ಭಾರೀ ಕೈಗಾರಿಕೆಗಳ ಸಚಿವಾಲಯ
ವಿಶೇಷ ಸ್ವಚ್ಛತಾ ಅಭಿಯಾನ 4.0 ಮತ್ತು ಸ್ವಚ್ಛತಾ ಹಿ ಸೇವಾ ಯೋಜನೆಯ ಅಡಿಯಲ್ಲಿ ಸ್ವಚ್ಛತೆ ಕುರಿತು ರಾಷ್ಟ್ರವ್ಯಾಪಿ ಅಭಿಯಾನ ನಡೆಸುವುದನ್ನು ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯವು ಮುಂದುವರಿಸಲಿದೆ
Posted On:
15 SEP 2024 3:56PM by PIB Bengaluru
ಕಚೇರಿ/ಕೆಲಸದ ಸ್ಥಳ ಮತ್ತು ಅದರ ಸುತ್ತಮುತ್ತಲಿನ ವಠಾರ/ಪ್ರದೇಶಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಲು ಕೇಂದ್ರ ಸರ್ಕಾರವು ನಡೆಸುವ ಸ್ವಚ್ಛತಾ ಅಭಿಯಾನಕ್ಕೆ ಬದ್ಧವಾಗಿ, ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯವು ರಾಷ್ಟ್ರವ್ಯಾಪಿ ಸ್ವಚ್ಛತಾ ಅಭಿಯಾನ ಆಯೋಜಿಸುವುದನ್ನು ಮುಂದುವರೆಸಿದೆ.
ಡಿಸೆಂಬರ್ 2023 ಮತ್ತು ಆಗಸ್ಟ್ 2024 ರ ಅವಧಿಯಲ್ಲಿ, ಸ್ವಚ್ಛತಾ ಅಭಿಯಾನ ನಿಟ್ಟಿನಲ್ಲಿ ಒಟ್ಟು 757 ಕಾರ್ಯಕ್ರಮಗಳನ್ನು ನಡೆಸಲಾಗಿದೆ. 2982 ಕಳೆಗುಂದಿದ ಕಡತಗಳನ್ನು ವಿಲೇವಾರಿ ಮಾಡಲಾಗಿದೆ. ರದ್ದಿ/ ತ್ಯಾಜ್ಯ / ನಿರುಪಯುಕ್ತ ವಸ್ತುಗಳನ್ನು ವಿಲೇವಾರಿ ಮಾಡಿ, ಸ್ವಚ್ಛತೆಯ ನಂತರ 19.07 ಲಕ್ಷ ಚ.ಅಡಿ ಜಾಗವನ್ನು ತ್ಯಾಜ್ಯಮುಕ್ತಗೊಳಿಸಲಾಗಿದೆ. ರದ್ದಿ/ ತ್ಯಾಜ್ಯ/ ನಿರುಪಯುಕ್ತ ವಸ್ತುಗಳ ವಿಲೇವಾರಿಯಿಂದ ರೂ.69.37 ಕೋಟಿ ಆದಾಯಗಳಿಸಿದೆ. ಈ ಘಟನೆಗಳು ಕಾರ್ಯಸ್ಥಳದ ಬಳಕೆ, ನಿರ್ವಹಣೆ ಮತ್ತು ಆರೋಗ್ಯಕರ ಕೆಲಸದ ವಾತಾವರಣದ ವರ್ಧನೆಗೆ ಅವಕಾಶ ನೀಡುತ್ತವೆ ಮತ್ತು ಇಲಾಖೆಗೆ ಆದಾಯವನ್ನು ಗಳಿಸಿಕೊಟ್ಟಿದೆ.
ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯವು ಸ್ವಚ್ಛತಾ ವಿಶೇಷ ಅಭಿಯಾನ 3.0 ಸಮಯದಲ್ಲಿ ಪ್ರಮುಖ ಕಾರ್ಯಚಟುವಟಿಕೆ ನೀಡಿತ್ತು. ವಿಶೇಷ ಅಭಿಯಾನ 3.0 ಸಮಯದಲ್ಲಿ, ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯವು ರದ್ದಿ / ಅನಗತ್ಯ ವಸ್ತುಗಳ ಮಾರಾಟ / ವಿಲೇವಾರಿಯಿಂದ 21 ಲಕ್ಷ ಚದರ ಮೀಟರ್ ಅನ್ನು ಮುಕ್ತಗೊಳಿಸಲಾಗಿತ್ತು. ಬಾಹ್ಯವಠಾರ ಸ್ವಚ್ಛತೆಯಲ್ಲಿ ಸಚಿವಾಲಯಗಳಲ್ಲೇ 2 ನೇ ಸ್ಥಾನವನ್ನು ಸಾಧಿಸಿತ್ತು. ಮತ್ತು ಈ ರದ್ದಿ / ಅನಗತ್ಯ ವಸ್ತುಗಳ ಮಾರಾಟ / ವಿಲೇವಾರಿ ಮೂಲಕ ರೂ 4.66 ಕೋಟಿ ಆದಾಯವನ್ನು ಗಳಿಸುವ ಮೂಲಕ ಸಚಿವಾಲಯಗಳಲ್ಲೇ 5 ನೇ ಸ್ಥಾನವನ್ನು ಸಾಧಿಸಿತ್ತು.
ಮುಂಬರುವ ವಿಶೇಷ ಅಭಿಯಾನ 4.0 ರ ಪೂರ್ವಸಿದ್ಧತಾ ಹಂತದಲ್ಲಿ ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿರುವ, ಹಾಗೂ ಸಿ.ಪಿ.ಎಸ್.ಇ./ಎ.ಬಿ.ಗಳೊಂದಿಗೆ ಸಮಾಲೋಚಿಸಿ ಎಲ್ಲಾ ಸ್ಥಳಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಮೂಲಕ, ವಿಶೇಷ ಅಭಿಯಾನ 4.0 ರ ಸಮಯದಲ್ಲಿ (02 ಅಕ್ಟೋಬರ್ 2024 ರಿಂದ 31 ಅಕ್ಟೋಬರ್ 2024. ) ಸ್ವಚ್ಛತಾ ಗುರಿಗಳನ್ನು ಸಾಧಿಸಲು ಸಂಘಟಿತ ಪ್ರಯತ್ನಗಳನ್ನು ಸಚಿವಾಲಯವು ಮಾಡುತ್ತಿದೆ.
ಸಚಿವಾಲಯವು ತನ್ನ ಸಿ.ಪಿ.ಎಸ್.ಇ./ಎ.ಬಿ.ಗಳೊಂದಿಗೆ ಆಗಸ್ಟ್ 16 ರಿಂದ ಆಗಸ್ಟ್ 31, 2024 ರ ನಡುವೆ ಸ್ವಚ್ಛತಾ ಪಾಕ್ಷಿಕ(ಪಖ್ವಾಡ)ವನ್ನು ಆಚರಿಸಿತು. ಇದರಲ್ಲಿ ಸ್ವಚ್ಛ ಮತ್ತು ಆರೋಗ್ಯಕರ ಪರಿಸರವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ತಿಳಿಸಲು ವಿವಿಧ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದಲ್ಲದೆ, ಸಚಿವಾಲಯವು ಅದರ ಸಿ.ಪಿ.ಎಸ್.ಇ. ಮತ್ತು ಎ.ಬಿ.ಗಳ ಜೊತೆಗೆ ಸ್ವಚ್ಛತಾ ಹಿ ಸೇವಾ ಅಭಿಯಾನದಲ್ಲಿ ಭಾಗವಹಿಸುತ್ತಿದೆ. ಇದರಲ್ಲಿ ಸ್ವಚ್ಛತೆಯ ಗುರಿಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ. 17ನೇ ಸೆಪ್ಟೆಂಬರ್, 2024 ರಿಂದ ಅಕ್ಟೋಬರ್ 01, 2024 ರ ನಡುವಿನ ಅಭಿಯಾನದ ಅವಧಿಯಲ್ಲಿ ಈ ಗುರುತಿಸಲಾದ ಸ್ಥಳಗಳನ್ನು ಸಮುದಾಯದ ಸಹಭಾಗಿತ್ವದೊಂದಿಗೆ ಸ್ವಚ್ಛಗೊಳಿಸಲಾಗುತ್ತದೆ, ಇದು ಜನರಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತದೆ.
*****
(Release ID: 2055242)
Visitor Counter : 65