ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ನಾಗಪುರದ RCOEM ನಲ್ಲಿ ಡಿಜಿಟಲ್ ಟವರ್ ನ ಉದ್ಘಾಟನಾ ಸಮಾರಂಭದಲ್ಲಿ ಉಪರಾಷ್ಟ್ರಪತಿ ಅವರ ಭಾಷಣ 

Posted On: 15 SEP 2024 6:01PM by PIB Bengaluru

ನಿಮ್ಮೆಲ್ಲರಿಗೂ ನಮಸ್ಕಾರಗಳು.

ಮಹೋನ್ನತ ಹಾಗೂ ಬದ್ಧತೆಯ ಜನರಿಂದ ಪೋಷಿಸಲ್ಪಟ್ಟ ಈ ನಾಲ್ಕು-ದಶಕ-ಹಳೆಯ ಸಂಸ್ಥೆಯ ಪ್ರಮುಖ ಮೈಲಿಗಲ್ಲು ಅಭಿವೃದ್ಧಿಯ ಭಾಗವಾಗಲು ಇದು ಒಂದು ದೊಡ್ಡ ಗೌರವ, ಒಂದು ದೊಡ್ಡ ಸವಲತ್ತು.

ಈ ವಿಶ್ವವಿದ್ಯಾನಿಲಯದಲ್ಲಿ ಡಿಜಿಟಲ್ ಟವರ್, ಅದರ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳುವ ಸಂದರ್ಭ ಸಿಕ್ಕಿತು. ಈ ಡಿಜಿಟಲ್ ಟವರ್ ಜನರ ಮನಸ್ಥಿತಿಯನ್ನು ಬದಲಾಯಿಸುವಲ್ಲಿ, ಅವರನ್ನು ಬೇರೆ ಬೇರೆ ಗುಂಪಿಗೆ ಸೇರಿಸುವಲ್ಲಿ ಮತ್ತು ನಮ್ಮನ್ನು ಹಿಡಿದಿಟ್ಟುಕೊಳ್ಳುವ ತಾಂತ್ರಿಕ ಬದಲಾವಣೆಗಳು, ತಾಂತ್ರಿಕ ಪ್ರಗತಿ ಬಗ್ಗೆ ನಮಗೆ ಸಂಪೂರ್ಣ ಅರಿವು ಮೂಡಿಸುವಲ್ಲಿ ಬಹಳ ದೂರ ಸಾಗಲಿದೆ.

ಸ್ನೇಹಿತರೇ, ಇಂದು ವಿಶ್ವ ಪ್ರಜಾಪ್ರಭುತ್ವ ದಿನ, ನಾನು ವಿಶೇಷವಾಗಿ ವಿಶ್ವ ಪ್ರಜಾಪ್ರಭುತ್ವ ದಿನ ಎಂದು ಹೇಳುತ್ತೇನೆ ಏಕೆಂದರೆ ಈ ವರ್ಷದ ವಿಶ್ವ ಪ್ರಜಾಪ್ರಭುತ್ವ ದಿನದ ಥೀಮ್ ಕೃತಕ ಬುದ್ಧಿಮತ್ತೆ ಉತ್ತಮ ಆಡಳಿತದ ಸಾಧನವಾಗಿದೆ ಎನ್ನುವುದು ವಿಷಯವಾಗಿದೆ. ಪ್ರಜಾಪ್ರಭುತ್ವಕ್ಕಾಗಿ ಈ ಜಾಗತಿಕ ಥೀಮ್ ನೊಂದಿಗೆ, ಇದು ಎಂತಹ ಉತ್ತಮ ಸಂದರ್ಭ! 

ಈ ಡಿಜಿಟಲ್ ಟವರ್ ನಿಮ್ಮ ಪ್ರತಿಭೆಯನ್ನು ಅರಳಿಸಲು ಬೇಕಾದ ಎಲ್ಲವನ್ನೂ ಹೊಂದಿರುವ ಭೌತಿಕ ಗೋಪುರವಾಗಿದೆ. ಅತ್ಯಾಧುನಿಕ ಮೂಲಸೌಕರ್ಯಗಳ ಉಪಸ್ಥಿತಿಯು ತಂತ್ರಜ್ಞಾನ, ನಾವೀನ್ಯತೆ ಮತ್ತು ಶಿಕ್ಷಣದಲ್ಲಿ ಶ್ರೇಷ್ಠತೆಯ ಅನ್ವೇಷಣೆಯೊಂದಿಗೆ ಆಳವಾಗಿ ಹೆಣೆದುಕೊಂಡಿರುವ ಭವಿಷ್ಯದ ವಿಶ್ವವಿದ್ಯಾನಿಲಯದ ದೃಷ್ಟಿಯ ಪರಿಮಾಣವನ್ನು ಹೇಳುತ್ತದೆ.

ಶ್ರೀ ಪುರೋಹಿತಜೀಯವರು ಶಿಕ್ಷಣದ ಪೋಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಅವರು ಅದನ್ನು ದೃಢವಾದ ನಂಬಿಕೆಯಿಂದ ಮಾಡಿದ್ದಾರೆ. ಈ ಕ್ಯಾಂಪಸ್ ನ ಪ್ರತಿಯೊಂದು ಇಟ್ಟಿಗೆಯಲ್ಲೂ ಅವರ ಪರಂಪರೆ ಇದೆ. ಅವನಿಂದ ದಂಡವನ್ನು ತೆಗೆದುಕೊಳ್ಳುವವರು ಅವರ ಆಳವಾದ ನೈತಿಕತೆ, ಔಚಿತ್ಯ ಮತ್ತು ಶಿಕ್ಷಣವು ಸೇವೆಯೇ ಹೊರತು ವ್ಯಾಪಾರವಲ್ಲ ಎಂಬ ಬದ್ಧತೆಯನ್ನು ಸಹ ತೆಗೆದುಕೊಳ್ಳುತ್ತಾರೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ. ನಾನು ದೆಹಲಿಯ ಭಾರತೀಯ ವಿದ್ಯಾಭವನದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದಾಗ ಅದು ನನ್ನ ಪಾಲಿಗೆ ದೊಡ್ಡ ಅದೃಷ್ಟವಾಗಿತ್ತು. ಒಂಬತ್ತು ಸಂಪುಟಗಳ ಇಂಗ್ಲಿಷ್-ಸಂಸ್ಕೃತ ನಿಘಂಟು ಬಿಡುಗಡೆಯಾಯಿತು.

ನನ್ನ ಮಾತನ್ನು ನೀವು ನಂಬಲೇಬೇಕು, ನಂತರ ನನಗೆ ಬನ್ವಾರಿಲಾಲ್ ಪುರೋಹಿತ್ ಎಂಬ ವ್ಯಕ್ತಿಯ ಬಗ್ಗೆ ಹೆಚ್ಚಿನ ಅಭಿಪ್ರಾಯ ಮತ್ತು ಕಲ್ಪನೆ ಬಂದಿತು. ಶಿಕ್ಷಣವು ವಾಣಿಜ್ಯವಾಗಿ ಶೋಷಣೆಗೊಳ್ಳುತ್ತಿರುವ ಕಾಲದಲ್ಲಿ, ಶಿಕ್ಷಣವು ವ್ಯಾಪಾರವಾಗುತ್ತಿರುವ ಕಾಲದಲ್ಲಿ, ಕೈಗಾರಿಕಾ ದಿಗ್ಗಜರು ಉದ್ಯಮದ ಅನ್ವೇಷಣೆಯಲ್ಲಿ ಅದರತ್ತ ಹೆಜ್ಜೆ ಹಾಕುತ್ತಿರುವ ಕಾಲದಲ್ಲಿ, ಬನ್ವಾರಿಲಾಲ್ ಪುರೋಹಿತಜೀ ಅವರ ಜೀವನವು ಭರವಸೆ, ಸ್ಫೂರ್ತಿ ಮತ್ತು ಪ್ರೇರಣೆಯ ದಾರಿದೀಪವಾಗಿದೆ. ನಾಗರಿಕತೆಯ ನೀತಿಯು ಸಮಾಜಕ್ಕೆ ಹಿಂದಿರುಗಿಸಬೇಕಾಗಿದೆ ಮತ್ತು ಜನರಿಗೆ ಶಿಕ್ಷಣವನ್ನು ನೀಡುವುದಕ್ಕಿಂತ ದೊಡ್ಡ ಕೊಡುಗೆ ಇನ್ನೊಂದಿಲ್ಲ.

ಗುಣಮಟ್ಟದ ಶಿಕ್ಷಣವು ಪ್ರಜಾಪ್ರಭುತ್ವವನ್ನು ವ್ಯಾಖ್ಯಾನಿಸುತ್ತದೆ. ಯುವಕ ಯುವತಿಯರೇ ನೀವು ಪಡೆಯುತ್ತಿರುವ ಈ ರೀತಿಯ ಗುಣಮಟ್ಟದ ಶಿಕ್ಷಣ, ಅಭಿವೃದ್ಧಿಯನ್ನು ವ್ಯಾಖ್ಯಾನಿಸುತ್ತದೆ. ಇದು 2047 ರ ವೇಳೆಗೆ ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರದ ನಮ್ಮ ಸಾಧನೆಯನ್ನು ವೇಗವಾಗಿ ಟ್ರ್ಯಾಕ್ ಮಾಡುತ್ತದೆ. ಜನರು ಭಾರತವನ್ನು ಮಲಗಿರುವ ದೈತ್ಯ ಎಂದು ಕರೆಯುತ್ತಿದ್ದ ಕಾಲವೊಂದಿತ್ತು. ಭಾರತ ಇನ್ನು ಮಲಗುವ ದೈತ್ಯ ಅಲ್ಲ. ಇದು ಅಭಿವೃದ್ಧಿ ಹೊಂದುತ್ತಿದೆ, ಈ ಅಭಿವೃದ್ಧಿಯನ್ನ ತಡೆಯಲಾಗದು. ಈ ಏರಿಕೆ ನಿರಂತರವಾಗಿದೆ. ಆರ್ಥಿಕ ಏರಿಕೆಯು ಘಾತೀಯವಾಗಿದೆ.

ಜಾಗತಿಕ ಸಂಸ್ಥೆಗಳ ಪ್ರಕಾರ, ಭಾರತವು ಹೂಡಿಕೆ ಮತ್ತು ಅವಕಾಶಗಳ ನೆಚ್ಚಿನ ತಾಣವಾಗಿದೆ. ಸಣ್ಣ ಹಣದಲ್ಲಿ ವ್ಯವಹರಿಸುವ ಜನರು ತಂತ್ರಜ್ಞಾನವನ್ನು ಹೇಗೆ ಬಳಸುತ್ತಾರೆ ಎಂಬುದಕ್ಕೆ ಪ್ರಾಯೋಗಿಕ ಉದಾಹರಣೆಗಳನ್ನು ನೀಡುವ ಮೂಲಕ ದೇವೇಂದ್ರಜಿ ಅವರು ಸೂಚಿಸಿದಂತೆ ಡಿಜಿಟಲೀಕರಣದಲ್ಲಿ ನಮ್ಮ ಆಳವಾದ ನುಗ್ಗುವಿಕೆಯನ್ನು ವಿಶ್ವಬ್ಯಾಂಕ್  ಒಪ್ಪಿಕೊಂಡಿದೆ.

ವಿಶ್ವಬ್ಯಾಂಕ್ ಭಾರತವನ್ನು ವಿಶ್ವದ ಇತರ ದೇಶಗಳಿಗೆ ಮಾದರಿ ಎಂದು ಶ್ಲಾಘಿಸಿದೆ. ಡಿಜಿಟಲೀಕರಣಕ್ಕೆ ಹೋಗುವುದು ಹೇಗೆ? ಮತ್ತು ಏಕೆ ಇಲ್ಲ? ನಮ್ಮಂತಹ ದೇಶದಲ್ಲಿ, 100 ಮಿಲಿಯನ್ ಗಿಂತಲೂ ಹೆಚ್ಚು ರೈತರು ವರ್ಷಕ್ಕೆ ಮೂರು ಬಾರಿ ನೇರ ವರ್ಗಾವಣೆ ಪಡೆಯುತ್ತಾರೆ. ಯಾವುದೇ ಸೋರಿಕೆ ಇಲ್ಲ, ಮಧ್ಯವರ್ತಿಗಳಿಲ್ಲ, ಮಾನವ ಹಸ್ತಕ್ಷೇಪವಿಲ್ಲ, ಸಂಪೂರ್ಣ ಹೊಣೆಗಾರಿಕೆ, ಸಂಪೂರ್ಣ ಪಾರದರ್ಶಕತೆ ಇರುವ ವರ್ಗಾವಣೆಗಳನ್ನ ದೇವೇಂದ್ರ ಜೀ ಅವರ ಸರ್ಕಾರವೂ ಅನುಸರಿಸುತ್ತಿದೆ.

ಅಲ್ಲದೆ, ಇದು ದೊಡ್ಡ ಆರ್ಥಿಕ ಪ್ರಯೋಜನವನ್ನು ಹೊಂದಿದೆ. ಇದು ನಮ್ಮ ಆರ್ಥಿಕತೆಯನ್ನು ಔಪಚಾರಿಕವಾಗಿ ಪರಿವರ್ತಿಸುತ್ತದೆ. ನಮ್ಮ ಯುವಕರಿಗೆ ಏನು ಬೇಕು? ನಮ್ಮಲ್ಲಿರೋ ಚಾಣಾಕ್ಷ ಯುವಕರು ಬೇರೆಯವರಿಗಿಂತ ಹೆಚ್ಚಾಗಿ ಪ್ರಜಾಪ್ರಭುತ್ವದಲ್ಲಿ ಪಾಲುದಾರರು. ಅವರು 2047 ರಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕೆ ಕೊಂಡೊಯ್ಯಬೇಕಾಗುತ್ತದೆ. ಆದರೆ ಮೂರು ವಿಷಯಗಳು ಅವರನ್ನ ಹಿಡಿದಿಟ್ಟುಕೊಳ್ಳುವ ಹಾಗೂ ಹಿನ್ನಡೆ ಆಗುವ ಹಾಗೆ ಮಾಡಿದೆ.

ಒಂದು, ಕಾನೂನಿನ ಮುಂದೆ ಸಮಾನತೆ ಇರಲಿಲ್ಲ. ನಾವು ಕಾನೂನಿಗಿಂತ ಮೇಲಿದ್ದೇವೆ ಎಂದು ಜನ ಭಾವಿಸುತ್ತಿದ್ದ ಕಾಲವೊಂದಿತ್ತು. ನಾವು ವಿಶೇಷ ವಂಶಾವಳಿಯನ್ನು ಹೊಂದಿದ್ದೇವೆ ಎಂದು ಕೆಲವು ಜನರು ಹೆಚ್ಚುವರಿ ಪ್ರಯೋಜನಗಳನ್ನು ಹೊಂದಿದ್ದರು. ಈಗ ಅವರು ಕಾನೂನಿನ ವ್ಯಾಪ್ತಿಯಲ್ಲಿದ್ದಾರೆ. ನಿಮಗೆಲ್ಲರಿಗೂ ತಿಳಿದಿದೆ, ಕಾನೂನಿನ ಮುಂದೆ ಸಮಾನತೆ ಪ್ರಜಾಪ್ರಭುತ್ವದ ಅತ್ಯಂತ ಪ್ರಮುಖ ಅಂಶವಾಗಿದೆ.

ಪ್ರಜಾಪ್ರಭುತ್ವದಲ್ಲಿ ಸಮಾನತೆ, ಹಕ್ಕುಗಳಿಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿಲ್ಲ. ಹುಟ್ಟಿನಿಂದಲೋ, ಜಾತಿಯಿಂದಲೋ ಅಥವಾ ಇನ್ಯಾವುದೇ ವ್ಯವಸ್ಥೆಯಿಂದ ನಾನು ಇತರರಿಗಿಂತ ಮೇಲಿದ್ದೇನೆ, ನಾನು ಕಾನೂನಿನ ಕಪಿಮುಷ್ಠಿಯಿಂದ ಹೊರಗಿದ್ದೇನೆ ಎಂದು ಯಾರಾದರೂ ಹೇಳಿದರೆ ಅಥವಾ ಕಾನೂನು ನನ್ನನ್ನು ಏನೂ ಮಾಡಲು ಸಾಧ್ಯವಾಗುವುದಿಲ್ಲ ಎನ್ನುವುದು ಯುವಕ-ಯುವತಿಯರಿಗೆ ಮಾರಕವಾಗಿತ್ತು. ದರೆ ಈಗ, ಕಾನೂನಿನ ಮುಂದೆ ಸಮಾನತೆ ನೆಲದ ವಾಸ್ತವವಾಗಿದೆ.

ಎರಡನೆಯದಾಗಿ, ಭ್ರಷ್ಟಾಚಾರ ನಮ್ಮ ಸಮಾಜವನ್ನು ತಿನ್ನುತ್ತಿತ್ತು. ಕೆಲಸ ಸಿಗುತ್ತಿರಲಿಲ್ಲ. ಯಾವುದೇ ಸಂಪರ್ಕ ಲಭ್ಯವಿರಲಿಲ್ಲ. ಅವಕಾಶ ಸಿಗುತ್ತಿರಲಿಲ್ಲ. ಶಕ್ತಿಕೇಂದ್ರಗಳೂ ಕೂಡ ಭ್ರಷ್ಟಾಚಾರದಿಂದ ತುಂಬಿ ಹೋಗಿದ್ದವು. ಇದು ಯುವಕ ಯುವತಿಯರಿಗೆ ನಿರಾಶಾದಾಯಕವಾಗಿತ್ತು. ಆದರೆ ಈಗ ಶಕ್ತಿಕೇಂದ್ರಗಳನ್ನು ಈ ಭ್ರಷ್ಟ ಅಂಶಗಳಿಂದ ತಟಸ್ಥಗೊಳಿಸಲಾಗಿದೆ, ಸ್ವಚ್ಛಗೊಳಿಸಲಾಗಿದೆ.

ಒಂದು ರೀತಿಯಲ್ಲಿ, ದಲ್ಲಾಳಿಗಳ ಸಮುದಾಯವು ಈಗಾಗಲೇ ನಾಶವಾಗಿದೆ ಮತ್ತು ಜೀವಂತವಾಗಿ ಹಿಂತಿರುಗಲು ಸಾಧ್ಯವಾಗುವ ಸ್ಥಿತಿಯಲ್ಲಿ ಇಲ್ಲ. ಇದರಿಂದ ನಮ್ಮ ಯುವಕರಿಗೆ ಹೆಚ್ಚಿನ ಅನುಕೂಲವಾಗಿದೆ.

ಮೂರನೆಯದು, ಭಾರತವು ಉತ್ಪಾದನೆಯ ಭರವಸೆ ಮತ್ತು ಸಾಧಿಸುವ ಸಾಮರ್ಥ್ಯ ಇರುವ ದೇಶವಾಗಿರಲಿಲ್ಲ. ಆದರೆ ಭಾರತವು ಭರವಸೆ ಇರಿಸಬಹುದಾದ ಹಾಗೂ ಸಾಧಿಸುವ ಸಾಮರ್ಥ್ಯ ಇರುವ ರಾಷ್ಟ್ರ ಎಂದು ಇಡೀ ಜಗತ್ತು ಭಾವಿಸುವ ಸಮಯದಲ್ಲಿ ನಾವು ಈಗ ಜೀವಿಸುತ್ತಿದ್ದೇವೆ.  ನೀರು, ಭೂಮಿ, ಆಕಾಶ ಮತ್ತು ಬಾಹ್ಯಾಕಾಶದಲ್ಲಿ ನಮ್ಮ ಸಾಮರ್ಥ್ಯದ ಪ್ರತಿಧ್ವನಿಯನ್ನು ಜಗತ್ತು ಕೇಳುತ್ತಿದೆ.

ನಮ್ಮಲ್ಲಿ ಒಂದು ವ್ಯವಸ್ಥಿತ ವಾತಾವರಣ ಇದೆ, ಯುವಕ ಯುವತಿಯರೇ, ಈಗ ಪ್ರತಿಯೊಬ್ಬ ಹುಡುಗ ಮತ್ತು ಹುಡುಗಿ ಸಾಮರ್ಥ್ಯ, ಪ್ರತಿಭೆಯನ್ನು ಅರಿತುಕೊಳ್ಳಬಹುದು ಮತ್ತು ಬಳಸಿಕೊಳ್ಳಬಹುದು, ಮಹತ್ವಾಕಾಂಕ್ಷೆಗಳು ಮತ್ತು ಆಕಾಂಕ್ಷೆಗಳನ್ನು ಸಾಧಿಸುವ ವ್ಯವಸ್ಥಿತ ವಾತಾವರಣ ಇದೆ.

ಮತ್ತು ಇಂದು ನಾನು ವಿಶೇಷವಾಗಿ ಹೇಳಲು ಬಯಸುತ್ತೇನೆ, ನಾವು ಸೇವಕರಾಗಿ ಸರ್ಕಾರವನ್ನು ಮಾತ್ರ ನೋಡುತ್ತಿದ್ದೇವೆ, ನಾವು ಬಹಳಷ್ಟು ಕಳೆದುಕೊಳ್ಳುತ್ತಿದ್ದೇವೆ. ಅವಕಾಶಗಳ ಬುಟ್ಟಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ತಂತ್ರಜ್ಞಾನದಲ್ಲಿ ಅವಕಾಶಗಳ ಬುಟ್ಟಿ ಇದೆ, ಈ ಡಿಜಿಟಲ್ ಟವರ್ ಅವಕಾಶಗಳ ಹೆಬ್ಬಾಗಿಲಾಗಿದೆ.

ನಾನು ಇಸ್ರೋಗೆ ಹೋಗಿದ್ದೆ, ಇಸ್ರೋಗೆ ಜಾಗತಿಕ ಮನ್ನಣೆ ಇದೆ, ಚಂದ್ರಯಾನ-3 ಯಶಸ್ಸು ಅವರಿಗೆ ಇಸ್ರೋದಲ್ಲಿ ಐಐಟಿಯವರೇ ಇಲ್ಲ, ಐಐಎಂನವರು ಯಾರೂ ಇಲ್ಲ, ನಿಮ್ಮಂತಹವರು ಹೋಗಿ ಇತಿಹಾಸ ಸೃಷ್ಟಿಸಿದ್ದಾರೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. 

ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ, ನೀವು ನೀಲಿ ಆರ್ಥಿಕತೆ, ಸಮುದ್ರಶಾಸ್ತ್ರವನ್ನು ನೋಡುತ್ತೀರಿ, ನೀವು ಬಾಹ್ಯಾಕಾಶ ಆರ್ಥಿಕತೆಯನ್ನು ನೋಡುತ್ತೀರಿ, ನೀವು ತಾಂತ್ರಿಕ ಆಯ್ಕೆಗಳನ್ನು ಪರಿಶೀಲಿಸುತ್ತೀರಿ ಮತ್ತು ನೀವು ಕೊಡುಗೆ ನೀಡಲು ಹೆಚ್ಚಿನದನ್ನು ಹೊಂದಿದ್ದೀರಿ ಎಂದು ನಿಮಗೆ ತಿಳಿಯುತ್ತದೆ.

ವಿಚ್ಛಿದ್ರಕಾರಕ ತಂತ್ರಜ್ಞಾನಗಳು, ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ಬ್ಲಾಕ್ ಚೈನ್, ಅವು ಸವಾಲುಗಳು ಮತ್ತು ಅವಕಾಶಗಳಾಗಿವೆ. ಎಲ್ಲಿಯವರೆಗೆ ನೀವು ಸಂದರ್ಭಕ್ಕೆ ಹೊಂದಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅವು ಸವಾಲುಗಳಾಗಿವೆ. ನೀವು ಸಂದರ್ಭಕ್ಕೆ ಹೊಂದಿಕೊಂಡ ಕ್ಷಣ, ಈ ತಂತ್ರಜ್ಞಾನಗಳು ಅವಕಾಶಗಳಾಗುತ್ತವೆ.

ಈ ತಂತ್ರಜ್ಞಾನಗಳಲ್ಲಿ ಜಾಗತಿಕ ಮುಂದಾಳತ್ವವನ್ನು ವಹಿಸಿಕೊಂಡಿರುವ ವಿಶ್ವದ ಕೆಲವೇ ದೇಶಗಳಲ್ಲಿ ಭಾರತವೂ ಒಂದು. ನಮ್ಮ ಕ್ವಾಂಟಮ್ ಕಂಪ್ಯೂಟಿಂಗ್ ಮಿಷನ್, 6,000 ಕೋಟಿಗಳ ಬೃಹತ್ ಹಂಚಿಕೆ, ಕಂಪ್ಯೂಟಿಂಗ್ ಜಗತ್ತಿನಲ್ಲಿ ಗೇಮ್ ಚೇಂಜರ್ ಆಗಿರುತ್ತದೆ. 2030 ರ ವೇಳೆಗೆ ಹಸಿರು ಹೈಡ್ರೋಜನ್ ಮಿಷನ್, ಈಗಾಗಲೇ 19,000 ಕೋಟಿಗಳ ಹಂಚಿಕೆ, 8 ಲಕ್ಷ ಕೋಟಿ ಹೂಡಿಕೆಯೊಂದಿಗೆ 8 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ.

ಐಎಂಎಫ್ ಮತ್ತು ವಿಶ್ವಬ್ಯಾಂಕ್ ಗಳು ಭಾರತವು ಹೂಡಿಕೆಯ ನೆಚ್ಚಿನ ತಾಣವಾಗಿದೆ ಎಂದು ಹೇಳಲು ಇದು ಕಾರಣವಾಗಿದೆ ಮತ್ತು ಸರ್ಕಾರಿ ಉದ್ಯೋಗಗಳ ಕಾರಣದಿಂದಾಗಿ ಅವರು ಹೇಳುತ್ತಿಲ್ಲ ಮತ್ತು ಆ ಕ್ಷೇತ್ರದಲ್ಲಿ ನಮ್ಮ ಕಡೆಯಿಂದ ಸಾಕಷ್ಟು ಕೊಡುಗೆ ಇದೆ.

ಯುವಕ ಯುವತಿಯರೇ, ನಾವು ಕೃತಕ ಬುದ್ಧಿಮತ್ತೆ ಮತ್ತು ವಿಚ್ಛಿದ್ರಕಾರಕ ತಂತ್ರಜ್ಞಾನಗಳೊಂದಿಗೆ ಬದುಕಬೇಕು, ಆದರೆ ನಾವು ಅವುಗಳನ್ನು ಸರಪಳಿಯಲ್ಲಿ ಇಡಬೇಕು. ನಾವು ಅವುಗಳನ್ನು ನಿಯಂತ್ರಿಸಬೇಕು, ನಾವು ಅವುಗಳನ್ನು ನಮ್ಮ ಅನುಕೂಲಕ್ಕೆ ಇಟ್ಟುಕೊಳ್ಳಬೇಕು. ಈ ವಿಚಾರದಲ್ಲಿ ನಿಮ್ಮ ಚಾಣಾಕ್ಷತನದ ಬಗ್ಗೆ ನನಗೆ ಯಾವುದೇ ಸಂದೇಹವಿಲ್ಲ. ಇಂದು ಉದ್ಘಾಟನೆಗೊಂಡಿರುವ ಸೌಲಭ್ಯವು ನಿಮಗೆ ಅತ್ಯಾಧುನಿಕತೆಯನ್ನು ನೀಡುತ್ತದೆ ಮತ್ತು ನಿಮ್ಮನ್ನು ಬಹಳ ದೂರ ಕೊಂಡೊಯ್ಯುತ್ತದೆ.

ಸಾಕ್ರಟೀಸ್ ಗಿಂತ ಮೊದಲು ಗ್ರೀಕ್ ತತ್ವಜ್ಞಾನಿ ಹೆರಾಕ್ಲಿಟಸ್ ವಾಸಿಸುತ್ತಿದ್ದರು. ಅವರು ಒಂದು ಮುಖ್ಯವಾದ ವಿಷಯವನ್ನು ಹೇಳಿದರು, 'ಬದುಕಿನಲ್ಲಿ ಒಂದೇ ಬದಲಾವಣೆ ಸ್ಥಿರವಾಗಿದೆ. ನೀವು ನೋಡದೇ ಇರಬಹುದು, ನಾವು ನೋಡಿದ್ದೇವೆ. ನಾವು ದೊಡ್ಡವರಾಗಿರುವುದರಿಂದ ಇದು ಕಂಡುಬರುತ್ತದೆ. ಒಂದು ಕಾಲದಲ್ಲಿ ಟೆಲಿಫೋನ್ ಸಂಪರ್ಕ ಪಡೆಯುವುದು ತುಂಬಾ ಕಷ್ಟಕರವಾಗಿತ್ತು. ಈ ದಿನಗಳಲ್ಲಿ ಯಾರಾದರೂ ದೂರವಾಣಿ ಸಂಪರ್ಕವನ್ನು ತೆಗೆದುಕೊಳ್ಳುತ್ತಾರೆಯೇ? ಆಗ ಟೆಲಿಫೋನ್ ಬೂತ್ ನ ಕ್ರಾಂತಿ ಬಂತು, ಟೆಲಿಫೋನ್ ಬೂತ್ ಗೆ ಹೋಗಿ ನೀವು ಎಲ್ಲಿ ಬೇಕಾದರೂ ಮಾತನಾಡಬಹುದು. ಇಂದು ಯಾರಾದರೂ ಟೆಲಿಫೋನ್ ಬೂತ್ ಗೆ ಹೋಗುತ್ತಾರೆಯೇ? ಮುಗಿಯಿತು. ಡಿಜಿಟಲ್ ಲೈಬ್ರರಿಯ ಹೊಸ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರತಿ ನಗರದಲ್ಲಿ ಡಿಜಿಟಲ್ ಲೈಬ್ರರಿಗಳು ಬಂದವು. ಮನೆಯಲ್ಲಿ ವಿಸಿಆರ್ ಮತ್ತು ಸಿಡಿ ಇದೆ, ಅದೆಲ್ಲಾ ಎಲ್ಲಿ ಹೋಗಿದೆ? ತಂತ್ರಜ್ಞಾನ ಎಲ್ಲವನ್ನೂ ಬದಲಾಯಿಸಿದೆ.

ಇದು ನಮ್ಮ ವೇದಗಳಲ್ಲೂ ಬರೆಯಲ್ಪಟ್ಟಿದೆ ಮತ್ತು ಇದು ನಿಜವೂ ಹೌದು. 'ಬದುಕಿನಲ್ಲಿ ಒಂದೇ ಬದಲಾವಣೆ ಸ್ಥಿರವಾಗಿದೆ ಹಾಗೂ ಬದಲಾವಣೆ ಕಡ್ಡಾಯವೂ ಹೌದು. ಒಬ್ಬ ವ್ಯಕ್ತಿಯು ಒಂದೇ ನದಿಗೆ ಎರಡು ಬಾರಿ ಕಾಲಿಡಲು ಸಾಧ್ಯವಿಲ್ಲ ಏಕೆಂದರೆ ನದಿಯೂ ಬದಲಾಗುತ್ತಲೇ ಇರುತ್ತದೆ ಮತ್ತು ಮನುಷ್ಯನೂ ಬದಲಾಗುತ್ತಲೇ ಇರುತ್ತಾನೆ. ನಾವು ಈ ಬದಲಾವಣೆಯ ಭಾಗವಾಗಬೇಕು. 

ನಾನು ಯುವ ಮನಸ್ಸುಗಳಿಗೆ ಮನವಿ ಮಾಡುತ್ತೇನೆ: ನೀವು ಬಯಸುವ ಬದಲಾವಣೆಯಾಗಿರಿ, ನಿಮಗೆ ಬೇಕಾದ ಬದಲಾವಣೆಯನ್ನು ನಿಯಂತ್ರಿಸಿ, ಬದಲಾವಣೆಯನ್ನು ನಿಯಂತ್ರಿಸುವ ಎಂಜಿನ್  ಗಳ ಚಾಲಕರಾಗಿರಿ, ಅದು ನಮ್ಮ ರಾಷ್ಟ್ರವನ್ನು ಉತ್ತುಂಗಕ್ಕೇರಿಸುತ್ತದೆ, ಅದು ಸಂಭವಿಸುತ್ತದೆ.  ಅದಕ್ಕಾಗಿ ನೀವು ಸ್ವಾಮಿ ವಿವೇಕಾನಂದರನ್ನು ನಂಬಬೇಕು. ಸ್ವಾಮಿ ವಿವೇಕಾನಂದರು ಹೇಳಿದ್ದೇನು? "ಎದ್ದೇಳಿ, ಎಚ್ಚರಗೊಳ್ಳಿ ಮತ್ತು ಗುರಿಯನ್ನು ಸಾಧಿಸುವವರೆಗೆ ನಿಲ್ಲಬೇಡಿ" ಎಂದು ಅವರು ಹೇಳಿದ್ದರು. ಚಿಕಾಗೋದಲ್ಲಿ ಈ ಮಾತನ್ನ ಅವರು ಹೇಳುವ ಮೂಲಕ ಇಡೀ ಜಗತ್ತನ್ನು ನಡುಗಿಸಿದ್ದರು. 

ಮತ್ತು ಈಗ ಪರಿಸ್ಥಿತಿ ನಮ್ಮ ಕಾಲದಲ್ಲಿ ಇದ್ದ ಹಾಗಿಲ್ಲ, ನಾವು ಓದುತ್ತಿದ್ದಾಗ, ವಿದ್ಯುತ್ ಇರಲಿಲ್ಲ, ರಸ್ತೆ ಇರಲಿಲ್ಲ, ಶಾಲೆ ಇರಲಿಲ್ಲ, ಶೌಚಾಲಯವಿರಲಿಲ್ಲ, ಏನೂ ಇರಲಿಲ್ಲ.

ಈ ಮಹಾನ್ ಸಂಸ್ಥೆಯಲ್ಲಿ ಶಿಕ್ಷಣ ಪಡೆಯಲು ನೀವು ಈಗ ಅದೃಷ್ಟವಂತರು. ಆಕಾಶವು ನಿಮಗೆ ಮಿತಿಯಲ್ಲ, ನೀವು ಆಕಾಶವನ್ನು ಮೀರಿ ಬಾಹ್ಯಾಕಾಶಕ್ಕೆ ಹೋಗಬಹುದು. ನಿಮಗೆ ಒಂದು ಆಲೋಚನೆ ಬಂದರೆ, ವೈಫಲ್ಯದ ಬಗ್ಗೆ ಭಯಪಡಬೇಡಿ. ಭಯಕ್ಕೆ ಹೆದರಬೇಡಿ. ಭಯವು ಸೃಜನಶೀಲತೆಯ ಕೆಟ್ಟ ಶತ್ರುವಾಗಿದೆ.

ಯಾರು ವಿಫಲರಾಗಲಿಲ್ಲ? ಚಂದ್ರಯಾನ-3ರ ಯಶಸ್ಸಿನ ಹಿಂದೆ ಚಂದ್ರಯಾನ-2ರ ವೈಫಲ್ಯವೂ ಇತ್ತು. ಚಂದ್ರಯಾನ-2 ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿತ್ತು. ಚಂದ್ರನ ಹತ್ತಿರ ತಲುಪಿತ್ತು. ಚಂದ್ರಯಾನ-3 ಪೂರ್ಣಗೊಳಿಸಿದ ಕೆಲವು ಮೀಟರ್ಗಳು ಉಳಿದಿವೆ. ,

ಇವೆಲ್ಲವನ್ನೂ ಒಟ್ಟಿಗೆ ತೆಗೆದುಕೊಂಡರೆ, ಅವು ಯಶಸ್ಸಿನ ಸಂಯೋಜನೆಯಾಗಿದೆ, ವೈಫಲ್ಯದ ಬಗ್ಗೆ ಎಂದಿಗೂ ಭಯಪಡಬೇಡಿ.

ಇಂದು ಭಾರತ ಬದಲಾಗಿದೆ, ಜಗತ್ತಿನಲ್ಲಿ ಭಾರತದ ಅಸ್ಮಿತೆ ಬದಲಾಗಿದೆ, ನಮ್ಮ ಆರ್ಥಿಕತೆಯನ್ನು ನೋಡಿ ಜನರು ಬೆಚ್ಚಿಬಿದ್ದಿದ್ದಾರೆ. ದೊಡ್ಡ ದೇಶಗಳ ಆರ್ಥಿಕತೆಗಳು ಶೇಕಡಾ ಒಂದು, ಶೇಕಡಾ ಎರಡು, ಶೇಕಡಾ ಮೂರು, ಹೀಗಿದ್ದರೆ ನಾವು 6%, 7%, 8% ಕ್ಕೆ ಹೋಗುತ್ತಿದ್ದೇವೆ.

ದೇವೇಂದ್ರ ಜಿ ಸೂಚಿಸಿರುವ ಈ ವೇಗದಿಂದ ಮುಂದಿನ 2-3 ವರ್ಷಗಳಲ್ಲಿ ನಾವು ಮೂರನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯಾಗಲಿದ್ದೇವೆ.

ಯುವಕರೇ ಮತ್ತು ಯುವತಿಯರೇ, ನೀವು ಆಶ್ಚರ್ಯಪಡುತ್ತೀರಿ, ನಾನು 1989 ರಲ್ಲಿ ಸಂಸತ್ತಿನ ಸದಸ್ಯನಾಗಿದ್ದಾಗ, ಜಗತ್ತಿನ ಆರನೇ ಒಂದು ಭಾಗದಷ್ಟು ನೆಲೆಯಾಗಿರುವ ಭಾರತದ ಆರ್ಥಿಕತೆಯ ಗಾತ್ರವು ಲಂಡನ್ ಮತ್ತು ಪ್ಯಾರಿಸ್ ನ ಆರ್ಥಿಕತೆಯ ಗಾತ್ರಕ್ಕಿಂತ ಚಿಕ್ಕದಾಗಿತ್ತು. ನಾವು ಎಲ್ಲಿಂದ ಬಂದಿದ್ದೇವೆ, ಲಂಡನ್ ಅನ್ನು, ಪ್ಯಾರಿಸ್ ಅನ್ನು ಮರೆತುಬಿಡಿ, ಕೆನಡಾವನ್ನು ಬಿಟ್ಟು, ಬ್ರೆಜಿಲ್ ಬಿಟ್ಟು, ಯುಕೆ ಬಿಟ್ಟು, ಫ್ರಾನ್ಸ್, ಜಪಾನ್ ಮತ್ತು ಜರ್ಮನಿಯ ಸರದಿ ಈಗ ಬರುತ್ತಿದೆ.  ಮತ್ತು ನಿಮ್ಮೆಲ್ಲರ ಕೊಡುಗೆಯಿಂದಾಗಿ ನಾವು ಮೂರನೇ ದೊಡ್ಡ ಆರ್ಥಿಕ ದೇಶವಾಗುತ್ತೇವೆ.

ಇಂದಿನ ಭಾರತ ಯಾರ ಮೇಲೂ ಅವಲಂಬಿತವಾಗಿಲ್ಲ. ಇಂದಿನ ಭಾರತದ ನಾಯಕತ್ವವು ಪ್ರಪಂಚದ ಮೂಲೆ ಮೂಲೆಯಲ್ಲಿ ತನ್ನ ಬಂದೂಕುಗಳನ್ನು ಹೊಂದಿದೆ. ಭಾರತ ಏನು ಯೋಚಿಸುತ್ತದೆಯೋ ಎಂದು ಜಗತ್ತು ಭಾರತದತ್ತ ನೋಡುತ್ತದೆ. ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ಭಾರತ ಎರಡು ದೊಡ್ಡ ತತ್ವಗಳನ್ನು ನೀಡಿದೆ.

ಮೊದಲನೆಯದಾಗಿ, ನಮ್ಮ ಭಾರತವು ವಿಸ್ತರಣೆಗಾಗಿ ಎಂದಿಗೂ ರಕ್ತ ಹರಿಸಿಲ್ಲ. ನಾವು ಎಂದಿಗೂ ಬೇರೆ ದೇಶವನ್ನು ಆಕ್ರಮಿಸಿಲ್ಲ, ನಮ್ಮ ದೇಶದ ಗಡಿಯನ್ನು ಮೀರಿ ಹೋಗಿಲ್ಲ, ನಾವು ಅದನ್ನು ಸಹಿಸಿಕೊಂಡಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಜಗತ್ತಿನ ಯಾವುದೇ ವಿವಾದವನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಪ್ರಧಾನಿ ಹೇಳಿದ್ದಾರೆ.

ನಾನು ನಿಮಗೆ ಒಂದು ಸಣ್ಣ ಉದಾಹರಣೆ ನೀಡುತ್ತಿದ್ದೇನೆ, 60 ರ ದಶಕದಲ್ಲಿ ನಮ್ಮ ರಾಕೆಟ್ಗಳ ಭಾಗಗಳು ಸೈಕಲ್ನಲ್ಲಿ ಬಂದು ಇತರ ದೇಶಗಳಿಂದ ಉಡಾವಣೆಯಾಗುತ್ತಿದ್ದವು, ಇಂದು ನಾವು ಅಮೆರಿಕದ ಉಪಗ್ರಹಗಳನ್ನು, ಸಿಂಗಾಪುರ ಮತ್ತು ಯುಕೆ ಉಪಗ್ರಹಗಳನ್ನು ಉಡಾಯಿಸುತ್ತೇವೆ. ಏಕೆಂದರೆ ನಾವು ಹಣಕ್ಕೆ ಮೌಲ್ಯವಾದವರಾಗಿದ್ದೇವೆ. ಆ ಮೂಲಕ ನಾವೂ ಗಳಿಸುತ್ತಿದ್ದೇವೆ.

ಕೋಚಿಂಗ್ ಸೆಂಟರ್ ಗಳಿಗೆ ಅಲೆಯುವ ಪ್ರವೃತ್ತಿ ಹೆಚ್ಚಾಗಿದೆ. ಅವುಗಳು ಕುಳಿಗಳಂತಾಗಿವೆ. ಸರ್ಕಾರಿ ಕೆಲಸಗಳಿಗೆ ತೀವ್ರ ಪೈಪೋಟಿ ಇದೆ, ಜಾಹಿರಾತುಗಳು ಜಾಸ್ತಿ ಇದೆ, ನಿಮ್ಮ ಗಮನವನ್ನು ಸ್ವಲ್ಪ ಬೇರೆಡೆಗೆ ತಿರುಗಿಸಿ, ನಿಮ್ಮ ಪ್ರತಿಭೆಯನ್ನು ಬೆಳಗಿಸಲು ಇನ್ನೂ ಎಷ್ಟು ಅವಕಾಶಗಳಿವೆ ಎಂದು ನಿಮಗೆ ತಿಳಿಯುತ್ತದೆ. 

ನಾನು ತುಂಬಾ ಪ್ರಭಾವಿತನಾಗಿದ್ದೇನೆ ಮತ್ತು ಪ್ರೇರೇಪಿಸಲ್ಪಟ್ಟಿದ್ದೇನೆ, ಇಲ್ಲಿ ತಾಂತ್ರಿಕ ಪ್ರಗತಿಗೆ ಅತ್ಯಾಧುನಿಕತೆಯ ಅಗತ್ಯವಿದೆ. ನಾನು ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್  ನ ಅಧ್ಯಕ್ಷನಾಗಿರುವುದರಿಂದ, ಭಾರತೀಯ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್, 3 ತಿಂಗಳುಗಳಲ್ಲಿ, ನಿಮ್ಮ ವಿಶ್ವವಿದ್ಯಾನಿಲಯದೊಂದಿಗೆ ಎಂಒಯು ಹೊಂದಲಿದೆ, ಇದರಿಂದಾಗಿ ಜಾಗತಿಕ ನಾಯಕರು ನಮ್ಮ ಯುವಜನರ ಸಾಮರ್ಥ್ಯ, ಸಾಮರ್ಥ್ಯ ಮತ್ತು ಪ್ರತಿಭೆಯಲ್ಲಿ ನಿಮ್ಮೊಂದಿಗೆ ಸಂವಹನ ನಡೆಸುತ್ತಾರೆ. ನಾವು ಅವರಿಗೆ ಸರಿಯಾದ ನಿರ್ದೇಶನವನ್ನು ನೀಡಲು ಸಾಧ್ಯವಾಗಿದೆ. ಭಾರತದ ಉದಯವನ್ನು ತಡೆಯಲಾಗದು. ಇದು ಕೇವ; ಏರಿಕೆಯಾಗುವುದಿಲ್ಲ, ಲಂಬವಾಗಿರುತ್ತದೆ. ಮತ್ತು ಇದು ಸಂಭವಿಸುತ್ತದೆ.

ವಿಶ್ವ ಪ್ರಜಾಪ್ರಭುತ್ವ ದಿನ, ಕೃತಕ ಬುದ್ಧಿಮತ್ತೆಯತ್ತ ವಿಶ್ವದ ಗಮನವನ್ನು ಸೆಳೆಯುವುದು ಮತ್ತು ಅದನ್ನು ನೆಲದ ವಾಸ್ತವದಲ್ಲಿ ತೋರಿಸುವುದು. ಈ ಸ್ಥಳ ದೈವತ್ವವನ್ನ ಹೊಂದಿದೆ. ದೈವತ್ವ ಇರುವುದರಿಂದ ಈ ಸ್ಥಳವು ಅಭಿವೃದ್ಧಿ ಹೊಂದುತ್ತದೆ.

ಮತ್ತೊಮ್ಮೆ, ನಿಮ್ಮ ಸಮಯಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಯುವಕ ಯುವತಿಯರೇ ಇದು ಸಂಬಂಧದ ಪ್ರಾರಂಭವಾಗಿದೆ. ನೀವು ದೆಹಲಿಗೆ ಬಂದಾಗ ನಾವು ಅದನ್ನು ಪೋಷಿಸುತ್ತೇವೆ.

ಧನ್ಯವಾದಗಳು.

 

*****


(Release ID: 2055618) Visitor Counter : 31