ಉಕ್ಕು ಸಚಿವಾಲಯ
‘ಸ್ವಚ್ಛತಾ ಹಿ ಸೇವಾ 2024’ ಭಾಗವಾಗಿ ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನದಡಿ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವರಾದ ಶ್ರೀ ಎಚ್.ಡಿ.ಕುಮಾರಸ್ವಾಮಿ ಅವರು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ
ಕಾರ್ಯಕ್ರಮದ ಮುಖ್ಯಾಂಶಗಳು: ‘ಸ್ವಚ್ಛತಾ ಹಿ ಸೇವಾ 2024’ ಅಡಿಯಲ್ಲಿ ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನ
Posted On:
26 SEP 2024 8:46PM by PIB Bengaluru
‘ಸ್ವಚ್ಛತಾ ಹಿ ಸೇವಾ 2024’ ಕಾರ್ಯಕ್ರಮದಡಿಯಲ್ಲಿ ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನದ ಭಾಗವಾಗಿ, ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಕೇಂದ್ರ ಸಚಿವರಾದ ಶ್ರೀ ಎಚ್.ಡಿ.ಕುಮಾರಸ್ವಾಮಿ ಅವರು ನವದೆಹಲಿಯ ನೌರೋಜಿ ನಗರದ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡಿದರು.
ಸಹಯೋಗ ಮತ್ತು ಸ್ವಚ್ಛತೆಗೆ ಬದ್ಧತೆ
ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವರಾದ ಶ್ರೀ ಎಚ್.ಡಿ.ಕುಮಾರಸ್ವಾಮಿಯವರ ನೇತೃತ್ವದಲ್ಲಿ ಇಲಾಖೆಯ ಕಾರ್ಯದರ್ಶಿ ಶ್ರೀ ಸಂದೀಪ್ ಪೌಂಡ್ರಿಕ್, ಎಸ್ಎಐಎಲ್ ಅಧ್ಯಕ್ಷ ಶ್ರೀ ಅಮರೇಂದು ಪ್ರಕಾಶ್ ಮತ್ತು ಎನ್ಬಿಸಿಸಿಯ ಸಿಎಂಡಿ ಶ್ರೀ ಕೆ.ಪಿ.ಮಹದೇವಸ್ವಾಮಿ ಅವರು ಸಸಿಗಳನ್ನು ನೆಟ್ಟರು. ಪರಿಸರ ಸುಸ್ಥಿರತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಅಭಿಯಾನಕ್ಕೆ ಸಂಪೂರ್ಣ ಬೆಂಬಲ ನೀಡುವ ಕುರಿತು ತಮ್ಮ ಬದ್ಧತೆಯ ಬಗ್ಗೆ ಪುನರುಚ್ಚರಿಸಿದರು.
ಉಕ್ಕಿನ ಸಚಿವಾಲಯ, SAIL ಮತ್ತು NBCC ಯ ಹಿರಿಯ ಅಧಿಕಾರಿಗಳು ಸಹ ಅಭಿಯಾನದಲ್ಲಿ ಭಾಗವಹಿಸಿದರು, ಸ್ವಚ್ಛತೆ ಮತ್ತು ಪರಿಸರ ಸುಸ್ಥಿರತೆಯ ರಾಷ್ಟ್ರದ ಗುರಿಗಳನ್ನು ಮುನ್ನಡೆಸುವ ಕಡೆಗೆ ತಮ್ಮ ಸಾಮೂಹಿಕ ಸಮರ್ಪಣೆ ಅಗತ್ಯತೆಯ ಬಗ್ಗೆ ತಿಳಿಸಲಾಯಿತು.
ಈ ಉಪಕ್ರಮವು ಪರಿಸರ ಜಾಗೃತಿಯನ್ನು ಉತ್ತೇಜಿಸುವಲ್ಲಿ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ. ‘ಸ್ವಚ್ಛತಾ ಹಿ ಸೇವಾ 2024’ ಅಡಿಯಲ್ಲಿ ‘ಏಕ್ ಪೇಡ್ ಮಾ ಕೆ ನಾಮ್’ ನಂತಹ ಪ್ರಯತ್ನಗಳ ಮೂಲಕ ಉಕ್ಕಿನ ಸಚಿವಾಲಯವು ಸ್ವಚ್ಛ, ಹಸಿರು ಭಾರತಕ್ಕೆ ತನ್ನ ಬದ್ಧತೆ ಪ್ರದರ್ಶಿಸಿದೆ. ವಿವಿಧ ಮಧ್ಯಸ್ಥಗಾರರ ಸಕ್ರಿಯ ಭಾಗವಹಿಸುವಿಕೆಯು ಪರಿಸರ ಸವಾಲುಗಳನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ, ಸುಸ್ಥಿರ ಭವಿಷ್ಯಕ್ಕಾಗಿ ಏಕೀಕೃತ ಬದ್ಧತೆಯನ್ನು ಪ್ರೇರೇಪಿಸುತ್ತದೆ.
*****
(Release ID: 2059347)
Visitor Counter : 49