ರೈಲ್ವೇ ಸಚಿವಾಲಯ
azadi ka amrit mahotsav

ಭಾರತೀಯ ರೈಲ್ವೇಸ್ - ವಾಬ್ಟೆಕ್ JV ಯ ಮರ್ಹೌರಾ ಸ್ಥಾವರವು 2025 ರ ವೇಳೆಗೆ ಎವಲ್ಯೂಷನ್ ಸರಣಿ ಲೋಕೋಮೋಟಿವ್ ಗಳನ್ನು ಆಫ್ರಿಕಾಕ್ಕೆ ರಫ್ತು ಮಾಡಲು ಪ್ರಾರಂಭಿಸುತ್ತದೆ


ಬಿಹಾರದ  ಮರ್ಹೌರಾ ಸ್ಥಾವರದಿಂದ ಮೊದಲ ಬಾರಿಗೆ ರಫ್ತು ಮಾಡುವ ಮೂಲಕ ಭಾರತವು ಜಾಗತಿಕ ಲೋಕೋಮೋಟಿವ್ ಉತ್ಪಾದನಾ ಕೇಂದ್ರವಾಗಲು ಸಿದ್ಧವಾಗಿದೆ

Posted On: 24 SEP 2024 6:25PM by PIB Bengaluru

ವಾಬ್ಟೆಕ್ ಲೊಕೊಮೊಟಿವ್  ಪ್ರೈವೇಟ್ ಲಿಮಿಟೆಡ್, ಭಾರತೀಯ ರೈಲ್ವೆ ಮತ್ತು ವಾಬ್ಟೆಕ್ ನಡುವಿನ ಜಂಟಿ ಉದ್ಯಮವಾಗಿದೆ. ಅಫ್ರಿಕಾಕ್ಕೆ ಲೋಕೋಮೋಟಿವ್ ಗಳನ್ನು ರಫ್ತು ಮಾಡಲು ತನ್ನ ಘಟಕದ ಸಾಮರ್ಥ್ಯಗಳನ್ನು ವಿಸ್ತರಿಸುತ್ತಿದೆ. ಈ ಘಟಕವು ಮೊದಲ ಬಾರಿಗೆ ಮೊದಲ ಬಾರಿಗೆ ಜಾಗತಿಕ ಗ್ರಾಹಕರಿಗೆ ರಫ್ತು ಮಾಡಲು ಇಂಜಿನ್ ಗಳನ್ನು ತಯಾರಿಸುತ್ತದೆ.

ಈ ಘಟಕವು ಜಾಗತಿಕ ಗ್ರಾಹಕರಿಗೆ ಎವಲ್ಯೂಷನ್ ಸೀರೀಸ್ ES43ACmi ಲೋಕೋಮೋಟಿವ್ ಗಳನ್ನು ಪೂರೈಸುತ್ತದೆ. ES43ACmi ಒಂದು ಲೋಕೋಮೋಟಿವ್  ಆಗಿದ್ದು, ಇದು 4,500 HP ಎವಲ್ಯೂಷನ್ ಸೀರೀಸ್ ಎಂಜಿನ್ ಹೊಂದಿದೆ. ಇದು ಅತ್ಯುತ್ತಮ ಮಟ್ಟದ ಇಂಧನ ದಕ್ಷತೆ ಮತ್ತು ಹೆಚ್ಚಿನ ತಾಪಮಾನದ ಪರಿಸರದಲ್ಲಿ ಸಾಬೀತಾದ ಕಾರ್ಯಕ್ಷಮತೆಯನ್ನು ನೀಡುತ್ತದೆ. ಮರ್ಹೌರಾ ಸ್ಥಾವರವು 2025 ರಲ್ಲಿ ಈ ಲೋಕೋಮೋಟಿವ್ ಗಳನ್ನು ರಫ್ತು ಮಾಡಲು ಪ್ರಾರಂಭಿಸುತ್ತದೆ.

ಈ ಯೋಜನೆಯು ಭಾರತವನ್ನು ಜಾಗತಿಕ  ಲೋಕೋಮೋಟಿವ್  ತಯಾರಿಕಾ ಕೇಂದ್ರವಾಗಿ ಸ್ಥಾಪಿಸುತ್ತದೆ ಮತ್ತು ಮಾನ್ಯ ಪ್ರಧಾನಮಂತ್ರಿಯವರ "ಆತ್ಮನಿರ್ಭರ ಭಾರತ" ದೃಷ್ಟಿಕೋನದ ಅಡಿಯಲ್ಲಿ"ಮೇಕ್ ಇನ್ ಇಂಡಿಯಾ"  ಮತ್ತು "ಮೇಕ್ ಫಾರ್ ದಿ ವರ್ಲ್ಡ್" ಉಪಕ್ರಮಗಳಿಗೆ ಅನುಗುಣವಾಗಿದೆ. ಇದು ಮಾರ್ಹೋರಾ ಸ್ಥಾವರಕ್ಕೆ ಜಾಗತಿಕವಾಗಿ ಸ್ಟ್ಯಾಂಡರ್ಡ್-ಗೇಜ್ ಇಂಜಿನ್ಗಳನ್ನು ರಫ್ತು ಮಾಡಲು ಸಹಾಯ ಮಾಡುತ್ತದೆ , ಅದೇ ಸಮಯದಲ್ಲಿ ಸ್ಥಳೀಯ ಪೂರೈಕೆದಾರರ ಪ್ರವೇಶವನ್ನು ಹೆಚ್ಚಿಸುತ್ತದೆ ಮತ್ತು ದೀರ್ಘಾವಧಿಯ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತದೆ.  ಇದರಿಂದಾಗಿ ಭಾರತೀಯ ಆರ್ಥಿಕತೆಗೆ ಪ್ರಯೋಜನವಾಗುತ್ತದೆ.

ರೈಲ್ವೆ ಸಚಿವಾಲಯ ಮತ್ತು ವಾಬ್ಟೆಕ್ ನಡುವಿನ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಯಶಸ್ಸು ಭಾರತದಾದ್ಯಂತ ವ್ಯಾಪಕವಾದ ಸ್ಥಳೀಯ ಪೂರೈಕೆದಾರ ನೆಲೆಯನ್ನು ಬಳಸಿಕೊಂಡು ಮರ್ಹೌರಾ ಸ್ಥಾವರವನ್ನು ವಿಶ್ವದರ್ಜೆಯ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಸ್ಥಾಪಿಸಿದೆ. ಇಲ್ಲಿಯವರೆಗೆ, ಸುಮಾರು 650 ಇಂಜಿನ್ ಗಳನ್ನು ತಯಾರಿಸಲಾಗಿದೆ ಮತ್ತು ಭಾರತೀಯ ರೈಲ್ವೇಯ ಲೊಕೊಮೊಟಿವ್ ಫ್ಲೀಟ್ ಗೆ ಸೇರಿಸಲಾಗಿದೆ. ರೈಲ್ವೇ ಸಚಿವಾಲಯ ಮತ್ತು ವ್ಯಾಬ್ಟೆಕ್, ಸ್ಥಾವರದ ಸಾಮರ್ಥ್ಯ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಸಹಕರಿಸುವುದನ್ನು ಮುಂದುವರಿಸುತ್ತದೆ. ಸುಸ್ಥಿರ , ದೀರ್ಘಾವಧಿಯ ರಫ್ತು ಉತ್ಪಾದನಾ ಕಾರ್ಯಾಚರಣೆಗಳಿಗೆ ಸಿದ್ಧಪಡಿಸುತ್ತದೆ.

ಬಿಹಾರದ ಮರ್ಹೌರಾದಲ್ಲಿ 70 ಎಕರೆ ಪ್ರದೇಶದಲ್ಲಿ ಹರಡಿರುವ ಮರ್ಹೌರಾ ಸ್ಥಾವರವನ್ನು ಭಾರತೀಯ ರೈಲ್ವೆಗಾಗಿ 1,000 ಅತ್ಯಾಧುನಿಕ ಲೋಕೋಮೋಟಿವ್ ಗಳನ್ನು ಸ್ಥಳೀಯವಾಗಿ ತಯಾರಿಸಲು 2018 ರಲ್ಲಿ ಸ್ಥಾಪಿಸಲಾಯಿತು. ಈ ಸ್ಥಾವರವು ಸುಮಾರು 600 ಜನರಿಗೆ ಉದ್ಯೋಗವನ್ನು ಒದಗಿಸಿದೆ ಮತ್ತು ವಾರ್ಷಿಕವಾಗಿ  100  ಇಂಜಿನ್ ಗಳನ್ನು ಭಾರತೀಯ ರೈಲ್ವೆಗೆ ತಲುಪಿಸುತ್ತಿದೆ. ಇದು ರಾಜ್ಯದಲ್ಲಿ ಕೈಗಾರಿಕಾ ಚಟುವಟಿಕೆಗಳಿಗೆ ಹೆಚ್ಚಿನ  ಉತ್ತೇಜನವನ್ನು ನೀಡಿದೆ.

 

*****


(Release ID: 2058660) Visitor Counter : 35


Read this release in: English , Urdu , Hindi , Punjabi