ಉಪರಾಷ್ಟ್ರಪತಿಗಳ ಕಾರ್ಯಾಲಯ
ರಾಷ್ಟ್ರೀಯತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದು ರಾಷ್ಟ್ರಕ್ಕೆ ಮಾಡುವ ಮಹಾ ದ್ರೋಹ - ಉಪರಾಷ್ಟ್ರಪತಿ
ಶಿಕ್ಷಣವು ಪರಿವರ್ತನೆಯ ಬದಲಾವಣೆಯ ಕೇಂದ್ರಬಿಂದುವಾಗಿದೆ : ಉಪರಾಷ್ಟ್ರಪತಿ ಧನಕರ್
ಇಂದಿನ ಭಾರತ ಹತ್ತು ವರ್ಷಗಳ ಹಿಂದೆ ಇದ್ದ ಹಾಗೆ ಅಲ್ಲ - ಉಪರಾಷ್ಟ್ರಪತಿ
ಇಡೀ ಜಗತ್ತು ಗುರುತಿಸುವ ಹಾದಿಯಲ್ಲಿ ಪ್ರಧಾನಮಂತ್ರಿಯವರು ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ಉಪರಾಷ್ಟ್ರಪತಿ ಧನಕರ್ ಹೇಳಿದರು.
ನನ್ನ ದೈಹಿಕ ಜನ್ಮವು ಕಿತಾನ ಗ್ರಾಮದಲ್ಲಿ, ಆದರೆ ನನ್ನ ನಿಜವಾದ ಜನ್ಮವು ಸೈನಿಕ ಶಾಲೆಯಲ್ಲಿ ಚಿತ್ತೋರಗಢದಲ್ಲಿ ಆಯಿತು- ಶ್ರೀ ಧನಕರ್
ಸೈನಿಕ ಶಾಲೆ ಗೋರಖ ಪುರ ಭವಿಷ್ಯದ ಪೀಳಿಗೆಯ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ, ದೇಶವು ಅನುಕರಿಸಲು ಮಾನದಂಡವನ್ನು ಹೊಂದಿಸುತ್ತದೆ ಎಂದು ಉಪರಾಷ್ಟ್ರಪತಿಗಳು ಹೇಳಿದರು.
ವೈಫಲ್ಯವು ಯಶಸ್ಸಿನ ಅಡಿಪಾಯವಾಗಿದೆ ಎಂದು ಉಪರಾಷ್ಟ್ರಪತಿಗಳು ಸೈನಿಕ ಶಾಲೆಯ ಕೆಡೆಟ್ ಗಳಿಗೆ ಹೇಳಿದರು
ಉತ್ತರ ಪ್ರದೇಶದ ಗೋರಖ್ಪುರ ಸೈನಿಕ ಶಾಲೆಯನ್ನು ಉಪರಾಷ್ಟ್ರಪತಿಗಳಿಂದ ಇಂದು ಉದ್ಘಾಟನೆ
Posted On:
07 SEP 2024 2:06PM by PIB Bengaluru
ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನಕರ್ ಅವರು ಇಂದು ರಾಷ್ಟ್ರೀಯತೆಯ ಮೇಲೆ ರಾಜಿ ಮಾಡಿಕೊಳ್ಳುವುದರ ವಿರುದ್ಧ ನಾಗರಿಕರಿಗೆ ಎಚ್ಚರಿಕೆ ನೀಡಿದರು, ಇದು "ರಾಷ್ಟ್ರಕ್ಕೆ ಮಾಡುವ ಮಹಾ ದ್ರೋಹ" ಎಂದು ಹೇಳಿದರು. "ಯಾರಾದರೂ ರಾಷ್ಟ್ರದ ಸಮಗ್ರತೆಗೆ ಧಕ್ಕೆ ತಂದರೆ ನಾವು ಅದನ್ನು ಸಹಿಸಬಾರದು" ಎಂದು ಅವರು ಪ್ರತಿಪಾದಿಸಿದರು.
ರಾಷ್ಟ್ರದ ಬಗೆಗಿನ ಕರ್ತವ್ಯವು ಯಾವಾಗಲೂ ಸ್ವಹಿತಾಸಕ್ತಿ ಮತ್ತು ರಾಜಕೀಯ ಹಿತಾಸಕ್ತಿಗಿಂತ ಮೇಲಿರಬೇಕು ಎಂದು ಒತ್ತಿ ಹೇಳಿದ ಉಪರಾಷ್ಟ್ರಪತಿಗಳು, ಹಾಗೆ ಮಾಡಲು ವಿಫಲವಾದರೆ ಹಲವಾರು ಸಹಸ್ರಮಾನಗಳ ಭಾರತದ ನಾಗರಿಕತೆಯ ನೀತಿಯ ಮೇಲೆ ದಾಳಿಯಾಗುತ್ತದೆ ಎಂದು ಎಚ್ಚರಿಸಿದರು.
ಇಂದು ಉತ್ತರ ಪ್ರದೇಶದ ಸೈನಿಕ ಶಾಲೆಯ ಗೋರಖ್ಪುರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಭಾಷಣವನ್ನು ಮಾಡಿದ ಉಪರಾಷ್ಟ್ರಪತಿಗಳು, ಸೈನಿಕ ಶಾಲೆಯ ಚಿತ್ತೋರ್ ಗಢದ ವಿದ್ಯಾರ್ಥಿಯಾಗಿ ತಮ್ಮ ದಿನಗಳನ್ನು ನೆನಪಿಸಿಕೊಂಡರು ಮತ್ತು ಅವರ ವೈಯಕ್ತಿಕ ಮತ್ತು ವೃತ್ತಿಪರ ಪ್ರಯಾಣವನ್ನು ರೂಪಿಸುವಲ್ಲಿ ಅವರ ಹಳೆಯ ಶಾಲೆಯ ಪ್ರಭಾವವನ್ನು ಒತ್ತಿಹೇಳಿದರು. "ನನ್ನ ದೈಹಿಕ ಜನ್ಮವು ಕಿತಾನ ಗ್ರಾಮದಲ್ಲಿ ಆಗಿದ್ದರೆ, ನನ್ನ ನಿಜವಾದ ಜನ್ಮವು ಚಿತ್ತೋರಗಢ ಸೈನಿಕ ಶಾಲೆಯಲ್ಲಿ ಆಯಿತು" ಎಂದು ಅವರು ಹೇಳಿದರು.
ಪರಿವರ್ತನೆಯ ಕೇಂದ್ರಬಿಂದುವಾಗಿ ಶಿಕ್ಷಣದ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾ, ಶ್ರೀ ಧನಕರ್ ಅವರು ವ್ಯಕ್ತಿಗಳಿಗೆ ತಮ್ಮ ಜೀವನದ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡುವಲ್ಲಿ ಮತ್ತು ಅಸಮಾನತೆಗಳನ್ನು ನಾಶಮಾಡುವಲ್ಲಿ ಮತ್ತು ಸಮಾಜದಲ್ಲಿನ ದುಷ್ಕೃತ್ಯಗಳಿಗೆ ಕಡಿವಾಣ ಹಾಕುವಲ್ಲಿ ಶಿಕ್ಷಣದ ಶಕ್ತಿಯನ್ನು ಎತ್ತಿ ತೋರಿಸಿದರು.
ಇಂದು ಜಾಗತಿಕ ವೇದಿಕೆಯಲ್ಲಿ ಭಾರತದ ವಿಶಿಷ್ಟ ಗುರುತಿನತ್ತ ಗಮನ ಸೆಳೆದ ಉಪರಾಷ್ಟ್ರಪತಿಗಳು, "ಇಡೀ ಜಗತ್ತು ಗುರುತಿಸುವ ಹಾದಿಯಲ್ಲಿ ದೇಶವನ್ನು ಮುನ್ನಡೆಸುವಲ್ಲಿ" ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಕೊಡುಗೆಯನ್ನು ಶ್ಲಾಘಿಸುದರಯ. "ಇಂದಿನ ಭಾರತವು ಹತ್ತು ವರ್ಷಗಳ ಹಿಂದೆ ಇದ್ದ ಹಾಗೆ ಇಲ್ಲ " ಎಂದು ಶ್ರೀ ಧನಕರ್ ಹೇಳಿದರು. “ಸಂವಿಧಾನದ ರಚನೆಕಾರರು ತಾತ್ಕಾಲಿಕ ಎಂದು ಕರೆಯುವ 370 ನೇ ವಿಧಿಯನ್ನು ಕೆಲವರು ಶಾಶ್ವತವೆಂದು ಪರಿಗಣಿಸಿದ್ದರು. ಈ ದಶಕದಲ್ಲಿ, ಅದನ್ನು ರದ್ದುಗೊಳಿಸಲಾಗಿದೆ. ಇದು ಇಂದಿನ ಭಾರತ”
ಗೋರಖ್ ಪುರದಲ್ಲಿ ಹೊಸ ಸೈನಿಕ ಶಾಲೆಯ ಸ್ಥಾಪನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಉಪರಾಷ್ಟ್ರಪತಿಗಳು, ಮುಂದಿನ ಪೀಳಿಗೆಯ ಅಭಿವೃದ್ಧಿಗೆ ಶಾಲೆಯು ದಾರಿ ಮಾಡಿಕೊಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. "ಇದು ಇತರ ರಾಜ್ಯಗಳಿಗೆ ಮತ್ತು ಇಡೀ ದೇಶವೇ ಅನುಕರಿಸಲು ಮಾನದಂಡವನ್ನು ಹೊಂದಿಸುತ್ತದೆ" ಎಂದು ಶ್ರೀ ಧನಕರ್ ವಿವರಿಸಿದರು.
ಆಡಳಿತ ಮತ್ತು ಕಾನೂನಿನ ಆಳ್ವಿಕೆಯನ್ನು ಎತ್ತಿಹಿಡಿಯುವಲ್ಲಿ ಉತ್ತರ ಪ್ರದೇಶವು ಸಾಧಿಸಿರುವ ಮಹತ್ವದ ಪ್ರಗತಿಯನ್ನು ಒತ್ತಿ ಹೇಳಿದ ಉಪರಾಷ್ಟ್ರಪತಿಗಳು, "ದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿಯ ಅಲೆಯಲ್ಲಿ ಉತ್ತರ ಪ್ರದೇಶದ ಭಾಗವಹಿಸುವಿಕೆಯು ರಾಷ್ಟ್ರ ನಿರ್ಮಾಣಕ್ಕೆ ಪ್ರಮುಖ ಕೊಡುಗೆಯಾಗಿದೆ" ಎಂದು ಹೇಳಿದರು.
ಕೆಡೆಟ್ಗಳನ್ನು ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಗಳು, ಅವರ ಮನಸ್ಸಿನಲ್ಲಿರುವ ಭಯವನ್ನು ತೊಡೆದುಹಾಕಲು ಒತ್ತಾಯಿಸಿದರು. ಚಂದ್ರಯಾನ-2 ರಿಂದ ಕಲಿತ ಪಾಠಗಳ ಮೇಲೆ ನಿರ್ಮಿಸಲಾದ ಚಂದ್ರಯಾನ-3 ರ ಯಶಸ್ಸನ್ನು ವಿವರಿಸಿದ ಶ್ರೀ ಧನಕರ್, “ವೈಫಲ್ಯವೇ ಯಶಸ್ಸಿನ ಅಡಿಪಾಯ” ಎಂದು ಹೇಳಿದರು.
ತಮ್ಮ ಭೇಟಿಯ ಸಮಯದಲ್ಲಿ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಮತ್ತು ಡಾ. ಸುದೇಶ್ ಧನಕರ್ ಅವರು ಗೋರಖ್ಪುರದ ಸೈನಿಕ ಶಾಲೆಯ ಆವರಣದಲ್ಲಿ ತಮ್ಮ ದಿವಂಗತ ತಾಯಂದಿರಾದ ಶ್ರೀಮತಿ ಕೇಸರಿ ದೇವಿ ಮತ್ತು ಶ್ರೀಮತಿ ಭಗವತಿ ದೇವಿ ಅವರ ಸ್ಮರಣಾರ್ಥವಾಗಿ ಸಸಿಗಳನ್ನು ನೆಟ್ಟರು. ಶಾಲಾ ಆವರಣದಲ್ಲಿನ ಶೂಟಿಂಗ್ ರೇಂಜ್ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್; ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಶ್ರೀ ಕಮಲೇಶ್ ಪಾಸ್ವಾನ್; ಲೋಕಸಭಾ ಸದಸ್ಯ ಶ್ರೀ ರವಿ ಕಿಶನ್ ಶುಕ್ಲಾ; ಉತ್ತರ ಪ್ರದೇಶದ ಪ್ರೌಢ ಶಿಕ್ಷಣ ರಾಜ್ಯ ಸಚಿವೆ ಶ್ರೀಮತಿ ಗುಲಾಬ್ ದೇವಿ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
*****
(Release ID: 2052894)
Visitor Counter : 41