ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಕನಿಷ್ಠ ಒಬ್ಬ ವ್ಯಕ್ತಿಯನ್ನು ಸಾಕ್ಷರರನ್ನಾಗಿ ಮಾಡಲು ಸಂಕಲ್ಪ ಮಾಡೋಣ; ಇದು ವಿಕಸಿತ ಭಾರತಕ್ಕೆ ಮಹತ್ವದ  ಕೊಡುಗೆಯಾಗಿದೆ ಉಪರಾಷ್ಟ್ರಪತಿಯವರು  ಹೇಳಿದರು


100% ಸಾಕ್ಷರತೆಯನ್ನು ಸಾಧ್ಯವಾದಷ್ಟು ಬೇಗ ಸಾಧಿಸಲು ಬದ್ಧತೆ ಮತ್ತು ಉತ್ಸಾಹದಿಂದ ನಾವೆಲ್ಲರೂ ಮಿಷನ್ ಮೋಡ್ ನಲ್ಲಿರಬೇಕಾದ ಸಮಯ ಇದು-ಉಪರಾಷ್ಟ್ರಪತಿ 

ಸಾಕ್ಷರತೆಯು  ವ್ಯಕ್ತಿಯನ್ನು  ಅಜ್ಞಾನದಿಂದ ಮುಕ್ತಗೊಳಿಸುತ್ತದೆ, ಗೌರವವನ್ನು ನೀಡುತ್ತದೆ,  ಸ್ವಯಂ ಅನ್ವೇಷಣೆಗೆ ಸಹಾಯ ಮಾಡುತ್ತದೆ -ಉಪರಾಷ್ಟ್ರಪತಿ 

NEP ಒಂದು ಗೇಮ್-ಚೇಂಜರ್; ಇನ್ನೂ ಅಳವಡಿಸಿಕೊಳ್ಳದ ರಾಜ್ಯಗಳು ಮರುಚಿಂತನೆ ಮಾಡಬೇಕು, ತಮ್ಮ ನಿಲುವನ್ನು ಮರುಪರಿಶೀಲಿಸಬೇಕು-ಉಪರಾಷ್ಟ್ರಪತಿ 

ಭಾರತವು ಅನನ್ಯ ಭಾಷಾ ಸಮೃದ್ಧಿಯನ್ನು ಹೊಂದಿದೆ; ಮಾತೃಭಾಷೆ ನಾವು ಕನಸು ಕಾಣುವ ಭಾಷೆಯಾಗಿದೆ ಎಂದು ಉಪರಾಷ್ಟ್ರಪತಿ ಹೇಳಿದರು

ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯ ಮುಖ್ಯ ಅತಿಥಿಯಾಗಿ ಉಪರಾಷ್ಟ್ರಪತಿಯವರು ಅಧ್ಯಕ್ಷತೆ ವಹಿಸಿದ್ದರು

Posted On: 08 SEP 2024 2:45PM by PIB Bengaluru

ನಾವು ಕನಿಷ್ಠ ಒಬ್ಬ ವ್ಯಕ್ತಿಯನ್ನು ಸಾಕ್ಷರರನ್ನಾಗಿಸಲು ಪ್ರತಿಯೊಬ್ಬರೂ ಇಂದು ಪ್ರತಿಜ್ಞೆ ಮಾಡಬೇಕೆಂದು ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಕರೆ ನೀಡಿದ್ದಾರೆ."ನಾವು ಯಾರನ್ನಾದರೂ ಸಾಕ್ಷರರನ್ನಾಗಿಸಿದಾಗ , ನಾವು ಅವರನ್ನು ಅಜ್ಞಾನದಿಂದ ಮುಕ್ತಗೊಳಿಸುತ್ತೇವೆ, ಆ ವ್ಯಕ್ತಿಯು ತನ್ನನ್ನು ತಾನು ಕಂಡುಕೊಳ್ಳಲು ಸಹಾಯ ಮಾಡುತ್ತೇವೆ, ಮತ್ತು ಅವರನ್ನು ಗೌರವಾನ್ವಿತರನ್ನಾಗಿ ಮಾಡುತ್ತೇವೆ, ಅವಲಂಬನೆಯನ್ನು ಕಡಿಮೆ ಮಾಡುತ್ತೇವೆ, ಸ್ವಾತಂತ್ರ್ಯ ಮತ್ತು ಪರಸ್ಪರ ಅವಲಂಬನೆ ಉಂಟುಮಾಡುತ್ತೇವೆ. ಅದು ವ್ಯಕ್ತಿಯು ತನಗೆ ಸ್ವತಃ ಸಹಾಯ ಮಾಡಿಕೊಳ್ಳಲು ಒಂದು ಮಾರ್ಗವನ್ನು ಒದಗಿಸುತ್ತದೆ. ಅದು ಇದು ಕೈಹಿಡಿದು ನಡೆಸುವ ಪ್ರಕ್ರಿಯೆಯ ಅತ್ಯುನ್ನತ ಅಂಶವಾಗಿದೆ ಎಂದು ಅವರು ಹೇಳಿದರು.

 

ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಉಪರಾಷ್ಟ್ರಪತಿ ಅವರು, "ಒಬ್ಬ ವ್ಯಕ್ತಿಗೆ ಶಿಕ್ಷಣ ನೀಡುವ ಮೂಲಕ ನೀವು ನೀಡುವ ಸಂತೋಷ ಮತ್ತು ನೆಮ್ಮದಿ - ಅದು ಪುರುಷನಾಗಿರಲಿ, ಮಹಿಳೆಯಾಗಿರಲಿ, ಮಗುವಾಗಿರಲಿ ಅಥವಾ ಹುಡುಗಿಯಾಗಿರಲಿ – ಅಳೆಯಲು ಸಾಧ್ಯವಾಗದು. ಅಲ್ಲದೆ ಅದು ನಿಮಗೆ ತರುವ ಸಂತೋಷವನ್ನು ನೀವು ಊಹಿಸಲಾರಿರಿ. ಅದು ಸಕಾರಾತ್ಮಕ ರೀತಿಯಲ್ಲಿ ಹರಡುತ್ತದೆ. ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ನೀವು ತೆಗೆದುಕೊಳ್ಳಬಹುದಾದ ಅತ್ಯುತ್ತಮ ಸಕಾರಾತ್ಮಕ ಕ್ರಮವಾಗಿರುತ್ತದೆ" ಎಂದು ಹೇಳಿದರು.

 

ತಮ್ಮ ಭಾಷಣದಲ್ಲಿ, ಉಪರಾಷ್ಟ್ರಪತಿ ಅವರು ಎಲ್ಲರೂ ಸಾಕ್ಷರತೆಯನ್ನು ಪ್ರೋತ್ಸಾಹಿಸಬೇಕೆಂದು ಕರೆ ನೀಡಿದರು. “100% ಸಾಕ್ಷರತೆಯನ್ನು ಸಾಧ್ಯವಾದಷ್ಟು ಬೇಗ ಸಾಧಿಸಲು ಬದ್ಧತೆ ಮತ್ತು ಉತ್ಸಾಹದಿಂದ ನಾವೆಲ್ಲರೂ ಕಾರ್ಯನಿರ್ವಹಿಸಬೇಕಾದ ಸಮಯವಿದು. ಆದರೆ ನಾವು ಯೋಚಿಸುವುದಕ್ಕಿಂತ ಮುಂಚೆಯೇ ಇದು ಸಾಧ್ಯವಾಗುತ್ತದೆ ಎಂದು ನಾನು ನಂಬಿದ್ದೇನೆ. ಪ್ರತಿಯೊಬ್ಬರೂ ಕನಿಷ್ಠ ಒಬ್ಬ ವ್ಯಕ್ತಿಯನ್ನು ಸಾಕ್ಷರನನ್ನಾಗಿಸಿದರೆ, ಇದು 'ವಿಕಸಿತ ಭಾರತ'ಕ್ಕಾಗಿ ಬಹಳ  ಪ್ರಮುಖ ಕೊಡುಗೆಯಾಗಲಿದೆ ” ಎಂದು ಹೇಳಿದರು.

"ಶಿಕ್ಷಣವು ನಿಮ್ಮಿಂದ ಯಾವ ಕಳ್ಳನೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಯಾವ ಸರಕಾರವೂ ಅದನ್ನು ನಿಮ್ಮಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಸಂಬಂಧಿಕರು ಅಥವಾ ಸ್ನೇಹಿತರು ಅದನ್ನು ನಿಮ್ಮಿಂದ ದೂರ ಮಾಡಲು ಸಾಧ್ಯವಿಲ್ಲ. ಅದರಲ್ಲಿ ಯಾವುದೇ ಕಡಿತವಾಗಲಾರದು. ನೀವು ಅದನ್ನು ಹಂಚಿಕೊಳ್ಳುತ್ತಾ ಹೋದಂತೆ ಅದು ಬೆಳೆಯುತ್ತದೆ ಮತ್ತು ಬೆಳೆಯುತ್ತಲೇ ಇರುತ್ತದೆ”ಎಂದು ಉಪರಾಷ್ಟ್ರಪತಿಯವರು ಪತಿಪಾದಿಸಿದರು. ಸಾಕ್ಷರತೆಯನ್ನು ಉತ್ಸಾಹದಿಂದ ಅನುಸರಿಸಿದರೆ, ಭಾರತವು ನಳಂದಾ ಮತ್ತು ತಕ್ಷಶಿಲೆಯಂತೆ ಕಲಿಕೆಯ ಕೇಂದ್ರವಾಗಿ ತನ್ನ ಪ್ರಾಚೀನ ವಿದ್ಯಾಕೇಂದ್ರದ ಸ್ಥಾನಮಾನವನ್ನು ಮರಳಿ ಪಡೆಯಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

 

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಇನ್ನೂ ಅಳವಡಿಸಿಕೊಳ್ಳದ ರಾಜ್ಯಗಳು ತಮ್ಮ ನಿಲುವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ ಅವರು , ಈ ನೀತಿಯು ರಾಷ್ಟ್ರಕ್ಕೆ ಗೇಮ್-ಚೇಂಜರ್ ಆಗಿದೆ ಎಂದು ಅವರು  ಹೇಳಿದರು. "ಈ ರಾಷ್ಟ್ರೀಯ ಶಿಕ್ಷಣ ನೀತಿಯು ನಮ್ಮ ಯುವಜನರಿಗೆ ಅವರ ಪ್ರತಿಭೆ ಮತ್ತು ಶಕ್ತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಅಧಿಕಾರ ನೀಡುತ್ತದೆ, ಎಲ್ಲಾ ಭಾಷೆಗಳಿಗೆ ಸರಿಯಾದ ಪ್ರಾಮುಖ್ಯತೆಯನ್ನು ನೀಡುತ್ತದೆ" ಎಂದು ಅವರು ಹೇಳಿದರು.

 

ಮಾತೃಭಾಷೆಯ ವಿಶೇಷ ಮಹತ್ವವನ್ನು ಮತನಾಡುತ್ತಾ ಶ್ರೀ ಧನಕರ್ ಅವರು,  "ಇದು ನಾವು ಕನಸು ಕಾಣುವ ಭಾಷೆಯಾಗಿದೆ" ಎಂದು ಹೇಳಿದರು. ಅಲ್ಲದೆ ಭಾರತದ ಅಸಾಮಾನ್ಯ  ಭಾಷಾ ವೈವಿಧ್ಯತೆಯನ್ನು  ಪ್ರಸ್ತಾಪಿಸುತ್ತಾ, "ಜಗತ್ತಿನಲ್ಲಿ ಭಾರತದಂತಹ ಬೇರೆ ಯಾವ ದೇಶವೂ ಇಲ್ಲ. ಭಾಷೆಯ ಸಮೃದ್ಧಿಯ ವಿಷಯದಲ್ಲಿ, ಹಲವಾರು ಭಾಷೆಗಳೊಂದಿಗೆ, ನಾವು ಅದ್ವಿತೀಯ ರಾಷ್ಟ್ರವಾಗಿದ್ದೇವೆ" ಎಂದು ಹೇಳಿದರು.

ರಾಜ್ಯಸಭೆಯ ಅಧ್ಯಕ್ಷರಾಗಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ, "ನಾನು ಸದಸ್ಯರಿಗೆ 22 ಭಾಷೆಗಳಲ್ಲಿ ಮಾತನಾಡಲು ಅವಕಾಶ ನೀಡುತ್ತೇನೆ. ಅವರು ತಮ್ಮ ಭಾಷೆಯಲ್ಲಿ ಮಾತನಾಡುವಾಗ, ನಾನು ಅನುವಾದವನ್ನು ಕೇಳುತ್ತೇನೆ, ಆದರೆ ಅವರ ದೇಹ ಭಾಷೆಯೇ ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ನನಗೆ ತಿಳಿಸುತ್ತದೆ " ಎಂದು ಹೇಳಿದರು. 

 

ಭಾರತೀಯ ಸಂಸ್ಕೃತಿಯಲ್ಲಿ ಋಷಿ ಪರಂಪರೆಗಿರುವ ಆಳವಾದ ಮಹತ್ವವನ್ನು ಪ್ರಸ್ತಾಪಿಸಿದ ಉಪರಾಷ್ಟ್ರಪತಿಯವರು ಪ್ರತಿಯೊಬ್ಬರೂ "ಆರು ತಿಂಗಳೊಳಗೆ ಕನಿಷ್ಠ ಒಬ್ಬರನ್ನು ಸಾಕ್ಷರನನ್ನಾಗಿಸುವ ಸಂಕಲ್ಪ ಮಾಡಬೇಕು, ಇದರಿಂದಾಗಿ ವರ್ಷಾಂತ್ಯಕ್ಕೆ ಇಬ್ಬರನ್ನುಸಾಕ್ಷರನನ್ನಾಗಿಸುವ ಉದ್ದೇಶವನ್ನು ಸಾಧಿಸಬಹುದು" ಎಂದು ಕರೆ ನೀಡಿದರು.

 

ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಆಗಿರುವ ಪರಿವರ್ತನಾತ್ಮಕ ಪ್ರಗತಿಯನ್ನು ಹೊಗಳುತ್ತಾ, ಶ್ರೀ ಧನಕರ್ ಅವರು ಪ್ರತಿ ಮನೆಗೆ ವಿದ್ಯುತ್ ಸರಬರಾಜು ಮಾಡುವುದು ಒಂದು ಕಾಲದಲ್ಲಿ ಊಹಿಸಲಾಗದ್ದಾಗಿದ್ದರೂ ಈಗ ಅದು ವಾಸ್ತವವಾಗಿದೆ. ಭವಿಷ್ಯದ ಗುರಿಗಳು ಸೌರ ಶಕ್ತಿಯ ಮೂಲಕ ಸ್ವಾವಲಂಬನೆಯ ಮೇಲೆ ಕೇಂದ್ರೀಕೃತವಾಗಿವೆ ಎಂದು ಅವರು ಹೇಳಿದರು. ಗ್ರಾಮೀಣ ಅಭಿವೃದ್ಧಿಯ ಕುರಿತು ಅವರು ಪ್ರತಿ ಮನೆಯಲ್ಲೂ ಶೌಚಾಲಯಗಳು ಮತ್ತು ವ್ಯಾಪಕವಾದ ಡಿಜಿಟಲ್ ಸಂಪರ್ಕದ ಪ್ರಭಾವದಂತಹ ಗಮನಾರ್ಹ ಪ್ರಗತಿಯನ್ನು ಹೈಲೈಟ್ ಮಾಡಿದರು. ದೂರದ ಗ್ರಾಮಗಳಲ್ಲಿ 4G ಪ್ರವೇಶವು ಸೇವಾ ವಿತರಣೆಯಲ್ಲಿ ಕ್ರಾಂತಿಯನ್ನುಂಟು ಮಾಡಿದೆ, ದೈನಂದಿನ ಕೆಲಸಗಳನ್ನು ಸುಲಭಗೊಳಿಸಿದೆ ಮತ್ತು ಅಗತ್ಯ ಸೇವೆಗಳಿಗಾಗಿ ದೀರ್ಘ ಸಾಲುಗಳ ಅಗತ್ಯವನ್ನು ನಿವಾರಿಸಿದೆ ಎಂದು ಅವರು ಹೇಳಿದರು.

ನಮ್ಮ  ಸಂಸ್ಥೆಗಳನ್ನು ಕಲುಷಿತಗೊಳಿಸುವ, ಕಳಂಕಿತಗೊಳಿಸುವ ಮತ್ತು ಕೀಳಾಗಿ ಕಾಣುವ ಜನರ ವಿರುದ್ಧ ಎಚ್ಚರಿಕೆ ನೀಡುತ್ತಾ, ಶ್ರೀ ಧನಕರ್ ಅವರು ಭಾರತದ ಗಮನಾರ್ಹ ಬೆಳವಣಿಗೆಯನ್ನು ಅಂಗೀಕರಿಸಲು ಮತ್ತು ವಾಸ್ತವ ಪರಿಸ್ಥಿತಿಯನ್ನು ಗುರುತಿಸಲು ಸಾಧ್ಯವಾಗದ ತಪ್ಪು ದಾರಿ ಹಿಡಿದ ಆತ್ಮಗಳಿಗೆ ಸರಿಯಾದ ಮಾರ್ಗವನ್ನು ತೋರಿಸಲು ಒತ್ತಾಯಿಸಿದರು.

 

ಕೇಂದ್ರ ಶಿಕ್ಷಣ ರಾಜ್ಯ ಸಚಿವರಾದ ಶ್ರೀ ಜಯಂತ್ ಚೌಧರಿ , ಶಾಲಾ ಶಿಕ್ಷಣ, ಸಾಕ್ಷರತಾ ಕಾರ್ಯದರ್ಶಿ ಶ್ರೀ ಸಂಜಯ್ ಕುಮಾರ್ ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪೂರ್ಣ ಭಾಷಣ ಓದಿ :

https://pib.gov.in/PressReleasePage.aspx?PRID=2052924


*****



(Release ID: 2052983) Visitor Counter : 30


Read this release in: English , Urdu , Hindi , Tamil