ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
‘ಸ್ವಭಾವ ಸ್ವಚ್ಛತೆ, ಸಂಸ್ಕಾರ ಸ್ವಚ್ಛತೆ’ ಎಂಬ ಪರಿಕಲ್ಪನೆಯಲ್ಲಿ ‘ಸ್ವಚ್ಛತಾ ಹಿ ಸೇವಾ’ ಅಭಿಯಾನವನ್ನು ಪ್ರಾರಂಭಿಸಿದ ಭಾರತೀಯ ಆಹಾರ ನಿಗಮ
Posted On:
14 SEP 2024 12:40PM by PIB Bengaluru
ಭಾರತೀಯ ಆಹಾರ ನಿಗಮವು ( ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ – ಎಫ್.ಸಿ.ಐ. ) 17ನೇ ಸೆಪ್ಟೆಂಬರ್ 2024 ರಿಂದ 2ನೇ ಅಕ್ಟೋಬರ್ 2024 ರವರೆಗೆ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಿದೆ. ರಾಷ್ಟ್ರದಾದ್ಯಂತ ಉತ್ತರದ ಜಮ್ಮು & ಕಾಶ್ಮೀರದಿಂದ ದಕ್ಷಿಣದ ಕೇರಳ ವರೇಗೆ ಮತ್ತು ಪಶ್ಚಿಮದ ಗುಜರಾತ್ ನಿಂದ ಪೂರ್ವದ ಈಶಾನ್ಯ ರಾಜ್ಯಗಳ ಒಟ್ಟು 760 ಸ್ಥಳಗಳಲ್ಲಿರುವ ಎಲ್ಲಾ ವಲಯ / ಪ್ರಾದೇಶಿಕ / ಜಿಲ್ಲೆ ಮತ್ತು ದೂರದ ಪ್ರದೇಶಗಳನ್ನು ಒಳಗೊಂಡಿರುವ ಕಚೇರಿಗಳಲ್ಲಿ ಹಾಗೂ ಗೋಡೌನ್ಗಳಲ್ಲಿ ಭಾರತೀಯ ಆಹಾರ ನಿಗಮವು ಈ ಅಭಿಯಾನವನ್ನು ಆಯೋಜಿಸಲಿದೆ. 17ನೇ ಸೆಪ್ಟೆಂಬರ್ 2024 ರಿಂದ ಪ್ರಾರಂಭವಾಗುವ ಸ್ವಚ್ಛತಾ ಅಭಿಯಾನವನ್ನು ಭಾರತೀಯ ಆಹಾರ ನಿಗಮವು 'ಇಡೀ ಸಮಾಜದ' ವ್ಯವಸ್ಥೆಯನ್ನು ವಿವರಿಸುವ ಮೂರು ಪ್ರಮುಖ ಸ್ತಂಭಗಳ ಮೇಲೆ ಕೇಂದ್ರೀಕರಿಸಿದ ಪರಿಕಲ್ಪನೆಯ ಸಮಗ್ರ ಯೋಜನೆಯಾಗಿ ರೂಪಿಸಿದೆ.
ಸಂಪೂರ್ಣ ಸ್ವಚ್ಛತಾ ಮತ್ತು ಸ್ವಚ್ಛತಾ ಲಕ್ಷಿತ್ ಇಕಾಯಿ – ಇದು ಶುಚಿತ್ವದ ಗುರಿ ಘಟಕಗಳಲ್ಲಿ (ಸಿಟಿಯು) ಸಮಯಾಸಮಯಕ್ಕೆ ಅನುಗುಣವಾಗಿ ಪರಿವರ್ತನೆ, ಬದಲಾವಣೆ ಮತ್ತು ಕೊಳಕು, ತ್ಯಾಜ್ಯ ಮತ್ತು ಕಸಗಳನ್ನು ತೆಗೆದುಹಾಕುವ ಮೂಲಕ ಡಿಪೋಗಳು / ಗೋಡೌನ್ಗಳ ಒಳಗೆ / ಹೊರಗಿನ ಸ್ವಚ್ಛತೆ ಸೇರಿದಂತೆ ಒಟ್ಟಾರೆ ಶುಚಿತ್ವವನ್ನು ಕೇಂದ್ರೀಕರಿಸಿ ವಿಶೇಷ ಜಾಗೃತಿ ಶಿಬಿರಗಳನ್ನು, ಸಾಮೂಹಿಕ ಶುಚಿತ್ವ ಶಿಬಿರಗಳು, ಇತ್ಯಾದಿಗಳನ್ನು ಆಯೋಜಿಸುವುದು.
ಸ್ವಚ್ಛತಾ ಕಿ ಭಾಗಿದರಿ– ಭಾರತೀಯ ಆಹಾರ ನಿಗಮವು ಸಾರ್ವಜನಿಕ ಸಹಭಾಗಿತ್ವದಲ್ಲಿ ಕಚೇರಿಗಳಲ್ಲಿ ಸ್ವಚ್ಛತೆಯ ಪ್ರತಿಜ್ಞೆ, ಸಾಂಸ್ಕೃತಿಕ ಚಟುವಟಿಕೆಗಳು, ಮಿನಿ ಮ್ಯಾರಥಾನ್/ ವಾಕಥಾನ್/ ಸೈಕ್ಲೋಥಾನ್, ಜಾಗೃತಿ ಮತ್ತು ಶಿಬಿರ ಇತ್ಯಾದಿಗಳನ್ನು ಆಯೋಜಿಸುವುದು.
ಸಫಾಯಿ ಮಿತ್ರ ಸುರಕ್ಷಾ ಶಿಬಿರಗಳು- ನೈರ್ಮಲ್ಯ ಕಾರ್ಮಿಕರಿಗೆ ತಡೆಗಟ್ಟುವ ಆರೋಗ್ಯ ತಪಾಸಣೆ ಮತ್ತು ಸಾಮಾಜಿಕ ಭದ್ರತೆಯ ರಕ್ಷಣೆಯನ್ನು ಒದಗಿಸುವುದು.
ಈ ವರ್ಷ "ಸ್ವಭಾವ ಸ್ವಚ್ಛತೆ, ಸಂಸ್ಕಾರ ಸ್ವಚ್ಛತೆ" ಪರಿಕಲ್ಪನೆಯನ್ನು ಗಮನದಲ್ಲಿಟ್ಟುಕೊಂಡು ಸಿಟಿಯು ಸೈಟ್ಗಳು / ತ್ಯಾಜ್ಯಗಳಿಗೆ ವಿಶೇಷ ಒತ್ತು ನೀಡಲಾಗುವುದು.
ದೇಶಾದ್ಯಂತ ಆಹಾರ ಭದ್ರತಾ ಕಾರ್ಯಾಚರಣೆಗಳಲ್ಲಿ "ಸ್ವಚ್ಛತೆ"ಯ ವಿಶೇಷ ಪರಿಕಲ್ಪನೆಯನ್ನು ಸಂಯೋಜಿಸುವ ಮೂಲಕ, ಭಾರತೀಯ ಆಹಾರ ನಿಗಮವು ಕನಿಷ್ಟ ಬೆಂಬಲ ಬೆಲೆಯಲ್ಲಿ ರೈತರಿಂದ ಗೋಧಿ ಮತ್ತು ಭತ್ತವನ್ನು ಸಂಗ್ರಹಿಸುತ್ತದೆ. ವಿವಿಧ ಸಾರಿಗೆ ವಿಧಾನಗಳ ಮೂಲಕ ವರ್ಷದಲ್ಲಿ ಸುಮಾರು 50 ಮಿಲಿಯನ್ ಟನ್ ಆಹಾರ ಧಾನ್ಯಗಳನ್ನು ಸಾಗಿಸುತ್ತದೆ. ಈ ಮೂಲಕ ದೇಶದ ಪ್ರತಿಯೊಂದು ಭಾಗದಲ್ಲೂ ಗೋಧಿ ಮತ್ತು ಅಕ್ಕಿ ಲಭ್ಯವಿರುವುದನ್ನು ಭಾರತೀಯ ಆಹಾರ ನಿಗಮವು ಖಚಿತಪಡಿಸುತ್ತದೆ. ಈ ರೀತಿ ಖರೀದಿಸಿ, ಸಾಗಾಟಮಾಡಿ, ಸಂಗ್ರಹಣೆ ಮಾಡಿದ ಗೋಧಿ ಮತ್ತು ಅಕ್ಕಿಯನ್ನು ನಂತರ 2000 ಕ್ಕೂ ಹೆಚ್ಚು ಗೋಡೌನ್ಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ, ಮತ್ತು ಇವುಗಳನ್ನು ದೇಶಾದ್ಯಂತ ಜಾಲದ ಮೂಲಕ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ನ್ಯಾಯಬೆಲೆ ಅಂಗಡಿಗಳ ವಿತರಿಸಲಾಗುತ್ತದೆ.
ಅಭಿಯಾನದ ಪ್ರಗತಿಯನ್ನು ‘ಸ್ವಚ್ಛತಾ ಹಿ ಸೇವಾ’ (https://swachhatahiseva.gov.in) ಜಾಲತಾಣದಲ್ಲಿ ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಸ್ವಚ್ಛತಾ ಹಿ ಸೇವಾ 2024 ಅಭಿಯಾನವು ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2, 2024ರವರೆಗೆ ನಡೆಯಲಿದೆ. ಸ್ವಚ್ಛ ಭಾರತ ದಿವಸದಂದು ಈ ಅಭಿಯಾನವು ಕೊನೆಗೊಳ್ಳುತ್ತದೆ. ಇದು ಎಲ್ಲಾ ನಾಗರಿಕರು, ಪಾಲುದಾರರು ಮತ್ತು ಮಧ್ಯಸ್ಥಗಾರರಿಗೆ ಈ ರಾಷ್ಟ್ರೀಯ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಲು ಉತ್ತಮ ಅವಕಾಶವನ್ನು ಒದಗಿಸುತ್ತದೆ.
*****
(Release ID: 2055162)
Visitor Counter : 51