್ ಉತ್ಪಾದನೆಯನ್ನು ಇತರ ರೀತಿಯ ಶಕ್ತಿ ಸೇವೆಗಳಾದ ಹೀಟಿಂಗ್, ಕೂಲಿಂಗ್ ಮತ್ತು ಸಾರಿಗೆಯೊಂದಿಗೆ ಸಂಪರ್ಕಿಸಲು ಅಗತ್ಯವಿರುವ ವಿವಿಧ ರೀತಿಯ ಶೇಖರಣೆಯ ಬಗ್ಗೆ ಯೋಚಿಸಿ, ಇದು ನಮ್ಮ ಹಸಿರು ಮತ್ತು ಶುದ್ಧ ಶಕ್ತಿ ವ್ಯವಸ್ಥೆಗಳಿಗೆ ಅಗತ್ಯವಾಗಿದೆ ” ಎಂದು ಹೇಳಿದರು.

ಉದ್ಘಾಟನಾ ಸಮಾರಂಭದಲ್ಲಿ ಹೆಚ್ಚುವರಿ ಆಕರ್ಷಣೆಯೆಂದರೆ ವರ್ಲ್ಡ್ ಸೋಲಾರ್ ರಿಪೋರ್ಟ್ ಸರಣಿಯ ಮೂರನೇ ಆವೃತ್ತಿಯ ಬಿಡುಗಡೆ. 2022ರಲ್ಲಿ ಪ್ರಾರಂಭವಾದ ಈ ಸರಣಿಯು ಜಾಗತಿಕ ಪ್ರಗತಿಗಳು, ಸವಾಲುಗಳು ಮತ್ತು ಸೌರ ತಂತ್ರಜ್ಞಾನ, ಮಾರುಕಟ್ಟೆಗಳು ಮತ್ತು ಹೂಡಿಕೆಗಳಲ್ಲಿನ ಪ್ರವೃತ್ತಿಗಳ ಸಂಕ್ಷಿಪ್ತ ಅವಲೋಕನವನ್ನು ಒದಗಿಸುತ್ತದೆ. 2024ರ ಆವೃತ್ತಿಯ ಪ್ರಮುಖ ಆವಿಷ್ಕಾರಗಳು ಹೀಗಿವೆ:

ವರ್ಲ್ಡ್ ಸೋಲಾರ್ ಮಾರ್ಕೆಟ್‌ ರಿಪೋರ್ಟ್  ಅಪೂರ್ವ ಬೆಳವಣಿಗೆ ಮತ್ತು ಭವಿಷ್ಯದ ಅಂದಾಜುಗಳನ್ನು ಎತ್ತಿ ತೋರಿಸುತ್ತದೆ

ವಿಶ್ವ ಸೌರ ಮಾರುಕಟ್ಟೆ ವರದಿಯು ಸೌರ ವಿದ್ಯುತ್ ಕ್ಷೇತ್ರದಲ್ಲಿ ಆದ್ಭುತ ಬೆಳವಣಿಗೆಯ ಪಥವನ್ನು ಹೈಲೈಟ್ ಮಾಡುತ್ತದೆ.

· ಸೌರ ಸಾಮರ್ಥ್ಯದಲ್ಲಿ ಹೆಚ್ಚಳ: ಕೇವಲ ಎರಡು ದಶಕಗಳಲ್ಲಿ, ಜಾಗತಿಕ ಸೌರ ಸಾಮರ್ಥ್ಯವು ಸ್ಫೋಟಗೊಂಡಿದೆ

2000ರಲ್ಲಿ 1.22 ಗಿಗಾವಾಟಿನಿಂದ 2023ರಲ್ಲಿ ಆಶ್ಚರ್ಯದಾಯಕ 1,418.97 ಗಿಗಾವಾಟಿಗೆ ಏರಿದೆ – ಇದು ವರ್ಷಕ್ಕೆ 40% ಆದ್ಭುತ ಬೆಳವಣಿಗೆ. 2023ರಲ್ಲಿ ಮಾತ್ರವೇ 345.83 ಗಿಗಾವಾಟ್ ಸೌರ ಶಕ್ತಿ ಸೇರಿಸಲಾಗಿದೆ, ಇದು ಜಾಗತಿಕವಾಗಿ ಎಲ್ಲಾ ಹೊಸ ನವೀಕರಿಸಬಹುದಾದ ಶಕ್ತಿಯ ಮೂರನೇ ಭಾಗಕ್ಕೆ ಸಮಾನವಾಗಿದೆ. ಸೌರ ಉತ್ಪಾದನೆಯು ಸಹ ಅದೇ ರೀತಿಯಲ್ಲಿ ಏರಿಕೆಯಾಗಿದೆ, 2000 ರಲ್ಲಿ 1.03 ಟೆರಾವಾಟ್ ಗಂಟೆಯಿಂದ  2023 ರಲ್ಲಿ 1,628.27 ಟೆರಾವಾಟ್ ಗಂಟೆಗೆ   ಏರಿಕೆಯಾಗಿದೆ.

2024ರ ವೇಳೆಗೆ ಸೌರಶಕ್ತಿ ಉತ್ಪಾದನೆಯು ಬೇಡಿಕೆಯನ್ನು ಮೀರಿ 1,100 ಗಿಗಾವ್ಯಾಟ್ ತಲುಪಲಿದೆ: 2024 ರ ಅಂತ್ಯದ ವೇಳೆಗೆ, ಜಾಗತಿಕ ಸೌರ ಉತ್ಪಾದನಾ ಸಾಮರ್ಥ್ಯವು 1,100 ಗಿಗಾವ್ಯಾಟ್  ಮೀರುವ ನಿರೀಕ್ಷೆಯಿದೆ. ಇದು PV ಪ್ಯಾನಲ್ ಗಳ ನಿರೀಕ್ಷಿತ ಬೇಡಿಕೆಯ ಎರಡು ಪಟ್ಟು ಹೆಚ್ಚಾಗಿದೆ. ಸೌರ ಕೋಶದ ಬೆಲೆಗಳು $0.037/ವ್ಯಾಟ್  ತಲುಪಿವೆ. ಮೊನೊ TOPCon ಮತ್ತು ಮೊನೊ PERC ಮಾಡ್ಯೂಲ್ ಬೆಲೆಗಳು $0.10/ವ್ಯಾಟ್ ಗಿಂತ  ಕಡಿಮೆಯಾಗಿದೆ. ಇದು ಸೌರ ತಂತ್ರಜ್ಞಾನದಲ್ಲಿ ಹೆಚ್ಚಿನ ಕೈಗೆಟುಕುವ ಪ್ರವೃತ್ತಿಯನ್ನು ಸೂಚಿಸುತ್ತದೆ.

ಸೌರ ಕ್ಷೇತ್ರದಲ್ಲಿ ಉದ್ಯೋಗದ ಅಭೂತಪೂರ್ವ ಹೆಚ್ಚಳ: ಶುದ್ಧ ಶಕ್ತಿ ಕ್ಷೇತ್ರವು ಈಗ 16.2 ಮಿಲಿಯನ್ ಉದ್ಯೋಗಗಳಿಗೆ ಇಂಧನ ಒದಗಿಸುತ್ತಿದೆ, ಅದರಲ್ಲಿ ಸೌರವು 7.1 ಮಿಲಿಯನ್ ಉದ್ಯೋಗಗಳೊಂದಿಗೆ ಮುಂಚೂಣಿಯಲ್ಲಿದೆ - 2022 ರ 4.9 ಮಿಲಿಯನ್‌ ನಿಂದ 44% ಹೆಚ್ಚಾಗಿದೆ. ಮತ್ತು ಈ ಉದ್ಯೋಗಗಳಲ್ಲಿ ಗಮನಾರ್ಹವಾದ 86% ಕೇವಲ ಹತ್ತು ದೇಶಗಳಲ್ಲಿ ಕೇಂದ್ರೀಕೃತವಾಗಿದೆ.

ಭವಿಷ್ಯದ ಮುನ್ಸೂಚನೆಗಳು: ಪ್ಯಾರಿಸ್ ಒಪ್ಪಂದದ ಬದ್ಧತೆಗಳಿಂದ ಪ್ರೇರಿತವಾಗಿ, 2030 ರ ವೇಳೆಗೆ ಜಾಗತಿಕ ಸೌರ ಸಾಮರ್ಥ್ಯವು 5457 ಮತ್ತು 7203 ಗಿಗಾವ್ಯಾಟ್ ನಡುವೆ ಏರಿಕೆಯಾಗುವ ನಿರೀಕ್ಷೆಯಿದೆ. ಈ ಉಲ್ಬಣವು ಹವಾಮಾನ ಗುರಿಗಳನ್ನು ಪೂರೈಸಲು ಅಗತ್ಯವಾದ ಬೃಹತ್ ಮೂಲಸೌಕರ್ಯವನ್ನು ಒತ್ತಿಹೇಳುತ್ತದೆ.

ಜಾಗತಿಕ ಇಂಧನ ಹೂಡಿಕೆಯಲ್ಲಿ ಕ್ರಿಯಾತ್ಮಕ ಬದಲಾವಣೆಯನ್ನು ಅನಾವರಣಗೊಳಿಸಿದ ವಿಶ್ವ ಹೂಡಿಕೆ ವರದಿ

ಇತ್ತೀಚಿನ ವಿಶ್ವ ಹೂಡಿಕೆ ವರದಿಯು ಜಾಗತಿಕ ಇಂಧನ ಹೂಡಿಕೆಗಳನ್ನು ಗಮನಾರ್ಹವಾಗಿ ಪರಿವರ್ತಿಸಿದೆ. ಇದು ಸುಸ್ಥಿರ ಇಂಧನ ಪರಿಹಾರಗಳತ್ತ ದೃಢವಾದ ಪಯಣವನ್ನು ಎತ್ತಿ ತೋರಿಸುತ್ತದೆ. ಪ್ರಮುಖ ಫಲಿತಾಂಶಗಳು ಇಲ್ಲಿವೆ:

ಎನರ್ಜಿ ಹೂಡಿಕೆಗಳಲ್ಲಿ ಅಭೂತಪೂರ್ವ ಬೆಳವಣಿಗೆ: 2018 ರಲ್ಲಿ $2.4 ಟ್ರಿಲಿಯನ್‌ನಿಂದ 2024 ರಲ್ಲಿ ಅಂದಾಜು $3.1 ಟ್ರಿಲಿಯನ್‌ಗೆ ಜಾಗತಿಕ ಎನರ್ಜಿ ಹೂಡಿಕೆಗಳು ಏರಿಕೆಯಾಗುವ ನಿರೀಕ್ಷೆಯಿದೆ - ವಾರ್ಷಿಕವಾಗಿ ಸುಮಾರು 5% ರಷ್ಟು ಸ್ಥಿರ ಏರಿಕೆ. ಜಾಗತಿಕ ಶುದ್ಧ ಇಂಧನ ಹೂಡಿಕೆಯು ಈಗ ಪಳೆಯುಳಿಕೆ ಇಂಧನಗಳಿಗಿಂತ ದ್ವಿಗುಣಗೊಂಡಿದೆ, 2018 ರಲ್ಲಿ $1.2 ಟ್ರಿಲಿಯನ್‌ನಿಂದ 2024 ರ ವೇಳೆಗೆ $2 ಟ್ರಿಲಿಯನ್‌ಗೆ ಜಿಗಿಯಲಿದೆ- ಇದು ನವೀಕರಿಸಬಹುದಾದ ಶಕ್ತಿಗಳ ಕಡೆಗೆ ಧೈರ್ಯದ ಪರಿವರ್ತನೆಯನ್ನು ಸೂಚಿಸುತ್ತದೆ.

ಸೋಲಾರ್‌ ಹೂಡಿಕೆಯಲ್ಲಿ ಏರಿಕೆ: ಎಲ್ಲಾ ನವೀಕರಿಸಬಹುದಾದ ಎನರ್ಜಿ ಹೂಡಿಕೆಗಳಲ್ಲಿ ಸುಮಾರು 59% (USD 393 ಬಿಲಿಯನ್) ಸೌರ ಹೂಡಿಕೆಯನ್ನು ಪ್ರತಿನಿಧಿಸುತ್ತದೆ. ಇದು ಮುಖ್ಯವಾಗಿ ಸೌರ ಫಲಕಗಳ ವೆಚ್ಚ ಕುಸಿತದಿಂದಾಗಿ ಆಗಿದೆ.

APAC ಜಾಗತಿಕ ಸೌರ ಹೂಡಿಕೆಗಳನ್ನು ಮುನ್ನಡೆಸುತ್ತದೆ: ಪ್ರದೇಶವಾರು, 2023ರಲ್ಲಿ ಸೌರಶಕ್ತಿಗೆ 223 ಶತಕೋಟಿ ಡಾಲರ್ ಹೂಡಿಕೆ ಮಾಡುವಲ್ಲಿ APAC ಮುಂಚೂಣಿಯಲ್ಲಿದೆ. EMEA ಯು 2023ರಲ್ಲಿ 91 ಶತಕೋಟಿ ಅಮೆರಿಕನ್ ಡಾಲರ್ ಗಳಷ್ಟು ಸಣ್ಣ ಪ್ರಮಾಣದ ಸೌರ ಹೂಡಿಕೆಯ ಬೆಳವಣಿಗೆಯನ್ನು ಕಂಡಿದೆ. ನಂತರ 78 ಶತಕೋಟಿ ಅಮೆರಿಕನ್ ಡಾಲರ್ ಗಳಷ್ಟು ಸೌರ ಹೂಡಿಕೆಯೊಂದಿಗೆ AMER ವಲಯವಿದೆ.

ವಿಶ್ವ ತಂತ್ರಜ್ಞಾನ ವರದಿ ಸೌರ PV ದಕ್ಷತೆ ಮತ್ತು ವಸ್ತು ನವೀನತೆಯಲ್ಲಿನ ಮುನ್ನಡೆಯನ್ನು ಎತ್ತಿ ತೋರಿಸುತ್ತದೆ

ವಿಶ್ವ ತಂತ್ರಜ್ಞಾನ ವರದಿಯು ಸೌರ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸುತ್ತಿರುವ ತ್ವರಿತ ಪ್ರಗತಿಯನ್ನು ಎತ್ತಿ ತೋರಿಸುತ್ತದೆ. ಈ ನವೀನತೆಗಳು ಸೌರ ಶಕ್ತಿಯ ದಕ್ಷತೆ ಮತ್ತು ಪ್ರವೇಶವನ್ನು ಹೆಚ್ಚಿಸುವುದಲ್ಲದೆ, ಹೆಚ್ಚು ಸ್ಥಿತಿಸ್ಥಾಪಕ ಮತ್ತು ವೆಚ್ಚ-ಪರಿಣಾಮಕಾರಿ ವಿದ್ಯುತ್ ಮೂಲಸೌಕರ್ಯಕ್ಕೆ ದಾರಿ ಮಾಡಿಕೊಡುತ್ತಿವೆ. ವರದಿಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:

ರೆಕಾರ್ಡ್-ಬ್ರೇಕಿಂಗ್ ಸೌರ PV ಪ್ಯಾನಲ್ ದಕ್ಷತೆ: ಸೋಲಾರ್ ಪಿವಿ ಮೊನೊಕ್ರಿಸ್ಟಲೈನ್ ಮಾಡ್ಯೂಲ್ ಗಳು ದಾಖಲೆಯ 24.9% ದಕ್ಷತೆಯೊಂದಿಗೆ ಹೊಸ ಎತ್ತರವನ್ನು ತಲುಪಿವೆ-ಇದು ಸೌರಶಕ್ತಿ ಸಾಮರ್ಥ್ಯವನ್ನು ಗರಿಷ್ಠಗೊಳಿಸುವಲ್ಲಿ ಪ್ರಮುಖ ಜಿಗಿತವಾಗಿದೆ. ಮಲ್ಟಿಜಂಕ್ಷನ್ ಪೆರೋವ್ಸ್ಕೈಟ್ ಕೋಶಗಳು ಸೌರ ಫಲಕ ಉದ್ಯಮವನ್ನು ಅಡ್ಡಿಪಡಿಸಲು ಸಿದ್ಧವಾಗಿವೆ. ಹೆಚ್ಚಿನ ದಕ್ಷತೆ, ಕಡಿಮೆ ಉತ್ಪಾದನಾ ವೆಚ್ಚ ಮತ್ತು ವೈವಿಧ್ಯಮಯ ಮೇಲ್ಮೈಗಳೊಂದಿಗೆ ಸುಗಮ ಸಂಯೋಜನೆಯನ್ನು ಭರವಸೆ ನೀಡುತ್ತಿವೆ - ಸಾಂಪ್ರದಾಯಿಕ ಸಿಲಿಕಾನ್ ಫಲಕಗಳನ್ನು ಹಿಂದಿಕ್ಕುತ್ತಿವೆ.

2004 ರಲ್ಲಿ ಪ್ರತಿ ವ್ಯಾಟ್ ಪವರ್‌ಗೆ 16 ಗ್ರಾಂ ಸಿಲಿಕಾನ್ ಬಳಕೆಯಿಂದ 2023 ರಲ್ಲಿ 2 ಗ್ರಾಂ/Wp ಗೆ ಇಳಿಸುವ ಮೂಲಕ ಸಿಲಿಕಾನ್ ಬಳಕೆಯಲ್ಲಿ 88% ಕಡಿತವಾಗಿದೆ. ಸಿಲಿಕಾನ್ ಬಳಕೆಯಲ್ಲಿನ ಈ 88% ಕಡಿತವು ವಸ್ತು ದಕ್ಷತೆಯನ್ನು ಅತ್ಯುತ್ತಮಗೊಳಿಸುವಲ್ಲಿ ಸಾಧಿಸಿದ ಪ್ರಗತಿಯನ್ನು ಮಾತ್ರವಲ್ಲದೆ ಹೆಚ್ಚಿನ ವೆಚ್ಚ ಕಡಿತ ಮತ್ತು ಪರಿಸರ ಪ್ರಯೋಜನಗಳ ಸಾಧ್ಯತೆಯನ್ನು ಒತ್ತಿಹೇಳುತ್ತದೆ.

ಉಪಯುಕ್ತತೆ-ಪ್ರಮಾಣದ PV ವೆಚ್ಚಗಳು ಹೊಸ ಕನಿಷ್ಠ ಮಟ್ಟವನ್ನು ತಲುಪುತ್ತಿವೆ-ಉಪಯುಕ್ತತೆ-ಪ್ರಮಾಣದ ಸೌರ PV ಯ ಜಾಗತಿಕ ತೂಕದ ಸರಾಸರಿ LCOE 90% ಕುಸಿದಿದೆ - 2010 ರಲ್ಲಿ USD 0.460/kWh ನಿಂದ 2023 ರಲ್ಲಿ USD 0.044/kWh ಗೆ ಇಳಿದಿದೆ. ದೇಶದ ಮಟ್ಟದಲ್ಲಿ, ಅದೇ ಅವಧಿಯಲ್ಲಿ ಇಳಿಕೆ 76%-93% ವರೆಗೆ ಇರುತ್ತದೆ.

ISA ಸದಸ್ಯ ರಾಷ್ಟ್ರಗಳ ಸಚಿವರ ನಿಯೋಗಗಳು, ನೀತಿ ನಿರೂಪಕರು, ತಜ್ಞರು ಮತ್ತು ಉದ್ಯಮದ ನಾಯಕರು ಸಮ್ಮೇಳನದ ಪ್ರಕ್ರಿಯೆಗಳಲ್ಲಿ ಭಾಗವಹಿಸಿದ್ದರು. ನೈಜ-ಪ್ರಪಂಚದ ಬದಲಾವಣೆಯನ್ನು ಉತ್ತೇಜಿಸಲು ಮತ್ತು ಸಂಬಂಧಿತ ಪಾಲುದಾರರು ಮತ್ತು ಪ್ರಮುಖ ಆಟಗಾರರಲ್ಲಿ ಸಹಯೋಗ ಮತ್ತು ಜ್ಞಾನವನ್ನು ಹಂಚಿಕೊಳ್ಳುವ ಮೂಲಕ ಜಾಗತಿಕ ಹವಾಮಾನ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲು 2022 ರಲ್ಲಿ ಸಮ್ಮೇಳನವನ್ನು ಪರಿಚಯಿಸಲಾಯಿತು.

ಉದ್ಘಾಟನಾ ಸಮಾರಂಭವು ISA ಮತ್ತು ಡೆನ್ಮಾರ್ಕ್‌ನ 'ಹಸಿರು ಹೈಡ್ರೋಜನ್ ಆಫ್ರಿಕನ್ ದೇಶಗಳ ಸಿದ್ಧತೆ ಮೌಲ್ಯಮಾಪನ' ವರದಿಯ ಬಿಡುಗಡೆಗೆ ಸಾಕ್ಷಿಯಾಯಿತು.

ಸರಳವಾಗಿ ಹೇಳುವುದಾದರೆ, ಕಲ್ಲಿದ್ದಲು, ತೈಲ ಅಥವಾ ನೈಸರ್ಗಿಕ ಅನಿಲದಂತಹ ಪಳೆಯುಳಿಕೆ ಇಂಧನಗಳನ್ನು ಕಚ್ಚಾ ವಸ್ತುಗಳಾಗಿ ಬಳಸಿಕೊಂಡು ಉಕ್ಕು, ಗೊಬ್ಬರ, ಪರಿಷ್ಕರಿತ ಗ್ಯಾಸೋಲಿನ್ ಮತ್ತು ಡೀಸೆಲ್ ಇಂಧನದಂತಹ ಸರಕುಗಳನ್ನು ಉತ್ಪಾದಿಸುವ ಕೈಗಾರಿಕೆಗಳ ಡಿಕಾರ್ಬೊನೈಸೇಶನ್ ಅಗತ್ಯಗಳನ್ನು ನೇರ ವಿದ್ಯುದೀಕರಣ ಪರಿಹರಿಸಲು ಸಾಧ್ಯವಿಲ್ಲ. ಆದ್ದರಿಂದ, ಗಾಳಿ, ಸೌರ ಮತ್ತು ಭೂಶಾಖದಂತಹ ಪುನರ್ನವೀಕರಿಸಬಹುದಾದ ವಿದ್ಯುತ್ ಮೂಲಗಳಿಂದ ನೀರಿನ ವಿದ್ಯುದ್ವಿಭಜನೆಯ ಮೂಲಕ ಉತ್ಪತ್ತಿಯಾಗುವ ಹಸಿರು ಹೈಡ್ರೋಜನ್ ಪಳೆಯುಳಿಕೆ ಇಂಧನ ಆಧಾರಿತ ಶಕ್ತಿ ಮೂಲಗಳಿಗೆ ಸೂಕ್ತವಾದ ಬದಲಿಯಾಗಿ ಹೊರಹೊಮ್ಮುತ್ತದೆ.

ಡೆನ್ಮಾರ್ಕ್ ರಾಯಭಾರ ಕಚೇರಿ, ನವದೆಹಲಿಯ ಸ್ಟ್ರಾಟೆಜಿಕ್ ಸೆಕ್ಟರ್ ಸಹಕಾರದ ಮುಖ್ಯಸ್ಥರಾದ ಶ್ರೀ ಎಮಿಲ್ ಎಸ್. ಲಾರಿಟ್ಸನ್, ಈ ವರದಿಯ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ, "ಈ ವರದಿಯು ಡೆನ್ಮಾರ್ಕ್ ರಾಯಭಾರ ಕಚೇರಿ ಮತ್ತು ಅಂತರರಾಷ್ಟ್ರೀಯ ಸೋಲಾರ್‌ ಒಕ್ಕೂಟದ ನಡುವೆ ಹಸಿರು ಹೈಡ್ರೋಜನ್ ಪಾಲುದಾರಿಕೆಗಾಗಿ ಮಾಡಿಕೊಂಡ ಒಪ್ಪಂದದ ಚೌಕಟ್ಟಿನಡಿಯಲ್ಲಿನ ಮೊದಲ ಯೋಜನೆಯಾಗಿದೆ. ಉದ್ದೇಶಿತ ದೇಶಗಳಾದ ಈಜಿಪ್ಟ್, ಮೊರಾಕೊ, ನಮೀಬಿಯಾ ಮತ್ತು ಈಜಿಪ್ಟಿನ ಸನ್ನದ್ಧತೆಯ ಮೌಲ್ಯಮಾಪನವನ್ನು ನಡೆಸುವುದು ಇದರ ಉದ್ದೇಶವಾಗಿದೆ. ವರದಿಯು ಮೂರು ವರ್ಗಗಳ ಮೇಲೆ ಕೇಂದ್ರೀಕರಿಸುತ್ತದೆ: ದೇಶ-ನಿರ್ದಿಷ್ಟ ನಿಯತಾಂಕಗಳು, ಹಣಕಾಸಿನ ಅವಶ್ಯಕತೆಗಳು ಮತ್ತು ಸಂಭಾವ್ಯ ಹಣಕಾಸು ವಿಧಾನಗಳು. ಇದು ಅಪಾಯಗಳನ್ನು ನಿರ್ಣಯಿಸುವುದು ಮತ್ತು ಈ ದೇಶಗಳಲ್ಲಿ ಹಸಿರು ಹೈಡ್ರೋಜನ್ ಆರ್ಥಿಕತೆಯನ್ನು ಅಭಿವೃದ್ಧಿಪಡಿಸುವ ಯೋಜನೆಗಳನ್ನು ಸಿದ್ಧಪಡಿಸುವುದನ್ನು ಸಹ ಒಳಗೊಂಡಿದೆ. ಈ ಪಾಲುದಾರಿಕೆಯ ಅಡಿಯಲ್ಲಿ, ಡೆನ್ಮಾರ್ಕ್ ನ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹಸಿರು ಹೈಡ್ರೋಜನ್ ನೀತಿ, ನಿಯಂತ್ರಣ ಮತ್ತು ಹಸಿರು ಹೈಡ್ರೋಜನ್ ಮೌಲ್ಯ ಸರಪಳಿಯ ಇತರ ಘಟಕಗಳ ಮೇಲೆ ಕೇಂದ್ರೀಕರಿಸುವ ಮೂರು ವರ್ಷಗಳ ವಿಷಯದೊಂದಿಗೆ ಐಎಸ್ಎಯನ್ನು ಬೆಂಬಲಿಸುತ್ತದೆ" ಎಂದು ಹೇಳಿದರು.

ಹಸಿರು ಹೈಡ್ರೋಜನ್ ದೇಶದ ಸಮೃದ್ಧ ನವೀಕರಿಸಬಹುದಾದ ಸಂಪನ್ಮೂಲಗಳನ್ನು (ಲಭ್ಯವಿರುವಲ್ಲೆಲ್ಲಾ) ಹಣಗಳಿಸಲು ಒಂದು ಉತ್ತಮ ಮಾರ್ಗವನ್ನು ಒದಗಿಸುತ್ತದೆ. ಇದು ಕೈಗಾರಿಕಾ ಡಿಕಾರ್ಬೊನೈಸೇಶನ್ ಅನ್ನು ಸಾಧಿಸಲು ಮತ್ತು ಈ ಪ್ರಕ್ರಿಯೆಯಲ್ಲಿ ಸುಸ್ಥಿರ ಉದ್ಯೋಗಗಳನ್ನು ಸೃಷ್ಟಿಸಲು ದೇಶಕ್ಕೆ ಸಹಾಯ ಮಾಡುತ್ತದೆ. ದೇಶಗಳನ್ನು ಅವುಗಳ ಅಪಾರ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಆಧಾರದ ಮೇಲೆ ಗುರುತಿಸಲಾಗಿದೆ ಹೀಗಾಗಿ ಹಸಿರು ಹೈಡ್ರೋಜನ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಗಣನೀಯವಾಗಿ ಕೊಡುಗೆ ನೀಡಬಹುದು.

ಏಳನೇ ISA ಅಸೆಂಬ್ಲಿಯ ಬದಿಯಲ್ಲಿ ನಡೆದ ಉನ್ನತ ಮಟ್ಟದ ಸಮ್ಮೇಳನದಲ್ಲಿ ಮಾರುಕಟ್ಟೆಗಳು, ಹೂಡಿಕೆಗಳು ಮತ್ತು ತಂತ್ರಜ್ಞಾನದ ಕುರಿತು ವಿಶ್ವ ಸೌರ ವರದಿಗಳ ಬಿಡುಗಡೆ

ಏಳನೇ ISA ಅಸೆಂಬ್ಲಿಯ ಬದಿಯಲ್ಲಿ ನಡೆದ ಉನ್ನತ ಮಟ್ಟದ ಸಮ್ಮೇಳನದಲ್ಲಿ ಹಸಿರು ಹೈಡ್ರೋಜನ್ ಆಫ್ರಿಕನ್ ದೇಶಗಳ ಸಿದ್ಧತೆ ಮೌಲ್ಯಮಾಪನದ ಪ್ರಾರಂಭ

 

*****


(Release ID: 2071116) Visitor Counter : 17


Read this release in: Urdu , English , Hindi