ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ರಾಜಸ್ಥಾನದ ಸಿಕಾರ್‌ ನಲ್ಲಿ ನಡೆದ ಶೋಭಾಸರಿಯಾ ಸಮೂಹ ಸಂಸ್ಥೆಗಳ ರಜತ ಮಹೋತ್ಸವ ಸಮಾರಂಭದಲ್ಲಿ ಉಪರಾಷ್ಟ್ರಪತಿಯವರ ಭಾಷಣ

Posted On: 19 OCT 2024 3:45PM by PIB Bengaluru

ಸೋಭಾಸರಿಯಾ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವ ಆಚರಣೆಗಳಲ್ಲಿ ಭಾಗವಹಿಸಲು ಸಾಧ್ಯವಾಗಿರುವುದು ನನಗೆ ಅತ್ಯಂತ ಹರ್ಷದ ವಿಷಯವಾಗಿದೆ.

ಈ ಸಂತಸದ ಮತ್ತು ಐತಿಹಾಸಿಕ ಕ್ಷಣದಲ್ಲಿ, ಭವಿಷ್ಯದತ್ತ ಸಾಗುವ ಪಯಣದಲ್ಲಿ ಒಂದು ಮಹತ್ವದ ಮೈಲಿಗಲ್ಲನ್ನು ದಾಟುತ್ತಿರುವ ಈ ಸಂಸ್ಥೆಯ ಆಡಳಿತ ಮಂಡಳಿ, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು  ಹಳೆ ವಿದ್ಯಾರ್ಥಿಗಳ ಸಂತೋಷ ಮತ್ತು ಹೆಮ್ಮೆಯಲ್ಲಿ ನಾನೂ ಪಾಲ್ಗೊಳ್ಳಲು ಬಯಸುತ್ತೇನೆ.

ಸಮಾಜ ಸೇವೆಯ ಕಲ್ಪನೆಯಿಂದ ಪ್ರೇರಿತವಾಗಿ, ಸಮಾಜಕ್ಕೆ ಕೊಡುಗೆ ನೀಡುವ ಒಂದೇ ಉದ್ದೇಶದೊಂದಿಗೆ ಒಂದು ಇಂಜಿನಿಯರಿಂಗ್ ಕಾಲೇಜಾಗಿ ಆರಂಭವಾದ ಈ ಸಂಸ್ಥೆ ಇಂದು ಸೋಭಾಸರಿಯ ಶಿಕ್ಷಣ ಸಂಸ್ಥೆಗಳೆಂಬ ಒಂದು ದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ಈ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಪ್ರಹ್ಲಾದ ರಾಯ್ ಅಗರ್ವಾಲ್ ಅವರು ವ್ಯಾಪಾರ ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ನೀಡಿರುವ ಅಗಾಧ ಕೊಡುಗೆಗಾಗಿ ಮತ್ತು 'ಮೇಕ್ ಇನ್ ಇಂಡಿಯಾ' ಅಭಿಯಾನಕ್ಕೆ ನೀಡಿರುವ ಬೆಂಬಲಕ್ಕಾಗಿ 2022 ರಲ್ಲಿ ಪದ್ಮಶ್ರೀ ಪ್ರಶಸ್ತಿಯಿಂದ ಸನ್ಮಾನಿತರಾಗಿದ್ದಾರೆ. ಈ ದೂರದೃಷ್ಟಿಯ ನಾಯಕರ ಮಾರ್ಗದರ್ಶನದಲ್ಲಿ ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ.

ಯಾವುದೇ ಸಂಸ್ಥೆಗೆ 25 ವರ್ಷ ತುಂಬಿದಾಗ, ಅದು ಚಿಂತನೆ ಮತ್ತು ಮಂಥನದ ಸಮಯವಾಗಿರುತ್ತದೆ. ನಾವು ಏನು ಮಾಡಿದ್ದೇವೆ ಎಂದು ಹಿಂತಿರುಗಿ ನೋಡಬೇಕಾಗುತ್ತದೆ ಮತ್ತು ಮುಂದಿನ ಹಾದಿಯನ್ನು ಆಯ್ಕೆ ಮಾಡಬೇಕಾಗುತ್ತದೆ.ಶ್ರೀ ಅಗರ್ವಾಲ್ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಈ ಸವಾಲನ್ನು ಸುಲಭವಾಗಿ ನಿಭಾಯಿಸಲಾಗುವುದು ಎಂಬ ವಿಶ್ವಾಸ ನನಗಿದೆ. 2047ರಲ್ಲಿ ಭಾರತವು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಮಾರ್ಪಡುವಾಗ,ಸೋಭಾಸರಿಯ ಶಿಕ್ಷಣ ಸಂಸ್ಥೆಗಳು ಒಂದು ಪ್ರತಿಷ್ಠಿತ ವಿಶ್ವವಿದ್ಯಾನಿಲಯವಾಗಿ ಬೆಳೆಯಲಿವೆ. ಮತ್ತು ಮುಂದೆ ಏನನ್ನು ರಚಿಸಲಾಗುತ್ತಿದೆಯೋ, ಅದರ ಮೂಲ ಕೇಂದ್ರ, ಪ್ರಮುಖ ಅಂಶವು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಸರಿಯಾದ ರೀತಿಯಲ್ಲಿ ಪ್ರದರ್ಶಿಸಲು ಸಾಧ್ಯವಾಗುವಂತಿರಬೇಕು.

ಮೊದಲಿಗೆ, ಇಂದಿನ ಪರಿಸ್ಥಿತಿ ಏನೆಂದು ಹೇಳುತ್ತೇನೆ. ನಮ್ಮ ಕಾಲದ ಪರಿಸ್ಥಿತಿಗಳನ್ನು ಇಂದಿನ ಮಕ್ಕಳಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಂದು ಪರಿಸ್ಥಿತಿಗಳು ಬಹಳ ಉತ್ತಮವಾಗಿವೆ. ಆ ಸಮಯದ ಪರಿಸ್ಥಿತಿಗಳನ್ನು ವಿವರಿಸಲು ನಾನು ಬಯಸುವುದಿಲ್ಲ, ಆದರೆ ಇಂದಿನ ಪರಿಸ್ಥಿತಿ ಎಂದರೆ ಕಾನೂನಿನ ಮುಂದೆ ಎಲ್ಲರೂ ಸಮಾನರು.  ಪೋಷಕರ ಪ್ರಭಾವವು ಒಂದು ಒಪ್ಪಂದ ಅಥವಾ ಉದ್ಯೋಗಕ್ಕೆ ಪಾಸ್ವರ್ಡ್ ಆಗಿಲ್ಲ, ಇದು ಮೆರಿಟ್ ಆಧಾರಿತ ವ್ಯವಸ್ಥೆಯಾಗಿದೆ. ವಿಶೇಷ ಹಿನ್ನೆಲೆಗಿಂತ ಮೆರಿಟ್‌ ಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ.

ಇಂದಿನ ಸರ್ಕಾರವು ಪಾರದರ್ಶಕತೆ ಮತ್ತು ಜವಾಬ್ದಾರಿಯಿಂದ ಕೂಡಿದೆ. ಇದರಲ್ಲಿ ಭ್ರಷ್ಟಾಚಾರಕ್ಕೆ ಜಾಗವಿಲ್ಲ. ತಂತ್ರಜ್ಞಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ವಿದ್ಯಾರ್ಥಿಗಳೇ, ನಿಮ್ಮ ಪ್ರತಿಭೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು, ನಿಮ್ಮ ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ಮತ್ತು ನಿಮ್ಮ ಕನಸುಗಳನ್ನು ನನಸಾಗಿಸಲು ಅನುವು ಮಾಡಿಕೊಡುವ ಪರಿಸರ ವ್ಯವಸ್ಥೆಯಿಂದ ಪ್ರಯೋಜನ ಪಡೆಯುತ್ತಿರುವ ಕಾಲದಲ್ಲಿ ನೀವು ಜೀವಿಸುತ್ತಿರುವುದು ನಿಮ್ಮ ಅದೃಷ್ಟ.

ಸುತ್ತಲೂ ಒಂದೇ ವಾತಾವರಣವಿದೆ - ಆಶಾದಾಯಕತೆ ಮತ್ತು ಸಾಧ್ಯತೆಯ ವಾತಾವರಣ. ಭಾರತವು ಸಾಧ್ಯತೆಗಳಿಂದ ತುಂಬಿದ ದೇಶವಾಗಿದೆ, ಮತ್ತು ಜಗತ್ತು ಭಾರತದ ಸಾಮರ್ಥ್ಯವನ್ನು ಒಪ್ಪಿಕೊಂಡಿದೆ.

ನಾನು ಸುತ್ತಲೂ ನೋಡಿದರೆ, ಐಎಂಎಫ್, ವಿಶ್ವ ಬ್ಯಾಂಕ್, ಕೆಲವು ಸಮಯದ ಹಿಂದೆ ಭಾರತಕ್ಕೆ ಆಡಳಿತ ವ್ಯವಸ್ಥೆ ಹೇಗಿರಬೇಕೆಂದು ಹೇಳುತ್ತಿದ್ದವರು, ಇಂದು ಭಾರತದ ಪ್ರಶಂಸೆ ಮಾಡುತ್ತಿವೆ. ಹೂಡಿಕೆ ಮತ್ತು ಅವಕಾಶಗಳಿಗೆ ಜಾಗತಿಕ ಆದ್ಯತೆಯ ತಾಣವಾಗಿ ಭಾರತವನ್ನು ಎಲ್ಲೆಡೆಯಿಂದ ಪ್ರಶಂಸಿಸಲಾಗುತ್ತಿದೆ.

ಒಂದು ದಶಕದ ಹಿಂದೆ, ನಮ್ಮ ಆರ್ಥಿಕತೆ ವಿಶ್ವದ ಐದು ಅಸ್ಥಿರ ಆರ್ಥಿಕತೆಗಳಲ್ಲಿ ಒಂದಾಗಿತ್ತು, ಯಾವಾಗ ಬೇಕಾದರೂ ಕುಸಿಯಬಹುದಿತ್ತು. ನಾವು ಎಲ್ಲಿಂದ ಎಲ್ಲಿಗೆ ಬಂದಿದ್ದೇವೆ. ವಿಶ್ವದ ಐದನೇ ದೊಡ್ಡ ಆರ್ಥಿಕ ಮಹಾಶಕ್ತಿ. ಎರಡು ವರ್ಷಗಳಲ್ಲಿ ಮೂರನೇ ದೊಡ್ಡ ಮಹಾಶಕ್ತಿ, ಜಪಾನ್ ಮತ್ತು ಜರ್ಮನಿಯನ್ನು ಮೀರಿ ನಮ್ಮ ಆರ್ಥಿಕತೆ 4 ಟ್ರಿಲಿಯನ್ ಅನ್ನು ಸ್ಪರ್ಶಿಸುತ್ತಿದೆ.ನಮ್ಮ ಬೆಳವಣಿಗೆ ದರ ವಿಶ್ವವನ್ನು ಆಶ್ಚರ್ಯಗೊಳಿಸುತ್ತಿದೆ. ಜಿಡಿಪಿ ಬೆಳವಣಿಗೆ ಶೇಕಡಾ 8 ರಷ್ಟಿದೆ ಮತ್ತು ವಿಶ್ವದ ಯಾವುದೇ ದೊಡ್ಡ ಆರ್ಥಿಕತೆ ಇದರ ಹತ್ತಿರವೂ ಇಲ್ಲ. ಇದು ಭಾರತದ ಒಂದು ದೊಡ್ಡ ಸಾಧನೆ.

ಮತ್ತು ಇದು ಏಕೆ ಆಗಬಾರದು? ನೀವೇ ನೋಡಿ, ಪ್ರತಿ ವರ್ಷ ನಾಲ್ಕು ಹೊಸ ವಿಮಾನ ನಿಲ್ದಾಣಗಳು ದೇಶಕ್ಕೆ ಸಮರ್ಪಿತವಾಗುತ್ತಿವೆ, ಪ್ರತಿ ವರ್ಷ ಒಂದು ಹೊಸ ಮೆಟ್ರೋ ನಿಲ್ದಾಣ ನಗರವಾಸಿಗಳಿಗೆ ಸಮರ್ಪಿತವಾಗುತ್ತಿದೆ. ದೇಶದಲ್ಲಿ ಪ್ರತಿದಿನ 14 ಕಿಲೋಮೀಟರ್ ಹೆದ್ದಾರಿ ನಿರ್ಮಾಣವಾಗುತ್ತಿದೆ ಮತ್ತು ವಿಶ್ವ ದರ್ಜೆಯ ಹೆದ್ದಾರಿಗಳ ಜೊತೆಗೆ ರೈಲು ಜಾಲವೂ ವಿಸ್ತರಿಸುತ್ತಿದೆ. ಇದು ನನಗೆ ಮತ್ತು ನನ್ನ ಪೀಳಿಗೆಗೆ ಅಚ್ಚರಿಯ ವಿಷಯವಾಗಿದೆ. ನಮ್ಮ ದೇಶದಲ್ಲಿ ಇಷ್ಟು ವೇಗದ ಬೆಳವಣಿಗೆ ಆಗುತ್ತದೆ ಎಂದು ನಾವು ಎಂದಿಗೂ ಕನಸಿನಲ್ಲಿಯೂ ಊಹಿಸಿರಲಿಲ್ಲ.

ಯುವಕರು ಮತ್ತು ಯುವತಿಯರೇ, ನಾವು ಪರಿವರ್ತಕ ತಂತ್ರಜ್ಞಾನದ ಯುಗದಲ್ಲಿ ಜೀವಿಸುತ್ತಿದ್ದೇವೆ ಎಂಬುದನ್ನು ನಿಮ್ಮ ಗಮನಕ್ಕೆ ತರಬೇಕೆಂದು ನಾನು ಬಯಸುತ್ತೇನೆ. ಯುವ ಮನಸ್ಸುಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ , ಇಂಟರ್‌ನೆಟ್ ಆಫ್ ಥಿಂಗ್ಸ್ , ಬ್ಲಾಕ್‌ಚೈನ್ ಮತ್ತು ಮೆಷಿನ್ ಲರ್ನಿಂಗ್‌ನೊಂದಿಗೆ ಹಿಡಿತ ಸಾಧಿಸಬೇಕಾಗುತ್ತದೆ. ಪ್ರತಿದಿನ ಬದಲಾಗುತ್ತಿದೆ ಮತ್ತು  ಈ ಬದಲಾವಣೆಯೇ ಒಂದು ಸವಾಲು. ಈ ಬದಲಾವಣೆಯನ್ನು ಅವಕಾಶಗಳಾಗಿ ಪರಿವರ್ತಿಸಬೇಕಾಗಿದೆ ಮತ್ತು ಅದನ್ನು ಶಿಕ್ಷಣದ ಮೂಲಕ ಮಾತ್ರ ಮಾಡಬಹುದು. ಪದ್ಮಶ್ರೀ’ ಶ್ರೀ ಪಿ.ಆರ್. ಅಗರ್ವಾಲ್ ಅವರ ಸಮರ್ಥ ಮತ್ತು ದೂರದೃಷ್ಟಿಯ ನಾಯಕತ್ವದಲ್ಲಿ, ಇನ್ಸ್ಟಿಟ್ಯೂಟ್ ಈ ದಿಕ್ಕಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಇದರಿಂದಾಗಿ ಮುಂದಿನ 25 ವರ್ಷಗಳಲ್ಲಿ ಅದು ಭವಿಷ್ಯದ-ಆಧಾರಿತ ಪಠ್ಯಕ್ರಮವನ್ನು ನಡೆಸುತ್ತದೆ ಮತ್ತು ಜಗತ್ತು ಬಯಸುವ ತಂತ್ರಜ್ಞಾನದ ಶಾಖೆಗಳಲ್ಲಿ ಶಿಕ್ಷಣವನ್ನು ನೀಡುತ್ತದೆ ಎಂದು ನಾನು ಖಚಿತವಾಗಿ ನಂಬುತ್ತೇನೆ. ನಾವು ತಾಂತ್ರಿಕವಾಗಿ ಮುಂದೆ ಸಾಗದಿದ್ದರೆ, ನಮ್ಮ ಆರ್ಥಿಕ ಪ್ರಗತಿಯು ಸ್ಥಗಿತಗೊಳ್ಳುತ್ತದೆ. ದೇಶದೊಳಗಿನ ಸಂಶೋಧನೆ, ನಾವೀನ್ಯತೆ ಮತ್ತು ಶಿಕ್ಷಣದ ವಾತಾವರಣವು ಆರ್ಥಿಕ ಪ್ರಗತಿಯ ದೃಢವಾದ ಅಡಿಪಾಯವಾಗಿದೆ.

ಈ ಸಂಸ್ಥೆಯನ್ನು ಈ ಸ್ಥಳದಲ್ಲಿ ಸ್ಥಾಪಿಸಿದ್ದು ಬಹಳ ಶ್ಲಾಘನೀಯ. ಈಗ ನಾವು ಎರಡನೇ ಮತ್ತು ಮೂರನೇ ಹಂತದ ನಗರಗಳ ಮೇಲೆ ಕೇಂದ್ರೀಕರಿಸಬೇಕಾದ ಸಮಯ ಬಂದಿದೆ. ಈ ಸ್ಥಳವು ವಿದ್ಯಾರ್ಥಿಗಳು, ಪರಿಸರ ವ್ಯವಸ್ಥೆ ಮತ್ತು ಸಮಗ್ರ ಬೆಳವಣಿಗೆಗೆ ಅನುಕೂಲಕರವಾಗಿದೆ. ಇತರರು ಈ ಮಾದರಿಯನ್ನು ಅನುಸರಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ.

ನನ್ನ ದೃಢ ನಂಬಿಕೆ, ನನ್ನ ಅಚಲ ವಿಶ್ವಾಸವೆಂದರೆ ಸಮಾಜದಲ್ಲಿ ದೊಡ್ಡ ಬದಲಾವಣೆ, ಶಾಶ್ವತ ಬದಲಾವಣೆ ಮತ್ತು ಅಸಮಾನತೆಗಳನ್ನು ನಿವಾರಿಸುವ ಏಕೈಕ ಮಾರ್ಗವೆಂದರೆ ಶಿಕ್ಷಣ. ಶಿಕ್ಷಣವೇ ಸಮಾನತೆ ತರಲು, ಅಸಮಾನತೆಯನ್ನು ಕಡಿಮೆ ಮಾಡಲು ಮತ್ತು ಸಮಾಜವನ್ನು ಸಮತೋಲನಗೊಳಿಸಲು ಅತ್ಯಂತ ಪ್ರಭಾವಶಾಲಿ ಮತ್ತು ಪರಿವರ್ತಕ ಕಾರ್ಯವಿಧಾನವಾಗಿದೆ. ನಮ್ಮ ಇತಿಹಾಸವನ್ನು ನೋಡಿದರೆ ಗುರುಕುಲದ ಪ್ರಾಮುಖ್ಯತೆ ಏನಿತ್ತು ಎಂಬುದು ಗೊತ್ತಾಗುತ್ತದೆ. ಗುರುಕುಲದಲ್ಲಿ ಯಾವುದೇ ಶುಲ್ಕವಿರಲಿಲ್ಲ. ಭಾರತೀಯ ಸಂವಿಧಾನದಲ್ಲಿ 22 ಚಿತ್ರಗಳಿವೆ, ಅದರಲ್ಲಿ ನಾಗರಿಕತ್ವದ ನಿಬಂಧನೆಗಳಲ್ಲಿ ಗುರುಕುಲದ ಚಿತ್ರವಿದೆ. ಇಂದಿನ ದಿನದಲ್ಲಿ ನಾವು ಶಿಕ್ಷಣವನ್ನು ವ್ಯಾಪಾರಿ ಬುದ್ಧಿಯಿಂದ ರಕ್ಷಿಸುವ ಅಗತ್ಯವಿದೆ.

ಆರಂಭದಲ್ಲಿ ದಾನಧರ್ಮದ ಕೆಲಸವಾಗಿದ್ದುದು, ಸಮಾಜಕ್ಕೆ ಮರಳಿ ನೀಡುವ ಕೆಲಸವಾಗಿದ್ದುದು, ಸಮಾಜ ಸೇವೆ ಮಾಡುವ ಕೆಲಸವಾಗಿದ್ದುದು, ಇಂದು ಅದು ಒಂದು ವ್ಯಾಪಾರವಾಗಿ ಮಾರ್ಪಟ್ಟಿರುವುದು ನನ್ನ ಸುತ್ತಮುತ್ತ ಕಾಣುತ್ತಿದೆ. ಶಿಕ್ಷಣವು ವ್ಯಾಪಾರವಾಗುವುದು ದೇಶದ ಭವಿಷ್ಯಕ್ಕೆ ಎಂದಿಗೂ ಒಳ್ಳೆಯದಲ್ಲ. ನನ್ನ ನಂಬಿಕೆಯೇನೆಂದರೆ ಶೈಕ್ಷಣಿಕ ಸಂಸ್ಥೆಗಳು ಆರ್ಥಿಕವಾಗಿ ಸಬಲವಾಗಿರಬೇಕು. ಅವು ಆರ್ಥಿಕವಾಗಿ ಸ್ವಾವಲಂಬಿಯಾಗಿರಬೇಕು. ಆದರೆ ಕೈಗಾರಿಕೆಗಳ ಜವಾಬ್ದಾರಿಯೇನೆಂದರೆ ಕಾಲಕಾಲಕ್ಕೆ ಸಂಸ್ಥೆಗಳನ್ನು ಪೋಷಿಸಬೇಕು. ಅವರು ತಮ್ಮ ಸಿ.ಎಸ್‌.ಆರ್ ನಿಧಿಗಳನ್ನು ಸಂಸ್ಥೆಗಳನ್ನು ನಿರ್ಮಿಸಲು ಉದಾರವಾಗಿ ಬಳಸಬೇಕು. ಇದು ದೇಶದ ಪ್ರಗತಿಗೆ ಬಹಳ ದೊಡ್ಡ ಸಹಾಯಕವಾಗಿರುತ್ತದೆ.

ಸಂಸ್ಥೆಗಳು ಇನೋವೇಷನ್‌ ಮತ್ತು ಸಂಶೋಧನೆಯ ಕೇಂದ್ರಗಳಾಗಿ ಹೊರಹೊಮ್ಮುತ್ತವೆ. ಸಂಶೋಧನೆ ಮತ್ತು ಇನೋವೇಷನ್‌ ಗಳ ದೊಡ್ಡ ಪ್ರಯೋಜನವೆಂದರೆ ಅದು ಉದ್ಯಮ ಮತ್ತು ಆರ್ಥಿಕತೆಯನ್ನು ಬಲಪಡಿಸುತ್ತದೆ ಮತ್ತು ಪ್ರಪಂಚದ ಮುಂದೆ ದೇಶಕ್ಕೆ ದೊಡ್ಡ ಶಕ್ತಿಯನ್ನು ನೀಡುತ್ತದೆ.

ಒಂದು ಕಾಲದಲ್ಲಿ ಭಾರತ ಎಷ್ಟು ಪ್ರಸಿದ್ಧವಾಗಿತ್ತು! ನಮ್ಮ ಭಾರತದಲ್ಲಿ ತಕ್ಷಶಿಲಾ , ನಳಂದಾ, ಮಿಥಿಲಾ , ವಲ್ಲಭಿ , ವಿಕ್ರಮಶಿಲಾ ಹೀಗೆ ಅನೇಕ ಸಂಸ್ಥೆಗಳು ಇದ್ದವು. ಈ ಸಂಸ್ಥೆಗಳು ಸಂಪೂರ್ಣ ಭಾರತದಲ್ಲಿ ಪ್ರಸಿದ್ಧವಾಗಿದ್ದವು. ದಲೈ ಲಾಮಾಜಿ ಹೇಳಿದಂತೆ ಬುದ್ಧನ ಎಲ್ಲಾ ಜ್ಞಾನ ನಳಂದಾದಿಂದಲೇ ಹೊರಹೊಮ್ಮಿತು. ಆದರೆ ಏನಾಯಿತು? ಬಖ್ತಿಯಾರ್ ಖಿಲ್ಜಿ ಅವರು ಅಸಡ್ಡೆಯಿಂದ ಇವೆಲ್ಲವನ್ನು ನಾಶಪಡಿಸಿದರು, ನಳಂದಾವನ್ನು ನಾಶಪಡಿಸಿದರು. ಇದು ಆಕ್ರಮಣದ ಪರಿಣಾಮವಾಗಿತ್ತು. ನಮ್ಮ ಸಂಸ್ಥೆಗಳನ್ನು ನಾಶಪಡಿಸಲಾಯಿತು.

ಬ್ರಿಟಿಷರು  ಬಂದರು, ನಮ್ಮ ಸಂಸ್ಥೆಗಳ ಶಕ್ತಿ ಇತ್ತು, ಅದನ್ನು ಸಹಿಸಲಾಗಲಿಲ್ಲ. ಜಗತ್ತಿನಲ್ಲಿ ಜ್ಞಾನದ ಕೇಂದ್ರವಾಗಿದ್ದ ಭಾರತ, ಇಡೀ ಜಗತ್ತು ಭಾರತದತ್ತ ನೋಡುತ್ತಿದ್ದ, ಆ ಸಂಸ್ಥೆಗಳ ಬೇರುಗಳನ್ನು ಕತ್ತರಿಸಲಾಯಿತು.

ಸ್ನೇಹಿತರೇ , ನಾನು ನಿಮಗೆ ಹೇಳುತ್ತೇನೆ ಮತ್ತು ಅದನ್ನು ಎಂದಿಗೂ ಮರೆಯಬಾರದು , ಭಕ್ತಿಯಾರ್ ಖಿಲ್ಜಿ ತನ್ನ ಆಳವಾದ ಮತಾಂಧತೆಯಿಂದಾಗಿ ಆ ಮಹಾನ್ ಕಲಿಕೆಯ ಕೇಂದ್ರವಾದ ನಳಂದಾವನ್ನು ನಾಶಪಡಿಸಿದನು ಮತ್ತು ನಾನು ಅದನ್ನು ಹೇಳುತ್ತಿಲ್ಲ. ಇದು ಭಾರತದ ಸೆಕ್ಯುಲರ್ ಇತಿಹಾಸದ ತೀರ್ಮಾನವಾಗಿದೆ. ನಾನು ಸ್ವಲ್ಪವೂ ಉತ್ಪ್ರೇಕ್ಷೆ ಮಾಡುತ್ತಿಲ್ಲ. ಇದರ ನಂತರ , ನಾನು ಸೂಚಿಸಿದಂತೆ , ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತೀಯ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ನಾಶಪಡಿಸಲಾಯಿತು.  ಇಂಗ್ಲಿಷರ ಕಾಲದಲ್ಲಿ ಅವುಗಳನ್ನು ಧ್ವಂಸ ಮಾಡಲಾಯಿತು.

ಸ್ವಾಮಿ ವಿವೇಕಾನಂದರು ಅಂತಹ ಮಹಾನ್ ವ್ಯಕ್ತಿ. ಅಜ್ಮೀರ್ ನಮ್ಮಿಂದ ದೂರವಿಲ್ಲ, ಅವರು ಅಲ್ಲಿಂದ ದೇವಲೋಕಕ್ಕೆ ತೆರಳಿದರು. 19ನೇ ಶತಮಾನದಲ್ಲಿ ಭಾರತವನ್ನು ಮತ್ತೆ ಪ್ರಕಾಶಮಾನಗೊಳಿಸಲು ಅವರು ಬಹಳ ಪ್ರಯತ್ನಿಸಿದರು. ಈಗ ಭಾರತವನ್ನು ಶಿಕ್ಷಣದ ಕೇಂದ್ರವನ್ನಾಗಿ ಮಾಡುವ ಈ ಮಹಾ ಕಾರ್ಯದಲ್ಲಿ ಪ್ರತಿಯೊಬ್ಬರೂ ತಮ್ಮ ಕೊಡುಗೆ ನೀಡಬೇಕಾದ ಸಮಯ ಬಂದಿದೆ.

ನಾನು ವ್ಯಾಪಾರ, ಉದ್ಯಮ, ವಾಣಿಜ್ಯ ಮತ್ತು ವ್ಯವಹಾರ ಕ್ಷೇತ್ರಗಳಿಗೆ ಮನವಿ ಮಾಡುತ್ತೇನೆ. ಅವರು ಈ ಸಂಸ್ಥೆಗಳ ವಿಕಾಸಕ್ಕಾಗಿ ಉದಾರವಾಗಿ ಕೊಡುಗೆ ನೀಡಬೇಕು. ಶಿಕ್ಷಣಕ್ಕಾಗಿ ಹೂಡಲಾಗುವ ಯಾವುದೇ ಹಣ, ಅದು ನಮ್ಮ ಭವಿಷ್ಯದಲ್ಲಿನ ಹೂಡಿಕೆಯಾಗಿದೆ, ನಮ್ಮ ಆರ್ಥಿಕ ಏಳಿಗೆಯಲ್ಲಿನ ಹೂಡಿಕೆಯಾಗಿದೆ, ಮತ್ತು ಶಾಂತಿ ಹಾಗೂ ಸ್ಥಿರತೆಗಾಗಿನ ಹೂಡಿಕೆಯಾಗಿದೆ. ನಮ್ಮ ಸಂಕಲ್ಪವು ಹೀಗಿರಬೇಕು - 2047ರಲ್ಲಿ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವಾಗ, ನಾವು ವಿಶ್ವದ ಮಹಾನ್ ಜ್ಞಾನ ಶಕ್ತಿಯಾಗಿರಬೇಕು. ಮತ್ತು ಏಕೆ ಆಗಬಾರದು ಎಂಬುದು ನಮ್ಮ ಸಂಕಲ್ಪವಾಗಿರಬೇಕು. ಏಕೆಂದರೆ ನಾವು ಶತಮಾನಗಳ ಕಾಲ ಹಾಗೇ ಇದ್ದೆವು.

ಮೊದಲಿಗೆ ನಾನು ಇಂದಿನ ಪರಿಸ್ಥಿತಿಗಳ ಬಗ್ಗೆ ಚಿಂತಿಸಲು ಬಯಸುತ್ತೇನೆ. ನಮ್ಮ ಕಾಲದ ಪರಿಸ್ಥಿತಿಗಳನ್ನು ಇಂದಿನ ಮಕ್ಕಳಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಂದು ಪರಿಸ್ಥಿತಿ ತುಂಬಾ ಉತ್ತಮವಾಗಿದೆ. ಆ ದಿನಗಳ ಪರಿಸ್ಥಿತಿಯನ್ನು ವರ್ಣಿಸಲು ನಾನು ಬಯಸುವುದಿಲ್ಲ, ಆದರೆ ಇಂದಿನ ಪರಿಸ್ಥಿತಿ ಹೀಗಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು. ಗುತ್ತಿಗೆ ಅಥವಾ ಉದ್ಯೋಗ ಪಡೆಯಲು  ಪೋಷಕರ ಪ್ರಭಾವ ಇನ್ನು ಮುಖ್ಯವಲ್ಲ, ಅರ್ಹತೆಯ ಆಧಾರದ ಮೇಲೆ ಎಲ್ಲವೂ ನಡೆಯುತ್ತದೆ. ವಿಶೇಷ ಹುಟ್ಟು ಅರ್ಹತೆಗಿಂತ ಯೋಗ್ಯತೆಯೇ ಮುಖ್ಯವಾಗಿದೆ.

ಇಂದಿನ ಸರ್ಕಾರವು ಪಾರದರ್ಶಕತೆ ಮತ್ತು ಜವಾಬ್ದಾರಿಯಿಂದ ಕೂಡಿದೆ. ಇದರಲ್ಲಿ ಭ್ರಷ್ಟಾಚಾರಕ್ಕೆ ಜಾಗವಿಲ್ಲ. ತಂತ್ರಜ್ಞಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ವಿದ್ಯಾರ್ಥಿಗಳೇ, ನಿಮ್ಮ ಪ್ರತಿಭೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು, ನಿಮ್ಮ ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ಮತ್ತು ನಿಮ್ಮ ಕನಸುಗಳನ್ನು ನನಸಾಗಿಸಲು ಅನುವು ಮಾಡಿಕೊಡುವ ಪರಿಸರ ವ್ಯವಸ್ಥೆಯಿಂದ ಪ್ರಯೋಜನ ಪಡೆಯುತ್ತಿರುವ ಕಾಲದಲ್ಲಿ ನೀವು ಜೀವಿಸುತ್ತಿರುವುದು ನಿಮ್ಮ ಅದೃಷ್ಟ.

ಇನ್ನೊಂದು ರೋಗವಿದೆ, ಮಕ್ಕಳೇ, ನಾನು ನಿಮ್ಮನ್ನುದ್ದೇಶಿಸಿ ಮಾತನಾಡುತ್ತಿದ್ದೇನೆ, ಅದು ವಿದೇಶಕ್ಕೆ ಹೋಗುವ ಬಯಕೆ. ವಿದೇಶದಲ್ಲಿ ಓದಲು ಪೋಷಕರಿಗೆ ಸಲಹೆ ಸಿಗುವುದಿಲ್ಲ. ಮಕ್ಕಳು ಆತುರಾತುರಾಗಿ ಹೋಗಲು ಬಯಸುತ್ತಾರೆ. ಅವರಿಗೆ ಹೊಸ ಕನಸು ಕಾಣುತ್ತದೆ. ಅಲ್ಲಿಗೆ ಹೋದ ಕೂಡಲೇ ಸ್ವರ್ಗ ಸಿಗುತ್ತದೆ ಎಂದು ಅವರಿಗೆ ಅನ್ನಿಸುತ್ತದೆ. ಯಾವ ಸಂಸ್ಥೆಗೆ ಹೋಗುತ್ತಿದ್ದಾರೆ, ಯಾವ ದೇಶಕ್ಕೆ ಹೋಗುತ್ತಿದ್ದಾರೆ ಎಂಬುದನ್ನು ಅವರು ಯೋಚಿಸುವುದಿಲ್ಲ. ಕೇವಲ ಒಂದು ಕುರುಡು ದಾರಿ - ನಾನು ವಿದೇಶಕ್ಕೆ ಹೋಗಲೇಬೇಕು ಎಂಬುದು ಮಾತ್ರ. ನಿಮಗೆ ಆಶ್ಚರ್ಯವಾಗಬಹುದು, 18 ರಿಂದ 25 ವರ್ಷದ ನಡುವಿನ ಹುಡುಗರು ಹುಡುಗಿಯರು ಜಾಹೀರಾತುಗಳಿಂದ ಪ್ರಭಾವಿತರಾಗುತ್ತಾರೆ. 2024 ರಲ್ಲಿ 13 ಲಕ್ಷ ವಿದ್ಯಾರ್ಥಿಗಳು ವಿದೇಶಕ್ಕೆ ಹೋದರು. ಅವರ ಭವಿಷ್ಯ ಏನಾಗುತ್ತದೆ ಎಂಬುದನ್ನು ಈಗ ಯೋಚಿಸಲಾಗುತ್ತಿದೆ. ಇಲ್ಲಿಯೇ ಓದಿದರೆ ಎಷ್ಟು ಉತ್ತಮವಾಗುತ್ತಿತ್ತು ಎಂದು ಜನರಿಗೆ ಈಗ ಅರ್ಥವಾಗುತ್ತಿದೆ.

ಮತ್ತು ದೇಶದ ಮೇಲೆ ಎಂತಹ ಹೊರೆ. ಅವರು ನಮ್ಮ ವಿದೇಶಿ ವಿನಿಮಯದಲ್ಲಿ 6 ಬಿಲಿಯನ್ ಯುಎಸ್ ಡಾಲರ್ ನಷ್ಟವನ್ನು ಉಂಟುಮಾಡಿದ್ದಾರೆ. ಊಹಿಸಿ, ಈ 6 ಬಿಲಿಯನ್ ಡಾಲರ್‌ಗಳನ್ನು ಶೈಕ್ಷಣಿಕ ಸಂಸ್ಥೆಗಳ ಮೂಲಸೌಕರ್ಯ ಸುಧಾರಣೆಗೆ ಬಳಸಿದ್ದರೆ, ನಮ್ಮ ಪರಿಸ್ಥಿತಿ ಹೇಗಿರುತ್ತಿತ್ತು. ಈ ದಿಕ್ಕಿನಲ್ಲಿ ಬಹಳ ಗಮನ ಹರಿಸಲಾಗುತ್ತಿದೆ. ಈ ವಿದೇಶಿ ವಿನಿಮಯದ ನಷ್ಟ, ನಾನು ಇದನ್ನು ವಿದೇಶಿ ವಿನಿಮಯದ ಸೋರಿಕೆ, ಪ್ರತಿಭೆಗಳ ಸೋರಿಕೆ ಎಂದು ಕರೆಯುತ್ತೇನೆ, ಇದು ಹೀಗಾಗಬಾರದು. ಸಂಸ್ಥೆಗಳ ಜವಾಬ್ದಾರಿ ಎಂದರೆ ಅವರು ತಮ್ಮ ವಿದ್ಯಾರ್ಥಿಗಳಿಗೆ ವಿದೇಶಿ ಪರಿಸ್ಥಿತಿಗಳ ಬಗ್ಗೆ ತಿಳಿಸಬೇಕು. ನೀವು ಪ್ರವೇಶ ಪಡೆಯುತ್ತಿರುವ ಸಂಸ್ಥೆಯ ಶ್ರೇಣಿ ಏನು, ಅದರ ಸ್ಥಿತಿ ಏನು ಎಂಬುದನ್ನು ತಿಳಿಸಬೇಕು. ಮತ್ತು ಇದರೊಂದಿಗೆ ನಾವು ಒಂದು ದೊಡ್ಡ ಕ್ರಾಂತಿಕಾರಿ ಹೆಜ್ಜೆ ಇಡಬೇಕು - ಸಾಮರ್ಥ್ಯವುಳ್ಳವರು, ಸಮಾಜಕ್ಕೆ ಕೊಡುವ ಮನಸ್ಸಿನಿಂದ, ಆ ನೀತಿಯ ಮೇಲೆ ಆಧರಿಸಿ, ಶುದ್ಧ ಮನಸ್ಸಿನಿಂದ ದ್ವಿತೀಯ ಶ್ರೇಣಿಯ ನಗರಗಳಲ್ಲಿ, ತೃತೀಯ ಶ್ರೇಣಿಯ ನಗರಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಂಸ್ಥೆಗಳನ್ನು ನಿರ್ಮಿಸಬೇಕು. ಇದು ದೇಶಕ್ಕೆ ಬಹಳ ದೊಡ್ಡ ಬದಲಾವಣೆಯನ್ನು ತರುತ್ತದೆ.

ಇಂದಿನ ದಿನ ತಂತ್ರಜ್ಞಾನವು ನಮ್ಮ ನಡುವೆ ಬಂದಿದೆ. ನಾವು ಅದನ್ನು ಎಷ್ಟು ಬಳಸಬೇಕಾಗಿತ್ತೋ ಅಷ್ಟು ಬಳಸಲು ಸಾಧ್ಯವಾಗುತ್ತಿಲ್ಲ.  ನಮ್ಮ ಶಿಕ್ಷಕರು ಈ ಪ್ರತಿಭೆಯನ್ನು ಹೊಂದಿದ್ದಾರೆ, ಆದರೆ ದೈಹಿಕ ನಿರ್ಬಂಧಗಳಿವೆ. ಅವರು ಎಲ್ಲೆಡೆ ಅಥವಾ ಎಲ್ಲಿಯೂ ಇರಲು ಸಾಧ್ಯವಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಇದು ನಮ್ಮ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಹೆಚ್ಚು ಸಹಾಯ ಮಾಡುತ್ತದೆ.

ಒಂದು ಮಹತ್ವದ ವಿಷಯವೆಂದರೆ, ಉದ್ಯೋಗದ ವಿಷಯ ಬಂದಾಗ, ಎಲ್ಲಿಗೆ ಹೋಗಬೇಕೆಂದು ನಮಗೆ ಅರ್ಥವಾಗುವುದಿಲ್ಲ ಮತ್ತು ಜನರು 8-10 ಉದ್ಯೋಗಗಳ ಹಿಂದೆ ಓಡುತ್ತಾರೆ. ನಮ್ಮ ಅವಕಾಶಗಳ ಚೀಲ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ನೀಲಿ ಆರ್ಥಿಕತೆಯಲ್ಲಿ , ಸಮುದ್ರದಲ್ಲಿ , ಬಾಹ್ಯಾಕಾಶದಲ್ಲಿ ನೂರಾರು ಅವಕಾಶಗಳಿವೆ. ಪ್ರತಿಭೆ ಅಗತ್ಯವಿಲ್ಲದ ಜೀವನದ ಭಾಗವಿಲ್ಲ. ಆದರೆ ನಮ್ಮ ವಿದ್ಯಾರ್ಥಿಗಳು, ಹುಡುಗ-ಹುಡುಗಿಯರು, ಈ ಅವಕಾಶಗಳ ಬುಟ್ಟಿಯ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ. ನಿರಂತರವಾಗಿ ಹೆಚ್ಚುತ್ತಿರುವ ಅವಕಾಶಗಳ ಬುಟ್ಟಿಯ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. 10 ಉದ್ಯೋಗಗಳಿಗೆ ಹೆಚ್ಚುವರಿಯಾಗಿ ಯಾವ ಪ್ರತಿಭೆಗಳನ್ನು ಬಳಸಬಹುದೆಂದು 10% ಸಹ ತಿಳಿದಿಲ್ಲ ಎಂದು ಒಂದು ಅಧ್ಯಯನವು ತೀರ್ಮಾನಿಸಿದೆ.

ಆದ್ದರಿಂದ, ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮದ ಮುಖ್ಯಸ್ಥರಿಗೆ ಸೆಮಿನಾರ್‌ ಗಳನ್ನು ಆಯೋಜಿಸಲು ಮತ್ತು ನಮ್ಮ ಯುವಕ-ಯುವತಿಯರು ದೇಶಕ್ಕಾಗಿ ಮತ್ತು ತಮಗಾಗಿ ಸೇವೆ ಸಲ್ಲಿಸಲು ಬಯಸುವ ಆಯ್ಕೆಗಳ ಬಗ್ಗೆ ಅರಿವು ಮೂಡಿಸಲು ನಾನು ಕರೆ ನೀಡುತ್ತೇನೆ.

ರಾಷ್ಟ್ರೀಯ ಶಿಕ್ಷಣ ನೀತಿಯು 34 ವರ್ಷಗಳ ನಂತರ, ನೂರಾರು ಮತ್ತು ಸಾವಿರಾರು ಪಾಲುದಾರರ ಅಭಿಪ್ರಾಯಗಳನ್ನು ಪರಿಗಣಿಸಿದ ನಂತರ, ಇದು ಗೇಮ್ ಚೇಂಜರ್ ಆಗಿದೆ. ಇದು ಪ್ರಗತಿಯಲ್ಲಿರುವ ಕೆಲಸವಾಗಿದೆ, ಸಮಯ ತೆಗೆದುಕೊಳ್ಳುತ್ತದೆ. ಆದರೆ ನಾವು ಅದನ್ನು ಶೀಘ್ರದಲ್ಲೇ ಅಳವಡಿಸಿಕೊಳ್ಳಬೇಕು. ಇದರ ಪ್ರತಿಯೊಂದು ಅಂಶವನ್ನು ಅರ್ಥಮಾಡಿಕೊಳ್ಳಬೇಕು. ಇದು ನಮ್ಮ ಯುವಕ-ಯುವತಿಯರಿಗೆ ಬ್ರಹ್ಮಾಸ್ತ್ರದಂತೆ ಕಾರ್ಯನಿರ್ವಹಿಸುತ್ತದೆ. ಮಾಹಿತಿಯಿಲ್ಲದೆ ಅಥವಾ ಮಾಹಿತಿಯ ಕೊರತೆಯಿಂದ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ತರುವ ಸಮೃದ್ಧ ಫಲಿತಾಂಶಗಳನ್ನು ನಾವು ಪಡೆಯಲು ಸಾಧ್ಯವಾಗುತ್ತಿಲ್ಲ.

ಇಂದು ಭಾರತವು ವಿಶ್ವದಲ್ಲಿ ಬಹಳ ಮಹತ್ವವನ್ನು ಹೊಂದಿದೆ. ಇದಕ್ಕಿಂತ ಮೊದಲು ಭಾರತದ ಧ್ವನಿಯನ್ನು ಇಷ್ಟು ಕೇಳಿರಲಿಲ್ಲ. ಹೀಗಿರುವಾಗ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ದೇಶದ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು. ಪ್ರತಿಯೊಂದು ಸಂದರ್ಭದಲ್ಲೂ ನಾವು ರಾಷ್ಟ್ರವನ್ನು ಮೊದಲು ಇಡುತ್ತೇವೆ ಎಂಬ ನಿಷ್ಠೆ ಇರಬೇಕು. ರಾಜಕೀಯ, ವೈಯಕ್ತಿಕ ಅಥವಾ ಆರ್ಥಿಕ ಹಿತಾಸಕ್ತಿಗಳನ್ನು ದೇಶಕ್ಕಿಂತ ಮೇಲೆ ಇಡಬಾರದು. ಕೆಲವರು ಇದಕ್ಕೆ ಸವಾಲು ಹಾಕುತ್ತಿದ್ದಾರೆ. ಈ ಸವಾಲನ್ನು ಎದುರಿಸುವುದು, ಈ ಶಕ್ತಿಗಳನ್ನು , ದೇಶವಿರೋಧಿ ಶಕ್ತಿಗಳನ್ನು ತಟಸ್ಥಗೊಳಿಸುವುದು ನಮ್ಮ ಯುವಜನರ ಜವಾಬ್ದಾರಿಯಾಗಿದೆ.

 

*****


(Release ID: 2066615) Visitor Counter : 39


Read this release in: English , Urdu , Hindi