ರೈಲ್ವೇ ಸಚಿವಾಲಯ
azadi ka amrit mahotsav

ಭಾರತ್ ಗೌರವ್ ಡಿಲಕ್ಸ್ ಎಸಿ ಪ್ರವಾಸಿ ರೈಲಿನ ಮುಂದಿನ ಶೆಡ್ಯೂಲ್ ನಲ್ಲಿ "ಗರ್ವಿ ಗುಜರಾತ್" ಪ್ರವಾಸವು  2024ರ ಅಕ್ಟೋಬರ್ 1 ರಂದು ದೆಹಲಿಯಿಂದ ಹೊರಡಲಿದೆ


ವಡ್ನಗರ ಗರ್ವಿ ಗುಜರಾತ್ ಪ್ರವಾಸದ ಕಾರ್ಯಕ್ರಮಕ್ಕೆ ಹೊಸ ಸೇರ್ಪಡೆಯಾಗಿದೆ. ಕೀರ್ತಿ ತೋರಣ, ಹಟಕೇಶ್ವರ ದೇವಾಲಯ ಮತ್ತು ರೈಲ್ವೆ ನಿಲ್ದಾಣವು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಆಕರ್ಷಣೆಗಳಾಗಿರುತ್ತವೆ

ಗಾಂಧಿ ಜಯಂತಿಯಂದು  ಪ್ರವಾಸಿಗರು ಅಹಮದಾಬಾದ್ ನಲ್ಲಿರುವ ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ

IRCTC ಯ ಭಾರತದ ಗರ್ವಿ ಗುಜರಾತ್ ನಲ್ಲಿನ ಈ ವಿಶೇಷ ಪ್ರವಾಸವು ಅಹಮದಾಬಾದ್, ಮೋಧೆರಾ, ಪಟಾಣ್, ವಡ್ನಗರ, ಪಾವಗಢ್, ಚಂಪಾನೆರ್, ವಡೋದರಾ, ಕೆವಾಡಿಯಾ, ಸೋಮನಾಥ್, ದೀವ್, ದ್ವಾರಕಾ ಮತ್ತು ದೆಹಲಿಗೆ ಹಿಂತಿರುಗುತ್ತದೆ 

ಅತ್ಯಾಧುನಿಕ ಡೀಲಕ್ಸ್ ಎಸಿ ಪ್ರವಾಸಿ ರೈಲಿನಲ್ಲಿ ಎಸಿ I, ಎಸಿ II ಮತ್ತು ಎಸಿ III ವರ್ಗಗಳಿದ್ದು, ಒಟ್ಟು 150 ಪ್ರವಾಸಿಗರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ

ಪ್ರವಾಸಿಗರು ಈ ಪ್ರವಾಸಿ ರೈಲಿನಲ್ಲಿ ದೆಹಲಿ ಸಫ್ದರ್ ಜಂಗ್, ಗುರುಗ್ರಾಮ್, ರೇವಾಡಿ, ರಿಂಗಸ್, ಫುಲೇರಾ, ಅಜ್ಮೇರ್  ರೈಲ್ವೆ ನಿಲ್ದಾಣಗಳಲ್ಲಿಯೂ ಹತ್ತಬಹುದು/ಇಳಿಯಬಹುದು

Posted On: 24 SEP 2024 7:17PM by PIB Bengaluru

ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಲಿಮಿಟೆಡ್,"ಗರ್ವಿ ಗುಜರಾತ್" ಪ್ರವಾಸವನ್ನು ಭಾರತ ಗೌರವ ಡೀಲಕ್ಸ್ ಎಸಿ ಪ್ರವಾಸಿ ರೈಲಿನ ಮೂಲಕ ನಡೆಸುತ್ತಿದೆ. ಈ ಪ್ರವಾಸವು ಗುಜರಾತಿನ ಪ್ರಮುಖ ಆಧ್ಯಾತ್ಮಿಕ ಮತ್ತು ಪಾರಂಪರಿಕ ಪ್ರವಾಸಿ ತಾಣಗಳನ್ನು ಒಳಗೊಂಡಿದ್ದು, ವಡ್ನಗರ  (ಭಾರತದ ಅತ್ಯಂತ ಹಳೆಯ ವಾಸಿಸುವ ಪಟ್ಟಣಗಳಲ್ಲಿ ಒಂದು) ಮತ್ತು ಸುಂದರ ದೀವು ದ್ವೀಪವನ್ನೂ ಒಳಗೊಂಡಿದೆ.

ಈ ಪ್ರವಾಸದಲ್ಲಿ ತೋರಿಸಲಾಗುವ ಕೆಲವು ಪ್ರಸಿದ್ಧ ದೇವಾಲಯಗಳೆಂದರೆ ಸೋಮನಾಥ, ನಾಗೇಶ್ವರ ಜ್ಯೋತಿರ್ಲಿಂಗ, ದ್ವಾರಕಾಧೀಶ ದೇವಾಲಯ (ಭಾರತದ ನಾಲ್ಕು ಚಾರ್ಧಾಮ್ ಗಳಲ್ಲಿ ಒಂದು) ಮತ್ತು ಪಾವಾಗಢದ ಮಹಾಕಾಳಿ ದೇವಾಲಯ. ಇತಿಹಾಸ ಪ್ರಿಯರಿಗಾಗಿ, ಕೀರ್ತಿ ತೋರಣ (ವಡ್ನಗರ), ಮೋಧೇರಾ ಸೂರ್ಯ ದೇವಾಲಯ, ರಾಣಿ ಕಿ ವಾವ್ ಮತ್ತು ದೀವು ಕೋಟೆಯಂತಹ ಪಾರಂಪರಿಕ ತಾಣಗಳು ಈ 10 ದಿನಗಳ ಪ್ರವಾಸದ ಪ್ರಮುಖ ಆಕರ್ಷಣೆಗಳಾಗಿವೆ. ಅತ್ಯಾಧುನಿಕ ತಂತ್ರಜ್ಞಾನದ ಡೀಲಕ್ಸ್ ಎಸಿ ಪ್ರವಾಸಿ ರೈಲಿನಲ್ಲಿ ಹಲವಾರು ಅದ್ಭುತ ವೈಶಿಷ್ಟ್ಯಗಳಿವೆ. ಅವುಗಳಲ್ಲಿ ಎರಡು ಉತ್ತಮ ಊಟದ ರೆಸ್ಟೋರೆಂಟ್ ಗಳು, ಆಧುನಿಕ ಅಡುಗೆಮನೆ, ಕೋಚ್ ಗಳಲ್ಲಿ ಶವರ್ ಕ್ಯುಬಿಕಲ್ ಗಳು, ಸೆನ್ಸಾರ್-ಆಧಾರಿತ ವಾಶ್ ರೂಮ್ ಕಾರ್ಯಗಳು ಮತ್ತು  ಫೂಟ್ ಮಸಾಜರ್ ಸೇರಿದಂತೆ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ. ಸಂಪೂರ್ಣ ಹವಾನಿಯಂತ್ರಿತ ರೈಲು ಮೂರು ರೀತಿಯ ವಸತಿ ಸೌಕರ್ಯಗಳನ್ನು ಒದಗಿಸುತ್ತದೆ , ಅವುಗಳೆಂದರೆ , 1 ನೇ ಎಸಿ, 2 ನೇ ಎಸಿ ಮತ್ತು 3 ನೇ ಎಸಿ. ರೈಲಿನ ಪ್ರತಿ ಕೋಚ್ಗೆ ಸಿಸಿಟಿವಿ ಕ್ಯಾಮೆರಾಗಳು ಮತ್ತು ಭದ್ರತಾ ಸಿಬ್ಬಂದಿಗಳ ಭದ್ರತಾ ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ.

ಈ ರೈಲಿನ ಮೊದಲ ನಿಲ್ದಾಣವು ಅಹಮದಾಬಾದ್ ಆಗಿದ್ದು, ಅಲ್ಲಿ ಪ್ರವಾಸಿಗರು ಸಬರಮತಿ ಆಶ್ರಮ ಮತ್ತು ಅಕ್ಷರಧಾಮ ದೇವಾಲಯವನ್ನು ಸಂದರ್ಶಿಸಲಿದ್ದಾರೆ. ನಂತರದ ತಾಣಗಳೆಂದರೆ ಮೋಧೇರಾ ಸೂರ್ಯ ದೇವಾಲಯ, ರಾಣಿ ಕಿ ವಾವ್, ಮತ್ತು ಮೋಧೇರಾ-ಪಾಟಣದಲ್ಲಿರುವ ಸಹಸ್ರಲಿಂಗ ತಳಾವ್. ಇದಾದ ನಂತರ, ರೈಲು ವಡ್ನಗರಕ್ಕೆ ಮುಂದುವರಿಯುತ್ತದೆ, ಅಲ್ಲಿ ಹಟಕೇಶ್ವರ ದೇವಾಲಯ, ಕೀರ್ತಿ ತೋರಣ, ಮತ್ತು ಶರ್ಮಿಷ್ಠಾ ಸರೋವರವನ್ನು ಸಂದರ್ಶಿಸಲಾಗುತ್ತದೆ. ವಡೋದರಾ ಈ ರೈಲು ಪ್ರವಾಸದ ಮುಂದಿನ ಗಮ್ಯಸ್ಥಾನವಾಗಿರುತ್ತದೆ. ಪ್ರವಾಸಿಗರು ವಡೋದರಾದಿಂದ ದಿನದ ಪ್ರವಾಸವಾಗಿ ಪಾವಾಗಢ ಬೆಟ್ಟಗಳಲ್ಲಿರುವ ಮಹಾಕಾಳಿ ದೇವಾಲಯ (ಶಕ್ತಿ ಪೀಠ) ಮತ್ತು ಚಂಪಾನೇರ್ ಪಾವಾಗಢ ಪುರಾತತ್ವ ಉದ್ಯಾನ (ಯುನೆಸ್ಕೋ)ವನ್ನು ಸಂದರ್ಶಿಸಲಿದ್ದಾರೆ. ನಂತರ, ಇದು ಪೂರ್ಣಗೊಂಡ ಮೇಲೆ, ರೈಲು ಕೆವಾಡಿಯಾ ರೈಲ್ವೆ ನಿಲ್ದಾಣಕ್ಕೆ ಮುಂದುವರಿಯಲಿದೆ.

ಕೆವಾಡಿಯಾವು ಹೊಸದಾಗಿ ನಿರ್ಮಿಸಲಾದ ಸ್ಟ್ಯಾಚ್ಯೂ ಆಫ್ ಯೂನಿಟಿ (SOU) ಗೆ ಪ್ರಸಿದ್ಧವಾಗಿದೆ, ಇದು ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ, ಜೊತೆಗೆ ಲೇಸರ್ ಶೋ ಅನ್ನು ಒಳಗೊಂಡಿದೆ. ಕೆವಾಡಿಯಾದ ನಂತರದ ಗಮ್ಯಸ್ಥಾನ ಸೋಮನಾಥ ಆಗಿರುತ್ತದೆ. ರೈಲು ವೇರಾವಲ್ ರೈಲ್ವೆ ನಿಲ್ದಾಣಕ್ಕೆ ತಲುಪುತ್ತದೆ. ಅಲ್ಲಿ ಪ್ರವಾಸಿಗರು ಸೋಮನಾಥ ದೇವಾಲಯ ಮತ್ತು ಸೋಮನಾಥ ಬೀಚ್ ಅನ್ನು ಸಂದರ್ಶಿಸುತ್ತಾರೆ. ಮುಂದಿನ ಗಮ್ಯಸ್ಥಾನ ದೀವು ಆಗಿದ್ದು, ಅಲ್ಲಿ ಪ್ರವಾಸಿಗರು ದೀವು ಕೋಟೆ, INS ಕುಕ್ರಿ, ಮತ್ತು ಸಮುದ್ರ ತೀರಗಳನ್ನು ಸಂದರ್ಶಿಸಲಿದ್ದಾರೆ. ಕೊನೆಯ ನಿಲ್ದಾಣ ದ್ವಾರಕಾ ರೈಲ್ವೆ ನಿಲ್ದಾಣವಾಗಿದ್ದು, ಅಲ್ಲಿ ದ್ವಾರಕಾಧೀಶ ದೇವಾಲಯ, ನಾಗೇಶ್ವರ ಜ್ಯೋತಿರ್ಲಿಂಗ, ಮತ್ತು ಬೇಟ್ ದ್ವಾರಕಾ ಪ್ರವಾಸದ ಭಾಗವಾಗಿರುತ್ತವೆ. ರೈಲು ತನ್ನ ಪ್ರಯಾಣದ 10ನೇ ದಿನದಂದು ದೆಹಲಿಗೆ ಹಿಂತಿರುಗುತ್ತದೆ. ಈ ಸಂಪೂರ್ಣ ಪ್ರವಾಸದಲ್ಲಿ ಅತಿಥಿಗಳು ಸುಮಾರು 3500 ಕಿಲೋಮೀಟರ್ ಪ್ರಯಾಣಿಸಲಿದ್ದಾರೆ.

ಭಾರತ ಸರ್ಕಾರದ ಉಪಕ್ರಮವಾದ “ದೇಖೋ ಅಪ್ನಾ ದೇಶ್” ಮತ್ತು “ಏಕ್ ಭಾರತ್ ಶ್ರೇಷ್ಠ ಭಾರತ್” ಗೆ ಅನುಗುಣವಾಗಿ ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು IRCTC ಈ ವಿಶೇಷ ಪ್ರವಾಸಿ ರೈಲನ್ನು ಪ್ರಾರಂಭಿಸಿದೆ. ಇದರ ಬೆಲೆ ರೂ. 55,640/- ಪ್ರತಿ ವ್ಯಕ್ತಿಗೆ 3AC , ರೂ. 69,740/- ಪ್ರತಿ ವ್ಯಕ್ತಿಗೆ 2AC , ರೂ. 75,645/- 1AC ಕ್ಯಾಬಿನ್ ಮತ್ತು ರೂ. 83,805/- 1AC ಕೂಪೆಗೆ. ಪ್ಯಾಕೇಜ್ ಬೆಲೆಯು AC ವರ್ಗದಲ್ಲಿ ರೈಲು ಪ್ರಯಾಣ , AC ಹೋಟೆಲ್ಗಳಲ್ಲಿ ವಸತಿ , ಎಲ್ಲಾ ಊಟಗಳು (ವೆಜ್ ಮಾತ್ರ), ಎಲ್ಲಾ ವರ್ಗಾವಣೆಗಳು ಮತ್ತು AC ವಾಹನಗಳಲ್ಲಿನ ದೃಶ್ಯವೀಕ್ಷಣೆ , ಪ್ರಯಾಣ ವಿಮೆ ಮತ್ತು IRCTC ಟೂರ್ ಮ್ಯಾನೇಜರ್ಗಳ ಸೇವೆಗಳು ಇತ್ಯಾದಿಗಳನ್ನು ಒಳಗೊಂಡಿದೆ.

ಹೆಚ್ಚಿನ ವಿವರಗಳಿಗಾಗಿ , ನೀವು  IRCTC ವೆಬ್ಸೈಟ್ಗೆ  ಭೇಟಿ ನೀಡಬಹುದು : https://www.irctctourism.com/bharatgauravand. ವೆಬ್ ಪೋರ್ಟಲ್ ನಲ್ಲಿ ಮೊದಲು ಬಂದವರಿಗೆ ಮೊದಲು ಸೇವೆಯ ಆಧಾರದ ಮೇಲೆ ಬುಕಿಂಗ್ ಆನ್ಲೈನ್ನಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 8595931047, 8287930484, 8287930032, ಮತ್ತು 8882826357.

 

*****


(Release ID: 2058658) Visitor Counter : 27