ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಮೌಡಿಯಾಂಗ್ ಡಿಯಾಂಗ್ ನಲ್ಲಿ ಮೇಘಾಲಯ ಸ್ಕಿಲ್ ಮತ್ತು ಇನ್ನೋವೇಶನ್ ಹಬ್ ನ ಶಿಲಾನ್ಯಾಸ ಸಮಾರಂಭದಲ್ಲಿ ಉಪರಾಷ್ಟ್ರಪತಿಯವರ ಭಾಷಣ 

Posted On: 16 OCT 2024 7:10PM by PIB Bengaluru

ನಿಮಗೆಲ್ಲರಿಗೂ ಶುಭ ಮಧ್ಯಾಹ್ನ. 

ಮೇಘಾಲಯಕ್ಕೆ ಬಂದಿಳಿದ ನಂತರ ನನ್ನ ಉತ್ಸಾಹ ಹೆಚ್ಚಾಗಿದೆ. ಇಲ್ಲಿ ವಾಸಿಸುತ್ತಿರುವ ನೀವೆಲ್ಲರೂ ಧನ್ಯರು ಎಂದು ನನಗನಿಸುತ್ತಿದೆ. ಸ್ವರ್ಗದ ಅನುಭವವನ್ನು ಪಡೆಯುತ್ತಿದ್ದೇನೆ.

ಮಾನ್ಯ ರಾಜ್ಯಪಾಲರು ಸೂಚಿಸಿದಂತೆ, ರಾಜ್ಯದ ಜನಸಂಖ್ಯಾ ರಚನೆಯು ಅತ್ಯಂತ ಸಮಾಧಾನಕರ, ಸಮಗ್ರ ಮತ್ತು ಯಶಸ್ಸಿಗೆ ಪರಿಪೂರ್ಣ ಸೂತ್ರವಾಗಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ - ಹದಿಹರೆಯದ ಯುವಕರು, ಮಧ್ಯಮ ವಯಸ್ಸಿನ ಯುವಕರು ಮತ್ತು ಪ್ರೌಢ ಯುವಕರು.

ನಾನು ಇಲ್ಲಿ ನೋಡಿದ ಅನೇಕ ವಿಷಯಗಳು ಈಗಾಗಲೇ ಪ್ರಗತಿಯ ಹಾದಿಯಲ್ಲಿದ್ದು, ರಾಜ್ಯದ ದಿನಗಳು ಉತ್ತಮ ದಿನಗಳಿಗೆ ಮುನ್ನಡೆಯುತ್ತಿವೆ ಮತ್ತು ಇತರ ಸಮಾನ ರಾಜ್ಯಗಳಿಗೆ ಮಾದರಿಯಾಗುವುದು ಸ್ಪಷ್ಟವಾಗಿದೆ. ನಿಮ್ಮ ಸಮಯೋಚಿತ ಅಗತ್ಯಗಳು ಮತ್ತು ಅವಶ್ಯಕತೆಗಳನ್ನು ಗಣನೆಗೆ ತೆಗೆದುಕೊಂಡು ನಿಮ್ಮ ಮತ್ತು ನಿಮ್ಮ ತಂಡವು ತುಂಬಾ ವಿವೇಚನಾಶೀಲ ಮತ್ತು ಭವಿಷ್ಯದ ದೃಷ್ಟಿಯಿಂದ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ನನ್ನ ಅಭಿನಂದನೆಗಳು

ಮಾನ್ಯ ದ್ರೌಪದಿ ಮುರ್ಮು ಅವರು ನಮ್ಮ ದೇಶದ ರಾಷ್ಟ್ರಪತಿಯಾಗಿ ಆಯ್ಕೆಗೊಂಡಾಗ ಸಂಪೂರ್ಣ ದೇಶಕ್ಕೆ ಹರ್ಷದ ಕ್ಷಣವಾಗಿತ್ತು. ಅಂತಹ ಉನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ಬುಡಕಟ್ಟು ಮಹಿಳೆ ಅವರಾಗಿದ್ದಾರೆ. ನಮ್ಮೊಂದಿಗೆ ಒಬ್ಬ ಪ್ರತಿಭಾವಂತ ಅಧಿಕಾರಿ ಇದಾಶಿಷಾ ನೊಂಗ್ರಾಂಗ್ ಅವರಿದ್ದಾರೆ ಎಂಬುದನ್ನು ಹೆಮ್ಮೆಯಿಂದ ಹಂಚಿಕೊಳ್ಳಬಯಸುತ್ತೇನೆ. ಅವರು ಮೇಘಾಲಯದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕರಾಗಿದ್ದು, ಮೇಘಾಲಯದಿಂದ ಡಿಜಿಪಿ ಆಗಿರುವ ಮೊದಲ ಬುಡಕಟ್ಟು ಮಹಿಳೆಯೂ ಆಗಿದ್ದಾರೆ. ಈ ಎರಡು ಸಾಧನೆಗಳು ಭಾರತದ ಬೆಳವಣಿಗೆಯ ಹಾದಿಯಲ್ಲಿ ಆಗುತ್ತಿರುವ ಬದಲಾವಣೆಯನ್ನು ಸೂಚಿಸುತ್ತವೆ. ರಾಜ್ಯಸಭೆಯ ಅಧ್ಯಕ್ಷನಾಗಿ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿ ನೀಡುವ ನಿರ್ಣಯ ಕೈಗೊಳ್ಳುವಾಗ ನಾನು ಪೀಠದಲ್ಲಿದ್ದೆ.

ಗೌರವಾನ್ವಿತ ಅಧಿಕಾರಿಗಳೇ ಮತ್ತು ಅತ್ಯಂತ ಮುಖ್ಯವಾಗಿ, ಹುಡುಗ-ಹುಡುಗಿಯರೇ, ಪ್ರಾರಂಭದಲ್ಲಿಯೇ ಎರಡು ವರ್ಗಗಳಿಗೆ ನಾನು ಆಹ್ವಾನವನ್ನು ನೀಡಬಯಸುತ್ತೇನೆ. ಸಂಸತ್ತಿನ ಹೊಸ ಕಟ್ಟಡಕ್ಕೆ ನನ್ನ ಅತಿಥಿಗಳಾಗಿ ವಿದ್ಯಾರ್ಥಿಗಳನ್ನು ಬ್ಯಾಚ್ ಗಳಲ್ಲಿ ಆಹ್ವಾನಿಸಬೇಕೆಂದು ನಾನು ಮಾನ್ಯ ಮುಖ್ಯಮಂತ್ರಿಗಳಿಗೆ ವಿನಂತಿಸುತ್ತೇನೆ.

ಇದು ನಿರಂತರವಾಗಿ ನಡೆಯುತ್ತಿರುವ ಪ್ರಕ್ರಿಯೆಯಾಗಿದ್ದು, ರಾಜ್ಯಸಭಾ ಸಚಿವಾಲಯದಲ್ಲಿ ಅವರೊಂದಿಗೆ ಸಂವಾದ ನಡೆಸುವಾಗ ನನಗೆ ಹೊಸ ಚೈತನ್ಯ, ಉತ್ಸಾಹ, ಪ್ರೇರಣೆ ಮತ್ತು ಸ್ಫೂರ್ತಿ ದೊರೆಯುತ್ತದೆ. ಸಂಸತ್ ಭವನದ ಹೊಸ ಕಟ್ಟಡವನ್ನು ನೋಡುವುದು ನಿಮಗೆ ಜೀವಮಾನದ ಅನುಭವವಾಗಲಿದೆ ಎಂದು ನಾನು ಭರವಸೆ ನೀಡುತ್ತೇನೆ. ಕೋವಿಡ್ ಸಂದರ್ಭದಲ್ಲಿಯೂ, ಹಳೆಯ ಮೂಲಸೌಕರ್ಯದೊಂದಿಗೆ ಈ ಕಟ್ಟಡವು ಕೇವಲ 30 ತಿಂಗಳುಗಳಲ್ಲಿ ನಿರ್ಮಾಣಗೊಂಡಿದೆ. ನಮ್ಮ 5,000 ವರ್ಷಗಳ ನಾಗರಿಕತೆಯ ಆಳವನ್ನು ಪ್ರತಿಬಿಂಬಿಸುವ ಈ ಕಟ್ಟಡಕ್ಕೆ ನವೆಂಬರ್ನಿಂದ ವಿದ್ಯಾರ್ಥಿಗಳ ತಂಡಗಳು ಭೇಟಿ ನೀಡಲು ಆರಂಭಿಸಲಿವೆ ಎಂದು ನಾನು ಖಚಿತವಾಗಿ ಹೇಳಬಲ್ಲೆ. ವಿಷಯಗಳು ಸುಗಮವಾಗಿ ನಡೆಯಲು ಮುಖ್ಯ ಕಾರ್ಯದರ್ಶಿಯವರ ಕಛೇರಿಯೊಂದಿಗೆ ಸಮನ್ವಯ ಸಾಧಿಸಲು ನಾನು ಒಬ್ಬ ಅಧಿಕಾರಿಯನ್ನು ನೇಮಿಸಲಿದ್ದೇನೆ.

ಈಗಾಗಲೇ ಈಶಾನ್ಯ ಭಾರತದ ಇತರ ರಾಜ್ಯಗಳ ಜೊತೆ ಮಾಡಿದಂತೆ, ಈ ಅವಕಾಶವನ್ನು ಬಳಸಿಕೊಂಡು ಇಲ್ಲಿನ ಶಾಸಕರನ್ನು ನನ್ನ ಅತಿಥಿಗಳಾಗಿ ಆಹ್ವಾನಿಸಲು ಬಯಸುತ್ತೇನೆ. ನಮ್ಮ ಮಾನ್ಯ ಮುಖ್ಯಮಂತ್ರಿಗಳು, ಸದನದ ನಾಯಕರು - ಇದರಲ್ಲಿ ವಿಶೇಷವಾಗಿ ನೆನಪಿಸಬೇಕಾದ ಅಂಶವೆಂದರೆ, ಅವರ ಪೂಜ್ಯ ತಂದೆಯವರು ಲೋಕಸಭೆಯ ಅತ್ಯಂತ ಕೀರ್ತಿವಂತ ಸಭಾಧ್ಯಕ್ಷರಾಗಿದ್ದರು. ಅವರು ಸ್ವತಃ ಆ ಸಂಸದೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದಾರೆ, ಹಾಗೆಯೇ ಮಾನ್ಯ ರಾಜ್ಯಪಾಲರೂ ಕೂಡ ಈ ಅನುಭವವನ್ನು ಹೊಂದಿದ್ದಾರೆ. ಭಾರತದ ಸಂಸತ್ತಿಗೆ ಶಾಸಕರ ಭೇಟಿಯು ನಿಜವಾಗಿಯೂ ಒಂದು ಮಹತ್ವದ ಬದಲಾವಣೆಯನ್ನು ತರಲಿದೆ. ಇದು ಅವರ ಕಾರ್ಯವಿಧಾನಕ್ಕೆ ಹೊಸ ಆಯಾಮವನ್ನು ಸೇರಿಸಿ, ಅವರ ಸಂಸದೀಯ ಕಾರ್ಯನಿರ್ವಹಣೆಯನ್ನು ಇನ್ನಷ್ಟು ಸಮೃದ್ಧಗೊಳಿಸಲಿದೆ.

ಕೌಶಲ್ಯ ವೃದ್ಧಿಯ ವಿಷಯವು ನಿಜವಾಗಿಯೂ ಸಮಕಾಲೀನ ಮಹತ್ವವನ್ನು ಹೊಂದಿದೆ. ಈ ಸಂದರ್ಭದಲ್ಲಿ ಎರಡು ಗಮನಾರ್ಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು ಮತ್ತು ಮೂರನೇ ಕಾರ್ಯಕ್ರಮದಲ್ಲಿ ಉಪಸ್ಥಿತನಾಗಿದ್ದು ನನಗೆ ಅತ್ಯಂತ ಸಂತಸದ ಕ್ಷಣವಾಗಿತ್ತು. ಮೇಘಾಲಯ ಸ್ಕಿಲ್ ಮತ್ತು ಇನ್ನೋವೇಶನ್ ಹಬ್ ನ ಶಂಕುಸ್ಥಾಪನೆಯು ಸಣ್ಣ ಹೆಜ್ಜೆಲ್ಲ. ಇದು ದೊಡ್ಡ ಬದಲಾವಣೆಯನ್ನು ತರಲಿದೆ. ಬಹುಬೇಗನೇ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ನನಗೆ ಖಚಿತವಿದೆ. ಮೂಲಸೌಕರ್ಯದ ವಿನ್ಯಾಸವು ತೋರಿಸುವಂತೆ ಇದರ ಗಾತ್ರವು ಬೃಹತ್ತಾಗಿರಲಿದ್ದು, ರಾಜ್ಯದ ಗಡಿಯಾಚೆಯೂ ಗಮನ ಸೆಳೆಯಲಿದೆ. ಇದರಲ್ಲಿ ಮಾನವ ಸಂಪನ್ಮೂಲದ ಭಾಗವಹಿಸುವಿಕೆಯು ಇದಕ್ಕೆ ಇನ್ನಷ್ಟು ವಿಶಿಷ್ಟ ಮುಖವನ್ನು ನೀಡಲಿದೆ.

ನಾನು ವಿಶೇಷವಾಗಿ ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಸಚಿವರಾದ ಶ್ರೀ ಜಯಂತ್ ಚೌಧರಿ ಅವರನ್ನು, ಮಾನ್ಯ ಮುಖ್ಯಮಂತ್ರಿಗಳು ಮತ್ತು ಅವರ ತಂಡದೊಂದಿಗೆ ವಿಚಾರ ವಿನಿಮಯ ನಡೆಸಲು ವಿನಂತಿಸುತ್ತೇನೆ. ಅವರು ಸ್ವತಂತ್ರ ಪ್ರಭಾರದ ಚುರುಕಾದ ಸಚಿವರಾಗಿದ್ದು, ಈಗಾಗಲೇ ತಮ್ಮ ಎರಡು ಅತ್ಯಂತ ಮಹತ್ವದ ಲೇಖನಗಳ ಮೂಲಕ ತಮ್ಮ ಮನಸ್ಸನ್ನು ಬಹಿರಂಗಪಡಿಸಿದ್ದಾರೆ. ಮುಖ್ಯಮಂತ್ರಿಯವರಲ್ಲಿ ನಾನು ಕಂಡ ಹುರುಪು, ಅವರು ಪ್ರತಿಬಿಂಬಿಸಿದ ಮಿಷನ್ ಮೋಡ್, ಅವರು ಹೆಸರುವಾಸಿಯಾಗಿರುವ ಕಾರ್ಯಾನುಷ್ಠಾನದ ರೀತಿ - ಇವೆಲ್ಲವನ್ನು ನೋಡಿ, ಇದು ಖಂಡಿತವಾಗಿಯೂ ಯುವಜನತೆಗೆ ನಿಜವಾದ ವರದಾನವಾಗಲಿದೆ ಎಂದು ನನಗೆ ಖಚಿತವಿದೆ. ಏಕೆಂದರೆ ಈ ಕಾಲಘಟ್ಟದಲ್ಲಿ ಕೌಶಲ್ಯವು ಕೇವಲ ಒಂದು ಗುಣಮಟ್ಟವಲ್ಲ, ಅದು ನಮ್ಮ ಅಗತ್ಯ, ನಮ್ಮ ದೈನಂದಿನ ಅವಶ್ಯಕತೆಯಾಗಿದೆ.

ಸಿಎಂ ಬಿಸಿನೆಸ್ ಕ್ಯಾಟಲಿಸ್ಟ್: ಸ್ಟೂಡೆಂಟ್ ಬಿ-ಪ್ಲಾನ್ ಚಾಲೆಂಜ್ ಉದ್ಘಾಟಿಸಿದ್ದು ಅಷ್ಟೇ ಸಂತಸದ ಕ್ಷಣವಾಗಿತ್ತು. ಅದ್ಭುತವಾಗಿತ್ತು ಅದು. ನಾನು ರಸಾಯನಶಾಸ್ತ್ರದ ವಿದ್ಯಾರ್ಥಿಯಾಗಿರಲಿಲ್ಲ, ನಾನು ಭೌತಶಾಸ್ತ್ರದ ವಿದ್ಯಾರ್ಥಿ, ಆದರೆ ಈ ವರ್ಷಗಳಲ್ಲಿ ನನಗೆ ಅರಿವಾಗಿದೆ, ಕ್ಯಾಟಲಿಸ್ಟ್ ಎಂಬುದು ಅತ್ಯಂತ ಪ್ರಮುಖವಾದದ್ದು. ನೀವು ಬದಲಾವಣೆಗಾಗಿ ಪ್ರೇರಣೆ ನೀಡಬೇಕು, ನೀವು ನಂಬಿದ ಬದಲಾವಣೆಯನ್ನು ತಂದೇ ತೀರುವಂತೆ ಮಾಡಬೇಕು. ಯಾರಾದರೂ ಆ ಹೆಜ್ಜೆ ಇಡಬೇಕಾಗಿತ್ತು, ಮತ್ತು ಆ ಹೆಜ್ಜೆಯನ್ನು ದೂರದೃಷ್ಟಿಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹತ್ತು ವರ್ಷಗಳ ಹಿಂದೆ ಇಟ್ಟರು. 1989 ರಲ್ಲಿ ನಾನು ಸಂಸದ ಮತ್ತು ಸಚಿವನಾಗಿದ್ದಾಗ ದೇಶದ ಪರಿಸ್ಥಿತಿ ಹೇಗಿತ್ತು ಎಂಬುದರ ಬಗ್ಗೆ ನನಗಿಂತ ಹೆಚ್ಚು ತಿಳಿದವರು ಯಾರೂ ಇಲ್ಲ.

ಆಗಿನ ಆರ್ಥಿಕ ಪರಿಸ್ಥಿತಿ ಎಷ್ಟು ಅಸ್ಥಿರವಾಗಿತ್ತು, ನಮ್ಮ ವಿದೇಶಿ ವಿನಿಮಯ ಸಮತೋಲನ ಎಷ್ಟು ದುರ್ಬಲವಾಗಿತ್ತು? ಮತ್ತು ರಾಷ್ಟ್ರದ ಮನಸ್ಥಿತಿ ಹೇಗಿತ್ತು? ಪ್ರಧಾನ ಮಂತ್ರಿಯವರು, ದೂರದೃಷ್ಟಿಯ ಹೆಜ್ಜೆಗಳ ಮೂಲಕ ರಾಷ್ಟ್ರದ ಮನಸ್ಥಿತಿಯನ್ನು ಆಶಾವಾದ ಮತ್ತು ಸಾಧ್ಯತೆಗಳ ಮಟ್ಟಕ್ಕೆ ಎತ್ತಿದ್ದಾರೆ. ಪ್ರತಿ ಹುಡುಗ ಮತ್ತು ಹುಡುಗಿಯೂ ಹೆಚ್ಚು ಅವಕಾಶಗಳನ್ನು ಹುಡುಕಬಹುದಾದ ಪರಿಸರ ವ್ಯವಸ್ಥೆ ಈಗ ಸ್ಥಾಪನೆಯಾಗಿದೆ. ಕೇವಲ ಸರ್ಕಾರಿ ಸೇವೆಯನ್ನು ಪಡೆಯುವುದರ ಆಚೆಗೆ ಹೋಗಬೇಕು. ನಾವಿನ್ಯತೆ ನಮ್ಮ ಸ್ಪಷ್ಟ ಬಲವಾಗಿದೆ, ಮತ್ತು ಕೌಶಲ್ಯದಲ್ಲಿ ನಾವು ಜಾಗತಿಕ ಮೂಲ ಕೇಂದ್ರವಾಗಬೇಕು. ಈಗ ಕಾರ್ಯಕ್ರಮವು ರಚನಾತ್ಮಕ ವಿಧಾನವನ್ನು ತೆಗೆದುಕೊಂಡಿದೆ ಆದರೆ ಅದರ ಹೊರತಾಗಿಯೂ, ನಮ್ಮ ಆರೋಗ್ಯ ಕಾರ್ಯಕರ್ತರು ದೇಶದ ಹೊರಗೆ ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ. ವಿಶೇಷವಾಗಿ ನಮ್ಮ ಹುಡುಗಿಯರು, ಅವರು ಇಡೀ ದೇಶಕ್ಕೆ ಕೀರ್ತಿ ತಂದಿದ್ದಾರೆ.

ನಾನು ಮಧ್ಯ ಪ್ರಾಚ್ಯಕ್ಕೆ ಹೋದಾಗ ಮತ್ತು ಪ್ರಶಂಸೆಗಳನ್ನು ಪಡೆದಾಗ, ಮಧ್ಯ ಪ್ರಾಚ್ಯದ ಹಲವಾರು ದೇಶಗಳಲ್ಲಿ ಮೂಡಿ ಬಂದಿರುವುದೇನೆಂದರೆ, ಜಗತ್ತಿನಲ್ಲಿ ಅವರ ಮೂಲಸೌಕರ್ಯ ಗಮನಾರ್ಹವಾಗಿ ಮೂಡಿ ಬಂದಿದೆ. ಆದರೆ ಇದರ ಹಿಂದಿನ ಮಾನವ ಸಂಪನ್ಮೂಲದ ಬುನಾದಿಯು ಭಾರತೀಯ ಪ್ರತಿಭೆ, ಭಾರತೀಯ ಕೌಶಲ್ಯವುಳ್ಳ ಮಾನವ ಸಂಪನ್ಮೂಲವಾಗಿದೆ.

ಪ್ರಧಾನಿ ಮೋದಿಯವರು ಇಡೀ ಜಗತ್ತನ್ನು ಒಂದೇ ಪುಟಕ್ಕೆ ತರುವಲ್ಲಿ ಯಶಸ್ವಿಯಾದರು, ವಿಶ್ವಸಂಸ್ಥೆಯು ಅತ್ಯಂತ ಕಡಿಮೆ ಸಮಯದಲ್ಲಿ ಅತಿ ಹೆಚ್ಚಿನ ರಾಷ್ಟ್ರಗಳ ಬೆಂಬಲದೊಂದಿಗೆ 'ಅಂತಾರಾಷ್ಟ್ರೀಯ ಯೋಗ ದಿನ'ವನ್ನು ಘೋಷಿಸಿತು. ಪ್ರಧಾನ ಮಂತ್ರಿಯವರು ವಿಶ್ವದ ಪ್ರತಿಯೊಂದು ಭಾಗದಲ್ಲೂ ಯೋಗ ತರಬೇತುದಾರರನ್ನು ಹೊಂದಿರುತ್ತೇವೆ ಎಂದು ಹೇಳಿಕೆ ನೀಡಿದರು. ಯೋಗವು ಒಂದು ವಿಜ್ಞಾನವಾಗಿ ಬೆಳೆದಿದೆ, ಯೋಗವು ಒಂದು ಉದ್ಯಮವಾಗಿ ಬೆಳೆದಿದೆ, ಯೋಗವು ಆರೋಗ್ಯದೊಂದಿಗೆ ಸಂಬಂಧ ಹೊಂದಿದೆ ಮತ್ತು ಯೋಗವು ನಮ್ಮ ನಾಗರಿಕತೆಯ ಆಳದೊಂದಿಗೆ ಸಂಬಂಧ ಹೊಂದಿದೆ. ಏಕೆಂದರೆ ಆರೋಗ್ಯಕ್ಕಾಗಿ ಅತ್ಯಂತ ದೊಡ್ಡ ಜ್ಞಾನ ವೇದಿಕೆ - ಮಾನ್ಯ ಸಚಿವರಿಗೆ ಇದರ ಬಗ್ಗೆ ತಿಳಿದಿದೆ - ನಮ್ಮ ವೇದಗಳಲ್ಲಿ 'ಅಥರ್ವವೇದ'ದಲ್ಲಿ ನೀವು ಇದನ್ನು ಕಾಣಬಹುದು.

ಹುಡುಗ-ಹುಡುಗಿಯರೇ, ಈ ದಿನ ನಿಜವಾಗಿಯೂ ಒಂದು ವಿಶಿಷ್ಟ ದಿನ ಮತ್ತು ಮೇಘಾಲಯ ರಾಜ್ಯಕ್ಕೆ ನನ್ನ ಮೊದಲ ಭೇಟಿಯನ್ನು ಬಹಳ ವಿಶೇಷವಾಗಿಸುತ್ತದೆ. ಇದು ನನ್ನ ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಮಾನ್ಯ ಮುಖ್ಯಮಂತ್ರಿಗಳು ಬಹಳ ದಯೆತೋರಿ, ಈಗಾಗಲೇ ಎರಡನೇ ಭೇಟಿಗೆ ಆಹ್ವಾನ ನೀಡಿದ್ದಾರೆ. ನಾನು ಬಾರ್ನ ಅಧ್ಯಕ್ಷನಾಗಿದ್ದಾಗ ಒಬ್ಬರನ್ನು ಆಹ್ವಾನಿಸಿದ್ದು ನೆನಪಿದೆ, "ನೀವು ಇಂದು ಡಿನ್ನರ್ಗೆ ಸಮಯ ಹೊಂದಿಸಿಕೊಂಡಿದ್ದೀರಾ?" ನಾನು ಬಾರ್ನ ಅಧ್ಯಕ್ಷನಾಗಿದ್ದೆ ಮತ್ತು ಆ ಮಹಾನ್ ವಕೀಲರು, ಈಗ ನಮ್ಮೊಂದಿಗಿಲ್ಲದ ರಾಮ್ ಜೇಠ್ಮಲಾನಿ ಅವರು, "ಮಿಸ್ಟರ್ ಧನಕರ್, ಎರಡನೇ ಬಾರಿ ಯೋಚಿಸಿ" ಎಂದರು. ನಾನು ಆಗ ಯುವಕನಾಗಿದ್ದೆ. ಅವರೊಂದಿಗೆ ಸಂಸದನಾಗಿ ಕಾರ್ಯನಿರ್ವಹಿಸುವ ಸೌಭಾಗ್ಯ ನನಗಿತ್ತು. ಅವರು ಹೇಳಿದರು, "ಊಟಕ್ಕೆ ಒಳ್ಳೆಯ ಆಹ್ವಾನಗಳನ್ನು ಸ್ವೀಕರಿಸುವುದು ನನ್ನ ಅಭ್ಯಾಸ."ಆದರೆ ಅಮೇರಿಕದಲ್ಲಿ ಹೇಳುವಂತೆ ಉಚಿತ ಊಟ ಎಂಬುದಿಲ್ಲ, ಆದ್ದರಿಂದ ನಾನು ಎರಡು ಷರತ್ತುಗಳೊಂದಿಗೆ ಆಹ್ವಾನವನ್ನು ಸ್ವೀಕರಿಸುತ್ತೇನೆ. ನಾನು ಮೇಘಾಲಯ ರಾಜ್ಯಕ್ಕೆ ಭೇಟಿ ನೀಡುವ ಮೊದಲು ಕನಿಷ್ಠ ಒಂದು ಗುಂಪು ವಿದ್ಯಾರ್ಥಿಗಳು (ಹುಡುಗ-ಹುಡುಗಿಯರು) ಮತ್ತು ಒಂದು ಗುಂಪು ಶಾಸಕರನ್ನು ಭೇಟಿಯಾಗುತ್ತೇನೆ ಮತ್ತು ಇದು 2024ರಲ್ಲಿ ನಡೆಯಬೇಕು.

ಕೌಶಲ್ಯ ಅಭಿವೃದ್ಧಿಯನ್ನು ಅರ್ಥಮಾಡಿಕೊಳ್ಳಬೇಕು. ಇದು ನಾವು ಕಂಡುಹಿಡಿಯುತ್ತಿರುವ ಅಥವಾ ಇನ್ನೋವೇಟ್ಮಾಡ್ತಿರುವ ವಿಷಯವಲ್ಲ. ನಮಗೆ ಕೊಳವೆ ಕೆಲಸಗಾರ (ಪ್ಲಂಬರ್) ಬೇಕಾಗುತ್ತಾನೆ, ವಿದ್ಯುತ್ ತಂತ್ರಜ್ಞ ಬೇಕಾಗುತ್ತಾನೆ, ಚಾಲಕ ಬೇಕಾಗುತ್ತಾನೆ, ಬಡಗಿ ಬೇಕಾಗುತ್ತಾನೆ, ನಮ್ಮ ಕಂಪ್ಯೂಟರ್ನೊಂದಿಗೆ ವ್ಯವಹರಿಸಬಲ್ಲ ಯಾರಾದರೂ ಬೇಕಾಗುತ್ತಾರೆ. ನಮಗೆ ಅವರ ಅಗತ್ಯವಿದೆ, ಅವರು ಈಗಾಗಲೇ ಇದ್ದಾರೆ. ಕೌಶಲ್ಯ ಎಂದರೆ ನಿಮ್ಮಿಂದ ಅತ್ಯುತ್ತಮವನ್ನು ಪಡೆಯುವುದು, ನಿರ್ದಿಷ್ಟ ಕ್ಷೇತ್ರದಲ್ಲಿ ವ್ಯಕ್ತಿಯ ಪ್ರತಿಭೆಯ ಅತ್ಯುತ್ತಮ ಬಳಕೆಯೇ ಕೌಶಲ್ಯ ಮತ್ತು ಅದು ಮಾನವ ಸಂಪನ್ಮೂಲಕ್ಕೆ ಗುಣಾತ್ಮಕ ಮುನ್ನಡೆಯನ್ನು ನೀಡುತ್ತದೆ.

ಪ್ರಧಾನಮಂತ್ರಿಯವರು ಈ ಅಂಶದ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ ಮತ್ತು ನಿರಂತರವಾಗಿ ಇದರ ಬಗ್ಗೆ ಚಿಂತನೆ ನಡೆಸಿದ್ದಾರೆ ಮತ್ತು ದೊಡ್ಡ ಬದಲಾವಣೆ ಬಂದಿದೆ.

ಒಂದು, ಇದಕ್ಕಾಗಿಯೇ ಒಂದು ಪ್ರತ್ಯೇಕ ಸಚಿವಾಲಯವಿದೆ.

ಎರಡು, ಐದು ವರ್ಷಗಳ ಅವಧಿಯಲ್ಲಿ 60,000 ಕೋಟಿ ರೂಪಾಯಿಗಳ ಹಂಚಿಕೆ ಮಾಡಲಾಗಿದೆ, ಇದರಲ್ಲಿ ಐದು ಲಕ್ಷ ಯುವಕರಿಗೆ ಇಂತಹ ಇಂಟರ್ನ್ಶಿಪ್ ಅವಕಾಶ ನೀಡಲಾಗುವುದು.

ಈಗ, ನಾವು ಇದರ ಬಗ್ಗೆ ಯೋಚಿಸುವಾಗ, ನಾವು ಇದನ್ನು ಅಗತ್ಯತೆಗೆ ಹತ್ತಿರವಾಗಿಸಬೇಕು. ಗ್ರಾಮಗಳು ಮತ್ತು ಅರೆ-ನಗರ ಪಟ್ಟಣಗಳು ಒಂದು ರೀತಿಯ ಕೌಶಲ್ಯ ಕೇಂದ್ರಗಳ ಹಬ್ ಆಗಬೇಕು. ಕೆಲವು ಕಡೆ ಅವುಗಳನ್ನು ಶ್ರೇಣೀಕರಿಸಬಹುದು, ಮಾನವ ಸಂಪನ್ಮೂಲದ ಅಗತ್ಯತೆಗಳಿಗಾಗಿ ಹೆಚ್ಚಿನ ಮಟ್ಟದ ನಗರೀಕರಣ ಬೇಕಾಗುತ್ತದೆ. ಆದರೆ ಇದು ಒಂದು ದೊಡ್ಡ ಗೇಮ್ ಚೇಂಜರ್ ಆಗಲಿದೆ ಮತ್ತು ಮೇಘಾಲಯ ರಾಜ್ಯಕ್ಕೆ ಈ ಕೌಶಲ್ಯವು ಅದ್ಭುತಗಳನ್ನು ತರಬಹುದು. ನಿಮ್ಮ ಪಯಣದಲ್ಲಿ ಹಂತ ಹಂತವಾದ ಬೆಳವಣಿಗೆ, ಉದಾಹರಣೆಗೆ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ದೊಡ್ಡ ಆರ್ಥಿಕ ಪ್ರಗತಿ ಸಾಧ್ಯವಾಗಲಿದೆ. ಪ್ರಕೃತಿ ನಿಮಗೆ ಅಪಾರವಾದ ಉಡುಗೊರೆಯನ್ನು ನೀಡಿದೆ. ತುಂಬಾ ಸಮತೋಲಿತವಾಗಿದೆ, ಇಡೀ ಪ್ರದೇಶವು ಪ್ರಕೃತಿಯಿಂದ ಹವಾ ನಿಯಂತ್ರಿತವಾಗಿದೆ. ಕಲ್ಪಿಸಿಕೊಳ್ಳಿ, ಬೇರೆಡೆ ನಾವು ಕಷ್ಟಪಡುತ್ತಿದ್ದೇವೆ.

ಪ್ರವಾಸೋದ್ಯಮವೇ ಹಲವಾರು ದೇಶಗಳ ಆರ್ಥಿಕತೆಯನ್ನು ನಿರ್ವಹಿಸುತ್ತಿದೆ. ನೀವು ಮಾನವ ಸಂಪನ್ಮೂಲದ ರೂಪದಲ್ಲಿ ಅತ್ಯಂತ ಪ್ರತಿಭಾವಂತ ಕುಶಲ ವ್ಯಕ್ತಿಗಳನ್ನು ಹೊಂದುವ ಮೂಲಕ ಇದನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಪ್ರತಿ ಪ್ರವಾಸಿಯು ವೃತ್ತಿಪರತೆ ಮತ್ತು ಶ್ರೇಷ್ಠತೆಯ ಸ್ಮರಣೀಯ ಕ್ಷಣಗಳನ್ನು ಹೊತ್ತೊಯ್ಯುತ್ತಾನೆ, ಏಕೆಂದರೆ ಉಳಿದ ವಿಷಯಗಳನ್ನು ನಿಸರ್ಗ ನಿಮಗೆ ನೀಡಿದೆ. ನಿಮ್ಮ ಆರ್ಥಿಕತೆಯ ಎಂಜಿನ್ ಅನ್ನು ಪ್ರವಾಸೋದ್ಯಮದಿಂದ ಮಾತ್ರ ಮತ್ತು ಎಲ್ಲಾ ಸಿಲಿಂಡರ್ಗಳಲ್ಲಿ ಚಲಾಯಿಸಬಹುದು. ಮಾನ್ಯ ಮುಖ್ಯಮಂತ್ರಿಯವರೊಂದಿಗೆ ಮಾತನಾಡುವಾಗ ಅವರು ಒಂದು ಯೋಜನೆ ಹೊಂದಿದ್ದಾರೆ ಎಂದು ತಿಳಿದು ನಾನು ಸಂತೋಷಪಟ್ಟೆ. ಯೋಜನೆಯು ಕಾರ್ಯಗತಗೊಳ್ಳುತ್ತಿದೆ. ಆದರೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬ ಹುಡುಗ ಮತ್ತು ಹುಡುಗಿ ತಾಳ್ಮೆಯಿಂದಿರಿ ಎಂದು ನಾನು ಸಲಹೆ ನೀಡುತ್ತೇನೆ, ಮುಖ್ಯಮಂತ್ರಿಗಳು ಸೇರಿರುವ 15% ವರ್ಗದವರು ತಾಳ್ಮೆಯಿಂದ ಇರಬಾರದು ಎಂದು ನಾನು ಬಯಸುತ್ತೇನೆ, 24x7 ಕಾರ್ಯನಿರತರಾಗಿರಬೇಕು, ಏಕೆಂದರೆ ನಾವು ಅವರ ಭವಿಷ್ಯವನ್ನು ರೂಪಿಸಿದರೆ, ಅವರ ವೃತ್ತಿಜೀವನವನ್ನು ರೂಪಿಸಿದರೆ, ಅವರನ್ನು ಒತ್ತಡ ಮತ್ತು ಆತಂಕದಿಂದ ದೂರವಿರಿಸಿದರೆ, ವಿಫಲತೆಯ ಭಯದಿಂದ ದೂರವಿರಿಸಿದರೆ, ನಾವು ದೇಶದ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ. ಆದ್ದರಿಂದ, ಇದನ್ನು ಮಾಡಲೇಬೇಕು.

ಕೌಶಲ್ಯ ಅಭಿವೃದ್ಧಿಯು ಸ್ವತಃ ಸಾಮರ್ಥ್ಯ ನಿರ್ಮಾಣವಾಗಿದೆ. ನಾನು ಸ್ವತಃ ನೋಡಿದ್ದೇನೆ, ನಾವು ಮೊದಲ ಹೆಜ್ಜೆ ಇಡುವುದಿಲ್ಲ, ನಾವು ಅದಕ್ಕೆ ಹೆದರುತ್ತೇವೆ, ಅದು ಕಷ್ಟ ಎಂದು ಭಾವಿಸಿ ಹೆದರುತ್ತೇವೆ. ನಾನು ನಿಮಗೆ ಹೇಳುತ್ತೇನೆ, ನಮ್ಮ ಯುವಜನತೆ ಇಡಲಾಗದ ಯಾವುದೇ ಹೆಜ್ಜೆ ಇಲ್ಲ. ಎಲ್ಲರೂ ಸಮಾನರು, ನೀವು ನಿಮ್ಮ ಮನೋಭಾವ ಮತ್ತು ಸಾಮರ್ಥ್ಯದಿಂದ ಮಾರ್ಗದರ್ಶನ ಪಡೆಯಬೇಕು. ಅಲ್ಲಿ, ನಿಮ್ಮ ಮನಸ್ಸಿನಲ್ಲಿ ಒಂದು ಆಲೋಚನೆ ಬಂದರೆ, ದಯವಿಟ್ಟು ನಿಮ್ಮ ಮನಸ್ಸನ್ನು ಪಾರ್ಕಿಂಗ್ ಸ್ಥಳವನ್ನಾಗಿ ಮಾಡಬೇಡಿ, ನಿಮ್ಮ ಮನಸ್ಸು ನಾವೀನ್ಯತೆಯ ಕುಲುಮೆ ಆಗಿರಬೇಕು. ಪ್ರಯತ್ನಿಸಿ, ವಿಫಲತೆಗೆ ಹೆದರಬೇಡಿ ಏಕೆಂದರೆ ವಿಫಲತೆಗಳು ನಿಜವಾಗಿಯೂ ಇಲ್ಲವೇ ಇಲ್ಲ.

ಗಾಜು ಅರ್ಧ ಖಾಲಿಯಾಗಿದೆ ಎಂದು ಯಾವಾಗಲೂ ಹೇಳುವ ಜನರಿದ್ದಾರೆ, ಅವರನ್ನು ಕೇಳಬೇಡಿ. ಗಾಜು ಅರ್ಧ ತುಂಬಿದೆ ಎಂದು ಹೇಳುವವರನ್ನು ಕೇಳಿ. ಪಶ್ಚಿಮ ಬಂಗಾಳ ರಾಜ್ಯದ ರಾಜ್ಯಪಾಲರಾಗಿ, ಮಧ್ಯರಾತ್ರಿಯ ನಂತರ ಸುಮಾರು 2 AM ರ ಸಮಯದಲ್ಲಿ, ಚಂದ್ರಯಾನ-2 ಚಂದ್ರನ ಮೇಲ್ಮೈಗೆ ತುಂಬಾ ಹತ್ತಿರವಾಗಿತ್ತು ಆದರೆ ತಲುಪಲಿಲ್ಲ. ಕೆಲವರು ಇದನ್ನು ವಿಫಲತೆ ಎಂದು ಪರಿಗಣಿಸಿದರು. ಚಂದ್ರಯಾನ-3 ಯಶಸ್ಸನ್ನು ಪ್ರದರ್ಶಿಸಿದೆ. ಚಂದ್ರನ ಆ ಭಾಗದಲ್ಲಿ ತನ್ನ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ವಿಶ್ವದ ಏಕೈಕ ರಾಷ್ಟ್ರವಾಗಿ ಭಾರತಕ್ಕೆ ಸ್ಥಾನಮಾನ ನೀಡಿದೆ. ಇದು ಮುಖ್ಯವಾಗಿ ಚಂದ್ರಯಾನ್-2 ರಿಂದಾಗಿತ್ತು

ಕೌಶಲ್ಯ ಅಭಿವೃದ್ಧಿ ಉತ್ತಮವಾಗಿದೆ, ಆರ್ಥಿಕತೆಯ ಬೆಳವಣಿಗೆ ಉತ್ತಮವಾಗಿದೆ ಆದರೆ ಇನ್ನೊಂದು ಮನೋಭಾವ ಮತ್ತು ರಾಷ್ಟ್ರೀಯತೆಯ ಮನೋಭಾವ ಇರಬೇಕು. ಈಶಾನ್ಯವು ಸಾಂಸ್ಕೃತಿಕವಾಗಿ, ಜನಾಂಗೀಯವಾಗಿ, ಐತಿಹಾಸಿಕವಾಗಿ ಮತ್ತು ಆರ್ಥಿಕವಾಗಿ ದೇಶದ ಅತ್ಯಂತ ಮುಖ್ಯವಾದ ಭಾಗವಾಗಿದೆ. 90 ರ ದಶಕದಲ್ಲಿ, 'ಲುಕ್ ಈಸ್ಟ್' ಎಂಬ ದೊಡ್ಡ ಹೆಜ್ಜೆಯನ್ನು ಇಡಲಾಯಿತು. ಆದರೆ ಪ್ರಧಾನಮಂತ್ರಿ ಶ್ರೀ ಮೋದಿ ಅದಕ್ಕೆ ಅತ್ಯಾಧುನಿಕತೆಯನ್ನು ನೀಡಿದರು. 'ಲುಕ್ ಈಸ್ಟ್, ಆಕ್ಟ್ ಈಸ್ಟ್' ಎಂಬುದು ದೇಶದ ವ್ಯಾಪ್ತಿಯನ್ನು ಹೆಚ್ಚಿಸಿತು. ಮತ್ತು ಆ ಆಕ್ಟ್ ಈಸ್ಟ್ ಸಂವಹನವು ಅಲ್ಲಿ ದೊಡ್ಡ ಮಟ್ಟದಲ್ಲಿ ಸಂಪರ್ಕವನ್ನು ಪಡೆಯುತ್ತಿದೆ, ಸಂವಹನ ನಡೆಯುತ್ತಿದೆ, ವಿಮಾನ ನಿಲ್ದಾಣಗಳ ಸಂಖ್ಯೆ ದ್ವಿಗುಣಗೊಂಡಿದೆ ಮತ್ತು ಅದರಲ್ಲಿ ಹೆಚ್ಚಿನವು ಪೈಪ್ ಲೈನ್ನಲ್ಲಿವೆ. ಇದು ಉತ್ತಮ ಸ್ಥಳವಾಗಿದೆ. ಆದರೆ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹಲವಾರು ರೀತಿಯ ಸವಾಲುಗಳು ಎದುರಾಗುತ್ತವೆ.

ಒಂದು ವಿಷಯ ಸ್ಪಷ್ಟ, ಈಶಾನ್ಯ ರಾಜ್ಯಗಳು ಭಾರತ ದೇಶದ ಅಭಿವೃದ್ಧಿಯ ಕಕ್ಷೆಯಲ್ಲಿದೆ. ಈ ಭಾಗವು ದೇಶದ ಏಕತೆಗೆ, ಆರ್ಥಿಕ ಪ್ರಗತಿಗೆ, ಮತ್ತು ಸಾಂಸ್ಕೃತಿಕ ಸತ್ವಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ. ಇಂದಿನ ಸರ್ಕಾರದ ನೀತಿಯ ಕಾರಣದಿಂದ, ಉಪರಾಷ್ಟ್ರಪತಿಯಾಗಿ ನಾನು ಮೊದಲ ಬಾರಿಗೆ ASEAN ಸಮಾವೇಶದಲ್ಲಿ ಭಾಗವಹಿಸಿದಾಗ, ಆ ಪ್ರದೇಶದ ಅನೇಕ ದೇಶಗಳಲ್ಲಿ ಹೆಚ್ಚು ಆಸಕ್ತಿ ಕಾಣಿಸಿಕೊಂಡಿತು ಮತ್ತು ಅದು ಯಶಸ್ವಿಯಾಗಿ ನೆರವೇರುತ್ತಿದೆ. ನಾವು ಹೊಂದಿರುವ ಪ್ರಭಾವದ ಕುರಿತು ನಾನು ಮಾತನಾಡಿದಾಗ, ವಿಷಯಗಳು ಸರಿಯಾದ ಚೌಕಟ್ಟಿನಲ್ಲಿವೆ ಎಂದು ನಾನು ನಿಮಗೆ ಹೇಳಬಲ್ಲೆ. ಆದರೆ ನಮ್ಮಲ್ಲಿರುವ ಕೆಲವರು ಅಜ್ಞಾನದಿಂದಲೋ ಅಥವಾ ತಪ್ಪು ಮಾಹಿತಿಯಿಂದಲೋ ದೇಶವೆಂದರೇನು ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಿಲ್ಲ.

ರಾಷ್ಟ್ರವನ್ನು ಇದು ಎಷ್ಟು ರಸ್ತೆಗಳನ್ನು, ಎಷ್ಟು ಅಣೆಕಟ್ಟೆಗಳನ್ನು, ಎಷ್ಟು ವಿಮಾನ ನಿಲ್ದಾಣಗಳನ್ನು ಹೊಂದಿದೆ ಎಂಬುದರ ಆಧಾರದ ಮೇಲೆ ವಿಭಜಿಸಲಾಗುವುದಿಲ್ಲ. ನಾವು ಸಂಪೂರ್ಣ ಒಂದೇ, ಇದೇ ನಮ್ಮ ಹೆಗ್ಗಳಿಕೆಯ ಗುರುತು. ಇಷ್ಟು ಶತಮಾನಗಳಿಂದ ಹೊರಗಿನ ದಾಳಿಗಳಿಗೆ ಸಿಲುಕಿದರೂ, ನಮ್ಮ ಗುರುತು ಉಳಿದಿದೆ. ಆದ್ದರಿಂದ, ಹುಡುಗ ಮತ್ತು ಹುಡುಗಿಯರೇ, ಹೊಣೆಗಾರಿಕೆ ನಿಮ್ಮ ಮೇಲಿದೆ. ಜವಾಬ್ದಾರಿ ನಿಮ್ಮದಾಗಿದೆ. ಸೂಕ್ತ ತಿಳುವಳಿಕೆ ಇರಲಿ.

ತಾಂತ್ರಿಕ ಪ್ರಗತಿಗೆ ಧನ್ಯವಾದಗಳು, ವಿಚ್ಛಿದ್ರಕಾರಕ ತಂತ್ರಜ್ಞಾನಗಳಿಗೆ ಧನ್ಯವಾದಗಳು. ಈಗ  ಎಲ್ಲರಿಗೂ ಅಭಿವ್ಯಕ್ತಿಯ ಹಕ್ಕು ಲಭ್ಯವಾಗಿದೆ. ಹಿಂದೊಮ್ಮೆ ಈ ಅಭಿವ್ಯಕ್ತಿ ಪತ್ರಿಕೆಗಳು, ಟಿವಿ ಚಾನೆಲ್ ಗಳ ನಿಯಂತ್ರಣದಲ್ಲಿತ್ತು. ಸಾರ್ವಜನಿಕ ವಲಯದಲ್ಲಿ ಅದಕ್ಕೆ ಬದಲಾದ ಮಾರ್ಗವಿರಲಿಲ್ಲ. ಈಗ, ತಕ್ಷಣವೇ ನಾವು ನಮ್ಮದೇ ಅಭಿವ್ಯಕ್ತಿಯ ಕೇಂದ್ರಬಿಂದುವಾಗಿದ್ದೇವೆ, ಆದರೆ ನಾವು ದೇಶದ ಮೇಲಿನ ಮೂಲಭೂತ ಬದ್ಧತೆಯನ್ನು ನಿರ್ಲಕ್ಷಿಸಿ ನಿರ್ಬಂಧವಿಲ್ಲದಂತೆ ನಡೆದುಕೊಳ್ಳಬಹುದೇ? ನಾವು ಸಾರ್ವಜನಿಕ ವೇದಿಕೆಗಳಲ್ಲಿ ವಾಸ್ತವಿಕ ಆಧಾರವಿಲ್ಲದ ಮಾಹಿತಿಯ ಸ್ವಚ್ಛಂದ ಹರಡುವಿಕೆ ಅವಕಾಶ ನೀಡಬಹುದೇ? ಇಂದು ರಾಷ್ಟ್ರದ ಸ್ಥಿತಿಯ ಬಗ್ಗೆ ನಾನು ಹೇಳಲು ಬಯಸುತ್ತೇನೆ. ಇಡೀ ಜಗತ್ತು ಭಾರತ, ಅದರ ಆರ್ಥಿಕತೆ, ಅದರ ಸಮೃದ್ಧಿ, ಅದರ ನವೀನತೆ, ಅದರ ಮಾನವ ಸಂಪನ್ಮೂಲ, ಅದರ ಸೃಜನಶೀಲತೆಯನ್ನು ಮೆಚ್ಚುತ್ತಿದೆ.

1.4 ಶತಕೋಟಿ ಜನಸಂಖ್ಯೆಯನ್ನು ಹೊಂದಿರುವ ಒಂದು ರಾಷ್ಟ್ರವು ಪ್ರತಿಯೊಂದು ಗ್ರಾಮದಲ್ಲಿಯೂ ಸಾಮಾನ್ಯವಾಗಿ ಇಂಟರ್ನೆಟ್ ಸಂಪರ್ಕವನ್ನು ಹೊಂದಿದೆ, ಪ್ರತಿಯೊಂದು ಮನೆಯಲ್ಲಿಯೂ ವಿದ್ಯುತ್ ಇದೆ ಎಂಬುದನ್ನು ಅವರು ನಂಬಲು ಸಾಧ್ಯವಿಲ್ಲ. ಪ್ರತಿಯೊಂದು ಮನೆಯಲ್ಲಿಯೂ ಕೊಳಾಯಿ ನೀರು ಬರುವ ದಿನ ದೂರವಿಲ್ಲ. ಇವು ದೊಡ್ಡ ವಿಷಯಗಳು, ಆದರೆ ಈ ದೊಡ್ಡ ಟಿಕೆಟ್ ಸಾಧನೆಗಳು ನೆಲದ ವಾಸ್ತವವಾಗಿವೆ. ಆದ್ದರಿಂದ, ಹುಡುಗರು ಮತ್ತು ಹುಡುಗಿಯರು, ನೀವು ನಮಗಿಂತ ಹೆಚ್ಚು ಅದೃಷ್ಟವಂತರು. ಭಾರತ ಎಂದು ಕರೆಯಲ್ಪಡುವ ಭೂಮಿಯಲ್ಲಿ ವಾಸಿಸಲು ನೀವು ನಿಜವಾಗಿಯೂ ಅದೃಷ್ಟಶಾಲಿಯಾಗಿದ್ದೀರಿ. ನಮ್ಮ ಸಾಂಸ್ಕೃತಿಕ ಸಂಪತ್ತಿನಲ್ಲಿ ಬೇರೆ ಯಾವ ದೇಶವು ಪ್ರತಿಸ್ಪರ್ಧಿಯಾಗಬಲ್ಲದು? ಬೇರೆ ಯಾವ ದೇಶವೂ ಇಲ್ಲ. ನಮ್ಮ ಭಾರತದಂತೆ ಯಾವ ದೇಶವು ಜ್ಞಾನ, ಬುದ್ಧಿವಂತಿಕೆಯ ಭಂಡಾರವೆಂದು ಹೇಳಿಕೊಳ್ಳಬಹುದು? 

ಆದ್ದರಿಂದ ನಮ್ಮ ಯುವ ಸ್ನೇಹಿತರನ್ನು ನಾನು ಬೇಡಿಕೊಳ್ಳುತ್ತೇನೆ, 2047ರಲ್ಲಿ ನಾವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ನೀವು ಅತ್ಯಂತ ಮುಖ್ಯವಾದ ಕೊಡುಗೆದಾರರು. ನೀವು ಅತ್ಯಂತ ಮಹತ್ವದ ಪಾಲುದಾರರು, ನೀವು ಆ ಎಂಜಿನ್ನ ಚಾಲಕರು ಮತ್ತು ಆ ಎಂಜಿನ್ ವಿಫಲವಾಗುವುದಿಲ್ಲ ಎಂಬುದರಲ್ಲಿ ನನಗೆ ಸಂಶಯವಿಲ್ಲ.

ಸುತ್ತಲೂ ನೋಡಿ, ಸ್ವರ್ಗವಿದ್ದರೆ, ಅದು ಭಾರತದಲ್ಲಿದೆ. ದೈವೀ ಚೈತನ್ಯವಿದ್ದರೆ, ಅದು ಮೇಘಾಲಯದಲ್ಲಿದೆ. ಹುಡುಗ ಮತ್ತು ಹುಡುಗಿಯರೇ, ಈ ಕ್ಷಣದಲ್ಲಿ ಅಭಿವೃದ್ಧಿಯಾಗುತ್ತಿರುವ ಭಾರತವನ್ನು ತಡೆಯಲಾಗದು ಎಂಬ ಸಂಪೂರ್ಣ ವಿಶ್ವಾಸದೊಂದಿಗೆ ನಾನು ಈ ಸ್ಥಳವನ್ನು ತೊರೆಯುತ್ತಿದ್ದೇನೆ. ಈ ಅಭಿವೃದ್ಧಿಯನ್ನು ಯಾರೂ ತಡೆಯಲು ಸಾಧ್ಯವಿಲ್ಲ, ನಾನು ಆಶಾವಾದಿಯಾಗಿದ್ದೇನೆ ಏಕೆಂದರೆ ನಾನು ನಿಮ್ಮ ಸಾಮರ್ಥ್ಯವನ್ನು ನೋಡುತ್ತಿದ್ದೇನೆ. ನಿಮ್ಮ ಉದ್ದೇಶವನ್ನು ಓದಲು ಸಹ ಸಮರ್ಥನಾಗಿದ್ದೇನೆ, ಈ ರಾಷ್ಟ್ರವನ್ನು ಶ್ರೇಷ್ಠವಾಗಿಸಲು ನೀವು ನಿಮ್ಮ ಎಲ್ಲಾ ಶಕ್ತಿಯನ್ನು ಬಳಸಿಕೊಳ್ಳುತ್ತೀರಿ ಎಂದು ನನಗೆ ತಿಳಿದಿದೆ. ನಿಮ್ಮನ್ನು ನೀವು ಯೋಗ್ಯ ನಾಗರಿಕರನ್ನಾಗಿ ಮಾಡಿಕೊಳ್ಳಿ ಮತ್ತು ನಿಮ್ಮ ಕುಟುಂಬಗಳು ಮತ್ತು ಶಿಕ್ಷಕರನ್ನು ಸದಾ ಹೆಮ್ಮೆಪಡುವಂತೆ ಮಾಡಿ. ನಾನು ನಿಜವಾಗಿಯೂ ಈ ಅನನ್ಯ ಕಾರ್ಯಕ್ರಮದ ಭಾಗವಾಗಲು ಹೆಮ್ಮೆಪಡುತ್ತೇನೆ.


ಧನ್ಯವಾದಗಳು

 

*****


(Release ID: 2065758) Visitor Counter : 39


Read this release in: English , Urdu , Hindi