ಸಹಕಾರ ಸಚಿವಾಲಯ
azadi ka amrit mahotsav g20-india-2023

ಗ್ರಾಮೀಣ ಪ್ರದೇಶಗಳಲ್ಲಿ ಸಹಕಾರಿಗಳನ್ನು ಸಬಲೀಕರಣಗೊಳಿಸುವ ಮತ್ತು ಬಲಪಡಿಸುವ ಸಹಕಾರ ಸಚಿವಾಲಯದ ಎರಡು ದಿನಗಳ ರಾಷ್ಟ್ರೀಯ ಪ್ರಗತಿ ಪರಿಶೀಲನಾ ಸಭೆ ಇಂದು ಭುವನೇಶ್ವರದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು


ಸಹಕಾರ್ ಸೆ ಸಮೃದ್ಧಿಯ ಚಿಂತನೆ/ದೃಷ್ಟಿಕೋನವನ್ನು ಸಾಕಾರಗೊಳಿಸಲು 3 ಉಪಕ್ರಮಗಳ ಅನುಷ್ಠಾನದ ಕಾರ್ಯತಂತ್ರವನ್ನು ಚರ್ಚಿಸಲಾಯಿತು, ಇದರಿಂದ ಈ ಮೂರು ಉಪಕ್ರಮಗಳನ್ನು ಸಾಧ್ಯವಾದಷ್ಟು ಬೇಗ ತಳಮಟ್ಟದಲ್ಲಿ ಪ್ರಾರಂಭಿಸಬಹುದು

ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ  ಶ್ರೀ ಅಮಿತ್ ಶಾ ಅವರು ಪ್ರಾರಂಭಿಸಿದ ಪ್ರಮುಖ ಉಪಕ್ರಮಗಳ ಸುಗಮ ಅನುಷ್ಠಾನವನ್ನು ಪ್ರತಿ ಗ್ರಾಮ / ಪಂಚಾಯಿತಿಯಲ್ಲಿ ಖಚಿತಪಡಿಸಿಕೊಳ್ಳುವುದು ಮತ್ತು ಈ ಕೆಲಸವನ್ನು ತಳಮಟ್ಟದಲ್ಲಿ ಶೀಘ್ರವಾಗಿ ಪ್ರಾರಂಭಿಸುವುದು ರಾಷ್ಟ್ರೀಯ ಪ್ರಗತಿ ಪರಿಶೀಲನಾ ಸಭೆಯ ಪ್ರಮುಖ ಕಾರ್ಯಸೂಚಿಯಾಗಿತ್ತು

ಸಹಕಾರಿ ಸಂಘಗಳು ಒಂದೇ ಸೂರಿನಡಿ ರೈತರ ಎಲ್ಲಾ ಅಗತ್ಯಗಳನ್ನು ಪೂರೈಸುವ ಒನ್ ಸ್ಟಾಪ್ ಶಾಪ್ ಆಗಿ ಮಾರ್ಪಟ್ಟಿವೆ ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ಶ್ರೀ ಮನೋಜ್ ಅಹುಜಾ ಹೇಳುತ್ತಾರೆ

ರಾಷ್ಟ್ರವ್ಯಾಪಿ ಉಪಕ್ರಮಗಳ ಸುಗಮ ಮೇಲ್ವಿಚಾರಣೆ ಮತ್ತು ಅನುಷ್ಠಾನಕ್ಕಾಗಿ ನೈಜ ಸಮಯದ ದತ್ತಾಂಶ ಸಂಗ್ರಹಣೆ ಮತ್ತು ಅಡೆ-ತಡೆರಹಿತ ರಚನೆಯನ್ನು ನಿರ್ಮಾಣ ಮಾಡುವ  ಯೋಜನೆಗಾಗಿ ಎನ್ಸಿಡಿ ಡೇಟಾಬೇಸ್ ಮೂಲಕ ಡಿಜಿಟಲೀಕರಣಕ್ಕಾಗಿ ಸಚಿವಾಲಯವು ಕೆಲಸ ಮಾಡಿದೆ ಎಂದು ಸಹಕಾರ ಸಚಿವಾಲಯದ ಕಾರ್ಯದರ್ಶಿ ಡಾ. ಆಶಿಶ್ ಕುಮಾರ್ ಭೂತಾನಿ ಹೇಳುತ್ತಾರೆ

Posted On: 01 OCT 2024 6:39PM by PIB Bengaluru

ದೇಶದ ಸಹಕಾರಿ ಸಂಸ್ಥೆಗಳನ್ನು ಸಬಲೀಕರಣಗೊಳಿಸುವ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಹಕಾರಿ ಸಂಘಗಳನ್ನು ಬಲಪಡಿಸುವ ಉದ್ದೇಶದಿಂದ, ಸಹಕಾರ ಸಚಿವಾಲಯ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಪ್ರಗತಿ ಪರಿಶೀಲನಾ ಸಭೆ ಇಂದು ಒಡಿಶಾದ ಭುವನೇಶ್ವರದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಸಭೆಯನ್ನು ಒಡಿಶಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀ ಮನೋಜ್ ಅಹುಜಾ ಉದ್ಘಾಟಿಸಿದರು ಮತ್ತು ಸಹಕಾರ ಸಚಿವಾಲಯದ ಕಾರ್ಯದರ್ಶಿ ಡಾ. ಆಶಿಶ್ ಕುಮಾರ್ ಭೂತಾನಿ ಅವರು ವಿಶೇಷ ಅತಿಥಿಯಾಗಿ ಉಪಸ್ಥಿತರಿದ್ದರು.  

cs 1.JPG

ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ  ಶ್ರೀ ಅಮಿತ್ ಶಾ ಅವರು ಇತ್ತೀಚೆಗೆ ಪ್ರಾರಂಭಿಸಿದ 3 ಪ್ರಮುಖ ಉಪಕ್ರಮಗಳಿಗೆ ಸಂಬಂಧಿಸಿ  ಎಸ್ಒಪಿಗಳ ಸುಗಮ ಅನುಷ್ಠಾನವನ್ನು ಪ್ರತಿ ಗ್ರಾಮ / ಪಂಚಾಯತ್ ಗಳಲ್ಲಿ ಖಚಿತಪಡಿಸಿಕೊಳ್ಳುವುದು ಮತ್ತು ಕೆಲಸವನ್ನು ತಳಮಟ್ಟದಲ್ಲಿ ಶೀಘ್ರವಾಗಿ ಪ್ರಾರಂಭಿಸುವುದು ರಾಷ್ಟ್ರೀಯ ಪ್ರಗತಿ ಪರಿಶೀಲನಾ ಸಭೆಯ ಪ್ರಮುಖ ಕಾರ್ಯಸೂಚಿಗಳಲ್ಲಿ ಒಂದಾಗಿದೆ.

ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಪ್ರಾರಂಭಿಸಿದ 3 ಪ್ರಮುಖ ಉಪಕ್ರಮಗಳ ಎಸ್ಒಪಿಗಳಲ್ಲಿ 2 ಲಕ್ಷ ಹೊಸ ಎಂಪಿಎಸಿಎಸ್, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಹಕಾರಿಗಳ ರಚನೆ ಮತ್ತು ಬಲವರ್ಧನೆ, 'ಶ್ವೇತ ಕ್ರಾಂತಿ 2.0' ಮತ್ತು 'ಸಹಕಾರಿಗಳ ನಡುವಿನ ಸಹಕಾರ' ಕುರಿತು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳು (ಎಸ್ಒಪಿ) ಸೇರಿವೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಫ್ತುಗಳಿಗೆ ಅವಕಾಶಗಳನ್ನು ಒದಗಿಸುವ ಮೂಲಕ ಪಿಎಸಿಎಸ್ ಅನ್ನು ರೋಮಾಂಚಕ ಆರ್ಥಿಕ ಘಟಕವನ್ನಾಗಿ ಮಾಡುವ ಗುರಿಯನ್ನು ಎರಡು ದಿನಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚಿಸಲಾಯಿತು.

ಸರ್ಕಾರದ ಮೊದಲ 100 ದಿನಗಳಲ್ಲಿ ಸಹಕಾರ ಸಚಿವಾಲಯ ಕೈಗೊಂಡ ಹತ್ತು ಉಪಕ್ರಮಗಳಲ್ಲಿ, ಮೂರು ಪ್ರಮುಖ ಉಪಕ್ರಮಗಳನ್ನು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ  ಶ್ರೀ ಅಮಿತ್ ಶಾ ಅವರು ಇತ್ತೀಚೆಗೆ ಹೊಸದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಾರಂಭಿಸಿದ್ದರು.

ಸಚಿವಾಲಯದ 100 ದಿನಗಳ ಕ್ರಿಯಾ ಯೋಜನೆಯ ಯಶಸ್ವಿ ಅನುಷ್ಠಾನದ ಬಗ್ಗೆ ಚರ್ಚಿಸಲು ಸಭೆ ಉದ್ದೇಶಿಸಿತ್ತು. ಸಹಕಾರಿ ನವೋದ್ಯಮಗಳನ್ನು ಉತ್ತೇಜಿಸಲು ಯುವಜನರ ಭಾಗವಹಿಸುವಿಕೆ ಬಹಳ ಮುಖ್ಯ ಎಂಬುದನ್ನು  ಚರ್ಚಿಸಲಾಯಿತು. ಸಹಕಾರಿ ಸಂಘಗಳಲ್ಲಿ ಯುವಜನರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು, ಸಹಕಾರಿ ಶಿಕ್ಷಣ ಮತ್ತು ತರಬೇತಿ ವ್ಯವಸ್ಥೆಯನ್ನು ಆಧುನೀಕರಿಸುವುದು ಮುಂಬರುವ ದಿನಗಳಲ್ಲಿ ಬಹಳ ಮುಖ್ಯವಾಗಿದೆ.

ಒಡಿಶಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀ ಮನೋಜ್ ಅಹುಜಾ ಅವರು, ತಳಮಟ್ಟದಲ್ಲಿ ಬಲವಾದ ಸಂಸ್ಥೆಗಳ ರಚನೆ ಮತ್ತು ಉತ್ತೇಜನದ ನಿರ್ಣಾಯಕ ಅಗತ್ಯವನ್ನು ಒತ್ತಿ ಹೇಳಿದರು, ಇದರಲ್ಲಿ ಗುಣಮಟ್ಟದ ಒಳಹರಿವು, ಸಂಗ್ರಹಣಾ ರಚನೆಗಳು, ಸಂಸ್ಕರಣಾ ಸೌಲಭ್ಯಗಳು, ಸಾಲ ಸೌಲಭ್ಯಗಳು ಮತ್ತು ಸ್ಥಳೀಯ ಜನರ ಮಾರುಕಟ್ಟೆ ಸೌಲಭ್ಯಗಳಂತಹ ಎಲ್ಲಾ ಮೂಲಭೂತ ಅಗತ್ಯಗಳನ್ನು ಪೂರೈಸಬಹುದು ಎಂದವರು ನುಡಿದರು.

cs 1.JPG

ಅಮುಲ್ ನಂತಹ ಬಹು ರಾಜ್ಯ ಸಹಕಾರಿ ಸಂಘಗಳ  ಉದಾಹರಣೆ ನೀಡಿದ ಅವರು, ಸಹಕಾರ ಸಚಿವಾಲಯದ ವಿವಿಧ ಯೋಜನೆಗಳು ಮತ್ತು ಉಪಕ್ರಮಗಳಾದ ಮಾದರಿ ಬೈಲಾಗಳು, ಗಣಕೀಕರಣ, ಜನೌಷಧಿ ಕೇಂದ್ರಗಳು ಸಹಕಾರಿ ಸಂಘಗಳನ್ನು ಒಂದೇ ಸೂರಿನಡಿ ರೈತರ ಎಲ್ಲ ಅಗತ್ಯಗಳನ್ನು ಪೂರೈಸುವ ಒನ್ ಸ್ಟಾಪ್ ಶಾಪ್ ಆಗಿ ಪರಿವರ್ತಿಸಿವೆ ಎಂದರು. ಜನರ ಸ್ವಂತ ಸಂಸ್ಥೆಯಾಗಿರುವುದರಿಂದ ಸಹಕಾರಿ ಸಂಘಗಳು ದೊಡ್ಡ ಸಾಮರ್ಥ್ಯವನ್ನು ಹೊಂದಿವೆ ಎಂದವರು ಅಭಿಪ್ರಾಯಪಟ್ಟರು.

ಸಹಕಾರ ಸಚಿವಾಲಯದ ಕಾರ್ಯದರ್ಶಿ ಡಾ. ಆಶಿಶ್ ಕುಮಾರ್ ಭೂತಾನಿ ಅವರು ಜಿಡಿಪಿಗೆ ಕೊಡುಗೆ ನೀಡುವಲ್ಲಿ ಸಹಕಾರಿ ಸಂಘಗಳ ಪ್ರಮುಖ ಪಾತ್ರವನ್ನು ಪ್ರಸ್ತಾಪಿಸಿದರು. ಈ ದಿಕ್ಕಿನಲ್ಲಿ, ಸಹಕಾರ ಸಚಿವಾಲಯದ ಪ್ರಮುಖ ಉಪಕ್ರಮವಾಗಿ ಮಾದರಿ ಉಪವಿಧಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಎಂಪಿಎಸಿಎಸ್ ರಚನೆಗೆ ಒತ್ತು ನೀಡಬೇಕು ಎಂದರು. ಮಾದರಿ ಉಪವಿಧಿಗಳ (ಬೈಲಾ)  ಅಳವಡಿಕೆಯು ಪಿಎಸಿಎಸ್ ಅನ್ನು ಆರ್ಥಿಕವಾಗಿ ಬಲಪಡಿಸುವ 25 ಹೊಸ ವ್ಯವಹಾರ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುವಂತೆ ಬಹು ಆಯಾಮದ  ಪಿಎಸಿಎಸ್ ಗಳನ್ನಾಗಿಸಲು ಅನುವು ಮಾಡಿಕೊಡುತ್ತದೆ. ಇದಲ್ಲದೆ, ಎನ್ಸಿಇಎಲ್, ಎನ್ಸಿಒಎಲ್ ಮತ್ತು ಬಿಬಿಎಸ್ಎಸ್ಎಲ್ ಎಂಬ 3 ಹೊಸ ಸಹಕಾರಿ ಸಂಘಗಳ ರಚನೆಯು ಪಿಎಸಿಎಸ್ನ ದಿಗಂತವನ್ನು ವಿಸ್ತರಿಸುತ್ತದೆ. ಈ ಸಂಘಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸಾವಯವ ಉತ್ಪನ್ನಗಳು ಸೇರಿದಂತೆ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ಪಡೆಯಲು ರೈತರಿಗೆ ಬೆಂಬಲ ನೀಡುತ್ತವೆ ಎಂದವರು ವಿವರಿಸಿದರು.

WhatsApp Image 2024-10-01 at 16.26.54 (1).jpeg

ಪ್ರಮುಖ ಹೆಜ್ಜೆಯಾಗಿ, ಸಹಕಾರ ಸಚಿವಾಲಯವು ನೈಜ ಸಮಯದ ದತ್ತಾಂಶ ಸಂಗ್ರಹಣೆಗಾಗಿ ಎನ್ಸಿಡಿ ಡೇಟಾಬೇಸ್ ಮೂಲಕ ಡಿಜಿಟಲೀಕರಣದ ನಿಟ್ಟಿನಲ್ಲಿ  ಕೆಲಸ ಮಾಡಿದೆ ಮತ್ತು ರಾಷ್ಟ್ರವ್ಯಾಪಿ ಉಪಕ್ರಮಗಳ ಸುಗಮ ಮೇಲ್ವಿಚಾರಣೆ ಹಾಗು  ಅನುಷ್ಠಾನಕ್ಕಾಗಿ ಅಡೆ-ತಡೆರಹಿತ ರಚನೆಯನ್ನು ನಿರ್ಮಿಸಲು  ಯೋಜಿಸಿದೆ ಎಂದು ಅವರು ವಿವರಿಸಿದರು.

ದೇಶದಲ್ಲಿ ಸಹಕಾರ ಚಳವಳಿಯನ್ನು ಮತ್ತಷ್ಟು ಬಲಪಡಿಸಲು, ಮುಂದಿನ 5 ವರ್ಷಗಳಲ್ಲಿ 50% ಸಹಕಾರಿ ಸದಸ್ಯರಿಗೆ ತರಬೇತಿ ನೀಡುವ ಚಿಂತನೆಯೊಂದಿಗೆ ನಿಯಮಿತ ಸಾಮರ್ಥ್ಯ ವರ್ಧನೆ ತರಬೇತಿಗಳನ್ನು ಆಯೋಜಿಸಲಾಗುತ್ತಿದೆ ಎಂದು ಡಾ. ಭೂತಾನಿ ಹೇಳಿದರು. 2024 ರ ನವೆಂಬರ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಹಕಾರ ಮಿತ್ರಕೂಟದಲ್ಲಿ ಭಾಗವಹಿಸುವಂತೆ ಅವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಕಾರ ಇಲಾಖೆಗಳಿಗೆ ಮನವಿ ಮಾಡಿದರು.

 

*****



(Release ID: 2061039) Visitor Counter : 28


Read this release in: English , Urdu , Hindi , Odia