ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಅಲ್ಜೀರಿಯಾದಲ್ಲಿ ಭಾರತದ ರಾಷ್ಟ್ರಪತಿಗಳು; ಅಲ್ಜೀರಿಯಾದ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಯನ್ನು ನಡೆಸಿದರು ಮತ್ತು ನಿಯೋಗ ಮಟ್ಟದ ಮಾತುಕತೆಗಳನ್ನು ಮುನ್ನಡೆಸಿದರು


ರಾಷ್ಟ್ರಪತಿ ಮುರ್ಮು ಅಲ್ಜೀರಿಯಾದ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು

ಅಲ್ಜೀರಿಯಾದಲ್ಲಿರುವ ಭಾರತೀಯ ಸಮುದಾಯವು ಭಾರತದ ಹಿತಾಸಕ್ತಿ ಮತ್ತು ಮೃದು ಶಕ್ತಿಯನ್ನು ಮುಂದಕ್ಕೆ ತೆಗೆದುಕೊಳ್ಳುವ ಸೇತುವೆಯಾಗಿದೆ: ರಾಷ್ಟ್ರಪತಿ ಮುರ್ಮು

ಅಲ್ಜೀರಿಯಾ ಭಾರತ ಆರ್ಥಿಕ ವೇದಿಕೆಯಲ್ಲಿ ಭಾಗವಹಿಸಿದರು

ಭಾರತ-ಅಲ್ಜೀರಿಯಾ ಆರ್ಥಿಕ ಸಂಬಂಧಗಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಲು ಸಾಧ್ಯವಾಗಿಲ್ಲ - ರಾಷ್ಟ್ರಪತಿ ಮುರ್ಮು

Posted On: 14 OCT 2024 11:00PM by PIB Bengaluru

ಭಾರತದ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಅಲ್ಜೀರಿಯಾ, ಮೌರಿಟಾನಿಯಾ ಮತ್ತು ಮಲಾವಿಗಳಿಗೆ ತಮ್ಮ ಅಧಿಕೃತ ಭೇಟಿಯ ಮೊದಲ ಹಂತದಲ್ಲಿ ನಿನ್ನೆ ಸಂಜೆ (ಅಕ್ಟೋಬರ್ 13, 2024) ಅಲ್ಜೀರಿಯಾದ ಅಲ್ಜೀರ್ಸ್ ತಲುಪಿದರು. ವಿಶೇಷ  ಗೌರವ ಸೂಚಕವಾಗಿ, ಅಲ್ಜೀರಿಯಾದ ಅಧ್ಯಕ್ಷ ಅಬ್ದೆಲ್ಮಡ್ಜಿದ್ ಟೆಬ್ಬೌನ್ ಅವರು ವಿಮಾನ ನಿಲ್ದಾಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಬರಮಾಡಿಕೊಂಡರು ಮತ್ತು ಅವರಿಗೆ ವಿಧ್ಯುಕ್ತ ಸ್ವಾಗತವನ್ನು ನೀಡಿದರು.

ಅಲ್ಜೀರಿಯಾಕ್ಕೆ ಭಾರತದ ರಾಷ್ಟ್ರಪತಿಯೊಬ್ಬರ ಮೊದಲ ಭೇಟಿ ಇದಾಗಿದೆ.

ಈ ಅಧಿಕೃತ ಪ್ರವಾಸದಲ್ಲಿ ರಾಷ್ಟ್ರಪತಿಗಳೊಂದಿಗೆ ರಾಜ್ಯ ಸಚಿವರಾದ ಶ್ರೀ ಸುಕನತಾ ಮಜುಂದಾರ್ ಮತ್ತು ಸಂಸದರಾದ ಶ್ರೀ ಮುಖೇಶ್ ಕುಮಾರ್ ದಲಾಲ್ ಮತ್ತು ಶ್ರೀ ಅತುಲ್ ಗಾರ್ಗ್ ಇದ್ದಾರೆ.

ನಿನ್ನೆ ಸಂಜೆ, ಅಲ್ಜೀರಿಯಾದಲ್ಲಿ ಭಾರತದ ರಾಯಭಾರಿ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ರಾಷ್ಟ್ರಪತಿಗಳು ಅಲ್ಜೀರ್ಸ್ ನಲ್ಲಿರುವ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದರು.

ಅಲ್ಜೀರಿಯಾದ ಎಲ್ಲಾ ಭಾಗಗಳಿಂದ ಈ ಸಮಾರಂಭಕ್ಕಾಗಿ ಅಲ್ಜೀರ್ಸ್ ಗೆ ಪ್ರಯಾಣಿಸಿದ ಭಾರತೀಯ ಸಮುದಾಯದ ಸದಸ್ಯರ ಉತ್ಸಾಹಭರಿತ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳಾದ, ಅಲ್ಜೀರಿಯಾದ ಆರ್ಥಿಕತೆಗೆ ಅವರ ಕೊಡುಗೆಯನ್ನು ಶ್ಲಾಘಿಸಿದರು. ಭಾರತ ಸರ್ಕಾರ ಮತ್ತು ಭಾರತ ದೇಶದ ಸಮಾಜವು ಯಾವಾಗಲೂ ಭಾರತದ ಸ್ಥಾನ, ಪ್ರತಿಷ್ಠೆ ಮತ್ತು ವಿದೇಶದಲ್ಲಿ ನಿಲ್ಲುವಲ್ಲಿ ಭಾರತೀಯ ಸಮುದಾಯದ ಕೊಡುಗೆಯನ್ನು ಗೌರವಿಸುತ್ತದೆ ಮತ್ತು ಪ್ರಶಂಸಿಸುತ್ತಿದೆ ಎಂದು ಅವರು ಹೇಳಿದರು. ಅಲ್ಜೀರಿಯಾದಲ್ಲಿರುವ ಭಾರತೀಯ ಸಮುದಾಯವು ಭಾರತದ ಹಿತಾಸಕ್ತಿ ಮತ್ತು ಮೃದು ಶಕ್ತಿಯನ್ನು ಮುಂದಕ್ಕೆ ಕೊಂಡೊಯ್ಯುವ ಸೇತುವೆಯಾಗಿದೆ. ಅವರು ತಮ್ಮ ಸಾಧನೆಗಳಿಂದ ಭಾರತವನ್ನು ಹೆಮ್ಮೆಪಡುವಂತೆ ಮಾಡುವುದನ್ನು ಮುಂದುವರಿಸುತ್ತಾರೆ ಮತ್ತು ಭಾರತ ಅಲ್ಜೀರಿಯಾ ಸಂಬಂಧಗಳ ಸುಧಾರಣೆಗಾಗಿ ಕೆಲಸ ಮಾಡುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಬೆಳಿಗ್ಗೆ (ಅಕ್ಟೋಬರ್ 14, 2024) ತನ್ನ ಕಾರ್ಯಕ್ರಮದ ಮೊದಲ   ಭಾಗವಾಗಿ, ರಾಷ್ಟ್ರಪತಿಗಳು ಅಲ್ಜೀರಿಯಾದ ಮಕಾಮ್ ಎಚಾಹಿದ್ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು ಮತ್ತು ಅಲ್ಜೀರಿಯಾದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣ ತ್ಯಾಗ ಮಾಡಿದ ಸೈನಿಕರಿಗೆ ಗೌರವ ಸಲ್ಲಿಸಿದರು. ಅಲ್ಜೀರಿಯಾದ ವಿಮೋಚನೆಗಾಗಿ ನಡೆಸಿದ ಹೋರಾಟದ ಸ್ಮಾರಕಗಳನ್ನು ಹೊಂದಿರುವ ಮೌದ್ಜಾಹಿದ್ ರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೆ  ಅವರು ಭೇಟಿ ನೀಡಿದರು.

ನಂತರ, ರಾಷ್ಟ್ರಪತಿಗಳು ಎಲ್ ಮೌರಾಡಿಯಾ ಅರಮನೆಗೆ ಭೇಟಿ ನೀಡಿದರು, ಅಲ್ಲಿ ಅವರು ಅಲ್ಜೀರಿಯಾದ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ ನ  ಅಧ್ಯಕ್ಷರಾದ ಶ್ರೀ ಅಬ್ದೆಲ್ಮಡ್ಜಿದ್ ಟೆಬ್ಬೌನ್ ಅವರೊಡನೆ ಮಾತುಕತೆ ನಡೆಸಿದರು. ಉಭಯ ನಾಯಕರು ವ್ಯಾಪಾರ ಮತ್ತು ಹೂಡಿಕೆಯ ಮೇಲೆ ವಿಶೇಷ ಗಮನ ಹರಿಸಿದ ಭಾರತ ಅಲ್ಜೀರಿಯಾ ಸಂಬಂಧಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಮಾರ್ಗಗಳ ಬಗ್ಗೆ ಚರ್ಚಿಸಿದರು, ರಾಷ್ಟ್ರಪತಿ ಮುರ್ಮು ಅವರು ಅಲ್ಜೀರಿಯಾಕ್ಕೆ ಭಾರತದ ನಿರಂತರ ಬೆಂಬಲ ಮತ್ತು ಆಫ್ರಿಕಾಕ್ಕೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು. ಇಬ್ಬರೂ ನಾಯಕರು ನಿಯೋಗ ಮಟ್ಟದ ಮಾತುಕತೆಯ ನೇತೃತ್ವ ವಹಿಸಿದ್ದರು ಮತ್ತು ಪತ್ರಿಕೆಗಳಿಗೆ ಹೇಳಿಕೆಗಳನ್ನು ನೀಡಿದರು.

ಮುಂದಿನ  ಕಾರ್ಯಕ್ರಮದಲ್ಲಿ, ರಾಷ್ಟ್ರಪತಿಗಳು ಅಲ್ಜೀರಿಯನ್ ಎಕನಾಮಿಕ್ ರಿನ್ಯೂವಲ್ ಕೌನ್ಸಿಲ್ ಮತ್ತು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್ಐಸಿಸಿಐ) ಜಂಟಿಯಾಗಿ ಆಯೋಜಿಸಿದ ಅಲ್ಜೀರಿಯಾ ಭಾರತ ಆರ್ಥಿಕ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಭಾರತ ಅಲ್ಜೀರಿಯಾ ಸಂಬಂಧಗಳು ನಮ್ಮ ಮೌಲ್ಯಗಳು, ಸಾಮಾನ್ಯ ಸವಾಲುಗಳು ಮತ್ತು ಪರಸ್ಪರ ನಂಬಿಕೆಯನ್ನು ಆಧರಿಸಿವೆ ಎಂದು ಹೇಳಿದರು.

ಅಲ್ಜೀರಿಯಾದ ತ್ವರಿತ ಬೆಳವಣಿಗೆ ಮತ್ತು ವಿಸ್ತರಿಸುತ್ತಿರುವ ಆರ್ಥಿಕತೆಯು ವಿವಿಧ ಕ್ಷೇತ್ರಗಳಲ್ಲಿ ಅನೇಕ ಅವಕಾಶಗಳನ್ನು ನೀಡುತ್ತದೆ ಎಂದು ರಾಷ್ಟ್ರಪತಿಗಳು ಹೇಳಿದರು. ಅಲ್ಜೀರಿಯಾದ ಆರ್ಥಿಕತೆಯು ನೀಡುವ ಅವಕಾಶಗಳಲ್ಲಿ ತೊಡಗಿಸಿಕೊಂಡೇ ಇರಲು ಮತ್ತು ಹೂಡಿಕೆ ಮಾಡಲು ಅವರು ಭಾರತೀಯ ಕಂಪನಿಗಳನ್ನು ಒತ್ತಾಯಿಸಿದರು.

ಭಾರತ ಮತ್ತು ಅಲ್ಜೀರಿಯಾ ನಡುವಿನ ಒಟ್ಟಾರೆ ವ್ಯಾಪಾರವು 1.7 ಬಿಲಿಯನ್ ಯುಎಸ್ ಡಾಲರುಗಳಷ್ಟಿದೆ ಎಂದು ತಿಳಿದು ರಾಷ್ಟ್ರಪತಿಗಳು ಹರ್ಷ ವ್ಯಕ್ತಪಡಿಸಿದರು. ಆದರೂ, ಆರ್ಥಿಕ ಸಂಬಂಧಗಳು ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಶಕ್ತಿ, ನಿರ್ಮಾಣ, ಆಟೋಮೊಬೈಲ್ಗಳು, ರಸಗೊಬ್ಬರಗಳು ಮತ್ತು ಔಷಧೀಯ ಕ್ಷೇತ್ರದಲ್ಲಿ ನಮ್ಮ ನಿರಂತರ ಸಹಕಾರವನ್ನು ಬಲಪಡಿಸುವ ಅಗತ್ಯವನ್ನು ಮತ್ತು ಉಜ್ವಲ ಭವಿಷ್ಯಕ್ಕಾಗಿ ಹೊಸ ವ್ಯಾಪಾರ ಮತ್ತು ಹೂಡಿಕೆ ಉಪಕ್ರಮಗಳನ್ನು ಗುರುತಿಸುವ ಬಗ್ಗೆ ಅವರು ಒತ್ತಿ ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನ, ಐಟಿ, ಫಿನ್ ಟೆಕ್, ಫಾರ್ಮಾ, ಬಾಹ್ಯಾಕಾಶ, ಸ್ಟಾರ್ಟ್ಅಪ್ಗಳು ಮತ್ತು ನವೀಕರಿಸಬಹುದಾದಂತಹ ಕ್ಷೇತ್ರಗಳಲ್ಲಿ ಭಾರತವು ಅನೇಕ ಸಾಧನೆಗಳನ್ನು ಸಾಧಿಸಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ಈ ಕ್ಷೇತ್ರಗಳಲ್ಲಿನ ತನ್ನ ಅನುಭವಗಳನ್ನು ನಮ್ಮ ಅಲ್ಜೀರಿಯಾದ ಪಾಲುದಾರರೊಂದಿಗೆ ಹಂಚಿಕೊಳ್ಳಲು ಭಾರತವು ಸಂತೋಷವಾಗುತ್ತದೆ ಎಂದು ಅವರು ಹೇಳಿದರು. ಭಾರತದಲ್ಲಿನ ಸುಧಾರಣೆಗಳು ವ್ಯವಹಾರಗಳನ್ನು ಸ್ಥಾಪಿಸಲು ಮತ್ತು ಬೆಳೆಯಲು ಸುಲಭವಾಗಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ಭಾರತದ 'ಮೇಕ್ ಇನ್ ಇಂಡಿಯಾ' ಮತ್ತು 'ಮೇಕ್ ಫಾರ್ ದಿ ವರ್ಲ್ಡ್' ಉಪಕ್ರಮಗಳಿಗೆ ಜೊತೆಯಾಗಲು ಅವರು ಅಲ್ಜೀರಿಯಾದ ಕಂಪನಿಗಳನ್ನು ಆಹ್ವಾನಿಸಿದರು.

ಅಲ್ಜೀರಿಯಾಕ್ಕೆ ಅವರ ಭೇಟಿಯ ಸಂದರ್ಭದಲ್ಲಿ ಪತ್ರಿಕಾ ಹೇಳಿಕೆಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ರಾಷ್ಟ್ರಪತಿಗಳ ಭಾಷಣವನ್ನು ಹಿಂದಿಯಲ್ಲಿ ನೋಡಲು ಇಲ್ಲಿ ಕ್ಲಿಕ್ ಮಾಡಿ

ಅಲ್ಜೀರಿಯ ಭಾರತ ಆರ್ಥಿಕ ವೇದಿಕೆಯಲ್ಲಿ  ರಾಷ್ಟ್ರಪತಿಗಳ  ಭಾಷಣವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

*****


(Release ID: 2065174) Visitor Counter : 53


Read this release in: English , Urdu , Hindi