ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav g20-india-2023

ಮೇಕ್ ಇನ್ ಇಂಡಿಯಾ ಇಂಧನ ಪರಿವರ್ತನೆಗೆ ಶಕ್ತಿ ನೀಡಿದೆ: ನವೀಕರಿಸಬಹುದಾದ ಇಂಧನ ಸಲಕರಣೆಗಳಿಗೆ ಭಾರೀ ಬೇಡಿಕೆ  


ಮೇಕ್ ಇನ್ ಇಂಡಿಯಾದ 10 ವರ್ಷಗಳಲ್ಲಿ ಭಾರತದ ಸೌರ ಪಿವಿ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯವು 2.3 ಗಿಗಾವ್ಯಾಟ್ ನಿಂದ 67 ಗಿಗಾವ್ಯಾಟ್ ಗೆ ಏರಿದೆ

Posted On: 25 SEP 2024 6:39PM by PIB Bengaluru

ಭಾರತ ಸರ್ಕಾರದ "ಮೇಕ್ ಇನ್ ಇಂಡಿಯಾ" ಉಪಕ್ರಮವು 10 ವರ್ಷಗಳನ್ನು ಪೂರೈಸುತ್ತಿದ್ದಂತೆ, ಹೂಡಿಕೆಯನ್ನು ಉತ್ತೇಜಿಸುವಲ್ಲಿ, ನಾವೀನ್ಯತೆಯನ್ನು ಉತ್ತೇಜಿಸುವಲ್ಲಿ ಮತ್ತು ಭಾರತವನ್ನು ಉತ್ಪಾದನೆ, ವಿನ್ಯಾಸ ಮತ್ತು ನಾವೀನ್ಯತೆಯ ಕೇಂದ್ರವಾಗಿ ಪರಿವರ್ತಿಸಲು ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ನಿರ್ಮಿಸುವಲ್ಲಿ ಅದು ಪ್ರೇರಕ ಶಕ್ತಿಯಾಗಿದೆ ಎಂಬುದು ಸಾಬೀತಾಗಿದೆ. ದೇಶದಲ್ಲಿ ನವೀಕರಿಸಬಹುದಾದ ಇಂಧನಕ್ಕಾಗಿ ದೃಢವಾದ ಉತ್ಪಾದನಾ ವಲಯವನ್ನು ಅಭಿವೃದ್ಧಿಪಡಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತಿದೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ದೇಶೀಯ ಉತ್ಪಾದನೆಯನ್ನು ಬೆಂಬಲಿಸುವುದು ಮತ್ತು ಉತ್ತೇಜಿಸುವುದು ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಭಾರತದಲ್ಲಿ ನವೀಕರಿಸಬಹುದಾದ ಇಂಧನ ಉಪಕರಣಗಳ ಉತ್ಪಾದನಾ ವಲಯವು ದೇಶೀಯ ಬೇಡಿಕೆಯನ್ನು ಪೂರೈಸಲು ಮತ್ತು ರಫ್ತು  ಮೂಲಕ ಜಾಗತಿಕ ಮಾರುಕಟ್ಟೆಗೆ ಸೇವೆ ಸಲ್ಲಿಸಲು ಅನುಕೂಲಕರವಾದ ಉತ್ತಮ ಸ್ಥಾನದಲ್ಲಿದೆ, ಅದು ನವೀಕರಿಸಬಹುದಾದ ಇಂಧನ ಉತ್ಪಾದನಾ ಕ್ಷೇತ್ರದಲ್ಲಿ ಭಾರತವನ್ನು ಪ್ರಮುಖ ಉತ್ಪಾದಕ ರಾಷ್ಟ್ರವಾಗಿಸಿದೆ. 

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ, "ಭಾರತದ ನವೀಕರಿಸಬಹುದಾದ ಇಂಧನ ವಲಯವು #10YearsOfMakeInIndia ಕ್ಕೆ ಅಪಾರ ಕೊಡುಗೆ ನೀಡಿದೆ. ಪಿಎಲ್ಐನಿಂದ ವಿಜಿಎಫ್ ವರೆಗೆ, ನಾವು ನಮ್ಮ ದೇಶೀಯ ಕೈಗಾರಿಕೆಗಳಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತಿದ್ದೇವೆ. ಶುದ್ಧ ಇಂಧನ ಪರಿಹಾರಗಳ ಸಂಪೂರ್ಣ ಮೌಲ್ಯ ಸರಪಳಿಯಲ್ಲಿ ಭಾರತವನ್ನು ಪ್ರಮುಖ ಜಾಗತಿಕವಾಗಿ ಪ್ರಮುಖ ಸ್ಥಾನದಲ್ಲಿ ಸ್ಥಾಪಿಸಲು ನಾವು ಬದ್ಧರಾಗಿದ್ದೇವೆ.” ಎಂದಿದ್ದಾರೆ.

ದೇಶೀಯವಾಗಿ  ನವೀಕರಿಸಬಹುದಾದ ಇಂಧನ ಉಪಕರಣಗಳ ತಯಾರಿಕೆಯನ್ನು ಉತ್ತೇಜಿಸಲು ಕೈಗೊಂಡ ಕ್ರಮಗಳು

ಸೌರ ಪಿವಿ ಮಾಡ್ಯೂಲ್ ಗಳು, (ಕೋಶಗಳು) ಸೆಲ್ ಗಳು ಮತ್ತು ಇಂಗೊಟ್ ಗಳು, ವೇಫರ್ ಗಳು ಮತ್ತು ಪಾಲಿಸಿಲಿಕಾನ್ ನಂತಹ ಅಪ್ ಸ್ಟ್ರೀಮ್ ಘಟಕಗಳಂತಹ ನವೀಕರಿಸಬಹುದಾದ ಇಂಧನ ಉಪಕರಣಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈ ಪ್ರಯತ್ನಗಳಲ್ಲಿ ಪವನ ಟರ್ಬೈನ್ ಗಳ ತಯಾರಿಕೆ, ಹಸಿರು ಹೈಡ್ರೋಜನ್ ಉತ್ಪಾದನೆಗಾಗಿ ವಿದ್ಯುದ್ವಿಭಜಕಗಳು ಮತ್ತು ಯುಟಿಲಿಟಿ ವ್ಯಾಪ್ತಿಯ  ವಿದ್ಯುತ್ ಶೇಖರಣಾ ಅನ್ವಯಿಕೆಗಳಿಗಾಗಿ ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆಗಳು ಸೇರಿವೆ.

ಸರ್ಕಾರದ ಪ್ರಯತ್ನಗಳು ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಹಣಕಾಸು, ಮತ್ತು ನೀತಿ ಕ್ರಮಗಳನ್ನು ವ್ಯಾಪಿಸಿವೆ. ಸೌರ ಪಿವಿ ಮಾಡ್ಯೂಲ್ಗಳು ಮತ್ತು ಅಪ್ಸ್ಟ್ರೀಮ್ ಘಟಕಗಳಿಗಾಗಿ ಸಂಪೂರ್ಣ ಅಥವಾ ಭಾಗಶಃ ಸಂಯೋಜಿತ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಉತ್ಪಾದನಾ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಯೋಜನೆಯನ್ನು ಈ ಹಣಕಾಸು ಪ್ರೋತ್ಸಾಹಕಗಳು ಒಳಗೊಂಡಿವೆ. ಹೆಚ್ಚುವರಿ ಬೆಂಬಲ ಕ್ರಮಗಳಲ್ಲಿ ಸ್ಥಿರ ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆ ಯೋಜನೆಗಳಿಗೆ ಕಾರ್ಯಸಾಧ್ಯತೆ ಅಂತರ ಧನಸಹಾಯ (ವಿಜಿಎಫ್) ಮತ್ತು ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿಯಲ್ಲಿ ಎಲೆಕ್ಟ್ರೋಲೈಸರ್ಗಳು ಹಾಗು  ಹಸಿರು ಹೈಡ್ರೋಜನ್ ಉತ್ಪಾದನೆಗೆ ಪ್ರೋತ್ಸಾಹಕಗಳು ಸೇರಿವೆ. ದೇಶೀಯ ಉತ್ಪಾದನೆಗೆ ಅಗತ್ಯವಾದ ಒಳಹರಿವಿನ ಮೇಲೆ ರಿಯಾಯಿತಿ ಕಸ್ಟಮ್ಸ್ ಸುಂಕಗಳು, ಸೌರ ಪಿವಿ ಸೆಲ್ ಮತ್ತು ಮಾಡ್ಯೂಲ್ ಉತ್ಪಾದನೆಗೆ ಅಗತ್ಯವಿರುವ ನಿರ್ದಿಷ್ಟ ಬಂಡವಾಳ ಸರಕುಗಳ ಮೇಲಿನ ಆಮದು ಸುಂಕಗಳ ಮನ್ನಾ ಮತ್ತು ಸೌರ ಪಿವಿ ಮಾಡ್ಯೂಲ್ಗಳು, ಸೆಲ್ ಗಳು ಮತ್ತು ಇನ್ವರ್ಟರ್ಗಳ ಆಮದಿನ ಮೇಲೆ ಮೂಲ ಕಸ್ಟಮ್ಸ್ ಸುಂಕಗಳನ್ನು ವಿಧಿಸುವುದು ಹಣಕಾಸಿನ ಪ್ರೋತ್ಸಾಹಕಗಳಲ್ಲಿ ಸೇರಿವೆ.

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರ ನೇತೃತ್ವದಡಿಯಲ್ಲಿ, ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ, ಪಿಎಂ-ಕುಸುಮ್ ಮತ್ತು ಸಿಪಿಎಸ್ಯು ಯೋಜನೆ ಹಂತ -2 ರಂತಹ ಯೋಜನೆಗಳಲ್ಲಿ ದೇಶೀಯ ವಿಷಯ ಅಗತ್ಯತೆ (ಡಿಸಿಆರ್) ಮುಂತಾದ ನಿಬಂಧನೆಗಳ ಮೂಲಕ ನೀತಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇತರ ನೀತಿಗಳಲ್ಲಿ ಪಿಎಲ್ಐ ಮೊತ್ತವನ್ನು ಸ್ಥಳೀಯ ಮೌಲ್ಯವರ್ಧನೆ, ಸೌರ ಉಪಕರಣಗಳಿಗೆ ಗುಣಮಟ್ಟ ನಿಯಂತ್ರಣ ಕ್ರಮಗಳು ಮತ್ತು ಸೌರ ಹಾಗು ಪವನ ತಂತ್ರಜ್ಞಾನಗಳಿಗಾಗಿ ಮಾದರಿಗಳು ಮತ್ತು ತಯಾರಕರ ಅನುಮೋದಿತ ಪಟ್ಟಿಗಳಿಗೆ ಲಿಂಕ್ ಮಾಡುವುದು ಸೇರಿವೆ.

ಸೋಲಾರ್ ಪಿವಿ ಉತ್ಪಾದನೆಗೆ ಉತ್ತೇಜನ

ಸೌರ ಪಿವಿ ಉತ್ಪಾದನೆಯು ಸರ್ಕಾರದ ಪ್ರಯತ್ನಗಳಿಗೆ ಮಹತ್ವದ ಕೇಂದ್ರಬಿಂದುವಾಗಿದೆ. ಸೌರ ಪಿವಿ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು (ಆತ್ಮನಿರ್ಭರ) ಮತ್ತು ಜಾಗತಿಕ ಮೌಲ್ಯ ಸರಪಳಿಯಲ್ಲಿ ಭಾರತವನ್ನು ಪ್ರಮುಖ ಆಟಗಾರನನ್ನಾಗಿ ಸ್ಥಾಪಿಸಲು ಸರ್ಕಾರ ಬದ್ಧವಾಗಿದೆ. ಈ ಬದ್ಧತೆಯನ್ನು ಉನ್ನತ-ದಕ್ಷತೆಯ ಸೌರ ಪಿವಿ ಮಾಡ್ಯೂಲ್ ಗಳಿಗಾಗಿ ಪಿಎಲ್ ಯೋಜನೆಗೆ 24,000 ಕೋಟಿ ರೂ.ಗಳ ಗಾತ್ರ ಮತ್ತು ಮೂಲ ಕಸ್ಟಮ್ಸ್ ಸುಂಕಗಳು ಹಾಗು ದೇಶೀಯ ವಿಷಯದ/ಉಪಕರಣ ಅವಶ್ಯಕತೆಗಳಂತಹ ಹೆಚ್ಚುವರಿ ನೀತಿ ಮಧ್ಯಸ್ಥಿಕೆಗಳಿಂದ ವ್ಯಕ್ತಪಡಿಸಲಾಗಿದೆ.

2014 ರಿಂದ, ಭಾರತದ ಸ್ಥಾಪಿತ ಸೌರ ಪಿವಿ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯವು 2.3 ಗಿಗಾವ್ಯಾಟ್ ನಿಂದ ಸರಿಸುಮಾರು 67 ಗಿಗಾವ್ಯಾಟ್ ಗೆ ಏರಿದೆ, "ಮೇಕ್ ಇನ್ ಇಂಡಿಯಾ" ಉಪಕ್ರಮದ ಅಡಿಯಲ್ಲಿ ಕೈಗೊಂಡ ವಿವಿಧ ಕ್ರಮಗಳ ಪರಿಣಾಮ ಇದಾಗಿದೆ. ಈ ಹೆಚ್ಚಳವು ಭಾರತವನ್ನು ದೇಶೀಯ ಬೇಡಿಕೆಯನ್ನು ಪೂರೈಸಲು ಸಮರ್ಥವಾಗಿಸುತ್ತದೆ ಮತ್ತು ರಫ್ತುಗಳನ್ನು ಪೂರೈಸುತ್ತದೆ. ದೇಶವು ಸೌರ ಪಿವಿ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯದಲ್ಲಿ ತ್ವರಿತ ಬೆಳವಣಿಗೆಯನ್ನು ಕಂಡಿದೆ, 2021 ರಲ್ಲಿ 8 ಗಿಗಾವ್ಯಾಟ್ನಿಂದ ಕಳೆದ 3.5 ವರ್ಷಗಳಲ್ಲಿ ವರ್ಷಕ್ಕೆ 67 ಗಿಗಾವ್ಯಾಟ್ ಗೆ ಏರಿದೆ.

ಇದಲ್ಲದೆ, ಸೌರ ಪಿಎಲ್ಐ ಯೋಜನೆಯಡಿ 48 ಗಿಗಾವ್ಯಾಟ್ ನಷ್ಟು ಸಂಪೂರ್ಣ ಅಥವಾ ಭಾಗಶಃ ಸಂಯೋಜಿತ ಸೌರ ಪಿವಿ ಮಾಡ್ಯೂಲ್ ಉತ್ಪಾದನಾ ಯೋಜನೆಗಳು ಪ್ರಸ್ತುತ ಅನುಷ್ಠಾನದಲ್ಲಿವೆ. ಈ ಯೋಜನೆಗಳು ಪೂರ್ಣಗೊಂಡ ನಂತರ ಸುಮಾರು 1.1 ಲಕ್ಷ ಕೋಟಿ ರೂ.ಗಳ ಹೂಡಿಕೆಯನ್ನು ಆಕರ್ಷಿಸುತ್ತವೆ ಮತ್ತು ಸುಮಾರು 45,000 ಜನರಿಗೆ ನೇರ ಉದ್ಯೋಗವನ್ನು ಸೃಷ್ಟಿಸುತ್ತವೆ. ಸೌರ ಪಿಎಲ್ಐ ಯೋಜನೆಯು ಅತ್ಯಾಧುನಿಕ ಸೌರ ಪಿವಿ ಮಾಡ್ಯೂಲ್ ಉತ್ಪಾದನಾ ತಂತ್ರಜ್ಞಾನವನ್ನು ಭಾರತಕ್ಕೆ ತರುತ್ತದೆ, ಇದು ಆಮದಿನ ಮೇಲಿನ ದೇಶದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಸೌರ ಪಿಎಲ್ಐ ಯೋಜನೆ ಮತ್ತು ಸರ್ಕಾರದ ಬೆಂಬಲಿತ ನೀತಿ ಚೌಕಟ್ಟಿನೊಂದಿಗೆ, ಭಾರತವು 2026 ರ ವೇಳೆಗೆ ವರ್ಷಕ್ಕೆ 100 ಗಿಗಾವ್ಯಾಟ್ ಸೌರ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯವನ್ನು ಸಾಧಿಸುವ ನಿರೀಕ್ಷೆಯಿದೆ, ಇದು ದೇಶೀಯ ಬೇಡಿಕೆಯನ್ನು ಪೂರೈಸುವುದಲ್ಲದೆ ರಫ್ತುಗಳ ಮೂಲಕ ವಿದೇಶಿ ವಿನಿಮಯವನ್ನು ಗಳಿಸಲು ಕೊಡುಗೆ ನೀಡುತ್ತದೆ.

 

 

*****



(Release ID: 2058905) Visitor Counter : 6


Read this release in: English , Urdu , Hindi