ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಸ್ವಚ್ಛತೆ ಇದೀಗ ಜನಾಂದೋಲನವಾಗಿದೆ: ಶ್ರೀ ಪಿಯೂಶ್ ಗೋಯಲ್
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧಿಕಾರಿಗಳಿಗೆ ಸ್ವಚ್ಛತೆಯ ಪ್ರತಿಜ್ಞೆ ಬೋಧಿಸಿದ ಶ್ರೀ ಗೋಯಲ್
ಭಾರತದ ಭವಿಷ್ಯ ರೂಪಿಸುವ ಪ್ರಧಾನಮಂತ್ರಿ ಶ್ರೀ ಮೋದಿ ಅವರ ದೃಷ್ಟಿಕೋನ ಪರಿವರ್ತನೆಯ ಪರಿಣಾಮ ಬೀರಿರುವುದನ್ನು ದಾಖಲಿಸಿದ ಶ್ರೀ ಗೋಯಲ್
ಮನೆಗಳು, ಹಳ್ಳಿಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿದ್ದು, ಇದೀಗ ದೇಶ ಬಯಲು ಶೌಚಾಲಯ ಮುಕ್ತವಾಗಿದೆ : ಶ್ರೀ ಗೋಯಲ್
Posted On:
17 SEP 2024 12:06PM by PIB Bengaluru
ಸ್ವಚ್ಛತೆ ಇದೀಗ ಜನಾಂದೋಲನವಾಗಿದೆ ಪರಿವರ್ತನೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಶ್ ಗೋಯಲ್ ಹೇಳಿದ್ದಾರೆ. ನವದೆಹಲಿಯಲ್ಲಿಂದು “ಸ್ವಚ್ಛತಾ ಹಿ ಸೇವಾ 2024” ಅಭಿಯಾನದಡಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಭಾರತದ ಭವಿಷ್ಯ ರೂಪಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನ ಪರಿವರ್ತನೆಯ ಪರಿಣಾಮ ಬೀರಿರುವುದನ್ನು ದಾಖಲಿಸಿದ ಶ್ರೀ ಗೋಯಲ್, ಇದರಿಂದ ಲಕ್ಷಾಂತರ ಜನರ ಮೇಲೆ ಪರಿಣಾಮವಾಗಿದೆ ಮತ್ತು ಇದು ಭವಿಷ್ಯದ ದೇಶವನ್ನು ರೂಪಿಸುವ ನಿಟ್ಟಿನಲ್ಲಿ ನಿರಂತರತೆ ಕಾಯ್ದುಕೊಂಡಿದೆ ಎಂದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹತ್ತು ವರ್ಷಗಳ ಹಿಂದೆ ಕೆಂಪುಕೋಟೆ ಮೇಲಿನಿಂದ ಮೊದಲ ಬಾರಿಗೆ ಸ್ವಚ್ಛ ಭಾರತ ಅಭಿಯಾನವನ್ನು ಘೋಷಿಸಿದರು. “ಇಂದು ನಾವು ದೇಶಾದ್ಯಂತ ಸಂಚರಿಸುತ್ತಿದ್ದು, ಈ ಅಭಿಯಾನದಿಂದ ಗಣನೀಯ ಬದಲಾವಣೆ ಕಂಡಿದ್ದೇವೆ. ಮನೆಗಳು, ಹಳ್ಳಿಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿದ್ದು, ಇದೀಗ ದೇಶ ಬಯಲು ಶೌಚಾಲಯ ಮುಕ್ತವಾಗಿವೆ ಮತ್ತು ಜನತೆ ಕಸವನ್ನು ಬೀದಿಯಲ್ಲಿ ಎಸೆಯಲು ಹಿಂಜರಿಯುತ್ತಿದ್ದು, ಇದಕ್ಕೆ ಜನರಲ್ಲಿ ಮೂಡಿರುವ ಜಾಗೃತಿಯೇ ಕಾರಣ ಎಂದು ಶ್ರೀ ಗೋಯಲ್ ಹೇಳಿದರು.
ಮಹಾತ್ಮಾ ಗಾಂಧೀಜಿ ಅವರ ಚಿಂತನೆಯ ಬೇರುಗಳಲ್ಲಿ ಸ್ವಚ್ಛತೆಯ ಆಂದೋಲನವಿದ್ದು, ಇದನ್ನು ನಾವು ಎಲ್ಲೆಡೆ ಕಾಣುತ್ತಿದ್ದೇವೆ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ಸ್ವಚ್ಛತೆ ಧರ್ಮಕ್ಕಿಂತ ಮೇಲ್ಮಟ್ಟದಲ್ಲಿದೆ ಎಂದು ನಂಬಿದ್ದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೊದಿ ಅವರು ಈ ಭೂ ಗ್ರಹದಲ್ಲಿ ಮಹಾತ್ಮಾ ಗಾಂಧೀಜಿ ಅವರ ಚಿಂತನೆಗಳನ್ನು ನಂಬಿಕೆಯಾಗಿ ಪರಿವರ್ತಿಸಿದ್ದಾರೆ ಮತ್ತು ಆ ದೃಷ್ಟಿಯ ಅನುಷ್ಠಾನಕ್ಕೆ ಚಾಲನೆ ನೀಡಿದ್ದಾಗಿ ತಿಳಿಸಿದರು.
ಪ್ರಸ್ತುತ ನಡೆಯುತ್ತಿರುವ 15 ದಿನಗಳ “ಸ್ವಚ್ಛತಾ ಹಿ ಸೇವಾ 2024” ಅಭಿಯಾನದಡಿ ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ವಚ್ಛ ಭಾರತಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕು. “ರಾಷ್ಟ್ರೀಯ ಹಿತಾಸಕ್ತಿಗಾಗಿ ಕೊಡುಗೆ ನೀಡಲು ಇದೊಂದು ಅಸಾಧಾರಣ ಮಾರ್ಗವಾಗಿದೆ. ನಮ್ಮ ಸಾಮೂಹಿಕ ಪ್ರಯತ್ನಗಳು ನಮ್ಮ ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ಮತ್ತು ನಮ್ಮ ದೇಶ ಉನ್ನತ ಸ್ಥಾನಕ್ಕೆ ಏರಲು ನೆರವಾಗಲಿದೆ” ಎಂದು ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೂರನೇ ಅವಧಿಯಲ್ಲಿ 100 ದಿನಗಳನ್ನು ಪೂರ್ಣಗೊಳಿಸುತ್ತಿದ್ದು, ಇದನ್ನು ದೇಶ ಆಚರಿಸುತ್ತಿದೆ. "ಪ್ರಧಾನಿಯವರ ದೂರದೃಷ್ಟಿ ಮತ್ತು ರಾಷ್ಟ್ರದ ಬಗೆಗಿನ ಅವರ ಆಳವಾದ ಬದ್ಧತೆಯು ನಮಗೆ ಉಜ್ವಲ ಮತ್ತು ಸಮೃದ್ಧ ಭವಿಷ್ಯದ ಕಡೆಗೆ ಮಾರ್ಗದರ್ಶನ ನೀಡುತ್ತಿದೆ. ಸರ್ಕಾರದ ಮೂರನೇ ಅವಧಿಯ ಈ 100 ದಿನಗಳಲ್ಲಿ ನಾವು ಕಳೆದ ವರ್ಷಗಳ ಯಶಸ್ಸಿನ ಮೇಲೆ ಹೊಸ ಮತ್ತು ಉತ್ತಮ ಕೆಲಸ ಮಾಡುವ ವಿಧಾನಗಳನ್ನು ಪರಿಚಯಿಸಿದ್ದೇವೆ. " ಎಂದರು.
ಈ ಕಾರ್ಯಕ್ರಮ ಸಚಿವಾಲಯದ ಅಧಿಕಾರಿಗಳು, ಅಮೆರಿಕ ಮತ್ತು ಈಜಿಪ್ಟ್‌ನ ಗಣ್ಯ ಅತಿಥಿಗಳ ಸಕ್ರಿಯ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು. ಹೆಚ್ಚುವರಿಯಾಗಿ, ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (ಡಿಪಿಐಐಟಿ) ಈ ಸಂದರ್ಭವನ್ನು ಗುರುತಿಸಲು ವಾಣಿಜ್ಯ ಭವನದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ಸಾರ್ವಜನಿಕ ಆರೋಗ್ಯ ಮತ್ತು ರಾಷ್ಟ್ರೀಯ ಸ್ವಚ್ಛತೆ ಪ್ರಯತ್ನಗಳಿಗೆ ಸಚಿವಾಲಯದ ಬದ್ಧತೆಯನ್ನು ಈ ಕಾರ್ಯಕ್ರಮ ಅನಾವರಣಗೊಳಿಸಿತು.
*****
(Release ID: 2055956)
Visitor Counter : 48