ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav g20-india-2023

ವಿಶ್ವ ಪ್ರವಾಸೋದ್ಯಮ ದಿನ 2024ರ ಸಂದರ್ಭದಲ್ಲಿ ಉಪರಾಷ್ಟ್ರಪತಿಗಳ ಭಾಷಣ

Posted On: 27 SEP 2024 2:12PM by PIB Bengaluru

ವಿಮಾನ ನಿಲ್ದಾಣಗಳ ನಿರ್ಮಾಣದಲ್ಲಿ ದುಪ್ಪಟ್ಟು, ಸಂಪರ್ಕ ರೈಲುಮಾರ್ಗಗಳಿಗೆ ವಿಶ್ವ ದರ್ಜೆಯ ಮೂಲಸೌಕರ್ಯ, ಅದರ ವಿವಿಧ ವಿಭಾಗಗಳು, ಹೆದ್ದಾರಿಗಳು, ಎಕ್ಸ್ಪ್ರೆಸ್ ವೇ ಹೆದ್ದಾರಿಗಳು ಇವುಗಳ ಮೂಲಕ ಕಳೆದ ದಶಕದಲ್ಲಿ ಆದ ಪರಿವರ್ತನೆಯು ವಿಶ್ವದಲ್ಲಿನ ಶ್ರೇಷ್ಠವಾದವುಗಳಿಗೆ ಸರಿಸಮನಾಗಿವೆ.

ರಾಜತಾಂತ್ರಿಕರೇ, ನಿಮ್ಮ ಸೌಹಾರ್ದಯುತ ಉಪಸ್ಥಿತಿಗಾಗಿ ಧನ್ಯವಾದಗಳು, ಪ್ರವಾಸೋದ್ಯಮದಲ್ಲಿನ ಎಲ್ಲಾ ಪಾಲುದಾರರೇ ಮತ್ತು ಪ್ರತಿಷ್ಠಿತ ಪ್ರೇಕ್ಷಕರೇ, ವಿಶ್ವ ಪ್ರವಾಸೋದ್ಯಮ ದಿನದ ಸಂದರ್ಭದಲ್ಲಿ, ಇದು ಇಡೀ ಪ್ರಪಂಚಕ್ಕೆ ಬಹಳ ಮಹತ್ವದ್ದಾಗಿದೆ ಏಕೆಂದರೆ ಇದು ಈ ಸಮಯದಲ್ಲಿ ಹೆಚ್ಚು ಅಗತ್ಯವಿರುವ ಮಾನವೀಯತೆಯ ಬಂಧಗಳನ್ನು ಸಂಪರ್ಕಿಸುತ್ತದೆ, ನನ್ನ ಶುಭಾಶಯಗಳು.

ಜಾಗತಿಕ ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಪ್ರಗತಿ ಮತ್ತು ಸಾಂಸ್ಕೃತಿಕ ವಿನಿಮಯದ ಮೇಲೆ ಪ್ರವಾಸೋದ್ಯಮದ ಆಳವಾದ ಪ್ರಭಾವವನ್ನು ಆಚರಿಸಲು ಇದು ಒಂದು ಸಂದರ್ಭವಾಗಿದೆ. ಸ್ನೇಹಿತರೇ, ಇವು ಕೇವಲ ಮಾತುಗಳಲ್ಲ,  ಇದು ವಾಸ್ತವ. ಅವು ಸ್ಪಷ್ಟವಾಗಿ ತೋರಿಸುವಂತೆ, ಆರ್ಥಿಕ ಅಭಿವೃದ್ಧಿಯು ಪ್ರವಾಸೋದ್ಯಮದೊಂದಿಗೆ ಮತ್ತು ಪ್ರವಾಸದೊಂದಿಗೆ ಹೆಣೆದುಕೊಂಡಿದೆ.

ಈ ವರ್ಷದ ವಿಷಯವು ಬಹಳ ಚಿಂತನೆಯನ್ನು ಪ್ರಚೋದಿಸುವ ಮತ್ತು ಈಗಿನ  ಸಂದರ್ಭಕ್ಕೆ ಪ್ರಸ್ತುತವಾಗಿದ್ದು , ಪ್ರವಾಸೋದ್ಯಮ ಮತ್ತು ಶಾಂತಿಯನ್ನು ಹೊಂದಿದೆ.  ವಿಷಯವು (ಥೀಮ್) ತುಂಬಾ ಆಳವಾದದ್ದನ್ನು ಒತ್ತಿಹೇಳುತ್ತದೆ. ಇದು ಮಾನವ ಸಂಪನ್ಮೂಲಗಳ ನಡುವೆ ಸಂಪರ್ಕವನ್ನು ಕಲ್ಪಿಸುತ್ತದೆ, ಜನರ ನಡುವೆ ಸಂಪರ್ಕಿಸುತ್ತದೆ ಮತ್ತು ಜನರಿಂದ ಜನರನ್ನು ಸಂಪರ್ಕಿಸುತ್ತದೆ.  ಅದು ಸಾಮರಸ್ಯಕ್ಕೆ ಅನುಕೂಲಕರವಾಗಿದೆ ಮತ್ತು ವಿಚಾರಗಳ ವಿನಿಮಯದ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಆದ್ದರಿಂದ, ಪ್ರವಾಸೋದ್ಯಮವು ಶಾಂತಿಗೆ ಬೃಹತ್ ಕೊಡುಗೆ ನೀಡುತ್ತದೆ ಎನ್ನುವುದು ಸರಿಯಾಗಿದೆ, ಈ ವಿಷಯದ ಅಗತ್ಯವು ಬಹಳ ತುರ್ತಾಗಿದ್ದು, ಇಡೀ ಪ್ರಪಂಚವು ಶಾಂತಿಗಾಗಿ ಹಂಬಲಿಸುತ್ತಿದೆ.

ನಾವು ಘರ್ಷಣೆಗಳಿಂದ ಆಘಾತಕ್ಕೊಳಗಾಗಿದ್ದೇವೆ, ಜಗತ್ತಿನ ಯಾವುದೇ ಭಾಗದಲ್ಲಿ ಯಾವುದೇ ಘರ್ಷಣೆಯು ಭೂಮಿಯ ಪ್ರತಿಯೊಂದು ಭಾಗಕ್ಕೂ ದುಃಖವನ್ನು ತರುತ್ತದೆ. ಇದು ಪೂರೈಕೆ ಸರಪಳಿಗಳನ್ನು ಅಡ್ಡಿಪಡಿಸುತ್ತದೆ, ಯೋಜನೆಗೆ ಅಡ್ಡಿಪಡಿಸುತ್ತದೆ, ಒಂದು ತಲೆನೋವಾಗಿದೆ, ಆದ್ದರಿಂದ, ಪ್ರವಾಸೋದ್ಯಮ ಮತ್ತು ಶಾಂತಿಯು ಬಹಳ ಮುಖ್ಯವಾಗಿದೆ.

ಈ ವಿಷಯವು ವಿಶೇಷವಾಗಿ ಭಾರತಕ್ಕೆ ಸೂಕ್ತವಾಗಿದೆ, ಅತಿದೊಡ್ಡ, ಚೈತನ್ಯದಾಯಕ ಮತ್ತು ಕ್ರಿಯಾತ್ಮಕ ಪ್ರಜಾಪ್ರಭುತ್ವವಿರುವ, ಜನಸಂಖ್ಯೆಯ ಆರನೇ ಒಂದು ಭಾಗದಷ್ಟು ನೆಲೆಯಾದ ದೇಶಕ್ಕೆ, ಪ್ರವಾಸೋದ್ಯಮವು ಜಾಗತಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಉದ್ಯಮವಾಗಿದೆ. ಇದು ಎಷ್ಟು ಅಭಿವೃದ್ಧಿ ಹೊಂದುತ್ತಿದೆ ಎಂದರೆ ಕೆಲವು ದೇಶಗಳು ಕೇವಲ ಪ್ರವಾಸೋದ್ಯಮದಿಂದಲೇ ಅಭಿವೃದ್ಧಿ ಹೊಂದುತ್ತವೆ, ಅವರ ಆರ್ಥಿಕತೆಯು ಪ್ರವಾಸೋದ್ಯಮದಿಂದ ಸುಸ್ಥಿರವಾಗಿದೆ, ಭಾರತದ ವಿಷಯದಲ್ಲಿ ಅದು ಆರ್ಥಿಕತೆಯ ಬೆನ್ನೆಲುಬಾಗಿದೆ. ಒಂದು ಹೇಳಿಕೆಯು ಕಳೆದ ದಶಕದಲ್ಲಿ ದೇಶದ ಗಮನಾರ್ಹ ಮತ್ತು ಅಭೂತಪೂರ್ವ ಬೆಳವಣಿಗೆಯನ್ನು ಎತ್ತಿ ತೋರಿಸಿದೆ. 

ನಾನು 1989 ರಲ್ಲಿ ಸಂಸತ್ತಿನ ಸದಸ್ಯನಾಗಿದ್ದಾಗ ಮತ್ತು ಕೇಂದ್ರ ಸರ್ಕಾರದಲ್ಲಿ ಸಚಿವನಾಗಿದ್ದಾಗ ಮೂರು ದಶಕಗಳಿಗಿಂತಲೂ ಹಿಂದೆ, ನಮ್ಮ ಆರ್ಥಿಕತೆಯ ಗಾತ್ರವು ಪ್ಯಾರಿಸ್ ಮತ್ತು ಲಂಡನ್ ನಗರಕ್ಕಿಂತ ಚಿಕ್ಕದಾಗಿತ್ತು. ನಾನು ಮಂತ್ರಿಮಂಡಲದ ಭಾಗವಾಗಿ ಜಮ್ಮು ಮತ್ತು ಕಾಶ್ಮೀರ, ಶ್ರೀನಗರಕ್ಕೆ ಹೋದಾಗ, ಬೀದಿಗಳಲ್ಲಿ ಡಜನ್ ಗಿಂತಲೂ ಹೆಚ್ಚು ಜನರನ್ನು ನಾನು ನೋಡಲು ಸಿಗುತ್ತಿರಲಿಲ್ಲ, ಆಗ ನಾವು ದಾಲ್ ಸರೋವರದ ಹೋಟೆಲ್ನಲ್ಲಿ ತಂಗಿದ್ದೆವು ಮತ್ತು ಈಗ ನಮ್ಮ ಸ್ಥಿತಿ ಹೇಗಿದೆ ಎನ್ನುವುದನ್ನು ಊಹಿಸಿ. ಕಳೆದ ವರ್ಷ ಎರಡು ಕೋಟಿ ಜನರು ಪ್ರವಾಸಿಗರಾಗಿ ಕಾಶ್ಮೀರಕ್ಕೆ ಭೇಟಿ ನೀಡಿದ್ದರು.

ಭಾರತದ ಆರ್ಥಿಕತೆಯು ದುರ್ಬಲ ಆರ್ಥಿಕತೆಯಿಂದ ಒಂದು ದಶಕದಲ್ಲಿ ವಿಶ್ವದ ಐದು ದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿ ಬೆಳೆದಿದೆ. ಮುಂದಿನ ಎರಡು ವರ್ಷಗಳಲ್ಲಿ, ಎಲ್ಲಾ ಸೂಚನೆಗಳ ಪ್ರಕಾರ, ಜಪಾನ್ ಮತ್ತು ಜರ್ಮನಿಯನ್ನು ಹಿಂದಿಕ್ಕಿ ನಾವು ಮೂರನೇ ಸ್ಥಾನದಲ್ಲಿ ಇರುತ್ತೇವೆ. ಸದ್ಯಕ್ಕೆ ಭಾರತವಿರುವ ಸ್ಥಾನ ಅದು. ಸಕಾರಾತ್ಮಕ ಆಡಳಿತ, ತಾಂತ್ರಿಕ ಪ್ರಗತಿ ಮತ್ತು ಪಾರದರ್ಶಕತೆ, ಪ್ರತಿ ಸರ್ಕಾರಿ ವಿಷಯದಲ್ಲಿ ಹೊಣೆಗಾರಿಕೆಯ ಕಾರ್ಯವಿಧಾನಗಳೊಂದಿಗೆ, ವ್ಯವಸ್ಥೆಯು ತುಂಬಾ ಬದಲಾಗಿದೆ ಅಂತರಾಷ್ಟ್ರೀಯ ಹಣಕಾಸು ನಿಧಿ ಕೂಡ ಅದನ್ನು ಹೇಳಿದೆ. ಭಾರತವು ಹೂಡಿಕೆ ಮತ್ತು ಅವಕಾಶಕ್ಕಾಗಿ ವಿಶ್ವದ ನೆಚ್ಚಿನ ತಾಣವಾಗಿದೆ.

ಅಂತರಾಷ್ಟ್ರೀಯ ಹಣಕಾಸು ನಿಧಿಯು ಪ್ರತಿಬಿಂಬಿಸುವ ಪ್ರತಿಯೊಂದು ಸರ್ಕಾರಿ ವ್ಯವಹಾರಗಳಿಗೆ ದೃಢವಾದ ಆಡಳಿತ, ತಾಂತ್ರಿಕ ಪ್ರಗತಿ, ಪಾರದರ್ಶಕ, ಜವಾಬ್ದಾರಿಯುತ ಕಾರ್ಯವಿಧಾನಗಳಿಂದ ಪರಿಸರ ವ್ಯವಸ್ಥೆಯಲ್ಲಿ ತುಂಬಾ ಬದಲಾವಣೆಯಾಗಿದೆ. ಹೂಡಿಕೆ ಮತ್ತು ಅವಕಾಶಕ್ಕಾಗಿ ಭಾರತವು ನೆಚ್ಚಿನ ಜಾಗತಿಕ ತಾಣವಾಗಿದೆ.

ಇಂಡಿಯಾ, ಅಂದರೆ ಭಾರತ, ಪ್ರವಾಸೋದ್ಯಮಕ್ಕೆ ನೆಚ್ಚಿನ ಜಾಗತಿಕ ತಾಣವಾಗಿದೆ, ಭಾರತದ ಯಾವುದೇ ಭಾಗಕ್ಕೆ ಹೋಗಿ, ಮತ್ತು ವಿವಿಧ ಭಾಗಗಳಿಗೆ ಭೇಟಿ ನೀಡಿದ ಇಲ್ಲಿನ ರಾಜತಾಂತ್ರಿಕರು ನನ್ನ ಮಾತನ್ನು ಪುಷ್ಟೀಕರಿಸುವರು ಎಂದು ನನಗೆ ಖಾತ್ರಿಯಿದೆ. ನಮ್ಮಲ್ಲಿ ಎಲ್ಲಾ ಋತುಗಳಿಗೂ ಪ್ರವಾಸೋದ್ಯಮವಿದೆ, ಆಧ್ಯಾತ್ಮಿಕತೆಯ ನಾಡು, ಉತ್ಕೃಷ್ಟತೆಯ ನಾಡು, ಜ್ಞಾನದ ಭೂಮಿ, ವೇದಗಳ ಭೂಮಿ ಮತ್ತು 5000 ವರ್ಷಗಳ ನಾಗರಿಕತೆಯ ತತ್ವಗಳ ಈ ಭೂಮಿಗೆ ಬನ್ನಿ. ವರ್ಷದ ಯಾವುದೇ ಸಮಯದಲ್ಲಿ, ನೀವು ಪ್ರವಾಸಿ ತಾಣಗಳಲ್ಲಿ ಸಂಭ್ರಮದ ಸಂದರ್ಭವನ್ನು ಹೊಂದಿರುತ್ತೀರಿ.

2047 ಕ್ಕೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಲು ಉದ್ದೇಶಿಸಿರುವ ಈ ರಾಷ್ಟ್ರದ ಆರ್ಥಿಕ ಬೆಳವಣಿಗೆಯ ಎಂಜಿನ್ ಮುಖ್ಯವಾಗಿ ಪ್ರವಾಸೋದ್ಯಮದಿಂದ ಉತ್ತೇಜಿತಗೊಳ್ಳುತ್ತದೆ ಮತ್ತು  ಅನ್ವೇಷಣೆಗೆ ಕಾಯುತ್ತಿರುವ ಸಾಮರ್ಥ್ಯವನ್ನು ಪಡೆಯಲು ನೀವು ಸರ್ವ ಪ್ರಯತ್ನವನ್ನು  ಮಾಡುವಿರಿ ಎಂಬುದರಲ್ಲಿ ನನಗೆ ಸಂದೇಹವಿಲ್ಲ. ಮತ್ತು ಯಾಕೆ ಆಗುವುದಿಲ್ಲ? ನಮ್ಮ ಪ್ರವಾಸಿ ಸಂಪನ್ಮೂಲಗಳು ಮತ್ತು ಪ್ರವಾಸೋದ್ಯಮ ತಾಣಗಳ  ಅನ್ವೇಷಣೆಗೆ ಬೇಕಾಗಿರುವುದು ಒಂದೇ, ನಿಮಗೆ  ರಾಷ್ಟ್ರದ ಒಂದು ಹೆಮ್ಮೆಯ ಚಿತ್ರಣ.

ವಿಶ್ವದಲ್ಲಿ ಈಗ ಭಾರತದ ಚಿತ್ರಣವು ಒಂದು ದಶಕದ ಹಿಂದೆ ಇದ್ದದ್ದಕ್ಕಿಂತ ಬಹಳ ಭಿನ್ನವಾಗಿದೆ, ಭಾರತದ ನಾಯಕತ್ವವು ಜಾಗತಿಕವಾಗಿ ಗುರುತಿಸಲ್ಪಟ್ಟಿದೆ. ಈ ಗಾತ್ರದ ವಿಶ್ವದ ಇತರ ಯಾವ ಆರ್ಥಿಕತೆಯು ವಾರ್ಷಿಕವಾಗಿ ಸುಮಾರು 8% ಜಿಡಿಪಿ ಏರುತ್ತಿದೆ ಎಂದು ಹೇಳಿಕೊಳ್ಳಬಹುದು? ಮತ್ತು ಮುಂಬರುವ ಹಲವು ವರ್ಷಗಳವರೆಗೆ ಊಹಿಸಲಾಗಿದೆ. ಶೌಚಾಲಯಗಳು, ವಿದ್ಯುತ್, ಇಂಟರ್ನೆಟ್, ಶಿಕ್ಷಣ ಮತ್ತು ನಲ್ಲಿ ನೀರಿಗೆ ಸಂಬಂಧಿಸಿದಂತೆ 1.4 ಶತಕೋಟಿ ಜನರಿಗೆ ಸೌಲಭ್ಯವನ್ನು ಒದಗಿಸಲಾಗಿದೆ.  “ಪ್ರತಿ ಮನೆಗೂ ನಲ್ಲಿ, ಪ್ರತಿ ನಲ್ಲಿಯಲ್ಲಿಯೂ ನೀರು, ಜಲ ನಿಶ್ಚಿತ ರೂಪದಲ್ಲಿ ಒಳ್ಳೆಯ ಗುಣಮಟ್ಟದಲ್ಲಿರುತ್ತದೆ”, ತಮ್ಮ ಪ್ರಾಯೋಗಿಕ ಯೋಜನೆಯನ್ನು ಉದ್ಘಾಟಿಸಲು ಅವರು ನನ್ನನ್ನು ಆಹ್ವಾನಿಸಿದಾಗ, ನಾನು ಅದನ್ನು ಕೂಲಂಕಷವಾಗಿ ಪರಿಶೀಲಿಸಿದೆ.

ಮಾನ್ಯ ಮಂತ್ರಿಗಳೇ, ನನ್ನ ತವರು ಜಿಲ್ಲೆ ಝಂಜುನುಗೆ ಹೋಗಿ, ಬಟನ್ ಒತ್ತಿ, ನನ್ನ ತಾಲೂಕು ಚಡ್ವಾಗೆ ಹೋಗಿ, ಬಟನ್ ಒತ್ತಿ, ನಂತರ ನಾನು ನನ್ನ ಗ್ರಾಮ ಕಥಾನಕ್ಕೆ ಹೋಗಿ, ಬಟನ್ ಒತ್ತಿ ಮತ್ತು ಎಷ್ಟು ಮನೆಗಳಿಗೆ ನಲ್ಲಿ ನೀರು ಬರುತ್ತಿದೆ ಎಂದು ಹೇಳಿ ಎಂದು ಕೇಳಿದೆ. ನನ್ನ ಮನೆಯಲ್ಲೂ ಇತ್ತು, ಹೆಸರು ದಾಖಲಾಗಿತ್ತು. ಕೆಲವು ಮನೆಗಳು ಹೊಂದಿರಲಿಲ್ಲ, ಮತ್ತು ನಿಷ್ಠೆಯಿಂದ, ಅವುಗಳು ಒಂದು ಇಂಡಿಕೇಟರಿನಿಂದ ಸೂಚಿಸುತ್ತಿತ್ತು, ಕೆಲಸವು ಪ್ರಗತಿಯಲ್ಲಿದೆ ಎಂದು. 

ಈ ಮಹಾನ್ ಯಶಸ್ಸು, ಸಾಧನೆ ಮತ್ತು ಪುರಾವೆಗಳಿಂದ ಸ್ಫೂರ್ತಿ ಪಡೆದ ಅವರು ಈಗ ಕಠಿಣ ಕೆಲಸವನ್ನು ನಿಯೋಜಿಸಿದ್ದಾರೆ, ಅಲ್ಲಿ ಅವರು ಎಲ್ಲವನ್ನೂ ಎದುರಿಸಬೇಕಾಗುತ್ತದೆ. ಅವರು ಬಹಳ ಸಂವೇದನಾಶೀಲರು, ಇಲ್ಲಿನ ನಾಗರಿಕ ವಿಮಾನಯಾನ ಸಚಿವರ ಬಳಿ ಹೋಗಿ. ಅವರು ರೈಲ್ವೇ ಮಂತ್ರಿಯನ್ನು ಕರೆತರುತ್ತಾರೆ ಮತ್ತು ನೀವು ಎಲ್ಲಾ ಮಂತ್ರಿಗಳೊಂದಿಗೆ ಕೆಲಸ ಮಾಡಬೇಕು. ನಾನು  ಹೀಗೆ ಹೇಳುತ್ತೇನೆ, 'ಪ್ರವಾಸೋದ್ಯಮವು ದೊಡ್ಡ ಹೋಮ,  ಈ ಹೋಮದಲ್ಲಿ  ಪ್ರತಿಯೊಬ್ಬರೂ ತಮ್ಮ ಆಹುತಿಯನ್ನು ನೀಡಬೇಕು ಮತ್ತು ಈ ಆಹುತಿಯನ್ನು ನೀಡುವ ಕೆಲಸ ನಿಮ್ಮದು.ʼ ಆದರೆ ನಾನು ಹೇಳುತ್ತೇನೆ,  ನಾನು ಜಾಗತಿಕ ಮಾನದಂಡಗಳ ಪ್ರಕಾರ ಅನುಸರಿಸಿದರೆ, ನಮ್ಮ ಪ್ರವಾಸಿ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿದರೆ ಮತ್ತು ನಿರ್ವಹಿಸಿದರೆ, ನಮ್ಮ ಡಿಜಿಟಲೀಕರಣ ಕ್ರಾಂತಿಯ ಮಾದರಿಯಂತೆ ಇಡೀ ಜಗತ್ತಿಗೆ ಮಾದರಿಯನ್ನು ಪ್ರದರ್ಶಿಸುವ ಮೂರು ಸಮಸ್ಯೆಗಳನ್ನು ನಾವು ಪರಿಹರಿಸುತ್ತೇವೆ.
 
ಮೊದಲನೆಯದಾಗಿ, ಆರ್ಥಿಕತೆಗೆ ಬೃಹತ್ ಕೊಡುಗೆ ಇರುತ್ತದೆ, ಕೌಶಲ್ಯದಲ್ಲಿ ಭಾರಿ ಹೆಚ್ಚಳವಾಗುತ್ತದೆ ಮತ್ತು ಸರಿಯಾಗಿ ಸೂಚಿಸಿದಂತೆ, ಪ್ರವಾಸೋದ್ಯಮವನ್ನು ನಿರ್ವಹಿಸಲು ನಮ್ಮಲ್ಲಿ ಪರಿಣಿತರು ಇದ್ದರೆ, ಪ್ರತಿಯೊಬ್ಬ ಪ್ರವಾಸಿಗರು ಕನಸಿನೊಂದಿಗೆ ಬರುತ್ತಾರೆ, ಅವರು ಬಿಕ್ಕಟ್ಟುಗಳನ್ನು ಎದುರಿಸಲು ಬಯಸುವುದಿಲ್ಲ.   ಅವರು ಅಗತ್ಯವಿದ್ದಾಗ ಮಾರ್ಗದರ್ಶನ ಬಯಸುತ್ತಾರೆ, ಅವರು ಭಾರತದ ಅಭಿವೃದ್ಧಿ ಪಯಣವನ್ನು ಯಾವುದೇ ಅಡೆತಡೆಯಿಲ್ಲದೆ ನೋಡಲು ಬಯಸುತ್ತಾರೆ. ವಿವಿಧ ಅಂಶಗಳು ಇದನ್ನು ಮಾಡಿದೆ. ಆದರೆ ಮಾನವ ಸಂಪನ್ಮೂಲ ಬಹಳ ಮುಖ್ಯ, ಅದಕ್ಕಾಗಿಯೇ ನಾನು ಗೌರವಾನ್ವಿತ ಸಚಿವರು ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕಿಸಲು ವಿನಂತಿಸುತ್ತೇನೆ ಇದರಿಂದ ನೀವು ಈ ವಲಯವನ್ನು ನಿರ್ವಹಿಸಲು ಉತ್ತಮ ಗುಣಮಟ್ಟದ, ಅತ್ಯುತ್ತಮ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸಬಹುದು.

ನಾವು ಪ್ರವಾಸೋದ್ಯಮವನ್ನು ಅತ್ಯಂತ ಅಗ್ಗವಾಗಿಸಬೇಕು, ನಮ್ಮ ಗೌರವಾನ್ವಿತ ಪ್ರಧಾನಮಂತ್ರಿಯವರಿಗಿಂತ ದೊಡ್ಡ ಪ್ರವಾಸೋದ್ಯಮದ ಉತ್ತಮ ರಾಯಭಾರಿ ಇರಲಾರಲು. ಲಕ್ಷದ್ವೀಪದಲ್ಲಿ ಕೆಲವೇ ಕ್ಷಣಗಳನ್ನು ಅವರು ಕಳೆದಿದ್ದು ಅದರ ಬಗ್ಗೆ ಇಡೀ ಜಗತ್ತಿಗೆ ತಿಳಿಯಿತು. ನೀವು ಈ ದೇಶದ ಪ್ರತಿಯೊಂದು ಭಾಗವನ್ನು ಅನ್ವೇಷಿಸಬೇಕು, ನೀವು ಇಂಡಿಯನ್ ಕೌನ್ಸಿಲ್ ಆಫ್ ಕಲ್ಚರಲ್ ರಿಲೇಶನ್ಸ್, ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್, ನಮ್ಮ ವಿದೇಶಿ ಮಿಷನ್ಗಳು ಮತ್ತು ಸಾಮಾನ್ಯ ಸಾಂಸ್ಕೃತಿಕ ಕೇಂದ್ರಗಳಂತಹ ಸಂಸ್ಥೆಗಳನ್ನು ಹೊಂದಿದ್ದೀರಿ.

ಪಶ್ಚಿಮ ಬಂಗಾಳ ರಾಜ್ಯದ ಗವರ್ನರ್ ಆಗಿ, ನಾನು ಹತ್ತು ರಾಜ್ಯಗಳನ್ನು ಹೊಂದಿರುವ ಪೂರ್ವ ವಲಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷನಾಗಿದ್ದೆ. ಮೇಘಾಲಯದಂತಹ ಪ್ರದೇಶಕ್ಕೆ ಹೋದರೆ ನೀರಿನ ಪರಿಶುದ್ಧತೆ ನೋಡಿ ಬೆರಗಾಗುತ್ತೀರಿ, ಪರಿಸರ ಸ್ನೇಹಿ ಗ್ರಾಮವನ್ನು ನೋಡಿ ಬೆರಗಾಗುತ್ತೀರಿ. ಈ ಹತ್ತು ವರ್ಷಗಳಲ್ಲಿ ನಾವು ಪ್ರವಾಸೋದ್ಯಮಕ್ಕೆ ಅದ್ಭುತಗಳನ್ನು ಸೃಷ್ಟಿಸಿದ್ದೇವೆ.

ಏಕತೆಯ ಪ್ರತಿಮೆಯು ನಮ್ಮ ದೇಶದ ಸಂಸ್ಕೃತಿ ಮತ್ತು ಇತಿಹಾಸದ ಸಮ್ಮಿಲನವಾಗಿದೆ, ಇದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸ್ಮಾರಕವಾಗಿದೆ. ನಾವು ತುಂಬಾ ಉದ್ದವಾದ ಸುರಂಗಗಳು ಮತ್ತು ಸೇತುವೆಗಳನ್ನು ನಿರ್ಮಿಸಿದ್ದೇವೆ  ಅದನ್ನು ರಾಜತಾಂತ್ರಿಕರು  ಮೌನವಾಗಿ ಗಮನಿಸಿರಬೇಕು, ಈಗ ಭಾರತ ಮಂಟಪ ಮತ್ತು ಯಶೋಭೂಮಿಯನ್ನು  ನೋಡಿರಬೇಕು. ಇದೆಲ್ಲವೂ ನಡೆಯುತ್ತಿದೆ. ಈ ಪರಿಸ್ಥಿತಿಯನ್ನು ಗಮನಿಸಿದರೆ, ನಾವು ವಿಶ್ವದ ಅತ್ಯಂತ ಹಳೆಯ ನಾಗರಿಕತೆಯಾಗಿರುವುದರಿಂದ ವಿಶ್ವ ಪ್ರವಾಸೋದ್ಯಮ ನಕ್ಷೆಯಲ್ಲಿ ನಮ್ಮ ಘನತೆಗೆ ಸರಿಯಾದ ಸ್ಥಾನವನ್ನು ಪಡೆಯಬೇಕು.

ನಾವು 45 ಪಾರಂಪರಿಕ ತಾಣಗಳನ್ನು ಹೊಂದಿದ್ದೇವೆ ಎಂದು ಯುನೆಸ್ಕೋ ಹೇಳುತ್ತದೆ, ನಾನು ಆ ಸಂಖ್ಯೆಯನ್ನು ಅಷ್ಟಕ್ಕೇ ಮಿತಿಗೊಳಿಸುವುದಿಲ್ಲ. ಅವರು ತಮ್ಮ ವೈಜ್ಞಾನಿಕ ಅಳತೆಗಳಿಂದ ಈ ಸಂಖ್ಯೆಯನ್ನು ನಿರ್ಧರಿಸಿದ್ದಾರೆ ಆದರೆ ಈ ಸಂಖ್ಯೆ ಹಲವು ಪಟ್ಟು ಹೆಚ್ಚಿದೆ. ನೀವು ಪಾಲ್ಗೊಳ್ಳುವ ದುರ್ಗಾ ಪೂಜೆಯಂತಹ ನಮ್ಮ ಸಂಸ್ಕೃತಿಯನ್ನು ಇದು ಪ್ರತಿಬಿಂಬಿಸುತ್ತದೆ. ಗಣೇಶ ಚತುರ್ಥಿ, ಓಣಂ, ಹೋಳಿ, ದೀಪಾವಳಿ ಮತ್ತು ನಮ್ಮ ಹಬ್ಬಗಳು ಪ್ರವಾಸೋದ್ಯಮಕ್ಕೆ ಬಹಳ ಸೆಳೆಯುವ ಆಕರ್ಷಣೆಯನ್ನು ಹೊಂದಿವೆ ಎಂದು ಹೇಳುತ್ತೇನೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗೋಲಿಯಾಕ್ಕೆ ಹೋದಾಗ ಇತಿಹಾಸವನ್ನು ಸೃಷ್ಟಿಸಿದರು, ಅವರು ತಮ್ಮ ದೇಶದ ಮುಖ್ಯ ಹಬ್ಬವನ್ನು ಮುಂದೂಡಿದರು, ಉದಾಹರಣೆಗೆ, ನಮ್ಮ ದೀಪಾವಳಿ ನಿರ್ದಿಷ್ಟ ತಿಂಗಳಲ್ಲಿ ಇರುತ್ತದೆ, ಅವರು ತಮ್ಮ ದೇಶದ ಸಂಸ್ಕೃತಿಯನ್ನು ಪ್ರದರ್ಶಿಸಲು ಬಯಸಿದ್ದರಿಂದ ಇದನ್ನು ಒಂದು ತಿಂಗಳ ಹಿಂದೆ ನಡೆಸಲಾಯಿತು.

ಇಲ್ಲಿ ಗೌರವಾನ್ವಿತ ಪ್ರಧಾನಮಂತ್ವರಿಯವರ ಮಾತುಗಳನ್ನು ಕೇಳುವ ಸೌಭಾಗ್ಯ ನಿಮಗೆ ಸಿಕ್ಕಿದೆ. ಅವರು ಯಾವುದನ್ನೂ ಬಿಟ್ಟಿಲ್ಲ. ನಾವು ಸಾಧಿಸಿರುವ ಈ ಎಲ್ಲಾ ಸಾಧನೆಗಳನ್ನು ಅವರು ಉಲ್ಲೇಖಿಸಿದ್ದಾರೆ. ಇಂದು ನಾವು ಭಾರತಕ್ಕೆ ಇತರ ಕ್ಷೇತ್ರಗಳಲ್ಲಿ ಸರಿಯಾದ ಸ್ಥಾನದಲ್ಲಿ ಇರಿಸಿರುವಂತೆ ಭಾರತವು ಪ್ರವಾಸೋದ್ಯಮದಲ್ಲಿ ತನ್ನ ಸರಿಯಾದ ಸ್ಥಾನದಲ್ಲಿ ಇರಿಸಬೇಕು ಎಂದು ಪ್ರತಿಜ್ಞೆ ಮಾಡೋಣ
 
ಇಂದು, ನಾನು ಹಾಗೆ ಹೇಳುವುದಾದರೆ, ಭಾರತವು ನೀರು, ಭೂಮಿ, ಆಕಾಶ ಮತ್ತು ಬಾಹ್ಯಾಕಾಶದಲ್ಲಿ ವಿಜ್ರಂಭಿಸುತ್ತಿದೆ. ನಾವು ಸಮುದ್ರದಲ್ಲಿ, ಭೂಮಿಯಲ್ಲಿ, ಆಕಾಶದಲ್ಲಿ ಅಥವಾ ಬಾಹ್ಯಾಕಾಶದಲ್ಲಿನ ಬೆಳವಣಿಗೆಗಳನ್ನು ನೋಡಿದರೆ, ನಮ್ಮ ಸಾಧನೆಗಳು ಜಾಗತಿಕವಾಗಿ ಪ್ರತಿಧ್ವನಿಸುತ್ತವೆ. ನಾವು ನಮ್ಮ ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ಆರ್ಥಿಕ ಅಭಿವೃದ್ಧಿಯನ್ನು ಮಾಡುತ್ತಿದ್ದೇವೆ, ಅಭಿವೃದ್ಧಿ ಹೊಂದಿದ ದೇಶಗಳು ಸೇರಿದಂತೆ ಇತರ ದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದ್ದೇವೆ. ಕಳೆದ 5000 ವರ್ಷಗಳಿಂದ ಭಾರತವನ್ನು ಚಿನ್ನದ ಗಣಿಯಂತಾಗಿಸುವ ಕೆಲಸವನ್ನು ಮಾಡಲಾಗಿದೆ ಮತ್ತು ಪ್ರವಾಸಿಗರಿಗಾಗಿ ಕಳೆದ 10 ವರ್ಷಗಳಲ್ಲಿ, ಅಭಿವೃದ್ಧಿಯು ಆ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ, ಪ್ರವಾಸೋದ್ಯಮ ಸಚಿವರಿಗೆ ಈಗ ಅವರ ಕಲ್ಪನೆಯು ಹಾರಾಟ ನಡೆಸಬೇಕಾಗಿದೆ. ನಿಮ್ಮ ವಿಮಾನವು ಬಾಹ್ಯಾಕಾಶದಲ್ಲಿರಬೇಕು. ಪ್ರವಾಸೋದ್ಯಮದ ಪ್ರತಿಯೊಂದು ಪ್ರದೇಶವು ತಿಳಿದಿರುವ ಮತ್ತು ಪ್ರಭಾವಶಾಲಿಯಾಗಿ ತಿಳಿದಿರುವ ಪ್ರಯತ್ನವನ್ನು ನೀವು ಮಾಡಬೇಕು ಮತ್ತು ನೀವು ನಮ್ಮ ವಿದೇಶಿ ಕಾರ್ಯಾಚರಣೆಗಳನ್ನು ರಿಯಾಯಿತಿಯಲ್ಲಿ ಮಿಷನ್ ಮೋಡ್ನಲ್ಲಿ ಇರಿಸುತ್ತೀರಿ ಎಂದು ನನಗೆ ಖಾತ್ರಿಯಿದೆ. ಅದು ನಮ್ಮನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ನಮ್ಮ ಆರ್ಥಿಕತೆಯನ್ನು ಪ್ರೇರೇಪಿಸುತ್ತದೆ ಮತ್ತು ನನ್ನ ಪ್ರಕಾರ, ನಾನು ಆಗ  ಇಲ್ಲದಿರಬಹುದು. ಭಾರತವು ತನ್ನ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುವ ಮೊದಲು ನಾವು ಅದನ್ನು ಸಾಧಿಸಲು ಉದ್ದೇಶಿಸಿದ್ದೇವೆ.

ವಿಭಿನ್ನ ವಲಯಗಳಲ್ಲಿ ಕಾರ್ಯಪಡೆಗಳನ್ನು ರಚಿಸುವುದು ದೊಡ್ಡ ಜಿಗಿತವನ್ನು ತೆಗೆದುಕೊಳ್ಳುವ ಒಂದು ಮಾರ್ಗವಾಗಿದೆ, ಇದು ನೆಲದ ವಾಸ್ತವತೆಯನ್ನು ಪರಿಶೀಲಿಸುತ್ತದೆ, ಸಮನ್ವಯಗೊಳಿಸುತ್ತದೆ ಮತ್ತು ಫಲಿತಾಂಶಗಳನ್ನು ನೀಡುತ್ತದೆ. ಇದೆಲ್ಲವೂ ಆಗುತ್ತದೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ.

ಜನರು ಕೆಲಸ ಹುಡುಕುತ್ತಿದ್ದಾರೆ, ಬಹಳ ದಿನಗಳಿಂದ ನಾವು ಲಭ್ಯವಿರುವ ಏಕೈಕ ಉದ್ಯೋಗವೆಂದರೆ ಸರ್ಕಾರಿ ಉದ್ಯೋಗವೇ ಎಂದು ಭಾವಿಸಿದ್ದೇವೆ. ಭಾರತವು ಹೂಡಿಕೆ ಮತ್ತು ಅವಕಾಶಗಳಿಗೆ ವಿಶ್ವದ ನೆಚ್ಚಿನ ಸ್ಥಳ ಎಂದು ವಿಶ್ವಬ್ಯಾಂಕ್ ಹೇಳಿದರೆ, ಅದು ಖಂಡಿತವಾಗಿಯೂ ಸರ್ಕಾರಿ ಉದ್ಯೋಗಗಳಿಗೆ ಅಲ್ಲ, ಅಂದರೆ ಅವಕಾಶಗಳು ಬೇರೆಡೆ ಇವೆ ಎಂದು ಅರ್ಥ.

ಪ್ರವಾಸೋದ್ಯಮವು ಹಲವಾರು ಅವಕಾಶಗಳನ್ನು ನೀಡುತ್ತದೆ, ಅಲ್ಲಿ ನೀವು ಮೌಲ್ಯವನ್ನು ಸೇರಿಸಬಹುದು, ನಮ್ಮ ಉತ್ಪನ್ನಗಳಿಗೆ ದೊಡ್ಡ ಮಾರುಕಟ್ಟೆ ಇದೆ. ಎರಡು ದಿನಗಳ ಹಿಂದೆ ನಾನು ಉತ್ತರ ಪ್ರದೇಶದಲ್ಲಿದ್ದ ವಸ್ತು ಪ್ರದರ್ಶನಕ್ಕೆ ಹೋಗಿದ್ದೆ. ಅಲ್ಲಿ, “ಒಂದು ಜಿಲ್ಲೆ, ಒಂದು ಉತ್ಪನ್ನ” ಎಂಬ ಪ್ರಧಾನ ಮಂತ್ರಿಯವರ ದೂರದೃಷ್ಟಿಯು ನಿಜವಾಗಿರುವುದನ್ನು ನಾನು ನೋಡಿದೆ. ನಾನು 75 ಜಿಲ್ಲೆಗಳ 75 ಉತ್ಪನ್ನಗಳನ್ನು ನೋಡಿದ್ದೇನೆ ಮತ್ತು ನನಗೆ ಅಲ್ಲಿಂದ ಹೊರಡಲು ಮನಸ್ಸು ಬರಲಿಲ್ಲ, ಹುಲ್ಲಿನ ಕೆಲಸ, ಹಿತ್ತಾಳೆ ಕೆಲಸ. ನಾನು ನಿನ್ನೆ ಇನ್ಸ್ಟಿಟ್ಯೂಟ್ ಒಂದಕ್ಕೆ ಹೋಗಿದ್ದೆ, ಬಿದಿರಿನಿಂದ ಎಂಥಾ ಮರವನ್ನು ತಯಾರಿಸಲಾಗುತ್ತದೆ! ತೇಗಕ್ಕಿಂತ ಗಟ್ಟಿ. ಸೂರಜ್ ಕುಂಡ್ನಲ್ಲಿ ಈಶಾನ್ಯ ರಾಜ್ಯಗಳ ಪ್ರದರ್ಶನವನ್ನು ನೋಡುವ ಅವಕಾಶ ನನಗೆ ಸಿಕ್ಕಿತು, ಎಂತಹ ಅದ್ಭುತ ಕೆಲಸ, ಪ್ರವಾಸಿಗರು ಅದನ್ನು ನೋಡುತ್ತಲೇ ಇರುತ್ತಾರೆ.

ನಾವು ಅದನ್ನು ವಿಶ್ವ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಬಳಸಬೇಕು ಏಕೆಂದರೆ ನಮ್ಮ ಮೌಲ್ಯಗಳು ಏನು ಹೇಳುತ್ತವೆ? ನಮ್ಮ ಸಂಸ್ಕೃತಿ ಏನು ಹೇಳುತ್ತದೆ? ಅದು ಹೇಳುತ್ತದೆ - "ಅತಿಥಿ ದೇವೋ ಭವ". ಅದಕ್ಕಾಗಿಯೇ ಜಿ 20 ಸಮಯದಲ್ಲಿ ಏನಾಯಿತು ಎಂಬುದು ಉಪರಾಷ್ಟ್ರಪತಿಯಾಗಿ ನನಗೆ ತುಂಬಾ ತೃಪ್ತಿ ತಂದಿದೆ ಏಕೆಂದರೆ ಇತರ ದೇಶದ ನಾಯಕರು ಅದರ ಬಗ್ಗೆ ಮಾತನಾಡಿದ್ದಾರೆ. ಇನ್ನೂರಕ್ಕೂ ಹೆಚ್ಚು ವಿದೇಶಿ ನಿಯೋಗಗಳು ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಭೇಟಿ ನೀಡಿ, ಅವರಿಗೆ ನಮ್ಮ ಪಾಕಪದ್ಧತಿ, ನಮ್ಮ ಸಾಂಸ್ಕೃತಿಕ ಸಂಪತ್ತುಗಳು ಮತ್ತು ನಮ್ಮ ಪ್ರವಾಸಿ ಆಕರ್ಷಣೆಗಳನ್ನು ತೋರಿಸಿದರು. ಅವರಿಗೆ ಹೇಳಲು ಒಂದೇ ಇದ್ದದ್ದು, ಪ್ರಶಂಸೆಗಳು.  ಯಾವುದೇ ಅನುಮನಾನವಿಲ್ಲದೆ, ನಾವು ಸ್ಥಾಪಿಸಿದ ಮಾನದಂಡವು ತುಂಬಾ ಎತ್ತರವಾಗಿದೆ ಮತ್ತು ಸಾಧಿಸುವುದು ಕಷ್ಟಕರವಾಗಿದೆ ಎಂದು ಹೇಳಲಾಯಿತು.

ಆದ್ದರಿಂದ, ನಿಮ್ಮ ತೃಪ್ತಿಯ ಮಟ್ಟವು ಪ್ರತಿದಿನ ಬದಲಾಗುತ್ತಿರಬೇಕು, ನೀವು ಒಂದು ಹಂತವನ್ನು ತಲುಪಿದಾಗ, ಅದು ಮುಂದಿನ ಹಂತಕ್ಕೆ ಹೋಗಬೇಕು. ನಿಮ್ಮ ಸಚಿವಾಲಯ, ಗಜೇಂದ್ರಜಿಯವರೇ, ನನ್ನ ಪ್ರಕಾರ, ಉದ್ಯೋಗದ ಉತ್ಪಾದಕ ಆಗುತ್ತದೆ, ಉದ್ಯಮಶೀಲತೆ ಅಭಿವೃದ್ಧಿ ಹೊಂದುತ್ತದೆ. ಮೌಲ್ಯವರ್ಧನೆಯ ವಿಚಾರದಲ್ಲಿ ಇದು ನಾವೀನ್ಯತೆಯ ಕೇಂದ್ರವಾಗಲಿದೆ ಮತ್ತು ಇಡೀ ದೇಶಕ್ಕೆ ಹೆಚ್ಚುವರಿ ಪ್ರಯೋಜನವಾಗಲಿದೆ.

"ಅತಿಥಿ ದೇವೋ ಭವ" ನಿಮ್ಮ ಕಾರ್ಯಕ್ರಮ ಎಷ್ಟು ಚೆನ್ನಾಗಿದೆ, ದೇಖೋ ಅಪ್ನಾ ದೇಶ್, ಸ್ವದೇಶ್ ದರ್ಶನ್, ಆಧ್ಯಾತ್ಮಿಕ ಪ್ರವಾಸೋದ್ಯಮ, ವೈದ್ಯಕೀಯ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ, ಇವೆಲ್ಲವೂ ಉತ್ತಮ ಗುಣಮಟ್ಟದ್ದಾಗಿದೆ, ನಮ್ಮ ಧಾರ್ಮಿಕ ಸ್ಥಳಗಳ ನಿರ್ವಹಣೆ ಎಲ್ಲೆಡೆ ಸುಧಾರಿಸಿದೆ. ಈ ಕ್ರಮಗಳ ಪರಿಣಾಮವಾಗಿ, ದೇಶದ ಪ್ರವಾಸೋದ್ಯಮದಲ್ಲಿ ದೊಡ್ಡ ವಿಸ್ತರಣೆ ಕಂಡುಬಂದಿದೆ.

ಆದ್ದರಿಂದ, ನಾನು ನಿಮ್ಮನ್ನು ಶ್ಲಾಘಿಸುತ್ತಾ ಮತ್ತು ವಿಶ್ವ ಪ್ರವಾಸೋದ್ಯಮ ದಿನದಂದು ಹಾಜರಿದ್ದ ಪ್ರತಿಯೊಬ್ಬರನ್ನು ಅಭಿನಂದಿಸುತ್ತಾ, ಪ್ರವಾಸಿಗರಾಗಿರಲು ಎಲ್ಲರಿಗೂ ಮನವಿ ಮಾಡುತ್ತೇನೆ. ಪ್ರಯಾಣಕ್ಕಿಂತ ದೊಡ್ಡ ಶಿಕ್ಷಣ ಇನ್ನೊಂದಿಲ್ಲ. ಪ್ರವಾಸೋದ್ಯಮಕ್ಕಿಂತ ಉತ್ತಮ ಸಂಪರ್ಕವಿಲ್ಲ,  ನೀವು ಖಿನ್ನತೆಗೆ ಒಳಗಾಗಿದ್ದರೆ ಶಾಂತಿಯ ಅನುಭವವನ್ನು ಪಡೆಯುತ್ತೀರಿ. ನೀವು ಹಿಮಾಚಲ ಪ್ರದೇಶ ಅಥವಾ ಉತ್ತರಾಖಂಡ, ಉತ್ತರ ಪ್ರದೇಶ, ಮಿಜೋರಾಂ, ಮೇಘಾಲಯ, ಕೇರಳದಲ್ಲಿ ಸಮಯ ಕಳೆಯುವಾಗ ನೀವು ನಿರಾಳರಾಗುತ್ತೀರಿ. ನನ್ನ ತವರು ರಾಜ್ಯ ರಾಜಸ್ಥಾನ ಸೇರಿದಂತೆ ಈ ಎಲ್ಲಾ ರಾಜ್ಯಗಳನ್ನು ನಾನು ಹೆಸರಿಸಬಹುದು.

ಆದ್ದರಿಂದ, ಸ್ನೇಹಿತರೇ, ಪ್ರತಿಯೊಬ್ಬರ ಜೀವನವನ್ನು ಸುಲಭಗೊಳಿಸಲು ನಾವು ಈ ದೇಶದಲ್ಲಿ ವೇಗವಾಗಿ ಚಲಿಸುತ್ತಿದ್ದೇವೆ ಎಂದು ಈ ಸಂದರ್ಭದಲ್ಲಿ ನನಗೆ ಸಂತೋಷವಾಗಿದೆ. ನಾವು ವ್ಯಾಪಾರವನ್ನು ಸುಲಭಗೊಳಿಸುತ್ತಿದ್ದೇವೆ, ವ್ಯವಹಾರವನ್ನು ಸುಲಭಗೊಳಿಸುತ್ತಿದ್ದೇವೆ, ಅಡುಗೆ ಅನಿಲವನ್ನು ಎಂದಿಗೂ ಹೊಂದಲಾರದೆಂದುಕೊಂಡಿದ್ದವರಿಗೆ ನೀಡಲಾಗುತ್ತಿದೆ, ಕೈಗೆಟುಕುವ ದರದಲ್ಲಿ ಮನೆಗಳನ್ನು ಒದಗಿಸುತ್ತಿದ್ದೇವೆ. 

ಸಾಮಾನ್ಯವಾಗಿ ನಗರ ಜೀವನಕ್ಕೆ ಸಂಬಂಧಿಸಿದ ಸೌಕರ್ಯಗಳು ಈಗ ಹಳ್ಳಿಗಳಲ್ಲಿ ಲಭ್ಯವಿದೆ. ನಿಮ್ಮ ಈ ಮಹತ್ತರವಾದ ಪ್ರಯತ್ನದಿಂದ ಹಳ್ಳಿಗಳಿಗೂ ಅಪಾರವಾದ ಪ್ರಯೋಜನವಾಗುವುದರಲ್ಲಿ ಸಂದೇಹವಿಲ್ಲ. ನಿಮ್ಮೆಲ್ಲರಿಗೂ ಅಭಿನಂದನೆಗಳು ಮತ್ತು ವಿಶೇಷವಾಗಿ ನಿಮ್ಮ ತಾಳ್ಮೆಗಾಗಿ ದೊಡ್ಡ ಧನ್ಯವಾದಗಳು.

ಧನ್ಯವಾದಗಳು.

 

*****



(Release ID: 2060159) Visitor Counter : 4


Read this release in: English , Urdu , Hindi