ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಪಂಜಾಬ್ ರಾಜ್ಯದಿಂದ ಭತ್ತ ಹಾಗೂ ಸಿಎಂಆರ್ ಖರೀದಿ ಅಡತಡೆಯಿಲ್ಲದೆ ಮುಂದುವರಿದೆ ಎಂದು ಖಾತ್ರಿಪಡಿಸಿದ ಕೇಂದ್ರ ಸರ್ಕಾರ


2024-25ನೇ ಮುಂಗಾರು ಮಾರುಕಟ್ಟೆ ಹಂಗಾಮಿನಲ್ಲಿ ನಿಗದಿಪಡಿಸಿರುವ 185 ಎಲ್ಎಂಟಿ  ಪೂರ್ಣ ಖರೀದಿ : ಶ್ರೀ ಪ್ರಲ್ಹಾದ್ ಜೋಶಿ

ಭತ್ತದ ಮಿಲ್ಲರ್ ಗಳ ಸಮಸ್ಯೆಗಳ ಪರಿಹಾರಕ್ಕೆ ಆನ್ ಲೈನ್ ಕುಂದುಕೊರತೆ ಪೋರ್ಟಲ್ ಆರಂಭಿಸುವುದಾಗಿ ಸಚಿವರ ಘೋಷಣೆ

Posted On: 27 OCT 2024 4:06PM by PIB Bengaluru

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ, ಇಂದು ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರ ಪಂಜಾಬ್ ರಾಜ್ಯದಿಂದ ಯಾವುದೇ ಅಡತಡೆ ಇಲ್ಲದೆ, ಭತ್ತ ಮತ್ತು ಕಸ್ಟಮ್ ಮಿಲ್ಲಡ್ ರೈಸ್ (ಸಿಎಂಆರ್) ಖರೀದಿ ಪ್ರಕ್ರಿಯೆ ಅಡೆತಡೆ ಇಲ್ಲದೆ ಮುಂದುವರಿದೆ ಎಂದು ಖಾತ್ರಿಪಡಿಸಿದರು. 2024-25ನೇ ಮುಂಗಾರು ಮಾರುಕಟ್ಟೆ ಹಂಗಾಮಿನಲ್ಲಿ ನಿಗದಿಪಡಿಸಿರುವಂತೆ 185 ಲಕ್ಷ ಮೆಟ್ರಿಕ್ ಟನ್ ಅನ್ನು ಸಂಪೂರ್ಣವಾಗಿ ಖರೀದಿಸಲಾಗುವುದು. ಒಂದೇ ಒಂದು ಭತ್ತವನ್ನು ಸಹ ಬಿಡದೆ ಖರೀದಿಸಲಾಗುವುದು ಎಂದು ಸಚಿವರು ಹೇಳಿದರು. ಶೀಘ್ರವೇ ಭತ್ತದ ಮಿಲ್ ಗಳ ಮಾಲಿಕರ ಕುಂದುಕೊರತೆಗಳನ್ನು ಪರಿಹರಿಸಲು ಆನ್ ಲೈನ್ ಪೋರ್ಟಲ್ ಆರಂಭಿಸಲಾಗುವುದು. ಅಲ್ಲಿ ಸಂಬಂಧಿಸಿದ ಪಾಲುದಾರರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಬಗೆಹರಿಸಲಾಗುವುದು ಎಂದು ಸಚಿವರು ಘೋಷಿಸಿದರು.

ಪಂಜಾಬ್ ನಲ್ಲಿ ಭತ್ತದ ಖರೀದಿ ಅಧಿಕೃತವಾಗಿ 2024ರ ಅಕ್ಟೋಬರ್ 1 ರಿಂದ ತಾತ್ಕಾಲಿಕ ಯಾರ್ಡ್ ಗಳು ಸೇರಿದಂತೆ 2700 ನಿಯೋಜಿತ ಮಂಡಿಗಳಲ್ಲೆಡೆ ಆರಂಭವಾಗಿದ್ದು, ಅದು ಸುಗಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸೆಪ್ಟೆಂಬರ್ ತಿಂಗಳಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಮತ್ತು ಅಧಿಕ ಉಷ್ಣಾಂಶದಿಂದಾಗಿ ಭತ್ತದ ಕಟಾವು ಹಾಗೂ ಖರೀದಿ ಪ್ರಕ್ರಿಯೆ ಸ್ವಲ್ಪ ವಿಳಂಬವಾಗಿದೆ ಹಾಗೂ ತಡವಾಗಿ ಆರಂಭವಾದರೂ ರಾಜ್ಯ ಇದೀಗ ನಿಗದಿಪಡಿಸಿರುವಂತೆ 2024ರ ನವೆಂಬರ್ ಒಳಗೆ 185 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿ ಗುರಿಯನ್ನು ಸಾಧಿಸಲಿದೆ. 2024-25ನೇ ಸಾಲಿನ ಕೆಎಂಎಸ್ ನಲ್ಲಿ ಪಂಜಾಬ್ ನಲ್ಲಿ ಭತ್ತದ ಖರೀದಿ ಸುಗಮವಾಗಿ ನಡೆಯುವುದನ್ನು ಖಾತ್ರಿಪಡಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. 2024ರ ಅಕ್ಟೋಬರ್ 26ರ ವರೆಗೆ ಮಂಡಿಗಳಿಗೆ 54.5 ಲಕ್ಷ ಮೆಟ್ರಿಕ್ ಟನ್ ಭತ್ತ ಬಂದಿದ್ದು, ಆ ಪೈಕಿ 50 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಲಾಗಿದೆ. 2023-24ನೇ ಕೆಎಂಎಸ್ ಅವಧಿಯಲ್ಲಿ 2023ರ ಅಕ್ಟೋಬರ್ 26ರ ವೇಳೆಗೆ 65.8 ಲಕ್ಷ ಮೆಟ್ರಿಕ್ ಟನ್ ಭತ್ತ ಬಂದಿತ್ತು. ಆ ಪೈಕಿ 61.5 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಲಾಗಿದೆ. ಭತ್ತಕ್ಕೆ ಎಂಎಸ್ ಪಿಅನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, 2013-14ರಲ್ಲಿ ಪ್ರತಿ ಕ್ವಿಂಟಾಲ್ ಗೆ ರೂ. 1310 ಇದ್ದ ಕನಿಷ್ಠ ಬೆಂಬಲ ಬೆಲೆಯನ್ನು 2024-25ರಲ್ಲಿ ಪ್ರತಿ ಕ್ವಿಂಟಾಲ್ ಗೆ 2300 ರೂ.ಗಳಿಗೆ ಹೆಚ್ಚಿಸಲಾಗಿದೆ. ಒಟ್ಟಾರೆ 3800 ಭತ್ತದ ಮಿಲ್ಲರ್ ಗಳು ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದರು, ಆ ಪೈಕಿ 3250 ಮಿಲ್ಲರ್ ಗಳಿಗೆ ಪಂಜಾಬ್ ಸರ್ಕಾರ ಈಗಾಗಲೇ ಕೆಲಸವನ್ನು ಹಂಚಿಕೆ ಮಾಡಿದೆ. ಇನ್ನೂ ಹೆಚ್ಚಿನ ಮಿಲ್ಲರ್ ಗಳು ನೋಂದಣಿ ಮಾಡಿಕೊಳ್ಳುವ ನಿರೀಕ್ಷೆ ಇದೆ ಮತ್ತು ಅವರಿಗೆ ಮುಂದಿನ 7 ದಿನಗಳಲ್ಲಿ ಕೆಲಸ ಹಂಚಿಕೆ ಮಾಡಲಾಗುವುದು.

ಸಿಎಂಆರ್ ಗೆ ಸೂಕ್ತ ದಾಸ್ತಾನು ವ್ಯವಸ್ಥೆಗಾಗಿ ಜಾಗವನ್ನು ಖಾತ್ರಿಪಡಿಸಲಾಗಿದೆ. ಪಂಜಾಬ್ ರಾಜ್ಯ ಸರ್ಕಾರ ಹಲವು ಉನ್ನತ ಮಟ್ಟದ ಸಭೆಗಳನ್ನು ಈಗಾಗಲೇ ನಡೆಸಿದೆ ಮತ್ತು ಆದ್ಯತೆ ಮೇಲೆ ಅದರ ಮೇಲೆ ನಿಗಾವಹಿಸುತ್ತಿದೆ. ಅದರಲ್ಲಿ ಕೊರತೆ ಇರುವ ರಾಜ್ಯಗಳಿಗೆ ಗೋದಿ ದಾಸ್ತಾನು ಶೀಘ್ರ ಸ್ಥಳಾಂತರ, ನಾಮಿನೇಶನ್ ಆಧಾರದಲ್ಲಿ ಸಿಡಬ್ಲ್ಯೂಸಿ/ಎಸ್ ಡಬ್ಲ್ಯೂಸಿ ಗೋದಾಮುಗಳನ್ನು ಬಾಡಿಗೆ ಪಡೆಯುವುದು, ಪಿಇಜಿ ಯೋಜನೆಯಡಿ 31 ಎಲ್ಎಂಟಿ ದಾಸ್ತಾನು ಸಾಮರ್ಥ್ಯ ವೃದ್ಧಿ ವಿಸ್ತರಣೆ ಇತ್ಯಾದಿ ಸೇರಿವೆ. ಅಕ್ಟೋಬರ್ ತಿಂಗಳಿಗೆ ಅಖಿಲ ಭಾರತ ಸಂಚಾರ ಯೋಜನೆಯಡಿ 34.75 ಎಲ್ಎಂಟಿ ನಿಗದಿಪಡಿಸಲಾಗಿದ್ದು, ಅದರಲ್ಲಿ ಶೇ.40ರಷ್ಟು ಅಂದರೆ 13.76 ಎಲ್ಎಂಟಿಯನ್ನು ಪಂಜಾಬ್ ರಾಜ್ಯಕ್ಕೆ ಹಂಚಿಕೆ ಮಾಡಲಾಗಿದೆ. ಸದ್ಯ ಪಂಜಾಬ್ ರಾಜ್ಯದಲ್ಲಿ 15 ಎಲ್ಎಂಟಿ ದಾಸ್ತಾನು ಸಾಮರ್ಥ್ಯ ಖಾಲಿ ಇದೆ. ಸಾಮಾನ್ಯವಾಗಿ ಪ್ರತಿ ವರ್ಷ ಡಿಸೆಂಬರ್ ನಲ್ಲಿ ಸಿಎಂಆರ್ ವಿತರಣೆ ಆರಂಭವಾಗಲಿದೆ ಮತ್ತು ಆ ವೇಳೆಗೆ ಸಿಎಂಆರ್ ಅನ್ನು ಮಿಲ್ಲರ್ ಗಳಿಗೆ ಸುಗಮವಾಗಿ ವಿತರಿಸಲು ಸಾಕಷ್ಟು ಸೂಕ್ತ ಸ್ಥಳಾವಕಾಶ ಲಭ್ಯವಿರುತ್ತದೆ. 2025ರ ಮಾರ್ಚ್ ವರೆಗೆ ಪಂಜಾಬ್ ನಿಂದ ಪ್ರತಿ ತಿಂಗಳು 13-14 ಎಲ್ಎಂಟಿ ಗೋಧಿಯನ್ನು ಎತ್ತುವಳಿ ಮಾಡಲು ವಿಸ್ತೃತವಾದ ಡಿಪೋವಾರು ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಭಾರತೀಯ ಆಹಾರ ನಿಗಮದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು, ಅದು ಸಾಗಾಣೆ ಯೋಜನೆ ಮತ್ತು ದಾಸ್ತಾನು ಸಾಮರ್ಥ್ಯಸೃಷ್ಟಿ/ವಾರದ ಆಧಾರದಲ್ಲಿ ಬಾಡಿಗೆ ಪಡೆಯವುದರ ಮೇಲೆ ನಿಗಾವಹಿಸುತ್ತಿದ್ದು, ಒಟ್ಟಾರೆ ಕೆಎಂಎಸ್ 24-25ನೇ ಸಾಲಿನಲ್ಲಿ ಭತ್ತದ ದಾಸ್ತಾನಿಗೆ ಸಕಲ ನೆರವು ನೀಡುತ್ತದೆ.  

ಅಲ್ಲದೆ ಮಿಲ್ಲರ್ ಗಳ ಕಡೆಯಿಂದ ಹಾಲಿ ಎಫ್ ಸಿಐ ನಿಗದಿಪಡಿಸಿರುವ ಶೇ.67ರಷ್ಟು ಒಟಿಆರ್ (ಭತ್ತದಿಂದ ಅಕ್ಕಿ ಪಡೆಯುವ ಪ್ರಮಾಣ- ಔಟರ್ ಟರ್ನ್ ರೇಷಿಯೋ) ಪ್ರಮಾಣವನ್ನು ಇಳಿಕೆ ಮಾಡಲು ಒತ್ತಡವಿದೆ. ಏಕೆಂದರೆ ಭತ್ತದ ತಳಿ ಪಿಆರ್ – 126 ಸಾಮಾನ್ಯ ಒಟಿಆರ್ ಗಿಂತ ಶೇ.4ರಿಂದ 5ರಷ್ಟು ಕಡಿಮೆ ಒಟಿಆರ್ ನೀಡುತ್ತದೆ. 2016ರಿಂದೀಚೆಗೆ ಪಂಜಾಬ್ ನಲ್ಲಿ ಪಿಆರ್ 126 ತಳಿ ಬಳಕೆಯಲ್ಲಿದೆ. ಹಿಂದೆಂದೂ ಈ ರೀತಿಯ ವಿಚಾರಗಳು ವರದಿಯಾಗಿರಲಿಲ್ಲ. ಪಂಜಾಬ್ ರಾಜ್ಯದಲ್ಲಿ ಪಿಆರ್-126 ಹೆಸರಿನಲ್ಲಿ ಇತರೆ ಹೈಬ್ರಿಡ್ ತಳಿಗಳ ಮಾರಾಟ ಹೆಚ್ಚಾಗಿರುವುದು ಇದಕ್ಕೆ ಪ್ರಮುಖ ಕಾರಣ ಎಂಬುದು ತಿಳಿದುಬಂದಿದೆ. ಹೈಬ್ರಿಡ್ ತಳಿಗಳ ಪರಿಣಾಮ ಪಿಆರ್-126ಗೆ ಹೋಲಿಸಿದರೆ ಕಡಿಮೆ ಒಟಿಆರ್ ನೀಡಲಿವೆ ಎಂಬುದು ವರದಿಯಾಗಿದೆ. ಭಾರತ ಸರ್ಕಾರ ನಿಗದಿಪಡಿಸಿರುವ ಒಟಿಆರ್ ನಿಯಮಗಳು ಭಾರತದಾದ್ಯಂತ ಏಕರೂಪವಾಗಿದ್ದು, ಮತ್ತು ಅವು ತಳಿ ವೈವಿಧ್ಯತೆಯನ್ನು ಆಧರಿಸಿವೆ. ದೇಶಾಂದ್ಯತ ಖರೀದಿ ಪ್ರಕ್ರಿಯೆ ಏಕರೂಪದ ಮಾನದಂಡಗಳನ್ನು ಅವಲಂಬಿಸಿದ್ದು, ಸಾಮಾನ್ಯವಾಗಿ ಅದನ್ನು ನ್ಯಾಯಯುತ ಸರಾಸರಿ ಗುಣಮಟ್ಟ (ಎಫ್ಎಕ್ಯೂ) ಎಂದು ಕರೆಯಲಾಗುತ್ತದೆ. ಅಲ್ಲದೆ ಸದ್ಯದ ಒಟಿಆರ್ ಬಗ್ಗೆ ಮರುಪರಿಶೀಲಿಸುವ ಕಾರ್ಯದ ಅಧ್ಯಯನವನ್ನು ಐಐಟಿ ಖರಗ್‌ ಪುರಕ್ಕೆ ವಹಿಸಲಾಗಿದೆ. ಭತ್ತದಲ್ಲಿನ ಒಣ ಅಂಶ ಕಾರ್ಯ ಪತ್ತೆಹಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಈ ಉದ್ದೇಶಕ್ಕಾಗಿ ಪಂಜಾಬ್ ಸೇರಿದಂತೆ ಹಲವು ಭತ್ತ ಖರೀದಿಸುವ ರಾಜ್ಯಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ರೈಸ್ ಮಿಲ್ಲರ್ ಗಳು ಭರಿಸುತ್ತಿರುವ ಹೆಚ್ಚುವರಿ ಸಾಗಾಣೆ ಶುಲ್ಕದ ಕುರಿತಂತೆ ಎಫ್ ಸಿಐ ತನ್ನ ಪ್ರಾದೇಶಿಕ ಹಂತಕ್ಕೆ ಅಧಿಕಾರವನ್ನು ನಿಯೋಜಿಸಲ್ಪಟ್ಟಿದ್ದು, 15 ದಿನಗಳ ಕಾಲ ಕಾಯುವ ಸಮಯ ಲಭ್ಯವಿಲ್ಲದಿದ್ದರೆ ನಿಯೋಜಿತ ಡಿಪೋದಲ್ಲಿ ಹೆಚ್ಚುವರಿ ಸಾಗಾಣೆ ಶುಲ್ಕಕ್ಕೆ ಅವಕಾಶ ನೀಡಲಾಗಿದೆ. ಇದನ್ನು ಖರೀದಿ ಪೋರ್ಟಲ್ ನಲ್ಲಿ ಅಗತ್ಯತೆಯೊಂದಿಗೆ ಜೋಡಿಸಲಾಗಿದೆ. ಈ ವಿಷಯವನ್ನು ಈಗಾಗಲೇ ಬಗೆಹರಿಸಲಾಗಿದ್ದು, ರೈಸ್ ಮಿಲ್ಲರ್ ಗಳು ಸಹ ತೃಪ್ತಿ ವ್ಯಕ್ತಪಡಿಸಿದ್ದಾರೆ.

 

*****


 


 


(Release ID: 2069033) Visitor Counter : 25