ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav g20-india-2023

ಇಂಟರ್ ನ್ಯಾಷನಲ್ ಸ್ಟ್ರಾಟೆಜಿಕ್ ಎಂಗೇಜ್ಮೆಂಟ್ ಪ್ರೋಗ್ರಾಂ (IN-STEP) ನಲ್ಲಿ ಭಾಗವಹಿಸುವವರೊಂದಿಗೆ  ಸಂವಾದದಲ್ಲಿ  ಉಪರಾಷ್ಟ್ರಪತಿಗಳ ಭಾಷಣ (Excerpts)

Posted On: 27 SEP 2024 4:50PM by PIB Bengaluru

ಗೌರವಾನ್ವಿತರೇ,

ಈ ಪ್ರಥಮ ಇಂಟರ್ ನ್ಯಾಷನಲ್ ಸ್ಟ್ರಾಟೆಜಿಕ್ ಎಂಗೇಜ್ಮೆಂಟ್ ಪ್ರೋಗ್ರಾಮ್ (IN-STEP) ನಲ್ಲಿ ನಿಮ್ಮೆಲ್ಲರೊಂದಿಗೆ ಇರುವುದು ನನಗೆ ವಿಶೇಷವಾಗಿದೆ.  ಇದು  ಅಂತರರಾಷ್ಟ್ರೀಯ ಸಹಕಾರ ಮತ್ತು ಕಾರ್ಯತಂತ್ರದ ಮಹತ್ವದ ವಿಷಯಗಳ ಬಗ್ಗೆ ತಿಳುವಳಿಕೆಯನ್ನು ಉತ್ತೇಜಿಸುವ ಪ್ರಮುಖ ಹೆಜ್ಜೆಯಾಗಿದೆ. ಈ ಪ್ರದೇಶದ ಪರಿಸರವು ಪ್ರತಿ ನಿಮಿಷಕ್ಕೂ ಬದಲಾಗುತ್ತಿದೆ, ತಾಂತ್ರಿಕ ಪ್ರಗತಿಯಿಂದಾಗಿ ಇಂದು ಸವಾಲುಗಳು ಸಂಪೂರ್ಣವಾಗಿ ವಿಭಿನ್ನ ಸ್ವರೂಪವನ್ನು ಹೊಂದಿವೆ.

ಇದು ನಿಮಗೊಂದು ಅವಕಾಶವನ್ನು ನೀಡುತ್ತದೆ. ನಾವು ಸಭೆಯ ರಚನೆಯನ್ನು ನೋಡಿದರೆ, 21 ದೇಶಗಳಿಂದ 27 ಅಂತರರಾಷ್ಟ್ರೀಯ ಪ್ರತಿನಿಧಿಗಳು ಮತ್ತು 11 ಹಿರಿಯ ಭಾರತೀಯ ಮಿಲಿಟರಿ ಮತ್ತು ನಾಗರಿಕ ಅಧಿಕಾರಿಗಳನ್ನು ಒಳಗೊಂಡಿರುವ ಒಂದು ಸಭೆಯಾಗಿದೆ. ನಿಮ್ಮ ಉಪಸ್ಥಿತಿಯು ಜಾಗತಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಯ ಕಡೆಗೆ ನಮ್ಮ ಜಂಟಿ ಬದ್ಧತೆಗೆ ಸಾಕ್ಷಿಯಾಗಿದೆ. ಇದು ಮಾನವೀಯತೆ ಮತ್ತು ನಮ್ಮ ಗ್ರಹಕ್ಕೆ ತುಂಬಾ ಮುಖ್ಯವಾಗಿದೆ.

ಶಾಂತಿ ಮತ್ತು ಸಾಮರಸ್ಯದ ಬಗ್ಗೆ ಚಿಂತಿಸುವುದು ಸ್ಪಷ್ಟ ಮಾನವೀಯತೆಯ ಅಡಿಪಾಯವಾಗಿದೆ. ಜಾಗತಿಕ ಶಾಂತಿಯು ಸುಸ್ಥಿರ ಅಭಿವೃದ್ಧಿಗೆ ಭರವಸೆಯಾಗಿದೆ, ಅಸ್ತಿತ್ವಕ್ಕೆ ಏಕೈಕ ಮಾರ್ಗವಾಗಿದೆ. ಶಾಂತಿ ಮತ್ತು ಅಹಿಂಸೆಯ ಧರ್ಮಪ್ರಚಾರಕ ಮಹಾತ್ಮ ಗಾಂಧೀಜಿಯವರ ನಾಡಿನಲ್ಲಿ ಆಯೋಜಿಸಿರುವ ಈ ಸಮಾರಂಭ ಅತ್ಯಂತ ಮಹತ್ವದ್ದಾಗಿದೆ.

ನನಗಿಂತ ನಿಮಗೆ ಹೆಚ್ಚು ತಿಳಿದಿದೆ; ಶಕ್ತಿಯ ಸ್ಥಾನದ ಮೂಲಕ ಶಾಂತಿಯನ್ನು ಉತ್ತಮವಾಗಿ ಸಂರಕ್ಷಿಸಬಹುದು. ಇದು ರಾಷ್ಟ್ರೀಯ ಭದ್ರತೆಗೆ ಪ್ರಾಮುಖ್ಯತೆ ನೀಡುತ್ತದೆ. ಭೌಗೋಳಿಕ ರಾಜಕೀಯ ಸಂರಚನೆಗಳು ಮತ್ತು ಸಂಘರ್ಷಗಳು ಭದ್ರತಾ ದೃಷ್ಟಿಕೋನಗಳಲ್ಲಿ ಭಾರೀ ಬದಲಾವಣೆಯನ್ನು ಉಂಟುಮಾಡಿವೆ.

ಕಮಾಂಡೆಂಟ್ ಅವರು ಪ್ರಸ್ತುತ ಪರಿಸ್ಥಿತಿ ಮತ್ತು ಕಾದಿರುವ ಅಪಾಯಗಳ ಬಗ್ಗೆ ವಿವರಿದರು. ಕೆಲವು ವರ್ಷಗಳ ಹಿಂದೆ ಊಹಿಸಲಾಗದ್ದು ಇಂದು ನಡೆಯುತ್ತಿದೆ. ಮುಂದಿನ ಕ್ಷಣದಲ್ಲಿ ಏನಾಗಬಹುದು ಎಂಬುದರ ಬಗ್ಗೆ ನಮಗೆ ಯಾವುದೇ ಕಲ್ಪನೆ ಇಲ್ಲ.

ಈ ಕ್ಷೇತ್ರದಲ್ಲಿನ ಮಾದರಿ ಬದಲಾವಣೆಯ ಕಾರಣದಿಂದಾಗಿ, ಬಹುಪಕ್ಷೀಯ ತೊಡಗಿಸಿಕೊಳ್ಳುವಿಕೆಗಳು ರಾಷ್ಟ್ರೀಯ ಭದ್ರತೆಯ ಒಂದು ಅನಿವಾರ್ಯ ಅಂಗವಾಗಿ ಹೊರಹೊಮ್ಮಿವೆ. ಹಿಂದೆ ದೇಶಗಳು ಭದ್ರತಾ ವಿಷಯಗಳನ್ನು ಸಾಂಪ್ರದಾಯಿಕವಾಗಿ ಮತ್ತು ತಮ್ಮಷ್ಟಕ್ಕೆ ತಾವೇ ನಿಭಾಯಿಸಬಹುದಿತ್ತು, ಆದರೆ ಈಗ ವಿವಿಧ ಕಾರಣಗಳಿಂದಾಗಿ ಪರಿಸ್ಥಿತಿಯಲ್ಲಿ ಮೂಲಭೂತ ಬದಲಾವಣೆ ಉಂಟಾಗಿದೆ. ಸಂಪರ್ಕ ಜಾಲ, ವಿಚ್ಛಿದ್ರಕಾರಕ ತಂತ್ರಜ್ಞಾನಗಳು ಮತ್ತು ಸಾಂಪ್ರದಾಯಿಕ ಯುದ್ಧ ಪದ್ಧತಿ ಹಿನ್ನೆಲೆಗೆ ಸರಿದಿದೆ.

IN-STEP ವಿವಿಧ ಹಿನ್ನೆಲೆಗಳಿಂದ ಬಂದ ಕ್ರೇತ್ರ ತಜ್ಞರ ಕಲ್ಪನೆಗಳ ಪರಸ್ಪರ ವಿನಿಮಯಕ್ಕೆ ಒಂದು ಮೌಲ್ಯಯುತ ವೇದಿಕೆಯನ್ನು ಒದಗಿಸುತ್ತದೆ. ಇದು ಭದ್ರತೆಗೆ ಸಂಬಂಧಿಸಿದ ಅಂಶಗಳಲ್ಲಿ ವೇಗವಾಗಿ ಹೊರಹೊಮ್ಮುತ್ತಿರುವ ಬದಲಾವಣೆಗಳು ಮತ್ತು ಸವಾಲುಗಳ ಬಗ್ಗೆ ಮಾಹಿತಿ ನೀಡಲು ಹಾಗೂ ದೃಷ್ಟಿಕೋನವನ್ನು ವಿಸ್ತರಿಸಲು ಮುಕ್ತ ಮತ್ತು ರಚನಾತ್ಮಕ ಸಂವಾದಕ್ಕೆ ಒಂದು ಅವಕಾಶವಾಗಿದೆ. ಇದು ಆವಿಷ್ಕಾರಗಳನ್ನು ಸೃಷ್ಟಿಸಲು, ಊಹೆಗಳನ್ನು ಪ್ರಶ್ನೆ ಮಾಡಲು ಮತ್ತು ಸಮಗ್ರ ಪರಿಹಾರಗಳನ್ನು ಕಂಡುಕೊಳ್ಳಲು ಒಂದು ಅವಕಾಶವಾಗಿದೆ.

ಈ ಸಂದರ್ಭದಲ್ಲಿ ಈ ಕಾರ್ಕ್ರಮವು  ಪ್ರಸ್ತುತವಾಗಿದೆ. ಹಾಗೆಯೇ ಆಯೋಜನೆಯ ಸ್ಥಳವೂ ಕೂಡ - ಭಾರತ, ಮಾನವ ಕುಲದ ಆರನೇ ಒಂದು ಭಾಗದ ನೆಲೆಯಾಗಿರುವ, ಕ್ರಿಯಾತ್ಮಕ ಮತ್ತು ಅತಿದೊಡ್ಡ ಪ್ರಜಾಪ್ರಭುತ್ವವ್ಯವಸ್ಥೆಯನ್ನು ಹೊಂದಿರುವ, ಜಾಗತಿಕ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಯಾವಾಗಲೂ ನಿಲ್ಲುವ ಮತ್ತು ಹಂಬಲಿಸುವ ಟ್ರ್ಯಾಕ್  ರೆಕಾರ್ಡ್  ಹೊಂದಿರುವ ದೇಶ.

ಜಾಗತಿಕ ವಿವಾದಗಳ ಪರಿಹಾರವು ಮಾತುಕತೆ ಮತ್ತು ರಾಜತಾಂತ್ರಿಕತೆಯಿಂದ ಮಾತ್ರ ಸಾಧ್ಯ ಎಂದು ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನಂಬಿದ್ದಾರೆ. ನಮ್ಮ ದೇಶವು ವಿಸ್ತರಣಾ ನೀತಿಯಲ್ಲಿ ಎಂದಿಗೂ ನಂಬಿಕೆ ಇಟ್ಟಿಲ್ಲ ಎಂಬುದನ್ನು ಭಾರತದ ಟ್ರ್ಯಾಕ್ ರೆಕಾರ್ಡ್ ತೋರಿಸುತ್ತದೆ ಎಂದು ಅವರು ಜಗತ್ತಿಗೆ ಹೇಳಿದ್ದಾರೆ. ಆದರೆ ಪ್ರಸ್ತುತ ಜಗತ್ತಿನಲ್ಲಿ ಕೆಲವು ದೇಶಗಳಿವೆ, ಅವರ ನೀತಿಯು ವಿಸ್ತರಣೆಯನ್ನು ಒಳಗೊಂಡಿದೆ. ಈ ಕಠಿಣ ವಿಷಯಗಳನ್ನು ಚಿಂತನ-ಮಂಥನ  ನಿಮಗೆ ಸಾಕಷ್ಟು ಅವಕಾಶವಿದೆ.

IN-STEP ಭಾರತದ ರಾಷ್ಟ್ರೀಯ ಭದ್ರತಾ ಮಂಡಳಿಯ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯದ ನಡುವಿನ ಸಹಯೋಗದ ಪ್ರಯತ್ನವಾಗಿದೆ.

ರಾಷ್ಟ್ರೀಯ ರಕ್ಷಣಾ ಕಾಲೇಜು ಮತ್ತು ವಿವೇಕಾನಂದ ಇಂಟರ್ ನ್ಯಾಶನಲ್ ಫೌಂಡೇಶನ್ ಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ - ಇದು ಒಂದು ಮಹಾನ್ ನೀತಿ ಚಿಂತಕರ ಚಾವಡಿಯಾಗಿದೆ, ಇದು ವಿವಿಧ ಕ್ಷೇತ್ರಗಳಲ್ಲಿನ ಮಹಾನ್ ಪ್ರತಿಭೆಗಳನ್ನು ಒಳಗೊಂಡಿದ್ದು, ಈ ಕಾರ್ಯಕ್ರಮವನ್ನು ರೂಪಿಸುವಲ್ಲಿ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡಿದೆ.

ಈ ಕೋರ್ಸ್ ನಲ್ಲಿ, ಭೌಗೋಳಿಕ ರಾಜಕೀಯ ಮತ್ತು ಭದ್ರತಾ ಸವಾಲುಗಳಿಂದ ಹಿಡಿದು ರಾಜತಾಂತ್ರಿಕ ಮಾತುಕತೆಗಳು ಮತ್ತು ಸಂಘರ್ಷ ಪರಿಹಾರ ತಂತ್ರಗಳವರೆಗಿನ ವೈವಿಧ್ಯಮಯ ವಿಷಯಗಳ ವ್ಯಾಪ್ತಿಯನ್ನು ಒಳಗೊಂಡ ಚರ್ಚೆಗಳು, ಸೆಮಿನಾರ್ಗಳು ಮತ್ತು ಸಂವಾದಾತ್ಮಕ ಅವಧಿಗಳ ಸರಣಿಯಲ್ಲಿ ತೊಡಗಿಸಿಕೊಳ್ಳಲು ನಿಮಗೆ ಅವಕಾಶವಿದೆ ಎಂದು ನಾನು ಭಾವಿಸುತ್ತೇನೆ.

ಇತರ  ದೃಷ್ಟಿಕೋನಗಳನ್ನು ಮುಕ್ತವಾಗಿ ಚರ್ಚಿಸಿದಾಗ ನಿರ್ಣಯದ ಚರ್ಚೆಗಳು ಬಲಗೊಳ್ಳುತ್ತವೆ. ವಿಶೇಷವಾಗಿ ಪ್ರಸ್ತುತ ಕಾಲದಲ್ಲಿ, ವಿಧಾನವು ಕಠಿಣವಾಗಿದೆ ಮತ್ತು ನಮ್ಯತೆಯನ್ನು ಹೊಂದಿರುವುದಿಲ್ಲ ಎಂದು ಜಾಗತಿಕವಾಗಿ ಗಮನಿಸಲಾಗಿದೆ.

ವಿವಾದಗಳನ್ನು ಪರಿಹರಿಸಲು ಮುಖ್ಯವಾದ,  ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಮುಖ್ಯವಾದ ಈ ಎಲ್ಲಾ ಕ್ಷೇತ್ರಗಳಲ್ಲಿ ಹೊಸ ಗಾಳಿ, ಹೊಸ ನವೀನತೆ ಮತ್ತು ಹೊಸ ತಾಂತ್ರಿಕ ವಿಕಾಸದ ಅಗತ್ಯವಿದೆ. ಈ ಪ್ರಮುಖ ಅಂಶಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ನಿಮಗೆ ಅವಕಾಶ ಸಿಗುತ್ತದೆ.

ಸ್ನೇಹಿತರೇ , ನಾವು ಜ್ಞಾನ ವಿನಿಮಯ ಮತ್ತು ಸಹಕಾರದ ಈ ಪ್ರಯಾಣದಲ್ಲಿ ಮುಂದುವರಿಯುತ್ತಿರುವಾಗ, ಇಂದಿನ ಸಂಕೀರ್ಣ ಭೌಗೋಳಿಕ ರಾಜಕೀಯ ಸನ್ನಿವೇಶದಲ್ಲಿ ಇಂತಹ ಉಪಕ್ರಮಗಳ ಪ್ರಾಮುಖ್ಯತೆಯ ಬಗ್ಗೆ ಉದ್ದೇಶಪೂರ್ವಕವಾಗಿ ಚರ್ಚಿಸುವುದು ಅತ್ಯಗತ್ಯವಾಗಿದೆ.

ಇಲ್ಲಿರುವ ಯಾರೂ ಇಂದಿನ ಪರಿಸ್ಥಿತಿಯನ್ನು ಊಹಿಸಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ನಾವು ಇದನ್ನು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ನಮ್ಮ ರಾಡಾರ್ನಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಜಗತ್ತಿನಲ್ಲಿ ನಾವು ಇದ್ದೇವೆ ಎಂದು ತೋರುತ್ತದೆ.

ಇಂದು ಜಗತ್ತು ಭಯಾನಕವಾದ ಸವಾಲುಗಳನ್ನು ಎದುರಿಸುತ್ತಿದೆ , ಹವಾಮಾನ ಬದಲಾವಣೆ , ಸಾಂಕ್ರಾಮಿಕ ರೋಗಗಳು, ಬೆಂಕಿ, ಹಿಮನದಿಗಳ ಕರಗುವಿಕೆ, ಭಯೋತ್ಪಾದನೆ, ಸೈಬರ್ ಬೆದರಿಕೆಗಳು, ಸೈಬರ್ ಅಪರಾಧಗಳು ಮತ್ತು ಜಾಗತಿಕ ಕ್ರಮದ ಅಡ್ಡಿ ಇತ್ಯಾದಿ. ಮತ್ತು ಅತ್ಯಂತ ಆತಂಕಕಾರಿ ಅಂಶವೆಂದರೆ ಇದೆಲ್ಲವೂ ಹಠಾತ್ ಅಥವಾ ಆಕಸ್ಮಿಕವಲ್ಲ.

ನಮ್ಮ ಅವಿವೇಕಿ ಅಧಿಕಾರದ ಬೇಟೆಯಿಂದ  ಅಥವಾ ನಮ್ಮ ವಿಚ್ಛಿದ್ರಕಾರಕ ನೀತಿಗಳಿಂದಾಗಿ ಇವುಗಳು ಹುಟ್ಟಿಕೊಂಡಿವೆ, ಏಕೆಂದರೆ ಅವು ಲಾಭದಾಯಕವಾಗಿವೆ.

ಈ ಪ್ರಕ್ರಿಯೆಯಲ್ಲಿ, ವಿಕಸನಗೊಳ್ಳುತ್ತಿರುವ ಮಾಹಿತಿ ಪರಿಸರ ವ್ಯವಸ್ಥೆ, ವಿಶೇಷವಾಗಿ ಸೋಷಿಯಲ್ ಮೀಡಿಯಾಗಳು, ಕಥನಗಳು  ಮತ್ತು ಸಂವಹನಗಳನ್ನು ಮರುರೂಪಿಸುವ ಮೂಲಕ ಈ ಸಮಸ್ಯೆಗಳನ್ನು ಹೆಚ್ಚಿಸುತ್ತಿದೆ. ದುರುದ್ದೇಶಪೂರಿತ ಪ್ರೇರಣೆಗಳೊಂದಿಗಿನ ಕುತಂತ್ರಗಳು ವಿಘಟನಕಾರಿ ತಂತ್ರಜ್ಞಾನಗಳ ತ್ವರಿತ ಅನ್ವಯವನ್ನು ಅಗತ್ಯಗೊಳಿಸುತ್ತವೆ. ವಾಸ್ತವಿಕ ಆಧಾರಗಳಿಲ್ಲದ, ಆದರೆ ಭಾವನಾತ್ಮಕ ಅಲೆಗಳನ್ನು ಸೃಷ್ಟಿಸಬಲ್ಲ, ಜನರನ್ನು ಉನ್ಮಾದಕ್ಕೆ ತಳ್ಳಬಲ್ಲ ಮತ್ತು ಸಮಗ್ರ ಸಮಾಜ ಹಾಗೂ ಜಗತ್ತಿಗೆ ಬೆದರಿಕೆಯಾಗುವಂತಹ ವಿಭಿನ್ನ ರೀತಿಯ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಬಲ್ಲ ನಿರೂಪಣೆಯನ್ನು ತಟಸ್ಥಗೊಳಿಸಲು ಮಷೀನ್ ಲರ್ನಿಂಗ್ ನಂತದ್ದನ್ನು  ಬಳಸಿಕೊಳ್ಳುವುದು  ನಿಮಗೆ  ಖಂಡಿತವಾಗಿಯೂ  ಅಗತ್ಯವಾಗಿರುತ್ತದೆ.

ಕ್ಷಿಪ್ರ ತಾಂತ್ರಿಕ ಪ್ರಗತಿಗಳು, ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ದೃಶ್ಯಾವಳಿಗಳು ಮತ್ತು ಅಭೂತಪೂರ್ವ ಜಾಗತಿಕ ಅಂತರ್ಸಂಪರ್ಕದಿಂದ ಗುರುತಿಸಲ್ಪಡುವ ಯುಗದಲ್ಲಿ, ಜಾಗತಿಕ ಸಮುದಾಯವು ಈ ಅಸಂಖ್ಯಾತ ಸಂಕೀರ್ಣ ಸಮಸ್ಯೆಗಳನ್ನು ಹೋರಾಡುತ್ತಿದೆ. ಎದುರಿಸುತ್ತಿದೆ. ಹವಾಮಾನ ಬದಲಾವಣೆಯಂತಹ ಕೆಲವು ಸವಾಲುಗಳು ನಮ್ಮ ಅಸ್ತಿತ್ವಕ್ಕೆ ಸವಾಲುಗಳಾಗಿವೆ.

ಈ ಸಂದರ್ಭದಲ್ಲಿ, ಸಹಯೋಗದ ಕ್ರಮ ಮತ್ತು ಸಾಮೂಹಿಕ ಪರಿಹಾರಗಳು ಪ್ರಮುಖ ಮಹತ್ವವನ್ನು ಹೊಂದಿವೆ.

IN-STEP ಪರಿಣಾಮಕಾರಿ ನೀತಿ ರೂಪಣೆ ಮತ್ತು ಸಂಘರ್ಷ ಪರಿಹಾರದ ಮೂಲಾಧಾರವಾಗಿ ಬಹುಪಕ್ಷೀಯತೆ, ಸಹಕಾರ ಮತ್ತು ಸಂವಾದಕ್ಕೆ ನಮ್ಮ ಹಂಚಿಕೊಂಡ ಬದ್ಧತೆಯನ್ನು ಒತ್ತಿಹೇಳುತ್ತದೆ. ದೇಶಗಳು ಒಟ್ಟುಗೂಡಿ ಅರ್ಥಪೂರ್ಣ ಸಂವಾದದಲ್ಲಿ ತೊಡಗಿಸಿಕೊಳ್ಳುವ ಅಗತ್ಯ ಎಂದಿಗಿಂತಲೂ ಹೆಚ್ಚಾಗಿದೆ. ಸಮಯ ಕಳೆದುಹೋಗುತ್ತಿದೆ, ವಿಷಯಗಳು ದಿನದಿಂದ ದಿನಕ್ಕೆ ಅಪಾಯಕಾರಿಯಾಗುತ್ತಿವೆ.

ಒಂದು ಗಾದೆ ಹೇಳುತ್ತದೆ, ನೀವು ತಪ್ಪಾದ ದಾರಿಯಲ್ಲಿದ್ದರೆ, ಯು-ಟರ್ನ್ ತೆಗೆದುಕೊಳ್ಳಲು ಹೆಚ್ಚು ಸಮಯ ತೆಗೆದುಕೊಂಡಷ್ಟೂ, ನೀವು ಹೆಚ್ಚು ಬಳಲುತ್ತೀರಿ. ಇದು ಜಾಗತಿಕ ಯು-ಟರ್ನ್‌ಗೆ ಸಮಯ, ಶಾಂತಿ, ಸಾಮರಸ್ಯ, ಗ್ರಹ ಸಂರಕ್ಷಣೆ, ಎಲ್ಲರ ಸಂತೋಷವನ್ನು ಖಾತ್ರಿಪಡಿಸಲು ಸುಸ್ಥಿರ ಅಭಿವೃದ್ಧಿಗಾಗಿ ಯು-ಟರ್ನ್. ನಮ್ಮ ಮಹಾನ್ ನಾಯಕ ಮಹಾತ್ಮ ಗಾಂಧೀಜಿಯವರು ನಮ್ಮ ಭೂಮಿಯಲ್ಲಿ ಪ್ರತಿಯೊಬ್ಬರ ಅಗತ್ಯಗಳನ್ನು ಪೂರೈಸಲು ಎಲ್ಲವನ್ನೂ ಹೊಂದಿದೆ ಆದರೆ ಪ್ರತಿಯೊಬ್ಬರ ದುರಾಸೆಯನ್ನು ಪೂರೈಸಲು ಅಲ್ಲ ಎಂದು ಹೇಳಿದ್ದರು. ಈಗ ನಮ್ಮನ್ನು ನಮ್ಮ ದುರಾಸೆ ಮಾರ್ಗದರ್ಶನ ಮಾಡುತ್ತಿದೆ. ಇದು ನನ್ನ ದೇಶದ ವಿಚಾರವಲ್ಲ , ಇನ್ನೊಂದು ದೇಶದ ಸಮಸ್ಯೆಯಾಗಿರಬಹುದು ಎಂಬ ಚಿಂತನೆಯೊಂದಿಗೆ ನೈಸರ್ಗಿಕ ಸಂಪನ್ಮೂಲಗಳ ಅನಿಯಂತ್ರಿತ ಶೋಷಣೆ ಮಾಡಲಾಗುತ್ತಿದೆ. ಆದರೆ ನಾವು ಒಂದು ಘಟಕ - ವಸುಧೈವ ಕುಟುಂಬ (ಒಂದು ಕುಟುಂಬ ಒಂದು ಭವಿಷ್ಯ). ಆದ್ದರಿಂದ ಇದು ಪ್ರತ್ಯೇಕವಾಗಿ ಯೋಚಿಸುವ ಸಮಯ ಅಥವಾ ಸಂದರ್ಭವಲ್ಲ. ನಾವು ಪೂರೈಕೆ ಸರಪಳಿಗಳನ್ನು ಅಸ್ತವ್ಯಸ್ತಗೊಳಿಸುತ್ತೇವೆ, ನಾವು ಆಹಾರ ಭದ್ರತೆಯ ವಿಷಯದಲ್ಲೂ ಬೇರೆಡೆ ಜನಸಂಖ್ಯೆಯ ಮೇಲೆ ಅಪಾಯಕಾರಿಯಾಗಿ ಪ್ರತಿಕೂಲ ಪರಿಣಾಮ ಬೀರುತ್ತೇವೆ.

ಕಾರ್ಯಕ್ರಮದ ಭಾಗವಹಿಸುವವರು ನಮ್ಮ ಜಾಗತಿಕ ಸಮುದಾಯದ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ  ವೈವಿಧ್ಯಮಯ ಹಿನ್ನೆಲೆಗಳು, ಅನುಭವಗಳು ಮತ್ತು ದೃಷ್ಟಿಕೋನಗಳನ್ನು  ಪ್ರತಿನಿಧಿಸುತ್ತಾರೆ. ಅಂತರಾಷ್ಟ್ರೀಯ ಸಹಕಾರ ಮತ್ತು  ತಿಳುವಳಿಕೆಯನ್ನು ಉತ್ತೇಜಿಸಲು ನಮ್ಮ ಸಾಮೂಹಿಕ ಬದ್ಧತೆಯನ್ನು ಸೂಚಿಸುವ ಇಂತಹ ವಿಶಾಲ ಪ್ರಾತಿನಿಧ್ಯವನ್ನು ನೋಡಲು ಇದು ತುಂಬಾ ಪ್ರೋತ್ಸಾಹದಾಯಕವಾಗಿದೆ.

ಭಾಗವಹಿಸುವ ದೇಶಗಳ ವೈವಿಧ್ಯತೆಯನ್ನು ಪ್ರಶಂಸಿಸಲು ನಾನು ಸ್ವಲ್ಪ ಸಮಯ ತೆಗೆದುಕೊಳ್ಳುತ್ತೇನೆ:ಅರ್ಜೆಂಟೀನಾ, ಅರ್ಮೇನಿಯಾ, ಬೋಟ್ಸ್ವಾನಾ, ಬ್ರೆಜಿಲ್, ಚಿಲಿ, ಗಯಾನಾ, ಇಂಡೋನೇಷ್ಯಾ, ಇರಾಕ್, ಮಲೇಷ್ಯಾ, ಮಾಲ್ಡೀವ್ಸ್ , ಮಾರಿಷಸ್, ಮ್ಯಾನ್ಮಾರ್, ನೇಪಾಳ, ನೈಜೀರಿಯಾ, ಓಮನ್, ಶ್ರೀಲಂಕಾ, ತಜಕಿಸ್ತಾನ್, ಥೈಲ್ಯಾಂಡ್, ಯುನೈಟೆಡ್ ಅರಬ್ ಎಮಿರೇಟ್ಸ್, ಉಗಾಂಡಾ , ವಿಯೆಟ್ನಾಂ ಮತ್ತು ಭಾರತ.

ಈ ಪ್ರತಿಯೊಂದು ದೇಶಗಳು ವಿಶಿಷ್ಟವಾದ ದೃಷ್ಟಿಕೋನ , ಸಂಸ್ಕೃತಿ ಮತ್ತು ಸವಾಲುಗಳನ್ನು ಹೊಂದಿವೆ ಮತ್ತು IN-STEP ನಂತಹ ವೇದಿಕೆಗಳ ಮೂಲಕ ನಾವು ಗಡಿಗಳನ್ನು ಮೀರಿದ ಸ್ನೇಹ ಮತ್ತು ಸಹಯೋಗದ ಬಂಧಗಳನ್ನು ರೂಪಿಸಬಹುದು.

ಪ್ರತಿಯೊಂದು ರಾಷ್ಟ್ರವೂ ತನ್ನ ಜನರಿಗಾಗಿ ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಯನ್ನು ಆಕಾಂಕ್ಷಿಸುತ್ತದೆ. ಶಾಂತಿ ಮತ್ತು ಭದ್ರತೆಯು ಬೆಳವಣಿಗೆಗೆ ಮೂಲಭೂತವಾಗಿವೆ, ಅಭಿವೃದ್ಧಿಗೆ ಮೂಲಭೂತವಾಗಿವೆ.

ಶಾಂತಿ ಮತ್ತು ಭದ್ರತೆ ದುರ್ಬಲವಾಗಿದ್ದರೆ, ರಾಷ್ಟ್ರದ ಮಾನವ ಸಂಪನ್ಮೂಲವು ತನ್ನನ್ನು ಅತ್ಯಂತ ಸವಾಲಿನ ಪರಿಸರದಲ್ಲಿ ಕಾಣುತ್ತದೆ. ಇವು ಉನ್ನತ ಗುರಿಗಳಲ್ಲ, ಇವು ಅತ್ಯಗತ್ಯಗಳು. ನಾನು ಹೇಳುವುದೇನೆಂದರೆ, ಇವು ನಾವು ನಮ್ಮ ಸಮೃದ್ಧಿಯನ್ನು ಭರವಸೆ ನೀಡುವ ಕನಿಷ್ಠ ಅಗತ್ಯಗಳು. ಈ ತಳಹದಿಯ ಮೇಲೆ ಸಮಾಜಗಳು ನಿರ್ಮಾಣವಾಗಿವೆ.

ನಾವು ನೋಡುವಂತೆ , ಪ್ರಸ್ತುತ ಸನ್ನಿವೇಶವು ನಿಸ್ಸಂದೇಹವಾಗಿ ತುಂಬಾ ಭಯಾನಕವಾಗಿದೆ. ಇಂದು ಜಗತ್ತು ಅಸ್ಥಿರತೆ, ಅನಿಶ್ಚಿತತೆ, ಸಂಕೀರ್ಣತೆ  ಮತ್ತು ಅಸ್ಪಷ್ಟತೆಯಿಂದ  ತುಂಬಿದೆ  ಮತ್ತು ಈ ಸನ್ನಿವೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಆಶಯಗಳನ್ನು ಸಾಧಿಸುವುದು ಎಂದಿಗಿಂತಲೂ ಹೆಚ್ಚು ಸವಾಲಿನ ಸಂಗತಿಯಾಗಿದೆ.

ಆದರೆ ಸವಾಲುಗಳಿಂದ ಹೆದರದಿರಲು ಮಾನವ ಪ್ರತಿಭೆ ಅಗತ್ಯವಿದೆ. ಮಾನವ ಸ್ಫೂರ್ತಿ, ಮಾನವ ಜೀವನದ ಸಾರವು ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿ ಬದುಕುಳಿಯುವುದಾಗಿದೆ.

ಆದಾಗ್ಯೂ, ಅಸ್ಥಿರತೆ, ಅನಿಶ್ಚಿತತೆ, ಸಂಕೀರ್ಣತೆ ಮತ್ತು ಅಸ್ಪಷ್ಟತೆಯಿಂದ ಗುರುತಿಸಲ್ಪಡುವ ಇಂದಿನ ಜಗತ್ತಿನಲ್ಲಿ, ಈ ಆಕಾಂಕ್ಷೆಗಳನ್ನು ಸಾಧಿಸುವುದು ಹಿಂದೆಂದಿಗಿಂತಲೂ ಸವಾಲಿನದ್ದಾಗಿದೆ.  

ಪ್ರಸ್ತುತ ಪರಿಸರವು ನಮಗೆ ಬಹುಮುಖಿ ಮತ್ತು ಪರಸ್ಪರ ಸಂಬಂಧಿತ ಸವಾಲುಗಳನ್ನು ಒಡ್ಡುತ್ತದೆ, ಇದಕ್ಕೆ ಸಮಗ್ರ ಮತ್ತು ಸಂಘಟಿತ ಪ್ರತಿಕ್ರಿಯೆಗಳ ಅಗತ್ಯವಿದೆ.

ಆದ್ದರಿಂದ ನಾವು ಈ ಸಂಕೀರ್ಣತೆಗಳನ್ನು ವಿಶ್ಲೇಷಿಸಿ, ನಮ್ಮ ಮೂಲ ಮೌಲ್ಯಗಳು ಮತ್ತು ನಾಗರಿಕ ನೈತಿಕತೆಗೆ ನಿಷ್ಠೆಯಿಂದ ಉಳಿದುಕೊಂಡು ಬದಲಾಗುವ ಸಂದರ್ಭಗಳಿಗೆ ಹೊಂದಿಕೊಳ್ಳಬಲ್ಲ ತಂತ್ರಗಳನ್ನು ಅಭಿವೃದ್ಧಿಪಡಿಸುವುದು ಅತ್ಯಂತ ಮಹತ್ವದ್ದಾಗಿದೆ.

ಇದು ಸಾಂಪ್ರದಾಯಿಕ ಯೋಚನಾ ವಿಧಾನಗಳಿಂದ ಬದಲಾವಣೆಯನ್ನು ಅಗತ್ಯಗೊಳಿಸುತ್ತದೆ. ನಮ್ಮ ಸಂಪನ್ಮೂಲಗಳು, ತಜ್ಞತೆ ಮತ್ತು ಅನುಭವಗಳನ್ನು ಒಟ್ಟುಗೂಡಿಸುವ ಮೂಲಕ, ನಾವು ಸಾಮಾನ್ಯ ಸವಾಲುಗಳನ್ನು ಎದುರಿಸಲು ಮತ್ತು ಹಂಚಿದ ಅವಕಾಶಗಳನ್ನು ಬಳಸಿಕೊಳ್ಳಲು ಸಾಮೂಹಿಕ ಶಕ್ತಿಗಳನ್ನು ಬಳಸಿಕೊಳ್ಳಬಹುದು.

ಭಾರತವು ತನ್ನ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ನಾಗರಿಕತೆಯ ನೀತಿಯೊಂದಿಗೆ, "ವಸುಧೈವ ಕುಟುಂಬಕಂ" - ' ಜಗತ್ತೇ ಒಂದು ಕುಟುಂಬ ' ಎಂಬ ನಂಬಿಕೆಗೆ ಬಹಳ ಹಿಂದಿನಿಂದಲೂ ಬದ್ಧವಾಗಿದೆ .

ಈ ಮಾರ್ಗದರ್ಶಕ ತತ್ವಶಾಸ್ತ್ರವನ್ನು ಜಾಗತಿಕ ಸಮುದಾಯವು ಭಾರತದ ಒಂದು ವರ್ಷದ G20 ಅಧ್ಯಕ್ಷತೆಯ ಸಮಯದಲ್ಲಿ ಕಂಡಿದೆ, ಇದು ನಿಜವಾಗಿಯೂ ಭಾರತದ ಪಾತ್ರವನ್ನು ಜಾಗತಿಕ ದಕ್ಷಿಣದ ಧ್ವನಿಯಾಗಿ ಸ್ಥಾಪಿಸಿತು. ಜಾಗತಿಕ ದಕ್ಷಿಣವನ್ನು ಮುಖ್ಯ ವೇದಿಕೆಯಲ್ಲಿ ಇರಿಸಲು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ತೆಗೆದುಕೊಂಡ ದೂರದೃಷ್ಟಿಯ ಹೆಜ್ಜೆಯಾಗಿತ್ತು.

ಆಫ್ರಿಕನ್ ಯೂನಿಯನ್ ಅನ್ನು ಜಿ -20 ನ ಸದಸ್ಯರನ್ನಾಗಿ ಮಾಡಲಾಯಿತು, ಯುರೋಪಿಯನ್ ಒಕ್ಕೂಟವನ್ನು ಈಗಾಗಲೇ ಅದರಲ್ಲಿ ಸೇರಿಸಲಾಗಿತ್ತು.  ಐರೋಪ್ಯ ಒಕ್ಕೂಟದ ದೇಶಗಳ ರಚನೆ ಮತ್ತು ಆಫ್ರಿಕನ್ ಯೂನಿಯನ್ ದೇಶಗಳ ರಚನೆಯನ್ನು ನೋಡಿ - ನೀವು ಅವರ ಐತಿಹಾಸಿಕ ದೃಷ್ಟಿಕೋನಕ್ಕೆ ಹೋದರೆ ನೀವು ವ್ಯತ್ಯಾಸವನ್ನು ನೋಡುತ್ತೀರಿ.

ಜಗತ್ತು ಒಂದೇ ಎಂಬ ಭಾರತದ ಪುರಾತನ ತತ್ವದಲ್ಲಿ ಪ್ರಧಾನಮಂತ್ರಿ ಶ್ರೀ ಮೋದಿ ನಂಬಿಕೆ ಇಟ್ಟಿದ್ದಾರೆ. ಈ ತತ್ವವು ಅಂತರರಾಷ್ಟ್ರೀಯ ಸಂಬಂಧಗಳಿಗೆ ಭಾರತದ ವಿಧಾನವನ್ನು ಒತ್ತಿಹೇಳುತ್ತದೆ, ಸಹಕಾರ, ಒಳಗೊಳ್ಳುವಿಕೆ ಮತ್ತು ಪರಸ್ಪರ ಗೌರವವನ್ನು ಒತ್ತಿಹೇಳುತ್ತದೆ. ಭಾರತವು ತನ್ನ ಸಮೃದ್ಧಿ ಮತ್ತು ಹಣೆಬರಹವು ಇತರ ದೇಶಗಳ , ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳ ಯೋಗಕ್ಷೇಮದೊಂದಿಗೆ ಅಂತರ್ಗತವಾಗಿ ಸಂಬಂಧಿಸಿದೆ ಎಂದು ನಂಬುತ್ತದೆ.

ಹೀಗಾಗಿ, ಜಾಗತಿಕ ಮಟ್ಟದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಬೆಳೆಸಲು ಭಾರತವು ಸಮಾನ ಮನಸ್ಕ ರಾಷ್ಟ್ರಗಳೊಂದಿಗೆ ತೊಡಗಿಸಿಕೊಳ್ಳಲು ಬದ್ಧವಾಗಿದೆ.

ನಮ್ಮ ಆಸಕ್ತಿಗಳು ಮತ್ತು ಮೌಲ್ಯಗಳನ್ನು ಒಟ್ಟುಗೂಡಿಸುವ ಮೂಲಕ , ನಾವು ಜಾಗತಿಕ ವೇದಿಕೆಯಲ್ಲಿ ನಮ್ಮ ಸಾಮೂಹಿಕ ಧ್ವನಿಯನ್ನು ವರ್ಧಿಸಬಹುದು ಮತ್ತು ನಮ್ಮ ಹಂಚಿಕೆಯ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಅಂತರರಾಷ್ಟ್ರೀಯ ವ್ಯವಹಾರಗಳನ್ನು ರೂಪಿಸಬಹುದು.

ನಮ್ಮ ಹಿತಾಸಕ್ತಿಗಳು ಮತ್ತು ಮೌಲ್ಯಗಳನ್ನು ಹೊಂದಿಸುವ ಮೂಲಕ, ನಾವು ಜಾಗತಿಕ ವೇದಿಕೆಯಲ್ಲಿ ನಮ್ಮ ಸಾಮೂಹಿಕ ಧ್ವನಿಯನ್ನು ವಿಸ್ತರಿಸಬಹುದು ಮತ್ತು ನಮ್ಮ ಹಂಚಿದ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಅಂತರರಾಷ್ಟ್ರೀಯ ವ್ಯವಹಾರಗಳ ದಿಕ್ಕನ್ನು ರೂಪಿಸಬಹುದು.

ಮುಕ್ತ ಮತ್ತು ರಚನಾತ್ಮಕ ಸಂವಾದದಲ್ಲಿ ತೊಡಗಿಸಿಕೊಳ್ಳುವ ಮೂಲಕ, ನಾವು ನಮ್ಮ ದೃಷ್ಟಿಕೋನಗಳನ್ನು ವಿಸ್ತರಿಸಬಹುದು. ನಮ್ಮ ಊಹೆಗಳನ್ನು ಪ್ರಶ್ನಿಸಬಹುದು ಮತ್ತು ಅಂತಿಮವಾಗಿ ನಾವು ಎದುರಿಸುತ್ತಿರುವ ಸಂಕೀರ್ಣ ಸವಾಲುಗಳಿಗೆ ಹೆಚ್ಚು ಸಮಗ್ರ ಮತ್ತು ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಳ್ಳಬಹುದು.

ಇಂದು ನಾವು ಮಾಡುವ ನಿರ್ಧಾರಗಳು ಮುಂದಿನ ಪೀಳಿಗೆಗೆ ನಮ್ಮ ರಾಷ್ಟ್ರಗಳು ಮತ್ತು ಪ್ರಪಂಚದ ದಿಕ್ಕನ್ನು ನಿರ್ಧರಿಸುತ್ತವೆ.

ಸಹಕಾರ , ತಿಳುವಳಿಕೆ ಮತ್ತು ಪರಸ್ಪರ ಗೌರವವನ್ನು ಉತ್ತೇಜಿಸುವ ಮೂಲಕ , ಭವಿಷ್ಯದ ಪೀಳಿಗೆಗೆ ನಾವು ಹೆಚ್ಚು ಶಾಂತಿಯುತ , ಸಮೃದ್ಧ ಮತ್ತು ಸುರಕ್ಷಿತ ಜಗತ್ತನ್ನು ರಚಿಸಬಹುದು ಮತ್ತು ಇದು ನಮ್ಮ ಅಂತಿಮ ಕರ್ತವ್ಯವಾಗಿದೆ. ಟ್ರಸ್ಟಿಗಳಾಗಿ ನಾವು ನಮ್ಮ ಮುಂದಿನ ಪೀಳಿಗೆಗೆ ಸಂತೋಷದ ಜಗತ್ತನ್ನು ಹಸ್ತಾಂತರಿಸಬೇಕಾಗಿದೆ.

ಇಲ್ಲಿ ನಿಮ್ಮ ಸಮಯವು ಸಮೃದ್ಧಿಯಾಗಲಿ, ಪ್ರಬುದ್ಧವಾಗಲಿ ಮತ್ತು ಸಬಲೀಕರಣವಾಗಲಿ. ಮತ್ತು ಈ ಕಾರ್ಯಕ್ರಮದ ಸಮಯದಲ್ಲಿ ಬೆಸೆದ ಸ್ನೇಹ ಮತ್ತು ಸಹಕಾರದ ಬಂಧಗಳು ಅದರ ಮುಕ್ತಾಯದ ನಂತರ ದೀರ್ಘಕಾಲ ಉಳಿಯಲಿ.

ಧನ್ಯವಾದಗಳು. ಜೈ ಹಿಂದ್!

 

*****



(Release ID: 2060127) Visitor Counter : 9


Read this release in: English , Urdu , Hindi