ಹಣಕಾಸು ಸಚಿವಾಲಯ
ನವದೆಹಲಿಯಲ್ಲಿ 3ನೇ ಆವೃತ್ತಿಯ ಕೌಟಿಲ್ಯ ಅರ್ಥಶಾಸ್ತ್ರ(ಆರ್ಥಿಕ) ಸಮ್ಮೇಳನ 2024(ಕೆಇಸಿ 2024) ಸಮಾಪನ
ಅವರು ಕೆಇಸಿ 202ರ ಪ್ರತಿನಿಧಿಗಳನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ವಿಶೇಷ ಭಾಷಣ; 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ಆರ್ಥಿಕತೆಯನ್ನಾಗಿ ಮಾಡುವ ನಿರಂತರ ಪ್ರಯತ್ನಕ್ಕೆ ಉತ್ಸಾಹ ಹುಟ್ಟುಹಾಕಿದ ಶ್ರೀ ಮೋದಿ
ಕಳೆದ ದಶಕದಲ್ಲಿ ಗಣನೀಯ ಸುಧಾರಣೆಗಳಿಂದಾಗಿ ಭಾರತವು ಆದ್ಯತೆಯ ಜಾಗತಿಕ ಹೂಡಿಕೆಯ ಗಮ್ಯತಾಣವಾಗಿ ಹೊರಹೊಮ್ಮಿದೆ: ಪ್ರಧಾನ ಮಂತ್ರಿ ಹೇಳಿಕೆ
ಭಾರತದ ಉನ್ನತ ಆರ್ಥಿಕ ಬೆಳವಣಿಗೆ, ಹಣಕಾಸಿನ ನಿರ್ವಹಣೆ ಮತ್ತು ಮೂಲಸೌಕರ್ಯ, ಉತ್ಪಾದನೆ ಮತ್ತು ತಂತ್ರಜ್ಞಾನದ ಮೇಲಿನ ಹೂಡಿಕೆ ಅವಲೋಕಿಸಿದ ಕೇಂದ್ರ ಹಣಕಾಸು ಸಚಿವರು; ಎಲ್ಲರನ್ನೂ ಒಳಗೊಂಡ ಬೆಳವಣಿಗೆ ಮತ್ತು ಸುಧಾರಣೆಗಳಿಗೆ ಸರ್ಕಾರದ ಬದ್ಧತೆ ಪುನರುಚ್ಚರಿಸಿದ ನಿರ್ಮಲಾ ಸೀತಾರಾಮನ್
ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಮೇಲೆ ಅದರ ದೂರಗಾಮಿ ಪ್ರಭಾವ ಬೀರುತ್ತಿದೆ: ಡಾ. ಜೈಶಂಕರ್
ಪ್ರಧಾನ ಮಂತ್ರಿಯವರ ನಾಯಕತ್ವ ಶ್ಲಾಘಿಸಿದ ಪ್ರೊ. ಜಗದೀಶ್ ಭಗವತಿ; ಆಂತರಿಕವಾಗಿ ಕಾಣುವ ನೀತಿಗಳಿಂದ ಹೆಚ್ಚಾಗಿ ತೆರೆದುಕೊಂಡು, ಉತ್ಪಾದಕತೆಯ ಆರ್ಥಿಕತೆಗೆ ಬದಲಾಗುವ ಜತೆಗೆ, ಸಮಯೋಚಿತ ಮಧ್ಯಸ್ಥಿಕೆಗೆ ಒತ್ತು ನೀಡಲಾಗಿದೆ.
ಹಸಿರು ಇಂಧನ, ತಂತ್ರಜ್ಞಾನ ಮತ್ತು ವ್ಯಾಪಾರ ಸುಧಾರಣೆಯಂತಹ ಕ್ಷೇತ್ರಗಳಲ್ಲಿ ಜಾಗತಿಕ ಕಾರ್ಯಸೂಚಿ ಹೊಂದಿಸಲು ಕೆಇಸಿ 2024 ಸಮ್ಮೇಳನವು ಭಾರತದ ಹೊಸ ಪಾತ್ರ ಪ್ರದರ್ಶಿಸಿದೆ; ಎಲ್ಲರನ್ನೂ ಒಳಗೊಂಡ ಬೆಳವಣಿಗೆ ಕಾಣುವ ಭಾರತದ ಆಕಾಂಕ್ಷೆಗಳನ್ನು ಮತ್ತು ಜಾಗತಿಕ ದಕ್ಷಿಣದ ಕಾರ್ಯತಂತ್ರದ ನಾಯಕನಾಗಿ ಅದರ ವಿಕಸನದ ಪಾತ್ರವನ್ನು ಎತ್ತಿ ತೋರಿಸಿದೆ.
ಭಾರತ ಮತ್ತು ಜಗತ್ತಿನಾದ್ಯಂತ 150ಕ್ಕೂ ಹೆಚ್ಚು ಪ್ರಮುಖ ಅರ್ಥಶಾಸ್ತ್ರಜ್ಞರು, ನೀತಿ ನಿರೂಪಕರು ಮತ್ತು ಶೈಕ್ಷಣಿಕ ಪ್ರವರ್ತಕರು ಕೆಇಸಿ 2024ರಲ್ಲಿ ಭಾಗಿ
Posted On:
07 OCT 2024 8:37PM by PIB Bengaluru
2024 ಅಕ್ಟೋಬರ್ 4ರಿಂದ 6ರ ವರೆಗೆ ನವದೆಹಲಿಯಲ್ಲಿ ನಡೆದ 3ನೇ ಆವೃತ್ತಿಯ ಕೌಟಿಲ್ಯ ಅರ್ಥಶಾಸ್ತ್ರ(ಆರ್ಥಿಕ) ಸಮ್ಮೇಳನ - ಕೆಇಸಿ 2024 ನಿನ್ನೆ ಯಶಸ್ವಿಯಾಗಿ ಸಮಾಪನಗೊಂಡಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೆಇಸಿ 2024 ಪ್ರತಿನಿಧಿಗಳನ್ನು ಉದ್ದೇಶಿಸಿ ವಿಶೇಷ ಭಾಷಣ ಮಾಡಿದರು, 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ಆರ್ಥಿಕತೆಯನ್ನಾಗಿ ಮಾಡುವ ದೇಶದ ನಿರಂತರ ಪ್ರಯತ್ನಕ್ಕೆ ಉತ್ಸಾಹ ಹುಟ್ಟುಹಾಕಿದರು. ಪ್ರಧಾನ ಮಂತ್ರಿ ಅವರ ವಿಕಸಿತ ಭಾರತದ ದೃಷ್ಟಿಕೋನವು ಮುಂದುವರಿದ ಆರ್ಥಿಕ ಬೆಳವಣಿಗೆ, ರಚನಾತ್ಮಕ ಬೆಳವಣಿಗೆ, ಸುಧಾರಣೆಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳುವ ಮೇಲೆ ಮುನ್ಸೂಚನೆ ನೀಡುತ್ತದೆ ಎಂದರು.
ಭಾರತ ಮತ್ತು ವಿಶ್ವಾದ್ಯಂತದ 150ಕ್ಕೂ ಹೆಚ್ಚು ಪ್ರಮುಖ ಅರ್ಥಶಾಸ್ತ್ರಜ್ಞರು, ನೀತಿ ನಿರೂಪಕರು ಮತ್ತು ಶೈಕ್ಷಣಿಕ ಪ್ರವರ್ತಕರು ಕೆಇಸಿ 2024ರಲ್ಲಿ ಭಾಗವಹಿಸಿದ್ದರು. ಇದನ್ನು ಇನ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್ ಗ್ರೋಥ್(ಐಇಜಿ), ಆರ್ಥಿಕ ವ್ಯವಹಾರಗಳ ಇಲಾಖೆ(ಡಿಇಎ) ಹಣಕಾಸು ಸಚಿವಾಲಯ(ಎಂಒಎಫ್) ಸಹಭಾಗಿತ್ವದಲ್ಲಿ ಆಯೋಜಿಸಲಾಗಿತ್ತು. ಇದು ಭಾರತ ಮತ್ತು ಜಗತ್ತು ಎದುರಿಸುತ್ತಿರುವ ಸಮಕಾಲೀನ ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳ ಕುರಿತು 11 ಸಮಗ್ರ ಅಧಿವೇಶನಗಳು, 12 ಸಂವಾದಾತ್ಮಕ ಕಲಾಪಗಳು ಮತ್ತು ದ್ವಿಪಕ್ಷೀಯ ಚರ್ಚೆಗಳನ್ನು ಒಳಗೊಂಡಿತ್ತು.
ಪ್ರಧಾನಮಂತ್ರಿ ಅವರು ತಮ್ಮ ಭಾಷಣದಲ್ಲಿ ಬ್ಯಾಂಕಿಂಗ್, ತೆರಿಗೆ ಮತ್ತು ಮೂಲಸೌಕರ್ಯ ಪ್ರಗತಿಗಳು ಸೇರಿದಂತೆ ಕಳೆದ ದಶಕದಲ್ಲಿ ಕೈಗೊಂಡಿರುವ ಗಣನೀಯ ಸುಧಾರಣೆಗಳಿಂದಾಗಿ ಭಾರತವು ಆದ್ಯತೆಯ ಜಾಗತಿಕ ಹೂಡಿಕೆಯ ಗಮ್ಯತಾಣವಾಗಿ ಹೊರಹೊಮ್ಮಿದೆ ಎಂದರಲ್ಲದೆ, ಹಸಿರು ಇಂಧನ ಉತ್ಪಾದನೆಗೆ ಭಾರತ ಹೊಂದಿರುವ ಬದ್ಧತೆಯನ್ನು ಪುನರುಚ್ಚರಿಸಿದರು, ಹಸಿರು ಹೈಡ್ರೋಜನ್ ಉಪಕ್ರಮ ಪ್ರಸ್ತಾಪಿಸಿದ ಅವರು, ಹೌಡ್ರೋಜನ್ ಮಿಷನ್ ಮತ್ತು ಜಾಗತಿಕ ಜೈವಿಕ ಇಂಧನ ಒಕ್ಕೂಟ ಸ್ಥಾಪನೆಯು ಭಾರತದ ಜಿ-20 ಅಧ್ಯಕ್ಷ ಅವಧಿಯ ನಿರ್ಣಾಯಕ ಫಲಿತಾಂಶಗಳಾಗಿವೆ ಎಂದರು.
ಇದಕ್ಕೂ ಮೊದಲು, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಕೆಇಸಿ 2024ರ ಉದ್ಘಾಟನಾ ಭಾಷಣ ಮಾಡಿ, ಭಾರತದ ಸದೃಢವಾದ ಬೃಹತ್ ಅರ್ಥ ವ್ಯವಸ್ಥೆಯ ಭದ್ರ ತಳಹದಿಯು(ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು) ಬಹು ಅನಿಶ್ಚಿಯಗಳನ್ನು ಪರಿಹರಿಸುವ ಸಾಮರ್ಥ್ಯ ಹೊಂದಿದೆ ಎಂದರು.
ಭಾರತದ ಹೆಚ್ಚಿನ ಆರ್ಥಿಕ ಬೆಳವಣಿಗೆ, ಹಣಕಾಸಿನ ಉತ್ತಮ ನಿರ್ವಹಣೆ ಮತ್ತು ಮೂಲಸೌಕರ್ಯ, ಉತ್ಪಾದನೆ ಮತ್ತು ತಂತ್ರಜ್ಞಾನದ ಮೇಲಿನ ಹೂಡಿಕೆಯ ಅವಲೋಕನ ಮಾಡಿದ ನಿರ್ಮಲಾ ಸೀತಾರಾಮನ್, ಎಲ್ಲರನ್ನೂ ಒಳಗೊಂಡ ಬೆಳವಣಿಗೆ ಮತ್ತು ಸುಧಾರಣೆಗಳಿಗೆ ಸರ್ಕಾರ ಅಚಲವಾದ ಬದ್ಧತೆ ಹೊಂದಿದೆ ಎಂದರು.
ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವರಾದ ಡಾ. ಎಸ್. ಜೈಶಂಕರ್ ಅವರೊಂದಿಗೆ ಇನ್ ಸ್ಟಿಟ್ಯೂಟ್ ಆಫ್ ಎಕನಾಮಿಕ್ ಗ್ರೋಥ್ ಸಂಸ್ಥೆಯ ಅಧ್ಯಕ್ಷ ಶ್ರೀ ಎನ್.ಕೆ. ಸಿಂಗ್ ಅವರು “ಜಾಗತಿಕ ದಕ್ಷಿಣದಲ್ಲಿ ಭಾರತದ ಕಾರ್ಯತಂತ್ರದ ಪಾತ್ರ” ವಿಷಯ ಕುರಿತು ಸಂವಾದ ನಡೆಸಿದರು, ಇದರೊಂದಿಗೆ ಕೆಇಸಿ 2024 ಸಮ್ಮೇಳನ ಸಮಾಪನವಾಯಿತು.
ಭಾರತವನ್ನು "ವಿಶ್ವಾಸಾರ್ಹ ಮತ್ತು ನಂಬಿಕಾರ್ಹ ಪಾಲುದಾರ"ನಾಗಿ ಜಗತ್ತು ಹೇಗೆ ನೋಡುತ್ತಿದೆ, ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್(ಐಎಂಇಸಿ) ಮತ್ತು ಇಂಟರ ನ್ಯಾಷನಲ್ ಸೋಲಾರ್ ಅಲೈಯನ್ಸ್(ಐಎಸ್ಎ).ತಹ ಪರ್ಯಾಯ ಜಾಗತಿಕ ಮಾರ್ಗಸೂಚಿಗಳಿಗೆ ಹೆಚ್ಚುತ್ತಿರುವ ಪ್ರಾಮುಖ್ಯತೆಯ ಕುರಿತು ಡಾ. ಜೈಶಂಕರ್ ಮಾತನಾಡಿದರು. ಇವು ವಿಶ್ವಸಂಸ್ಥೆಯ ಸಾಂಪ್ರದಾಯಿಕ ಒಡಂಬಡಿಕೆ ಅಥವಾ ಸಾಂಸ್ಥಿಕ ರಚನೆಗಳನ್ನು ಮೀರಿ ಜಾಗತಿಕ ಸಹಭಾಗಿತ್ವ ರೂಪಿಸುತ್ತಿವೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಮೇಲೆ ದೂರದ ಪ್ರಭಾವ ಬೀರುತ್ತಿದೆ ಎಂದು ತಿಳಿಸಿದರು.
ಭಾರತದ ಅತ್ಯಂತ ಗೌರವಾನ್ವಿತ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾದ ಪ್ರೊ. ಜಗದೀಶ್ ಭಗವತಿ ಮಾತನಾಡಿ, ವಿಶ್ವಬ್ಯಾಂಕ್‌ನಂತಹ ಜಾಗತಿಕ ಸಂಸ್ಥೆಗಳಿಂದ "ಸಲಹೆಗಳನ್ನು ಸ್ವೀಕರಿಸುತ್ತಿದ್ದ ಭಾರತ ದೇಶವು ಈಗ ಅವರಿಗೆ "ಸಲಹೆ ನೀಡುವವಷ್ಟರ ಮಟ್ಟಿಗೆ" ಪರಿವರ್ತನೆಯಾಗಿದೆ ಎಂದು ಶ್ಲಾಘಿಸಿದರು. ಪ್ರಧಾನ ಮಂತ್ರಿ ಅವರ ನಾಯಕತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಅವರ ಸಮಯೋಚಿತ ಮಧ್ಯಸ್ಥಿಕೆಯು ಆಂತರಿಕವಾಗಿ ಕಾಣುವ ನೀತಿಗಳಿಂದ ಹೆಚ್ಚಾಗಿ ತೆರೆದುಕೊಂಡು ಉತ್ಪಾದಕತೆಯ ಆರ್ಥಿಕತೆಗೆ ಬದಲಾಗಿದೆ, ಆದರೆ ಸವಾಲುಗಳನ್ನು ಎದುರಿಸುವಾಗ ಹೊಸ ಅವಕಾಶಗಳನ್ನು ಗ್ರಹಿಸುವ ಕಾರ್ಯತಂತ್ರಗಳು ಜಟಿಲವಾಗಿವೆ ಎಂದರು.
ಕೆಇಸಿ 2024ರಲ್ಲಿ, ಉದ್ಯೋಗಗಳನ್ನು ಹೆಚ್ಚಿಸಲು ಕೌಶಲ್ಯ ಮತ್ತು ಬೆಳವಣಿಗೆಯನ್ನು ಹೆಚ್ಚಿಸುವ ಕಾರ್ಯತಂತ್ರಗಳಂತಹ ಉತ್ಪಾದಕತೆಯ ಅಂಶಗಳ ಮೇಲೆ ಪರಿಣಾಮ ಬೀರುವ ಸವಾಲುಗಳಂತಹ ಹಲವಾರು ನಿರ್ಣಾಯಕ ವಿಷಯಗಳನ್ನು ತಜ್ಞರು ಪರಿಶೀಲಿಸಿದರು. ಹವಾಮಾನ ಬದಲಾವಣೆ ಮತ್ತು ಹಸಿರು ಪರಿವರ್ತನೆಗಾಗಿ ಕಾರ್ಯತಂತ್ರಗಳನ್ನು ಪರಿಹರಿಸುವ ತುರ್ತು ಅಗತ್ಯವಿದೆ. ಕೈಗಾರಿಕಾ ನೀತಿಯಲ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ಮತ್ತು ದೇಶೀಯ ಅಭ್ಯಾಸಗಳು ಅಗತ್ಯ. ಭೌಗೋಳಿಕ-ಆರ್ಥಿಕ ವಿಘಟನೆಯ ಸವಾಲುಗಳು ಮತ್ತು ಪರಿಣಾಮಗಳು; ಅಂತಾರಾಷ್ಟ್ರೀಯ ಹಣಕಾಸು ವಾಸ್ತುಶಿಲ್ಪ ಸುಧಾರಿಸುವುದು ಮತ್ತು ಕೃತಕ ಬುದ್ಧಿಮತ್ತೆ ಮತ್ತು ಉದ್ಯೋಗಗಳು ಮತ್ತು ಆರ್ಥಿಕತೆಯ ಮೇಲೆ ಅದರ ಸಂಭಾವ್ಯ ಪರಿಣಾಮಗಳು ಇತ್ಯಾದಿ ವಿಷಯಗಳನ್ನು ಸಮ್ಮೇಳನದಲ್ಲಿ ತಜ್ಞರು ವಿಶ್ಲೇಷಿಸಿದರು.
ಕೆಇಸಿ 2024 ಸಮ್ಮೇಳನವು ಭಾರತ ಮತ್ತು ವಿದೇಶಗಳ ಪ್ರತಿನಿಧಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು. ಭೂತಾನ್ ಹಣಕಾಸು ಸಚಿವ ಶ್ರೀ ಲಿಯಾನ್‌ಪೋ ಲೆಕಿಡೋರ್ಜಿ; ಒಇಸಿಡಿಯ ಫ್ರೆಚ್ ಕಾಯಂ ಪ್ರತಿನಿಧಿ ಮತ್ತು ಮಾಜಿ ಫ್ರೆಂಚ್ ಸಚಿವೆ ಶ್ರೀಮತಿ ಅಮೆಲಿ ಡಿ ಮೊಂಟ್ಚಾಲಿನ್, ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ಮಹಾನಿರ್ದೇಶಕ ಶ್ರೀ ಆಲ್ಬರ್ಟ್ ಪಾರ್ಕ್, ಸೆಂಟರ್ ಫಾರ್ ಗ್ಲೋಬಲ್ ಡೆವಲಪ್‌ಮೆಂಟ್‌ನ ವಿಶ್ರಾಂತ ಅಧ್ಯಕ್ಷ ಶ್ರೀ ಮಸೂದ್ ಅಹಮದ್, ಪೀಕಿಂಗ್ ವಿಶ್ವವಿದ್ಯಾನಲಯದ ನ್ಯೂ ಸ್ಟ್ರಕ್ಚರಲ್ ಎಕನಾಮಿಕ್ಸ್ ಸಂಸ್ಥೆಯ ಡೀನ್ ಶ್ರೀ ಜಸ್ಟಿನ್ ಯಿಫು ಲಿನ್, ಏಷ್ಯನ್ ಇನ್ ಫ್ರಾಸ್ಟ್ರಕ್ಚರ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ ಮುಖ್ಯ ಅರ್ಥಶಾಸ್ತ್ರಜ್ಞ ಶ್ರೀ ಎರಿಕ್ ಬರ್ಗ್ಲೋಫ್, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನ ಐಜಿ ಪಟೇಲ್ ಅರ್ಥಶಾಸ್ತ್ರ ಮತ್ತು ಸರ್ಕಾರದ ಪ್ರಾಧ್ಯಾಪಕ ಲಾರ್ಡ್ ನಿಕೋಲಸ್ ಸ್ಟರ್ನ್, ಮತ್ತು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಹಿರಿಯ ಫೆಲೋ, ಫಾರಿನ್ ಪಾಲಿಸಿ ಇನ್ ಸ್ಟಿಟ್ಯೂಟ್ ನ ಶ್ರೀ ಜಾನ್ ಲಿಪ್ಸ್ಕಿ ಅವರು ವಿದೇಶಿ ಗಣ್ಯರಲ್ಲಿ ಪ್ರಮುಖರಾಗಿದ್ದರು. ಭಾರತೀಯ ಪ್ರತಿನಿಧಿಗಳ ಪೈಕಿ 16ನೇ ಹಣಕಾಸು ಆಯೋಗದ ಅಧ್ಯಕ್ಷ ಶ್ರೀ ಅರವಿಂದ್ ಪನಗಾರಿಯಾ, ನೀತಿ ಆಯೋಗದ ಉಪಾಧ್ಯಕ್ಷ ಶ್ರೀ ಸುಮನ್ ಬೆರಿ, ಮುಖ್ಯ ಆರ್ಥಿಕ ಸಲಹೆಗಾರ ಡಾ.ವಿ. ಅನಂತ ನಾಗೇಶ್ವರನ್, ಹಣಕಾಸು ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿಗಳು ಭಾಗವಹಿಸಿದ್ದರು.
3 ದಿನಗಳ ಕಾಲ ಈ ಚರ್ಚೆಗಳು - "ಭಾರತೀಯ ಯುಗ" ಎಂಬ ವಿಷಯದ ಸುತ್ತ ಸಂವಾದ ಕೇಂದ್ರೀಕೃತವಾಗಿತ್ತು. "ಹವಾಮಾನ ಮತ್ತು ಅಭಿವೃದ್ಧಿ ಗುರಿಗಳ ನಡುವಿನ ಸಂಬಂಧ" ಮುಂತಾದ ವಿಷಯಗಳ ಮೇಲೆ ಕಲಾಪಗಳು ನಡೆದವು. "ಭೂ-ಆರ್ಥಿಕ ವಿಘಟನೆ ಮತ್ತು ಬೆಳವಣಿಗೆಗೆ ಪರಿಣಾಮಗಳು", "ಹಸಿರು ಪರಿವರ್ತನೆಗೆ ಹಣಕಾಸು", "ಏಷ್ಯಾದ ಉದಯ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರಕ್ಕೆ ಅದರ ಪರಿಣಾಮಗಳು" ಇತ್ಯಾದಿ ವಿಷಯಗಳ ಕುರಿತು ವ್ಯಾಪಕ ಚರ್ಚೆಗಳು ನಡೆದವು.
ಸಮಾವೇಶದ ಚರ್ಚೆಗಳು ಜಾಗತಿಕ ನಿರ್ದೇಶನಗಳನ್ನು ಅನುಸರಿಸುವುದರಿಂದ ವಿಶೇಷವಾಗಿ ಹಸಿರು ಇಂಧನ, ತಂತ್ರಜ್ಞಾನ ಮತ್ತು ವ್ಯಾಪಾರ ಸುಧಾರಣೆಯಂತಹ ಕ್ಷೇತ್ರಗಳಲ್ಲಿ ಜಾಗತಿಕ ಕಾರ್ಯಸೂಚಿ ಹೊಂದಿಸುವತ್ತ ಭಾರತದ ಬದಲಾವಣೆಯ ಮೇಲೆ ಬೆಳಕು ಚೆಲ್ಲಿದವು. ಎಲ್ಲರನ್ನೂ ಒಳಗೊಂಡ ಬೆಳವಣಿಗೆಗಾಗಿ ಭಾರತದ ಆಕಾಂಕ್ಷೆಗಳು ಮತ್ತು ಜಾಗತಿಕ ದಕ್ಷಿಣದ ಕಾರ್ಯತಂತ್ರ ನಾಯಕನಾಗಿ ಅದರ ವಿಕಸನದ ಪಾತ್ರವನ್ನು ಸಮ್ಮೇಳನ ಎತ್ತಿ ತೋರಿಸಿದೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಆರ್ಥಿಕತೆಯಾಗಲು ಭಾರತ ಹೊಂದಿರುವ ಮಹತ್ವಾಕಾಂಕ್ಷೆಯನ್ನು ಇದು ಬಲಪಡಿಸುತ್ತದೆ.
****
(Release ID: 2063141)
Visitor Counter : 25