ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಸಾರ್ವಜನಿಕ ಜೀವನದಲ್ಲಿ 75 ವರ್ಷಗಳನ್ನು ಪೂರೈಸಿದ ಡಾ. ಕರಣ್ ಸಿಂಗ್ ಅವರ ಅಭಿನಂದನಾ ಸಮಾರಂಭದಲ್ಲಿ ಉಪರಾಷ್ಟ್ರಪತಿಯವರು ಮಾಡಿದ ಭಾಷಣದ ಪಠ್ಯ


Posted On: 06 OCT 2024 7:28PM by PIB Bengaluru

ಅತ್ಯಂತ ಗೌರವಾನ್ವಿತ ಡಾ. ಕರಣ್ ಸಿಂಗ್ ಜಿ, ಅವರ ಕುಟುಂಬದ ಸದಸ್ಯರು, ನನ್ನ ಉತ್ತಮ ಸ್ನೇಹಿತ ಶ್ರೀ ಮನ್ವೇಂದರ್ ಜಿ  ಹಾಗೂ ಆತ್ಮೀಯ ಸಭಿಕರೇ,

ರಾಜಸ್ಥಾನದ ಶೇಖಾವತಿ ಮತ್ತು ಮೇವಾರ್ ನ ಐತಿಹಾಸಿಕ ಪ್ರದೇಶಗಳ ಸುತ್ತಮುತ್ತಲಿನ ಜಗತ್ತನ್ನು ಹೊರತಾಗಿ,  ವಿಶೇಷವಾಗಿ ಬಹು ದೂರವನ್ನು ಜಮ್ಮು ಮತ್ತು ಕಾಶ್ಮೀರದ ಸುತ್ತಮುತ್ತಲಿನ ಜಗತ್ತನ್ನು ಕೂಡಾ ನನ್ನ ಹದಿಹರೆಯದ ವರ್ಷಗಳಲ್ಲಿ ಅನುಭವಿಸಿದ್ದೇನೆ. ವೇಗದ ಪ್ರಯಾಣ ಮತ್ತು ಸಂವಹನದ ವಿಧಾನಗಳು ಲಭ್ಯವಿರಲಿಲ್ಲದ ಕಾಲಘಟ್ಟವಾಗಿತ್ತು. ಆದರೂ, ಒಂದು ಹೆಸರು ಆ ಬಹುದೂರದ ಅಂತರವನ್ನು ಮೀರಿ ಎಲ್ಲಡೆ ಪಸರಿಸುತ್ತಿತ್ತು - ಈ ಹೆಸರನ್ನು ನಾನು ಆಗಾಗ್ಗೆ ಮೆಚ್ಚುಗೆಯಿಂದ ಕೇಳಿದ್ದೇನೆ.

ಇದು ಬೇರಾರೂ ಅಲ್ಲ, ಜಮ್ಮು ಮತ್ತು ಕಾಶ್ಮೀರದ ಅಂದಿನ ಅಧ್ಯಕ್ಷರಾಗಿದ್ದ ಯುವ ರಾಜಕುಮಾರನ ಹೆಸರು: ಡಾ ಕರಣ್ ಸಿಂಗ್.  ವರ್ಷಗಳ ನಂತರ, ಸಂಸದ, ಕೇಂದ್ರ ಸಚಿವ, ಪಶ್ಚಿಮ ಬಂಗಾಳದ ರಾಜ್ಯಪಾಲ ಮತ್ತು ಈಗ ಉಪರಾಷ್ಟ್ರಪತಿಯಾಗಿ, ಹೀಗೆ ಅನೇಕ ಬಾರಿ ನಾನಾ ವಿಧದಲ್ಲಿ ಅವರ ಅನುಭವದಿಂದ ಪ್ರಯೋಜನ ಪಡೆಯುವ ಭಾಗ್ಯ ನನಗೆ ಸಿಕ್ಕಿತು. 

ಅವರ ಆಳವಾದ ಅನುಭವ, ಬುದ್ಧಿವಂತಿಕೆ ಮತ್ತು ಅಮೂಲ್ಯವಾದ ಮಾರ್ಗದರ್ಶನದಿಂದ ಸ್ಫೂರ್ತಿ ಪಡೆಯುವುದನ್ನು ಮುಂದುವರಿಸುತ್ತಾ, ತೀರಾ ಇತ್ತೀಚೆಗಿನ ವರೆಗೆ, ನಾನಾ ಸಂದರ್ಭಗಳಲ್ಲಿ ಅವರೊಂದಿಗೆ ತೊಡಗಿಸಿಕೊಳ್ಳಲು ಅವಕಾಶ ದೊಕಿರುವುದಕ್ಕಾಗಿ ನಾನು ಅದೃಷ್ಟಶಾಲಿ ಎಂದು ಪರಿಗಣಿಸುತ್ತೇನೆ.

ಶ್ರೀ ಕರಣ್ ಸಿಂಗ್ ಅವರ 90 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಬಗ್ಗೆ ಮಾತನಾಡುವ ಅವಕಾಶ ನನಗೆ ಕೊನೆಯ ಬಾರಿ ಸಿಕ್ಕಿತು.  ಒಂದು ರೀತಿಯಲ್ಲಿ ನೋಡಿದರೆ, ಜನಸೇವೆಯಲ್ಲಿ ಅವರ ಪಯಣ ಅವರು ಹುಟ್ಟಿದ ದಿನದಿಂದಲೇ ಆರಂಭವಾಯಿತು.

ಅವರ ಕೊಡುಗೆಗಳನ್ನು ಕೇವಲ 75 ವರ್ಷಗಳಿಗೆ ಸೀಮಿತಗೊಳಿಸುವುದು ಅವರ ಕೊಡುಗೆಯ ಪರಂಪರೆಯ ವಿಸ್ತಾರವನ್ನು ವಿವರಿಸುವುದಿಲ್ಲ.  ಫ್ರಾನ್ಸ್ ನಲ್ಲಿ ಜನಿಸಿದ ಅವರು ಸಾಂಕೇತಿಕವಾಗಿ ಬೆಂಕಿಯಿಂದ ದೀಕ್ಷೆ ಪಡೆದರು, ಕೆಲವರು ಹೇಳಿಕೊಳ್ಳಬಹುದಾದ ರೀತಿಯಲ್ಲಿ ದೇಶವಿಂಗಡನೆಗೆ ಸಾಕ್ಷಿಯಾದರು ಮತ್ತು ದೇಶದ  ಇತಿಹಾಸದಲ್ಲಿ ಭಾಗವಹಿಸಿದರು.

ತನ್ನ 16 ನೇ ವಯಸ್ಸಿನಲ್ಲಿ, ಅವರು ರಾಷ್ಟ್ರದ ಇತಿಹಾಸದಲ್ಲಿನ ಒಂದು ಪ್ರಮುಖ ಕ್ಷಣದಲ್ಲಿ ಪ್ರವೇಶ ಪತ್ರಕ್ಕೆ ಸಹಿ ಹಾಕಲು ಸಾಕ್ಷಿಯಾದರು.  ಅವರು ರಾಷ್ಟ್ರದ ಇತಿಹಾಸದ ಆ ಐತಿಹಾಸಿಕ ದಾಖಲೆಯ ಅಡಿಪಾಯವನ್ನು ಬಲಪಡಿಸಿದರು. 

18ನೇ ವಯಸ್ಸಿನಲ್ಲಿ, ಅವರು ರೀಜೆಂಟ್ ಪಾತ್ರವನ್ನು ವಹಿಸಿಕೊಂಡರು - ಇದು ಒಂದು ಪ್ರಮುಖ ಸಂದರ್ಭವಾಗಿದೆ.  ಜೂನ್ 20, 1949 ರಂದು ಅವರು ದೆಹಲಿಯಿಂದ ಶ್ರೀನಗರಕ್ಕೆ ರಾಜಪ್ರತಿನಿಧಿಯಾಗಿ ಆಗಮಿಸಿದಾಗ, ವಿಮಾನ ನಿಲ್ದಾಣದಲ್ಲಿ ಅವರನ್ನು ಶೇಖ್ ಅಬ್ದುಲ್ಲಾ ಮತ್ತು ಅವರ ಕ್ಯಾಬಿನೆಟ್ ಸ್ವಾಗತಿಸಿದ ಆ ದೃಶ್ಯದ ಭವ್ಯತೆಯನ್ನು ನಾನು ಊಹಿಸಬಲ್ಲೆ.  ಆ ಕ್ಷಣದಲ್ಲಿ, ಅವರು ಕೇವಲ ತಮ್ಮನ್ನು ಪ್ರತಿನಿಧಿಸಲಿಲ್ಲ, ಬದಲಾದಿ, ನಮ್ಮ ಇತಿಹಾಸದ ನಿರ್ಣಾಯಕ ಘಟ್ಟದಲ್ಲಿ ಭಾರತದ ಶಕ್ತಿ ಮತ್ತು ಸಾರ್ವಭೌಮತ್ವವನ್ನು ಪ್ರತಿನಿಧಿಸಿದರು.

 ಬಹುಶಃ ಇಂದಿನ ಕಾರ್ಯಕ್ರಮದ ಸಂಘಟಕರು ಡಾ ಸಿಂಗ್ ಅವರ 1949 ರಲ್ಲಿ ನಡೆದ ಈ ಸಾರ್ವಜನಿಕ ಘಟನೆಯ ಆಧಾರದಲ್ಲಿ ಅವರ 75 ವರ್ಷಗಳ ಸಾರ್ವಜನಿಕ ಸೇವೆಯನ್ನು ಗೌರವಿಸಲು ಆಯ್ಕೆಮಾಡಿದ್ದಾರೆ.

ಅದೇ ಸಮಯದಲ್ಲಿ, ಡಾ ಸಿಂಗ್ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿದರು. ನೇಪಾಳದ ರಾಜಕುಮಾರಿ ಯಶೋರಾಜ್ಯ ಲಕ್ಷ್ಮಿಯನ್ನು ವಿವಾಹವಾದರು.  ಒಟ್ಟಿಗೆ, ಅವರಿಬ್ಬರೂ ಅನುಗ್ರಹ ಮತ್ತು ಘನತೆಯನ್ನು ಸಾಕ್ಷಾತ್ಕರಿಸಿದರು.

ನನ್ನ ಅನೇಕ ಡೋಗ್ರಾ ಸ್ನೇಹಿತರು ಡಾ ಸಿಂಗ್ ಅವರ ವೈಯಕ್ತಿಕ ಗುಣಗಳ ಬಗ್ಗೆ ಮೆಚ್ಚುಗೆಯೊಂದಿಗೆ ಮಾತನಾಡುತ್ತಾರೆ. ಅತ್ಯುತ್ತಮ ಮಾತಿನಿಂದ ಅವರ ಬುದ್ಧಿವಂತಿಕೆಯನ್ನು ಹೊಗಳುತ್ತಾರೆ. ಜೊತೆಗೆ, ಯಶೋರಾಜ್ಯ ಲಕ್ಷ್ಮೀಜಿಯನ್ನು ಆಳವಾದ ಪ್ರೀತಿ, ಕಾಳಜಿ ಮತ್ತು ಗೌರವದಿಂದ ಸ್ಮರಿಸಿಕೊಳ್ಳುತ್ತಾರೆ.

ರಾಷ್ಟ್ರದ ಸಾರ್ವಜನಿಕ ಜೀವನದಲ್ಲಿ ಡಾ ಸಿಂಗ್-  ಸಂಸದೀಯ ಪ್ರಜಾಪ್ರಭುತ್ವ, ಧರ್ಮ, ಸಂಸ್ಕೃತಿ, ತತ್ತ್ವಶಾಸ್ತ್ರ, ರಾಜತಾಂತ್ರಿಕತೆ, ಸಾಹಿತ್ಯ, ವನ್ಯಜೀವಿ ಅಥವಾ ಪರಿಸರವಾದ ಹೀಗೆ ಹಲವಾರು ಆಯಾಮದಲ್ಲಿ ಗೌರವದ ಸ್ಥಾನವನ್ನು ಹೊಂದುತ್ತಾರೆ

ಭಾರತದ ಮಾಜಿ ರಾಜಕುಮಾರರಾದ ಅವರ ಕೊಡುಗೆಗಳು ಅಪಾರ ಮತ್ತು ಶಾಶ್ವತವಾಗಿವೆ.  ಇತಿಹಾಸ ಮತ್ತು ದೇಶದ ಏಕತೆಯನ್ನು ಬಲಪಡಿಸುವಲ್ಲಿ ನಾಯಕರ ಪಾತ್ರವನ್ನು ಬರೆಯುವಾಗ, ಅದರಲ್ಲಿ ಭಾರತದ ಮಾಜಿ ರಾಜಕುಮಾರರ ಡಾ ಸಿಂಗ್ ನಿಸ್ಸಂದೇಹವಾಗಿ ದೊಡ್ಡ ಹಾಗೂ ಗೌರವದ ಸ್ಥಾನವನ್ನು ಹೊಂದುತ್ತಾರೆ.

1967 ರಲ್ಲಿ ರಾಜಮನೆತನದ ಸೌಕರ್ಯ-ವ್ಯವಸ್ಥೆಗಳಿಂದ ದೂರವಾಗಿ, ಕೇವಲ ನಿರ್ದಿಷ್ಟವಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗಿ, ಸಾರ್ವಜನಿಕ (ದೇಶದ) ಚುನಾವಣಾ ರಾಜಕೀಯಕ್ಕೆ ಬಲವಾದ ನಿರ್ಧಾರದೊಂದಿಗೆ ಪ್ರವೇಶಿಸಿ, ಸಾಮಾಜಿಕ ಪರಿವರ್ತನೆ ಮಾಡುವ ಅವರ ನಿರ್ಧಾರವು ಒಂದು ದಿಟ್ಟ ಮತ್ತು ದೂರದೃಷ್ಟಿಯ ಕ್ರಮವಾಗಿತ್ತು.

ಮಾರ್ಚ್ 13, 1967 ರಂದು 36 ನೇ ವಯಸ್ಸಿನಲ್ಲಿ ಕೇಂದ್ರ ಸಚಿವ ಸಂಪುಟದ ಅತ್ಯಂತ ಕಿರಿಯ ಸದಸ್ಯರಾದರು. ಅವರು ಕಿರಿವಯಸ್ಸಿನಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದರು. ಇದು ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿತು ಮಾತ್ರವಲ್ಲದೆ ದೇಶದ ಸೇವೆಯಲ್ಲಿ ಯುವಕರ ಆಗಮನವನ್ನು ಸೂಚಿಸಿತು.  

ಡಾ ಸಿಂಗ್ ಅವರು ಬಹುಕಾಲದಿಂದ ಅಂತರ-ಧರ್ಮಗಳ ಸಾಮರಸ್ಯದ ಚಾಂಪಿಯನ್ ಆಗಿದ್ದಾರೆ, ಹಲವಾರು ಸಾರ್ವಜನಿಕ ಸಭೆಗಳು ಮತ್ತು ಸಮ್ಮೇಳನಗಳಲ್ಲಿ ಅದನ್ನು ಪ್ರತಿಪಾದಿಸುತ್ತಿದ್ದರು. ಅವುಗಳಲ್ಲಿ ಹಲವು ಉತ್ತಮವಾಗಿ ದಾಖಲಿಸಲ್ಪಟ್ಟಿವೆ.  ಇತ್ತೀಚಿಗಿನ ವರ್ಷಗಳಲ್ಲಿ, ಅವರು ಆಧ್ಯಾತ್ಮಿಕತೆ ಮತ್ತು ತತ್ತ್ವಶಾಸ್ತ್ರದ ಕ್ಷೇತ್ರದಲ್ಲಿ ಎಷ್ಟು ಪ್ರಮುಖ ವ್ಯಕ್ತಿಯಾಗಿದ್ದಾರೆ ಎಂದರೆ ದೇಶದ ಮಹಾನ್ ಚಿಂತಕರನ್ನು ಉಲ್ಲೇಖಿಸುವಾಗ ಅವರ ಹೆಸರು ಸ್ವಾಭಾವಿಕವಾಗಿ ಮೇಲ್ಪಂಕ್ತಿಯಲ್ಲಿ ಕಾಣಿಸುತ್ತದೆ.

ವಿವೇಕಾನಂದರ ಬಗ್ಗೆ ಮಾತನಾಡಿ, ಡಾ. ಕರಣ್ ಸಿಂಗ್ ಅವರು ನೆನಪಿಗೆ ಬರುತ್ತಾರೆ.  ಅರಬಿಂದೋರನ್ನು ಉಲ್ಲೇಖಿಸಿ, ಮತ್ತು ಅವರ ಅತ್ಯಂತ ಬುದ್ದಿವಂತ ಶಿಷ್ಯರಲ್ಲಿ ಒಬ್ಬರಾಗಿ ಡಾ ಸಿಂಗ್ ನಿಲ್ಲುತ್ತಾರೆ.  ಅವರ ವಿಶಾಲವಾದ ಕೆಲಸಗಳು, ಅಪಾರ ಅನುಭವ ಒಳಗೊಂಡಿರುವ ಪುಸ್ತಕಗಳ ಸರಮಾಲೆಗಳು, ಅವರ ಬೌದ್ಧಿಕ ಅನ್ವೇಷಣೆಗಳ ಆಳವನ್ನು ಪ್ರತಿಬಿಂಬಿಸುತ್ತದೆ.  ನಿಜವಾದ ಕವಿ-ತತ್ವಜ್ಞಾನಿ, ಅವರು ತತ್ವಶಾಸ್ತ್ರ, ಆಧ್ಯಾತ್ಮಿಕತೆ ಮತ್ತು ಪರಿಸರದಂತಹ ವೈವಿಧ್ಯಮಯ ವಿಷಯಗಳನ್ನು ಅವರು ಸದಾ ಪರಿಶೋಧಿಸಿದ್ದಾರೆ.

ತನ್ನ ಮಾತೃಭಾಷೆಯಾದ ಡೋಗ್ರಿಯ ಮೇಲಿನ ಅವರ ಆಳವಾದ ಪ್ರೀತಿಯು ಅವರು ಬರೆದ ಹಲವಾರು ಪುಸ್ತಕಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ.

ಭಾರತದ ರಾಷ್ಟ್ರೀಯ ಪ್ರಾಣಿಯಾದ ಹುಲಿಯನ್ನು ಸಂರಕ್ಷಿಸುವಲ್ಲಿ ಅವರ ಪ್ರಮುಖ ಪಾತ್ರವು ಬಹುಶಃ ಅವರ ಅತ್ಯಂತ ಮೌಲ್ಯಯುತವಾದ ಸಾಧನೆಗಳಲ್ಲಿ ಒಂದಾಗಿದೆ. ಹುಲಿಯು ಭಾರತದ ವನ್ಯಜೀವಿ ಪರಂಪರೆಯ ಸಂಕೇತವಾಗಿ ಉಳಿದಿದ್ದರೆ ಮತ್ತು ಅದರ ಉಳಿವು "ಪ್ರಾಜೆಕ್ಟ್ ಟೈಗರ್" ಉಪಕ್ರಮದ ಮೂಲಕ ಖಾತ್ರಿಪಡಿಸಲ್ಪಟ್ಟಿದ್ದರೆ, ಇದು ಡಾ ಸಿಂಗ್ ಅವರ ಅಚಲ ಬದ್ಧತೆಯಿಂದಾಗಿ ಆಗಿರುತ್ತದೆ.  ಆಲೋಚನೆ ಮತ್ತು ಕ್ರಿಯೆ ಎರಡರಲ್ಲೂ ಅವರ ದೃಢತೆ ಮತ್ತು ಶಕ್ತಿಗಾಗಿ ಅವರನ್ನು ಕೆಲವೊಮ್ಮೆ ಜನರು ಪ್ರೀತಿಯಿಂದ "ಹುಲಿ" ಎಂದು ಕರೆಯುವುದರಲ್ಲಿ ಆಶ್ಚರ್ಯವೇನಿಲ್ಲ.

ಡಾ ಸಿಂಗ್ ಅವರ ಸರಳತೆ, ನಮ್ರತೆ ಮತ್ತು ಉತ್ತಮ ನಡವಳಿಕೆಯನ್ನು ವ್ಯಾಪಕವಾಗಿ ಪ್ರಶಂಸಿಸಲಾಗುತ್ತದೆ.  ಅವರ ಗಮನಾರ್ಹ ಸಾಧನೆಗಳು ನಿರಂತರವಾಗಿ ಸಮಾಜ ಮತ್ತು ರಾಷ್ಟ್ರ ಎರಡಕ್ಕೂ ಪ್ರಯೋಜನಕಾರಿಯಾಗಿವೆ ಹಾಗೂ ಹಲವಡೆ, ಹೆಚ್ಚಿನ ಒಳಿತಿಗಾಗಿ ಮಾದರಿ ಸೇವೆಯಾಗಿ ಗುರುತಿಸಲಾಗಿದೆ.

ಅವರ ಪಾಂಡಿತ್ಯವು ಅಸಾಧಾರಣವಾಗಿದೆ, ಇದು ಅವರ ಆಳವಾದ ಆಂತರಿಕ ಶಿಸ್ತನ್ನು ಪ್ರತಿಬಿಂಬಿಸುತ್ತದೆ.  ಅಂತಹ ಸ್ಥೈರ್ಯ, ಬುದ್ಧಿ ಮತ್ತು ಪಾಂಡಿತ್ಯ ಹೊಂದಿದ ವ್ಯಕ್ತಿಯು, ಸದಾ ರಾಜಕೀಯ ಜೀವನದ ಸಂಕೀರ್ಣತೆಗಳನ್ನು ಸುಲಭವಾಗಿ ದಾರಿದೀಪದಂತೆ ಮಾರ್ಗದರ್ಶನ ಮಾಡುವ ಸಾಮರ್ಥ್ಯ ಹೊಂದಿದ್ದಾರೆ

ಒಂದು ಅರ್ಥದಲ್ಲಿ ಅವರು ನಮ್ಮ ಗಣರಾಜ್ಯಕ್ಕಿಂತ ಹಳೆಯವರು.  ಡಾ ಕರಣ್ ಸಿಂಗ್ ಅವರು 75 ವರ್ಷಗಳ ಕಾಲ ರಾಜಕೀಯದ ಒಳಗಿನ ಮತ್ತು ಹೊರಗಿನ ದೃಷ್ಟಿಕೋನದೊಂದಿಗೆ ರಾಜಕೀಯ ಅನುಭವನದ ಒಳಗಿನ ಲಾಭವನ್ನು ಪಡೆದ ಕೆಲವರಲ್ಲಿ ನಾನೂ ಕೂಡಾ ಒಬ್ಬ. 

ನಮ್ಮ ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಪ್ರಭಾವ ಬೀರಲು ಡಾ. ಸಿಂಗ್ ಮತ್ತು ಅವರಂತಹ ಬುದ್ಧಿಜೀವಿಗಳಿಗೆ ಮನವಿ ಮಾಡುವ ಅವಕಾಶವನ್ನು ನಾನು ಹಲವಾರು ಮಹತ್ವದ ಸಂದರ್ಭದಲ್ಲಿ ಬಳಸಿಕೊಂಡಿದ್ದೇನೆ.  ಅಂತಹ ಕೆಲವನ್ನು ನಾನು ಸಾರ್ಜನಿಕವಾಗಿ ಕೂಡಾ ಮಾಡಿದ್ದೇನೆ.

ಡಾ ಸಿಂಗ್ ಅವರು ಏಳು ದಶಕಗಳಿಂದ ರಾಷ್ಟ್ರದ ಉದಯ-ಅಭ್ಯುದಯಕ್ಕೆ ಸಾಕ್ಷಿಯಾಗಿದ್ದಾರೆ. ಪ್ರಸ್ತುತ ಅಭೂತಪೂರ್ವ ಆರ್ಥಿಕ ಉನ್ನತಿಯಲ್ಲಿ ಮತ್ತು ಹೆಚ್ಚುತ್ತಿರುವ ಅಭಿವೃದ್ಧಿ ಪಥದಲ್ಲಿ ಸಾಗುತ್ತಾ, @2047 ರಲ್ಲಿ ಅಥವಾ ಅದಕ್ಕೂ ಮುನ್ನ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ.

ಭಾರತಕ್ಕೆ ಸಂಬಂಧಿಸಿ, ವಿರೋಧಾಭಾಸದಲ್ಲೂ ಮತ್ತು ಹಲವು ಶಕ್ತಿಗಳ ಒಮ್ಮುಖವಿದೆ.  ಹಾಗೆಯೇ ರಾಷ್ಟ್ರವಿರೋಧಿ ನಿರೂಪಣೆಗಳೂ ಕೂಡ ನಡೆಯುತ್ತಿವೆ.  ಈ ವಿನಾಶಕಾರಿ ಶಕ್ತಿಗಳನ್ನು ತಟಸ್ಥಗೊಳಿಸಲು ರಾಷ್ಟ್ರೀಯ ಮನಸ್ಥಿತಿಯ ಮೇಲೆ ಪ್ರಭಾವ ಬೀರಲು ಸಂಘಟಿತ ಪ್ರಯತ್ನಗಳ ಅಗತ್ಯವಿದೆ.

ಶಾಸಕಾಂಗಗಳಿಗೆ ಶಾಸನ ಮತ್ತು ನ್ಯಾಯಾಲಯಗಳಿಗೆ ತೀರ್ಪುಗಳಂತೆ ಕಾರ್ಯನಿರ್ವಾಹಕರಿಗೆ ಕಾರ್ಯನಿರ್ವಾಹಕ ಆಡಳಿತವ ವ್ಯವಸ್ಥೆ ಪ್ರತ್ಯೇಕವಾಗಿದೆ. ನ್ಯಾಯಾಂಗದಿಂದ ಶಾಸಕಾಂಗದ ಕಾರ್ಯನಿರ್ವಾಹಕ ಅಧಿಕಾರವನ್ನು ಚಲಾಯಿಸುವುದು ಪ್ರಜಾಪ್ರಭುತ್ವಕ್ಕೆ ಮತ್ತು ಸಾಂವಿಧಾನಿಕ ಸೂಚನೆಗಳಿಗೆ ಅನುಗುಣವಾಗಿಲ್ಲ. ಆಡಳಿತದ ಕಾರ್ಯಾಂಗವು ಶಾಸಕಾಂಗ ಮತ್ತು ನ್ಯಾಯಾಲಯಗಳಿಗೆ ಜವಾಬ್ದಾರಿಯುತವಾಗಿರಬೇಕು ಮತ್ತು ಜವಾಬ್ದಾರಿಯುತವಾಗಿರುವುದರಿಂದ ಈ ಸ್ಥಾನವನ್ನು ಸ್ಥಾಪಿಸಲಾಗಿದೆ.

ನ್ಯಾಯಾಂಗದ ಕಾರ್ಯನಿರ್ವಾಹಕ ಆಡಳಿತವು ನ್ಯಾಯಶಾಸ್ತ್ರೀಯವಾಗಿ ಮತ್ತು ನ್ಯಾಯವ್ಯಾಪ್ತಿಯಲ್ಲಿ ಸಾಂವಿಧಾನಿಕ ಪವಿತ್ರೀಕರಣವನ್ನು ಮೀರಿದೆ.  ಈ ಮಹತ್ವದ ಅಂಶವು ಡಾ. ಸಿಂಗ್ ಮತ್ತು ಅವರಂತಹ ಪ್ರತಿಷ್ಠಿತ ವ್ಯಕ್ತಿಗಳು, ಬುದ್ಧಿಜೀವಿಗಳು ಮತ್ತು ಶೈಕ್ಷಣಿಕ ಮಟ್ಟದಲ್ಲಿ ಅವರುಗಳ ಆಳವಾದ ಅನುಭವಗಳನ್ನು ಸದಾ ಬಯಸುತ್ತದೆ. ಇದು ಪ್ರಜಾಪ್ರಭುತ್ವದ ಬೆಳವಣಿಗೆಗೆ ಸಂಪೂರ್ಣ ಕೊಡುಗೆ ನೀಡುತ್ತದೆ ಮತ್ತು ಎಲ್ಲಾ ಮಾನವೀಯತೆಯಲ್ಲಿ ಸಾಂವಿಧಾನಿಕ ಮನೋಭಾವ ಮತ್ತು ಸಾರವನ್ನು ಪೋಷಿಸುತ್ತದೆ, ಎಂದು  ನಾನು ಭಾವಿಸುತ್ತೇನೆ.

ಆತ್ಮೀಯ  ಸ್ನೇಹಿತರೇ,

ನಾನು ನಿಜವಾಗಿಯೂ ವಿನಮ್ರನಾಗಿದ್ದೇನೆ. ಈ ಸ್ಥಾನದಲ್ಲಿದ್ದುಕೊಂಡು, ನಾನು ಎಂದಿಗೂ ಅಭಿಮಾನಪೂರ್ವಕ ಪ್ರೀತಿಸುವ ವಿಶೇಷವಾದ ಕ್ಷಣವಿದು. ಈ ಸಂದರ್ಭದಲ್ಲಿ ಡಾ. ಸಿಂಗ್ ಅವರಿಗೆ ಅವರ ಆಯುರಾರೋಗ್ಯವನ್ನು ದಯಪಾಲಿಸಲು ಸರ್ವಶಕ್ತಲ್ಲಿ ನಾನು ಪ್ರಾರ್ಥಿಸುತ್ತೇನೆ. ಇದರಿಂದ ಅವರು ನಮ್ಮೊಂದಿಗೆ  ಇರುತ್ತಾರೆ, ಮತ್ತು ಅವರ ಸೇವೆಯನ್ನು ಬಹುಕಾಲ ಮುಂದುವರೆಸುತ್ತಾರೆ, ಹಾಗೂ ಅವರು ತಮ್ಮ ಭವ್ಯವಾದ ಉದಾತ್ತ ಗುಣಗಳಿಂದ ರಾಷ್ಟ್ರಕ್ಕೆ ಮತ್ತು ದೇಶದ ಜನತೆಗೆ ಸ್ಫೂರ್ತಿದಾಯಕ ನಡವಳಿಕೆ ಮತ್ತು ಪಾಂಡಿತ್ಯದ ವ್ಯಕ್ತಿಯಾಗಿ ಇನ್ನೂ ಬಹುಕಾಲ ಮೆರೆಯುತ್ತಾರೆ ಎಂದು ಭಾವಿಸುತ್ತೇನೆ. 

ಧನ್ಯವಾದಗಳು.  ಜೈ ಹಿಂದ್!

 

*****


(Release ID: 2062699) Visitor Counter : 26


Read this release in: English , Urdu , Hindi